Home » ಓಂಕಾರ ಪದ ಹೇಳಿದ ಕೂಡಲೇ ಮೈ ರೋಮಾಂಚನವಾಗುತ್ತದೆ
 

ಓಂಕಾರ ಪದ ಹೇಳಿದ ಕೂಡಲೇ ಮೈ ರೋಮಾಂಚನವಾಗುತ್ತದೆ

by Kundapur Xpress
Spread the love

ಓಂಕಾರ ಇದರ ಮೂಲವನ್ನು ಹುಡುಕುತ್ತಾ ಹೋದರೆ ಪ್ರಕೃತಿಯಲ್ಲಿ ರಚಿತವಾಗಿರುವ ಪ್ರಕೃತಿಯಲ್ಲಿ ಅಡಕವಾಗಿರುವ ಪ್ರಕೃತಿಯ ಭಾವನೆ ಆಗಿರುವ ಓಂಕಾರ ಉದಯವಾಗುವುದು ಸೂರ್ಯನ ಗರ್ಭದಲ್ಲಿ . ಅದಕ್ಕೆ ಸೂರ್ಯನನ್ನು ಓಂಕಾರೇಶ್ವರ ಎಂದು ಕರೆಯುತ್ತಾರೆ . ಪ್ರಕೃತಿ ಪಂಚಭೂತಗಳಿಂದ ಕೂಡಿದೆ . ಪಂಚಭೂತಗಳಿಂದ ಕೂಡ ಹೊರ ಸೂಸುವುದು ಓಂಕಾರನಾದ . ಓಂಕಾರ ರೂಪದಿಂದಲೇ ಸಮುದ್ರದ ಆಳ ತಿಳಿಯುವುದು . ಗಾಳಿಯ ಶಬ್ದ ಓಂಕಾರ. ನೀರಿನ ಶಬ್ದ ಓಂಕಾರ . ಬೆಳಕಿನ ಶಬ್ದ ಓಂಕಾರ . ಆಕಾಶದಲ್ಲಿರುವ ಮೋಡಗಳು ಓಂಕಾರ. ಪ್ರಕೃತಿಯ ಭಾಷೆಯೇ ಓಂಕಾರ.
ಓಂಕಾರವಿಲ್ಲದ ಜಾಗವಿಲ್ಲ . ಓಂಕಾರ ಬೀಜಾಕ್ಷರ ಪ್ರಕೃತಿ ಎಂಬ ದೇವರ ಭಾಷೆಯ ಮೂಲ ಮಂತ್ರ. ಎಲ್ಲಾ ಅಕ್ಷರಗಳ ಮೂಲ ಓಂಕಾರ . ಅಧ್ಯಾತ್ಮದ ಸಾಕ್ಷಾತ್ಕಾರ ಓಂಕಾರ . ಅಮ್ಮ ಎಂಬ ಪದದ ಮಮಕಾರದ ಮೂಲ ಮಂತ್ರ ಓಂಕಾರ . ಸಂಗೀತದ ಭಾಷೆಯು ಓಂಕಾರ . ವಿಶ್ವವನ್ನು ಆಳುವಂತಹ ಪ್ರಕೃತಿಯ ಭಾಷೆ ಓಂಕಾರ . ಜ್ಞಾನದ ಮೂಲ ಮಂತ್ರ ಓಂಕಾರ . ಧ್ಯಾನದ ಮೂಲ ಮಂತ್ರ ಓಂಕಾರ . ಓಂಕಾರ ಎಂದ ಕೂಡಲೇ ನರನಾಡಿಗಳೆಲ್ಲ ರೋಮಾಂಚನಗೊಂಡು ಮನಸ್ಸು ತನ್ನ ಶಾಂತ ರೂಪದಲ್ಲಿ ನೆಲೆಸುತ್ತದೆ. ಹೀಗಿದೆ ಓಂಕಾರದ ದಿವ್ಯರೂಪದ ಮಹತ್ವ.

ಪ್ರದೀಪ್‌ ಕುಮರ್ ಕೋಮುಂಜೆ

 

Related Articles

error: Content is protected !!