213
ಅಯೋಧ್ಯೆ : ಅಯೋಧ್ಯೆಯ ಮಂದಿರದಲ್ಲಿ ಜ.22ರಂದು ರಾಮಲಲಾನ ಪ್ರಾಣ ಪ್ರತಿಷ್ಠಾ ಮಹೋತ್ಸವ ನಡೆಯುವುದರಿಂದ ಸಿದ್ಧತೆಯ ಕಾರಣಗಳಿಗಾಗಿ ಮಂದಿರದಲ್ಲಿ ಜ.20 ಮತ್ತು 21ರಂದು ಭಕ್ತರಿಗೆ ರಾಮಲಲಾನ ದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಪ್ರಾಣ ಪ್ರತಿಷ್ಠೆಯ ದಿನದಂದು ಕೂಡ ಆಹ್ವಾನಿತರನ್ನು ಹೊರತುಪಡಿಸಿ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿಲ್ಲ, ಶುಕ್ರವಾರ ಸಂಜೆ 6.30ರಿಂದಲೇ ತಾತ್ಕಾಲಿಕವಾಗಿ ದರ್ಶನ ಸ್ಥಗಿತಗೊಳಿಸಿದ್ದು, ಪ್ರಾಣ ಪ್ರತಿಷ್ಠೆಯ ನಂತರ ಜ.23ರಿಂದ ಭಕ್ತರು ರಾಮಲಲಾನ ದರ್ಶನ ಪಡೆಯಬಹುದಾಗಿದೆ

