238
ಶ್ರೀ ಬ್ರಹ್ಮರಥೋತ್ಸವ ಸಂಪನ್ನ
ಕುಂದಾಪುರ: ರಾಮನವಮಿಯ ಪ್ರಯಕ್ತ ಕುಂದಾಪ್ರ ಹಬ್ಬದಂದು ಶ್ರೀ ವೆಂಕಟರಮಣ ದೇವಸ್ಧಾನದ ಎದುರುಗಡೆಯ ರಥ ಬೀದಿಯಲ್ಲಿ ವೇದ ಮಂತ್ರ ಜಯಘೋಷ ಗಳೊಂದಿಗೆ ಗೋವಿಂದಾ….ಗೋವಿಂದಾ… ನಾಮ ಸ್ಮರಣೆಯೊಂದಿಗೆ ಸಾವಿರಾರು ಭಕ್ತರು ಕುಂದಾಪುರ ತೆರನ್ನು ಎಳೆದು ಪುನೀತರಾದರು ರಾತ್ರಿ10 ಗಂಟೆಗೆ ಮಂತ್ರಘೊಷಣೆಗಳೊಂದಿಗೆ ಸಡಗರ ಸಂಭ್ರಮ ದಲ್ಲಿ ಪಟಾಕಿ ಸಿಡಿಸುವುದರ ಮೂಲಕ ಭಕ್ತರು ಶ್ರೀ ಬ್ರಹ್ಮರಥೋತ್ಸವದ ಪುರಮೆರವಣಿಗೆಯಲ್ಲಿ ಭಾಗವಹಿಸಿದರು.

ಇಂದು ಶುಕ್ರವಾರ ಬೆಳಿಗ್ಗೆ ಯಜ್ಞ ಪೂರ್ಣಾಹುತಿ ಅಂಕುರ ಪ್ರಸಾದ ಚೂರ್ಣೋತ್ಸವ ಅವಭೃತ ಸ್ನಾನ ಧ್ವಜಾವರೋಹಣ ಮಹಾಪೂಜೆ ಸಮಾರಾಧನೆ ಹಾಗೂ ರಾತ್ರಿ ಮೃಗಬೇಟೆ ಉತ್ಸವ ನಡೆಯಲಿದೆ

