Home » ಲಕ್ಷಾಂತರ ಮೌಲ್ಯದ ಹೈಡೋವಿಡ್ ಗಾಂಜಾ ಸಾಗಾಟ : ವಿದ್ಯಾರ್ಥಿನಿಯೋರ್ವಳ ಬಂಧನ
 

ಲಕ್ಷಾಂತರ ಮೌಲ್ಯದ ಹೈಡೋವಿಡ್ ಗಾಂಜಾ ಸಾಗಾಟ : ವಿದ್ಯಾರ್ಥಿನಿಯೋರ್ವಳ ಬಂಧನ

by Kundapur Xpress
Spread the love

ಉಡುಪಿ: ಲಕ್ಷಾಂತರ ಮೌಲ್ಯದ ಹೈಡೋವಿಡ್ ಗಾಂಜಾ ಸಾಗಾಟ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರ್ಥಿಯಿಂದ 35 ಲಕ್ಷ ರೂ ಮೌಲ್ಯದ ಮೌಲ್ಯದ ಸುಮಾರು 1 ಕೆಜಿ 42 ಗ್ರಾಂ ಹೈಡೋವಿಡ್ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗದ ಸಾಗರ ತಾಲೂಕಿನ ಹುಲಿದೇವರ ಬನ ನಿವಾಸಿ ಸುಹಾನ (21) ಬಂಧಿತ ಆರೋಪಿ. ಈಕೆ ಕುಂದಾಪುರದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ. ಮಂಗಳವಾರ (ಮೇ 12) ರಂದು ಮೂಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಹೈಡೋವಿಡ್ ಗಾಂಜಾ ಸಾಗಾಟ ಮಾಡುತ್ತಿದ್ದ ಈಕೆಯನ್ನು ಬಂಧಿಸಿದ ಪೊಲೀಸರು, 35 ಲಕ್ಷ ರೂ ಮೌಲ್ಯದ ಹೈಡೋವಿಡ್ ಗಾಂಜಾ, ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಮತ್ತು ಇತರ ಸೊತ್ತು ವಶಪಡಿಸಿಕೊಂಡಿದ್ದಾರೆ.

ಮಾದಕ ವಸ್ತುವನ್ನು ಚೆನ್ನೈ ನಿಂದ ತರಿಸಿಕೊಂಡು ಮಾರಾಟ ಮಾಡಿ ಹಣ ಗಳಿಸುವ ಉದ್ದೇಶ ಹೊಂದಿದ್ದಳು. ಬಂಧಿತಳ ವಿರುದ್ದ ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪಣಂಬೂರು ಎಸಿಪಿ ತಂಡ ಹಾಗೂ ಮೂಲ್ಕಿ ಠಾಣೆಯ ತಂಡ ದಿಂದ ಕಾರ್ಯಾಚರಣೆ ನಡೆಸಲಾಗಿದೆ.ಆರೋಪಿತೆಯ ಮೇಲೆ ಕಾವೂರು ಪೊಲೀಸ್ ಠಾಣೆ ಯಲ್ಲಿ NDPS Act ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ಕಸ್ಟಮ್ ನಲ್ಲೂ NDPS Act ಅಡಿ ಪ್ರಕರಣ ದಾಖಲಾಗಿವೆ.

 

Related Articles

error: Content is protected !!