Home » ಅಂಗನವಾಡಿಯ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ : ಶಾಸಕ ಎ ಕಿರಣ್ ಕೊಡ್ಗಿ ಭಾಗಿ
 

ಅಂಗನವಾಡಿಯ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ : ಶಾಸಕ ಎ ಕಿರಣ್ ಕೊಡ್ಗಿ ಭಾಗಿ

by Kundapur Xpress
Spread the love

ಕೋಟೇಶ್ವರ : ಹಲವು ವರುಷಗಳ ಕನಸೆಂಬಂತೆ 42 ವರ್ಷಗಳ ಸುಧೀರ್ಘ ಅವಧಿಯ ಬಳಿಕ ನೂತನ ಸ್ವಂತ ಕಟ್ಟಡದೊಂದಿಗೆ ಲೋಕಾರ್ಪಣೆಗೊಳ್ಳುತ್ತಿರುವ ಬೀಜಾಡಿ ದೊಡ್ದೋಣಿ ಅಂಗನವಾಡಿ ಕೇಂದ್ರವನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿಯವರು ಉದ್ಘಾಟಿಸಿ ಮಾತನಾಡಿದ ಅವರು ಹಲವು, ದಶಕಗಳ ಬಳಿಕ ಗ್ರಾಮಸ್ಥರ ಕನಸೆಂಬಂತೆ ನೂತನ ಸ್ವಂತ ಕಟ್ಟಡದೊಂದಿಗೆ ಅಂಗನವಾಡಿಯು ಇಂದು ಬಾಲ ವಿಕಾಸ ಸಮಿತಿ ಹಾಗೂ ನೀರೇಶ್ವಾಲ್ಯ ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘ ದೊಡ್ದೋಣಿ ಬೀಜಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಬೀಜಾಡಿ ಇವರ ಅನುದಾನದ ಮೂಲಕ ಬಹಳ ಸುಸಜ್ಜಿತವಾದ ಅಂಗನವಾಡಿಯ ಕೇಂದ್ರ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಗೆ ವಿಶೇಷವಾಗಿ ಕಟ್ಟಡ ನಿರ್ಮಾಣಕ್ಕೆ ಸ್ಥಳದಾನ ಮಾಡಿದ ಶ್ರೀಮತಿ ಗುಲಾಬಿ ದೇವಾಡಿಗ ಇವರನ್ನು ಶಾಸಕರು ಶ್ಲಾಘಿಸಿ ಸುದೀರ್ಘವಾಗಿ ಅಂಗನವಾಡಿ ಕಟ್ಟಡವನ್ನು ನಿರ್ಮಿಸಲು ಶ್ರಮಪಟ್ಟ ಅಂಗನವಾಡಿಯ ಶಿಕ್ಷಕಿ ಶ್ರೀಮತಿ ಪ್ರಭಾವತಿ ಇವರನ್ನು ಅಭಿನಂದಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜಾಡಿ ಗ್ರಾಮ ಪಂಚಾಯತಿನ ಅಧ್ಯಕ್ಷ ಪ್ರಕಾಶ್ ಪೂಜಾರಿ ಅವರು ವಹಿಸಿದರು.
ಸದ್ರಿ ಈ ಕಾರ್ಯಕ್ರಮದ ವೇದಿಕೆಯಲ್ಲಿ ಗೋಪಾಲ ದೇವಾಡಿಗ ಅಧ್ಯಕ್ಷರು ನೀರೇಶ್ವಾಲ್ಯ ಸಂಘ. ಬೀಜಾಡಿ, ರಜನಿ ಜೂಲಿ ಉಪಾಧ್ಯಕ್ಷರು ಬಿಜಾಡಿ ಗ್ರಾಮ ಪಂಚಾಯತ್,ಉಮೇಶ್ T.L. ಅಭಿವೃದ್ಧಿ ಯೋಜನೆ ಅಧಿಕಾರಿ, ಶ್ರೀಮತಿ ಬಿಂದು. ಅಧ್ಯಕ್ಷರು ಬಾಲ ವಿಕಾಸ ಸಮಿತಿ, ಸುರೇಶ್ ಶೆಟ್ಟಿ ಗೋಪಾಡಿ ಅಧ್ಯಕ್ಷರು ಗೋಪಾಡಿ ಗ್ರಾಮ ಪಂಚಾಯಿತ, ಶ್ರೀಮತಿ ರಾಗಿಣಿ ದೇವಾಡಿಗ ಅಧ್ಯಕ್ಷರು ಕೋಟೇಶ್ವರ ಗ್ರಾಮ ಪಂಚಾಯತ್,ಧಾರ್ಮಿಕ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ ಹಾಗೂ ಸ್ಥಳೀಯ ಸಂಘ ಸಂಸ್ಥೆಯ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿನ ಸದಸ್ಯರು, ವಿವಿಧ ಕ್ಷೇತ್ರದ ಪ್ರಮುಖರು ಗ್ರಾಮಸ್ಥರು ಉಪಸ್ಥಿತರಿದ್ದರು.

 

Related Articles

error: Content is protected !!