ಸಮೃದ್ಧ ಬೈಂದೂರು ಪರಿಕಲ್ಪನೆಯ ಅರುಣಾಚಲಂ ಕಾಲುಸಂಕ ಯೋಜನೆಯಲ್ಲಿ ಸಮ್ಯತ ಫೌಂಡೇಶನ್ ಬೆಂಗಳೂರು ಇವರ ಸಹಕಾರದೊಂದಿಗೆ ಇಂಡಸ್ 555 ಟಿಎಂಟಿ ಇವರ ಸಿಎಸ್ಆರ್ ನಿಧಿಯಿಂದ ಆಜ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕ್ಯಾಕೋಡುವಿನಲ್ಲಿ ನೂತನ ಕಾಲು ಸಂಕದ ಉದ್ಘಾಟನೆಯನ್ನು ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆ ಅವರು ಇಂಡಸ್ ಟಿಎಂಟಿ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಸ್. ಎಸ್.ಶ್ರೀಕಾಂತ್ ಹಾಗೂ ಅವರ ಕುಟುಂಬಸ್ಥರ ಜೊತೆಗೂಡಿ ನೆರವೇರಿಸಿದರು. ಆಜ್ರಿ ಗ್ರಾಮದ ಕ್ಯಾಕೋಡುವಿನಲ್ಲಿ ಸುಮಾರು ಮೂರು ದಶಕಗಳಿಂದ ಸುಸಜ್ಜಿತ ಕಾಲುಸಂಕದ ಬೇಡಿಕೆ ಇದ್ದು ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆ ಅವರ ಪ್ರಯತ್ನದಿಂದ ಇಂಡಸ್ ಸಂಸ್ಥೆಯ ಸಿಎಸ್ಆರ್ ನಿಧಿಯಿಂದ ನಿರ್ಮಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು ಇಂಡಸ್ ಸಂಸ್ಥೆಯ ಮಾಲಕರಾದ ಶ್ರೀ ಶ್ರೀಕಾಂತ್ ಹಾಗೂ ಸಮ್ಯತ ಫೌಂಡೇಶನ್ ಸಂಸ್ಥಾಪಕರಾದ ಶ್ರೀ ಮುರುಳಿ ಅಂತಹ ಸಹೃದಯ ದಾನಿಗಳಿಂದ ಸಮೃದ್ಧ ಬೈಂದೂರಿನ ಕನಸು ಸಾಕಾರಗೊಳ್ಳುತ್ತಿದೆ ಎಂದರು.
ಇಂಡಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶ್ರೀಕಾಂತ್ ಮಾತನಾಡಿ ” ಶಾಸಕರು ತನ್ನ ಕ್ಷೇತ್ರ ಹಾಗೂ ಜನರ ಮೇಲೆ ಇಟ್ಟ ಪ್ರೀತಿ ಇಂದು ಈ ಕಾರ್ಯವನ್ನು ಮಾಡಲು ನಮ್ಮನ್ನು ಪ್ರೆರೇಪಿಸಿದೆ” ಎಂದು ಭಾವನಾತ್ಮಕವಾಗಿ ನುಡಿದರು.
ಸಮ್ಯತ ಫೌಂಡೇಶನ್ ಬೆಂಗಳೂರು ಇದರ ಸಂಸ್ಥಾಪಕರಾದ ಶ್ರೀ ಮುರಳಿ.ಎಂ ಮಾತನಾಡಿ ಶಾಸಕರ ಉತ್ತಮ ತಂಡ ಹಾಗೂ ಗ್ರಾಮಸ್ಥರ ಸಹಕಾರ ಕಾಲುಸಂಕ ನಿರ್ಮಿಸಲು ಅತ್ಯಂತ ಸಹಕಾರಿಯಾಯಿತು ಎಂದರು.
ಉದ್ಘಾಟನೆಯ ನಂತರ ನಡೆದ ಸಭಾ ಕಾರ್ಯಕ್ರಮದ ಸ್ವಾಗತವನ್ನು ವಿದ್ಯಾಧರ್ ಶೆಟ್ಟಿ ಕೊಡ್ಲಾಡಿ ನೇರವೇರಿಸದರು, ಭಾಜಪ ಯುವ ಮೋರ್ಚಾದ ಅಧ್ಯಕ್ಷರಾದ ವೇಣುಗೋಪಾಲ್ ಶೆಟ್ಟಿ ಆಜ್ರಿ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸುದೀಪ್ ಶೆಟ್ಟಿ ನೆರವೇಸಿದರು. ಪ್ರಮುಖರಾದ ಬಾಲಚಂದ್ರ ಭಟ್, ಸುಭಾಷ್ ಶೆಟ್ಟಿ ಕೊಡ್ಲಾಡಿ ಅತಿಥಿಗಳಾಗಿ ಭಾಗವಹಿಸಿದರು.ಪ್ರಮುಖರಾದ ಪ್ರದೀಪ್ ಹೆಗ್ಡೆ, ಮೂರ್ತಿ ಶೆಟ್ಟಿ, ಪ್ರಾಣೇಶ್ ಯಡಿಯಾಳ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

