Home » ಮಾಜಿ ಶಾಸಕ ದಿ. ಗೋಪಾಲ ಭಂಡಾರಿಯವರ ಪುತ್ರ ಆತ್ಮಹತ್ಯೆ
 

ಮಾಜಿ ಶಾಸಕ ದಿ. ಗೋಪಾಲ ಭಂಡಾರಿಯವರ ಪುತ್ರ ಆತ್ಮಹತ್ಯೆ

by Kundapur Xpress
Spread the love

ಹೆಬ್ರಿ : ಮಾಜಿ ಶಾಸಕ ದಿ. ಗೋಪಾಲ ಭಂಡಾರಿಯವರ ಪುತ್ರ ಸುದೀಪ್ ಭಂಡಾರಿ (48) ಅವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ಬ್ರಹ್ಮಾವರ ಸಮೀಪದ ಬಾರ್ಕೂರು ರೈಲು ಹಳಿಯ ಬಳಿ ನಡೆದಿದೆ.ಆತ್ಮಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದೀಪ್ ಭಂಡಾರಿ ಅವರು ಜೀವನ ನಿರ್ವಹಣೆಗೆ ಹೆಬ್ರಿಯಲ್ಲಿ ವೈನ್ಸ್ ಶಾಪ್ ನಡೆಸಿಕೊಂಡಿದ್ದರು. ಅತ್ಯಂತ ಸರಳ ಹಾಗೂ ಎಲ್ಲರಿಗೂ ಹತ್ತಿರವಾಗಿದ್ದ ಸುದೀಪ್ ಅವರ ಆಕಸ್ಮಿಕ ಸಾವಿನ ಸುದ್ದಿ ಕೇಳಿ ಹೆಬ್ರಿ ಮತ್ತು ಸುತ್ತಮುತ್ತಲಿನ ಪ್ರದೇಶದ ಜನರು ಆಘಾತಗೊಂಡಿದ್ದಾರೆ.

ಸುದೀಪ್ ಭಂಡಾರಿ ಅವರು ತಾಯಿ, ಪತ್ನಿ, ಇಬ್ಬರು ಮಕ್ಕಳು, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ

 

Related Articles

error: Content is protected !!