ಕುಂದಾಪುರ : ನಗರದ ಕೋಡಿಯ ಶ್ರೀರಾಮ ನಗರದಲ್ಲಿರುವ ಶ್ರೀರಾಮ ವಿದ್ಯಾ ಕೇಂದ್ರ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು ಸಂಸ್ಥೆಯ ಮುಖ್ಯಸ್ಥರಾದ ಕೋಡಿ ನಾಗೇಶ್ ಕಾಮತ್ ರವರು ಮಾತನಾಡಿ ಭಾರತದ ಪವಿತ್ರ ಸಂವಿಧಾನ ಅಧಿಕೃತವಾಗಿ ಜಾರಿಗೊಂಡು ಇಂದಿಗೆ 75 ವರ್ಷ ಇದರ ಮೂಲ ಧ್ಯೇಯವಾದ ಸಮಾನತೆ ಸ್ವಾತಂತ್ರ್ಯ ಸಂಸ್ಕೃತಿ ಇವೆಲ್ಲದರ ರಕ್ಷಣೆ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ನಾವೆಲ್ಲರೂ ಬಲಿಷ್ಠ ಭಾರತದ ನಿರ್ಮಾಣಕ್ಕೆ ಅಣಿ ಆಗಬೇಕು ಹಾಗಾದಲ್ಲಿ ಮಾತ್ರ ಶೀಘ್ರದಲ್ಲಿ ಭಾರತವನ್ನು ವಿಶ್ವಗುರುವಾಗಿ ಕಾಣಲು ಸಾಧ್ಯವಾಗುತ್ತದೆ ಎಂದು ಅವರು ನುಡಿದರು
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಜಿತೇಂದ್ರ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀರಾಮ್ ಮತ್ತು ಶಿಕ್ಷಕ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು