107
ಅಹಮದಾಬಾದ್ : ಅಹಮದಾಬಾದ್ನಲ್ಲಿ ಸಂಭವಿಸಿದ ದುರಂತದಿಂದ ದಿಗ್ಧಮೆ ಮತ್ತು ದುಃಖವುಂಟಾಗಿದೆ. ಇದು ಪದಗಳಿಗೆ ನಿಲುಕದ ಹೃದಯ ವಿದ್ರಾವಕ ಘಟನೆ. ಈ ದುಃಖದ ಸಮಯದಲ್ಲಿ ದುರಂತದಿಂದ ಬಾಧಿತರಾದ ಪ್ರತಿಯೊಬ್ಬರೊಂದಿಗೂ ನಾನಿದ್ದೇನೆ. ಸಂತ್ರಸ್ತರಿಗೆ ಸಹಾಯ ಮಾಡಲು ಕೆಲಸ ಮಾಡುತ್ತಿರುವ ಸಚಿವರು, ಅಧಿಕಾರಿಗಳ ಸಂಪರ್ಕದಲ್ಲಿದ್ದೇನೆ ಎಂದು ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ
ಇಂದು ಘಟನಾ ಸ್ಥಳಕ್ಕೆ ಪ್ರಧಾನಿ ಮೋದಿ
ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಅಹಮದಾಬಾದ್ಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಭೇಟಿ ನೀಡುವ ಸಾಧ್ಯತೆ ಇದೆ. ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಹಮದಾಬಾದ್ಗೆ ಭೇಟಿ ನೀಡಿದ್ದು ಪರಿಹಾರ ಕಾರ್ಯ ಪರಿಶೀಲಿಸಿದ್ದಾರೆ. ಅದರ ಬೆನ್ನಲ್ಲೇ ಮೋದಿ ಕೂಡಾ ಗುಜರಾತ್ ಗೆ ಭೇಟಿ ನೀಡಲು ಮುಂದಾಗಿದ್ದಾರೆ. ಭೇಟಿ ವೇಳೆ ಘಟನಾ ಸ್ಥಳ, ಆಸ್ಪತ್ರೆಗೆ ಪ್ರಧಾನಿ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

