ನಮ್ಮ ಈಗಿನ ಶಿಕ್ಷಣ ವ್ಯವಸ್ಥೆ ಹೇಗಿದೆ ? ವಿದ್ಯಾರ್ಥಿಗಳಿಗೆ ಈಗಿನ ಶಿಕ್ಷಣದಿಂದ ಉಂಟಾಗುವ ಕಲಿಕೆ ಏನು ? ಮುಂದಿನ ಉದ್ಯೋಗ ,ಜೀವನ ಸಂಸ್ಕಾರಕ್ಕೆ ನಮ್ಮ ಈಗಿನ ಶಿಕ್ಷಣದಿಂದ ಆಗುವ ಕಲಿಕೆ ಎಷ್ಟ್ಟು ? ಈ ವಿಷಯಗಳ ಗಂಭೀರ ಚಿಂತನೆ ಸಮಾಜಕ್ಕೆ ಬೇಕಿದೆ .ಪುಸ್ತಕದಲ್ಲಿ ಕೊಟ್ಟ ವಿಷಯಗಳನ್ನು ಪಠಣ ಮಾಡಿ 100 % ಅಂಕಗಳನ್ನು ತೆಗೆದು ಪ್ರಥಮ ಸ್ಥಾನ ಪಡೆಯುವುದು ಒಂದು ಕಡೆಯಾದರೆ ಮಕ್ಕಳಿಗೆ ಅಂಕಗಳನ್ನು ಪಡೆಯಲು ಓದು ಎಂದು ಒತ್ತಡ ಹಾಕುವ ಪೋಷಕರು ಒಂದು ಕಡೆ .ಆಟ ಪಾಠ ಮತ್ತು ಕಲಿಕೆ ಇರುವ ಕಾಲ ಒಂದಿತ್ತು .ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡವಿಲ್ಲದೆ ಏನೋ ಒಂದು ಸಾಧಿಸಿದ ಅನುಭವ ಕೊಡುವ ಪಠ್ಯವಿದ್ದ ಕಾಲ . ಜೀವನಕ್ಕೆ ಉಪಯೋಗವಾಗುವ ನೀತಿ ಪಾಠ ಅಧ್ಯಾಪಕರು ಹೇಳಿಕೊಡುವ ಕಾಲ ಅತ್ಯಂತ ಸುಂದರ .ಈಗಿನ ಸ್ಟೇಟ್, ಸೆಂಟ್ರಲ್ ಮಾಧ್ಯಮ ಒಂದು ಕಡೆಯಾದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಂಕಗಳನ್ನು ಪಡೆಯಲು ಮಕ್ಕಳಿಗೆ ಪೋಷಕರ ಒತ್ತಡ ,ದಿನಕ್ಕೊಂದು ಬದಲಾಗುತ್ತಿರುವ ಶಿಕ್ಷಣದ ನಿಯಮಗಳು ವಿದ್ಯಾರ್ಥಿಗಳ ಮನದಲ್ಲಿ ದ್ವಂದ್ವವನ್ನು ಸೃಷ್ಟಿಸದೆ ಇರಲಾರವು .ಮಕ್ಕಳ ಮನಸ್ಸು ಬಿಳಿ ಬಣ್ಣದ ಹಾಳೆಯಂತೆ .ಶಿಕ್ಷಣ ಮಕ್ಕಳ ಮನದಲ್ಲಿ ತನ್ನ ಮುಂದಿನ ಭವಿಷವನ್ನು ಕಾಣುವ ಭರವಸೆಯುಯನ್ನು ಮೂಡಿಸಬೇಕು. ದೇಶದ ಬಗ್ಗೆ ಭಕ್ತಿಯ ಭಾವವನ್ನು ಮೂಡಿಸಬೇಕು .ಮನೆಯಲ್ಲಿ ಸಂಸ್ಕಾರವನ್ನು ಮೂಡಿಸಬೇಕು .ನಾವು ಮಾಡುವ ಉದ್ಯೋಗಕ್ಕೆ ಪೂರಕವಾಗಿರಬೇಕು .ಮಕ್ಕಳಿಗೆ ಮಾನಸಿಕ ಸದೃಢತೆಯನ್ನು ಕೊಡಬೇಕು .ಮಕ್ಕಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡುವತ್ತ ಸಹಾಯವಾಗಬೇಕು .ಮಕ್ಕಳ ಮಾನಸಿಕ ಆರೋಗ್ಯವನ್ನು ದೃಢಪಡಿಸಿ .ಮಕ್ಕಳು ಮಾನಸಿಕವಾಗಿ ಕುಗ್ಗಿದಾಗ ಅವರಿಗೆ ನಾವೂ ನಿನ್ನ ಜೊತೆಗಿರುವೆವು ಎಂದು ಹುಮ್ಮಸ್ಸನ್ನು ತುಂಬಿ . ಅಂಕಗಳೇ ವಿದ್ಯಾರ್ಥಿಗಳ ಜೀವನವಾಗದಿರಲಿ .ಜೀವನದಲ್ಲಿ ಮಕ್ಕಳ ಇಷ್ಟದ ವಿಷಯಗಳಿಗೆ ಪ್ರೋತ್ಸಾಹವಿರಲಿ .ಶಿಕ್ಷಣದಲ್ಲಿ ಬದಲಾವಣೆಯಾದಂತೆ ನಾವು ಬದಲಾಗಬೇಕು ಸರಿ ಆದರೆ ಜೀವನದ ಪಾಠಗಳು ವಿದ್ಯಾರ್ಥಿಗಳಿಗೆ ಮನವರಿಕೆ ಯಾಗಲೇ ಬೇಕು .100 ಅಂಕ ತೆಗೆದವನು ಜೀವನವೆಂಬ ಸಮರದಲ್ಲಿ ಸೋತ ಅದೆಷ್ಟೋ ಉದಾಹರಣೆಗಳಿವೆ .35 ಅಂಕಗಳನ್ನು ತೆಗೆದವ ಜೀವನದ ಉತ್ತುಂಗ ತಲುಪಿದ ಉದಾಹರಣೆಗಳಿವೆ .ಬದಲಾಗಬೇಕು ಶಿಕ್ಷಣ ಜೀವನಕ್ಕೆ ಬೇಕಾದಂತೆ ಬದುಕಿಗೆ ಸ್ಪೂರ್ತಿ ಕೊಡುವಂತೆ ಉದ್ಯೋಗಕ್ಕೆ ಉಪಯೋಗವಾಗುವಂತೆ , ಮಾನಸಿಕ ದೃಢತೆಯನ್ನು ನೀಡುವಂತೆ ದೇಶಭಕ್ತಿ ಮತ್ತು ಸಂಸ್ಕಾರವನ್ನು ನೀಡುವಂತೆ .ಡಾ .ಅಬ್ದುಲ್ ಕಲಾಂ ಮತ್ತು ಡಾ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಶಿಕ್ಷಣ ನೀತಿ ಜಾರಿಯಾಗಬೇಕೂ .ಮತ್ತೆ ಬರುವಂತಾಗಲಿ ಆ ಹಳೆಯ ಆಟ ಓಟ ಕಲಿಕೆ ಶಿಕ್ಷಣದ ದಿನಗಳು ……
ಪ್ರದೀಪ್ ಕುಮಾರ್ ಕೋಮುಂಜೆ

