Home » ವಿದ್ಯಾರ್ಥಿಗಳು ಸಂಸ್ಕಾರಯುತ ಬದುಕು ರೂಪಿಸಿಕೊಳ್ಳಿ :- ಆರ್ ಜೆ ನಯನ ಶೆಟ್ಟಿ
 

ವಿದ್ಯಾರ್ಥಿಗಳು ಸಂಸ್ಕಾರಯುತ ಬದುಕು ರೂಪಿಸಿಕೊಳ್ಳಿ :- ಆರ್ ಜೆ ನಯನ ಶೆಟ್ಟಿ

ಬಿ. ಬಿ. ಹೆಗ್ಡೆ ಕಾಲೇಜು: ಜೀವನ ಮೌಲ್ಯ ಉಪನ್ಯಾಸ ಮಾಲಿಕೆ

by Kundapur Xpress
Spread the love

ಕುಂದಾಪುರ : ವಿದ್ಯಾರ್ಥಿ ಜೀವನವೇ ಅಮೂಲ್ಯವಾದದ್ದು. ಈ ಸಂದರ್ಭದಲ್ಲಿ ಏನನ್ನು ಕಲಿಯುತ್ತೀರೋ ಅದನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡಾಗ ಬದುಕು ಉತ್ತಮವಾಗಿರಲು ಸಾಧ್ಯ. ಅದನ್ನು ಕಲಿತುಕೊಳ್ಳಬೇಕಾದ ಸೂಕ್ತ ಸಮಯವಿದು. ನಿಮ್ಮ ಗುರಿಯನ್ನು ನಿರ್ಧರಿಸಿಕೊಳ್ಳಿ, ಗುರಿಯೆಡೆಗೆ ಸಾಗುವ ಪರಿಶ್ರಮ ಇರಲಿ. ಮಾತು, ನಗು, ನಡತೆ ಸಂಸ್ಕಾರಯುತವಾಗಿರಲಿ ಎಂದು ಮಂಗಳೂರಿನ 92.7 ಬಿಗ್ ಆರ್ ಜೆ ನಯನ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜಿಸಿದ ಜೀವನ ಮೌಲ್ಯ ಉಪನ್ಯಾಸ ಮಾಲಿಕೆ – 2ರ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ ಜೀವನ ಮೌಲ್ಯಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆಯನ್ನು ತಿಳಿಸಿದರು.
ಈ ಸಂದರ್ಭ ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಮತಿ ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಖುಷಿ ಸ್ವಾಗತಿಸಿ, ಮಾನ್ಯ ಪ್ರಾರ್ಥಿಸಿ, ಪ್ರಮೀಳ ಅತಿಥಿಗಳನ್ನು ಪರಿಚಯಿಸಿ, ರೋನಿತ್ ಶೆಟ್ಟಿ ನಿರೂಪಿಸಿದರು.

 

Related Articles

error: Content is protected !!