ಹೊಸದಿಲ್ಲಿ : ವಕ್ಸ್ ಮಸೂದೆಗೆ ಹದಿನಾಲ್ಕು ತಿದ್ದುಪಡಿ ಮಾಡಲು ಕೇಂದ್ರ ಸಚಿವ ಸಂಪುಟ ಸಮ್ಮತಿಸಿದೆ ಮಸೂದೆಗೆ 23 ತಿದ್ದುಪಡಿ ಮಾಡುವಂತೆ ಜಂಟಿ ಸಂಸದೀಯ ಸಮಿತಿ ಪ್ರಸ್ತಾವಿಸಿತ್ತು ಮತದಾನ ಬಳಿಕ ಈ ಪೈಕಿ 14 ತಿದ್ದುಪಡಿಗಳಿಗೆ ಸಚಿವ ಸಂಪುಟ ಅಂಗೀಕಾರ ನೀಡಿದೆ ಪರಿಷ್ಕ್ರತ ಮಸೂದೆಯನ್ನು ಮಾ.10ರಂದು ಸಂಸತ್ತಿನಲ್ಲಿ ಮಂಡಿಸಲಾಗುವುದು.
ಜಂಟಿ ಸಂಸದೀಯ ಸಮಿತಿ ಫೆ.13ರಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ ತಾವು ಅಸಮ್ಮತಿ ವ್ಯಕ್ತಪಡಿಸಿದ್ದ ಕಲಂಗಳನ್ನು ಜೆಪಿಸಿ ದಾಖಲೆಯಿಂದ ಅಳಿಸಲಾಗಿದೆ ಎಂದು ಸಮಿತಿಯಲ್ಲಿನ ವಿಪಕ್ಷ ಸಂಸದರು ಮತ್ತೆ ಅಪಸ್ವರ ಎತ್ತಿದ್ದರು. ವಿಪಕ್ಷಗಳ ಆರೋಪ ತಿರಸ್ಕರಿಸಿರುವ ಕೇಂದ್ರ ಸರಕಾರ, ಜಂಟಿ ಸಂಸದೀಯ ಸಮಿತಿಗೆ ಕಳಂಕ ಹಚ್ಚಲೆತ್ನಿಸುವ ಉದ್ದೇಶದ ಕಲಂಗಳಿದ್ದಲ್ಲಿ ಅವನ್ನು ಕಿತ್ತುಹಾಕಲು ಸಮಿತಿ ಅಧ್ಯಕ್ಷರಾದ ಸಂಸದ ಜಗದಂಬಿಕಾ ಪಾಲ್ ಅವರಿಗೆ ಸ್ವಾತಂತ್ರ್ಯವಿದೆ ಎಂದು ಪ್ರತಿಪಾದಿಸಿದೆ.
ಈ ಮಧ್ಯೆ ಭಿನ್ನಾಭಿಪ್ರಾಯದ ಸೂಚಿಗಳು’ ಅಥವಾ ಕಲಂಗಳನ್ನು ಅವುಗಳ ಮೂಲ ಸ್ವರೂಪದಲ್ಲಿ ಪರಿಷ್ಠ ತ ಮಸೂದೆಗೆ ಸೇರ್ಪಡೆ ಮಾಡಲು ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ, ಸಂಸದೀಯ ವ್ಯವಹಾರ ಸಚಿವ ಕಿರಣ್ ರಿಜಿಜು ಮತ್ತು ಅಪಸ್ವರವೆತ್ತಿದ ವಿಪಕ್ಷ ಸಂಸದರ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ

