Home » ಬದುಕಬೇಕಿದೆ ಭರವಸೆಯಲ್ಲಿ…..
 

ಬದುಕಬೇಕಿದೆ ಭರವಸೆಯಲ್ಲಿ…..

by Kundapur Xpress
Spread the love

ಬದುಕಬೇಕಿದೆ ಭರವಸೆಯಲ್ಲಿ 

ಉರಿವ ಸೂರ್ಯ,ನಮ್ಮನ್ನು ನೆನೆಸಿದ ಮಳೆ.
ದೂರದ ದಾರಿ, ನಿಲ್ಲದ ಯೋಚನೆ.
ಕನಸಿನ ಒದ್ದಾಟದಲ್ಲಿ ಒ೦ಟಿ ನಾವೇ ,
ನಮ್ಮ ಹೋರಾಟದಲ್ಲಿ ,ನೂನ್ಯತೆ ಎಲ್ಲಿದೆ ?
ಒದ್ದಾಡುತ್ತಿದ್ದೇವೆ,ಆದರೂ ಅಲ್ಲಿಯೇ ನಿಂತಿದ್ದೇವೆ.

ಇದ್ಯಾವುದರ ಗುಂಗಲ್ಲೂ ನಮ್ಮ ಪ್ರಪಂಚವೇ ಇಲ್ಲ.

“ವಿಸ್ತಾರವಾಗಿ ಹಬ್ಬಿ”ಕೊಂಡ ಆಕಾಶಕೆ ,ಆಧಾರಸ್ತಂಭವಿಲ್ಲ.
ನಮ್ಮೆಲ್ಲರ “ಭಾರವನು ಹೊರುತಿರುವ” ಭೂಮಿತಾಯಿಗೆ ಸುಸ್ತೇ ಆಗಲ್ವಾ ?

“ಸಮಯ ತಪ್ಪದ” ಉರಿಯುವ ಸೂರ್ಯ,
ಕರಿರಾತ್ರಿಯಲ್ಲೂ “ಕಂಗೊಳಿಸುವ” ಚಂದ್ರ.
“ಕಾಣದ ಗಾಳಿ”ಯಿಂದ , ನಾವೆಲ್ಲರೂ ಉಸಿರಾಡುತ್ತಿದ್ದೇವೆ.
“ತನಗಾಗಿ ಬದುಕದೇ” ಹೂ-ಹಣ್ಣು ಕೊಡುವ ಮರ-ಗಿಡ.

ನಾವು ಹಾಗೆಯೇ ಬದುಕಬೇಕಿದೆ.
ನ್ಯೂನ್ಯತೆಗಳನು ಬದಿಗೊತ್ತಿ,ಸಾಧ್ಯತೆಗಳನ್ನು ಹಿಡಿದೆತ್ತಿ.

ಭೋರ್ಗರೆಯುವ ಸಮುದ್ರದ ಅಲೆಗಳು ಕೂಡ ,ನೆಮ್ಮದಿಯನ್ನೇ ಕೊಡುತ್ತದೆ.
ಜೀವ-ಇಲ್ಲದ ವಸ್ತು ಕೂಡ ,ನೆನಪುಗಳಿಂದ ಜೀವ ತುಂಬಿಕೊಳ್ಳುತ್ತಿದೆ.

ಪ್ರಕೃತಿ ಹೇಳುವ ಪಾಠ , ಈ ಜೀವನಕೆ ಅದೆಷ್ಟು ಅಗತ್ಯವಿದೆ.
ಬೇಗನೇ ಸೋಲನ್ನು ಒಪ್ಪಿಕೊಳ್ಳೊ‌ ಮನಕೆ, 
ನಿಸರ್ಗದ ಶಕುನ ತಿಳಿಯಲೇಬೇಕಿದೆ.

ತಪ್ಪುಗಳನ್ನು ಮಾತ್ರ ಹುಡುಕುತ್ತಿದ್ದೇವೆ ,
ಸಾಧ್ಯತೆಗಳ ಬಗ್ಗೆ ಯೋಚಿಸುವುದನ್ನು ಬಿಟ್ಟು.
ಇನ್ನೊಬ್ಬರ ಜೊತೆ ಸ್ಪರ್ಧೇ ಮಾಡುತ್ತಿದ್ದೇವೆ ,
ಓಡುತ್ತಿರುವ ಪ್ರಪಂಚದಲ್ಲಿ ,ನಮ್ಮನ್ನು ನಾವೇ ಹೋಲಿಕೆ ಮಾಡಿಕೊಳ್ಳುತ್ತಾ…

ನಮ್ಮ ಬಗ್ಗೆ ನಾವೇ ತಿಳಿದುಕೊಳ್ಳಬೇಕಿದೆ,
ನಿನ್ನೆಗಳಿಂದ ಕಲಿಯಬೇಕಿದೆ,
ಸ್ಪರ್ಧೇ ನಮ್ಮ ನಿನ್ನೆಗಳೊಂದಿಗೆ ಮಾತ್ರ ಮಾಡಬೇಕಿದೆ.
ನಾವು ಬದುಕಬೇಕಿದೆ,ಇನ್ನಷ್ಟು ಕಲಿಯಬೇಕಿದೆ.

ತನಗಾಗಿ ಬದುಕದ ಪ್ರಕೃತಿಗೆ ,
ಈಗಲೂ ಜೀವಿಸುವ ಉತ್ಸಾಹ ಹೆಚ್ಚಿದೆ.
ಆಯಾಸದ ಗುಂಗು, ಯಾರೊಂದಿಗೂ ಹೇಳಿಕೊಂಡಿದ್ದಿಲ್ಲ.
ಉತ್ಸಾಹದ ರಂಗು, ಎಲ್ಲರೊಂದಿಗೆ ಹಂಚಿಕೊಂಡಿದ್ದೇ ಹೆಚ್ಚು.

ದಿನ-ದಿನವೂ ಬದಲಾಗೋದಿದೆ ,
ಕುತೂಹಲ ಎಂದಿಗೂ ಇರಲಿ.
ನಿನ್ನೆಗಳು ಮುಗಿದು ಹೋಗಿದೆ ,ನೆನಪುಗಳಲ್ಲಿ ಬದುಕೋಣ.
ನಾಳೆಗಳು ಗೊತ್ತಿಲ್ಲ ,ಆದರೆ ಕನಸುಗಳನ್ನು ಕಾಣೋಣ.
ನಾವು ಬದುಕೋಣ, ಸುಂದರ ಜೀವನದಲ್ಲಿ ಒಳಿತನ್ನೇ ಹುಡುಕೋಣ .ಅರ್ಚನಾ.ರಾಮಕೃಷ್ಣ

 

Related Articles

error: Content is protected !!