Categories
ಕರಾವಳಿ ಸುದ್ದಿ

ಇಂದು ಪತ್ರಿಕಾ ದಿನಾಚರಣೆ

ಪತ್ರಿಕೆಗಳು ಸುದ್ದಿಗಳನ್ನು ಸಂಗ್ರಹಿಸಿ ಜನ ಸಮೂಹಕ್ಕೆ ತಲುಪುವ ಕಾರ್ಯ ಮಾಡುತ್ತಿದೆ ಪತ್ರಿಕೋದ್ಯಮದ ವಿಧಗಳು ಹಲವಾರು ಆಧುನಿಕ ಯುಗದಲ್ಲಿ ಪತ್ರಿಕೆ ಮನೋ ಧರ್ಮಗಳು ಎತ್ತ ಸಾಗುತ್ತಿದೆ ಎಂದು ಊಹಿಸುವುದು ಕಷ್ಟವಾಗಿದೆ ವೃತ್ತ ಪತ್ರಿಕೆಗಳಿಗೆ ಈಗೀಗ ವಿಶೇಷವಾದ ಸ್ನಾನ ಮಾನವಿದೆ ಲಭಿಸುತ್ತಿದೆ                  

ಜುಲೈ 1ನೇ ತಾರೀಕನ್ನು ಕರ್ನಾಟಕದಲ್ಲಿ ಪತ್ರಿಕಾ ದಿನಾಚರಣೆಯಾಗಿ ಆಚರಿಸುತ್ತಾರೆಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಆರಂಭವಾಗಿದ್ದು 1843 ಜುಲೈ 1ರಂದು ಹಾಗಾಗಿ ಇಂದಿನ ದಿನವನ್ನು ಪತ್ರಿಕಾ ದಿನವಾಗಿ ಆಚರಿಸುತ್ತಾರೆ”ಮಂಗಳೂರು ಸಮಾಚಾರ”ವೆಂಬ ಹೆಸರಿನಲ್ಲಿ ಆರಂಭಗೊಂಡ ಕನ್ನಡ ಪತ್ರಿಕೆಯಿಂದ ಕನ್ನಡ ಪತ್ರಿಕೆ ಮತ್ತು ಪತ್ರಿಕೋದ್ಯಮ ಚರಿತ್ರೆ  ಕರ್ನಾಟಕದಲ್ಲಿ ಆರಂಭವಾಯಿತು ಎಂದು ಇತಿಹಾಸ ಹೇಳುತ್ತದೆ                                               

ಇಂದು ಪತ್ರಿಕೆ ಮತ್ತು ಪತ್ರಿಕೋದ್ಯಮಗಳು ಈ ಮೊಬೈಲ್ ಯುಗದಲ್ಲಿ ಹಲವು ಬದಲಾವಣೆ ಕಂಡಿದೆ ಪತ್ರಿಕೋದ್ಯಮದ ರೀತಿ ನೀತಿಗಳು ಸ್ವರೂಪಗಳು ಬದಲಾಗಿದೆ ಮುದ್ರಣ ಮಾಧ್ಯಮದ ಜಾಗವನ್ನು ಬಹುಪಾಲು ಆನ್ಲೈನ್ ಪತ್ರಿಕೆಗಳು ಆಕ್ರಮಿಸಿಕೊಳ್ಳುತ್ತಿದೆ  ನನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಹೆಚ್ಚು ಸಮೃದ್ಧವಾಗುತ್ತಾ ಸಾಗುತ್ತಿದೆ ಟಿವಿ ಯುಗ ಮತ್ತು ಸೋಶಿಯಲ್ ಮೀಡಿಯಾ ಮತ್ತು ವಾಟ್ಸಾಪ್ ನ್ಯೂಸ್ ಗಳಿಂದಾಗಿಯೂ ಪ್ರಿಂಟ್ ಮೀಡಿಯಾ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಸಮಾಜದ ಜನರನ್ನು ತಲಪುತ್ತಿರುವುದೇ ವಿಶೇಷ                

ಪತ್ರಿಕೆಗಳು ಮತ್ತು ಪತ್ರಕರ್ತರು ಸಮಾಜದ ಪ್ರತಿಬಿಂಬಗಳು ಸಮಾಜದ ಸ್ವಾಸ್ಥ್ಯ  ಕಾಪಾಡುವಲ್ಲಿ ಪತ್ರಕರ್ತ ಪಾಲು ಬಹುಮುಖ್ಯವಾಗಿರುತ್ತದೆ ಆಧುನಿಕ ಸಮಾಜದ ಕನ್ನಡಿ ಎಂದು ಪತ್ರಿಕೆ ಮತ್ತು ಪತ್ರಕರ್ತರನ್ನು ಉಲ್ಲೇಖಿಸಿ ಸ್ನಾನಮಾನ ನೀಡಿ ಕೊಂಡಾಡುತ್ತಿರುವುದು ನಿತ್ಯ ಸತ್ಯ

ಪತ್ರಕರ್ತರನ್ನು ಸಮಾಜ ನಾಲ್ಕನೇ ಅಂಗ ಎಂದು ಕರೆದಿದ್ದಾರೆ ಸಮಾಜವನ್ನು ತಿದ್ದುವ ಮನೋಭಾವವನ್ನು ಪತ್ರಕರ್ತರು ರೂಡಿಸಿಕೊಂಡರೆ ಮಾತ್ರ ಈ ಪತ್ರಿಕಾ  ದಿನಾಚರಣೆಗೂ ಒಂದು ಮಹತ್ವದ ಸ್ಥಾನ ಬರುವುದು ಎಲ್ಲಾ ಪತ್ರಕರ್ತ ಮಿತ್ರರಿಗೂ ಪತ್ರಿಕಾ ಓದುಗರಿಗೂ ಹಾಗೂ ಸಾಮಾಜಿಕ ಜಾಲಾತಾಣದ ಸುದ್ದಿವಾಹಿನಿಗಳಿಗೂ  ದಿನಾಚರಣೆಯ ಶುಭಾಶಯಗಳು

ಈಶ್ವರ್ *ಸಿ ನಾವುಂದ

Categories
ಕರಾವಳಿ ಸುದ್ದಿ

ನೂತನ ಅಧ್ಯಕ್ಷರಾಗಿ ಡಾ.ಭರತ್ ಕುಮಾರ್

ಮುಂಬಯಿ : ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುಂಬಯಿಯ ಪ್ರತಿಷ್ಠಿತ ಸಂಸ್ಥೆ ಮಾಟುಂಗಾ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಡಾ. ಭರತ್ ಕುಮಾರ್ ಪೊಲಿಪು ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ಕಳೆದ ನಾಲ್ಕು ದಶಕಗಳಿಂದ ಮುಂಬಯಿಯ ಕನ್ನಡಪರ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು ಮುಂಬಯಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ರಾಯಭಾರಿ ಆಗಿರುವ ಡಾ. ಭರತ್ ಕುಮಾರ್ ಪೊಲಿಪು ಅವರಿಗೆ ಸಂಘದ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಅತ್ಯಂತ ಸೂಕ್ತವಾದದ್ದು ಮುಂದಿನ ದಿನಗಳಲ್ಲಿ ಸಂಘವು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಅವರ ಶಿಷ್ಯರಾದ ಈಶ್ವರ್‌ ನಾವುಂದ ಆಶಿಸಿದ್ದಾರೆ

Categories
ಕರಾವಳಿ ಸುದ್ದಿ

ಅಧಿಕಾರಿಗಳೊಂದಿಗೆ ಚರ್ಚೆ

ಕುಂದಾಪುರ: ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ನೆನೆಗುದಿಗೆ ಬಿದ್ದಿರುವ ಸಮಗ್ರ ಒಳಚರಂಡಿ ವಿಷಯದ ಬಗ್ಗೆ ನಿನ್ನೆ ಕುಂದಾಪುರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರ ನೇತೃತ್ವದಲ್ಲಿ ಕಾಮಗಾರಿಯ ಸಾಧಕ ಬಾದಕಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು ಸಭೆಯಲ್ಲಿ ಕರ್ನಾಟಕ ಸರ್ಕಾರ ನೀರು ಸರಬರಾಜು ಮತ್ತು ಒಳಚರಂಡಿ ನೈರ್ಮಲ್ಯ ಮಂಡಳಿಯ ಇಂಜಿನಿಯರ್ ಚಂದ್ರಶೇಖರ್  ರಕ್ಷಿತ್ ಕುಮಾರ್ ಉಪಸ್ಥಿತರಿದ್ದರು

ಪುರಸಭೆ ಮುಖ್ಯಾಧಿಕಾರಿಗಳಾದ ಮಂಜುನಾಥ್‌ ಆರ್ ಪುರಸಭಾ ಇಂಜಿನಿಯರ್ ಕಾರ್ತಿಕ್‌ ಮತ್ತು ಕಂದಾಯ ಅಧಿಕಾರಿಗಳಾದ ಅಂಜನಿ ಗೌಡ ಕಂದಾಯ ನಿರೀಕ್ಷಕರಾದ ಜ್ಯೋತಿ ರಾವ್‌ ಪರಿಸರ ಅಭ್ಯಂತರರಾದ ಗುರುಪ್ರಸಾದ್‌ ಶೆಟ್ಟಿ ಹಾಗೂ ಸಿಬ್ಬಂದಿಗಳಾದ ಸತೀಶ್‌ ಖಾರ್ವಿ ಮತ್ತು ಅರುಣ್‌ ಬೆರೆಟ್ಟೊ  ಉಪಸ್ಥಿತರಿದ್ದರು

Categories
ಕರಾವಳಿ ಸುದ್ದಿ

ಸೋಲಿನ ಶಿಶು ಅನಾಥ

ಕುಂದಾಪುರ: ಈ ಚುನಾವಣೆಯಲ್ಲಿ ನಮಗೆ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಸುಳ್ಳಾಯಿತು. ನಮ್ಮ ಸೋಲಿಗೆ ಆಮಿಷ, ಗ್ಯಾರಂಟಿ ಇನ್ನಿತರ ಕಾರಣಗಳಿರಬಹುದು. ಗೆಲುವಿಗೆ ಅನೇಕ ಉತ್ತರಾಧಿಕಾರಿಗಳಿರುತ್ತಾರೆ. ಸೋಲಿನ ಶಿಶು ಮಾತ್ರ ಅನಾಥ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಬಿಜೆಪಿ ಸೋಲಿನ ಬಳಿಕ ನಾಯಕರ ಮಧ್ಯೆ ಅಸಮಧಾನ ಸ್ಪೋಟಗೊಂಡ ಹಿನ್ನೆಲೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು. ಸೋತಾಗ ಜಿಜ್ಞಾಸೆ, ಚರ್ಚೆ, ಆತಂಕಗಳು ಎದುರಾಗುವುದು ಸಹಜ. ಸೋಲಿನ ದುಗುಡದಿಂದ ಕೆಲ ಪ್ರಮುಖರು ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ. ಪಕ್ಷದ ಪ್ರಮುಖರು ಪಕ್ಷ ಮತ್ತು ನಾಯಕರ ವಿರುದ್ದ ಮಾತನಾಡುವವರನ್ನು ಕರೆಸಿ ಮಾತನಾಡಿದ್ದಾರೆ. ಎಲ್ಲವೂ ಸರಿಹೋಗಲಿದೆ ಎಂದ ಅವರು, ಸದನ ಆರಂಭವಾಗುವ ಮುನ್ನ ಜು. 3 ರ ಮೊದಲು ವಿಪಕ್ಷ ನಾಯಕರ ಆಯ್ಕೆಯಾಗಲಿದೆ ಎಂದು ತಿಳಿಸಿದರು.

Categories
ಶಿಕ್ಷಣ

ವಾರದ ಸೇತುಬಂಧ ಕಾರ್ಯಾಗಾರ

ಉಡುಪಿ :  ಕಟಪಾಡಿಯ ತ್ರಿಶಾ ವಿದ್ಯಾ ಪಿ.ಯು ಕಾಲೇಜಿನ ವಿದ್ಯಾರ್ಥಿಗಳ  ಸೇತುಬಂಧ ಕಾರ್ಯಾಗಾರವು ಒಂದು ವಾರಗಳ ಕಾಲ ನಡೆಯಿತು

ಮೊದಲನೆಯ ದಿನ ಕಾಲೇಜಿನ ಪ್ರಾಂಶುಪಾಲರಾದ  ಡಾ। ಅನಂತ್ ಪೈ ಇವರು ಮಕ್ಕಳಿಗೆ ಸಂಸ್ಕ್ರತಿ ಹಾಗೂ ಕಾಲೇಜು ನಿಯಮದ ಬಗ್ಗೆ ತಿಳಿಸಿದರು ನಂತರ ತ್ರಿಶಾ  ಸಂಸ್ಥೆಯ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾಗಿರುವ  ಜಯದೀಪ್ ಇವರು ಸಂವಹನಗಳ ಬಗ್ಗೆ ಚಟಿವಟಿಕೆಗಳನ್ನು ನಡೆಸಿಕೊಟ್ಟರು

ಎರಡನೆಯ ದಿನ “ಇಂಪಾಸಿಬಲ್ ಟು ಪಾಸಿಬಲ್” – ಅಸಾದ್ಯದಿಂದ ಸಾಧ್ಯದೆಡೆಗೆ ಎನ್ನುವ ಕಾರ್ಯಾಗಾರವನ್ನ ಸಂಪನ್ಮೂಲ ವ್ಯಕ್ತಿಗಳಾದ ಜೈ ಕಿಶನ್ ಭಟ್ ನೆರವೇರಿಸಿದರು.

ಮೂರನೆಯ ದಿನ ಪಠ್ಯಕ್ರಮದ ವಿಷಯಗಳ ಬಗ್ಗೆ ಸೇತು-ಬಂಧ ಕಾರ್ಯಾಗಾ ನಡೆಯಿತು. ವಾಣಿಜ್ಯ ವಿಷಯದ ಕುರಿತು ಜಯದೀಪ್, ಮೂಲಗಣಿತವನ್ನು ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿ.ಎ ಗೋಪಾಲಕೃಷ್ಣ ಭಟ್, ಹಣ ಮತ್ತು ಹೂಡಿಕೆಯ ಕುರಿತಾಗಿ ತ್ರಿಶಾ ವಿದ್ಯಾ ಕಾಲೇಜಿನ ಪ್ರಾಂಶುಪಾಲರಾದ ಗುರುಪ್ರಸಾದ್ ರಾವ್ ತಿಳಿಸಿಕೊಟ್ಟರು. ನಂತರ ತ್ರಿಶಾ ಕಾಲೇಜಿನ  ಕನ್ನಡ ಪ್ರಾಧ್ಯಪಕ ಧೀರಜ್ ಬೆಳ್ಳಾರೆ ಜೀವನ ಮೌಲ್ಯಗಳನ್ನು ಚಟುವಟಿಕೆ ನೆರವೇರಿಸಿದರು 

ನಾಲ್ಕನೆಯ ದಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಗಣಿತ, ರಾಸಾಯನಶಾಸ್ತ್ರ , ಭೌತಶಾಸ್ತ್ರ ಮತ್ತು ಗಣಕಯಂತ್ರದ ತರಬೇತಿ ನೀಡಲಾಯಿತು. ನಂತರ ರಾಷ್ಟ್ರಮಟ್ಟದ ಜೆ.ಸಿ.ಐ ತರಬೇತುದಾರರಾದ ಡಾ|| ರಾಜೇಂದ್ರ ಭಟ್.ಕೆ ಇವರು ‘Diffrent levels of Success’ಎನ್ನುವ ವಿಷಯ ಮೇಲೆ ತಮ್ಮ ಜೀವನದ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಐದನೆಯ ದಿನ ಸಿ.ಎ ಗಿರಿಧರ್ ಕಾಮತ್ ಇವರು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ, ಹಲವಾರು ಚಟುವಟಿಕೆಗಳನ್ನು ಮಾಡಿಸುವುದರ ಮೂಲಕ ಸ್ಫೂರ್ತಿ ತುಂಬಿ ಸೇತು-ಬಂಧ ಕಾರ್ಯಾಗಾರವನ್ನು ಸಂಪನ್ನಗೊಳಿಸಿದರು

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5125

ಶೋಭಕೃತ್‌ ಸಂವತ್ಸರ

ದಕ್ಷಿಣಾಯಣ

ಗ್ರೀಷ್ಮ ಋತು ಜ್ಯೇಷ್ಠ ಮಾಸ

ಶುಕ್ಲ ಪಕ್ಷ

ತಿಥಿ: ತ್ರಯೋದಶಿ

ವಿಶಾಖೆ ನಕ್ಷತ್ರ

ಶುಕ್ರವಾರ 01.07.2023

ರಾಷ್ಟ್ರೀಯ ವೈದ್ಯರ ದಿನ

ಪತ್ರಿಕಾ ದಿನಾಚರಣೆ

ಈ ದಿನ ಎಲ್ಲರಿಗೂ ಶುಭವಾಗಲಿ