Categories
ಅಪರಾಧ

ದನದ ರುಂಡ ಪತ್ತೆ ಪ್ರಕರಣ : 6 ಮಂದಿ ಬಂಧನ

ಬ್ರಹ್ಮಾವರ : ಬ್ರಹ್ಮಾವರ ಸಮೀಪದ ಕುಂಜಾಲಿನ ಜಂಕ್ಷನ್ ನಲ್ಲಿ ಪತ್ತೆಯಾದ ದನದ ಕಳೇಬರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಿರುವ ಕುರಿತು  ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್  ಮಾಹಿತಿ ನೀಡಿದರು.

ಬಂಧಿತರನ್ನು ರಾಮ(49), ಪ್ರಸಾದ್‌(21), ನವೀನ್‌(35), ಕೇಶವ ನಾಯ್ಕ್‌(50) ಸಂದೇಶ(35), ರಾಜೇಶ್ (28) ಎಂದು ಗುರುತಿಸಲಾಗಿದೆ

ಎಸ್ಪಿ ನೀಡಿರುವ ಮಾಹಿತಿಯ ಪ್ರಕಾರ, ಆರೋಪಿ ಕೇಶವ ತನ್ನ ಮನೆಯಲ್ಲಿದ್ದ ದನವನ್ನು ರಾಮಣ್ಣನವರಿಗೆ ಮಾಂಸ ಮಾಡಲು ನೀಡಿದ್ದು ಅದರಂತೆ ಆರೋಪಿಗಳು ಮಾಂಸ ಮಾಡಿ ಅದರ ತ್ಯಾಜ್ಯವನ್ನು ಎಸೆಯಲು ಸ್ಕೂಟರ್ ನಲ್ಲಿ ರಾತ್ರಿ ತೆರಳುತ್ತಿದ್ದಾಗ ರಸ್ತೆಗೆ ಬಿದ್ದಿದೆ ಎಂದು ವಿವರಿಸಿದ್ದಾರೆ. ಈಗಾಗಲೇ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ

Categories
ಕರಾವಳಿ ಸುದ್ದಿ

ಪಂಚವರ್ಣ 261ನೇ ವಾರದ ಹಸಿರು ಜೀವ ಅಭಿಯಾನ

ಕೋಟ : ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸಿದರೆ ಮುಂದಿನ ದಿನಗಳು ಹಸಿರು ಕ್ರಾಂತಿಯಾಗುವುದರಲ್ಲಿಯಾವುದೇ ಸಂಶಯವಿಲ್ಲ ಎಂದು ಕೆ.ಎಂ.ಎಫ್ ನಿರ್ದೇಶಕ ಕೆ.ಶಿವಮೂರ್ತಿ ಉಪಾಧ್ಯಾಯ ಹೇಳಿದರು.

ಕೋಟತಟ್ಟು ಪಡುಕರೆ ಡೈರಿಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ,ಜೆಸಿಐ ಸಿನಿಯರ್ ಲಿಜನ್ ಕೋಟ ಇವರ ಸಹಯೋಗದೊಂದಿಗೆ ಹಾಲು ಉತ್ಪಾದಕರ ಸಹಕಾರಿ ಸಂಘ ಕೋಟತಟ್ಟು ಪಡುಕರೆ ಇವರ ಸಂಯೋಜನೆಯೊAದಿಗೆ ಗೀತಾನಂದ ಫೌಂಡೇಶನ್ ಮಣೂರು,ಸಮುದ್ಯತಾ ಗ್ರೂಪ್ಸ್ ಕೋಟ,ಅನ್ನಪೂರ್ಣ ನರ್ಸರಿ ಪೇತ್ರಿ,ಸುವರ್ಣ ಎಂಟರ್ಪೆ್ರöÊಸ್ ಬ್ರಹ್ಮಾವರ ಇವರು ಕೊಡ ಮಾಡಿದ ಗಿಡಗಳನ್ನು ನಡುವ ೨೬೧ನೇ ಭಾನುವಾರದ ಪರಿಸರಸ್ನೇಹಿ ಹಸಿರು ಜೀವ ಅಭಿಯಾನ ಕಾರ್ಯಕ್ರಮದಲ್ಲಿ ಗಿಡ ವಿತರಿಸಿ ಮಾತನಾಡಿ ಪ್ರಕೃತಿಗಾಗಿ ಪಂಚವರ್ಣ ಸಂಘಟನೆ ತನ್ನನ್ನು ತಾನು ಅರ್ಪಿಸಿಕೊಂಡಿದೆ ಇದು ಶಬ್ದಗಳಲ್ಲಿ ಬಣ್ಣಿಸಲು ಸಾಧ್ಯವಿಲ ಪ್ರಸ್ತುತ ಮನುಕುಲದಲ್ಲಿ ಈ ರೀತಿಯ ಸಾಮಾಜಿಕ ಸೇವೆ ಅಮೋಘವಾದದ್ದು ಎಂದು ಪರಿಸರ ಜಾಗೃತಿಯ ಬಗ್ಗೆ ತಿಳಿ ಹೇಳಿದರು.

ಇದೇ ವೇಳೆ ವಿವಿಧ ತಳಿಗಳ ಗಿಡಗಳನ್ನು ಪರಿಸರದ ಹಾಲು ಉತ್ಪಾದಕರಿಗೆ ವಿತರಿಸಲಾಯಿಲಾಯಿತು. ಪಂಚವರ್ಣ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಹಸಿರು ಜೀವ ಅಭಿಯಾನದ ಕುರಿತು ಮಾಹಿತಿ ನೀಡಿದರು. ಕೋಟ ರಾಷ್ಟಿçÃಯ ಹೆದ್ದಾರಿ ಮಣೂರು ಭಾಗದಲ್ಲಿ ಒಟ್ಟು 40 ಗಿಡಗಳನ್ನು ನೆಡಲಾಯಿತು.

ಈ ಸಂದರ್ಭದಲ್ಲಿ ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಸತೀಶ್ ಹೆಚ್ ಕುಂದರ್,ಕೋಟ ಆರಕ್ಷಕ ಠಾಣೆಯ ಕಾನ್ಸ್ಟೇಬಲ್ ವಿಜಯ್ ಕುಮಾರ್,ನಿವೃತ್ತ ಬಿ.ಎಸ್.ಎನ್ ಎಲ್ ಅಧಿಕಾರಿ ವಿಷ್ಣುಮೂರ್ತಿ ಮಯ್ಯ, ಪಂಚವರ್ಣ ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್,ಪಂಚವರ್ಣ ಮಹಿಳಾಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಪಂಚವರ್ಣದ ಸದಸ್ಯ ಮಹೇಶ್ ಬೆಳಗಾವಿ ಸ್ವಾಗತಿಸಿ ಕಾರ್ಯಕ್ರಮವನ್ನು ಸಲಹಾ ನಿರೂಪಿಸಿ ವಂದಿಸಿದರು.ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು

Categories
ಕರಾವಳಿ ಸುದ್ದಿ

ಸಾಸ್ತಾನ : ವನಮಹೋತ್ಸವ ಕಾರ್ಯಕ್ರಮ

ಕೋಟ : ಪರಿಸರದ ಬಗ್ಗೆ ನಿರ್ಲಕ್ಷೀಯ ಧೋರಣೆ ಬಿಟ್ಟು ಬಿಡಿ ಅದರ ಉಳಿವಿಗಾಗಿ ವರ್ಷವಿಡೀ ವನಮಹೋತ್ಸವ ಆಚರಿಸಿ ಎಂದು ಬ್ರಹ್ಮಾವರ ವಲಯ ಅರಣ್ಯ ಇಲಾಖೆಯ ಅಧಿಕಾರಿ ಮಾಲ್ತೇಶ್ ಅಳಲಗಿರಿ ಹೇಳಿದರು.

ಅನ್ನೋನ್ಯತಾ ಗೂಡ್ಸ್ ವಾಹನ ಚಾಲಕರು ಹಾಗೂ ಮಾಲಕರು, ಸಾಸ್ತಾನ ಇವರ ವತಿಯಿಂದ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ವಿತರಿಸಿ ಮಾತನಾಡಿ ಪರಿಸರ ಉಳಿದರೆ ಮನುಕುಲ ಉಳಿದಂತೆ ಇಲ್ಲವಾದಲ್ಲಿ ಅವನತಿ ಕಟ್ಟಿಟ್ಟ ಬುತ್ತಿ ಎಂದರಲ್ಲದೆ ಮನೆ ಮನೆಯಲ್ಲೂ ಪರಿಸರ ಉಳಿವಿಗಾಗಿ ಶ್ರಮಿಸಿ ಎಂದು ಕರೆ ನೀಡಿದರು.

ಇದೇ ವೇಳೆ ಸ್ಥಳೀಯರಿಗೆ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್ ಗಿಡ ಹಸ್ತಾಂತರಿಸಿದರು. ಅನ್ನೋನ್ಯತಾ ಗೂಡ್ಸ್ ವಾಹನ ಚಾಲಕರು ಹಾಗೂ ಮಾಲಕರು, ಸಾಸ್ತಾನ ಇದರ ಅಧ್ಯಕ್ಷ ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಐರೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮೋಸೆಸ್ ರೋಡ್ರಿಗಸ್,ಗೋಳಿ ಗರಡಿ ಕ್ಷೇತ್ರದ ಪಾತ್ರಿ ಗಳು ಶಂಕರ್ ಪೂಜಾರಿ, ಶಂಕರ್ ಕುಲಾಲ್, ಹಾಗೂ ಅನ್ಯನ್ಯತಾ ಸಂಘದ ಅಧ್ಯಕ್ಷರಾದ ಸಂಜೀವ ಪೂಜಾರಿ, ಉಪಾಧ್ಯಕ್ಷ ಸೂರ್ಯ ಪೂಜಾರಿ, ಕಾರ್ಯದರ್ಶಿ ಅನಿಲ್ ಹಾಂಡ, ಗೋಪಾಲ ಐರೋಡಿ, ಸುರೇಶ್ ಪೂಜಾರಿ ಗುಂಡ್ಮಿ, ಟೂರಿಸ್ಟ್ ಅಧ್ಯಕ್ಷರು ರಾಘವೇಂದ್ರ ಓಣಿ ಮನೆ, ಹಾಗೂ ಅನ್ಯೋನ್ಯತ ಗೂಡ್ಸ್ ವಾಹನ ಚಾಲಕರ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದಯ್ ಪೂಜಾರಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು

Categories
ಅಪರಾಧ

ಸ್ಕೂಟರಿಗೆ ಹಿಂದಿನಿಂದ ಬಸ್‌ ಢಿಕ್ಕಿ : ಗಂಭೀರ ಗಾಯ

ಬ್ರಹ್ಮಾವರ : ಖಾಸಗಿ ಬಸ್ಸೊಂದು  ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಂಭೀರ ಗಾಯಗೊಂಡ ಘಟನೆ ಮಾಬುಕಳ ಸೇತುವೆ ಸಮೀಪದಲ್ಲಿ ನಡೆದಿದೆ ಗಂಭೀರ ಗಾಯಗೊಂಡ ಸವಾರನನ್ನುಸಾಸ್ತಾನ ಪಾಂಡೇಶ್ವರ ನಿವಾಸಿ ಬಸವ ತಿಂಗಳಾಯ ಎಂದು ತಿಳಿದುಬಂದಿದೆ

ಖಾಸಗಿ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದು ಸ್ಕೂಟರ್ ಸವಾರ ಹಾಗೂ ಸಹ ಸವಾರೆ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ ತಕ್ಷಣ ಸ್ಥಳೀಯರು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಗಾಯಾಳುಗಳನ್ನು ಸಾಗಿಸಿದ್ದಾರೆ

ಬ್ರಹ್ಮಾವರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ

Categories
ಕರಾವಳಿ ಸುದ್ದಿ

ಜಯರಾಣಿ ಶಾಲೆ : ವಿದ್ಯಾರ್ಥಿ ಸಂಸತ್ತಿನ ಚುನಾವಣೆ

ಕುಂದಾಪುರ : ಪ್ರಜಾಪ್ರಭುತ್ವದ ತತ್ವಗಳನ್ನು ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡು ಪ್ರಜೆಗಳ ಜವಾಬ್ದಾರಿಯನ್ನು ಅರಿಯಲು ಅನುವಾಗಲು ತಲ್ಲೂರಿನ ಜಯರಾಣಿ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾರ್ಥಿ ಸಂಸತ್ತಿನ ಚುನಾವಣೆ ಜರುಗಿತು.

ವಿದ್ಯಾರ್ಥಿ ನಾಯಕನಾಗಿ ಆಶ್ಲೇಷ ಎಸ್‌ ಕೊಟೇಗಾರ್  ಶಾಲಾ ನಾಯಕಿಯಾಗಿ ಶಾರ್ವಿ ಎಸ್‌ ಶೆಟ್ಟಿ ವಿದ್ಯಾರ್ಥಿಗಳಿಂದ ಭಾರಿ ಬಹುಮತದೊಂದಿಗೆ ಚುನಾಯಿತರಾದರು.

ಮತದಾನ ಪೂರ್ಣಗೊಂಡ ಬಳಿಕ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸಿಸ್ಟರ್‌ ಜೂಲಿ ಶಾಲಾ ಮುಖ್ಯೋಪಧ್ಯಾಯರಾದ ಸಿಸ್ಟರ್‌ ಅವಿಲಾ ಉಪಸ್ಥಿತರಿದ್ದರು ಮುಖ್ಯ ಅತಿಥಿಯಾಗಿ ಸಿಸ್ಟರ್ ಝೀಟಾ ಆಗಮಿಸಿದ್ದರು ಸಂಧ್ಯಾ ಕಾರ್ಯಕ್ರಮ ನಿರೂಪಿಸಿ ಸ್ವಾತಿ ಎಸ್‌ ಧನ್ಯವಾದವಿತ್ತರು

Categories
ಕರಾವಳಿ ಸುದ್ದಿ

ಫ್ರೆಂಡ್ಸ್ ಸರ್ಕಲ್ ವತಿಯಿಂದ ಪ್ರತಿಭಾ ಪುರಸ್ಕಾರ

ಕುಂದಾಪುರ : ಕರ್ನಾಟಕ ಸಂಘ ರತ್ನ ಹಾಗೂ ಭಾರತ ಸಂಘ ಸಿರಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಫ್ರೆಂಡ್ಸ್ ಸರ್ಕಲ್ ರಿ.ಮೀನು ಮಾರ್ಕೆಟ್ ರಸ್ತೆ ಕುಂದಾಪುರ ಇದರ 35ನೇ ವರ್ಷದ ಪುರಸಭಾ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಕುಂದಾಪುರದ ಬಿ ಆರ್ ರಾಯರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನೆರವೇರಿತು.

ಸಂಸ್ಥೆಯ ಅಧ್ಯಕ್ಷರಾದ ಶ್ರೀ ನಾಗರಾಜ್ ಖಾರ್ವಿ ಸಭಾ ಅಧ್ಯಕ್ಷತೆ ವಹಿಸಿದ್ದರು .ಹಲವಾರು ಉತ್ತಮವಾದ ಕಾರ್ಯಕ್ರಮಗಳನ್ನು ಪರಿಸರದಲ್ಲಿ ನಡೆಸುತ್ತಾ ಬಂದಿರುವ ಫ್ರೆಂಡ್ ಸರ್ಕಲ್ ಸಂಸ್ಥೆಯು ಪ್ರತಿ ವರ್ಷವೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸುತ್ತಿದ್ದು ಉತ್ತಮ ನಾಯಕತ್ವದೊಂದಿಗೆ ಸಮಾನ ಮನಸ್ಕ ತಂಡವಾಗಿ ಪರಿಸರದಲ್ಲಿ ಜನಾನುರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯ ಅತಿಥಿಯಾದ ಕುಂದಾಪುರ ಪುರಸಭಾ ಸದಸ್ಯೆ ಶ್ರೀಮತಿ ದೇವಕಿ ಪಿ ಸಣ್ಣಯ್ಯ ನುಡಿದರು 

ಇನ್ನೋರ್ವ ಮುಖ್ಯ ಅತಿಥಿಯಾದ ಮಾಜಿ ಪುರಸಭಾ ಸದಸ್ಯ ಶ್ರೀ ಸತೀಶ್ ಶೆಟ್ಟಿಯವರು ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಅಯೋಜಿಸುತ್ತಾ ಬಂದಿದ್ದು, ಕಳೆದ 34 ವರ್ಷಗಳಿಂದ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ ಮಾಡುತ್ತಾ ಮಕ್ಕಳಿಗೆ ಉತ್ತೇಜನ ನೀಡುತ್ತಾ ಬಂದಿದ್ದಾರೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ಶ್ರೀ ರವಿನಾಥ್ ಶೆಣೈ. ಕುಂದಾಪುರ ಪುರಸಭಾ ಸದಸ್ಯೆ ಶ್ರೀಮತಿ ದೇವಕಿ ಪಿ ಸಣ್ಣಯ್ಯ, ಮಾಜಿ ಪುರಸಭಾ ಸದಸ್ಯ ಶ್ರೀ ಸತೀಶ್ ಶೆಟ್ಟಿ, ಬಿ ಆರ್ ರಾಯರ ಹಿಂದೂ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ನಿಂಗಪ್ಪ ಎಂ. ಸಂಸ್ಥೆಯ ಕಾರ್ಯದರ್ಶಿ ಶ್ರೀ ಗಣೇಶ್ ನಾಯ್ಕ್ ಉಪಸ್ಥಿತರಿದ್ದರು . ಸಂಸ್ಥೆಯ ಸದಸ್ಯರಾದ ಮಂಜುನಾಥ ಪೂಜಾರಿ, ಮನೋಹರ್ ಪುತ್ರನ್, ಗುರುಪ್ರಸಾದ್ ಖಾರ್ವಿ, ಧನಪಾಲ ಪುತ್ರನ್, ಶರತ್ ಎಸ್ ಖಾರ್ವಿ,ಗಣೇಶ ಆಚಾರ್,ಗಣಪತಿ ಖಾರ್ವಿ ಉದಯ ಮಾಣಿಮನೆ, ಸುರೇಶ್ ಪುತ್ರನ್, ಗಣೇಶ ಸಾಲಿಯಾನ್ ಹಾಗೂ ವಿದ್ಯಾರ್ಥಿಗಳು, ಪೋಷಕರು ಶಿಕ್ಷಕರು ಭಾಗವಹಿಸಿದ್ದರು . ಚೇತನ್ ದೇವಾಡಿಗ ಸ್ವಾಗತಿಸಿದರು,ಶೇಖರ್ ಜಿ ಖಾರ್ವಿ ನಿರೂಪಣೆ ಮಾಡಿ ವಂದಿಸಿದರು.

Categories
ಧಾರ್ಮಿಕ

ಉಡುಪಿ ಶ್ರೀಕೃಷ್ಣನಿಗೆ ಸುವರ್ಣರಥ ಸಮರ್ಪಣೆಯ ಸಂಕಲ್ಪ

ಉಡುಪಿ : ಪರ್ಯಾಯ ಪುತ್ತಿಗೆ  ಶ್ರೀಕೃಷ್ಣ ಮಠದ ವತಿಯಿಂದ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಸಂನ್ಯಾಸ ಸುವರ್ಣ ಮಹೋತ್ಸವ ಪ್ರಯುಕ್ತ ಉಡುಪಿ ಶ್ರೀಕೃಷ್ಣ ದೇವರಿಗೆ ಸಮರ್ಪಿಸಲು ಉದ್ದೇಶಿಸಿರುವ ಪಾರ್ಥಸಾರಥಿ ಸುವರ್ಣ ರಥ ನಿರ್ಮಾಣಕ್ಕೆ ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದರು ಭಾನುವಾರ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಚಾಲನೆ ನೀಡಿದರು

ಬಳಿಕ ಸ್ವಾಮೀಜಿ ಆಶೀರ್ವಚನ ನೀಡಿ, ಶ್ರೀಕೃಷ್ಣ ಉತ್ಸವ ಪ್ರಿಯನಾಗಿದ್ದು, ಭಗವಂತನಲ್ಲಿ ಮೊರೆ ಇಟ್ಟರೆ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ. 365 ದಿನವೂ ಉತ್ಸವ ನೆರವೇರಿಸುವ ಉದ್ದೇಶದಿಂದ ನಿರ್ಮಾಣಗೊಳ್ಳಲಿರುವ ಪಾರ್ಥಸಾರಥಿ ಸುವರ್ಣ ರಥಕ್ಕೆ ಶ್ರೀಮಠದ ವತಿಯಿಂದ 10 ಲಕ್ಷ ರೂಪಾಯಿ ನೀಡಲಾಗುವುದು ಎಂದರು

ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಸಮಾಜದ ಸರ್ವರ ಮನೋರಥವನ್ನು ಪೂರೈಸುವ ರಾಘವೇಂದ್ರ ಸ್ವಾಮಿಯ ಮಠದ ಸ್ವಾಮೀಜಿಯಿಂದ ಪಾರ್ಥ ಸಾರಥಿ ಸುವರ್ಣ ರಥ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ‘ಇದು ಕೋಟಿ ಗೀತಾ ಪರ್ಯಾಯದ ಐತಿಹಾಸಿಕ ದಿನ. ಇಂದಿನಿಂದಲೇ ರಥ ಚಲಿಸಲು ಶುರುವಾಗಿದೆ ಎಂದರು.

ಪರ್ಯಾಯ ಪುತ್ತಿಗೆ ಕಿರಿಯ ಶ್ರೀ ಸುಪ್ರೀಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಶಾಸಕರಾದ ಯಶಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್. ಎಸ್.ಬಲ್ಲಾಳ್‌, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಯೋಗೀಶ್ ಶೆಟ್ಟಿ ಕಾಪು, ಗಯಾ ರಾಮಾ ಚಾರ್ಯ, ರಮ್ಯಾ ಶ್ರೀನಾಥ್, ಬೆಳಪು ದೇವಿ ಪ್ರಸಾದ್‌ ಶೆಟ್ಟಿ ಉಪಸ್ಥಿತರಿದ್ದರು.

Categories
ಧಾರ್ಮಿಕ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಅಣ್ಣಾಮಲೈ ಭೇಟಿ

ಸುಬ್ರಹ್ಮಣ್ಯ : ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು  ಕುಟುಂಬ ಸಮೇತರಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಆಶ್ಲೇಷ ಬಲಿ ಸೇವೆ ನೆರವೇರಿಸಿದರು.

ಬಳಿಕ ಅವರು ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಶ್ರೀಗಳು ಅವರಿಗೆ ಶಾಲು ಹೊದಿಸಿ ಫಲ ಮಂತ್ರಾಕ್ಷತೆ ನೀಡಿ ಹರಸಿದರು. ಕುಟುಂಬ ಸಮೇತ ಪವಿತ್ರ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದರ್ಶನಕ್ಕೆ ಆಗಮಿಸಿದ ಅವರು ಶ್ರೀ ಸಂಪುಟ ನರಸಿಂಹಸ್ವಾಮಿ ಸುಬ್ರಹ್ಮಣ್ಯ ಮಠದಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದರು.

Categories
ರಾಜ್ಯ ಸುದ್ದಿ

ಮುನಿಸು ಶಮನಕ್ಕೆ ಹೈಕಮಾಂಡ್‌ ಪ್ರವೇಶ : ಉಸ್ತುವಾರಿ ಇಂದು ಬೆಂಗಳೂರಿಗೆ

ಬೆಂಗಳೂರು : ರಾಜ್ಯ ಸರ್ಕಾರದ ಸಚಿವರು, ಅಧಿಕಾರಿಗಳ ಧೋರಣೆ  ವಿರುದ್ಧ ಸ್ವಪಕ್ಷೀಯ ಶಾಸಕರೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅಹವಾಲು ಆಲಿಸಲು ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾವರು ಸೋಮವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ.  

ಸತತ 3 ದಿನಗಳ ಕಾಲ 42 ಮಂದಿ ಕಾಂಗ್ರೆಸ್ ಶಾಸಕರೊಂದಿಗೆ ಮುಖಾ ಮುಖಿ ಚರ್ಚಿಸಿ ಅಹವಾಲು ಆಲಿಸಲಿದ್ದಾರೆ ಎನ್ನಲಾಗಿದೆ.

ಶಾಸಕರಾದ ಬಿ.ಆರ್. ಪಾಟೀಲ್ ಹಾಗೂ ರಾಜು ಕಾಗೆ ಅವರು ಆಡಳಿತ ವೈಫಲ್ಯದ ಬಗ್ಗೆ ಮಾಡಿರುವ ಬಹಿರಂಗ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಮುಜುಗರ ಉಂಟಾಗಿದೆ. ಜತೆಗೆ ಹಲವು ಶಾಸಕರು ಅನುದಾನ ಕೊರತೆ, ಸಚಿವರ ಅಸಹಕಾರ, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನಗೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸುರ್ಜೇವಾಲಾ ಅವರು ಬೆಂಗಳೂರಿಗೆ ಆಗಮಿಸಿ ಜೂ.30ರಿಂದ ಜು.2ರವರೆಗೆ 3 ದಿನಗಳ ಕಾಲ ಬೆಂಗಳೂರು ವಿಭಾಗದ 27 ಮಂದಿ, ಮೈಸೂರು ವಿಭಾಗದ 13 ಶಾಸಕರೊಂದಿಗೆ ಮೊದಲ ಹಂತದಲ್ಲಿ ‘ಒನ್ ಟು ಒನ್’ ಸಭೆ ನಡೆಸಲಿದ್ದಾರೆ.

ಇದಕ್ಕೂ ಮೊದಲು ಆಡಳಿತ ವೈಫಲ್ಯದ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿರುವ ಶಾಸಕ ರಾಜು ಕಾಗೆ ಹಾಗೂ ಬಿ. ಆರ್. ಪಾಟೀಲ್ ಜತೆ ಪ್ರತ್ಯೇಕವಾಗಿ ತಲಾ ಅರ್ಧಗಂಟೆ ಚರ್ಚೆ ನಡೆಸಿ ಮನವೊಲಿಕೆ ಯತ್ನ ಮಾಡಲಿದ್ದಾರೆ ಎನ್ನಲಾಗಿದೆ.

Categories
ರಾಜ್ಯ ಸುದ್ದಿ

ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಬಳ್ಳಾರಿ : ಸುಮಾರು ವರ್ಷಗಳ ಬಳಿಕ ಗಣಿನಾಡು ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬ‌ರ್ ನಲ್ಲಿ ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದ್ದು, ಬೂಕರ್ ಪ್ರಶಸ್ತಿ ಪುರಸ್ಕೃ ತರಾದ ಬಾನು ಮುಷ್ತಾಕ್ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆಗೊಳಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಹೇಳಿದರು.

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕಾರಣಿ ಸಭೆಯಲ್ಲಿ ನಾಡಿನ ಎಲ್ಲ ನಮ್ಮ ಸರ್ವ ಸದಸ್ಯರು ಸೇರಿದಂತೆ ಎಲ್ಲರೂ ಒಮ್ಮತದಿಂದ ಬಾನು ಮುಷ್ತಾಕ್ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು.

ಕಾರ್ಯಕಾರಣಿ ಸಭೆಯಲ್ಲಿ ಮಾಲತಿ ಪಟ್ಟಣ ಶೆಟ್ಟಿ, ವೀಣಾ ಶಾಂತೇಶ್ವರ, ಬಾನು ಮುಸ್ತಾಕ್ ಅವರ ಹೆಸರುಗಳನ್ನು ಸರ್ವಾ ಧ್ಯಕ್ಷರ ನೇಮಕ ವಿಚಾರದಲ್ಲಿ ಚರ್ಚೆಗೆ ಬಂದವು. ಅಂತಿಮವಾಗಿ ಸಭೆಯಲ್ಲಿ ಎಲ್ಲರೂ ಒಮ್ಮತದಿಂದ ಬಾನು ಮುಷ್ಕಾಕ್ ಅವರ ಹೆಸರನ್ನು ಅಂತಿಮಗೊಳಿಸಲಾಯಿತು. ನಾಡಿನ ಸಮಸ್ತ ಎಲ್ಲ ಕನ್ನಡಾಭಿಮಾನಿಗಳು ಬಳ್ಳಾರಿಯಲ್ಲಿ ಆಯೋಜಿಸಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಶ್ರಮಿಸಬೇಕು, ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು