Categories
ಕರಾವಳಿ ಸುದ್ದಿ

ಸತ್ಯಜಿತ್‌ ಸುರತ್ಕಲ್‌ ಹತ್ಯೆಗೆ ಬಿಜೆಪಿ ಮುಖಂಡರಿಂದಲೇ ಪರೋಕ್ಷ ಸಂಚು…?

ಸತ್ಯಜಿತ್‌ ಸುರತ್ಕಲ್‌ ಹತ್ಯೆಗೆ ಬಿಜೆಪಿ ಮುಖಂಡರಿಂದಲೇ ಪರೋಕ್ಷ ಸಂಚು…?

ಕುಂದಾಪುರ : ಹಿಂದು ಸಮಾಜದ ಮುಖಂಡನಾಗಿ ನಾನಾ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಹಿಂದು ಸಮಾಜಕ್ಕೆ ಬಂದೊರಗಿದ ಬಾಹ್ಯ ಆಕ್ರಮಣವನ್ನು ತಡೆಗಟ್ಟುವಲ್ಲಿ 25 ವರ್ಷಗಳ ಕಾಲ ನಿರಂತರ ಹೋರಾಟ ಮಾಡಿದ ಸತ್ಯಜಿತ್‌ ಸುರತ್ಕಲ್‌ ರವರಿಗೆ ಮುಸ್ಲಿಂ ಮೂಲಭೂತವಾದಿಗಳ ಜೀವ ಬೆದರಿಕೆಯಿಂದಾಗಿ ಕಳೆದ 16 ವರ್ಷಗಳಿಂದ ಇವರಿಗೆ ನೀಡಿದ ಗನ್ ಮ್ಯಾನ್‌ ಭದ್ರತೆಯನ್ನು ಕರ್ನಾಟಕದ ಬಿಜೆಪಿ ಸರಕಾರ ತರಾತುರಿಯಲ್ಲಿ ಹಿಂದೆ ಪಡೆದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದ್ದು ಬಿಜೆಪಿಯ ಮುಖಂಡರೇ ಇವರ ಹತ್ಯೆಗೆ ಪರೋಕ್ಷವಾಗಿ ಸಂಚು ರೂಪಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ

ಕಳೆದ 16 ವರ್ಷಗಳ ಕಾಲ ಕರ್ನಾಟಕ ರಾಜ್ಯದಲ್ಲಿ ಅನೇಕ ಸರಕಾರಗಳು ಆಡಳಿತ ನಡೆಸಿದ್ದು ಯಾವ ಸರಕಾರವೂ ಕೂಡ ಗನ್‌ ಮ್ಯಾನ್‌ ಭದ್ರತೆಯನ್ನು ವಾಪಾಸು ಪಡೆಯದೇ ಇದ್ದು ಇದೀಗ ಬಿಜೆಪಿ ಸರಕಾರವೇ ಚುನಾವಣಾ ಸಂದರ್ಭದಲ್ಲಿ ಭದ್ರತೆಯನ್ನು ವಾಪಾಸ್ಸು ಪಡೆಯುದರ ಔಚಿತ್ಯವೇನೆಂದು ಹಿಂದು ಸಮಾಜದ ಹಲವು ಮುಖಂಡರು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ

ತನ್ನ ಜೀವದ ಹಂಗನ್ನು ತೊರೆದು ಹಿಂದು ಸಮಾಜದ ಮೇಲೆ ಆಗುತ್ತಿರುವ ಬಾಹ್ಯ ಆಕ್ರಮಣವನ್ನು ತಡೆಯುವ ನಿಟ್ಟಿನ ಹೋರಾಟದಲ್ಲಿ ಕಾರಾಗೃಹ ವಾಸವನ್ನು ಅನುಭವಿಸಿರುವ ಇವರು ಬಿಜೆಪಿಗೆ ಮಗ್ಗುಲ ಮುಳ್ಳಾಗಿದ್ದಾರೆಯೇ….?

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬೆರಳಣಿಕೆ ಶಾಸಕರು ಹಾಗೂ ವಿರೋಧ ಪಕ್ಷದಲ್ಲಿಯೂ ಇಲ್ಲದ ಬಿಜೆಪಿಯ ಕಾಲದಲ್ಲಿ ಮಂಗಳೂರಿನಿಂದ ಹಿಡಿದು ಬೈಂದೂರಿನ ತನಕ ತನ್ನ ಸ್ವಂತ ಖರ್ಚಿನಲ್ಲಿ ಪ್ರವಾಸ ಮಾಡಿ ಹಿಂದು ಜಾಗರಣಾ ವೇದಿಕೆಯ ಮೂಲಕ ಕಾರ್ಯಕರ್ತರನ್ನು ತಯಾರು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಈಗಲೂ ಕೂಡ ಬೈಂದೂರು ಕಿರಿಮಂಜೇಶ್ವರ ಮರವಂತೆ ಗಂಗೊಳ್ಳಿಯಿಂದ ಹಿಡಿದು ಕುಂದಾಪುರದಿಂದ ಉಡುಪಿ ಕಾರ್ಕಳ ಮಂಗಳೂರಿನ ವರೆಗೆ ತನ್ನದೇ ಆದ ವಿಶಿಷ್ಟ ವರ್ಚಸ್ಸಿನಿಂದ ಅಭಿಮಾನಿ ಬಳಗವನ್ನೇ ಹೊಂದಿದ್ದು ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ಪೋಲೀಸರ ಸರ್ಪಗಾವಲಿನ ನಡುವೆ ರಾಷ್ಟ್ರಧ್ವಜವನ್ನು ಹಾರಿಸಿ ಕರ್ನಾಟಕದ ಮಾನ ಕಾಪಾಡಿದ ಇವರು ಹಲವರಿಗೆ ಪ್ರೇರಣಾದಾಯಿಯಾಗಿದ್ದಾರೆ

ಸದ್ಯ ಸತ್ಯಜಿತ್‌ ಸುರತ್ಕಲ್‌ ರವರು ನಾರಾಯಣ ಗುರು ವಿಚಾರ ವೇದಿಕೆಯ ಸ್ಥಾಪಕ ಅಧ್ಯಕ್ಷರಾಗಿರುವುದು ಬಿಜೆಪಿಯ ನಾಯಕರಿಗೆ ನುಂಗಲಾರದ ತುತ್ತಾಗಿದ್ದು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಇವರನ್ನೇ ಬಲಿ ಕೊಡುವ ಹುನ್ನಾರ ನಡೆಸಿರುವುದು ಹಿಂದು ಸಮಾಜದ ದುರಂತವೇ ಸರಿ… ?

1980ರ ದಶಕದಲ್ಲಿ ಸಂಘದ ಸ್ವಯಂ ಸೇವಕನಾಗಿ ಸೋಂದಾ ನಾರಾಯಣ ಭಟ್‌ ಪ್ರಚಾರಕರಾದ ಮಾನ್ಯ ಸುರೇಶ್‌ ಜಿ ಹಾಗೂ ದಾ ಮಾ ರವೀಂದ್ರ ಮತ್ತು ಮುಕುಂದ್‌ ಜಿ ಡಾ.ಕಲ್ಲಡ್ಕ ಪ್ರಭಾಕರ ಭಟ್ ಯವರ ಸೂಚನೆಯಂತೆ ನಿಷ್ಟೆಯಿಂದ   ಸಮಾಜಕ್ಕಾಗಿ ಸೇವೆ ಸಲ್ಲಿಸಿದ ಇವರಿಗೆ ಪರಿವಾರದ ಕಾಣಿಕೆ ಇದೆಯೇ….?

ಸತ್ಯಜಿತ್‌ ರವರ ಸದ್ದಡಗಿಸಲಿಕ್ಕಾಗಿ ಬಿಜೆಪಿಯ ಈ ಧೋರಣೆಯಿಂದ ಅವರ ಜೀವಕ್ಕೇನಾದರೂ ಮೂಲಭೂತವಾದಿಗಳಿಂದ  ಕುತ್ತು ಬಂದಲ್ಲಿ ಹಿಂದು ಸಮಾಜವು ಬಿಜೆಪಿಯನ್ನು ಎಂದಿಗೂ ಕ್ಷಮಿಸುವುದಿಲ್ಲ…………… ನೆನಪಿರಲಿ                                                                                                                                                           

Categories
ಅಪರಾಧ

ಸಂಗಮ್‌ ಜಂಕ್ಷನ್‌ ಬಳಿ ಸ್ಕೂಟರ್‌ ಬೈಕ್‌ ಡಿಕ್ಕಿ

ಕುಂದಾಪುರ: ನಗರದ ಸಂಗಮ್‌ ಜಂಕ್ಷನ್‌ ಬಳಿ ಸ್ಕೂಟರ್‌ ವೊಂದಕ್ಕೆ ಬೈಕ್‌   ಡಿಕ್ಕಿ ಹೊಡೆದ ಪರಿಣಾಮ ಬೈಕ್ಕಿನ ಸಹ ಸವಾರಳಾದ ವಿದ್ಯಾ ಎಂಬುವರು ಗಾಯಗೊಂದು ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಇಸ್ಮಾಯಿಲ್ ಎಂಬುವರು ಸ್ಕೂಟರ್‌ ಚಲಾಹಿಸುತ್ತಿದ್ದು  ಬೈಂದೂರು ಕಡೆಯಿಂದ ಬೈಕ್‌ ಅನ್ನು ಚಲಾಯಿಸಿಕೊಂಡು ಬಂದ ಅಂಕಿತ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನೆಡೆದಿದೆ.

Categories
ಪಂಚಾಂಗ

ಇಂದಿನ ಪಂದ್ಯಾಟ

ಇಂದಿನ ಪಂದ್ಯಾಟ

31.03.2023

ಗುಜರಾತ್‌ ಟೈಟಾನ್ಸ್‌ V/S‌  ಚೆನ್ನೈ ಸೂಪರ್‌ ಕಿಂಗ್ಸ್

ಸ್ಥಳ : ನರೇಂದ್ರ ಮೊದಿ ಕ್ರೀಡಾಂಗಣ

ಅಹ್ಮದಾಬಾದ್‌

ಸಮಯ : 7.30

 

 

TODAY’S  MATCH

31.03.2023

GUJARATH TITANS V/S‌  CHENNAI SUPER KINGS

PLACE : NARENDRE MODI CRICKET STADIUM

AHMADABAD

TIME : 7.30 PM

Categories
Uncategorized

ಇಂದಿನಿಂದ IPL ಹಬ್ಬ

ಇಂದಿನಿಂದ IPL ಹಬ್ಬ

ಕುಂದಾಪುರ: ಇಂದಿನಿಂದ ಕ್ರಿಕೆಟ್‌ ಪ್ರೇಮಿಗಳಿಗೆ ಹಬ್ಬದೂಟವನ್ನು ಉಣಬಡಿಸಲು IPL ಸಜ್ಜಾಗಿದ್ದು 12 ರಾಜ್ಯಗಳ 12 ಕ್ರೀಡಾಂಗಣದಲ್ಲಿ 10 ತಂಡಗಳ ಒಟ್ಟು 74 ಪಂದ್ಯಗಳು ನಡೆಯಲಿದೆ ಈ ಬಾರಿಯ 16ನೇ ಆವೃತ್ತಿಯ ಚಾಂಪಿಯನ್‌ ತಂಡದ  ಬಗ್ಗೆ ಕ್ರೀಡಾ ಪ್ರೇಮಿಗಳಳ್ಲಿ ಕೂತುಹಲ ಮೂಡಿಸಿದೆ ವಿಶ್ವದ ಶ್ರೀಮಂತ ಕ್ರಿಕಟ್‌ ಟೂರ್ನಿಯಂತೆ ಬಿಂಬಿತವಾದ  IPL ಒಟ್ಟು 50 ಕೋಟಿಯ ಬಹುಮಾನವನ್ನು ಒಳಗೊಂಡಿದೆ.

   ಇಂದು ರಾತ್ರಿ 7.30ಕ್ಕೆ ಗುಜರಾತಿನ  ಅಹ್ಮದಾಬಾದ್‌  ನರೇಂದ್ರ ಮೊದಿ    ಕ್ರಿಕಟ್‌ ಸ್ಟೇಡಿಯಂನಲ್ಲಿ ಕಳೆದ ಬಾರಿಯ ಚಾಂಪಿಯನ್‌ ಗುಜರಾತ್ ಟೈಟಾನ್ಸ್‌ ಹಾಗೂ ಚೈನ್ಯೆ ಸೂಪರ ಕಿಂಗ್ಸ್‌ ತಂಡಗಳ ನಡುವೆ ಪಂದ್ಯಾಟ ಏರ್ಪಡಲಿದ್ದು ಶುಭಾರಂಭದ ಪಂದ್ಯದಲ್ಲಿ ವಿಜಯಲಕ್ಷ್ಮಿಯು ಯಾರಿಗೆ ಒಲಿಯುತ್ತಾಳೆ ಎಂಬ ಬಗ್ಗೆ ಕುತೂಹಲ ಗರಿಗೆದರಿದೆ.   

Categories
ಶಿಕ್ಷಣ

ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಕುಂದಾಪುರ:  ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಹಾಗೂ ನರೇನ್ ಅಕಾಡೆಮಿ, ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ತರಬೇತಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಸರಕಾರಿ ಕ್ಷೇತ್ರದಲ್ಲಿ ಲಭ್ಯವಿರುವ ವಿವಿಧ ಉದ್ಯೋಗಾವಕಾಶಗಳನ್ನು ತಮ್ಮದಾಗಿಸಿಕೊಳ್ಳಲು ಅಗತ್ಯವಿರುವ ಸ್ಪರ್ಧಾತ್ಮಕ ಪರೀಕ್ಷಾ ಕೌಶಲ್ಯಗಳನ್ನು ಹೆಚ್ಚಿಸುವ ಉದ್ಧೇಶದಿಂದ ಆರಂಭಗೊಂಡಿರುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಿರಂತರ ಕಠಿಣ ಪರಿಶ್ರಮ ವಹಿಸಿ, ಪರೀಕ್ಷೆಯಲ್ಲಿ ಯಶಸ್ಸು ತಮ್ಮದಾಗಿಸಿಕೊಳ್ಳಲಿ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನರೇನ್ ಅಕಾಡೆಮಿ ಬ್ರಹ್ಮಾವರ ಇದರ ಸ್ಥಾಪಕರು ಶ್ರೀ ಚಂದ್ರಕಾಂತ್ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಾಣಿಜ್ಯ ಉಪನ್ಯಾಸಕ ಶ್ರೀ ಶರತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

 

Categories
ಸಂಘ ಸಂಸ್ಥೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ

ಕುಂದಾಪುರ : ಕೋಣಿ ಮಾನಸ ಜ್ಯೋತಿ ವಿಶೇಷ ಚೇತನರ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಉಪಹಾರ ಅಲ್ಲದೇ ಶಾಲೆಗೆ ಹತ್ತು ಸಾವಿರ ರೂಪಾಯಿ ದೇಣಿಗೆ ನೀಡಲಾಯಿತು. ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಯವರು ಶಾಲೆಯ ವಾರ್ಡನ್ ಗೆ ಹಸ್ತಾಂತರಿಸಿದರು. ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಎ. ಮುತ್ತಯ್ಯ ಶೆಟ್ಟಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Categories
ಹೊಂಗಿರಣ

ಸಮಸ್ಯೆಯ ಮೂಲ

  1. ಸಮಸ್ಯೆಯ ಮೂಲ

ದೇಹದ ಮೂಲಕವೇ ನಮ್ಮನ್ನು ನಾವು ಗುರುತಿಸಿಕೊಳ್ಳುವುದಲ್ಲಿ ಬದುಕಿನ ಎಲ್ಲ ಸಮಸ್ಯೆಗಳ ಮೂಲ ಅಡಗಿದೆ ಎನ್ನುವುದರಲ್ಲಿ ಯಾವುದೇ ಸಂದೇಹ ಬೇಡ. ಕುರುಕ್ಷೇತ್ರದಲ್ಲಿ ಯುದ್ಧ ಮಾಡಲೊಲ್ಲದೆ ಕ್ಷತ್ರಿಯ ಧರ್ಮವನ್ನು ನಿಭಾಯಿಸುವ ದ್ವಂದ್ವಕ್ಕೆ ಗುರಿಯಾದ ಅರ್ಜುನನ ಮೂಲ ಸಮಸ್ಯೆಯೂ ಅದೇ ಆಗಿತ್ತು. ಕುರುಕ್ಷೇತ್ರದಲ್ಲಿ ತನಗೆ ಮುಖಾಮುಖಿಯಾದ ಕೌರವನ ಸೈನ್ಯದಲ್ಲಿ ಅರ್ಜುನನು ಕಂಡದ್ದು ಯಾರನ್ನು? ತನ್ನ ಗುರುಗಳನ್ನು, ಹಿರಿಯರನ್ನು, ಆಪ್ತೇಷ್ಟರನ್ನು, ಬಂಧು-ಮಿತ್ರರನ್ನಲ್ಲವೇ? ಆದರೆ ಅವರೆಲ್ಲರೂ ತಮ್ಮ ಕ್ಷತ್ರಿಯ ಧರ್ಮಪರಿಪಾಲನೆಗಾಗಿ ಯೋಧರ ರೂಪದಲ್ಲಿ ಅರ್ಜುನನ ಎದುರು ಪಾಳಯದಲ್ಲಿ ಕಾಣಿಸಿಕೊಂಡವರೇ ವಿನಾ ಅರ್ಜುನನು ತಿಳಿದುಕೊಂಡಂತೆ ಗುರು-ಹಿರಿಯರಾಗಿ, ಬಂಧು-ಮಿತ್ರರಾಗಿ, ಆಪ್ತೇಷ್ಟರಾಗಿ ಅಲ್ಲ! ಆದರೆ ಅರ್ಜುನನಿಗೆ ಯುದ್ಧರಂಗದಲ್ಲಿ ಬಂದು ನಿಂತ ಅವರ್ಯಾರು ಶತ್ರುಗಳಾಗಿ ಕಾಣಿಸಿಕೊಳ್ಳಲೇ ಇಲ್ಲ. ಅವರೆಲ್ಲರೂ ತನ್ನ ಪ್ರೀತಿಪಾತ್ರರಾಗಿ, ಸ್ವಜನರಾಗಿಯೇ ಕಾಣಿಸಿಕೊಂಡರು! ಯುದ್ಧ ಮಾಡಲೆಂದು ರಣರಂಗಕ್ಕೆ ಬಂದ ತ್ರಿಲೋಕ ವೀರ ಅರ್ಜುನನಲ್ಲಿ ಇದ್ದಕ್ಕಿದ್ದಂತೆಯೇ ವಿಷಾದ ಯೋಗ ಮೂಡಲು ಕಾರಣವಾದ ಸಂಗತಿ ಏನು ಎಂಬುದನ್ನು ಕೃಷ್ಣ ಕ್ಷಣಾರ್ಧದಲ್ಲೇ ಪತ್ತೆ ಹಚ್ಚಿಬಿಡುತ್ತಾನೆ. ಯುದ್ಧದಲ್ಲಿ ಸ್ವಜನ ಸಮೂಹವನ್ನು ಕೊಂದು ನಾನು ಶ್ರೇಯಸ್ಸನ್ನು ಹೇಗೆ ನಿರೀಕ್ಷಿಸಲಿ ಎಂದು ಅರ್ಜುನನು ಕೃಷ್ಣನಲ್ಲಿ ಪ್ರಶ್ನಿಸುತ್ತಾನೆ. ದೇಹವೇ ನಾವು ಎಂಬ ಭ್ರಾಮಕ ಕಲ್ಪನೆಗೆ ಒಳಗಾದವರಿಗೆ ಬದುಕಿನಲ್ಲಿ ಎದುರಾಗುವ ಸಂದಿಗ್ಧ ಅಪಾರ. ಕೃಷ್ಣ ಹೇಳುತ್ತಾನೆ: ದೇಹ ಸಂಬಂಧವಾದ ಹುಟ್ಟು – ಸಾವಿನ ಮರ್ಮವನ್ನು ತಿಳಿದ ಜ್ಞಾನಿಗಳು ಸತ್ತವರ ಬಗ್ಗೆಯಾಗಲೀ, ಬದುಕಿರುವವರ ಬಗ್ಗೆಯಾಗಲೀ ಎಂದು ಶೋಕಪಡುವುದಿಲ್ಲ!

Categories
ಅಪರಾಧ

ವಿವಿಧಡೆ ಮಟ್ಕಾ ಜುಗಾರಿ ಪ್ರಕರಣ

ವಿವಿಧಡೆ ಮಟ್ಕಾ ಜುಗಾರಿ ಪ್ರಕರಣ

ಉಡುಪಿ : ನಗರದ ಪೋಲೀಸ್‌ ಠಾಣಾ ವ್ಯಾಪ್ತಿಯ ಆಂಬಾಗಿಲು ಬಳಿಯ ಮೀನು ಮಾರುಕಟ್ಟೆಯ ಹತ್ತಿರ ಸಾರ್ವಜನಿಕ ಸ್ಧಳದಲ್ಲಿ ಮಟ್ಕಾ ಜುಗಾರಿಗೆ ಹಣ ಸಂಗ್ರಹಿಸುತ್ತಿದ್ದ ಪ್ರವೀಣ ಪೂಜಾರಿ, ಮೂಡನಿಡಂಬೂರು ಗ್ರಾಮ ಐರೋಡಿಕಲ್‌ ಜಂಕ್ಷನ್  ಬಳಿಯ ಅರಳಿ ಮರದ ಹತ್ತಿರ ಮಟ್ಕಾ ಜುಗಾರಿಗೆ ಹಣ ಸಂಗ್ರಹಿಸುತ್ತಿದ್ದ ರಾಮರಾಜ್‌ ಅರಸ್ ಹಾಗೂ ಹೆಬ್ರಿಯ ಅಟೋರಿಕ್ಷಾ ನಿಲ್ದಾಣದ ಬದಿಯಲ್ಲಿ ನಿಂತುಕೂಂಡು ಮಟ್ಕಾ ಜುಗಾರಿಗೆ ಹಣ ಸಂಗ್ರಹಿಸುತ್ತಿದ್ದ ದಿನೇಶ ದೇವಾಡಿಗ ಮತ್ತು ಮಣಿಪಾಲದ ಶಿವಳ್ಳಿ ಗ್ರಾಮದ ಸಿಂಡಿಕೇಟ್‌ ಸರ್ಕಲ್‌ ಬಳಿ ಹಣ ಸಂಗ್ರಹಿಸುತ್ತಿದ ಯತೀಶ ಎಂಬುವರ ಮೇಲೆ ಪ್ರಕರಣ ದಾಖಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದ ಪರಿಕರಗಳನ್ನು ವಶಪಡಿಸಿಕೊಳಲಾಗಿದೆ

Categories
ಧಾರ್ಮಿಕ

ಶ್ರೀ ಬ್ರಹ್ಮರಥೋತ್ಸವ ಸಂಪನ್ನ

ಶ್ರೀ ಬ್ರಹ್ಮರಥೋತ್ಸವ ಸಂಪನ್ನ

ಕುಂದಾಪುರ: ರಾಮನವಮಿಯ ಪ್ರಯಕ್ತ ಕುಂದಾಪ್ರ ಹಬ್ಬದಂದು ಶ್ರೀ ವೆಂಕಟರಮಣ ದೇವಸ್ಧಾನದ ಎದುರುಗಡೆಯ  ರಥ ಬೀದಿಯಲ್ಲಿ ವೇದ ಮಂತ್ರ ಜಯಘೋಷ ಗಳೊಂದಿಗೆ  ಗೋವಿಂದಾ….ಗೋವಿಂದಾ… ನಾಮ ಸ್ಮರಣೆಯೊಂದಿಗೆ ಸಾವಿರಾರು ಭಕ್ತರು ಕುಂದಾಪುರ ತೆರನ್ನು  ಎಳೆದು ಪುನೀತರಾದರು ರಾತ್ರಿ10 ಗಂಟೆಗೆ ಮಂತ್ರಘೊಷಣೆಗಳೊಂದಿಗೆ ಸಡಗರ ಸಂಭ್ರಮ ದಲ್ಲಿ ಪಟಾಕಿ  ಸಿಡಿಸುವುದರ ಮೂಲಕ ಭಕ್ತರು ಶ್ರೀ ಬ್ರಹ್ಮರಥೋತ್ಸವದ  ಪುರಮೆರವಣಿಗೆಯಲ್ಲಿ ಭಾಗವಹಿಸಿದರು.

ಇಂದು ಶುಕ್ರವಾರ ಬೆಳಿಗ್ಗೆ ಯಜ್ಞ ಪೂರ್ಣಾಹುತಿ ಅಂಕುರ ಪ್ರಸಾದ ಚೂರ್ಣೋತ್ಸವ ಅವಭೃತ ಸ್ನಾನ ಧ್ವಜಾವರೋಹಣ ಮಹಾಪೂಜೆ ಸಮಾರಾಧನೆ ಹಾಗೂ ರಾತ್ರಿ ಮೃಗಬೇಟೆ ಉತ್ಸವ ನಡೆಯಲಿದೆ

 

Categories
ಅಪರಾಧ

ನಾಲ್ವರಿಂದ ಓರ್ವನ ಮೇಲೆ ಹಲ್ಲೆ

ನಾಲ್ವರಿಂದ ಓರ್ವನ ಮೇಲೆ ಹಲ್ಲೆ

ಉಡುಪಿ:ಆದಿ ಉಡುಪಿಯ ಎಪಿಎಂಸಿ ಮಾರ್ಕೇಟ್‌ ಹಿಂಬದಿ ಮನೆಯೊಂದಕ್ಕೆ ನುಗ್ಗಿದ ನಾಲ್ವರ ತಂಡ ಓರ್ವ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಸಂತೋಷ ಪ್ರಶಾಂತ್‌ ಹಾಗೂ ಅಪಾಪ್ತ ಬಾಲಕರಿಬ್ಬರೂ ಸೇರಿದಂತೆ ನಾಲ್ವರ ತಂಡ ಮನೆಗೆ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ಪ್ರಶಾಂತ್ ಎಂಬವನ ಮೇಲೆ ಬ್ಲೇಡ್‌ ನಿಂದ ಎದೆ ಹಾಗೂ ಹೊಟ್ಟೆಗೆ ಗೀರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿ ಮನೆಯ ಕಿಟಕಿ ಗಾಜು ಹಾಗೂ ದ್ವಿಚಕ್ರ ವಾಹನಕ್ಕೆ ಹಾನಿ ಮಾಡಿದ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ