Categories
ಕರಾವಳಿ ಸುದ್ದಿ

ವಚನಗಳ ಗಾಯನ – ವ್ಯಾಖ್ಯಾನ ಕಾರ್ಯಕ್ರಮ

ಕೋಟ: ಕೋಟದ ವಿವೇಕ ವಿದ್ಯಾಸಂಸ್ಥೆಗಳ ಆವರಣದಲ್ಲಿ ವಿವೇಕ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಹಾಗೂ
ಶರಣ ಸಾಹಿತ್ಯ ಪರಿಷತ್, ಉಡುಪಿ ಜಿಲ್ಲಾ ಘಟಕ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಲ್ಲಿ ವಚನ ಹಾಗೂ ಗಮಕ ಕಲೆಗಳ ಪರಿಚಯ ಮಾಡಿಸು ವಚನ ಡಿಂಡಿಮ ಎಂಬ ವಚನಗಳ ಗಾಯನ-ವ್ಯಾಖ್ಯಾನ ಎಂಬ ವಿಶಿಷ್ಟ ಕಾರ್ಯಕ್ರಮವು ಇತ್ತೀಚಿಗೆ ನಡೆಯಿತು.
ವಿದ್ವಾನ್ ಶಂಭು ಭಟ್ಟರ ಗಾಯನಕ್ಕೆ ಡಾ. ರಾಘವೇಂದ್ರ ರಾವ್, ಪಡುಬಿದ್ರಿ ಅವರು ವ್ಯಾಖ್ಯಾನ ಗೈದರು.
ಸಭೆಯಲ್ಲಿ ಡಾ. ರಾಘವೇಂದ್ರ ರಾವ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ವಚನಗಾಯನದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಭಾಕಾರ್ಯಕ್ರಮದಲ್ಲಿ ಅಭ್ಯಾಗತರಾದ ಡಾ. ನಿರಂಜನ ಚೋಳಯ್ಯ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಸ್ಥೆಯ ಪ್ರಾಂಶುಪಾಲ ಕೆ. ಜಗದೀಶ ನಾವಡ ಸ್ವಾಗತಿಸಿದರು. ಹಿರಿಯ ಅಧ್ಯಾಪಕ ಪ್ರೇಮಾನಂದರು ಧನ್ಯವಾದಗೈದರು.
ನಳಿನಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ಅನಂತಾದಿತ್ಯ ಪ್ರಾರ್ಥಿಸಿದರು.

Categories
ಕ್ರೀಡೆ

ವೃತ್ತ ಮಟ್ಟದ ವಾಲಿಬಾಲ್ ಪಂದ್ಯಾಟ

ಕೋಟ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಬಡಾಕೆರೆ ಇಲ್ಲಿ ನಡೆದ ಕೋಟೇಶ್ವರ ವೃತ್ತ ಮಟ್ಟದ ಪ್ರಾರ್ಥಮಿಕ ಶಾಲಾ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಬಡಾಕೆರೆ ಕುಂಬ್ರಿಯ ಬಾಲಕ, ಬಾಲಕಿಯರು ಪ್ರಥಮ ಸ್ಥಾನ ಪಡೆದು ಮುಂದಿನ ಹಂತಕ್ಕೆ ಆಯ್ಕೆಯಾಗಿರುತ್ತಾರೆ ಇವರಿಗೆ ದೈಹಿಕ ಶಿಕ್ಷಕರಾದ ಮಂಜು ಅವರು ತರಬೇತಿ ನೀಡಿದ್ದಾರೆ.

Categories
ಕರಾವಳಿ ಸುದ್ದಿ

ರೈತರೆಡೆಗೆ ನಮ್ಮ ನಡಿಗೆ 38ನೇ ಮಾಲಿಕೆ

ಕೋಟ : ಯುವ ಸಮೂಹ ಕೃಷಿ ಕ್ಷೇತ್ರಕ್ಕೆ ಮುನ್ನಗ್ಗಬೇಕಿದೆ ಆ ಮೂಲಕ ಕೃಷಿ ಅವಲಂಬಿತ ಭಾರತ ಸದೃಢವಾಗಿಸಲು ಸಾಧ್ಯ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಟ್ರಸ್ಟಿ ಕೆ.ಅನಂತಪದ್ಮನಾಭ ಐತಾಳ್ ಹೇಳಿದರು.
ಕೋಟ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು,ರೈತಧ್ವನಿ ಸಂಘ ಕೋಟ,ಗೆಳೆಯರ ಬಳಗ ಕಾರ್ಕಡ,ಎಸ್.ಸಿ.ಐ ಕೋಟ ಲಿಜನ್,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ ಸಾಧಕ ರೈತರನ್ನು ಗುರುತಿಸುವ 38ನೇ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು

ದೇಶದಲ್ಲಿ ಕೃಷಿಗಾಗಿ ಸಾಕಷ್ಟು ಪ್ರತಿಭಟನೆಗಳು,ಉಪವಾಸ ಸತ್ಯಾಗ್ರಹಗಳು ನಡೆಯುತ್ತದೆ ಆದರೆ ಇದ್ಯಾವುದು ಸರಕಾರದ ಕದ ತಟ್ಟುತ್ತಿಲ್ಲ ಇದಕ್ಕೆ ಪರ್ಯಾಯ ಮಾರ್ಗ ಎಂದರೆ ಈ ದೇಶದಲ್ಲಿ ರೈತನೆ ಅವನು ಬೆಳೆದ ಬೆಳೆಗೆ ದರ ನಿಗದಿಪಡಿಸುವಂತ್ತಾಗಬೇಕು ಆಗ ಮಾತ್ರ ರೈತ ಕಾಯಕ ನೈಜವಾಗಿ ಉಳಿಯಲು ಸಾಧ್ಯ ಯುವ ಸಮೂಹ ಕೃಷಿ ಕ್ಷೇತ್ರಕ್ಕೆ ಮುನ್ನುಗ್ಗಬೇಕಾದರೆ ಪಂಚವರ್ಣದಂತಹ ಸಂಘಟನೆಗಳು ಎಲ್ಲಾ ಭಾಗದಲ್ಲಿ ಹುಟ್ಟಿ ಕೊಳ್ಳಬೇಕು ಆ ಮೂಲಕ ರೈತ ಸಮೂಹ ವಿಶೇಷವಾಗಿ ಕಾರ್ಯೋನ್ಮುಖವಾಗಲು ಸಾಧ್ಯ ಎಂದರಲ್ಲದೆ ಸುಧಾರಕ್ ಶೆಟ್ಟಿ ಅಂತವರುತೆರೆಯ ಮರೆಯಲ್ಲಿ ರೈತ ಕಾಯಕ ನಡೆಸುತ್ತಿರುವುದು ಶ್ಲಾಘನೀಯ ಇಂತಹವರನ್ನು ಹುಡುಕಿ ಪ್ರಶಸ್ತಿ ನೀಡುವ ಸಂಸ್ಥೆಯ ಗೌರವ ಕೂಡಾ ಹೆಚ್ಚಿಸುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಕೋಟದ ಕಾಸನಗುಂದು ಪರಿಸರದ ಹಿರಿಯ ಕೃಷಿಕ ಸುಧಾಕರ ಶೆಟ್ಟಿ ಇವರನ್ನು ಕೃಷಿ ಪರಿಕರ ನೀಡಿ ಗೌರವಿಸಲಾಯಿತು.ಪರಿಸರ ಜಾಗೃತಿ ಮೆರೆಯುವ ದಿಸೆಯಿಂದ ಅವರ ತೋಟದಲ್ಲಿ ಗಿಡ ನೆಟ್ಟು ಸಂಭ್ರಮಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.ಮುಖ್ಯ ಅಭ್ಯಾಗತರಾಗಿ ಕೋಟದ ಉದ್ಯಮಿ ಸದಾನಂದ ಪೂಜಾರಿ ಗಿಳಿಯಾರು,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ಜಿ.ತಿಮ್ಮ ಪೂಜಾರಿ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕರಾದ ಭಾಸ್ಕರ್ ಶೆಟ್ಟಿ ಮಣೂರು,ರೈತ ಧ್ವನಿ ಸಂಘ ಕೋಟ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ಕೋಟ ಗ್ರಾ.ಪಂ ಸದಸ್ಯೆ ವನೀತ ಶ್ರೀಧರ ಆಚಾರ್,ಗೆಳೆಯರ ಬಳಗ ಕಾರ್ಕಡ ಸದಸ್ಯ ಶೇಖರ್ ಮುಡೋಳಿ,ಎಸ್.ಸಿ.ಐಕೋಟ ಲಿಜನ್ ಅಧ್ಯಕ್ಷ ಕೇಶವ ಆಚಾರ್ ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಮತ್ತಿತರರು.ಇದ್ದರು.ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿದರೆ,ಪಂಚವರ್ಣ ಮಹಿಳಾ ಮಂಡಲದ ಸಂಚಾಕಿ ಸುಜಾತ ಎಂ.ಬಾಯರಿ ಸನ್ಮಾನ ಪತ್ರವಾಚಿಸಿ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಶಶಿಧರ ತಿಂಗಳಾಯ ವಂದಿಸಿದರು.

Categories
ಶಿಕ್ಷಣ

ಮೂಡ್ಲಕಟ್ಟೆಯಲ್ಲಿ ವೈಬ್ರೇಶನ್ ವೀಕ್

ಮೂಡ್ಲಕಟ್ಟೆ : ಎಂ ಐ ಟಿ ಕೆ ಮೂಡ್ಲಕಟ್ಟೆಯಲ್ಲಿ ವೈಬ್ರೇಶನ್ ವೀಕ್ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕುಂದಾಪುರ ಇದರ ಎಂ ಬಿ ಎ ವಿಭಾಗ ಒಂದು ವಾರಗಳ ಕಾಲ ಆಯೋಜಿಸಿರುವ ವೈಬ್ರೇಶನ್ ವೀಕ್ ಎಂಬ ವಿಭಿನ್ನ ಕಾರ್ಯಕ್ರಮವನ್ನು ಮೂಡ್ಲಕಟ್ಟೆ ಕಾಲೇಜಿನಲ್ಲಿ ಉದ್ಘಾಟಿಸಲಾಯಿತು.ಉದ್ಘಾಟನಾ ಸಮಾರಂಭದಲ್ಲಿ ಎಂ ಐ ಟಿ ಯ ಉಪ ಪ್ರಂಶುಪಾಲರಾದ ಪ್ರೊಫೆಸರ್ ಮೇಲ್ವಿನ್ ಡಿಸೋಜಾ ಹಾಗೂ ಐ ಎಂ ಜೆ ಬ್ರಾಂಡ್ ಬಿಲ್ಡಿಂಗ್ ನಿರ್ಧೇಶಕ ಡಾ.ರಾಮಕೃಷ್ಣ ಹೆಗಡೆ, ಎಂ ಬಿ ಎ ವಿಭಾಗದ ಮುಖ್ಯಸ್ಥೆ ಡಾ. ಸುಚಿತ್ರ ಪೂಜಾರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರೊಫೆಸರ್ ಮೇಲ್ವಿನ್ ಡಿಸೋಜಾ ಅವರು ಗೆಲುವು ಸೋಲು ಮುಖ್ಯವಲ್ಲ ವಿದ್ಯರ‍್ಥಿಗಳೆಲ್ಲರೂ ಕೂಡ ಸಕ್ರಿಯವಾಗಿ ಒಂದು ವಾರಗಳ ಕಾಲ ನಡೆಯುವಂತಹ ವಿಭಿನ್ನವಾದ ಕಾರ್ಯಕ್ರಮದಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಬೇಕು ಅಂದರು. ಡಾಕ್ಟರ್ ರಾಮಕೃಷ್ಣ ಹೆಗಡೆಯವರು ಪ್ರತಿಯೊಬ್ಬ ವಿದ್ಯಾರ್ಥಿ ಭಾಗವಹಿಸಿ ಅವಕಾಶದ ಸದುಪಯೋಗ ಪಡೆಯಬೇಕು ಎಂದು ಹೇಳಿದರು.ಹಾಗೆಯೇ ಎಂ ಬಿ ಎ ವಿಭಾಗದ ಮುಖ್ಯಸ್ಥೆ ಡಾಕ್ಟರ್ ಸುಚಿತ್ರಾ ಅವರು ವಿದ್ಯಾರ್ಥಿಗಳು ತಮಗೆ ಸಿಕ್ಕಂತಹ ಅವಕಾಶಗಳನ್ನು ನಿಖರವಾಗಿ ಸದುಪಯೋಗ ಮಾಡಿಕೊಂಡು ನಡೆಯುವಂತಹ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿ ಯಾಗಿಸುವರೆಂಬ ಆಶಾಭಾವನೆಯನ್ನು ವ್ಯಕ್ತಪಡಿಸಿ ಶುಭ ಹಾರೈಸಿದರು.
ರೆಟ್ರೋ ರೌಂಡ್, ಮ್ಯಾನೇಜ್ಮೆಂಟ್ ಕ್ವಿಜ್, ಮ್ಯಾಡ್ ಆಡ್, ಮಿಸ್ ಮ್ಯಾಚ್, ಪ್ರೆಸೆಂಟೇಶನ್ ಮತ್ತು ಗ್ರೂಪ್ ಡ್ಯಾನ್ಸ್ ನಂತಹ ಅನೇಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿಉಪನ್ಯಾಸಕರಾದ ಪ್ರೊ. ತಿಲಕ ಲಕ್ಷ್ಮಿ, ಪ್ರೊ.ಕಾವ್ಯ, ಪ್ರೊ. ಪರ‍್ಣಿಮಾ ಹಾಗೂ ಪ್ರೊ. ನೀಲ್ ಇವರು ಉಪಸ್ಥಿತರಿದ್ದರು. ಸುಶ್ಮಿತಾ ಶೇಖರ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

Categories
ಕರಾವಳಿ ಸುದ್ದಿ

ಗಣೇಶೋತ್ಸವ ಆಚರಣೆ – ಅನುಮತಿ ಅಗತ್ಯ

ಗಂಗೊಳ್ಳಿ : ಗಣೇಶೋತ್ಸವ ಆಚರಣೆ ಸಂಬಂಧ ಅಗತ್ಯವಿರುವ ಅನುಮತಿಯನ್ನು ಸಂಬಂಧಪಟ್ಟ ಇಲಾಖೆ ಹಾಗೂ ಸ್ಥಳೀಯಾಡಳಿತಗಳಿಂದ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಗಣೇಶ ಮೂರ್ತಿ ವಿಸರ್ಜನೆಯ ಮಾರ್ಗವನ್ನು ಪೊಲೀಸ್ ಇಲಾಖೆಗೆ ಮುಂಚಿತವಾಗಿ ತಿಳಿಸಿ ಅದೇ ಮಾರ್ಗದಲ್ಲಿ ಮೆರವಣಿಗೆ ನಡೆಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಸರಕಾರದ ನಿಯಮಗಳಿಗನುಸಾರ ಗಣೇಶೋತ್ಸವ ಆಚರಿಸಿದರೆ ಹಬ್ಬಕ್ಕೆ ಇನ್ನಷ್ಟು ಮೆರಗು ಬರುತ್ತದೆ ಎಂದು ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸವಿತ್ರತೇಜ ಹೇಳಿದರು.

ಗಂಗೊಳ್ಳಿ ಪೊಲೀಸ್ ಠಾಣೆ ವತಿಯಿಂದ ಗಣೇಶೋತ್ಸವದ ಪೂರ್ವಭಾವಿಯಾಗಿ ತ್ರಾಸಿಯ ಕೊಂಕಣಿ ಖಾರ್ವಿ ಸಭಾಭವನದಲ್ಲಿ  ಜರಗಿದ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶೋತ್ಸವ ಸಮಿತಿಯ ಪ್ರಮುಖರ ಶಾಂತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು

ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಹರೀಶ್ ಮಾತನಾಡಿ  ಸಾರ್ವಜನಿಕ ಸ್ಥಳದಲ್ಲಿ ಗಣೇಶೋತ್ಸವ ನಡೆಸಲು ಅನುಮತಿ ಸ್ಥಳೀಯಾಡಳಿತದಿಂದ ಪಡೆಯಬೇಕು ಭದ್ರತೆಗಾಗಿ ಸಿಸಿ ಕ್ಯಾಮರಾ ಅಳವಡಿಸಿ ಸ್ವಯಂಸೇವಕರನ್ನು ನಿಯೋಜಿಸಬೇಕು.ಸರಕಾರ ಸೂಚನೆ ಹಾಗೂ  ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಿ ಇಲಾಖೆ ಯೊಂದಿಗೆ ಸಹಕರಿಸಬೇಕು ಎಂದರು.

ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ (ತನಿಖೆ) ಬಸವರಾಜ್, ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು, ಮತ್ತಿತರರು ಉಪಸ್ಥಿತರಿದ್ದರು.

Categories
ಅಪರಾಧ

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ

ಮಂಗಳೂರು : ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿದ ಆರೋಪಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ಪುತ್ತೂರು ಕಬಕದ ನಿವಾಸಿ ನಿತೇಶ್‌(30ವರ್ಷ) .ಶಿಕ್ಷೆಗೊಳಗಾದಾತ. ಈತನ ಜತೆಗೆ ಈತನ ತಂದೆ ರಾಮಣ್ಣ ಪೂಜಾರಿ(63) ಮತ್ತು ಭಾವ ನಿಖಿತಾಶ್‌ ಸುವರ್ಣ(40) ಗೆ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

ನಿತೇಶ್ ಯುವತಿಯೋರ್ವಳನ್ನು ಮದುವೆಯಾಗುವುದಾಗಿ నంబిసి ಆಕೆಯನ್ನು ಸುತ್ತಾಡಿಸಿದ್ದ ಬಳಿಕ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ ಯುವತಿ ಮದುವೆಯಾಗಲು ಕೇಳಿಕೊಂಡಾಗ ನಿರಾಕರಿಸಿದ್ದ ಪರಸ್ಪರ ಜಾತಿ ಬೇರೆಯಾಗಿರುವುದರಿಂದ ತಂದೆ ಮತ್ತು ಭಾವ ಮದುವೆಗೆ ಒಪು ತ್ತಿಲ್ಲ ಎಂದು ಹೇಳಿದ್ದ. ನಿತೇಶ್‌ನ ತಂದೆ ಮತ್ತು ಭಾವನ ಬಳಿ ಯುವತಿ ಕೇಳಿಕೊಂಡಾಗ ಅವರು ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ಯುವತಿ 2019ರಲ್ಲಿ ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದಳು.

ಇನ್‌ಪೆಕ್ಟರ್ ತಿಮ್ಮಪ್ಪ ನಾಯಕ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧಿಶರಾದ ಕಾಂತರಾಜು ಎಸ್.ವಿ ಅವರು ಆರೋಪಿಯ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿದರು.ಆ.30ರಂದು ಆರೋಪಿ ನಿತೇಶ್‌ ಗೆ ಭಾರತೀಯ ದಂಡಸಂಹಿತೆಯ ಕಲಂ 376 (2) (ಎನ್) ಅಡಿಯಲ್ಲಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10,000 ರು. ದಂಡ, ಕಲಂ 417ರ ಅಡಿಯಲ್ಲಿ 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5,000 ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ರಾಮಣ್ಣ ಪೂಜಾರಿ ಮತ್ತು ನಿಖಿತಾಶ್‌ಗೆ ಭಾರತೀಯ ದಂಡ ಸಂಹಿತೆಯ ಕಲಂ 504ರಡಿ 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5,000 ರು. ದಂಡ ಹಾಗೂ ಭಾ.ದಂ. ಸ ಕಲಂ 506ರಡಿ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10,000 ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಅಲ್ಲದೆ ನೊಂದ ಯುವತಿಗೆ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದ್ದಾರೆ. ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಕೆಲವು ಸಾಕ್ಷಿಗಳ ವಿಚಾರಣೆಯನ್ನು ಸರ್ಕಾರಿ ಅಭಿಯೋಜಕ ಬಿ.ಶೇಖರ ಶೆಟ್ಟಿ ನಡೆಸಿದ್ದರು. ಅನಂತರ ಸರ್ಕಾರಿ ಅಭಿಯೋಜಕ ಚೌಧರಿ ಮೋತಿಲಾಲ್ ಅವರು ಉಳಿದ ಸಾಕ್ಷಿಗಳ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು. ಒಟ್ಟು 16 ಮಂದಿ ಸಾಕ್ಷಿದಾರರನ್ನು ವಿಚಾರಣೆ ಮಾಡ ಲಾಗಿತ್ತು. 88 ದಾಖಲೆಗಳನ್ನು ಗುರುತಿಸಲಾಗಿತ್ತು.

Categories
ರಾಜ್ಯ ಸುದ್ದಿ

ಪ್ರತಿ ತಿಂಗಳು ಹೋಟೆಲ್ ಪರಿಶೀಲನೆ

ಮಂಗಳೂರು : ಇನ್ನುಮುಂದೆ ಪ್ರತಿ ತಿಂಗಳು ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ರೆಸ್ಟೋರೆಂಟ್, ಹೋಟೆಲ್ ಮತ್ತು ಇತರ ಆಹಾರ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿಯನ್ನು ಸಾರ್ವಜನಿಕರ ಮುಂದೆ ಇಡಲಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು  ಸಾರ್ವಜನಿಕರ ಆರೋಗ್ಯದ  ದೃಷ್ಟಿಯಿಂದ ರಾಜ್ಯಾದ್ಯಂತ ಹೋಟೆಲ್, ರೆಸ್ಟೋ ರೆಂಟ್, ಆಹಾರ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಈಗಾಗಲೇ ಆಹಾರ ಸುರಕ್ಷತಾ ಇಲಾಖೆಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಆರಂಭಿಕ ಹಂತವಾಗಿ ಎರಡು ದಿನಗಳ ಕಾಲ ವಿಶೇಷ ಜಾಗೃತಿ ಆಂದೋಲನ ನಡೆಯುತ್ತಿದೆ ಎಂದು ಸಚಿವರು ಹೇಳಿದರು. ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ತಯಾರಿಕಾ ಘಟಕಗಳು ಕಾಳಜಿ ವಹಿಸಬೇಕು. ನಿರ್ಲಕ್ಷ್ಯ ವಹಿಸುವವರ ವಿರುದ್ದ ಇಲಾಖೆ ಸೂಕ್ತ ಕ್ರಮ ಜರುಗಿಸಲಿದೆ ಎಂದರು ತಿಳಿಸಿದರು.

Categories
ಅಪರಾಧ

ಬಾಂಗ್ಲಾ ವಲಸಿಗರಿಗೆ ನಕಲಿ ಆಧಾರ್‌

ಹಾಸನ : ಅಕ್ರಮ ಬಾಂಗ್ಲಾ ವಲಸಿಗರಿಗೆ ನಕಲಿ ಜನ್ಮದಿನಾಂಕವನ್ನು ಆಧಾರ್‌ ಲಿಂಕ್‌ಗೆ ಸೇರಿಸುತ್ತಿದ್ದಜಿಲ್ಲಾಧಿಕಾರಿ ಕಚೇರಿಯ ಕಟ್ಟಡದಲ್ಲಿರುವ ಆಧಾ‌ರ್ ಕೇಂದ್ರದಲ್ಲಿ ಕೆಲಸ ಮಾಡುವ ಕಂಪ್ಯೂಟರ್‌ ಆಪರೇಟರ್‌ ಅನುಶ್ರೀ ಎಂಬಾಕೆ ಸಿಕ್ಕಿಬಿದ್ದಿದ್ದು, ಅಕೆ ಮೇಲೆ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಈಗಾಗಲೇ ಬಾಂಗ್ಲದೇಶದಿಂದ ಸಾವಿರಾರು ಜನರು ಇಲ್ಲಿಗೆ ವಲಸೆ ಬರುತ್ತಿರುವ ಬಗ್ಗೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣ ಗಳಲ್ಲಿ ಪ್ರತಿನಿತ್ಯ ನೋಡುತ್ತಿದ್ದೇವೆ. ಇಂತಹವರಿಗೆ ನಮ್ಮವರೇ ಕೆಲವರು ಹಣದಾಸೆಗೆ ನಕಲಿ ದಾಖಲೆ ಗಳನ್ನು ಸೃಷ್ಟಿಸಿಕೊಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯ ಎಂಬಂತೆ ಹಾಸನ ನಗರದ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲೆ ಆಧಾರ್‌ ಸೇವಾ ಕೇಂದ್ರದ ಆಪರೇಟರ್ ಆಗಿ ಕೆಲಸ ಮಾಡುವ ಮಹಿಳೆಯೊಬ್ಬರು ತನಿಖೆ ವೇಳೆ ಸಿಕ್ಕಿಬಿದ್ದಿದ್ದಾರೆ. ಕಳೆದ ಎರಡುವರೆ ವರ್ಷ ದಿಂದ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲೆ ಆಧಾ‌ರ್ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಅನುಶ್ರೀ ಎಂಬುವರ ಬಳಿ ಹಣ ಕೊಟ್ಟರೇ ಸಾಕು ನಕಲಿ ಜನ್ಮದಿನಾಂಕವನ್ನು ಸೃಷ್ಟಿ ಮಾಡಲು ಖಾಸಗಿ ಇಂಟ‌ರ್ ಪಾರ್ಲರ್ ಗೆ ವಿಳಾಸ ಹೇಳಿ ಕಳುಹಿಸಿ ಕೊಡುತ್ತಾರೆ. ಅಲ್ಲಿ ಸಿದ್ಧವಾದ ಮೇಲೆ ಈಕೆ ಆಧಾರ್‌ಗೆಲಿಂಕ್‌ ಮಾಡಿಕೊಡುವುದನ್ನುಮೈಗೂ ಡಿಸಿಕೊಂಡು ಸಂಬಳದ ಜೊತೆ ಈ ರೀತಿಯ ದೇಶದ್ರೋಹಿ ಕೆಲಸಮಾಡಿ ಒಬ್ಬರಿಂದ 5ಸಾವಿರದಿಂದ 10ಸಾವಿರದವರೆಗೂ ಹಣ ಪಡೆಯುತ್ತಿದ್ದಳು. ಈ ಬಗ್ಗೆ ವಿಚಾರ ತಿಳಿದ ಇಲ್ಲಿ ಆಧಾರ್‌ ಲಿಂಕ್‌ ಅಧಿಕಾರಿ ಬೆಂಗಳೂರಿನ ಕಚೇರಿಗೆ ವಿಷಯ ಮುಟ್ಟಿಸಿದ್ದಾರೆ

ಇದನ್ನು ಪರಿಶೀಲನೆ ಮಾಡಲು ಬಂದಿದ್ದ ದಾಖಲೆ ಬೆಂಗಳೂರಿನ ವಲಯ ಅಧಿಕಾರಿ ವಿಜಯಕುಮಾರ್‌ ಆಧಾರ್‌ ಬಗ್ಗೆ ಆಳವಾಗಿ ಪರಿಶೀಲನೆ ಮಾಡಿದಾಗ ಅನುಶ್ರೀ ಐಡಿಯಿಂದ ಇಲ್ಲಿ ನಕಲಿ ಮಾಡುತ್ತಿರುವ ಬಗ್ಗೆ ಬೆಳಕಿಗೆ ಬಂದಿದೆ. ಅನುಶ್ರೀ ಎಂಬುವರನ್ನು ಜಿಲ್ಲಾಧಿಕಾರಿ ಕಚೇರಿಗೆ ಕರೆಸಿ ವಿಚಾರಿಸಿದರು ನಮ್ಮಲ್ಲೆ ಈತರ ಘಟನೆ ನಡೆದಿರುವುದು ಬೇಸರದ ವಿಚಾರ ಎಂದು ಜಿಲ್ಲಾಧಿಕಾರಿ ಸತ್ಯಭಾಮ ಅವರು ಬೇಸರ ವ್ಯಕ್ತಪಡಿಸಿದರು. ಕೂಡಲೇ ಈಕೆ ಮೇಲೆ ದೂರು ದಾಖಲಿಸಿ ಎಫ್.ಐ.ಆರ್. ಮಾಡುವಂತೆ ಪೊಲೀಸ್ ಅಧಿಕಾರಿಯನ್ನು ಕರೆಸಿ ಅನುಶ್ರೀಯನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದರು. ಈಕೆಯ ಕೆಲಸದ ಅವಧಿಯ ಎರಡೂವರೆ ವರ್ಷದ ಎಲ್ಲಾ ದಾಖಲೆಯನ್ನು ಪರಿಶೀಲಿಸುವಂತೆ ಡಿಸಿ ಸೂಚಿಸಿದರು.

Categories
ಧಾರ್ಮಿಕ

ನಾಳೆ ಶ್ರೀ ಕೃಷ್ಣನಿಗೆ ಉದಯಾಸ್ತಮಾನ ಸೇವೆ

ಉಡುಪಿ : ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆ.1 ರಿಂದ ಆರಂಭಗೊಂಡ ವೈಭವದ ಶ್ರೀಕೃಷ್ಣ ಮಾಸೋತ್ಸವ ಸೆ.1 ರಂದು ಸಮಾಪನಗೊಳ್ಳಲಿದೆ. ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥರ ನೇತೃತ್ವದಲ್ಲಿ ಕಿರಿಯ ಶ್ರೀ ಸುಶೀಂದ್ರ ತೀರ್ಥರು ಒಡಗೂಡಿ ನಡೆಸಿದ ಈ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡಿದ್ದು, ಸಮಾರೋಪ ಸಮಾರಂಭ ಅಂಗವಾಗಿ ಶ್ರೀಕೃಷ್ಣನಿಗೆ ನಾಳೆ ಸೆ.1 ರಂದು ಉದಯಾಸ್ತಮಾನ ಸೇವೆ ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಪರಿಷತ್ ಉಡುಪಿ ವಲಯ ‘ ಹಾಗೂ ಪಡುಬಿದ್ರಿ ತರಂಗಿಣಿ ಮಿತ್ರ ಮಂಡಳಿ ವತಿಯಿಂದ ಲಕ್ಷ ತುಳಸಿ ಅರ್ಚನೆ . ಹಾಗೂ ಶ್ರೀ ವಿಷ್ಣು ಸಹಸ್ರ ನಾಮಾವಳಿ ಪಠಣ ನಡೆಯಲಿದೆ.ಶ್ರೀಕೃಷ್ಣ ಮಾಸೋತ್ಸವ ಸಮಾರೋಪ ಸಮಾರಂಭ ಸಂಜೆ 5.00 ರಿಂದ ರಾಜಾಂಗಣದಲ್ಲಿ ನಡೆಯಲಿದ್ದು, ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್ ಖಾನ್ ಅಭ್ಯಾಗತರಾಗಿ ಆಗಮಿಸುವರು. ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಮತ್ತು ಪ್ರತಾಪಸಿಂಹ ನಾಯಕ್‌, ಮಾಜಿ ಸಚಿವರಾದ ಪ್ರಮೋದ್‌ ಮಧ್ವರಾಜ್ ಮತ್ತು ವಿನಯಕುಮಾರ್ ಸೊರಕೆ, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಅತಿಥಿಗಳಾಗಿ ಆಗಮಿಸುವರು.

ಅಂದು ಬೆಳಿಗ್ಗೆ 10.00 ರಿಂದ 12.00 ರವರೆಗೆ ವಿದುಷಿ ಸಾದ್ವಿನಿ ಕೊಪ್ಪ ಅವರಿಂದ ಶಾಸ್ತ್ರೀಯ ಸಂಗೀತ ಕಛೇರಿ ಆಯೋಜಿಸಲಾಗಿದೆ. ಅಪರಾಹ್ನ 3:00ರಿಂದ 5:00 ರವರೆಗೆ ಸಂಯುಕ್ತ ಸಂಸ್ಥಾನ (ಯು.ಕೆ) ನೃತ್ಯ ನಿರ್ದೇಶಕಿ ದಿವ್ಯಾ ಭಟ್ ಅವರಿಂದ ಕಥಕ್ ನೃತ್ಯ ಹಾಗೂ ಸಂಜೆ 7:00 ರಿಂದ 9:00 ರವರೆಗೆ ಸ್ವೀಡನ್‌ನ ವಿದುಷಿ ದಿವ್ಯಾ ಸುರೇಶ್ ಅವರಿಂದ ಭರತ ನಾಟ್ಯ ಪ್ರದರ್ಶನವಿದೆ.ಪಡುಬಿದ್ರಿ ತರಂಗಿಣಿ ಮಿತ್ರ ಮಂಡಳಿಯ ಹರೀಶ್ ಭಟ್ ಮತ್ತು ಪ್ರಭಾಕರ ಅಡಿಗ ಮಂಗಳೂರು ಅವರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮಠದ ದಿವಾನ ನಾಗರಾಜ ಆಚಾರ್ಯ ಹಾಗೂ ಕಾರ್ಯದರ್ಶಿ ಪ್ರಸನ್ನಾಚಾರ್ಯ ತಿಳಿಸಿದ್ದಾರೆ.

Categories
ಅಪರಾಧ

ಯುವತಿಗೆ ಕಿರುಕುಳ : ಬಂಧನ

ಮೂಡುಬಿದಿರೆ : ಅನ್ಯಕೋಮಿನ ಯುವಕ ಹಿಂದೂ ಯುವತಿಯನ್ನು ಅಡ್ಡಗಟ್ಟಿ ಪ್ರೀತಿಸುವಂತೆ ಒತ್ತಡ ಹೇರಿ, ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಮೂಡುಬಿದಿರೆಯಲ್ಲಿ ನಡೆದಿದೆ ಬಟ್ಟೆ ಹೊಲಿಯಲೆಂದು ಮೂಡುಬಿದಿರೆಯ ಪೊಲೀಸ್‌ ಠಾಣೆ ಸಮೀಪದ ದರ್ಜಿ ಅಂಗಡಿಗೆ ಬಂದ ಸಂದರ್ಭದಲ್ಲಿ ಯುವಕ ಕಿರುಕುಳ ನೀಡಿದ್ದಾನೆ. ಈ ಸಂದರ್ಭ ಯುವತಿ ಕಿರುಚಿ ಸಹಾಯ ಕೋರಿದ್ದಳು. ತಕ್ಷಣವೇ ಸ್ಥಳೀಯರು ಸ್ಥಳಕ್ಕಾಗಮಿಸಿದಾಗ ಯುವಕ ಪಲಾಯನ ಮಾಡಿದ್ದಾನೆ ಎಂದು ಯುವತಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.ಕೊಡಂಗಲ್ಲು ನಿವಾಸಿ ಅರ್ಷದ್ ಎಂಬ ಯುವಕ ಪ್ರೀತಿಸುವಂತೆ ನಿರಂತರ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ ಸಂತ್ರಸ್ಥೆ ದೂರಿನ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ

ವಿಹಿಂಪ ಎಚ್ಚರಿಕೆ :

ಹಿಂದೂ ಯುವತಿಯರನ್ನು ಗುರಿಯಾಗಿಸಿ ಪ್ರೀತಿ, ಪ್ರೇಮ ಎಂಬ ನಾಟಕ ಮಾಡಿ ಮೋಸಗೊಳಿಸಿ ಅವರನ್ನು ಮತಾಂತರ ಮಾಡುವ ಒಂದು ವ್ಯವಸ್ಥಿತ ಗುಂಪು ಇದೆ ಈ ಬಗ್ಗೆ ಹಿಂದೂ ಸಮಾಜ ಎಚ್ಚೆತ್ತು ಕೊಳ್ಳಬೇಕಾಗಿದೆ ಎಂದು ವಿಹಿಂಪ ಮುಖಂಡ ಶರಣ್ ಪಂಪವೆಲ್ ಹೇಳಿದ್ದಾರೆ.