Categories
ಕರಾವಳಿ ಸುದ್ದಿ ಶಿಕ್ಷಣ

ಕುಂದಾಪುರ : ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಹಿಂದಿ ವಿಭಾಗದ ಆಶ್ರಯದಲ್ಲಿ ‘ಓಣಂ’ನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಡಾ| ಕೆ. ಉಮೇಶ್ ಶೆಟ್ಟಿ ದೀಪ ಬೆಳಗಿಸಿ ಶುಭ ಹಾರೈಸಿದರು.


ಈ ಸಂದರ್ಭ ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ಆಡಳಿತ ನಿಕಾಯಕರಾದ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ, ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಶ್ರೀಮತಿ ರೇವತಿ ಡಿ., ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಸರೋಜ ಉಪಸ್ಥಿತರಿದ್ದು, ಬೋಧಕ-ಬೋಧಕೇತರ ವೃಂದ, ವಿದ್ಯಾರ್ಥಿಗಳು ಹೂವಿನ ಪೂಕಳಂ ಹಾಕಿ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದರು.

Categories
ಕರಾವಳಿ ಸುದ್ದಿ ಶಿಕ್ಷಣ

ಕುಂದಾಪುರ : ಎಲ್ಲಾ ಭಾಷೆಯನ್ನು ಪ್ರೀತಿಸಿ, ಆ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಅಂತಯೇ ಎಲ್ಲಾ ಭಾರತೀಯ ಭಾಷೆಗಳ ಮೂಲವಾದ ಸಂಸ್ಕೃತ ಓದಲು ಮತ್ತು ಬರೆಯಲು ಕಷ್ಟವೆನಿಸಿದರೂ ದಿನಕ್ಕೊಂದು ಪದವನ್ನು ಕಲಿತರೆ ಸಂಸ್ಕೃತ ಭಾಷೆ ಕಲಿಯುವುದು ಅಸಾಧ್ಯವಲ್ಲ ಎಂದು ಕೋಟದ ವಿವೇಕ ಪದವಿ-ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಶ್ರೀ ಬಾಲಕೃಷ್ಣ ನಕ್ಷತ್ರಿ ಹೇಳಿದರು.
ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಂಸ್ಕೃತ ವಿಭಾಗ ಆಯೋಜಿಸಿದ ಸಂಸ್ಕೃತ ದಿನಾಚರಣೆಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ವಿಭಾಗದ ಮುಖ್ಯಸ್ಥೆ ಶ್ರೀಮತಿ ಮೇಘಾ ಎಸ್. ಭಟ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಅಪೇಕ್ಷಾ ಸ್ವಾಗತಿಸಿ, ಸ್ನೇಹ ಪ್ರಾರ್ಥಿಸಿ, ಸುಶ್ಮಿತಾ ಅತಿಥಿಗಳನ್ನು ಪರಿಚಯಿಸಿ, ಕೀರ್ತನಾ ವಂದಿಸಿ, ಶ್ರೇಯಾ

Categories
ಕರಾವಳಿ ಸುದ್ದಿ

ಸೆಪ್ಟೆಂಬರ್ 7ರಂದು ಸೋಮವಾರ ಬೆಳಿಗ್ಗೆ 8.30ಕ್ಕೆ ಕುಂದಾಪುರ ಹೊಸ ಬಸ್ ನಿಲ್ದಾಣದಿಂದ ಆರಂಭವಾಗಿ ಸಂಜೆ 5.00ಕ್ಕೆ ಸಾಸ್ತಾನದ ಬಸ್ ನಿಲ್ದಾಣದ ಬಳಿ ಸಮಾರೋಪಗೊಳ್ಳಲಿರುವ ‘ವಂದೇ ಮಾತರಂ ಜನಜಾಗೃತಿ ಅಭಿಯಾನ’ ಮತ್ತು ‘ಕಾಲ್ನಡಿಗೆ ಜಾಥಾ’ದ ಕರಪತ್ರವನ್ನು 98 ವರ್ಷದ ವಯೋವೃದ್ದ ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರು ವಿಠ್ಠಲ್ ಕಿಣಿಯವರು ಬಿಡುಗಡೆಗೊಳಿಸಿದರು.

ವಿಠ್ಠಲ್ ಕಿಣಿಯವರು ಮಂಗಳೂರಿನ ಮನೆಯಲ್ಲಿ ಮಾತನಾಡಿ, ‘ವಂದೇ ಮಾತರಂ ಎಂದರೆ ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟಿರುವ ರಾಷ್ಟ್ರ ಭಕ್ತರ ಮಂತ್ರ, ವಂದೇ ಮಾತರಂ ಹೆಸರಲ್ಲಿ ಜನಜಾಗೃತಿ ಅಭಿಯಾನ ಮಾಡುತ್ತಿರುವ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರ ಜೊತೆ ತಾನು ಕೂಡ ಪಾಲ್ಗೊಳ್ಳಲಿದ್ದೇನೆ. ಇಡೀ ದೇಶ ವಂದೇ ಮಾತರಂನ ಪರವಾಗಿ ಎದ್ದು ನಿಲ್ಲಬೇಕು. ವಂದೇ ಮಾತರಂ ಕುಂದಾಪುರದ ಕಾಲ್ನಡಿಗೆ ಜಾಥಾ ರಾಷ್ಟ್ರ ಭಕ್ತರೆಲ್ಲರ ನೆರವಿನಿಂದ ಒಂದು ಐತಿಹಾಸಿಕ ದಾಖಲೆಯಾಗಲಿ’ ಎಂದು ಹೇಳಿದರು.

ವಂದೇ ಮಾತರಂ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಸಂಸದ ಬ್ರಿಜೇಶ್ ಚೌಟ, ಪಕ್ಷದ ಮುಖಂಡರಾದ ರಮೇಶ್ ಕಂದೆಟ್ಟು, ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Categories
ಕರಾವಳಿ ಸುದ್ದಿ

ಉಡುಪಿ : ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ನೂತನ ಪದಾಧಿಕಾರಿಗಳನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ಅನುಮೋದನೆ ಮೇರೆಗೆ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಪ್ರವೀಣ್ ಕುಮಾ‌ರ್ ಗುರ್ಮೆ ಅವರು ನಿಯುಕ್ತಿಗೊಳಿಸಿ ಪಟ್ಟಿ ಬಿಡುಗಡೆಗೊಳಿಸಿರುತ್ತಾರೆ.

ಉಪಾಧ್ಯಕ್ಷರುಗಳಾಗಿ ಸುರೇಂದ್ರ ಪೂಜಾರಿ ಮುನಿಯಾಲು, ಧೀರಜ್ ಕೆ. ಎಸ್., ದಿನೇಶ್ ಎರ್ಮಾಳು, ಚಂದ್ರ ಜೋಗಿ, ಭಾರತಿ ಚಂದ್ರಶೇಖ‌ರ್, ಪ್ರಧಾನ ಕಾರ್ಯದರ್ಶಿಗಳಾಗಿ ರತ್ನಾಕರ ಶೆಟ್ಟಿಗಾರ್ ಇಂದ್ರಾಳಿ, ರಾಜೇಂದ್ರ ಪಂದುಬೆಟ್ಟು, ಕಾರ್ಯದರ್ಶಿಗಳಾಗಿ ಅನಿಲ್ ಕುಮಾರ್, ಉಮೇಶ್ ಮೊಗವೀರ, ಎಂ.ಲಕ್ಷ್ಮೀಶ ಬಂಗೇರ, ಅಶೋಕ್ ಕುಮಾರ್ ಅಲೆವೂರು, ಕೋಶಾಧಿಕಾರಿಯಾಗಿ ವಿನೋದ್ ಕುಮಾರ್ ಗುಜ್ಜಾಡಿ, ಕಾರ್ಯಕಾರಿಣಿ ಸದಸ್ಯರುಗಳಾಗಿ ಸುಂದರ ಜೆ. ಕಲ್ಮಾಡಿ, ರಾಘವೇಂದ್ರ ಆಚಾರ್ಯ, ಲೀಲಾ, ಆ‌ರ್. ಅಮೀನ್, ಗಿರಿಧರ ಆಚಾರ್ಯ, ಶರತ್ ಶರ್ಮ, ಆದರ್ಶ ನಾಯರಿ ಬ್ರಹ್ಮಾವರ, ಅಶೋಕ್ ಶೆಟ್ಟಿಗಾರ್, ಆನಂದ ಕುಲಾಲ್, ಹರ್ಷಿತ್ ಪೂಜಾರಿ, ಸುಧಾಕರ ಕುಲಾಲ್, ಗೋವಿಂದ ರಾವ್ ಶೇರೆಗಾರ್, ಚಂದ್ರ ಪೂಜಾರಿ, ಗುರುಪ್ರಸಾದ್ ರಾವ್, ಶ್ರೀಧರ ಶೆಟ್ಟಿಗಾರ್, ಮಂಜುಳಾ, ಬಿ.ವಿ. ಬ್ರಿಜೇಶ್ ಕುಮಾರ್, ಸುರೇಶ್ ದೇವಾಡಿಗ ಇವರುಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಪ್ರವೀಣ್ ಕುಮಾರ್ ಗುರ್ಮೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories
ಬ್ರೇಕಿಂಗ್ ನ್ಯೂಸ್

ಕುಂದಾಪುರ: ನಾಯಿ ಅಡ್ಡಬಂದ ಪರಿಣಾಮ ಸ್ಕೂಟರ್ ಸ್ಕಿಡ್ – ಯುವಕ ಸಾವು

ಕುಂದಾಪುರ: ರಸ್ತೆಗೆ ನಾಯಿ ಅಡ್ಡಬಂದ ಪರಿಣಾಮ ಸ್ಕೂಟರ್ ಸವಾರ ನಿಯಂತ್ರಣ ಕಳೆದುಕೊಂಡು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಡೆದಿದೆ.

ದಿನಾಂಕ 28/08/2026 ರಂದು ರಾತ್ರಿ 08:40 ರ ಸುಮಾರಿಗೆ ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮದ NH-66 ರಲ್ಲಿ ಈ ಅಪಘಾತ ಸಂಭವಿಸಿದೆ.

ಮೃತಪಟ್ಟ ವ್ಯಕ್ತಿ ರಾಘವೇಂದ್ರ ಎಂದು ತಿಳಿದು ಬಂದಿದೆ.

ತಲ್ಲೂರು ಕಡೆಯಿಂದ ಕುಂದಾಪುರ ಕಡೆಗೆ ಸ್ಕೂಟರ್ ನಂ KA20 HJ8098 ನಲ್ಲಿ ಬರುತ್ತಿದ್ದ ರಾಘವೇಂದ್ರ ಅವರು ತಲ್ಲೂರು ಗ್ರಾಮದ ಶ್ರೀ ದುರ್ಗಾ ಆಟೋ ಡೀಸೆಲ್ ವರ್ಕ್ಸ್ ಎದುರು ತಲುಪಿದಾಗ ರಸ್ತೆಗೆ ಒಂದು ನಾಯಿ ಅಡ್ಡಬಂದಿದೆ.

ನಾಯಿಯನ್ನು ತಪ್ಪಿಸಲು ಸ್ಕೂಟರ್‌ಗೆ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಸ್ಕೂಟರ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ರಾಘವೇಂದ್ರ ಅವರು ರಸ್ತೆಗೆ ಬಿದ್ದಿದ್ದಾರೆ.

ಅಪಘಾತದಲ್ಲಿ ಅವರ ಮುಖದ ಭಾಗದಲ್ಲಿ ರಕ್ತಗಾಯವಾಗಿದ್ದು, ಹೊಟ್ಟೆ ಹಾಗೂ ಕೈಕಾಲುಗಳಲ್ಲಿ ತರಚಿದ ಗಾಯಗಳಾಗಿದ್ದವು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ದೀಪಕ್ ಕುಮಾರ್ ಮತ್ತು ರಾಮಚಂದ್ರ ಖಾರ್ವಿ ಅವರು ಕೂಡಲೇ ಕುಂದಾಪುರದ ಆದರ್ಶ ಆಸ್ಪತ್ರೆಗೆ ದಾಖಲಿಸಿದರು.

ನಂತರ ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದ ರಾಘವೇಂದ್ರ ಅವರು ಮೃತಪಟ್ಟಿದ್ದಾರೆ.

ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 69/2026 ಕಲಂ 281, 106(1) BNSರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Categories
ಬ್ರೇಕಿಂಗ್ ನ್ಯೂಸ್

ಕುಂದಾಪುರ : ಚರ್ಚ್ ರೋಡ್ ನಿವಾಸಿ ದಿವಂಗತ ಸದಾಶಿವ ಶೇಟ್ ಅವರ ಪತ್ನಿ ಶ್ರೀಮತಿ ಸೀತಾಬಾಯಿ (89 ವ.) ಅವರು ಆಗಸ್ಟ್ 29ರಂದು ಸ್ವಗೃಹದಲ್ಲಿ ನಿಧನರಾದರು
ಮೃತರು ಮೂವರು ಪುತ್ರರನ್ನು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ

Categories
ಕರಾವಳಿ ಸುದ್ದಿ ಶಿಕ್ಷಣ

ಕುಂದಾಪುರ: ಸರಕಾರಿ ಪ್ರೌಢಶಾಲೆ ಬೇಳೂರು ಇಲ್ಲಿ ಕೋಟೇಶ್ವರ ವೃತ್ತ ಮಟ್ಟದ ಪ್ರೌಢಶಾಲಾ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾಟವು ಅತ್ಯಂತ ಸಂಭ್ರಮ ಹಾಗೂ ಕ್ರೀಡಾ ಸ್ಪೂರ್ತಿಯೊಂದಿಗೆ ಯಶಸ್ವಿಯಾಗಿ ನಡೆಯಿತು.

ಪಂದ್ಯಾಟದ ಉದ್ಘಾಟನಾ ಸಮಾರಂಭವನ್ನು ಅಕ್ಷರ ದಾಸೋಹ ಜಿಲ್ಲಾ ನೋಡಲ್ ಅಧಿಕಾರಿ ಶ್ರೀ ಚಂದ್ರ ನಾಯ್ಕ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಗಾಣಿಗ ಅವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಕುಂದಾಪುರ ತಾಲೂಕು ಅಧ್ಯಕ್ಷರಾದ ಶ್ರೀ ಉದಯ ಮಡಿವಾಳ ಎಂ, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಶ್ರೀ ಕೃಷ್ಣಯ್ಯ ಶೆಟ್ಟಿ, ನಿವೃತ್ತ ಪೊಲೀಸ್ ಎಎಸ್ಐ ಶ್ರೀ ಆನಂದ ಶೆಟ್ಟಿ, ಸಿಆರ್‌ಪಿ ಶ್ರೀಮತಿ ಸುಚಿತ್ರ, ಹಿರಿಯ ಶಿಕ್ಷಕರಾದ ಶ್ರೀ ರಾಜೀವ ಶೆಟ್ಟಿ ಉಪಸ್ಥಿತರಿದ್ದು, ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ, ಸಹಕಾರ ಮನೋಭಾವ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವ ಮಹತ್ವದ ಮಾಧ್ಯಮವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮಕ್ಕೆ ಸರಕಾರಿ ಪ್ರೌಢಶಾಲೆ ಬೇಳೂರಿನ ಮುಖ್ಯ ಶಿಕ್ಷಕಿ ಶ್ರೀಮತಿ ರಾಜಲಕ್ಷ್ಮಿ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಪಂದ್ಯಾಟದ ಯಶಸ್ಸಿಗೆ ಶಾಲೆಯ ಶಿಕ್ಷಕ ವೃಂದ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಸಂಪೂರ್ಣ ಸಹಕಾರ ನೀಡಿದರು.

ನಂತರ ನಡೆದ ರೋಚಕ ಪಂದ್ಯಾಟಗಳಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಅತ್ಯುತ್ತಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ಪಂದ್ಯಾಟದ ಫಲಿತಾಂಶಗಳು

 17 ವರ್ಷದೊಳಗಿನ ಬಾಲಕಿಯರ ವಿಭಾಗ
 ಪ್ರಥಮ ಸ್ಥಾನ: ಕರ್ನಾಟಕ ಪಬ್ಲಿಕ್ ಸ್ಕೂಲ್, ಕೋಟೇಶ್ವರ
 ದ್ವಿತೀಯ ಸ್ಥಾನ: ಸರಕಾರಿ ಪ್ರೌಢಶಾಲೆ, ಬೀಜಾಡಿ

 17 ವರ್ಷದೊಳಗಿನ ಬಾಲಕರ ವಿಭಾಗ
 ಪ್ರಥಮ ಸ್ಥಾನ: ಪಿ ಎಂ ಶ್ರೀ ಕೆಪಿಎಸ್ ಪ್ರೌಢಶಾಲೆ, ತೆಕ್ಕಟ್ಟೆ
 ದ್ವಿತೀಯ ಸ್ಥಾನ: ಕರ್ನಾಟಕ ಪಬ್ಲಿಕ್ ಸ್ಕೂಲ್, ಕೋಟೇಶ್ವರ

ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಪಂದ್ಯಾಟದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಕ್ರೀಡಾ ಮನೋಭಾವ ಪ್ರದರ್ಶಿಸಿದ್ದು, ಮುಂದಿನ ಹಂತದ ಸ್ಪರ್ಧೆಗಳಿಗೆ ಆಯ್ಕೆಯಾದ ತಂಡಗಳಿಗೆ ಶುಭ ಹಾರೈಸಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ರಮನಾಥ್ ಶೆಟ್ಟಿ ಅವರು ವಂದನಾರ್ಪಣೆ ಸಲ್ಲಿಸಿ, ಪಂದ್ಯಾಟದ ಯಶಸ್ಸಿಗೆ ಸಹಕರಿಸಿದ ಗಣ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಎಲ್ಲಾ ಕ್ರೀಡಾಪಟುಗಳಿಗೆ ಕೃತಜ್ಞತೆ ಸಲ್ಲಿಸಿದರು.

ಒಟ್ಟಾರೆಯಾಗಿ, ಕೋಟೇಶ್ವರ ವೃತ್ತ ಮಟ್ಟದ ವಾಲಿಬಾಲ್ ಪಂದ್ಯಾಟವು ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದ್ದು, ವಿದ್ಯಾರ್ಥಿಗಳಲ್ಲಿ ಕ್ರೀಡಾ ಸ್ಪೂರ್ತಿ ಮತ್ತು ಸಹೋದರತ್ವವನ್ನು ಮತ್ತಷ್ಟು ಬಲಪಡಿಸಿತು.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5128

ಪರಾಭವ ಸಂವತ್ಸರ

ದಕ್ಷಿಣಾಯಣ

ವರ್ಷ : ಋತು

ಶ್ರಾವಣ : ಮಾಸ

ಕೃಷ್ಣ  ಪಕ್ಷ

ತದಿಗೆ : ತಿಥಿ

ರೇವತಿ : ನಕ್ಷತ್ರ

ಸೋಮವಾರ

31.08.2026

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಕರಾವಳಿ ಸುದ್ದಿ

ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ( ಡಿಎಂಎಫ್ ) ಬೈಂದೂರು ಕ್ಷೇತ್ರಕ್ಕೆ ಹೆಚ್ಚು ಅನುದಾನ ಹಂಚಿಕೆ ಮಾಡಲು ಶಾಸಕ ಗುರುರಾಜ್ ಗಂಟಿಹೊಳೆ ಒತ್ತಾಯ

ಗಣಿಗಾರಿಕೆಯಿಂದ ಕ್ಷೇತ್ರದ ರಸ್ತೆ ಸಹಿತ ಇನ್ನಿತರ ಮೂಲ ಸೌಕರ್ಯಗಳ ಹಾನಿ ಸಂಬಂಧ ಬೈಂದೂರು ಕ್ಷೇತ್ರಕ್ಕೆ ಅನುದಾನ ಒದಗಿಸಲು ಆಗ್ರಹ

ಕ್ಷೇತ್ರವಾರು ಡಿಎಂಎಫ್ ಅನುದಾನ ಹಂಚಿಕೆ ಬಗ್ಗೆ ಕೇಳಿರುವ ಅಧಿವೇಶನ ಪ್ರಶ್ನೆಗೆ ಅಸಮರ್ಪಕ ಉತ್ತರ ಒದಗಿಸಿದ ಅಧಿಕಾರಿಗಳು!!!

ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲದ ಮ ಳೆಗಾಲದ ಅಧಿವೇಶನದಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆಯವರು ಉಡುಪಿ ಜಿಲ್ಲೆಯಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ( ಡಿಎಂಎಫ್ ) ಯಡಿ 2023-24 ರಿಂದ 2026-27 ನೇ ಸಾಲಿನಲ್ಲಿ ಈವರೆಗೆ ಸಂಗ್ರಹಗೊಂಡ ಮೊತ್ತ ಹಾಗೂ ಸದರಿ ಮೊತ್ತವನ್ನು ನಿಯಮಾನುಸಾರ ವಿವಿಧ ಉದ್ದೇಶಗಳಿಗೆ ವಿಧಾನಸಭಾ ಕ್ಷೇತ್ರವಾರು ಖರ್ಚು ಮಾಡಿರುವ ಬಗ್ಗೆ ಕೇಳಿರುವ ಚುಕ್ಕೆ ರಹಿತ ಪ್ರಶ್ನೆಗೆ ಉತ್ತರಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ರವರು ಉಡುಪಿ ಜಿಲ್ಲೆಯಲ್ಲಿ ಡಿಎಂಎಫ್ ಅಡಿಯಲ್ಲಿ ಈವರೆಗೆ ಒಟ್ಟು ರೂ. 13.25 ಕೋಟಿಗಳು ವಿವಿಧ ಉದ್ದೇಶಗಳಿಗೆ ಅನುಮೋದನೆಗೊಂಡಿರುತ್ತದೆ.ಇದರಲ್ಲಿ ಒಟ್ಟು ರೂ. 8.23 ಕೋಟಿಗಳನ್ನು ಖರ್ಚು ಮಾಡಲಾಗಿರುತ್ತದೆ. ಎಂದು ಉತ್ತರಿಸಿರುತ್ತಾರೆ

ಡಿಎಂಎಫ್ ಅನುದಾನ ಹಂಚಿಕೆ ಬೈಂದೂರು ಕ್ಷೇತ್ರಕ್ಕೆ ಅನ್ಯಾಯ, ಅಧಿವೇಶನ ಪ್ರಶ್ನೆಗೆ ಅಧಿಕಾರಿಗಳಿಂದ ಅಸಮರ್ಪಕ ಮಾಹಿತಿ ಪೂರೈಕೆ :

ಬೈಂದೂರು ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಕಲ್ಲುಗಣಿಗಾರಿಕೆ ಹಾಗೂ ಮರಳು ಗಣಿಗಾರಿಕೆ ನಡೆಯುತ್ತಿದ್ದರೂ ಡಿಎಂಎಫ್ ನಡಿ ಸಂಗ್ರಹಗೊಂಡ ಮೊತ್ತದಲ್ಲಿ ಕ್ಷೇತ್ರದ ಹಾಳಾಗಿರುವ ರಸ್ತೆಗಳ ಅಭಿವೃದ್ಧಿಗೆ ವ್ಯಯಿಸಲು ಈ ಹಿಂದೆ ಪ್ರತಿ ಸಭೆಯಲ್ಲೂ ಹಾಗೂ ಡಿಎಂಎಫ್ ಸಮಿತಿ ಅಧ್ಯಕ್ಷರಾದ ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಮಾಡಿದ್ದರೂ ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡಿರುವ ಬಗ್ಗೆ ವರದಿ ನೀಡಲಾಗಿದೆ.ಆದರೆ ಅದರಲ್ಲಿ ಬೈಂದೂರು ಕ್ಷೇತ್ರಕ್ಕೆ ನೀಡಿರುವ ಅನುದಾನದ ಪ್ರಸ್ತಾಪ ಇಲ್ಲ! ಈ ಬಗ್ಗೆ ವಿಧಾನ ಸಭಾ ಕ್ಷೇತ್ರವಾರು ಖರ್ಚು ಮಾಡಿರುವ ಅನುದಾನದ ಮಾಹಿತಿಯನ್ನು ಅಧಿವೇಶನದಲ್ಲಿ ಪ್ರಶ್ನಿಸಿದರೆ ಒಟ್ಟು 8. 23 ಕೋಟಿ ಖರ್ಚು ಮಾಡಿರುವ ಮಾಹಿತಿ ನೀಡಿದ್ದರೂ ವಿಧಾನ ಸಭಾ ಕ್ಷೇತ್ರವಾರು ಅನುದಾನ ಹಂಚಿಕೆ ಬಗ್ಗೆ ಉತ್ತರಿಸದೇ ಅಧಿಕಾರಿಗಳು ಅಸಮರ್ಪಕ ಮಾಹಿತಿ ಒದಗಿಸಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಗಣಿಗಾರಿಕೆಯಿಂದ ಹಾಳಾಗಿರುವ ರಸ್ತೆಗಳು ಸಹಿತ ಇನ್ನಿತರ ಮೂಲ ಸೌಕರ್ಯ ಉದ್ದೇಶಗಳಿಗೆ ಅನುದಾನ ಒದಗಿಸಲು ಆಗ್ರಹ :

ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಡಿಎಂಎಫ್ ನಿಧಿಯಡಿ ಖರ್ಚಾಗಿರುವ ಎಲ್ಲಾ ಮೊತ್ತಗಳನ್ನು ನಿಯಮಾನುಸಾರ ಡಿಎಂಎಫ್ ಸಮಿತಿಯ ಮುಂದೆ ಮಂಡಿಸಿ ಎಲ್ಲಾ ಕಾಮಗಾರಿಗಳಿಗೂ ವಿಧಾನ ಸಭಾ ಕ್ಷೇತ್ರವಾರು ಅನುಮೋದನೆ ಪಡೆದಿರುವ ಬಗ್ಗೆ ಸಮರ್ಪಕ ಮಾಹಿತಿ ನೀಡುವುದರೊಂದಿಗೆ ಡಿಎಂಎಫ್ ಅನುದಾನ ಹಂಚಿಕೆಯಲ್ಲಿ ಬೈಂದೂರು ಕ್ಷೇತ್ರಕ್ಕೆ ಆಗಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸಲು ಶಾಸಕರು ಆಗ್ರಹಿಸಿದ್ದಾರೆ. ಇಲ್ಲವಾದರೆ ಇಲಾಖೆಯ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿರುತ್ತಾರೆ.

Categories
ಕರಾವಳಿ ಸುದ್ದಿ

ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ದಿನಾಚರಣೆಯು ಸಂಘದ ಶ್ರೀ ವಿಠೋಬ ಭಜನಾ ಮಂದಿರದಲ್ಲಿ ಭಜನಾ ಸೇವೆಯೊಂದಿಗೆ ನೆರವೇರಿತು.

ಮಹಾಪೂಜೆಯ ಬಳಿಕ ಸಂಘದ ವ್ಯಾಪ್ತಿಯಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ತರಗತಿಯಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆಯಾದ ಬಿಲ್ಲವ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶಿವದಾಸ್ ಪಿ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಭಾಗವಹಿಸಿದ್ದರು.

ಸಂಘದ ಗೌರವಾಧ್ಯಕ್ಷ ಗೋಪಾಲ್ ಸಿ. ಬಂಗೇರ, ಉಪಾಧ್ಯಕ್ಷ ಮುದ್ದಣ್ಣ ಪೂಜಾರಿ, ನಿಕಟಪೂರ್ವ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಕ್ರಿಶ್ಚಿಯನ್ ಪಿ.ಯು. ಕಾಲೇಜು ಪ್ರಾಂಶುಪಾಲೆ ಶ್ವೇತಾ ಶ್ರೀನಿವಾಸ್, ಸಂಘದ ಆಡಳಿತ ಸಮಿತಿ ಸದಸ್ಯ ರಾಜೇಂದ್ರ ಪಂದುಬೆಟ್ಟು, ಮಹಿಳಾ ಘಟಕದ ಗೌರವ ಸಂಚಾಲಕಿ ವಿಜಯಾ ಜಿ. ಬಂಗೇರ, ಸಂಚಾಲಕಿ ಗೋಧಾವರಿ ಎಮ್. ಸುವರ್ಣ, ಸಂಘದ ಮಾಜಿ ಕೋಶಾಧಿಕಾರಿ ಸುರೇಶ್ ಎ., ಆಡಳಿತ ಸಮಿತಿ ಸದಸ್ಯರಾದ ಗುರುರಾಜ್ ಪೂಜಾರಿ, ಸತೀಶ್ ಜಿ. ಪೂಜಾರಿ ವಿದ್ಯಾರ್ಥಿ ವೇತನ ವಿತರಿಸಿದರು.

ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್, ಕೋಶಾಧಿಕಾರಿ ದಯಾನಂದ ಎ., ಜತೆ ಕಾರ್ಯದರ್ಶಿಗಳಾದ ಮಹೇಂದ್ರ ಕೋಟ್ಯಾನ್, ವಿನಯ್ ಕುಮಾರ್, ಆಡಳಿತ ಸಮಿತಿ ಸದಸ್ಯರಾದ ಸುಧಾಕರ ಎ., ರಮೇಶ್ ಕೋಟ್ಯಾನ್, ಭಾಸ್ಕರ ಅಂಚನ್, ಕುಶಲ ಕುಮಾರ್ ಎ., ಭಾಸ್ಕರ ಕೋಟ್ಯಾನ್, ನಿತಿನ್ ಕುಮಾರ್, ಜನಾರ್ದನ ಪೂಜಾರಿ, ಚೆನ್ನಕೇಶವ, ಗೌರವ ಭಜನಾ ಸಂಚಾಲಕ ಕೆ.ಮಂಜಪ್ಪ ಸುವರ್ಣ, ಸಹ ಸಂಚಾಲಕ ಶಂಕರ ಪೂಜಾರಿ, ಮಹಿಳಾ ಘಟಕದ ಸಹ ಸಂಚಾಲಕಿ ದೇವಕಿ ಕೆ. ಕೋಟ್ಯಾನ್, ಕಾರ್ಯದರ್ಶಿ ವಾಣಿಶ್ರೀ ಅರುಣ್, ಜತೆ ಕಾರ್ಯದರ್ಶಿ ಸಂಚಲ ಶಶಿಕಾಂತ್, ಸಂಘಟನಾ ಕಾರ್ಯದರ್ಶಿ ಪ್ರಭಾ ದಯಾನಂದ, ಸಮಿತಿ ಸದಸ್ಯೆಯರು, ಅರ್ಚಕರಾದ ಅವಿನಾಶ್ ಪೂಜಾರಿ, ಜೀವನ್, ಅದಿತ್ ಸಹಿತ ಸಂಘದ ಸದಸ್ಯರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.ಸಾಮೂಹಿಕ ಸಂತರ್ಪಣೆಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.