Categories
ಕರಾವಳಿ ಸುದ್ದಿ

ಶಾಸಕರು ಹಾಗೂ ಸಂಸದರ ಜೊತೆಗೂಡಿ ಫಲಾನುಭವಿಗಳಿಗೆ ವಾಹನ ಹಸ್ತಾಂತರ

ಕುಂದಾಪುರ : ಕುಂದಾಪುರದ ತಾಲೂಕು ಪಂಚಾಯಿತಿನ ಶಾಸಕರ ಕಛೇರಿಯಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಆದಿ ಜಾಂಬವ ಅಭಿವೃದ್ಧಿ ನಿಗಮದ ಸ್ವಾವಲಂಬಿ ಸಾರಥಿ ಯೋಜನೆಯಡಿ ವಾಹನ ಹಸ್ತಾಂತರ ಕಾರ್ಯಕ್ರಮವನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ  ಹಾಗೂ ಅಂಬೇಡ್ಕರ್ ನಿಗಮ ಮಂಡಳಿಯ ಅಧಿಕಾರಿಯಾದ ಶಂಕರ್ ಜೊತೆಗೂಡಿ ಫಲಾನುಭವಿಗಳಾದ ದಿನೇಶ್ ಸಟ್ವಾಡಿ,, ಗಣೇಶ್ ಕಾಳವರ್ ಇವರಿಗೆ ವಾಹನವನ್ನು ಹಸ್ತಾಂತರಿಸಿದರು,
ಈ ಸಂದರ್ಭದಲ್ಲಿ  ರಾಜೇಶ್ ಕಾವೇರಿ, ಪುರಸಭಾ ಸದಸ್ಯ ಸಂತೋಷ್ ಶೆಟ್ಟಿ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು

Categories
ಕರಾವಳಿ ಸುದ್ದಿ

” ಹೈ ರಿಸ್ಕ್ ಅಂಡ್ ಕ್ರಿಟಿಕಲ್ ಕೇರ್ ಒಬ್ಸೆಟ್ರಿಕ್ಸ್ “

ಮೂಡ್ಲಕಟ್ಟೆ : ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ನಲ್ಲಿ ” ಹೈ ರಿಸ್ಕ್ ಅಂಡ್ ಕ್ರಿಟಿಕಲ್ ಕೇರ್ ಒಬ್ಸೆಟ್ರಿಕ್ಸ್ ” ಕುರಿತು ಪ್ರಾದೇಶಿಕ ಸಮ್ಮೇಳನ ವನ್ನು ಗುರುವಾರ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು . ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ , ಫಾದರ್ ಮುಲ್ಲರ್ ಕಾಲೇಜಿನ ಪ್ರಾಧ್ಯಾಪಕಿಯಾದ ಡಾ. ರೀನಾ ವಿಲ್ಟಾ ಪ್ರಾಂಕ್, ಐಎಂಜೆ ಇನ್ಸ್ಟಿಟ್ಯೂಷನ್ಸ್ ಬ್ರಾಂಡ್ ಬಿಲ್ಡಿಂಗ್ ಡೈರೆಕ್ಟರ್ ಡಾ. ರಾಮಕೃಷ್ಣ ಹೆಗಡೆ, ಮತ್ತು ಉಪ ಪ್ರಾಂಶುಪಾಲರಾದ ಶ್ರೀಮತಿ ರೂಪಶ್ರೀ ಕೆ ಎಸ್ ದೀಪ ಪ್ರಜ್ವಲನದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ರಾಮಕೃಷ್ಣ ಹಾಗಡೆಯವರು ಸಮ್ಮೇಳನವನ್ನು ಆಯೋಜಿಸಿದ ಎಂ ಸಿ ಎ ನ್ ನ ಪ್ರಧ್ಯಾಪಕರಿಗೆ ಹಾಗು ಸಮ್ಮೇಳನಗಳನ್ನು ನಡೆಸಲು ಬಹಳ ಉತ್ತೇಜನ ನೀಡುತ್ತಿರುವ ಐ ಎಂ ಜೆ ಇನ್ಸ್ಟಿಟ್ಯೂಷನ್ಸ್ ಛೇರ್ಮನ್ ರಾದ ಶ್ರೀಯುತ ಸಿದ್ದಾರ್ಥ ಶೆಟ್ಟಿಯವರಿಗೆ ಅಭಿನಂದಿಸಿದರು.

ಸಭಾ ಕಾರ್ಯಕ್ರಮದನಂತರ ಆಹ್ವಾನಿತ ವಿಷಯ ತಜ್ಞ ರಿಂದ ವಿಚಾರ ಮಂಡನೆ ನಡೆಯಿತು. ಮೊದಲನೆಯವರಾಗಿ ಡಾ. ರೀನಾ ವಿಲ್ಮಾ ಪ್ರಾಂಕ್ ರವರು “ಪ್ರಸೂತಿಯಲ್ಲಿ ಕೃತಕ ಬುದ್ಧಿಮತ್ತೆ” ಎನ್ನುವ ವಿಷಯವನ್ನು ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ನಂತರ ಡಾ. ಸೋನಿಯಾ ಆರ್ ಬಿ ಡಿಸೋಜ ಹಾಗು ರಂಜನಿ ಪಿ (ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್) ರವರು “ಗರ್ಭಾವಸ್ಥೆಯಲ್ಲಿ ತೀವ್ರ ರಕ್ತದೊತ್ತಡ ನಿರ್ವಹಣೆ”ಯ ಕುರಿತು ಪ್ರಾಯೋಗಿಕವಾಗಿ ಭಾಗಿಯಾದ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ತಿಳಿಸಿದರು. ಅಪರಾನ್ಹ ಡಾ. ಪ್ರಿಯಾಂಕ ಜೋಗಿಯವರು (ಸ್ತ್ರೀ ರೋಗ ತಜ್ಞರು, ನವಮಾಸ ಕ್ಲಿನಿಕ್ ) ಶೋಲ್ಡರ್ ಡಿಸ್ಟ್ರೊಶಿಯಾದ ಬಗ್ಗೆ ವಿಚಾರ ಮಂಡಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದವರಿಗೆ ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀಮತಿ ರೂಪ ಶ್ರೀ ಕೆಎಸ್ ರವರು ಪ್ರಮಾಣ ಪತ್ರವನ್ನು ವಿತರಿಸಿದರು. ಕಾರ್ಯಕ್ರಮ ದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಸೆರೆನಾ ನಿರೂಪಿಸಿ, ಮಂಜುನಾಥ್ ವಂದಿಸಿದರು.
ಕಾರ್ಯಕ್ರಮದಲ್ಲಿ ಹಲವು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.

Categories
ಕರಾವಳಿ ಸುದ್ದಿ

ಕಾಳಾವರ ವರದರಾಜ ಕಾಲೇಜಿಗೆ ಯುಪಿಎಸ್ ಕೊಡುಗೆ- ವಾದಿರಾಜ ಕೆ.

ಕುಂದಾಪುರ : ಗುರಿಯನ್ನು ಈಡೇರಿಸಿಕೊಳ್ಳಲು ನಿರಂತರ ಪ್ರಯತ್ನ ಶೀಲರಾಗಿ, ನಿಮ್ಮ ಯಶಸ್ಸಿನ ಮೂಲಕ ಎಲ್ಲ ತೊಂದರೆಗಳು ಮಾಯವಾಗುತ್ತವೆ. ವಿದ್ಯಾರ್ಥಿಗಳೆಲ್ಲರಿಗೂ ಸಮಾನ ಪ್ರತಿಭೆ ಇಲ್ಲದಿರಬಹುದು ಆದರೆ ಸಮಾನ ಅವಕಾಶಗಳಿವೆ. ಕನಸು, ಪ್ರಯತ್ನ, ಸಾಧನೆ – ಇವು ಮೂರನ್ನು ನಿರ್ಲಕ್ಷಿಸದೆ ತಮ್ಮ ಏಳ್ಗೆಗೆ ತಾವೇ ಶಿಲ್ಪಿಗಳಾಗಬೇಕೆಂದು ಕರ್ನಾಟಕ ಬ್ಯಾಂಕ್ ವಿಭಾಗೀಯ ಕಚೇರಿ, ಉಡುಪಿ ಇಲ್ಲಿನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ವಾದಿರಾಜ ಕೆ. ಹೇಳಿದರು.
ಅವರು ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿ ನಡೆದ 18ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಕರ್ನಾಟಕ ಬ್ಯಾಂಕ್‌ನ ಸಿಎಸ್‌ಆರ್ ನಿಧಿಯಿಂದ ಗಣಕಶಾಸ್ತçದ ಪ್ರಯೋಗಾಲಯಕ್ಕೆ ರೂಪಾಯಿ ನಾಲ್ಕು ಲಕ್ಷ ಹತ್ತು ಸಾವಿರ ಮೌಲ್ಯದ ಯುಪಿಎಸ್ ಹಸ್ತಾಂತರಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ಧ ಕಾಲೇಜಿನ ಪ್ರಾಂಶುಪಾಲ ರಾಮರಾಯ ಆಚಾರ್ಯ ಈ ಕಾಲೇಜು ಅನೇಕ ದಾನಿಗಳಿಂದ ಮೂಲಭೂತ ಸೌಲಭ್ಯಗಳನ್ನು ಪಡೆದು ಅತ್ಯುತ್ತಮ ಕಾಲೇಜೆಂದು ಹೆಸರಾಗಲು ಸಹಕರಿಸಿದವರೆಲ್ಲರಿಗೆ ಕೃತಜ್ಞತೆ ಸಲ್ಲಿಸಿದರು.
ಐಕ್ಯೂಎಸಿ ಸಂಚಾಲಕ ನಾಗರಾಜ ಯು., ಸಾಂಸ್ಕೃತಿಕ ಸಂಚಾಲಕರಾದ ಡಾ. ಭಾಗೀರಥಿ ನಾಯ್ಕ, ಅರಣ್ಯ ಗುತ್ತಿಗೆದಾರ ಜೆ.ಪಿ. ಶೆಟ್ಟಿ ಕಟ್ಕೆರೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪ್ರಭಾಕರ ಖಾರ್ವಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ. ಸ್ವಾಗತಿಸಿದರು. ಇತಿಹಾಸ ಉಪನ್ಯಾಸಕಿ ಶರಾವತಿ ನಿರೂಪಿಸಿ ಕೊನೆಯಲ್ಲಿ ವಿದ್ಯಾರ್ಥಿ ನಾಯಕ ನಿತಿನ್ ಕುಮಾರ್ ವಂದಿಸಿದರು.

Categories
ಕರಾವಳಿ ಸುದ್ದಿ

ಕಾರಂತರ ಕುರಿತು ಉಪನ್ಯಾಸ ಹಾಗೂ ಜಲಜಾನಪದ ಕೃತಿ ಬಿಡುಗಡೆ

ಕುಂದಾಪುರ : ಜನಪದ ಸಾಹಿತ್ಯ ಮತ್ತು ಕಲೆಗಳು ಜನಮನದ ಜೀವನಾಡಿ. ಇವುಗಳನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಡಾ| ಶಿವರಾಮ ಕಾರಂತರು ಕರಾವಳಿಯ ಕಲೆಯಾದ ಯಕ್ಷಗಾನವನ್ನು ಆ ಕಾಲಘಟ್ಟಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆಯುವಂತೆ ಮಾಡಿದರು ಎಂದು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ| ಬಾಲಾಜಿ ಎಸ್. ಹೇಳಿದರು.
ಇವರು ಡಾ| ಶಿವರಾಮ ಕಾರಂತ ಟ್ರಸ್ಟ್, ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆದ ಅರಿವಿನ ಬೆಳಕು ಉಪನ್ಯಾಸ ಮಾಲೆ-5 ಮತ್ತು ಜಲಜಾನಪದ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಜಾನಪದ ವಿದ್ವಾಂಸ ಪ್ರೊ| ಕನರಾಡಿ ವಾದಿರಾಜ ಭಟ್ ಜಲಜಾನಪದ ಪುಸ್ತಕ ಬಿಡುಗಡೆಗೊಳಿಸಿದರು. ಡಾ| ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ| ಗಣನಾಥ ಶೆಟ್ಟಿ ಎಕ್ಕಾರು ಆಶಯ ನುಡಿಗಳನ್ನಾಡಿ ಪುಸ್ತಕ ಪರಿಚಯಿಸಿದರು. ಡಾ| ಶಿವರಾಮ ಕಾರಂತ ಟ್ರಸ್ಟ್ನ ಸದಸ್ಯ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಮುಷ್ತಾಕ್ ಹೆನ್ನಾಬೈಲ್ ಡಾ| ಶಿವರಾಮ ಕಾರಂತರ ಬದುಕು ಕೃತಿಗಳು ಮತ್ತು ಪರಿಸರದ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭ ಕಾರಂತ ಟ್ರಸ್ಟ್ನ ಸದಸ್ಯ ಡಾ| ಪ್ರಸಾದ್ ರಾವ್ ಉಪಸ್ಥಿತರಿದ್ದರು.
ಕಾಲೇಜಿನ ಉಪ-ಪಾಂಶುಪಾಲರು ಹಾಗೂ ಕಾರಂತ ಟ್ರಸ್ಟ್ನ ಸದಸ್ಯ ಸಂಚಾಲಕ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ಇನ್ನೋರ್ವ ಸದಸ್ಯ ಸಂಚಾಲಕಿ ಹಾಗೂ ಜಲಜಾನಪದ ಕೃತಿಯ ಸಂಪಾದಕಿ ಡಾ| ಭಾರತಿ ಮರವಂತೆ ಪ್ರಸ್ತಾವಿಸಿದರು. ಕಾರ್ಯಕ್ರಮದ ಸಂಯೋಜಕಿ ರೇಷ್ಮಾ ಶೆಟ್ಟಿ ವಂದಿಸಿ, ಕನ್ನಡ ಸಹಾಯಕ ಪ್ರಾಧ್ಯಾಪಕ ಸುಕುಮಾರ್ ಶೆಟ್ಟಿ ಕಮಲಶಿಲೆ ನಿರೂಪಿಸಿದರು.

Categories
ರಾಜ್ಯ ಸುದ್ದಿ

ಕಾಲ ಚಕ್ರದ ರಥವನ್ನೇರಿ ಹೊರಟ ಎಚ್‌. ಎಸ್‌. ವಿ

ಬೆಂಗಳೂರು : ಕನ್ನಡದ ಹೆಸರಾಂತ ಸಾಹಿತಿ, ಭಾವ ಕವಿ ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ ಅವರು ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಕೆಂಗೇರಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಅವರ ನಿಧನದೊಂದಿಗೆ ಕನ್ನಡ ಸಾಹಿತ್ಯಲೋಕ ಓರ್ವ ಶ್ರೇಷ್ಠ ಕವಿಯನ್ನು ಕಳೆದುಕೊಂಡಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಎಚ್.ಎಸ್.ವಿ. ಎಂದೇ ಜನಪ್ರಿಯರಾಗಿದ್ದ ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅವರು ಕಳೆದ ಎರಡು ವರ್ಷಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರಿಗೆ ನಾಲ್ವರು ಪುತ್ರರಿದ್ದಾರೆ.

ನಗರದ ರವೀಂದ್ರ ಕಲಾಕ್ಷೇತ್ರ ಹಿಂಭಾಗದ ಸಂಸ ಬಯಲು ರಂಗಮಂದಿರದಲ್ಲಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಅವರ ಅಂತಿಮ ದರ್ಶನ ಪಡೆದರು

Categories
ರಾಜ್ಯ ಸುದ್ದಿ

ವಿದೇಶಕ್ಕೆ ತೆರಳಲು ದರ್ಶನ್‌ಗೆ ಅನುಮತಿ

ಬೆಂಗಳೂರು : ‘ಡೆವಿಲ್’ ಚಿತ್ರದ ಚಿತ್ರೀಕರಣಕ್ಕೆ ಜೂ.1ರಿಂದ 25ರವರೆಗೆ ದುಬೈ ಹಾಗೂ ಯೂರೋಪ್‌ಗೆ ತೆರಳಲು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿ ನಟ ದರ್ಶನ್‌ಗೆ ನಗರದ 64ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಅನುಮತಿ ನೀಡಿದೆ.

ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಲು ಅನುಮತಿ ನೀಡುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಾಧೀಶರಾದ ಐ.ಪಿ. ನಾಯ್ಕ ಅವರು ಈ ಆದೇಶ ಮಾಡಿದ್ದಾರೆ.

ಡಿವಿಲ್ ಚಿತ್ರ ನಿರ್ಮಿಸುತ್ತಿರುವ ಜೈಮಾತಾ ಕಂಬೈನ್ಸ್‌ನ ಕಾರ್ಯಕಾರಿ ನಿರ್ಮಾಪಕರು ಚಿತ್ರೀಕರಣಕ್ಕಾಗಿ 2025ರ ಜೂ.1ರಿಂದ 25ರವರೆವರೆಗೆ ದರ್ಶನ್ ಅವರ ಉಪಸ್ಥಿತಿಯ ಅಗತ್ಯವಿದೆ ಎಂದು ತಿಳಿಸಿ ಪತ್ರ ನೀಡಿದ್ದಾರೆ. ಚಿತ್ರೀಕರಣ ಪೂರ್ಣಗೊಂಡ ನಂತರ ದರ್ಶನ್ ಭಾರತಕ್ಕೆ ಮರಳುವುದಾಗಿ ಭರವಸೆ ನೀಡಿದ್ದಾರೆ.

Categories
ರಾಜ್ಯ ಸುದ್ದಿ

ಅನರ್ಹ ರೇಶನ್‌ ಕಾರ್ಡ್‌ ರದ್ದಾಗದ್ದಕ್ಕೆ ಸಿಎಂ ಗರಂ

ಬೆಂಗಳೂರು : ರಾಜ್ಯದಲ್ಲಿ ಸುಮಾರು ಶೇ.74ರಷ್ಟು ಬಿಪಿಎಲ್ ಕಾರ್ಡುಗಳಿದ್ದು, ಅನರ್ಹರನ್ನು ಗುರುತಿಸಿ ತೆಗೆದು ಹಾಕುವ ಮೂಲಕ ಅರ್ಹರಿಗೆ ಸವಲತ್ತು ಒದಗಿಸುವ ಕಾರ್ಯ ನಡೆಯಬೇಕಿದೆ ಎಂದು ಸೂಚಿಸಲಾಗಿತ್ತಾದರೂ ಇದರಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಆಗಿಲ್ಲ ಏಕೆ ಎಂದು ಅಧಿಕಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ತರಾಟೆಗೆ ತೆಗೆದುಕೊಂಡರು.

ವಿಧಾನಸೌಧದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ, ಜಿಪಂ ಸಿಇಓ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಆರೋಗ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ, ವಸತಿ ಸೇರಿ ವಿವಿಧ ಇಲಾಖೆಗಳ ಕುರಿತು ಬೆಳಗ್ಗೆ 10.45 ಗಂಟೆಯಿಂದ ರಾತ್ರಿ 7.45 ಗಂಟೆವರೆಗೆ ಸತತ 9 ಗಂಟೆ ಗಳ ಕಾಲ ಸುದೀರ್ಘ ಸಭೆ ನಡೆಸಿ ಬಿಸಿ ಮುಟ್ಟಿಸಿದರು.

ಅನರ್ಹ ಪಡಿತರ ಚೀಟಿಗಳ ರದ್ದತಿಗೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಇದರಲ್ಲಿ ನಿರೀಕ್ಷಿತ ಪ್ರಗತಿ ಆಗಿಲ್ಲ  ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಹಿಂದಿನ ಸಭೆಯಲ್ಲಿ ನೀಡಿದ ಸೂಚನೆ, ತೆಗೆದುಕೊಂಡ ನಿರ್ಣಯಗಳಲ್ಲಿ ಕೆಲ ಇಲಾಖೆಗಳು ಶೇ.100ರಷ್ಟು ಪ್ರಗತಿ ತೋರಿಸಿಲ್ಲ. ಇದನ್ನು ಸಹಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ರಾಜಿ ಇಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ಮೇಲೆ ನಿಷ್ಟುರವಾಗಿ ಕ್ರಮ ಕೈಗೊಳ್ಳುವುದು ನಮಗೆ ಅನಿವಾರ್ಯ ಆಗಲಿದೆ. ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗಳು ಮತ್ತು ಸಿಇಓ ಅವರು ತಮ್ಮ ಅಹಂ ಬದಿಗೊತ್ತಿ ಸಮನ್ವಯದಿಂದ ಕೆಲಸ ಮಾಡಿದರೆ ಮಾತ್ರ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯ. ಈ ಉದ್ದೇಶಕ್ಕೆ ನೀವು ಐಎಎಸ್ ಮಾಡಿರುವುದು. ಅದಕ್ಕಾಗಿಯೇ ನಿಮಗೆ ಸವಲತ್ತುಗಳನ್ನು ನೀಡಿರುವುದು. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಕಟ್ಟುನಿಟ್ಟಿನ ಸಂದೇಶ ನೀಡಿದರು

Categories
ರಾಷ್ಟ್ರೀಯ ಸುದ್ದಿ

ಐಟಿ ರಿಟರ್ನ್ಸ್ ಇನ್ನು ಫೈಲ್ ಮಾಡಬಹುದು

ನವದೆಹಲಿ : ‘2025-26ನೇ ಸಾಲಿನ ಐಟಿಆರ್ -1 ಮತ್ತು ಐಟಿಆ‌ರ್-4ನ್ನು ಫಾರ್ಮ್ಗಳನ್ನು ಸಕ್ರಿಯಗೊಳಿಸಲಾಗಿದೆ. ಈ ಮೂಲಕ ತೆರಿಗೆದಾರರು 2024-25ರಲ್ಲಿ ಗಳಿಸಿದ ಆದಾಯದ ಐಟಿ ರಿಟರ್ನ್ಸ್‌ ಸಲ್ಲಿಸಲು ಪ್ರಾರಂಭಿಸಬಹುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಇದರನ್ವಯ 2025-26ನೇ ಸಾಲಿನ ಐಟಿಆರ್ -1 ಮತ್ತು ಐಟಿಆರ್-4ಕ್ಕಾಗಿ ಎಕ್ಸೆಲ್ ಫಾರ್ಮ್‌ಗಳನ್ನು ಸಕ್ರಿಯಗೊಳಿಸಲಾಗಿದೆ. ತಮ್ಮ ಖಾತೆಗಳ ಲೆಕ್ಕಪರಿಶೋಧನೆ ಮಾಡಿಸಿಕೊಳ್ಳುವ ಅಗತ್ಯವಿಲ್ಲದ, ವಾರ್ಷಿಕ 50 ಲಕ್ಷ ರು. ವರೆಗೆ ಆದಾಯ ಹೊಂದಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಇದು ಅನ್ವಯವಾಗುತ್ತದೆ.

ಐಟಿಆ‌ರ್-1 ಮತ್ತು ಐಟಿಆರ್-4ರಲ್ಲಿ ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕವನ್ನು ಜು.31ರಿಂದ ಸೆ.15ಕ್ಕೆ ವಿಸ್ತರಿಸಲಾಗಿದೆ.

Categories
ರಾಷ್ಟ್ರೀಯ ಸುದ್ದಿ

ಕಾಶ್ಮೀರ ಅಭಿವೃದ್ಧಿ ನಿಲ್ಲಲ್ಲ : ಅಮಿತ್ ಶಾ

ಪೊಂಚ್ : ಭಾರತ-ಪಾಕಿಸ್ತಾನ ಸಂಘರ್ಷದ ವೇಳೆ ಪಾಕ್ ನಡೆಸಿದ ಶೆಲ್ ದಾಳಿ ಸಂತ್ರಸ್ತರಾದ ಜಮ್ಮು ಮತ್ತು ಕಾಶ್ಮೀರದ ಪೊಂಚ್ ನ ಜನರನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಶುಕ್ರವಾರ ಭೇಟಿಯಾದರು. ಈ ವೇಳೆ ಸಂತ್ರಸ್ತರ ಜತೆ ಮಾತನಾಡಿದ ಅವರು, ‘ಕಾಶ್ಮೀರದ ಅಭಿವೃದ್ಧಿ ಇಂಥ ದಾಳಿಗಳಿಗೆಲ್ಲ ನಿಲ್ಲುವುದಿಲ್ಲ, ನಿಧಾನವಾಗುವುದೂ ಇಲ್ಲ. ಭಾರತಕ್ಕೆ ಹಾನಿ ಮಾಡಲು ಪ್ರಯತ್ನಿಸುವವರು ಯಾರೇ ಆದರೂ ತಕ್ಕ ಉತ್ತರ ನೀಡಲಾಗುವುದು. ಈಗಾಗಲೇ ಭಾರತವು ಪಾಕ್‌ನ 118 ಮುಂಚೂಣಿ ನೆಲೆಗಳನ್ನು ಧ್ವಂಸ ಮಾಡಿದೆ ಎಂದರು

Categories
ರಾಷ್ಟ್ರೀಯ ಸುದ್ದಿ

ನೌಕಾಪಡೆ ದಾಳಿ ಮಾಡಿದ್ರೆ ಪಾಕ್ 4 ತುಂಡಾಗುತ್ತಿತ್ತು : ರಾಜನಾಥ್

ಪಣಜಿ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮತ್ತೊಮ್ಮೆ ವೈರಿ ರಾಷ್ಟ್ರ ಪಾಕಿಸ್ತಾನದ ವಿರುದ್ಧ ಗುಡುಗಿದ್ದು, ಆಪರೇಷನ್ ಸಿಂದೂರದಲ್ಲಿ ನೌಕಾಪಡೆ ಕಾರ್ಯಾಚರಣೆಗೆ ಇಳಿದಿದ್ದರೆ 1971 ಕ್ಕಿಂತಲೂ ಪಾಕಿಸ್ತಾನ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತಿತ್ತು. 4 ಭಾಗಗಳಾಗಿ ತುಂಡಾಗುತ್ತಿತ್ತು ಎಂದಿದ್ದಾರೆ

ಶುಕ್ರವಾರ ಗೋವಾದಲ್ಲಿ ದೇಶದ ಮೊದಲ ಸ್ವದೇಶಿ ನಿರ್ಮಿತ ನೌಕೆ ಐಎನ್ ಎಸ್ ವಿಕ್ರಾಂತ್‌ಗೆ ಭೇಟಿ ನೀಡಿ ಮಾತನಾಡಿದ ಅವರು, ಭಾರತದ ನೌಕಾಪಡೆ ಕಾರ್ಯಾಚರಣೆಗೆ ಇಳಿದರೆ ಪಾಕಿಸ್ತಾನ 2 ಭಾಗವಾಗಿ ವಿಭಜನೆಯಾಗುತ್ತದೆ ಎನ್ನುವುದಕ್ಕೆ 1971ರ ಯುದ್ಧಸಾಕ್ಷಿ ಇನ್ನು ಒಂದು ವೇಳೆ ಆಪರೇಷನ್ ಸಿಂದೂರದ ವೇಳೆ ನೌಕಾಪಡೆ ಕಾರ್ಯಾಚರಣೆಗೆ ಇಳಿದಿದ್ದರೆ ಪಾಕಿಸ್ತಾನ ಕೇವಲ ಎರಡು. ಭಾಗವಾಗಿ ಅಲ್ಲ, ನಾಲ್ಕು ಭಾಗಗಳಾಗಿ ವಿಭಜನೆಯಾಗುತ್ತಿತ್ತು ಎಂದರು.