Categories
ಬ್ರೇಕಿಂಗ್ ನ್ಯೂಸ್

ಲೈಂಗಿಕ ಕಿರುಕುಳ : ಡಾ. ರಾಬರ್ಟ್‌ ನಾಪತ್ತೆ

ಕುಂದಾಪುರ : ಕುಂದಾಪುರ ನಗರದಲ್ಲಿರುವ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ರಾಬರ್ಟ್‌ ರೆಬೆಲ್ಲೋ ನಾಪತ್ತೆಯಾಗಿದ್ದಾರೆ ಸಂತ್ರಸ್ಥ ವೈದ್ಯೆ ನಿನ್ನೆ ಡಾ.ರಾಬರ್ಟ್‌ ರೆಬೆಲ್ಲೋ ವಿರುದ್ದ ದೂರು ನೀಡುತ್ತಿದ್ದಂತೆ ಡಾ.ರಾಬರ್ಟ್‌ ರೆಬೆಲ್ಲೋ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ

ಸಂತ್ರಸ್ಥ ವೈದ್ಯೆ ನೀಡಿದ ದೂರಿನಂತೆ ನಾನು ಕಳೆದ ಹಲವು ತಿಂಗಳಿನಿಂದ ಎನ್‌ ಆರ್‌ ಎಚ್‌ ಎಂ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಕರ್ತವ್ಯದ ಆರಂಭದ ದಿನದಿಂದಲೂ ಆಡಳಿತ ವೈದ್ಯಾಧಿಕಾರಿ ರಾಬರ್ಟ್‌ ರೆಬೆಲ್ಲೋರವರಿಂದ ಮಾನಸಿಕ ಮತ್ತು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ತಿಳಿಸಿದ್ದಾರೆ

ಡಿಯರ್‌ ಬೇಬಿ, ಐ ಅಮ್‌ ಇನ್‌ ಲವ್‌ ವಿಥ್‌ ಯು ನೀನು ಜೀನ್ಸ್‌ ಪ್ಯಾಂಟ್‌ ಹಾಗೂ ಟಿ ಶರ್ಟ್‌ ಉಡುಪುಗಳನ್ನು ಧರಿಸು ಬೇಬಿ ಡಾರ್ಲಿಂಗ್‌ ನಿನ್ನ ಸುಂದರವಾದ ಚಿತ್ರಗಳನ್ನು ಕಳಿಸು ಎಂಬಿತ್ಯಾದಿ ವಾಟ್ಸ್ ಅಪ್‌ ಮೆಸೇಜ್‌ ಮತ್ತು ಡಿನ್ನರ್‌ ಪಾರ್ಟಿಗೆ ಬಾ ಎಂದು ಪೀಡಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ

ಇದಲ್ಲದೇ ಆಸ್ಪತ್ರೆ ಕರ್ತವ್ಯ ಮುಗಿದ ನಂತರವೂ ಕೂಡ ರಾತ್ರಿ 11.00- 12.00 ಗಂಟೆಯ ಅವಧಿಯಲ್ಲಿ ಮೋಬೈಲ್‌ ಮೆಸ್ಸೇಜ್‌ ಕರೆ ಮಾಡುವುದು ನಿನ್ನ ಗಂಡ ನಿನಗೆ ಸುಖ ಕೊಡುತ್ತಾನೆಯೇ ಎಂದು ವಿಚಾರಿಸಿ ನನ್ನ ವೈಯುಕ್ತಿಕ ಬದುಕಿನಲ್ಲೂ ಕೂಡ ಹಸ್ತಕ್ಷೇಪ ಮಾಡಿರುತ್ತಾರೆ

ನನ್ನ ಕುಟುಂಬ ಮರ್ಯಾದೆ ಹಾಗೂ ನನ್ನ ಕಾಂಟ್ರಾಕ್ಟ್ ಉದ್ಯೋಗವನ್ನು ಕಾಯ್ದುಕೊಳ್ಳುವ ಸಲುವಾಗಿ ವಿಧಿಯಿಲ್ಲದೇ ಅಸಹಾಯಕಳಾಗಿ ಅವರ ಕೋರಿಕೆಗಳನ್ನು ತಿರಸ್ಕರಿಸಿ ಉತ್ತರಿಸುತ್ತಾ ಬಂದಿದ್ದೇನೆ

ಡಾ.ರಾಬರ್ಟ್‌ ರೆಬೆಲ್ಲೋ ರವರು ನನಗೆ ಮಾನಸಿಕ ಹಾಗೂ ವೈಯುಕ್ತಿಕ ಕಿರುಕುಳ ಹಾಗೂ ನನ್ನ ಚಾರಿತ್ರ್ಯ ವಧೆ ಮಾಡುವ ಪ್ರಯತ್ನ ಮಾಡಿರುವುದು ನನ್ನ ಜೀವನಕ್ಕೆ ಅತ್ಯಂತ ತೊಂದರೆಯಾಗಿರುವುದರಿಂದ ನನಗೆ ಕಾನೂನು ಪ್ರಕಾರ ನ್ಯಾಯ ಕೊಡಿಸಬೇಕಾಗಿ ಸಂತ್ರಸ್ಥ ವೈದ್ಯೆ ದೂರು ನೀಡಿದ್ದಾರೆ

Categories
ಅಪರಾಧ

ಉಪ್ಪೂರು ಪಿಡಿಓ ಲೋಕಾಯುಕ್ತ ಬಲೆಗೆ

ಕುಂದಾಪುರ ; ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದಾಗ ಉಪ್ಪೂರು ಗ್ರಾಮ ಪಂಚಾಯತ್ ಪಿಡಿಓ ಇನಾಯತುಲ್ಲಾ ಬೇಗ್ ಹಾಗೂ ಬಿಲ್ ಕಲೆಕ್ಟರ್ ಸಂಜಯ್ ಎಂಬವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ

ಇವರಿಬ್ಬರು ರವಿ ಡಿಲಿಮಾ ಎಂಬವರಲ್ಲಿ 9/11 ಕೆಲಸಕ್ಕಾಗಿ 13,300 ರೂಪಾಯಿ ಲಂಚದ ಬೇಡಿಕೆಯೊಡ್ಡಿದ್ದರು ಈ ಬಗ್ಗೆ ರವಿ ಡಿಲಿಮಾ ಉಡುಪಿ ಲೋಕಾಯುಕ್ತರಿಗೆ ದೂರು ನೀಡಿದ್ದರು. ಅದರಂತೆ ಲಂಚ ಸ್ವೀಕರಿಸುತ್ತಿದ್ದಾಗಲೇ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಪಿಡಿಓ ಇನಾಯತ್ ಉಲ್ಲಾ ಬೇಗ್ ಹಾಗೂ ಸಂಜಯ್ ಅವರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ನ್ಯಾಯಾಲಯವು ಅವರಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ

ಲೋಕಾಯುಕ್ತ ಎಸ್‌ ಪಿ ಎಂ ಬಿ ನಟರಾಜ್‌ ರವರ ನಿರ್ಧೇಶನದಲ್ಲಿ ಉಡುಪಿ ಲೋಕಾಯುಕ್ತ ಡಿವೈಎಸ್‌ಪಿ ಕೆ ಸಿ ಪ್ರಕಾಶ್‌ ನಿರೀಕ್ಷಕರಾದ ಮಂಜುನಾಥ್‌ ಹಾಗೂ ರಫೀಕ್‌ ಮತ್ತು ಸಿಬ್ಬಂಧಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

Categories
ಅಪರಾಧ

ಬಾಲಕಿಗೆ ಲೈಂಗಿಕ ದೌರ್ಜನ್ಯ : ಬಂಧನ

ಕಾರ್ಕಳ: ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಕಲ್ಯಾ ಗ್ರಾಮ ಪಂಚಾಯಿತಿ ಸದಸ್ಯ ಕುಂಟಾಡಿ ನಿವಾಸಿ ಸಂತೋಷ್ ಪುತ್ರನ್ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಕುಂಟಾಡಿ ನಿವಾಸಿ ಸಂತೋಷ್ ಪುತ್ರನ್ ಎಂಬಾತ ಪ್ರಕರಣದ ಆರೋಪಿಯಾಗಿದ್ದು, ಆತನ ವಿರುದ್ಧ ಪೋಕ್ಸ್‌ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ವಿವಾಹಿತನಾಗಿರುವ ಆರೋಪಿ ಸಂತೋಷ್ ಪುತ್ರನ್ ಬಾಲಕಿಯನ್ನು ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಆತನ ವಿರುದ್ಧ ಪೋಷಕರು ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Categories
ಧಾರ್ಮಿಕ

ಇಂದು ದೃಢ ಸಂಕಲ್ಪ ಪೂಜೆ

ಕುಂದಾಪುರ : ನಗರದ ಮುಖ್ಯ ರಸ್ತೆಯಲ್ಲಿರುವ ಶ್ರಿ ನಂದಿಕೇಶ್ವರ ದೇವಸ್ಥಾನದಲ್ಲಿ ಇಂದು ದೃಢ ಸಂಕಲ್ಪ ಪೂಜೆಯು ವಿದ್ವಾನ್ ಕೋಟ ಚಂದ್ರಶೇಖರ ಸೋಮಯಾಜಿಯವರ ನೇತೃತ್ವದಲ್ಲಿ ಜರುಗಲಿದೆ ನಂದಿಕೇಶ್ವರ ದೇವಸ್ಥಾನ ಪುನರ್ ನವೀಕರಣಗೊಂಡು 48 ನೇ ದಿನದ ವಿಶೇಷ ಪೂಜೆಯಾಗಿ ದೃಢ ಸಂಕಲ್ಪ ಪೂಜೆಯು ನಾಳೆ ಜರುಗಲಿದ್ದು ಬೆಳಿಗ್ಗೆ 9:00ಯಿಂದ 12.00 ಗಂಟೆವರೆಗೆ ವಿವಿಧ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ನಡೆಯಲಿದೆ

ಭಕ್ತಾಭಿಮಾನಿಗಳು ದಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀದೇವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ ನಂದಿಕೇಶ್ವರನ ಕೃಪೆಗೆ ಪಾತ್ರರಾಗಬೇಕೆಂದು ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ. ನಾಗೇಶ್‌ ರವರು ವಿನಂತಿಸಿಕೊಂಡಿದ್ದಾರೆ

Categories
ಅಪರಾಧ

ಬೈಕ್‌ ಸವಾರ ಸಂದೇಶ್‌ ಶೆಟ್ಟಿ ನಿಧನ

ಶಂಕರನಾರಾಯಣ : ಮೇ 29ರ ಬುಧವಾರದಂದು ಬೈಕ್ ಸವಾರ ಸಂದೇಶ್‌ ಶೆಟ್ಟಿ ಎಂಬವರು ಹಾಲಾಡಿ-ಸೋಮೇಶ್ವರ ರಸ್ತೆಯ ಅಲ್ಪಾಡಿಯ ಶಾಮಿಯಾನ ಅಂಗಡಿಯ ಬಳಿ ದನವೊಂದು ಅಡ್ಡ ಬಂದ ಕಾರಣ ಅದಕ್ಕೆ ಢಿಕ್ಕಿ ಹೊಡೆದು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ.

ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ತತ್ ಕ್ಷಣ ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದ್ದಾಗಿ ತಿಳಿಸಿದ್ದಾರೆ ಈ ಬಗ್ಗೆ ಮೃತನ ತಂದೆ ಕೃಷ್ಣಯ್ಯ ಶೆಟ್ಟಿ ಅವರು ಶಂಕರನಾರಾಯಣ ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ

Categories
ಕ್ರೀಡೆ

ಡ್ರೀಮ್ಸ್ ಇವೆಂಟ್ಸ್

ದಿ| ಕೋಣಿ ವೆಂಕಟೇಶ ಹೆಬ್ಬಾರರ ಸ್ಮರಣಾರ್ಥ ದಿನಾಂಕ: 16.06.2024 ಭಾನುವಾರ “ಮಾನ್ಸೂನ್ ಪ್ರೊಫೇಶನಲ್ ಕಪ್ – 2024”ನ್ನು ಕುಂದಾಪುರದ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದು, ಭಾಗವಹಿಸುವ ತಂಡಗಳು ಈ ಕೆಳಗಿನಂತಿವೆ.
1.ಐ ಎಂ ಎ ತಂಡ
2. ಪೊಲೀಸ್ ತಂಡ
3. ವರ್ತಕರ “ಎ”ತಂಡ
4. ವರ್ತಕರ “ಬಿ” ತಂಡ
5. ಮುನ್ಸಿಪಾಲಿಟಿ ತಂಡ
6. ಫೋಟೋಗಾಫರ್ಸ್ ತಂಡ
7. ಕಟ್ಟಡ ಕಾರ್ಮಿಕರ ತಂಡ
8. ಬಸ್ ನೌಕರರು ಹಾಗೂ ಏಜೆಂಟ್ ತಂಡ
9. ಮೆಡಿಕಲ್ ತಂಡ
10. ಚಿನ್ನದ ಕೆಲಸಗಾರರ ತಂಡ
11. ಪ್ರೆಸ್ ಕ್ಲಬ್ ತಂಡ

 

Categories
ಕರಾವಳಿ ಸುದ್ದಿ

ಉಡುಪಿ ಬಿಜೆಪಿಯಿಂದ ನಾಲ್ವರ ಉಚ್ಛಾಟನೆ

ಉಡುಪಿ : ಪರಿಷತ್ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಜೊತೆ ಗುರುತಿಸಿಕೊಂಡಿರುವ ನಾಲ್ವರು ಬಿಜೆಪಿ ಪದಾಧಿಕಾರಿಗಳನ್ನು ಪಕ್ಷದಿಂದ ಉಚ್ಚಾಚನೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾ‌ರ್ ಕುಂದಾಪುರ ತಿಳಿಸಿದ್ದಾರೆ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಠಾಕೂರ್, ಕಾಪು ಮಂಡಲ ಉಪಾಧ್ಯಕ್ಷ ಉಪೇಂದ್ರ ನಾಯಕ್, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ರೋಷನ್ ಶೆಟ್ಟಿ ಮತ್ತು ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜುನೈದ್ ಬಂಡಾಯ ಅಭ್ಯರ್ಥಿಗೆ ಮತ ಯಾಚಿಸುತ್ತಿರುವ ವಿಚಾರ ಪಕ್ಷದ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಅವರಿಗೆ 48 ಗಂಟೆಗಳ ಒಳಗಾಗಿ ಜಿಲ್ಲಾಧ್ಯಕ್ಷರ ಮುಂದೆ ಸ್ಪಷ್ಟಿಕರಣವನ್ನು ನೀಡುವಂತೆ ನೋಟೀಸ್ ಜಾರಿಗೊಳಿಸಲಾಗಿತ್ತು. ಈ ನೋಟಿಸಿಗೆ ನೀಡಿದ ಉತ್ತರವು ಪಕ್ಷಕ್ಕೆ ಸಮಾಧಾನವಾಗದ ಹಿನ್ನಲೆಯಲ್ಲಿ ಉಚ್ಚಾಟಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಕಿಶೋರ್‌ ಕುಮಾರ್‌ ಕುಂದಾಪುರ ತಿಳಿಸಿದ್ದಾರೆ 

Categories
ಕರಾವಳಿ ಸುದ್ದಿ

ರಾಜ್ಯದಲ್ಲಿ ಕಡು ಎಡಪಂಥೀಯ ಸರಕಾರ

ಉಡುಪಿ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ನಡೆಸುತ್ತಿಲ್ಲ, ಕಡು ಉಗ್ರ ಎಡಪಂಥೀಯರು ಸರ್ಕಾರ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್‌ ಸಂತೋಷ್‌ ಆರೋಪಿಸಿದ್ದಾರೆ. ಅವರು ಗುರುವಾರ ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಘಟ ನಾಯಕರ ಸಮಾವೇಶದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯ ಬದಲು, ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೆ ತರುವುದಾಗಿ ಘೋಷಿಸಿದೆ. ತನ್ನ ಶಿಕ್ಷಣ ನೀತಿಯನ್ನು ರಚಿಸಲು ಹಿಂದು ವಿರೋಧಿ ಮತ್ತು ರಾಷ್ಟ್ರೀಯತೆಯ ವಿರೋಧಿಗಳನ್ನು ನಿಯೋಜಿಸಿದ್ದಾರೆ ಆದರೆ ವರ್ಷ ಕಳೆದರೂ, ಶಿಕ್ಷಣ ನೀತಿ ಇನ್ನು ರಚನೆಯಾಗಿಲ್ಲ. ಇಡೀ ದೇಶದಲ್ಲಿಯೇ ಶಿಕ್ಷಣ ವೇಗದಿಂದ ಸಾಗುತ್ತಿದ್ದರೂ, ರಾಜ್ಯದಲ್ಲಿ ಎನ್‌ಇಪಿಯೂ ಇಲ್ಲ, ಎಸ್‌ಇಪಿಯೂ ಇಲ್ಲ ಎಂದು  ಅಸಮಾಧಾನ ವ್ಯಕ್ತಪಡಿಸಿದರು

ಸಿಎಂ ಸಿದ್ದರಾಮಯ್ಯ ಅವರಿಗೆ ಸ್ಥಾನ ಉಳಿಸಿಕೊಳ್ಳುವ ಮತ್ತು ಡಿ.ಕೆ.ಶಿವಕುಮಾ‌ರ್ ಅವರಿಗೆ ಅದನ್ನು ಅತಿಕ್ರಮಿಸಿಕೊಳ್ಳುವ ಹೋರಾಟವೇ ಮುಖ್ಯವಾಗಿದೆ. ಜೂ. 4 ರಂದು ಇವರಿಬ್ಬರ ಕನಸುಗಳಿಗೆ ಜನರು ಎಳ್ಳು ನೀರು ಬಿಡಲಿದ್ದಾರೆ ಎಂದವರು ಭವಿಷ್ಯ ನುಡಿದರು.

ಬಿಜೆಪಿ ಶಾಸಕರನ್ನು ಬೇಡ, ಕಾಂಗ್ರೆಸ್ ಶಾಸಕರನ್ನೇ ಕೇಳಿದರೂ ಅನುದಾನ ಬಿಡಿ ಸಿಬ್ಬಂದಿಗೆ ಸಂಬಳ ಕೊಡುವುದಕ್ಕೂ ಅನುದಾನ ಬಂದಿಲ್ಲ ಎನ್ನುತ್ತಿದ್ದಾರೆ. ಸರ್ಕಾರದ ಗ್ಯಾರಂಟಿಯ ಅಕ್ಕಿ ಪೂರೈಕೆ ನಿಂತಿದೆ. ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಉಳಿದ ಗ್ಯಾರಂಟಿಗಳೂ ನಿಲ್ಲುತ್ತವೆ. ಕರ್ನಾಟಕದ ಸ್ಥಿತಿಯೂ ತೆಲಂಗಾಣದಂತಾಗುತ್ತದೆ ಎಂದವರು ಹೇಳಿದರು

ಈ ಎಲ್ಲ ಗೊಂದಲಗಳ ಹಿನ್ನಲೆಯಲ್ಲಿ ರಾಜ್ಯದಲ್ಲಿ ಬದಲಾವಣೆ ತರಬೇಕಾದರೆ ವಿಧಾನ ಪರಿಷತ್ ನಲ್ಲಿ. ಬಿಜೆಪಿ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಚುನಾವಣೆಯನ್ನು ಹಿಂದೆಂದಿಗಿಂತಲೂ ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದರು.

ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಕಿಶೋರ್‌ಕುಮಾರ್ ಕುಂದಾಪುರ, ಪರಿಷತ್ ವಿಪಕ್ಷ ನಾಯಕ ಕೋಟ al ಶ್ರೀನಿವಾಸ್ ಪೂಜಾರಿ, ಶಾಸಕರಾದ ಯಶ್ವಾಲ್ ಸುವರ್ಣ, ವಿ. ಸುನೀಲ್ ಕುಮಾರ್, ಗುರುರಾಜ್‌ ಶೆಟ್ಟಿ, ಗಂಟಿಹೊಳೆ, ಮಂಗಳೂರು ವಿಭಾಗ ಪ್ರಭಾರಿ ಕಿದಿಯೂರು ಉದಯ್ ಕುಮಾರ್‌ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿಸುರೇಶ್ ನಾಯಕ್, ಮುಖಂಡ ಪ್ರಮೋದ್ ಮಧ್ವರಾಜ್, ವಿಕಾಸ್ ಪುತ್ತೂರು ಉಪಸ್ಥಿತರಿದ್ದರು. ಜಿ.ಪ್ರ.ಕಾರ್ಯದರ್ಶಿ ದಿನಕರ್‌ಶೆಟ್ಟಿ  ಹೆರ್ಗ ಸ್ವಾಗತಿಸಿದರು. ರೇಷ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು

Categories
ರಾಜ್ಯ ಸುದ್ದಿ

ಜರ್ಮನಿಯಿಂದ ಮರಳಿದ ಪ್ರಜ್ವಲ್‌ ಅರೆಸ್ಟ್

ಬೆಂಗಳೂರು : ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ವಿದೇಶದಲ್ಲಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ 34 ದಿನಗಳ ಅಜ್ಞಾತವಾಸಕ್ಕೆ ಶುಕ್ರವಾರ ಅಂತಿಮ ತೆರೆ ಬೀಳಲಿದ್ದು, ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಡರಾತ್ರಿ ಅವರು ಬಂದಿಳಿದಿದ್ದಾರೆ. ಗುರುವಾರ ಮಧ್ಯಾಹ್ನ 3.30ಕ್ಕೆ ಜರ್ಮನಿಯ ಮ್ಯೂನಿಕ್ ನಗರದಿಂದ ಬೆಂಗಳೂರಿಗೆ ಹೊರಟ ವಿಮಾನದಲ್ಲಿ ಪ್ರಜ್ವಲ್ ಪ್ರಯಾ ಣಿಸಿದ್ದು, ಕೆಐಎಗೆ ರಾತ್ರಿ 12.30ಕ್ಕೆ ವಿಮಾನ ಬಂದಿಳಿದಿದೆ. ವಿಮಾನ ನಿಲ್ದಾಣದಲ್ಲೇ ಪ್ರಜ್ವಲ್ ಅವರನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ವಶಕ್ಕೆ ಪಡೆದಿದ್ದು ನ್ಯಾಯಾಲಯದ ಮುಂದೆ ಶುಕ್ರವಾರ ಅವರನ್ನು ಹಜರುಪಡಿಸಿ ಬಂಧನಕ್ಕೊಳಪಡಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5126

ಕ್ರೋಧಿ ಸಂವತ್ಸರ

ಉತ್ತರಾಯಣ

ವಸಂತ ಋತು

ವೈಶಾಖ ಮಾಸ

ಕೃಷ್ಣ ಪಕ್ಷ

ಶತಭಿಷೆ : ನಕ್ಷತ್ರ

ಅಷ್ಟಮಿ : ತಿಥಿ

31.05.2024

ಶುಕ್ರವಾರ

ಈ ದಿನ ಎಲ್ಲರಿಗೂ ಶುಭವಾಗಲಿ