“ಅಕ್ಷಯವಾಗಬೇಕಾದ ಅಕ್ಷಯ ತೃತೀಯಾ”

ಬೆಂಗಳೂರು : ಮಂಗಳೂರಿನ ಕುಡುಪುವಿನಲ್ಲಿ ನಡೆದಿರುವ ಅಪಚಿತ ವ್ಯಕ್ತಿಯ ಸಾವು ಪ್ರಕರಣ ಆತ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಕ್ಕೆ ಸಿಟ್ಟುಕೊಂಡ ಉದ್ರಿಕ್ತರ ಗುಂಪು ಹಲ್ಲೆ ನಡೆಸಿದ್ದರಿಂದ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಗೃಹ ಸಚಿವ ಡಾ| ಜಿ.ಪರಮೇಶ್ವರ್ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಅಪರಿಚಿತ ವ್ಯಕ್ತಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಕ್ಕೆ ಸಿಟ್ಟಿಗೆದ್ದ ಉದ್ರಿಕ್ತರ ಗುಂಪು ಆತನ ಮೇಲೆ ಹಲ್ಲೆ ನಡೆಸಿದೆ. ನಂತರ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಮೃತ ವ್ಯಕ್ತಿಯ ಹೆಸರು, ಹಿನ್ನೆಲೆ ಗೊತ್ತಾಗಿಲ್ಲ. ಹೊರ ರಾಜ್ಯದವನು ಇರಬೇಕೆಂದು ಹೇಳಲಾಗುತ್ತಿದೆ. ಘಟನೆ ಸಂಬಂಧ ಸ್ಥಳೀಯ ಪೊಲೀಸರು ಸುಮಾರು ಹತ್ತು, ಹನ್ನೆರಡು ಜನರನ್ನು ಬಂಧಿಸಿ ತನಿಖೆ ನಡೆಸಿದ್ದಾರೆ. ಘಟನೆ ಹಿಂದೆ ನಿರ್ದಿಷ್ಟವಾಗಿ ಯಾರಿದ್ದಾರೆಂದು ಗೊತ್ತಾಗಿಲ್ಲ. ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ. ಅಪರಿಚಿತ ವ್ಯಕ್ತಿಯ ಹಿನ್ನೆಲೆ ಪತ್ತೆಗೂ ಪೊಲೀಸರು ತಂಡ ರಚಿಸಿದ್ದಾರೆ ಎಂದು ವಿವರಿಸಿದರು.
ಬೆಂಗಳೂರು : ಯುದ್ಧದಿಂದ ಎರಡೂ ಕಡೆಯ ಸೇನೆಗೆ ಅಪಾರ ನಾಶವಾಗುತ್ತದೆ. ಹೀಗಾಗಿ ಸಜ್ಜನರಿಗೆ ಹಾನಿಯಾಗದಂತೆ ದುಷ್ಟರ ಸಂಹಾರ ಮಾಡಿದ ಪರಶುರಾಮ ದೇವರಂತೆ ಸರ್ಕಾರವು ದುಷ್ಟರನ್ನು ಹುಡುಕಿ ಹುಡುಕಿ ಸಂಹಾರ ಮಾಡಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಮಂಗಳವಾರ ರಾಜಾಜಿನಗರದ ರಾಮಮಂದಿರದಲ್ಲಿ ಪರಶುರಾಮ ಜಯಂತಿ, ಸೈನಿಕರು ಸುರಕ್ಷತೆಗಾಗಿ ಯಜ್ಞ ಹಾಗೂ ಶೋಭಾಯಾತ್ರೆಯಲ್ಲಿ ಮಾತನಾಡಿದರು. ಲೋಕಕಲ್ಯಾಣಕ್ಕಾಗಿ ಪರಶುರಾಮ ದೇವರು ಹುಡುಕಿ ಹುಡುಕಿ ದುಷ್ಟರನ್ನು ಸಂಹರಿಸಿದರು. ನಮ್ಮ ಸರ್ಕಾರ ಅದೇ ರೀತಿ ದುಷ್ಟರನ್ನು ಕೂಂಬಿಂಗ್ ಮಾಡಿ ಸಂಹರಿಸಬೇಕು. ದುಷ್ಟರ ವಿರುದ್ಧ ಹೋರಾಡಲು ತೆರಳುತ್ತಿರುವ ನಮ್ಮ ಸೈನಿಕರಿಗೆ ಪರಶುರಾಮನಂತಹ ಶಕ್ತಿ, ಧೈರ್ಯ ಸಿಗಲಿ ಎಂಬ ಆಶಯದೊಂದಿಗೆ ಯಜ್ಞ ಮಾಡಿದ್ದೇವೆ ಎಂದರು.
ನವದೆಹಲಿ : ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮುಂಬರುವ ಮೇ 29 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂ ದ್ರಕ್ಕೆ (ಐಎಸ್‌ಎಸ್) ಪ್ರಯಾಣಕೈಗೊಳ್ಳಲಿದ್ದಾರೆ. ಇದರೊಂದಿಗೆ ಭಾರತದ ಬಾಹ್ಯಾಕಾಶಯಾನದ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಾಣಕ್ಕೆ ಕ್ಷಣಗಣನೆ ಆರಂಭವಾಗಿದೆ.
ಐಎಸ್ ಎಸ್‌ಗೆ ಇದು ಭಾರತೀಯರೊಬ್ಬರ ಚೊಚ್ಚಲ ಪಯಣವಾಗಿದೆ. ಜೊತೆಗೆ 40 ವರ್ಷಗಳಲ್ಲೇ ಮೊದಲ ಬಾರಿಗೆ ಭಾರತೀಯರೊಬ್ಬರು ಬಾಹ್ಯಾಕಾಶ ಪ್ರಯಾಣ ಮಾಡುತ್ತಿದ್ದಾರೆ.
ಮೇ 29ರಂದು ಅಮೆರಿಕದ ಆ್ಯಕ್ಸಿಯಮ್ ಸ್ಪೇಸ್ ಸಂಸ್ಥೆಯ ನೌಕೆಯು ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಹಾಗೂ ಹಂಗೇರಿ, ಪೋಲೆಂಡ್ ದೇಶದ ಮೂವರನ್ನು ಹೊತ್ತು ಗಗನಕ್ಕೆ ನೆಗೆಯಲಿದೆ
ಅಯೋಧ್ಯೆ : ಬರೋಬ್ಬರಿ 497 ವರ್ಷಗಳ ಕಾಯುವಿಕೆಯ ನಂತರ ಅಯೋಧ್ಯೆಯ ಪುಣ್ಯ ನೆಲವಾದ ರಾಮ ಜನ್ಮಭೂಮಿಯಲ್ಲಿ ಭವ್ಯವಾದ ಮಂದಿರವು ಜೂನ್‌ಗೆ ಪೂರ್ಣಗೊಳ್ಳಲಿದೆ. ಮಂಗಳವಾರ ಮಂದಿರದ ಶಿಖರದ ಮೇಲೆ ಬೃಹತ್ ಧರ್ಮ ಧ್ವಜಸ್ತಂಭ ಸ್ಥಾಪಿಸಲಾಗಿದೆ.
ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ರಾಮ ಮಂದಿರ ನಿರ್ಮಾಣ ಕಾರ್ಯವು ಜೂನ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ. ‘ಜನ್ಮಭೂಮಿ ರಾಮ ಮಂದಿರದ ನಿರ್ಮಾಣ ಕಾರ್ಯವು 2020ರಲ್ಲಿ ಪ್ರಾರಂಭವಾಯಿತು. ಅದೀಗ ಅಂತಿಮ ಹಂತದಲ್ಲಿದೆ. ಮಂದಿರದ ಗರ್ಭಗುಡಿ ಮತ್ತು ಮಂದಿರ ರಚನೆಯು ಈಗಾಗಲೇ ಪೂರ್ಣಗೊಂಡಿದೆ. ಈಗ ಬಾಹ್ಯ ನೋಟವನ್ನು ಅಂತಿಮಗೊಳಿಸಲಾಗುತ್ತಿದೆ.
ಮಂಗಳವಾರ ಬೆಳಗ್ಗೆ ಮಂದಿರದ ಶಿಖರದ ಮೇಲೆ ಧ್ವಜಸ್ತಂಭವನ್ನು ಸ್ಥಾಪಿಸಲಾಯಿತು. ಈ ಪವಿತ್ರ ಕಾರ್ಯವು ವೇದ ಪಠಣ ಮತ್ತು ವಿಶೇಷ ಪ್ರಾರ್ಥನೆಗಳೊಂದಿಗೆ ಪೂರ್ಣಗೊಂಡಿತು. ಮುಂಜಾನೆ 6.30 ರ ಸುಮಾರಿಗೆ ಎಂಜಿನಿಯರ್‌ಗಳು 160 ಅಡಿ ಎತ್ತರದ ಶಿಖರದ ಮೇಲಿದ್ದರು. ಅಲ್ಲಿ 2 ಕ್ರೇನ್ ಗಳ ಸಹಾಯದಿಂದ ಧ್ವಜಸ್ತಂಭವನ್ನು ಟ್ರಾಲಿಯ ಮೇಲಿನಿಂದ ಮೇಲಕ್ಕೆತ್ತಲಾಯಿತು
ನವದೆಹಲಿ: ಪಹಲ್ಲಾಂ ದಾಳಿಯಲ್ಲಿ ಪಾಕಿಸ್ತಾನಿ ಸೇನೆ ಮತ್ತು ಗುಪ್ತಚರ ಸಂಸ್ಥೆ ಐಎಸ್‌ಐ ನೇರವಾಗಿ ಭಾಗಿ ಯಾಗಿರುವುದನ್ನು ಆರಂಭಿಕ ತನಿಖೆ ದೃಢಪಡಿಸಿದೆ. ದಾಳಿಯ ಪ್ರಮುಖ ಸಂಚುಕೋರನನ್ನು ಪಾಕಿಸ್ತಾನಿ ಪ್ರಜೆ ಹಶೀಮ್ ಮೂಸಾ ಎಂದು ಗುರುತಿಸಲಾಗಿದೆ. ಜೊತೆಗೆ, ಈತ ಪಾಕ್ ಸೇನೆಯ ವಿಶೇಷ ಪಡೆಯ ಮಾಜಿ ಪ್ಯಾರಾ ಕಮಾಂಡೋ ಎಂದು ತಿಳಿದುಬಂದಿದೆ.
ಪಾಕಿಸ್ತಾನದ ಉಗ್ರರಿಗೆ ನೆರವು ನೀಡುತ್ತಿದ್ದ ಶಂಕಿತ 15 ಕಾಶ್ಮೀರಿ ಭೂಗತ ಕಾರ್ಯಕರ್ತರ ವಿಚಾರಣೆ ವೇಳೆ ಮೂಸಾನ ಸೇನಾ ಹಿನ್ನೆಲೆ ಬಯಲಾಗಿದೆ. ಆತ ಈಗ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ದಾ ಜೊತೆ ಕೆಲಸ ಮಾಡುತ್ತಿದ್ದಾನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯರಲ್ಲದವರು ಮತ್ತು ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ನಡೆಸಲು ಉಗ್ರ ಸಂಘಟನೆಯಿಂದ ಆತನನ್ನು ಕಳುಹಿಸಲಾಗಿದೆ ಎಂದು ವರದಿಗಳು ತಿಳಿಸಿವೆ
ನವದೆಹಲಿ : 26 ಪ್ರವಾಸಿಗರ ಬಲಿ ಪಡೆದ ಜಮ್ಮು-ಕಾಶ್ಮೀರದ ಪಹಲ್ಗಾಂ ನರಮೇಧ ಪ್ರಕರಣದಲ್ಲಿ ಯಾವುದೇ ನಿರ್ಧಾರಕೈಗೊಳ್ಳುವ ಪೂರ್ಣ ಅಧಿಕಾರವನ್ನು ಭಾರತೀಯ ಸೇನೆಗೆ ನೀಡುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಇಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಯಾರ ವಿರುದ್ಧ? ಹೇಗೆ ? ಯಾವ ರೀತಿ ದಾಳಿ ನಡೆಸಬೇಕು ಎಂಬುದನ್ನು ನೀವೇ ನಿರ್ಧರಿಸಿ ಎಂದು ಸೇನೆಗೆ ಪೂರ್ಣ ಅಧಿಕಾರ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
‘ಪಹಲ್ಲಾಂ ದಾಳಿ ರೂವಾರಿಗಳಿಗೆ ಊಹಿಸಲಾಗದ ರೀತಿಯಲ್ಲಿ ತಕ್ಕ ಶಿಕ್ಷೆ ನೀಡಲಾಗುವುದು ಎಂದು ಇತ್ತೀಚೆಗೆ ಮೋದಿ ಗುಡುಗಿದ್ದರು. ಬಳಿಕ, ಭಾರತ ನಮ್ಮ ಮೇಲೆ ದಾಳಿ ನಡೆಸುವುದು ಬಹುತೇಕ ಖಚಿತ. ಅದನ್ನು ತಡೆಯಲು ಸಾಧ್ಯವೇ ಇಲ್ಲ ಎಂದು ಸ್ವತಃ ಪಾಕಿಸ್ತಾನದ ರಕ್ಷಣಾ ಸಚಿವ ಸ್ವಾಜಾ ಆಸೀಫ್ ಹೇಳಿದ್ದರು. ಇದರ ಬೆನ್ನಲ್ಲೇ ಭಾರತ ಸರ್ಕಾರ ಇಂಥದ್ದೊಂದು ಮಹತ್ವದ ದಿಟ್ಟ ಹೆಜ್ಜೆ ಇರಿಸಿದೆ.
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಸಶಸ್ತ್ರ ಪಡೆಗಳ ಮುಖ್ಯಸ್ಥ ಅನಿಲ್ ಚೌಹಾಣ್ ಸೇರಿದಂತೆ ಮೂರು ಸೇನೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಕುಂದಾಪುರ : ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ನೇಚರ್ ಕ್ಲಬ್ ಜಂಟಿ ಆಶ್ರಯದಲ್ಲಿ ರೀಫ್ ವಾಚ್ ಮರೈನ್ ಸಂಸ್ಥೆ ಸಹಯೋಗದೊಂದಿಗೆ, ಎಚ್.ಸಿಎಲ್ ಫೌಂಡೇಶನ್ ಹಾಗೂ ಸ್ಥಳೀಯ ಭಜನಾ ಮಂಡಳಿ ಮತ್ತು ಮೀನುಗಾರರ ಸಹಕಾರದೊಂದಿಗೆ ಏಪ್ರಿಲ್ 22ರಂದು ವಿಶ್ವ ಭೂಮಿಯ ದಿನ ಆಚರಣೆಯ ಅಂಗವಾಗಿ ಕಂಚುಗೋಡಿನ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ರೀಫ್ ವಾಚ್ ಸಂಸ್ಥೆಯವರು ತೇಲುವ ತುಂಡು ಬಲೆಗಳಿಂದ ಸಮುದ್ರ ಮತ್ತು ಭೂಮಿಯ ಮೇಲಿರುವ ಪ್ರಾಣಿ ಪಕ್ಷಿಗಳು ಸಿಕ್ಕಿಹಾಕಿ ಸಾಯುವುದನ್ನು ತಡೆಯಲು ಮತ್ತು ಪರಿಸರ ಸಂರಕ್ಷಣೆಗಾಗಿ ಕಡಲ ತೀರದಲ್ಲಿ ಕಸದಂತೆ ಬಿದ್ದಿದ ರಾಶಿ ರಾಶಿ ನಿರೂಪಯುಕ್ತ ಬಲೆಗಳನ್ನು ಖರೀದಿಸಿದರು. ವಿಶ್ವ ಭೂಮಿ ದಿನ ಆಚರಣೆಯ ಪ್ರಸಿದ್ಧ ಘೋಷಣೆಯಾದ “ಕಡಿಮೆ ಮಾಡಿ, ಮರುಬಳಕೆ ಮಾಡಿ ಎಂಬ ಘೋಷಣೆಯಂತೆ ತುಂಡು ವ್ಯರ್ಥ ಬಲೆಯಿಂದ ತಯಾರಿಸಿದ ಅತ್ಯುತ್ತಮ ಬೆಂಚ್ ಟೇಬಲ್ ಮತ್ತು ಬ್ಯಾಗ್‌ಳನ್ನು ಸಮುದಾಯದ ಬಳಕೆಗಾಗಿ ಕಂಚುಗೋಡಿನ ಕಡಲ ತೀರದಲ್ಲಿ ಹಾಕಿಸಿ ಅದನ್ನು ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯಕ್ ಉದ್ಘಾಟಿಸಿದರು. ರೀಫ್ ವಾಚ್ ಮರೈನ್ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಅರ್ಪಿತ್ ದತ್ತ ಕಡಲಾಮೆ ಸಂರಕ್ಷಣೆ ಹಾಗೂ ಕಡಲ ಸ್ವಚ್ಛತೆ ಕುರಿತು ಮಾತನಾಡಿದರು.
ಕಾಲೇಜಿನ ರಾಷ್ಟಿçÃಯ ಸೇವಾ ಯೋಜನ ಘಟಕ IIರ ರಡರ ಕಾರ್ಯಕ್ರಮ ಅಧಿಕಾರಿ ದೀಪ ಪೂಜಾರಿ, ನೇಚರ್ ಕ್ಲಬ್ ಸಂಯೋಜಕ ಸತೀಶ್ ಕಾಂಚನ್, ಶ್ರೀರಾಮ ಭಜನಾ ಮಂದಿರಾ ಕಂಚುಗೋಡು ಅಧ್ಯಕ್ಷ ನಾಗೇಶ್ ಖಾರ್ವಿ, ವಿಶ್ವನಾಥ್ ಖಾರ್ವಿ, ನಾಗರಾಜ ಖಾರ್ವಿ, ರಮೇಶ್ ಖಾರ್ವಿ, ಉರಗ ತಜ್ಞ ನಾಗರಾಜ ಖಾರ್ವಿ ಹಾಗೂ ಕಂಚುಗೋಡು ಭಾಗದ ಮೀನುಗಾರರು, ಎನ್.ಎಸ್.ಎಸ್. ಸ್ವಯಂ ಸೇವಕರು ಉಪಸ್ಥಿತರಿದ್ದರು.
ಪ್ರಕಾಶ್ ಖಾರ್ವಿ ಸ್ವಾಗತಿಸಿ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ಡಾ| ಪ್ರಶಾಂತ್ ಕಾರ್ಯಕ್ರಮ ಸಂಯೋಜಿಸಿ, ವೆಂಕಟೇಶ್ ಶೇರೆಗಾರ್ ನಿರೂಪಿಸಿ, ವಂದಿಸಿದರು.
ಕೋಟ : ಜನತಾ ಸಮೂಹ ಸಂಸ್ಥೆಯ ಸಾಮಾಜಿಕ ಬದ್ದತೆಯ ಅಡಿಯಲಿ ಕಾರ್ಯ ನಿರ್ವಹಿಸುತ್ತಿರುವ ಗೀತಾನಂದ ಪೌಂಡೇಶನ್ ಮತ್ತು ಜನತಾ ಸಿಬ್ಬಂದಿಗಳು ಆನಂದ ಸಿ ಕುಂದರ್ ಅವರ ಮಾರ್ಗದರ್ಶನದಂತೆ ಪಡುಕರೆಯಲ್ಲಿ 51ನೇ ಭಾನುವಾರದ ಸ್ವಚ್ಛತೆ ಸೇವೆ ನಡೆಸಿದರು. ಈ ಸಂದರ್ಭದಲ್ಲಿ ಕೋಟ ಪಡುಕೆರೆಯ ಸಮುದ್ರ ತೀರವನ್ನು ಸ್ವಚ್ಛಗೊಳಿಸಿ ಕಸವನ್ನು ಸಂಗ್ರಹಿಸಲಾಯಿತು.
ಸ್ವಚ್ಛತೆ ಸೇವೆಯ ನಂತರ ಕಡಲ ತೀರದಲ್ಲಿ ಸರಳ ಕಾರ್ಯಕ್ರಮದಲ್ಲಿ ಪರಿಸರ ಜಾಗೃತಿಯ ಬೃಹತ್ ಬಿತ್ತಿ ಚಿತ್ರವನ್ನು ಸಂಸ್ಥೆಯ ಪ್ರವರ್ತಕರಾದ ಆನಂದ ಸಿ ಕುಂದರ್ ಅವರ 77ನೇ ಹುಟ್ಟು ಹಬ್ಬದ ಮತ್ತು 50 ವಾರಗಳ ಆನಂದ ಸೃಷ್ಟಿ ಕಾರ್ಯಕ್ರಮದಡಿ ಕುಂದರ್ ಅಮೃತ ಹಸ್ತದಿಂದ ಲೋಕಾರ್ಪಣೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಕೋಟದ ವಿವೇಕ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲರಾದ ಜಗದೀಶ್ ನಾವಡ, ಜನತಾ ಸಮೂಹ ಸಂಸ್ಥೆಗಳ ನಿರ್ದೇಶಕರುಗಳಾದ ಪ್ರಶಾಂತ್ ಕುಂದರ್, ರಕ್ಷಿತ್ ಕುಂದರ್, ಕೋಟ ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ, ಸದಸ್ಯರಾದ ಪ್ರದೀಪ್ ಪಡುಕೆರೆ, ಸ್ಥಳೀಯ ಮತ್ಸ್ಯೋದ್ಯಮಿ ಪ್ರಭಾಕರ್ ಎಚ್ ಕುಂದರ್, ಗೀತಾನಂದ ಟ್ರಸ್ಟ್ ಸದಸ್ಯರುಗಳಾದ ದಿವ್ಯಲಕ್ಪ್ರಷ್ಶಾಂಮೀತ್ ಕುಂದರ್, ವೈಷ್ಣವಿ ರಕ್ಷಿತ್ ಕುಂದರ್, ಮತ್ತು ಜನತಾ ಸಂಸ್ಥೆಯ ಎ.ಜಿ.ಎಂ ಶ್ರೀನಿವಾಸ್ ಕುಂದರ್, ವ್ಯವಸ್ಥಾಪಕರುಗಳಾದ ಮಿಥುನ್ ಕುಮಾರ್, ಸಂತೋಷ್ ಉಪಸ್ಥಿತರಿದ್ದರು. ಗೀತನಾದ ಸಂಸ್ಥೆಯ ದೀಕ್ಷಿತ ನಿರೂಪಿಸಿ ರವಿಕಿರಣ್ ಕೋಟ ವಂದಿಸಿದರು.