Categories
ಬ್ರೇಕಿಂಗ್ ನ್ಯೂಸ್

ಹಣ ಖಾತೆಗೆ ಜಮಾ ಆಗದೆ ಮೋಸ ಮಾಡಿದ ವಿಷಯ ಬಹಿರಂಗ

ಹೊಸಂಗಡಿ : ಗ್ರಾಮದ ಶ್ರೀಕೃಷ್ಣ ಜ್ಯೂವೆಲ್ರಿಯರಿಗೆ ಬಂದ ವ್ಯಕ್ತಿ, ತನ್ನನ್ನು ಸಂತೋಷ ಎಂದು ಪರಿಚಯಿಸಿಕೊಂಡು, ಉಡುಗೊರೆಯ ನೆಪದಲ್ಲಿ ಎರಡು ಚಿನ್ನದ ಉಂಗುರಗಳನ್ನು ಖರೀದಿಸಿದ್ದ. ಉಂಗುರಗಳ ಮೌಲ್ಯ 30 ಸಾವಿರ ರೂಪಾಯಿ. ಬ್ಯಾಂಕ್‌ Neft ಮೂಲಕ ಹಣ ವರ್ಗಾವಣೆ ಮಾಡಿರುವುದಾಗಿ ಮೊಬೈಲ್‌ನಲ್ಲಿ ತೋರಿಸಿ ಉಂಗುರಗಳನ್ನು ತೆಗೆದುಕೊಂಡು ಹೋದ ಆತ, ನಂತರ ಹಣ ಖಾತೆಗೆ ಜಮಾ ಆಗದೆ ಮೋಸ ಮಾಡಿದ ವಿಷಯ ಬಹಿರಂಗವಾಗಿದೆ.

ಪುನಃ ವಿಚಾರಿಸಿದಾಗ ನಾಳೆ ಕೊಡುತ್ತೇನೆ, ನಾಡಿದ್ದು ಕೊಡುತ್ತೇನೆ ಎಂದು ತಪ್ಪಿಸಿಕೊಂಡ ಆತ, ವಾಸ್ತವವಾಗಿ ಪ್ರವೀಣ ಎಂಬುದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವಂಚನೆ ಮಾಡಿದ ಆರೋಪದಲ್ಲಿ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಕಾರಿನೊಂದಿಗೆ ತಲೆಮರೆಸಿಕೊಂಡಿದ್ದಾನೆ.

ಆರೋಪಿಯನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಹಾಗೂ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Categories
ಧಾರ್ಮಿಕ

47ನೇ ಶ್ರೀ ಶಾರದೋತ್ಸವ ಆಚರಣೆ

ಕುಂದಾಪುರ: ತಾಲೂಕಿನ ಶ್ರೀ ಸೀತಾ ರಾಮಚಂದ್ರ ದೇವಸ್ಧಾನದಲ್ಲಿ ರಾಮಕ್ಷತ್ರಿಯ ಮಹಿಳಾ ಮಂಡಳಿ ವತಿಯಿಂದ ಶ್ರೀ ಶಾರದಾ ದೇವಿಯ ವಿಗ್ರಹವನ್ನು ತಂದು ಪ್ರತಿಷ್ಠಾಪಿಸಲಾಯಿತ್ತು.

ಬೆಳಿಗ್ಗೆ 9.೦೦ಕ್ಕೆ ಗಣಪತಿ ಪ್ರಾರ್ಥನೆ, ದುರ್ಗಾಹೋಮ, ಸ್ವಸ್ತಿ ಪಂಚಗವ್ಯ, ಪುರಸ್ಸರ ಪುಣ್ಯಾಹ ವಾಚನ, ಗಣಯಾಗ ನೆರವೇರಿತ್ತು, ಮಧ್ಯಾಹ್ನ 12.00ಕ್ಕೆ ಸಪ್ತಶತಿ ಪಾರಾಯಣ ಹಾಗೂ ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ ನಂತರದಲ್ಲಿ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೇರವೇರಿತ್ತು.ಸಂಜೆ 6.00ಕ್ಕೆ ಸರಿಯಾಗಿ ಜಿಲ್ಲಾಮಟ್ಟದ ಸಾಂಸ್ಕೃತಿಕ ಸಮೂಹ ನೃತ್ಯ ಸ್ಪರ್ಧೆ ನಡೆಯಿತು.

ಕಾರ್ಯಕ್ರಮದಲ್ಲಿ ರಾಮಕ್ಷತ್ರಿಯ ಸಂಘ(ರಿ.), ರಾಮಕ್ಷತ್ರಿಯ ಯುವಕ ಮಂಡಳಿ ಹಾಗೂ ಮಹಿಳಾ ಮಂಡಳಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

Categories
ಬ್ರೇಕಿಂಗ್ ನ್ಯೂಸ್

ಕಾರು ಚಾಲಕ ಸ್ಕೂಟಿಗೆ ಢಿಕ್ಕಿ : ಬೈಕ್ ಎಳೆದೊಯ್ದ ಘಟನೆ

ಶಿವಮೊಗ್ಗ : ಕುಡಿದ ಮತ್ತಿನಲ್ಲಿ ಕಾರು ಚಾಲಕ ಸ್ಕೂಟಿಗೆ ಗುದ್ದಿ ಅರ್ಧ ಕಿ.ಮೀ. ಬೈಕ್ ಎಳೆದೊಯ್ದ ಘಟನೆ ಶಿವಮೊಗ್ಗ ನಗರದಲ್ಲಿ  ರಾತ್ರಿ ನಡೆದಿದೆ.ಶಿವಮೊಗ್ಗ ನಗರದ ಟ್ಯಾಂಕ್ ಮೊಹಲ್ಲದಿಂದ ಸವಳಂಗ ರಸ್ತೆವರೆಗೂ ಸ್ಕೂಟಿಯನ್ನು ಕಾರು ಎಳೆದೊಯ್ದಿದೆ. ಈ ವೇಳೆ ಸ್ಥಳೀಯರು ಕಾರನ್ನ ತಡೆದು ಕಾರು ಚಾಲಕನಿಗೆ ತರಾಟೆ ತೆಗೆದುಕೊಂಡಿದ್ದಾರೆ. ಅದೃಷ್ಟವಶಾತ್ ಸ್ಕೂಟಿ ಸವಾರ ಪಾರಾಗಿದ್ದು ಸ್ಕೂಟಿ ಸಂಪೂರ್ಣ ಜಖಂ ಗೊಂಡಿದೆ.

ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ ನೀಡಿ ಕಾರು ಹಾಗೂ ಕಾರು ಚಾಲಕನನ್ನ ವಶಕ್ಕೆ ಪಡೆದಿದ್ದಾರೆ. ಕಾರು ಚಾಲಕ ಕುಡಿದ್ದಿದ್ದ ಎಂದು ತಿಳಿದುಬಂದಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Categories
ಬ್ರೇಕಿಂಗ್ ನ್ಯೂಸ್

ಹಂಚು ಕಿತ್ತು ಒಳನುಗ್ಗಿ ನಗದು ಮತ್ತು ಚಿನ್ನಾಭರಣ ಕಳವು

ಕೋಟ: ಮನೆಯ ಹಿಂಬದಿಯ ಹಂಚು ಕಿತ್ತು ಒಳನುಗ್ಗಿ ನಗದು ಮತ್ತು ಚಿನ್ನಾಭರಣ ಕಳವು ಮಾಡಿದ ಘಟನೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮದ ಕನ್ನುಕೆರೆಯ ಶರತ್‌ ಎಂಬುವರ ಮನೆಯಲ್ಲಿ ನಡೆದಿದೆ.
ಶರತ್ ಅವರು ರಾತ್ರಿ ಊಟ ಮಾಡಿ ಮಲಗಿದ್ದರು. ಬೆಳಿಗ್ಗೆ ಏಳುವಾಗ ಯಾರೋ ಕಳ್ಳರು ಮನೆಯ ಮಾಡಿನ ಹಂಚನ್ನು ತೆಗೆದು ಮನೆ ಒಳಪ್ರವೇಶಿಸಿ ಗೋದ್ರೇಜ್‌ ನಲ್ಲಿದ್ದ ಕೀ ಯನ್ನು ಬಳಸಿ ಗೋದ್ರೇಜ್‌ ನ ಒಳಗಡೆ ಇಟ್ಟಿದ್ದ ರೂಪಾಯಿ 18,000/- ನಗದು, 3 ಗ್ರಾಂ ತೂಕದ ಒಂದು ಚಿನ್ನದ ಉಂಗುರ ಹಾಗೂ ಮಗುವಿನ ಬೆಳ್ಳಿಯ ಬಳೆ, ಕಾಲುಂಗುರ , ಸೊಂಟದ ಉಡಿದಾರ ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Categories
ಬ್ರೇಕಿಂಗ್ ನ್ಯೂಸ್

ಕೆಎಸ್‌ ಆರ್ ಟಿಸಿ ಬಸ್ ಗಳ ಮಧ್ಯೆ ಅಪಘಾತ; 16 ಮಂದಿಗೆ ಗಾಯ

ಉಪ್ಪಿನಂಗಡಿ: ಕೆಎಸ್ ಆರ್ ಟಿಸಿ ಬಸ್ ಗಳ ಮಧ್ಯೆ ಅಪಘಾತ ಸಂಭವಿಸಿ 16 ಮಂದಿಗೆ ಗಾಯಗಳಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು – ಮಂಗಳೂರು ನಡುವಿನ ಶಿರಾಡಿ ಬಳಿ ನಡೆದಿದೆ. ಅಪಘಾತದಿಂದಾಗಿ ಸುಮಾರು 3 ಗಂಟೆ ಕಾಲ ವಾಹನಗಳ ಸಂಚಾರ ವ್ಯತ್ಯಯವಾಗಿತ್ತು.

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಸಾರಿಗೆ ಬಸ್‌ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರಾಜಹಂಸ ಬಸ್‌ಗಳು ಮಧ್ಯೆ ಗುಂಡ್ಯ ಬಳಿ ಅಪಘಾತವಾಗಿವೆ. ಈ ವೇಳೆ ಬಸ್‌ನಲ್ಲಿದ್ದ 9 ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜಹಂಸದಲ್ಲಿದ್ದ 7 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನೆಲ್ಯಾಡಿ ಹೊರಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ವಾಹನಗಳ ಸಂಚಾರ ಸುಗಮಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

Categories
ಧಾರ್ಮಿಕ

ಶಾರದಾ ಪೂಜೆ ಆರಂಭ, ಶಾಸಕ ಯಶ್‌ಪಾಲ್ ಸುವರ್ಣ ಭೇಟಿ

ಉಡುಪಿ: ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಪುರೋಹಿತ ಗಣೇಶ್ ಸರಳಾಯ, ವೇಮೂ ವಿಖ್ಯಾತ್ ಭಟ್ ನೇತೃತ್ವದಲ್ಲಿ ನೆರವೇರುತ್ತಿರುವ ನವರಾತ್ರಿ ಮಹೋತ್ಸವ ಅಂಗವಾಗಿ ಸೋಮವಾರ ಶಾರದಾ ಪೂಜೆಗೆ ಚಾಲನೆ ನೀಡಲಾಯಿತು.
ದೀಪೇಶ್ ನಾಡರ್ ಮತ್ತು ಮನೆಯವರು ಹಾಗೂ ಜೆಎಂಟಿ ಟ್ರಾವೆಲ್ಸ್‌‌ನ ಮಾಲಕ ಆನಂದ ಬಾಯರಿ ಮತ್ತು ಮನೆಯವರಿಂದ ಜೋಡಿ ಚಂಡಿಕಾಯಾಗ, ಮಣಿಪಾಲದ ಪದ್ಮಿನಿ ರಾಜೇಶ್ ಅವರಿಂದ ದುರ್ಗಾ ನಮಸ್ಕಾರ ಪೂಜೆ ಸಮರ್ಪಿಸಲ್ಪಟ್ಟಿತು. ಕ್ಷೇತ್ರದ ವಿಶೇಷ ಸೇವೆಗಳಲ್ಲಿ ಒಂದಾದ ನೃತ್ಯ ಸೇವೆಯನ್ನು ಕನಿಷ್ಕಾ, ಮೀನಾಲ್, ಸಾನ್ವಿ ಬಿ., ಅಂಶಿಕಾ, ಕೃತಿಕಾ, ಸೌಮ್ಯಾ ಮಧ್ಯಾಹ್ನ ಮತ್ತು ರಾತ್ರಿ ದೇವಿಗೆ ಅಭಿಮುಖವಾಗಿ ಸಮರ್ಪಿಸಿದರು.ಶಾರದಾ ಭಜನ ಮಂಡಳಿ ಕೋಟ, ಸುಬ್ರಹ್ಮಣ್ಯ ಭಜನ ಮಂಡಳಿ, ಅನಂತಪದ್ಮನಾಭ ಭಜನ ಮಂಡಳಿ, ಆಂಜನೇಯ ಭಜನ ಮಂಡಳಿ ಅವರಿಂದ ಭಜನೆ ಸಂಕೀರ್ತನೆ, ಸ್ವಾಾತಿ ಮತ್ತು ಬಳಗ ಕರಂಬಳ್ಳಿ ಅವರಿಂದ ಸುಗಮ ಸಂಗೀತ ನೆರವೇರಿತು. ಕ್ಷೇತ್ರದ ಅಲಂಕಾರ ತಜ್ಞ ಆನಂದ ಬಾಯರಿ ದೇವಿಯನ್ನು ವೀಣಾಪಾಣಿ ಶಾರದೆಯಾಗಿ ಅಲಂಕರಿಸಿದ್ದರು. ಪ್ರಧಾನ ಅರ್ಚಕ ಅನೀಶ್ ಆಚಾರ್ಯ ಮಹಾಪೂಜೆ ನೆರವೇರಿಸಿದರು. ನವಶಕ್ತಿ ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನವರಾತ್ರಿ ಸಂಭ್ರಮಕ್ಕೆ ಮೆರಗು ನೀಡುವಂತೆ ಕ್ಷೇತ್ರದ ಒಳಾಂಗಣ, ಹೊರ ಪ್ರಾಾಂಗಣ, ಪ್ರವೇಶದ್ವಾಾರ, ಮುಖಮಂಟಪ, ಗಾಯತ್ರಿ ಧ್ಯಾನ ಪೀಠ, ಕಪಿಲ ಗೋ ಮಂದಿರ, ಮುಖ್ಯರಸ್ತೆಯಿಂದ ಕ್ಷೇತ್ರದ ದ್ವಾರದವರೆಗೆ ಹಾಗೂ ಕ್ಷೇತ್ರದ ಸುತ್ತಲೂ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ದೇವರ ದರ್ಶನಕ್ಕಾಾಗಿ ಬೆಳಗ್ಗಿನಿಂದ ಸಾವಿರಾರು ಭಕ್ತರು ಧಾವಿಸುತ್ತಿದ್ದಾರೆ. ಬೆಳಗ್ಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಸಾಕಷ್ಟು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.ಕ್ಷೇತ್ರಕ್ಕೆ ಭೇಟಿ ನೀಡಿದ ಶಾಸಕ ಯಶ್‌ಪಾಲ್ ಎ. ಸುವರ್ಣ ಅವರನ್ನು ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರು ಸ್ವಾಗತಿಸಿ ದೇವರ ಅನುಗ್ರಹ ಪ್ರಸಾದ ನೀಡಿ ಗೌರವಿಸಿದರು. ಅನಂತರ ಶಾಸಕರು ಮಾತನಾಡಿ, ಕ್ಷೇತ್ರದಲ್ಲಿ ನವರಾತ್ರಿ ಪರ್ವಕಾಲದಲ್ಲಿ ನಡೆಯುತ್ತಿರುವ ವಿಶೇಷ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅನ್ನಸಂತರ್ಪಣೆಗೆ ಕ್ಷೇತ್ರ ಪ್ರಸಿದ್ಧಿ ಪಡೆಯುತ್ತಿದೆ. ನವರಾತ್ರಿ ಕಾಲದಲ್ಲಿ ಭಕ್ತರೆಲ್ಲರ ಬಯಕೆಯನ್ನು ತಾಯಿ ಈಡೇರಿಸಲಿ ಎಂದು ಪ್ರಾರ್ಥಿಸಿದರು. ಸ್ವಾತಿ ಪ್ರತೀಕ್ ಉಪಸ್ಥಿತರಿದ್ದರು.

Categories
ಅಪರಾಧ ಬ್ರೇಕಿಂಗ್ ನ್ಯೂಸ್

ಅಪಾರ್ಟ್‌ಮೆಂಟ್ ನಲ್ಲಿ ಗಾಂಜಾ ಮಾರಾಟ : 11ಮಂದಿ ಆರೋಪಿ ವಶಕ್ಕೆ

ಮಂಗಳೂರು: ಅಪಾರ್ಟ್‌ಮೆಂಟ್ ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದು, ಸುಮಾರು 12 ಕೆಜಿ 264 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.ಬಂಧಿತ ಆರೋಪಿಗಳಾದ್ದ ಆದ್ಯತ್ ಶ್ರೀಕಾಂತ್, ಮುಹಮ್ಮದ್ ಆಫ್ರಿನ್, ಮುಹಮ್ಮದ್ ಸ್ಮಾನಿದ್, ನಿಬಿನ್ ಟಿ ಕುರಿಯನ್, ಮುಹಮ್ಮದ್ ಕೆ ಕೆ, ಮುಹಮ್ಮದ್ ಹನನ್, ಮುಹಮ್ಮದ್ ಶಮಿಲ್, ಅರುಣ್ ಥಾಮಸ್, ಮುಹಮ್ಮದ್ ನಿಹಾಲ್ ಸಿ, ಮುಹಮ್ಮದ್ ಜಸೀಲ್ ವಿ ಮತ್ತು ಸಿದಾನ್ ಪಿ ಎಂದು ಗುರುತಿಸಲಾಗಿದೆ.

ದಕ್ಷಿಣ ಪೊಲೀಸ್ ಠಾಣೆಯ ಅಪರಾಧ ಪತ್ತೆ ದಳದ ಸಿಬ್ಬಂದಿ, ಮುಖ್ಯ ಪೊಲೀಸ್ ಕಾನ್‌ಸ್ಟೆಬಲ್ ಪುಟ್ಟರಾಮ್ ಸಿ.ಎಚ್ ಮತ್ತು ಪೊಲೀಸ್ ಕಾನ್‌ಸ್ಟೆಬಲ್ ಮಲ್ಲಿಕ್ ಜಾನ್ ಅವರು ಕರ್ತವ್ಯದಲ್ಲಿದ್ದಾಗ, ಕೇರಳದ ವಿದ್ಯಾರ್ಥಿಗಳ ಗುಂಪೊಂದು – ಆದ್ಯತ್ ಶ್ರೀಕಾಂತ್, ಮುಹಮ್ಮದ್ ಆಫ್ರಿನ್, ಮುಹಮ್ಮದ್ ಸ್ಮಾನಿದ್ ಮತ್ತು ಇತರರು – ನಿಷೇಧಿತ ಮಾದಕ ದ್ರವ್ಯ ಗಾಂಜಾವನ್ನು ವಾಣಿಜ್ಯ ಪ್ರಮಾಣದಲ್ಲಿ ಖರೀದಿಸಿ ಅತ್ತಾವರದ ಕಪ್ರಿಗುಡ್ಡೆ ಮಸೀದಿ ಬಳಿಯ ಕಿಂಗ್ ಕೋರ್ಟ್ ಅಪಾರ್ಟ್‌ಮೆಂಟ್‌ನ ಫ್ಲಾಟ್ ಸಂಖ್ಯೆ ಜಿ 1 ರಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿದ್ದು ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ಈ ಮಾಹಿತಿಯ ಆಧಾರದ ಮೇಲೆ, ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪಿಎಸ್ಐ ಶೀತಲ್ ಅಲಗೂರ್ ಮತ್ತು ತಂಡವು ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿ, 11ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳೆಲ್ಲರೂ ಮಂಗಳೂರಿನ ಕಾಲೇಜೊಂದರಲ್ಲಿ ಎರಡನೇ ವರ್ಷದ ಬಿಬಿಎ ವಿದ್ಯಾರ್ಥಿಗಳಾಗಿದ್ದು ದಾಳಿಯ ಸಮಯದಲ್ಲಿ, ಪೊಲೀಸರು 7 ಪ್ಯಾಕೆಟ್‌ಗಳಲ್ಲಿ ಪ್ಯಾಕ್ ಮಾಡಿದ ಸುಮಾರು 12 ಕೆಜಿ 264 ಗ್ರಾಂ ಗಾಂಜಾ,ಜೊತೆಗೆ 2,000 ರೂ. ಮೌಲ್ಯದ ಎರಡು ಡಿಜಿಟಲ್ ತೂಕದ ಯಂತ್ರಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡರು. ಒಟ್ಟಾರೆಯಾಗಿ, ಆರೋಪಿಗಳಿಂದ 3,52,280 ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.

ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ಪ್ರತಾಪ್ ಸಿಂಗ್ ಥೋರಟ್ ಅವರ ಮಾರ್ಗದರ್ಶನದಲ್ಲಿ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗುರುರಾಜ್, ಪಿಎಸ್‌ಐ ಶೀತಲ್ ಅಲಗೂರ್ ಮತ್ತು ಪಿಎಸ್‌ಐ ಮಾರುತಿ ಪಿ ಅವರ ಮೇಲ್ವಿಚಾರಣೆಯಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಯ ನೆರವಿನೊಂದಿಗೆ ಈ ಕಾರ್ಯಾಚರಣೆ ನಡೆದಿದೆ.

Categories
ಶಿಕ್ಷಣ

ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ

ಕುಂದಾಪುರ : ಶ್ರೀ ಕೃಷ್ಣನ ತತ್ವಗಳು ಅನನ್ಯವಾದುದು. ರಂಗೋಲಿ ಹಾಕುವಲ್ಲಿ ಕೈ ಬೆರಳ ವಿನ್ಯಾಸಗಳಲ್ಲಿ ಕೃಷ್ಣನ ತತ್ವಗಳು ಅಡಗಿವೆ. ಈ ತತ್ವಗಳನ್ನು ಅರ್ಥೈಸಿಕೊಂಡರೆ ಬದುಕು ಅರ್ಥವತ್ತಾಗುತ್ತದೆ ಎಂದು ವಿದ್ವಾಂಸರಾದ ಉಡುಪಿಯ ಶ್ರೀ ಆಯನೂರು ಮಧುಸೂಧನ ಆಚಾರ್ಯ ಹೇಳಿದರು.
ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗವು ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಆಶ್ರಯದಲ್ಲಿ ಆಯೋಜಿಸಿದ ಶ್ರೀ ಕೃಷ್ಣ ಜನ್ಮಾಷ್ಠಮಿಯ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಬಲಾಡಿ ವಿನಾಯಕ ದೇವಸ್ಥಾನದ ಅರ್ಚಕರಾದ ಶ್ರೀ ವಿನಾಯಕ ಉಡುಪ ಕೃಷ್ಣನ ಭಕ್ತಿಗೀತೆಗಳನ್ನು ಹಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ಆಡಳಿತ ನಿಕಾಯಕರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಶ್ರೀ ಮಹೇಶ್ ಕುಮಾರ್ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಮತಿ ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ವಾಣಿಶ್ರೀ ಸ್ವಾಗತಿಸಿ, ಶರಣ್ಯ ಅತಿಥಿಗಳನ್ನು ಪರಿಚಯಿಸಿ, ಶಾಲಿನಿ ವಂದಿಸಿ, ಸಾನ್ವಿ ಶೆಟ್ಟಿ ನಿರೂಪಿಸಿದರು. ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಶ್ರೀಮತಿ ವಿಲ್ಮಾ ಶೆರಲ್ ವಿಜೇತರ ಪಟ್ಟಿ ವಾಚಿಸಿದರು. ದ್ವಿತೀಯ ಬಿ.ಕಾಂ. (ಬಿ) ತಂಡ ಸಮಗ್ರ ಪ್ರಶಸ್ತಿ ಹಾಗೂ ತೃತೀಯ ಬಿ.ಕಾಂ. (ಇ) ಮತ್ತು ದ್ವಿತೀಯ ಬಿಸಿಎ (ಬಿ) ರನ್ನರ್ ಅಪ್ ಪ್ರಶಸ್ತಿ ಪಡೆದರು.

Categories
ಕರಾವಳಿ ಸುದ್ದಿ ಶಿಕ್ಷಣ ಸಂಘ ಸಂಸ್ಥೆ

ಸೇವಾ ಸಿಂಚನ ಶೈಕ್ಷಣಿಕ ದತ್ತಿನಿಧಿಗೆ ಅರ್ಜಿ ಆಹ್ವಾನ

ಕುಂದಾಪುರ : ಸೇವಾ ಸಿಂಚನ ಪ್ರತಿಷ್ಠಾನವು ತನ್ನ ಮೂರನೇ ವರ್ಷದ ಯಶಸ್ವಿ ಸಂಸ್ಥಾಪನಾ ದಿನದ ಸವಿನೆನಪಿನಲ್ಲಿ 2025ರ ಶೈಕ್ಷಣಿಕ ದತ್ತಿನಿಧಿಯನ್ನು ಘೋಷಿಸಿದೆ. ಕುಂದಾಪುರ ತಾಲ್ಲೂಕು ವ್ಯಾಪ್ತಿಯ ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ 30 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹವನ್ನು ನೀಡಿ ಅವರ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗುವುದು ಈ ದತ್ತಿನಿಧಿಯ ಮುಖ್ಯ ಉದ್ದೇಶವಾಗಿದೆ.
ಈ ದತ್ತಿನಿಧಿಯು ಆರ್ಥಿಕವಾಗಿ ಹಿಂದುಳಿದ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಕನಸುಗಳನ್ನು ಸಾಕಾರಗೊಳಿಸಲು ಒಂದು ಅಮೂಲ್ಯ ಅವಕಾಶವನ್ನು ಒದಗಿಸುತ್ತದೆ. ಆಸಕ್ತ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಪ್ರತಿಷ್ಠಾನವು ಪ್ರೋತ್ಸಾಹಿಸುತ್ತದೆ.

ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ತಮ್ಮ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್‌ನಲ್ಲಿ https://forms.gle/JeWv2nHBM4wXjJXY8 ಲಿಂಕ್ ಮೂಲಕ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 22 ಅಕ್ಟೋಬರ್ 2025 ಆಗಿದೆ.

ವಿಶೇಷ ಸೂಚನೆಗಳು:

* ಸಲ್ಲಿಸುವ ಎಲ್ಲಾ ದಾಖಲೆಗಳು ಮಾನ್ಯವಾಗಿರಬೇಕು.
* ಅರ್ಜಿದಾರರು ಪದವಿ ಪೂರ್ವ, ಪದವಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿ ಪ್ರವೇಶ ಪಡೆದಿರಬೇಕು.
* ಅರ್ಜಿ ಸಲ್ಲಿಕೆ ವೇಳೆ ಯಾವುದೇ ಗೊಂದಲವಾದಲ್ಲಿ ಪ್ರತಿಷ್ಠಾನವನ್ನು ಸಂಪರ್ಕಿಸಿ ಸ್ಪಷ್ಟನೆ ಪಡೆದುಕೊಳ್ಳಬೇಕು.
* ತಪ್ಪಾದ ಮಾಹಿತಿಯನ್ನು ಒಳಗೊಂಡ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
* ದತ್ತಿನಿಧಿಗೆ ಸಂಬಂಧಿಸಿದ ಮಾಹಿತಿಗಾಗಿ ಮಾತ್ರ ಪ್ರತಿಷ್ಠಾನವನ್ನು ಸಂಪರ್ಕಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
9591217410, 8152055770, 7795413957

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ದಕ್ಷಿಣಾಯನ

ಶರದ್ : ಋತು

ಆಶ್ವೀಜ: ಮಾಸ

ಶುಕ್ಲ ಪಕ್ಷ

ಅಷ್ಟಮಿ: ತಿಥಿ

ಪೂರ್ವಾಷಾಢ: ನಕ್ಷತ್ರ

ಮಂಗಳವಾರ

30.09.2025

ಈ ದಿನ ಎಲ್ಲರಿಗೂ ಶುಭವಾಗಲಿ