Categories
ಕರಾವಳಿ ಸುದ್ದಿ

ವಿಡಿಯೋ ವಾಹನ ಜಾಥಾಕ್ಕೆ ಚಾಲನೆ

ಕುಂದಾಪುರ : ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತ ಹಾಗೂ ಗ್ಯಾರಂಟಿ ಯೋಜನೆಗಳನ್ನು ಮತದಾರರಿಗೆ ತಲುಪಿಸುವ ಸಲುವಾಗ ಕುಂದಾಪುರ ವಿಧಾನಸಭಾ ಕ್ಚೇತ್ರದಲ್ಲಿ ಸಂಚರಿಸುವ ವಿಡಿಯೋ ವಾಹನ ಜಾಥಾಕ್ಕೆ ಶಾಸಕರಾದ ಕಿರಣ್‌ ಕುಮಾರ ಕೊಡ್ಗಿ ಚಾಲನೆ ನೀಡಿದರು

ಈ ಸಂದರ್ಭದಲ್ಲಿ ವಿಡಿಯೋ ವಾಹನದ ಉಸ್ತುವಾರಿಗಳಾದ ರತ್ನಾಕರ ಮಕ್ಕಿಮನೆ ಪುರಸಭಾ ಸದಸ್ಯ ಶೇಖರ್‌ ಪೂಜಾರಿ ಕೆ ಎಸ್‌ ಸುದೀರ್‌ ಕಡ್ಗಿ ದಿವಾಕರ ಪೂಜಾರಿ ಸತೀಶ್‌ ಪೂಜಾರಿ ಸೌರಭಿ ಪೈ ಸಂತೋಷ್‌ ಪೂಜಾರಿ ಶಂಕರ್‌ ಅಂಕದಕಟ್ಟೆ ಸಂತೋಷ್‌ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು

Categories
ಶಿಕ್ಷಣ

ವಿದ್ಯೆ ಎಲ್ಲಾ ಸಂಪತ್ತಿಗಿಂತ  ಶ್ರೇಷ್ಠವಾದುದು

ಕುಂದಾಪುರ: ವಿದ್ಯೆಯಿಂದ ಅಮೃತತ್ವವನ್ನು ಹೊಂದಬಹುದು ಎಂದು ಎಸ್.ಎಸ್.ನಾಯಕ್ ಮತ್ತು  ಅಸೋಸಿಯೇಟ್ಸ್  ಎಂಬ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ  ಹಿರಿಯ ಪಾಲುದಾರರಾದ ಎಸ್.ಎಸ್.ನಾಯಕ್ ಹೇಳಿದರು . ಅವರು ಮಾರ್ಚ್ 27ರಂದು ಭಂಡಾರ್ಕಾರ್ಸ್ ಪದವಿ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು

ವಿದ್ಯಾ ಎಲ್ಲಾ ಸಂಪತ್ತಿಗಿಂತ  ಶ್ರೇಷ್ಠವಾದುದು. ಅದನ್ನು ಯಾರು ಕಳ್ಳತನ ಮಾಡಲಾಗುವುದಿಲ್ಲ. ಕಸಿಯಲು ಸಾಧ್ಯವಿಲ್ಲ. ದುಡ್ಡಿನಂತೆ ಖರ್ಚು ಮಾಡಲು ಆಗುವುದಿಲ್ಲ. ಅದನ್ನು ಹೊರಲು ಯಾವುದೇ ಭಾರಿ ವಾಹನಗಳು ಬೇಡ. ವಿದ್ಯೆ ಧನಕ್ಕಿಂತ ಶ್ರೇಷ್ಠವಾದುದು. ಇಂತಹ ಶ್ರೇಷ್ಠ ವಿದ್ಯಾ ಸಂಪತ್ತನ್ನು ಪಡೆಯಬೇಕಾದರೆ ಇಚ್ಛಾಶಕ್ತಿ ಮತ್ತು ಪ್ರಯತ್ನ ಬೇಕು. ಜೊತೆಗೆ ಅತ್ಯುತ್ತಮ ದೃಷ್ಟಿಕೋನವನ್ನು ಇಟ್ಟುಕೊಳ್ಳಿ. ಅಲ್ಲದೇ ಸಾಧಿಸುವ ಇಚ್ಛೆ ಇದ್ದರೆ ಸಾಲದು ನಿಮ್ಮ ಗುರಿ ತಲುಪಬೇಕಾದರೆ ಪರಿಪೂರ್ಣವಾಗಿ ಕಾರ್ಯಪ್ರವೃತ್ತರಾಗಬೇಕು. ಎಲ್ಲವುದಕ್ಕಿಂತ ಮುಖ್ಯವಾಗಿ  ಪರೋಪಕಾರದ ಮನೋಭಾವ ಬೆಳೆಸಿಕೊಳ್ಳಬೇಕು. ಯಾಕೆಂದರೆ ನಮ್ಮ ಸಾಧನೆಯ ಹಾದಿಯಲ್ಲಿ  ನಮ್ಮ ತಂದೆ ತಾಯಿ ಕಲಿಸಿದ ಶಿಕ್ಷಣ ಸಂಸ್ಥೆ ಮತ್ತು ಜೀವನ ರೂಪಿಸಿದ ಸಮಾಜವನ್ನು ಮರೆಯಬಾರದು ಎಂದು ಕರೆ ನೀಡಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ ಶಾಂತಾರಾಮ್ ಪ್ರಭು ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ. ದೇವದಾಸ್ ಕಾಮತ್, ರಾಜೇಂದ್ರ ತೋಳಾರ್ ಆಡಳಿತ ಮಂಡಳಿಯ ಸದಸ್ಯರಾದ ಯು.ಎಸ್.ಶೆಣೈ, ಪದವಿ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಸದಾನಂದ ಕಾಮತ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ ಉಪಸ್ಥಿತರಿದ್ದರು

ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.  ಚಿನ್ನದ ಪದಕ ಮತ್ತು ದತ್ತಿನಿಧಿ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ ಸ್ವಾಗತಿಸಿದರು. ಇತಿಹಾಸ ವಿಭಾಗ ಮುಖ್ಯಸ್ಥ ಪ್ರೊ.ಕೆ.ಗೋಪಾಲ್ ವಂದಿಸಿದರು. ಇಂಗ್ಲಿಷ್ ಉಪನ್ಯಾಸಕಿ ಪ್ರಿಯಾ ರೇಗೊ ಕಾರ್ಯಕ್ರಮ ನಿರೂಪಿಸಿದರು

Categories
ಕರಾವಳಿ ಸುದ್ದಿ

ಅಂತರ್ ತರಗತಿ ಐಟಿ ಫೆಸ್ಟ್ “ಟೆಕ್ ಮಂಥನ್ 3.0” ಉದ್ಘಾಟನೆ

ಕುಂದಾಪುರ :  ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಆಶ್ರಯದಲ್ಲಿ  ಅಂತರ್ ತರಗತಿ ಐಟಿ ಫೆಸ್ಟ್ “ಟೆಕ್ ಮಂಥನ್ 3.0” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದರ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ|ಕೆ. ಉಮೇಶ್ ಶೆಟ್ಟಿಯವರು ವಿದ್ಯಾರ್ಥಿಗಳೇ ತಯಾರಿಸಿದ  ಸಾಫ್ಟ್ವೇರ್ ಅಪ್ಲಿಕೇಶನ್ ಮೂಲಕ  ಕಾರ್ಯಕ್ರಮವನ್ನು ವಿನೂತನವಾಗಿ ಉದ್ಘಾಟಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ NMAMIT ನಿಟ್ಟೆಯ ಪ್ರಾಧ್ಯಾಪಕರಾದ  ಡಾl ಸುರೇಂದ್ರ ಶೆಟ್ಟಿ ಇವರು “ಈಗಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ನಮ್ಮೆಲ್ಲಾ ಕೆಲಸಗಳನ್ನು ಮಾಡಿ ಮುಗಿಸುತ್ತಿದ್ದು, ಕಂಪ್ಯೂಟರಿನ ಮುಂದೆ ಕುಳಿತು ನಾವು ನಮ್ಮ ಬುದ್ಧಿಯನ್ನು ಮರೆತಿದ್ದೇವೆ ಎಂಬ ಅರಿವು ಖಂಡಿತ ನಮಗೆಲ್ಲ ಇರಬೇಕು, ಇಲ್ಲವಾದಲ್ಲಿ ನಾವೇ ತಯಾರಿಸಿದ ಕಂಪ್ಯೂಟರ್ ಗಳು ನಮ್ಮನ್ನು ಆಳುವ ದಿನ ಬರಲು ನಾವು ಹೆಚ್ಚು ಕಾಯಬೇಕಾಗಿಲ್ಲ ” ಎಂದರು.

ವಿಭಾಗದ ಮುಖ್ಯಸ್ಥರಾದ ಶ್ರೀ ಮಹೇಶ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ಕಾರ್ಯಕ್ರಮದ ಸಂಯೋಜಕರಾದ ಶ್ರೀ ಹರೀಶ್ ಕಾಂಚನ್ ಮತ್ತು ಶ್ರೀಮತಿ ವಿಲ್ಮಾ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ಸುದೀಪ್ , ರಶ್ಮಿತಾ ಉಪಸ್ಥಿತರಿದ್ದರು.

ಅಂತಿಮ ಬಿಸಿಎ ವಿಭಾಗದ ವಿದ್ಯಾರ್ಥಿಗಳೇ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸೀಮಾ ಸ್ವಾಗತಿಸಿದರು, ರಶ್ಮಿತಾ ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.  ದಿವ್ಯಾ ವಂದಿಸಿದರು ಹಾಗೂ ಸಾಂಚಿಯ ತೆರೇಸಾ ಕಾರ್ಯಕ್ರಮ ನಿರೂಪಿಸಿದರು.

Categories
ಕರಾವಳಿ ಸುದ್ದಿ

ಭಾರಿ ಅಂತರದ ಗೆಲುವು

ಕೋಟೇಶ್ವರ : ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದಾಗಿನಿಂದ ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಮಹಾಶಕ್ತಿ, ಶಕ್ತಿ ಕೇಂದ್ರ, ನಗರಸಭೆ, ಪುರಸಭೆಗಳ ವಾರ್ಡ್ ಗಳು, ಗ್ರಾಮೀಣ ಭಾಗ ಹೀಗೆ ಬಹುತೇಕ ಕಡೆಗಳಿಗೆ ಭೇಟಿ ಕೊಟ್ಟಿದ್ದೇನೆ. ಈ ವೇಳೆ ಪಕ್ಷದ ನಾಯಕರು, ಪದಾಧಿಕಾರಿಗಳು, ಕಾಠ್ಯಕರ್ತರ ಉತ್ಸಾಹ ಕಂಡಾಗ ಈ ಬಾರಿ ದಾಖಲೆಯ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಮೂಡಿದೆ. ಅದೇ ರೀತಿ ಕುಂದಾಪುರ ಮಂಡಲದ ನಾಯಕರು, ಪದಾಧಿಕಾರಿಗಳು ಕಾಠ್ಯಕರ್ತರ ಪರಿಶ್ರಮ ಹಾಗೂ ಹಾಲಾಡಿ ಶ್ರೀನಿವಾಸ ಶೆಟ್ಟರ ಸಹಕಾರದಿಂದ ಭಾರೀ ಮತಗಳ ಮುನ್ನಡೆ ಸಿಗುವ ವಿಶ್ವಾಸವಿದೆ ಎಂದು ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಶುಕ್ರವಾರ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಕುಂದಾಪುರ ಮಂಡಲದ ನೂತನ  ಅಧ್ಯಕ್ಷರು, ಪದಾಧಿಕಾರಿಗಳ ಸಭೆ, ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಇದು ದೇಶದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ. ನರೇಂದ್ರ ಮೋದಿ ಅವರ ಕೈ ಬಲಪಡಿಸುವ ಚುನಾವಣೆ ಇದಾಗಿದೆ. ಭಾರತವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಬಿಜೆಪಿಯನ್ನು ಗೆಲ್ಲಿಸಬೇಕಿದೆ ಎಂದರು

Categories
ಶಿಕ್ಷಣ

ಬಿ. ಬಿ. ಹೆಗ್ಡೆ ಕಾಲೇಜು : ಜಲ ಜಾಗೃತಿ ತೇರು

         ಕುಂದಾಪುರ  : ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಯುವ ರೆಡ್‌ಕ್ರಾಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಜಲ ಜಾಗೃತಿ ಅಭಿಯಾನದ ಅಂಗವಾಗಿ “ಜಲ ಜಾಗೃತಿ ತೇರು” ಎನ್ನುವ ವಿನೂತನ ಕಾರ್ಯಕ್ರಮ ಜರಗಿತು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಜಲ ಜಾಗೃತಿ ರಥವನ್ನು ಸಾಂಕೇತಿಕವಾಗಿ ಎಳೆಯುವ ಮೂಲಕ ಉದ್ಘಾಟಿಸಿ, ಸಮಸ್ತ ಜೀವ ಜಗತ್ತಿನ ಜೀವಾಮೃತ ನೀರು, ಕ್ಲಪ್ತ ಸಮಯದಲ್ಲಿ ನೀರಿನ ಸಂರಕ್ಷಣೆಯ ಬಗ್ಗೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಭವಿಷ್ಯದಲ್ಲಿ ಸಂಭವಿಸುವ ಜಲಕುಸಿತಕ್ಕೆ ನಾವೇ ಹೊಣೆಯಾಗಲಿದ್ದೇವೆ. ನೀರಿನ ಸದ್ಬಳಕೆಯ ಕುರಿತು ಜಾಗೃತಿ ಮೂಡಿಸಬೇಕಾಗಿರುವುದು ವರ್ತಮಾನದ ತುರ್ತು. ಇದೇ ಸಂದರ್ಭ ನೀರಿನ ಮಹತ್ವ ಹಾಗೂ ಅದರ ಸದುಪಯೋಗದ ಬಗ್ಗೆ ವಿದ್ಯಾರ್ಥಿಗಳು ಜಾಗೃತಿ ವಹಿಸಬೇಕು ಎಂದರು.

ಉಪಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಶುಭ ಹಾರೈಸಿದರು. ಜಲ ಜಾಗೃತಿ ಅಭಿಯಾನದ ಸಂಯೋಜಕರಾದ ಶರತ್ ಕುಮಾರ್ ಪ್ರಾಸ್ತಾವಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವೀಣಾ ವಿ. ಭಟ್ ಕಾರ್ಯಕ್ರಮದ ಕುರಿತು ಆಶಯ ನುಡಿಗಳನ್ನಾಡಿದರು. ಯುವ ರೆಡ್‌ಕ್ರಾಸ್ ಘಟಕದ ಸಂಯೋಜಕರಾದ ಯೋಗೀಶ್ ಶ್ಯಾನುಭೋಗ ಸ್ವಾಗತಿಸಿ, ನಿರೂಪಿಸಿದರು. ಸಹ ಸಂಯೋಜಕಿಯಾದ ಮಾಲತಿ ವಂದಿಸಿದರು.

ಈ ಅಭಿಯಾನದ ಮುಖ್ಯ ಪ್ರಚಾರಕರಾದ ಕೀರ್ತನ ತೃತೀಯ ಬಿ.ಸಿ.ಎ., ಸುಪ್ರಜ್ ದ್ವಿತೀಯ ಬಿ.ಕಾಂ. (ಬಿ), ಸೌಭಾಗ್ಯ ಕಿಣಿ ತೃತೀಯ ಬಿ.ಕಾಂ. (ಬಿ) ಹಾಗೂ ಸುಜಯ್ ಶೆಟ್ಟಿ ಪ್ರಥಮ ಬಿ.ಕಾಂ. (ಇ), ವಿಭಾಗದ ವಿದ್ಯಾರ್ಥಿಗಳು ಕಾಲೇಜಿನ ಎಲ್ಲಾ ತರಗತಿಗಳಿಗೆ ಜಲ ಜಾಗೃತಿ ತೇರಿನ ಮೂಲಕ ತೆರಳಿ ಜಲ ಜಾಗೃತಿಯ ಅರಿವನ್ನು ಮೂಡಿಸಿದರು.

ಇದೇ ಸಂದರ್ಭದಲ್ಲಿ ಜಲ ಜಾಗೃತಿ ತೇರಿನ ತಯಾರಿಯ ಹಿಂದೆ ಶ್ರಮಿಸಿದ ವಿದ್ಯಾರ್ಥಿಗಳಾದ ತೃತೀಯ ಬಿ.ಕಾಂ. (ಬಿ) ಮನೀಷ್, ತೃತೀಯ ಬಿಬಿಎ ಸ್ವಸ್ತಿಕ್, ದ್ವಿತೀಯ ಬಿ.ಕಾಂ. (ಡಿ) ಮದನ್, ದ್ವಿತೀಯ ಬಿ.ಕಾಂ. (ಎ) ಯಶ್ವಂತ್ ಹಾಗೂ ನಿತಿನ್ ಇವರನ್ನು ಗುರುತಿಸಲಾಯಿತು.

 

 

Categories
ಕರಾವಳಿ ಸುದ್ದಿ

ಕಾಳಾವರ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ

ಕೋಟೇಶ್ವರ :  ರಕ್ತದಾನ ಮಹಾದಾನ. ರಕ್ತದಾನ ಮಾಡುವುದರಿಂದ ರಕ್ತದೊತ್ತಡ ಹಾಗೂ ದೇಹದಲ್ಲಿರುವ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು. ಮತ್ತು ಇತರ ರಕ್ತದಾನದ ಮಹತ್ವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕಾಧ್ಯಕ್ಷರಾದ ಎಸ್. ಜಯಕರ ಶೆಟ್ಟಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಇವರು ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕುಂದಾಪುರ ಇಲ್ಲಿ ಹಮ್ಮಿಕೊಳ್ಳಲಾದ ಬೃಹತ್ ರಕ್ತದಾನ ಶಿಬಿರದಲ್ಲಿ ತಮ್ಮ ಆಶಯ ನುಡಿಯನ್ನು ವ್ಯಕ್ತಪಡಿಸಿದರು.
ಈ ಶಿಬಿರದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್. ನಾಯಕ ವಹಿಸಿ ಇಂದಿನ ಯುವ ಜನತೆ ರಕ್ತದಾನಗಳಂತಹ ಶ್ರೇಷ್ಠ ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವುದು ತುಂಬಾ ಆಶಾದಾಯಕ ವಿಚಾರ. ಹೀಗೆ ಬೇರೆ ಬೇರೆ ಚಟುವಟಿಕೆಗಳಲ್ಲಿ ಯುವಕರು ತಮ್ಮನ್ನು ತೊಡಗಿಸಿಕೊಳ್ಳವುದರಿಂದ ಉತ್ತಮ ಸಮಾಜ ನಿರ್ಮಾಣದಲ್ಲಿ ಖಂಡಿತವಾಗಿಯು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿವರಾಮ ಶೆಟ್ಟಿ, ಖಜಾಂಚಿ ಭಾರತೀಯ ರೆಡ್‍ಕ್ರಾಸ್ ಕುಂದಾಪುರ, ರಾಮರಾಯ ಆಚಾರ್ಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ, ಚೇತನಾ ಎಂ. ಸಂಯೋಕರು, ಯುವ ರೆಡ್ ಕ್ರಾಸ್ ಘಟಕ, ಡಾ. ಶೇಖರ ಬಿ. ಸಹ ಸಂಯೋಜಕರು, ಯುವ ರೆಡ್ ಕ್ರಾಸ್ ಘಟಕ, ಹಾಗು ವಿದ್ಯಾರ್ಥಿ ಪ್ರತಿನಿಧಿ ಅನುಶ್ರೀ ಎ. ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಯುವ ರೆಡ್ ಕ್ರಾಸ್ ಘಟಕ ಹಾಗೂ ಭಾರತೀಯ ರೆಡ್ ಕ್ರಾಸ್ ಘಟಕ, ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯಿತು. ಸುಮಾರು 161 ವಿದ್ಯಾರ್ಥಿಗಳ ರಕ್ತ ವರ್ಗೀಕರಣ ಮಾಡಲಾಯಿತು ಮತ್ತು ಶಿಬಿರದಲ್ಲಿ ಒಟ್ಟು 127 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಚೇತನಾ ಎಂ., ಸಂಚಾಲಕರು ಯುವ ರೆಡ್‍ಕ್ರಾಸ್ ಘಟಕ ಪ್ರಾಸ್ತವಿಕ ನುಡಿಗಳೊಂದಿಗೆ ಸ್ವಾಗತಿಸಿದರು ಹಾಗೂ ಡಾ. ಶೇಖರ ಬಿ. ಸಹ ಸಂಚಾಲಕರು ಇವರು ವಂದಿಸಿದರು.

Categories
ಅಪರಾಧ

ಮೂವರು ಅಡಿಕೆ ಕಳ್ಳರ ಬಂಧನ

ಕುಂದಾಪುರ : ಕುಂದಾಪುರ ತಾಲೂಕಿನ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಡಿಕೆ ಕಳ್ಳತನ ಪ್ರಕರಣವನ್ನು ಭೇದಿಸಿದ ಪೋಲಿಸರು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

‘ಕುಂದಾಪುರ ಗುಲ್ವಾಡಿಯ ಅಮೀರ್ ಝನುದ್ದೀನ್ (23ವರ್ಷ), ಭಟ್ಕಳದ ಬಿಳಲಖಂಡ ಗ್ರಾಮದ ಮೊಹಮ್ಮದ್ ಮುನಾವರ್ (21ವರ್ಷ) ಭಟ್ಕಳದ ಉಸ್ಮಾನ್ ನಗರದ ನಿಸಾರ್‌ ಯಾನೆ ಆಸೀಫ್ ಅನ್ಸಾರ್ (24ವರ್ಷ) ಬಂಧಿತ ಆರೋಪಿಗಳು.

 ಶಂಕರನಾರಾಯಣ ಠಾಣಾ ವ್ಯಾಪ್ತಿಯ ಹಾಲಾಡಿ ಮತ್ತು ಕ್ರೂಡ ಬೈಲೂರು, ಕೊಲ್ಲೂರು ಠಾಣಾ ವ್ಯಾಪ್ತಿಯ ಜಡ್ಕಲ್ ಹಾಗೂ ಗಂಗೊಳ್ಳಿ ಠಾಣಾ ವ್ಯಾಪ್ತಿಯ ನೂಜಾಡಿಯಲ್ಲಿ ನಡೆದ ಅಡಿಕೆ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಶಂಕರನಾರಾಯಣ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಹುಸೇನ್ ಮತ್ತು ಶಂಭುಲಿಂಗಯ್ಯ ಎಮ್.ಇ ಮತ್ತು ಸಿಬ್ಬಂದಿಯವರು ಬಂಧಿಸಿದ್ದಾರೆ

ಬಂಧಿತ ಆರೋಪಿಗಳಿಂದ ಒಟ್ಟು 4,05,750 5 11.25 ಸಿಪ್ಪೆ ಅಡಿಕೆ, 40 ಕೆ.ಜೆ. ಒಣ ಅಡಿಕೆ ಮತ್ತು ಕೃತ್ಯಕ್ಕೆ ಬಳಸಿದ ಪಿಕ್‌ಆಪ್ ವಾಹನ ಹಾಗೂ ಸ್ಕೂಟರ್  ವಶಪಡಿಸಿಕೊಳ್ಳಲಾಗಿದೆ 

Categories
ಅಪರಾಧ

ಮೂವರು ಕಳ್ಳರ ಬಂಧನ

ಕುಂದಾಪುರ : ಉಡುಪಿ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯ ಮೆಡಿಕಲ್ ಶಾಪ್‌ನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಮೂವರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಮಂಗಳೂರಿನ ನಂತೂರು ಬಳಿಯ ಅರ್ಷಿತ್ ಅವಿನಾಶ್ ದೋಡ್ರೆ (23) ಬೈಂದೂರಿನ ಪಡುವರಿ ಗ್ರಾಮದ ರಿಲ್ವಾನ್ ಅಲಿಯಾಸ್  ರಿಝಾನ್ (24) ಯಡ್ತರೆ ಗ್ರಾಮದ ಮಹಮ್ಮದ್ ಅರ್ಬಾಝ್ (23) ಬಂಧಿತ ಆರೋಪಿಗಳು.

ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡಾ ಗುಡ್ಡೆಯಂಗಡಿ ಗ್ರಾಮದ ಶಾನ್ ಮೆಡಿಕಲ್ ಶಾಪ್, ಬೈಂದೂರು ಠಾಣಾ ವ್ಯಾಪ್ತಿಯ ನಾಗೂರು ಎಂಬಲ್ಲಿ ಶ್ರೇಷ್ಠ ಮೆಡಿಕಲ್ ಶಾಪ್ ಹಾಗೂ ಕುಂದಾಪುರ ಠಾಣಾ ವ್ಯಾಪ್ತಿಯ ಖಾರ್ವಿಕೇರಿ ರಸ್ತೆಯಲ್ಲಿರುವ ಮಹಾಂಕಾಳಿ ಜನರಲ್ ಸ್ಟೋರ್ ಹಾಗೂ ಕೋಟಾ ಠಾಣಾ ವ್ಯಾಪ್ತಿಯ ಕೋಟಾ ಮೂರುಕೈಯಲ್ಲಿರುವ ವಿವೇಕ ಮೆಡಿಕಲ್ ಶಾಪ್, ಹಳ್ಳಾಡಿಯಲ್ಲಿರುವ ತಲ್ಲೂರು ಬಾರ್-ರೆಸ್ಟೋರೆಂಟ್, ಅಯ್ಯಂಗಾರ್ ಬೇಕರಿ, ಸಾಯಿಬ್ರಕಟ್ಟೆಯಲ್ಲಿರುವ ನಂದಿಕೇಶ್ವರ ಹೊಟೇಲಿನಲ್ಲಿ ನಡೆದ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದರು.

ಆರೋಪಿಗಳಿಂದ ಒಟ್ಟು 36,000 ರೂ. ನಗದು, ಕೃತ್ಯಕ್ಕೆ ಉಪಯೋಗಿಸಿದ ಬೈಕ್ ಹಾಗೂ 3 ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಗಂಗೊಳ್ಳಿ ಪೊಲೀಸ್ ಠಾಣಾ ಪಿಎಸ್‌ಐ ಹರೀಶ್ ಆ‌ರ್.ಬಸವರಾಜ ಕನಶೆಟ್ಟಿ ಹಾಗೂ ಸಿಬ್ಬಂದಿಗಳಾದ ಮೋಹನ, ನಾಗರಾಜ, ಚಂದ್ರಶೇಖರ, ಸಂದೀಪ್, ನಾಗರಾಜ, ದಿನೇಶ್ ಹಾಗೂ ನಿತಿನ್  ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ

Categories
ಕರಾವಳಿ ಸುದ್ದಿ

ಚೌಗುಲೆಗೆ ಜಾಮೀನು ಇಲ್ಲ

ಉಡುಪಿ : ಇಲ್ಲಿನ ನೇಜಾರು ಗ್ರಾಮದಲ್ಲಿ ಒಂದೇ ಮನೆಯ ನಾಲ್ವರನ್ನು ಚೂರಿಯಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ ಆರೋಪಿ ಬೆಳಗಾವಿಯ ಪ್ರವೀಣ್ ಚೌಗುಲೆಗೆ ಉಡುಪಿ ಜಿಲ್ಲಾ ನ್ಯಾಯಾಲಯ 2ನೇ ಬಾರಿ ಜಾಮೀನು ನಿರಾಕರಿಸಿದೆ. ಕಳೆದ ತಿಂಗಳು ಚೌಗುಲೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಮತ್ತೇ ಮಾ.13ರಂದು ಎರಡನೇ ಬಾರಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಶನಿವಾರ ಈ ಅರ್ಜಿಗೆ ವಿಶೇಷ ಸರ್ಕಾರಿ ಅಭಿಯೋಜಕ ಶಿವಪ್ರಸಾದ್  ಆಳ್ವ ಆಕ್ಷೇಪಣೆ ಸಲ್ಲಿಸಿದರು. ಆರೋಪಿ ಪರ ವಕೀಲ ರಾಜೇಶ್ ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರ ಮಧ್ಯೆ ವಾದ ಪ್ರತಿವಾದ ನಡೆಯಿತು. ಆರೋಪಿ ಮೇಲಿನ ಆರೋಪಗಳು ಎಫ್‌ಎಸ್‌ಎಲ್ ವರದಿ ಸೇರಿದಂತೆ ಇನ್ನಿತರ ಸಾಕ್ಷಿಗಳಿಂದ ಮೇಲ್ನೋಟಕ್ಕೆ ಸಾಬೀತಾಗಿವೆ. ಇದು ಗಂಭೀರ ಪ್ರಕರಣವಾದ್ದರಿಂದ ಆರೋಪಿಗೆ ಜಾಮೀನು ನೀಡಿದರೆ ಆತ ಸಾಕ್ಷಿಗಳಿಗೆ ಹೆದರಿಸುವ ಸಾಧ್ಯತೆ ಇದೆ ಎಂದು ವಿಶೇಷ ಸರ್ಕಾರಿ ಅಭಿಯೋಜಕರು ವಾದಿಸಿದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶ ದಿನೇಶ್ ಹೆಗ್ಡೆ ಆರೋಪಿಗೆ ಜಾಮೀನು ನಿರಾಕರಿಸಿದರು. ಆರೋಪಿ ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ

Categories
ಕರಾವಳಿ ಸುದ್ದಿ

ಡಿಕೆಶಿಗೆ ನೋಟಿಸ್‌ ಜಾರಿ

ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್‌ ಅನ್ನು ಜಾರಿ ಗೊಳಿಸಿದೆ.

ಐಟಿ ಕಚೇರಿಗೆ ಹಾಜರಾಗಿ ಅಕ್ರಮ ಆಸ್ತಿ ಗಳಿಕೆ ಸಂಬಂಧ ಮಾಹಿತಿ ನೀಡುವಂತೆ ಸೂಚನೆ ನೀಡಿದೆ. ಆದರೆ ಯಾವಾಗ ಹಾಜರಾಗುವಂತೆ ತಿಳಿಸಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. 2017ರಲ್ಲಿ ಐಟಿ ಅಧಿಕಾರಿಗಳು ಶಿವಕುಮಾರ್ ಅವರ ನಿವಾಸ ಸೇರಿದಂತೆ ಅವರ ಸಂಬಂಧಿ, ಸ್ನೇಹಿತರು ಸೇರಿದಂತೆ ಹಲವೆಡೆ ದಾಳಿ ನಡೆಸಿದ್ದರು. ದೆಹಲಿಯಲ್ಲಿನ ಅವರ ನಿವಾಸದ ಮೇಲೆಯೂ ದಾಳಿ ನಡೆಸಲಾಗಿತ್ತು. ಈ ವೇಳೆ ಕೋಟ್ಯಂತರ ರು. ನಗದು ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿದ ಐಟಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದರು.

ತೆರಿಗೆ ಇಲಾಖೆಯಿಂದ ತಮಗೆ ಇನ್ನೊಂದು ನೋಟಿಸ್‌ ಬಂದಿದೆ ಎಂದು ಡಿ.ಕೆ.ಶಿವಕುಮಾರ್‌ ದೃಢಪಡಿಸಿದ್ದಾರೆ