Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5125

ಶೋಭಕೃತ್‌ ಸ೦ವತ್ಸರ

ದಕ್ಷಿಣಾಯಣ

ವರ್ಷ ಋತು

ನಿಜ ಶ್ರಾವಣ ಮಾಸ

ಕೃಷ್ಣ ಪಕ್ಷ

ತಿಥಿ : ಬಿದಿಗೆ

ಪೂರ್ವಬಾದ್ರೆ  : ನಕ್ಷತ್ರ

ಶುಕ್ರವಾರ : 01.09.2023

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಕರಾವಳಿ ಸುದ್ದಿ

ಬ್ರಹ್ಮರ್ಷಿ ನಾರಾಯಣ ಗುರುಗಳ ಜನ್ಮದಿನ

ಕುಂದಾಪುರ : ಶ್ರೇಷ್ಠ ದಾರ್ಶನಿಕ, ಸಮಾಜ ಸುಧಾರಕ ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂದು ಸಮಾಜವನ್ನು ಏಕಾತ್ಮ ಸೂತ್ರದೆಡೆಗೆ ಪೋಣಿಸಿದ ಪುಣ್ಯ ಪುರುಷ ಬ್ರಹ್ಮರ್ಷಿ ನಾರಾಯಣ ಗುರುಗಳ ಜನ್ಮದಿನದಂದು ಮಾನ್ಯ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಕುಂದಾಪುರದ ಬಿಲ್ಲವ ಸಮಾಜ ಸೇವಾ ಸಂಘದ ಶ್ರೀ ನಾರಾಯಣ ಗುರು ಮಂದಿರದಲ್ಲಿ ,ಗುರುಗಳ 169ನೇ ಜನ್ಮಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಗುರುಗಳಿಗೆ ಮಾಲಾರ್ಪಣೆಗೈದು ಸಮಾಜದ ಬಾಂಧವರಿಗೆ ಶುಭ ಹಾರೈಸಿದರು

Categories
ಹೊಂಗಿರಣ

ಆಹಾರ-ವಿಹಾರ

ದೇಹವು ಆರೋಗ್ಯಪೂರ್ಣವಾಗಿರಬೇಕಾದರೆ ನಾವು ಸೇವಿಸುವ ಆಹಾರ ಶುದ್ಧವೂ ಆರೋಗ್ಯಪೂರ್ಣವೂ ಆಗಿರಬೇಕು. ನಾವು ಏನನ್ನು ತಿನ್ನುವೆವೋ ಅದುವೇ ನಾವು ಏನೆಂಬುದನ್ನು ನಿರ್ಧರಿಸುವುದು! ನಮ್ಮ ರೀತಿ, ನೀತಿ, ನಡೆ, ನುಡಿ ಎಲ್ಲವೂ ನಾವು ಸೇವಿಸುವ ಆಹಾರವನ್ನು ಅವಲಂಬಿಸಿದೆ. ಆಹಾರವನ್ನು ಸಾತ್ವಿಕ, ರಾಜಸಿಕ ಮತ್ತು ತಾಮಸಿಕವೆಂದು ಅದರ ಗುಣ ಮತ್ತು ಸ್ವಭಾವದಿಂದ ನಿರ್ಧರಿಸಲಾಗುತ್ತದೆ. ಆಹಾರದ ಗುಣ ಮತ್ತು ಸ್ವಭಾವ ಮಾತ್ರವಲ್ಲದೆ ಅದನ್ನು ಸೇವಿಸುವ ಪ್ರಮಾಣ ಕೂಡ ನಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ. ಅಜೀರ್ಣವಾಗುವಷ್ಟು ಉಂಡರೆ ದೇಹದ ಆರೋಗ್ಯವು ಸುಲಭವಾಗಿ ಕೆಡುವುದು. ಹಾಗೆ ತಿಂದ ಆಹಾರ ಜೀರ್ಣವಾಗುವಷ್ಟು ಹೊತ್ತು ಮನಸ್ಸಿಗೆ ಮಂಪರು ಕವಿದು ದೇಹವು ನಿದ್ರಾವಶವಾಗುವುದು. ತಿಂದ ಆಹಾರವನ್ನು ಕರಗಿಸುವುದರಲ್ಲೇ ದೇಹವೆಂಬ ಯಂತ್ರ ನಿರತವಾಗುವುದು. ಹಾಗಾಗಿ ಮೆದುಳು ಜಾಗೃತ ಸ್ಥಿತಿಯಲ್ಲಿರಲು ಅವಶ್ಯವಿರುವಷ್ಟು ಪ್ರಮಾಣದಲ್ಲಿ ರಕ್ತವು ಪೂರೈಕೆಯಾಗದಿರುವುದರಿಂದ ಅದು ಅನಿವಾರ್ಯವಾಗಿ ವಿಶ್ರಾಮವನ್ನು ಘೋಷಿಸುವುದು. ಆಹಾರ ಸೇವನೆಗೆ ಇತಿಮಿತಿ ಹೇರುವುದರಲ್ಲೇ ದೇಹದ ಆರೋಗ್ಯವನ್ನು ಕಾಪಿಡುವ ರಹಸ್ಯವಿದೆ. ಇದನ್ನು ತಿಳಿದುಕೊಂಡಿದ್ದರೂ ಕೂಡ ನಾವು ಇಂದ್ರಿಯದಾಸರಾಗಿ ಹೊಟ್ಟೆಗೆ ಶರಣು ಹೊಡೆಯುತ್ತೇವೆ. ಆ ಮೇಲೆ ಅಜೀರ್ಣದ ಪೀಡೆಯನ್ನು ಅನುಭವಿಸುವಾಗ ‘ಮಾಡಿದ ತಪ್ಪಿಗೆ ಪಶ್ಚಾತ್ತಾಪ’ ಪಡುತ್ತೇವೆ! ಹೀಗಾಗದಂತೆ ಮಾಡಲು ಏನು ಮಾಡಬೇಕು? ನಮ್ಮ ಇಂದ್ರಿಯಗಳ ಮೇಲೆ ಹತೋಟಿಯನ್ನು ಹೊಂದಬೇಕಲ್ಲದೆ ಬೇರೆ ಉಪಾಯವಿಲ್ಲ. ನಮ್ಮ ದೇಹವು ನಮ್ಮ ಆಜ್ಞಾನುಸಾರ ವರ್ತಿಸುವ ಶಿಸ್ತಿನ ಸಿಪಾಯಿಯಾಗಿರಬೇಕೇ ವಿನಾ ನಾವು ಅದರ ಗುಲಾಮರಾಗಿರುವುದಲ್ಲ.

Categories
ಕರಾವಳಿ ಸುದ್ದಿ

ಭಾರತ್ ಕೋ ಜಾನೋ

ಉಡುಪಿ : ಭಾರತ್ ವಿಕಾಸ ಪರಿಷದ್ ,ಭಾರ್ಗವ, ಶಾಖೆ, ಉಡುಪಿ, ಇವರ ವತಿಯಿಂದ “ಭಾರತ್ ಕೋ ಜಾನೋ”, “ಭಾರತವನ್ನು ತಿಳಿಯಿರಿ”, ಕಾರ್ಯಕ್ರಮವನ್ನು ಶಾಲಾ ಮಕ್ಕಳಿಗೆ 26. 8.2023 ರಂದು TA PAI ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಿ ಆಯೋಜಿಸಿದ್ದರು. ಕಿರಿಯ, ಹಿರಿಯ ಮಕ್ಕಳ ವಿಭಾಗ ಸೇರಿ ಸುಮಾರು 40 ಮಂದಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಸಪ್ರಶ್ನೆ ಕಾರ್ಯಕ್ರಮವನ್ನು ಶ್ರೀಹರಿ ಮತ್ತು ತಂಡದವರು, ಅಖಿಲ ಭಾರತ ವಿದ್ಯಾರ್ಥಿ ಪರಿಷದ್ ಕಾರ್ಯಕರ್ತರು, ಅತ್ಯುತ್ತಮವಾಗಿ ನಡೆಸಿಕೊಟ್ಟರು.

ಕಿರಿಯ ವಿದ್ಯಾರ್ಥಿಗಳ ವಿಭಾಗದಲ್ಲಿ ಅನಂತೇಶ್ವರ ಆಂಗ್ಲ ಮಾಧ್ಯಮ ಶಾಲೆ ಮೊದಲ ಬಹುಮಾನ , TA Pai ಆಂಗ್ಲ ಮಾಧ್ಯಮ ಪ್ರೌಢಶಾಲೆ ದ್ವಿತೀಯ ಬಹುಮಾನ ಮತ್ತು ಇಂದ್ರಾಳಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ತೃತೀಯ ಬಹುಮಾನ ಗಳಿಸಿದವು.
ಹಿರಿಯ ವಿದ್ಯಾರ್ಥಿಗಳ ವಿಭಾಗದಲ್ಲಿ ವಿದ್ಯೋದಯ ಪಬ್ಲಿಕ್ ಸ್ಕೂಲ್ ಮೊದಲ ಬಹುಮಾನ, St. ಸಿಸಿಲಿಸ್ ಪ್ರೌಢಶಾಲೆ ದ್ವಿತೀಯ ಬಹುಮಾನ ಮತ್ತು ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ತೃತೀಯ ಬಹುಮಾನ ಗಳಿಸಿದವು.
ಶ್ರೀ ಹೆಚ್ ಹರಿರಾಮ ಶೆಣೈ ಭಾರತ್ ವಿಕಾಸ್ ಪರಿಷದ್ ನ ದಕ್ಷಿಣಪ್ರಾಂತ ಕೋಶಾಧಿಕಾರಿಗಳು,ಕಾರ್ಯಕ್ರಮದ ಮೂಲ ಉದ್ದೇಶವನ್ನು ವಿವರಿಸುತ್ತಾ ನಮ್ಮ ದೇಶದ ಬಗ್ಗೆ ಮಕ್ಕಳಲ್ಲಿ ಪ್ರೀತಿ, ಹೆಮ್ಮೆ,ಸಮರ್ಪಣಾ ಭಾವನೆ ಉದ್ದೀಪನ ಗೊಳಿಸುವುದೇ ಆಗಿದೆ ಹಾಗೂ ದೇಶದ ಎಲ್ಲ ಮಜಲುಗಳ ಮಾಹಿತಿ ಪಡೆದ ಮಕ್ಕಳು ದೇಶದ ಬಗ್ಗೆ ಹೆಮ್ಮೆ ಪಡುವಂತಾಗಬೇಕೆಂದು ಕರೆ ನೀಡಿದರು.
ಶ್ರೀಯುತ ಅಶೋಕ ಕಾಮತ್ ಬ್ಲಾಕ್ ಶಿಕ್ಷಣಾಧಿಕಾರಿ ಉಡುಪಿ, ಕುಮಾರಿ ರಶ್ಮಿ ಸಾಮಂತ್ Oxford University ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರು,ಸಾಮಾಜಿಕ ಕಾರ್ಯಕರ್ತರು, ಶ್ರೀಮತಿ ವಿನೋದ ಶೆಟ್ಟಿ,ಮುಖ್ಯೋಪಾಧ್ಯಾಯಿನಿ, TAPAI ಆಂಗ್ಲ ಮಾಧ್ಯಮ ಪ್ರೌಢಶಾಲೆ, ಇವರುಗಳು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು ಮತ್ತು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.
ಭಾರತ್ ವಿಕಾಸ್ ಪರಿಷದ್ ನ ಸಂಚಾಲಕರು ಶ್ರೀ ಪ. ವಸಂತ ಭಟ್ ಹಾಗೂ ಸದಸ್ಯರು ಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಭಾರತ ವಿಕಾಸ್ ಪರಿಷದ್ ಅಧ್ಯಕ್ಷ ಸಿ ಪಿ ಕೃಷ್ಣದಾಸ್ ಅವರು ಅತಿಥಿಗಳಿಗೆ ಸ್ವಾಗತ ಬಯಸಿದರು. ಎಸ್ ಸುಬ್ರಾಯ ಶೆಣೈ ಕಾರ್ಯದರ್ಶಿ, ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ಗುರುನಾಥ ರಾವ್ ವಂದನಾರ್ಪಣೆ ಸಲ್ಲಿಸಿದರು

Categories
ಕರಾವಳಿ ಸುದ್ದಿ

ಆರಕ್ಷಕರಿಗೆ ರಕ್ಷೆ

ಕುಂದಾಪುರ : ಶ್ರಾವಣ ಮಾಸದಲ್ಲಿ ಬರುವಂತಹ ಸಹೋದರ ಸಹೋದರಿಯರ ಬಾಂಧವ್ಯ ಬೆಸೆಯುವ ಪವಿತ್ರವಾದ ಹಬ್ಬ ರಕ್ಷಾ ಬಂಧನ ಆ ಪ್ರಯುಕ್ತ ಕುಂದಾಪುರ ಮಹಿಳಾ ಮೋರ್ಚಾ ಘಟಕದವರು ನಿನ್ನೆ  ಬುಧವಾರ  ಬೆಳಿಗ್ಗೆ  ನಗರದ ಕುಂದಾಪುರ ಆರಕ್ಷಕ ಠಾಣೆಗೆ ತೆರಳಿ ಪೋಲಿಸ್  ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ರಕ್ಷೆ ಕಟ್ಟಿ ಆರತಿ ಬೆಳಗಿ ರಕ್ಷಾ ಬಂಧನದ ಶುಭ ಹಾರೈಸಿದರು

ಠಾಣೆಯ ಪೊಲೀಸ್‌ ನಿರೀಕ್ಷಕರು ಉಪನಿರೀಕ್ಷಕರು ಠಾಣಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಮಹಿಳಾ ಮೋರ್ಚಾ ಕುಂದಾಪುರ ಮಂಡಲ ಅಧ್ಯಕ್ಷರಾದ ಶ್ರೀಮತಿ ರೂಪಾ ಪೈ ಪ್ರಧಾನ ಕಾರ್ಯದರ್ಶಿಗಳಾದ ಸೌರಭಿ ಪೈ  ರೋಹಿಣಿ ಪೈ ಪುಷ್ಪಾ ಶೇಟ್‌  ರಾಜೇಶ್‌ ಕಾವೇರಿ ಶಂಕರ್‌ ಅಂಕದಕಟ್ಟೆ ರತ್ನಾಕರ  ಮುಂತಾದವರು ಉಪಸ್ಥಿತರಿದ್ದರು

Categories
ಕರಾವಳಿ ಸುದ್ದಿ

ಮಹಿಳಾ ಮೋರ್ಚಾ ವತಿಯಿಂದ ರಕ್ಷಾಬಂಧನ

ಉಡುಪಿ ; ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮವು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆಯಿತು. ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಪೆರ್ಣಂಕಿಲ ಶ್ರೀಶ ನಾಯಕ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಆತ್ರಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಅಭಿರಾಜ್ ಸುವರ್ಣ, ಬಿಜೆಪಿ ಉಡುಪಿ ಗ್ರಾಮಾಂತರ ಪ್ರ.ಕಾರ್ಯದರ್ಶಿ ಸಚಿನ್ ಪೂಜಾರಿ, ಉಡುಪಿ ನಗರ ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ, ಚಂದ್ರಶೇಖರ ಪ್ರಭು ಹಾಗೂ ವಿನೋದ್ ನಾಯಕ್ ರವರಿಗೆ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಮತ್ತು ಪದಾಧಿಕಾರಿಗಳು ಆರತಿ ಬೆಳಗಿ, ತಿಲಕವಿಟ್ಟು, ರಕ್ಷೆ ಕಟ್ಟಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಗೀತಾಂಜಲಿ ಎಮ್. ಸುವರ್ಣ, ಜಿಲ್ಲಾ ಮಹಿಳಾ ಮೋರ್ಚಾ ಪ್ರ.ಕಾರ್ಯದರ್ಶಿ ರಶ್ಮಿತಾ ಬಾಲಕೃಷ್ಣ ಶೆಟ್ಟಿ, ನಗರ ಮಹಿಳಾ ಮೋರ್ಚಾ ಪ್ರ.ಕಾರ್ಯದರ್ಶಿ ಸುಜಾಲ ಸತೀಶ್, ಸುಧಾ ಪೈ, ಮಹಿಳಾ ಮೋರ್ಚಾ ಪ್ರಮುಖರಾದ ರಜನಿ ಹೆಬ್ಬಾರ್, ಅಶ್ವಿನಿ ಶೆಟ್ಟಿ, ಮಾಯಾ ಕಾಮತ್, ಪೂರ್ಣಿಮಾ ರತ್ನಾಕರ್, ಸರೋಜ ಶೆಣೈ, ಯಶೋಧ, ಶಾಂತಿ ಮನೋಜ್, ಚಂದ್ರಿಕಾ ಮುಂತಾದವರು ಉಪಸ್ಥಿತರಿದ್ದರು

Categories
ಕರಾವಳಿ ಸುದ್ದಿ

ಕನಿಷ್ಠ ಪರಿಜ್ಞಾನ ಇಲ್ಲವೆ ? ಕುಯಿಲಾಡಿ

ಉಡುಪಿ : ಹೆಣ್ಣಿಗೆ ನ್ಯಾಯ ಕೊಡಬೇಕು ಎಂದು ಹೋರಾಟಕ್ಕೆ ಇಳಿದಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಮಹಿಳೆಗೆ ಗೌರವ ಕೊಡುವ ಕನಿಷ್ಠ ಪರಿಜ್ಞಾನ ಇಲ್ಲವೆ? ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಶ್ನಿಸಿದ್ದಾರೆ.

ಸೌಜನ್ಯಾ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಆ.29ರಂದು ಉಡುಪಿಯ ಅಜ್ಜರಕಾಡು ಹುತಾತ್ಮ ಸೈನಿಕರ ಯುದ್ಧ ಸ್ಮಾರಕದ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ಕೇಂದ್ರ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಸಹಿತ ಬಿಜೆಪಿ ಹಿರಿಯ ಮುಖಂಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಶೋಭಾ ಕರಂದ್ಲಾಜೆಯವರ ಬಗ್ಗೆ ಮಾತನಾಡುವಾಗ ಬಳಸುವ ಪದ ಮತ್ತು ವಿಚಾರದ ಬಗ್ಗೆ ಎಚ್ಚರ ವಹಿಸುವುದು ಸೂಕ್ತ. ತಿಮರೋಡಿ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದನ್ನು ನೋಡಿದರೆ ಇದರಲ್ಲಿ ರಾಜಕೀಯ ವಾಸನೆ ಇರುವುದು ಸ್ಪಷ್ಟವಾಗುತ್ತಿದೆ.

ಸೌಜನ್ಯಾ ಪ್ರಕರಣದ ಮರು ತನಿಖೆ ನಡೆಸುವ ಮೂಲಕ ಸೌಜನ್ಯಾ ಅತ್ಯಾಚಾರ ಮತ್ತು ಸಾವಿಗೆ ನ್ಯಾಯ ಸಿಗಬೇಕು ಎಂಬ ಹೋರಾಟಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ನೀಡುತ್ತಿದೆ. ಆದರೂ ಮಹೇಶ್ ಶೆಟ್ಟಿ ತಿಮರೋಡಿ ಉದ್ದೇಶಪೂರ್ವಕವಾಗಿಯೇ ಅಸಂಬದ್ಧ ಪದ ಪ್ರಯೋಗದೊಂದಿಗೆ ಕೇವಲ ಬಿಜೆಪಿ ಮುಖಂಡರ ತೇಜೋವಧೆಗೈಯುವ ಮೂಲಕ ಹೋರಾಟದ ದಿಕ್ಕು ತಪ್ಪಿಸಲು ಹೊರಟಿರುವುದು ವಿಷಾದನೀಯ.

ಸೌಜನ್ಯಾ ಪರ ಹೋರಾಟವನ್ನು ನೆಪವಾಗಿಟ್ಟುಕೊಂಡು ರಾಜಕೀಯ ತೆವಲಿಗೆ ಜೋತು ಬಿದ್ದಂತಿರುವ ಮಹೇಶ್ ಶೆಟ್ಟಿ ತಿಮರೋಡಿಯ ಹೋರಾಟದ ಕಾಂಟ್ರಾಕ್ಟ್ ಪ್ರಾಯಶಃ ಮುಂದಿನ ಪಾರ್ಲಿಮೆಂಟ್ ಚುನಾವಣೆಗೆ ಮುಗಿಯಲಿದೆ ಎಂದು ಭಾಸವಾಗುತ್ತಿದೆ. ಸೌಜನ್ಯಾ ಅತ್ಯಾಚಾರ ಮತ್ತು ಸಾವಿಗೆ ನ್ಯಾಯ ಕೊಡಿಸುವ ನೈಜ ಕಾಳಜಿ ಇದ್ದಲ್ಲಿ ತಿಮರೋಡಿ, ವಸ್ತುನಿಷ್ಠ ವಿಚಾರಗಳೊಂದಿಗೆ, ಪ್ರಚಾರದ ಗೀಳಿಗೆ ಜೋತು ಬೀಳದೆ, ಸಾಂವಿಧಾನಿಕ ರೀತಿಯಲ್ಲಿ ನ್ಯಾಯಸಮ್ಮತ ಹೋರಾಟ ಮುಂದುವರಿಸುವುದು ಉತ್ತಮ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Categories
ಕರಾವಳಿ ಸುದ್ದಿ

ಕುಂದಾಪುರ ಗೃಹ ಲಕ್ಷ್ಮೀ ಬಿಡುಗಡೆ

ಕುಂದಾಪುರ : ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ಮನೆಯ ಪ್ರತಿ ಯಜಮಾನಿಗೆ ಪ್ರತಿ ತಿಂಗಳು 2000 ನೀಡಲಾಗುತ್ತದೆ ಮಹಿಳೆಯರುಅದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಕುಂದಾಪುರದ ತಹಸಿಲ್ದಾರ್‌ ಶೋಭಾ ಲಕ್ಷ್ಮಿ ಕಿವಿಮಾತು ಹೇಳಿದರು ಅವರು ಬುಧವಾರ ಸ್ಥಳೀಯ ಚಿಕ್ಕನ್‌ ಸಾಲ್‌ ರಸ್ತೆಯ ಮೊಗವೀರ ಭವನದಲ್ಲಿ ನಡೆದ ರಾಜ್ಯ ಸರ್ಕಾರದ ನೂತನ ಕಾರ್ಯಕ್ರಮ ವಾದ ಮನೆ ಯಜಮಾನಿಗೆ ಮಾಸಿಕ 2000 ನೀಡುವ ಗ್ರಹಲಕ್ಷ್ಮಿ ಯೋಜನೆಗೆ ತಾಲೂಕು ಮಟ್ಟದಲ್ಲಿ ಚಾಲನೆ ನೀಡಿದರು

ಕುಂದಾಪುರ ತಾಲೂಕಿನ 57 ಕಡೆಗಳಲ್ಲಿ ಕಾರ್ಯಕ್ರಮಗಳನ್ನು ಯೋಜಿಸಲಾಗಿತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನುರಾಧ ಹಾದಿಮನಿಯವರು ಸ್ವಾಗತಿಸಿ ಪ್ರಸ್ತಾವನೆಗೈದರು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್ ಉಪಸ್ಥಿತರಿದ್ದರು ಚಂದ್ರಶೇಖರ್ ಬಿಜಾಡಿ ಕಾರ್ಯಕ್ರಮ ನಿರ್ವಹಿಸಿ ಪುರಸಭೆ ಮುಖ್ಯ ಅಧಿಕಾರಿ ಮಂಜುನಾಥ್ ಆರ್ ವಂದಿಸಿದರು ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಮೂವರು ಮಹಿಳೆಯರಿಗೆ 2.000 ನೀಡಲಾಯಿತು ಕಾರ್ಯಕ್ರಮದಲ್ಲಿ ವಾರ್ಡ್ ಸದಸ್ಯ ಶ್ರೀಧರ್ ಉಪಸ್ಥಿತರಿದ್ದರು

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5125

ಶೋಭಕೃತ್‌ ಸ೦ವತ್ಸರ

ದಕ್ಷಿಣಾಯಣ

ವರ್ಷ ಋತು

ನಿಜ ಶ್ರಾವಣ ಮಾಸ

ಶುಕ್ಲ ಪಕ್ಷ

ತಿಥಿ : ಹುಣ್ಣಿಮೆ

ಶತಭಿಷೆ : ನಕ್ಷತ್ರ

ಗುರುವಾರ : 31.08.2023

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಕರಾವಳಿ ಸುದ್ದಿ

ನಾಳೆ ಆನೆಗುಡ್ಡೆಯಲ್ಲಿ ವಿಶೇಷ ಪೂಜೆ

ಕುಂದಾಪುರ : ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನಾಡಿನೆಲ್ಲೆಡೆ ಮಳೆ-ಬೆಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ನಾಳೆ ಪೂಜೆ ಸಲ್ಲಿಸಲಾಗುವುದು ಎಂದು ದೇಗುಲದ ಪ್ರಕಟಣೆ ತಿಳಿಸಿದೆ

ನಾಳೆ ದಿನಾಂಕ 31/08/2023 ಗುರುವಾರದಂದು ಆನೆಗುಡ್ಡೆ ಶ್ರೀ ವಿನಾಯಕ ದೇವಳದಲ್ಲಿ ಸಮೃದ್ಧವಾಗಿ  ಮಳೆ–ಬೆಳೆ ಅಗಲೆಂದು ಲೋಕ ಕಲ್ಯಾಣಾರ್ಥವಾಗಿ ಸಹಸ್ರಾವರ್ತನ ಗಣಪತಿಯ ಉಪನಿಷತ್ ಅಭಿಷೇಕ ಹಾಗೂ ಸೀಯಾಳಾಭಿಷೇಕ ಜರುಗಲಿದೆ ಎಂದು ಆಡಳಿತ ಮೂಕ್ತೇಸರರಾದ ಶ್ರೀ ಶ್ರೀರಮಣ  ಉಪಾಧ್ಯಾಯರು ತಿಳಿಸಿದ್ದಾರೆ