Categories
ಕರಾವಳಿ ಸುದ್ದಿ

ಸುಬ್ರಹ್ಮಣ್ಯಕ್ಕೆ ಜಯ್‌ ಶಾ ಭೇಟಿ

ಮಂಗಳೂರು : ಇತಿಹಾಸ ಪ್ರಸಿದ್ಧ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕೇಂದ್ರ ಗೃಹ ಸಚಿವರ ಪುತ್ರ ಹಾಗೂ ಬಿಸಿಸಿಐ ನ ಕಾರ್ಯದರ್ಶಿಯಾದ ಜಯ್‌ ಶಾ ರವರು ಪತ್ನಿ ಸಮೇತರಾಗಿ ದೇವಸ್ಥಾನಕ್ಕೆ ಭೇಟಿ ನೀಡಿದರು ಪತ್ನಿ ರಿಷಿತಾ ಶಾ ಹಾಗೂ ಕುಟುಂಬದವರೊಂದಿಗೆ ಆಗಮಿಸಿದ ಅವರು ಆಶ್ಲೇಷ ಬಲಿ ಪೂಜೆಯನ್ನು ನೆರವೇರಿಸಿದರು

ದೇವಸ್ಥಾನದಲ್ಲಿ ಭೋಜನ ಸ್ವೀಕರಿಸಿದ ಅವರು ಅಮಿತ್ ಶಾ ಹೆಸರಲ್ಲಿ ಪ್ರತಿನಿತ್ಯ ನಡೆಯುವ ಅನ್ನ ದಾಸೋಹಕ್ಕೆ ದೇಣಿಗೆಯನ್ನು ನೀಡಿದರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ವತಿಯಿಂದ ಜಯ್‌ ಶಾ ರವರನ್ನು ಗೌರವಿಸಲಾಯಿತು

Categories
ಕರಾವಳಿ ಸುದ್ದಿ

ಮಹಾಸತಿ ಚಿಕ್ಕ ಮೇಳ ನಾಯ್ಕನಕಟ್ಟೆ

ಕುಂದಾಪುರ : ಇವತ್ತಿನ ದಿನಗಳಲ್ಲಿ ಚಿಕ್ಕ ಮೇಳವನ್ನು ಸತತವಾಗಿ 14 ವರ್ಷ ನಡೆಸುವದೆಂದರೆ ಅದೊಂದು ಸಾಹಸವೇ ಸರಿ. ಈ ವರ್ಷ ಇದ್ದ ಚಿಕ್ಕ ಮೇಳ ಬರುವ ವರ್ಷ ಇರುವುದಿಲ್ಲ. ಹಾಗಿರುವಾಗ ಆರ್ಥಿಕತೆಯ ಮುಖ ನೋಡದೆ ಕಲೆ ಮತ್ತು ಸೇವೆಯ ಮನೋಭಾವದಿಂದ ಮಳೆಗಾಲದಲ್ಲಿ ಮನೆ ಒಳಗೆ ಕಲಾ ದೇವಿಯ ಸಾಕ್ಷಾತ್ಕರಿಸುವ ಶ್ರದ್ಧಾಭಕ್ತಿ ಆರಾಧನ ಕಲೆಯನ್ನು ಕಳೆದ 14 ವರ್ಷಗಳಿಂದ ಮಾಡುತ್ತಾ ಬಂದವರು ತಿಮ್ಮಪ್ಪ ದೇವಾಡಿಗ ಹೇರಂಜಾಲು ಮತ್ತು ನಾಗರಾಜ ಭಟ್

ಶ್ರೀದೇವಿಯ ಹೆಸರಿನಲ್ಲಿ ಹೊರಟಿರುವ ಈ ಚಿಕ್ಕಮೇಳ ಮಳೆಗಾಲದಲ್ಲಿ ಕುಂದಾಪುರ ತಾಲೂಕಿನ ಪರಿಸರದಲ್ಲಿ ತಿರುಗಾಟ ಮಾಡುತ್ತಿದೆ. ಕುಂದಾಪುರ ಪೇಟೆ ಪರಿಸರ ಆನಗಳ್ಳಿ. ಮುದ್ದುಗುಡ್ಡೆ. ಹೇರಿಕುದ್ರು. ತಲ್ಲೂರು. ಉಪ್ಪಿನಕುದ್ರು. ಹೆಮ್ಮಾಡಿ ಹಾಗೂ ಇನ್ನಿತರ ಪರಿಸರದಲ್ಲಿ ಸೇವೆ ನೀಡುತ್ತಾರೆ  ಮಳೆಗಾಲದಲ್ಲಿ ಮನೆಯಲ್ಲಿ ಕಲೆಯ ಆರಾಧನೆ ಮಾಡಿದರೆ ತಾಳ ಚಂಡೆ ಮದ್ದಲೆ ನೀನಾದ ಕುಣಿತ ಮಾಡಿದರೆ ಮನೆಗೊಂದು ಮಂಗಳಕರ. ಮತ್ತು ಮನೆಯಲ್ಲಿರುವ ಗ್ರಹ ದೋಷ ಕಷ್ಟ ನಷ್ಟಗಳು ದೂರವಾಗುವುದು ಎನ್ನುವುದು ಪುರಾಣದ ನಂಬಿಕೆ ಇದೆ

ಈ ಚಿಕ್ಕ ಮೇಳಕ್ಕೆ ಸೇವಾರ್ತಿಗಳಿಂದ ಮತ್ತು ಪ್ರೇಕ್ಷಕರಿಂದ ತುಂಬಾ ಬೇಡಿಕೆ ಇದೆ. ಈ ಮೇಳವನ್ನು ಕೆಲವೊಂದು ಭಕ್ತಾದಿಗಳು.ಒಂದು ವಾರದ ಮೊದಲೇ ಬುಕ್ಕಿಂಗ್ ಮಾಡಿಕೊಂಡು ತಮ್ಮ ಮನೆಗೆ ಸ್ವಾಗತಿಸುತ್ತಾರೆ. ಇಂಥ ಒಂದು ಚಿಕ್ಕಮೇಳ ನಮ್ಮ ಕುಂದಾಪುರ ತಾಲೂಕಿನ ಪರಿಸರದಲ್ಲಿ ಇರುವುದು ಕುಂದಾಪುರ  ತಾಲೂಕಿನ ಎಲ್ಲಾ ಯಕ್ಷಗಾನ ಕಲಾಭಿಮಾನಿಗಳಿಗೂ ಹಾಗೂ ಪ್ರೇಕ್ಷಕರಿಗೂ ಸಂತೋಷದ ಸುದ್ದಿ.

ಹಿಮ್ಮೇಳದಲ್ಲಿ ಭಾಗವತರಾಗಿ ತಿಮ್ಮಪ್ಪ ದೇವಾಡಿಗ. ಚಂಡೆ. ಶಂಕರ ಆಚಾರ್ಯ ಕೆಂಚನೂರು. ಮದ್ದಲೆ ಅಜಿತ್ ಕುಮಾರ್ ಹಟ್ಟಿಕುದ್ರು. ಮತ್ತು ವೇಷಧಾರಿಯಾಗಿ ಆವರ್ಸೆ ಜಯ ಕುಮಾರ್. ಮತ್ತು ಇವರೊಂದಿಗೆ ಸ್ತ್ರೀ ಪಾತ್ರಧಾರಿಯಾಗಿ ಮಾಧವ ನಾಗೂರು ವಿಶ್ವನಾಥ್ ಕಿರಾಡಿ ವಿನಯ ಹಟ್ಟಿ ಅಂಗಡಿ. ಮತ್ತು ಇವರ ಸಹಾಯಕ್ಕೆ ಪರಮೇಶ್ವರ ದೇವಾಡಿಗ ಇವರು ಸಹಕರಿಸುತ್ತಿದ್ದಾರೆ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಯಕ್ಷಗಾನ ಚಿಕ್ಕ ಮೇಳದ ಸೇವೆ ಅನನ್ಯವಾಗಿದೆ.

ವರದಿ :-ಈಶ್ವರ್ ಸಿ ನಾವುಂದ

Categories
ಅಪರಾಧ

ಗಂಧದ ಮರ ಕೇಸು ದಾಖಲು

ಕುಂದಾಪುರ : ಬೆಳ್ಳಾಲ ಗ್ರಾಮದ ಖಾರಿಬೈಲು ಎಂಬಲ್ಲಿ ಶ್ರೀಗಂಧದ ಮರ ಕಡಿತದ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕುಂದಾಪುರದ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ

ಬೆಳ್ಳಾಲ ಗ್ರಾಮದ ಖಾರಿಬೈಲು ಎಂಬಲ್ಲಿ ಮನೆ ಒಂದರ ಸಮೀಪ ಶ್ರೀಗಂಧದ ಮರವನ್ನು ಕಡಿಯುತ್ತಿದ್ದುದ್ದನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆಯ ಅಧಿಕಾರಿಗಳು ಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆದಿದ್ದು ಅದರ ಒಟ್ಟು ಮೌಲ್ಯ 2.00 ಲಕ್ಷ ಎಂದು ಅಂದಾಜಿಸಲಾಗಿದೆ ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದ್ದು ಬಂಧನಕ್ಕಾಗಿ ಬಲೆ ಬೀಸಲಾಗಿದೆ

Categories
ಕರಾವಳಿ ಸುದ್ದಿ

ಕಾರು ಅಪಘಾತ ವ್ಯಕ್ತಿ ಸಾವು

ಕುಂದಾಪುರ : ಕಾಳಾವರದ ಹಾಲಾಡಿ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವಿಗೀಡಾದ ಘಟನೆ ನಿನ್ನೆ ಸಂಜೆ ನಡೆದಿದೆ  ಕಾಳಾವರ ನಿವಾಸಿಯಾದ ನರಸಿಂಹ ಶೆಟ್ಟಿ ಎಂಬವರು ದ್ವಿಚಕ್ರ ವಾಹನದಲ್ಲಿ ತನ್ನ ಮನೆಯಿಂದ ಕೋಟೇಶ್ವರದ ಪೇಟೆಗೆ ಹೋಗುತ್ತಿದ್ದಾಗ ಹಾಲಾಡಿ ಕಡೆಯಿಂದ ಬಂದ ಕಾರೊಂದು ಹಾಲಾಡಿ ರಸ್ತೆಯ ಕಾಳಾವರದ ಚಿಕ್ಕು ದೇವಸ್ಥಾನದ ಸಮೀಪದಲ್ಲಿ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ನರಸಿಂಹ ಶೆಟ್ಟಿಯವರಿಗೆ 70 ವರ್ಷ ವಯಸ್ಸಾಗಿತ್ತು ಕುಂದಾಪುರ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Categories
ಸಂಘ ಸಂಸ್ಥೆ

ಜೇಸಿಸ್ : ಉದ್ಯಮ ರತ್ನ ಪ್ರಶಸ್ತಿ

ಕುಂದಾಪುರ : ಭಾರತೀಯ ಜೇಸಿಸ್ ನ ವಲಯ 15 ರ ಪ್ರತಿಷ್ಠಿತ ಸಮ್ಮೇಳನಗಳಲ್ಲಿ ಒಂದಾದ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನವು ಹಾಲಾಡಿಯ ಶ್ರೀಮತಿ ಶಾಲಿನಿ ಜಿ ಶಂಕರ್ ಕನ್ವೆನ್ಷನಲ್ ಹಾಲ್ ನಲ್ಲಿ ಇತ್ತೀಚಿಗೆ ಜರುಗಿತು ಸುವರ್ಣ ಮಹೋತ್ಸವ ಹೊಸ್ತಿಲಲ್ಲಿರುವ ವಲಯದ ಹಿರಿಯ ಹಾಗೂ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ಜೇಸಿಐ ಕುಂದಾಪುರದ ಸದಸ್ಯರಾಗಿರುವ ಜೇಸಿ ರವಿಚಂದ್ರ ಬಿ ಓ ನಾಯಕ ಇವರಿಗೆ ವೃತ್ತಿ ಕ್ಷೇತ್ರದ ಅನನ್ಯ ಸೇವೆ ಹಾಗೂ ದಣಿವರಿಯದ ಕಾಯಕಕ್ಕಾಗಿ ಉದ್ಯಮ ರತ್ನ ಪ್ರಶಸ್ತಿಯನ್ನು ಗೌರವಿಸಲಾಯಿತು ಶ್ರೀಯುತರು ಮೂಲತಃ ಚಿತ್ರದುರ್ಗ ಜಿಲ್ಲೆಯ ಸಿದ್ಧವನದುರ್ಗ ಗ್ರಾಮದವರು.ವೃತ್ತಿ ಜೀವನವನ್ನು 2004 ರಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರಕ್ಕೆ ಕರ್ತವ್ಯ ಹಾಜರಾಗಿ 2005 ರಲ್ಲಿ ಕುಂದಾಪುರದ ರಕ್ತ ನಿಧಿ ಕೇಂದ್ರಕ್ಕೆ ನಿಯೋಜನೆ ಮೇರೆಗೆ ಸೇವೆ ಸಲ್ಲಿಸಿದ್ದು ನಂತರ ಪ್ರಾಥಮಿಕ ಅರೋಗ್ಯ ಕೇಂದ್ರ ಕುಂಭಾಶಿಗೆ ವರ್ಗಾವಣೆಗೊಂಡು ಅಲ್ಲಿ ಸೇವೆ ಸಲ್ಲಿಸಿದ್ದು ನಂತರ ಪ್ರಾಥಮಿಕ ಅರೋಗ್ಯ ಕೇಂದ್ರ ಕೊಲ್ಲೂರು ರಿಗೆ ವರ್ಗಾವಣೆಗೊಂಡು ಅಲ್ಲಿ ಕರ್ತವ್ಯ ನಿರ್ವಹಿಸಿ 2017 ರಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರ ನಾಡ ಇಲ್ಲಿಗೆ ವರ್ಗಾವಣೆಗೊಂಡು ಪ್ರಸ್ತುತ ನಾಡ ಆಸ್ಪತ್ರೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕಳೆದ 19 ವರ್ಷ ದಿಂದ ಇವರು ಸರಕಾರಿ ಸೇವೆ ಮಾಡುತ್ತಿದ್ದಾರೆ ಹಾಗೂ ಕೋವಿಡ್ ನಂತಹ ವಿಷಮ ಪರಿಸ್ಥಿತಿಯಲ್ಲಿ ತನ್ನ ಎರಡೂ ಮಕ್ಕಳನ್ನು ಮನೆಯಲ್ಲೇ ಬಿಟ್ಟು ತನ್ನ ಶ್ರೀಮತಿ ಮಂಜುಳಾ.ಟಿ. ತಾಲೂಕಾ ಅಸ್ಪತ್ರೆ ಕುಂದಾಪುರದಲ್ಲಿ ಶ್ರೂಶುಷಾಧಿಕಾರಿಯಾಗಿ ಇಬ್ಬರು ಹಗಲು ರಾತ್ರಿ ಸೇವೆ ಸಲ್ಲಿಸಿದ್ದಾರೆ ಈ ಎಲ್ಲಾ ಸೇವೆಯನ್ನು ಗುರುತಿಸಿ ಅವರಿಗೆ ವಲಯದ ಉದ್ಯೋಗ ರತ್ನ ಪ್ರಶಸ್ತಿ ನೀಡಿ ಸನ್ಮಾನ ಮಾಡಲಾಗಿದೆ. ವಲಯ 15ರ ವಲಯಾಧ್ಯಕ್ಷರಾದ ಜೆ ಎಫ್ ಪಿ ಪುರುಷೋತ್ತಮ್ ಶೆಟ್ಟಿಯವರು ಉದ್ಯೋಗ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು ವಲಯ ವ್ಯವಹಾರ ವಿಭಾಗದ ನಿರ್ದೇಶಕ ಜೇಸಿ ನಾಗರಾಜ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದು ಜೇಸಿಐ ಭಾರತ ದ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ ಜೇಸಿಐ ಸೆನೆಟರ್ ಸದಾನಂದ ನಾವಡ, ವಲಯ ಕಾರ್ಯಕ್ರಮ ವಿಭಾಗದ ನಿರ್ದೇಶಕಿ ಜೇಸಿಐ ಸೆನೆಟರ್ ಅಕ್ಷತಾ ಗಿರೀಶ್ ಐತಾಳ್, ಜೇಸಿಐ ಕುಂದಾಪುರ ಅಧ್ಯಕ್ಷರಾದ ಜೇಸಿ ಸುಧಾಕರ ಕಾಂಚನ್, ಪೂರ್ವ ಘಟಕ ಅಧ್ಯಕ್ಷರಾದ ಜೇಸಿ ಚಂದ್ರ ಇoಬಾಳಿ,ಜೇಸಿ ಅಶೋಕ್ ತೆಕ್ಕಟ್ಟೆ ,ಕಾರ್ಯದರ್ಶಿ ಜೇಸಿ ರಾಕೇಶ್ ಶೆಟ್ಟಿ, ಜೇಜೇಸಿ ವಿಭಾಗದ ಅಧ್ಯಕ್ಷರಾದ ಜೇಜೇಸಿ ಸತ್ಯನ್ ಕಾಂಚನ್, ಸದಸ್ಯರಾದ ಜೇಸಿ ಚಂದನ್ ಗೌಡ , ಜೇಸಿ ಚೇತನ್ ದೇವಾಡಿಗ , ಜೇಸಿ ಸುಬ್ರಮಣ್ಯ ಆಚಾರ್ , ಜೇಸಿ ರವೀಶ್ ಕೊರವಡಿ, ಜೇಸಿ ರಾಜೇಶ್ ಉಪ್ಪಿನಕುದ್ರು,ಜೇಸಿ ದೀಪಕ್ ಎಮ್, ಜೇಸಿ ಮಂಜುಳಾ ಟಿ ಜೇಜೇಸಿ ಪ್ರತೀಕ್ಷಾ ಆರ್, ಜೇಜೇಸಿ ತನ್ಮಯ ಆರ್ ಉಪಸ್ಥಿತರಿದ್ದರು

Categories
ಸಂಘ ಸಂಸ್ಥೆ

ಜೆ ಸಿ ಐ ನಿಂದ ಸನ್ಮಾನ

ಕುಂದಾಪುರ:  ಜೂನಿಯರ್ ಜೆಸಿ ಸಪ್ತಾಹದ ಅಂಗವಾಗಿ ಬೈಂದೂರು ಹಾಗೂ ಕುಂದಾಪುರ ಭಾಗಗಳಲ್ಲಿ ಶಿಕ್ಷಕಿಯಾಗಿ ಇತ್ತೀಚೆಗೆ ನಿವೃತ್ತಿಯಾದ ಶ್ರೀಮತಿ ಸುಮತಿ ಎಂ ಅವರನ್ನು ಅವರ ಮನೆಗೆ ತೆರಳಿ ಜೆಸಿ ಕುಟುಂಬದ ಸದಸ್ಯರು ಗೌರವಿಸಿ ಸನ್ಮಾನಿಸಿದರು. ಕುಂದಾಪುರ ಜೆಸಿಐ  ಅಧ್ಯಕ್ಷ ಸುಧಾಕರ್ ಕಾಂಚನ್ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು, ಜೂನಿಯರ್ ಜೆ ಸಿ ಅಧ್ಯಕ್ಷ ಸತ್ಯನ್ ಎಸ್ ಕಾಂಚನ್ ಉಪಸ್ಥಿತರಿದ್ದು, ಪೂರ್ವ ಜೆಸಿಐ ವಲಯ ಅಧಿಕಾರಿ ರತ್ನಾಕರ ಕುಂದಾಪುರ ಮಾತನಾಡಿ ಶಿಕ್ಷಕರ ಪಾತ್ರ ಸಮಾಜದಲ್ಲಿ ಬಹಳ ಮುಖ್ಯವಾದದ್ದು, ಶಿಕ್ಷಕರು ಉತ್ತಮ ನಾಗರಿಕ ಸಮಾಜದ ಬೆಳವಣಿಗೆಗೆ ಕಾರಣವಾಗುತ್ತಾರೆ. ಗುರು ಸ್ಥಾನದಲ್ಲಿರುವ ಶಿಕ್ಷಕ ವೃತ್ತಿ ಶ್ರೇಷ್ಠವಾದದ್ದಾಗಿದೆ, ಹಿಂದೆ ಗುರು ಮುಂದೆ ಗುರಿ ಇದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ವಿದ್ಯಾರ್ಥಿಗಳನ್ನು ಭವ್ಯ ಭಾರತದ ಶ್ರೇಷ್ಠ ಪ್ರಜೆಗಳನ್ನಾಗಿ ಪರಿವರ್ತಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ, ಆ ನಿಟ್ಟಿನಲ್ಲಿ ಶ್ರೀಮತಿ ಸುಮತಿ ರವರು ಅಂಚೆ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾಗ ಅದಕ್ಕೆ ರಾಜೀನಾಮೆ ನೀಡಿ, ತಾವು ಕಲಿತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕೆಂಬ ಮಹದಾಸೆಯಿಂದ, ಶಿಕ್ಷಣ ಸೇವೆಯನ್ನು ನೀಡಿ ಬಹಳಷ್ಟು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ. ಅವರ ಸೇವಾ ಅವಧಿಯಲ್ಲಿ ಹಲವಾರು ಪ್ರಶಸ್ತಿಗಳು ಅವರನ್ನು ಹುಡುಕಿ ಬಂದಿದೆ , ಇಂತಹ ಉತ್ತಮ ಶಿಕ್ಷಕರನ್ನ ಜೆಸಿಐ ಸಂಸ್ಥೆ ಗೌರವಿಸುತ್ತಿರುವುದು ಎಲ್ಲರಿಗೂ ಮಾದರಿ, ಎಂದು ಶುಭ ಹಾರೈಸಿದರು. ಸನ್ಮಾನ ಸ್ವೀಕರಿಸಿದ ಶ್ರೀಮತಿ ಸುಮತಿ ಎಮ್ ಅವರು ಮಾತನಾಡಿ, ಜೆಸಿಐ ಸಂಸ್ಥೆಯವರು ನಮ್ಮ ಮನೆಗೆ ಬಂದು ನನ್ನನ್ನು ಗುರುತಿಸಿ ಗೌರವಿಸುವುದು, ಎಲ್ಲ ಸನ್ಮಾನಕ್ಕಿಂತ ತುಂಬಾ ಖುಷಿ ಕೊಟ್ಟಿದೆ, ಸಂಸ್ಥೆಯೊಂದಿಗೆ ಹಲವಾರು ಕಾರ್ಯಕ್ರಮಗಳಲ್ಲಿ ಈ ಹಿಂದೆ ಭಾಗಿಯಾಗಿದ್ದೆ, ಇಂದು ಈ ಸಂಸ್ಥೆಯಿಂದ ಗೌರವಿಸಿರುವುದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಹಿಳಾಜೆಸಿಯ ಶ್ರೀಮತಿ ಪುಷ್ಪಲತಾ ರತ್ನಾಕರ್,ಜೆ ಸಿ ರವಿಚಂದ್ರ, ಜೆಸಿ ಉದಯ್ ಕುಮಾರ್, ಶ್ರೀಮತಿ ಮಂಜುಳಾ ರವಿಚಂದ್ರ ಮತ್ತು ಜೆಸಿಐ ಸದಸ್ಯರು ಉಪಸ್ಥಿತರಿದ್ದರು. ಜಿ ಆರ್ ಪ್ರಕಾಶ್ ಹಾಗೂ ಕುಟುಂಬದವರು ಸಹಕರಿಸಿದರು.ಜೆ ಸಿ ಐ ಕುಂದಾಪುರದ ಕಾರ್ಯದರ್ಶಿ ರಾಕೇಶ್ ಶೆಟ್ಟಿ ವಂದಿಸಿದರು

Categories
ಕರಾವಳಿ ಸುದ್ದಿ

ಪ್ರಕರಣ ಮುಚ್ಚಿಹಾಕಲು ಕಾಂಗ್ರೆಸ್ ಹುನ್ನಾರ

ಉಡುಪಿ :  ಖಾಸಗಿ ಶಿಕ್ಷಣ ಸಂಸ್ಥೆಯ ಶೌಚಾಲಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಂದ ನಡೆದ ಹಿಂದೂ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ಖಾಸಗಿ ವೀಡಿಯೋ ಚಿತ್ರೀಕರಣದ ಗಂಭೀರ ಪ್ರಕರಣವನ್ನು ಮುಚ್ಚಿ ಹಾಕಲು ಉಡುಪಿ ಜಿಲ್ಲಾ ಕಾಂಗ್ರೆಸ್ ಹುನ್ನಾರ ನಡೆಸುತ್ತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆರೋಪಿಸಿದ್ದಾರೆ.

ಉಡುಪಿಯಲ್ಲಿ ನಡೆದ ನಾಗರಿಕ ಸಮಾಜ ತಲೆತಗ್ಗಿಸುವಂತಹ ಹೇಯ ಕೃತ್ಯಕ್ಕೆ ಎಲ್ಲೆಡೆ ಆಕ್ರೋಶ ಭುಗಿಲೆದ್ದಾರೂ ಕಾಪು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ಸಹಿತ ಕಾಂಗ್ರೆಸ್ ಮುಖಂಡರು ಮಾತ್ರ ಏನೂ ನಡೆದೇ ಇಲ್ಲ ಎಂಬಂತೆ ವರ್ತಿಸುತ್ತಾ ಹಠಾತ್ ಮಣಿಪುರ ಘಟನೆಯ ವಿಚಾರವನ್ನು ಮುನ್ನೆಲೆಗೆ ತರುವ ಮೂಲಕ ಉಡುಪಿಯ ಪ್ರಕರಣದ ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿರುವುದು ಖಂಡನೀಯ.

ಉಡುಪಿಯ ಪ್ರಕರಣದ ತನಿಖಾಧಿಕಾರಿಯನ್ನು ಬದಲಿಸಿರುವುದನ್ನು ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತಿಸುತ್ತದೆ. ರಾಜ್ಯ ಗೃಹ ಸಚಿವರು ಸದ್ರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ್ದರೂ, ತಮ್ಮದೇ ಕ್ಷೇತ್ರದ ಸಂತ್ರಸ್ತೆ ವಿದ್ಯಾರ್ಥಿನಿಗೆ ನ್ಯಾಯ ಒದಗಿಸುವ ಗೊಡವೆಗೆ ಹೋಗದ ಸೊರಕೆ ಸಹಿತ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಘಟನೆ ನಡೆದೇ ಇಲ್ಲ ಎನ್ನುತ್ತಾ ಜನತೆಗೆ ತಪ್ಪು ಮಾಹಿತಿ ನೀಡುತ್ತಿರುವ ಮರ್ಮವೇನು ಎಂದವರು ಪ್ರಶ್ನಿಸಿದ್ದಾರೆ.

ಪ್ರಕರಣದ ಕೂಲಂಕುಷ ತನಿಖೆಯಿಂದ ಸತ್ಯಾಂಶ ಹೊರಬರಲಿದೆ. ಜಿಹಾದಿ ಮನಸ್ಥಿತಿಯ ಸಾಮಾಜಿಕ ಪಿಡುಗನ್ನು ಬೇರು ಸಹಿತ ಕಿತ್ತೊಗೆಯದೆ ಬಿಜೆಪಿ ವಿರಮಿಸದು. ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಬೊಗಳೆ ಬಿಡುವ ಕಾಂಗ್ರೆಸ್ ಒಂದೇ ವರ್ಗವನ್ನು ಓಲೈಸುವ ಭರದಲ್ಲಿ ನೊಂದವರನ್ನು ಕಡೆಗಣಿಸುವ ಮೂಲಕ ಸಮಾಜದಲ್ಲಿ ಶಾಂತಿ ಕದಡಿಸಲು ಹೊರಟಿರುವುದು ವಿಷಾದನೀಯ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Categories
ಹೊಂಗಿರಣ

ಮೊದಲ ಹೆಜ್ಜೆ

ಭಕ್ತಿಯನ್ನು ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಮೊತ್ತ ಮೊದಲಾಗಿ ಮಾಡಬೇಕಾದದ್ದು ಏನು? ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ‘ಮೊತ್ತ ಮೊದಲಾಗಿ ದುಸ್ಸಂಗವನ್ನು ತ್ಯಜಿಸಿ. ನಿಮ್ಮ ಮನಸ್ಸನ್ನು, ಚಂಚಲಗೊಳಿಸುವ ಪ್ರಾಪಂಚಿಕ ಸಂಗದಿಂದ ದೂರವಿರಿ. ನಾನು, ನನ್ನದು ಎಂಬುದನ್ನೆಲ್ಲ ತ್ಯಜಿಸಿ. ಪ್ರಪಂಚದಲ್ಲಿ ಯಾರಿಗೆ ಮತ್ತಾರೂ ಇಲ್ಲವೊ ಅವನ ನೆರವಿಗೆ ಭಗವಂತನು ಬರುತ್ತಾನೆ.’ ಗೀತೆಯಲ್ಲಿ ಶ್ರೀ ಕೃಷ್ಣನು ಕೂಡ ನಮ್ಮನ್ನು ಇದೇ ವಿಷಯದಲ್ಲಿ ಎಚ್ಚರಿಸುತ್ತಾನೆ: ಯಾರು ಸಂಸಾರದ ಸಂಬಂಧವಿಲ್ಲದೆ ಸದಾ ಪರಮಾನಂದ ಪರಮಾತ್ಮನಲ್ಲೇ ನಿತ್ಯತೃಪ್ತನಾಗಿರುವನೋ, ಕರ್ಮಫಲದಲ್ಲಿ ಆಸೆಯನ್ನು ಇರಿಸದೆ ಕರ್ತವ್ಯಬದ್ಧನಾಗಿ ಕರ್ಮಗಳನ್ನು ನಿರ್ವಹಿಸುವನೋ ಅವನು ಮಾತ್ರವೇ ಬಂಧಮುಕ್ತನಾಗಿ ನನ್ನನ್ನೇ ಸೇರುವನು.’ ದೇವರ ಮೇಲೆ ಭಕ್ತಿ ಉಂಟಾಗಲು ಕರ್ಮಫಲದ ತ್ಯಾಗ ಅತ್ಯವಶ್ಯ. ಲೌಕಿಕ ಬಂಧನಗಳನ್ನೆಲ್ಲ ಕಿತ್ತೆಸೆದು ದೇವರೆಡೆಗೆ ಸಾಗುವುದು ಅಗತ್ಯ. ಅಂತೆಯೇ ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ‘ಪ್ರಾಪಂಚಿಕ ವ್ಯಾಮೋಹದ ಬಂಧನವನ್ನೆಲ್ಲ ತುಂಡಿರಿಸಿ. ಎಲ್ಲ ಸೋಮಾರಿತನದಿಂದ ಪಾರಾಗಿ. ನೀವು ಮಾಡಿದುದರ ಫಲವನ್ನು ತಿರುಗಿಯೂ ನೋಡಬೇಡಿ. ಎಲ್ಲವನ್ನೂ ಭಗವಂತನಿಗಾಗಿ ಅರ್ಪಿಸಿ. ಆಗಲೇ ನಮ್ಮ ಹೃದಯದಲ್ಲಿ ಅನಂತವಾದ ಪ್ರೇಮದ ಅಪೂರ್ವ ಆನಂದ ಅನುಭವವಾಗುವುದು, ನಮ್ಮ ಭಗವಂತನೆಡೆಗೆ ಅವಿಚ್ಛಿನ್ನವಾಗಿ ಹರಿಯುವುದು.’ ನಿಷ್ಕಳಂಕವಾದ ಪ್ರೀತಿಯು ಯಾವುದೇ ಬಗೆಯ ಪ್ರತಿಫಲವನ್ನೂ ನಿರೀಕ್ಷಿಸುವುದಿಲ್ಲ. ಅಂತೆಯೇ ನಾವು ಭಗವಂತನ ಮೇಲಿರಿಸುವ ಪ್ರೀತಿ ಕೂಡ. ಒಂದೊಮ್ಮೆ ಪ್ರತಿಫಲವನ್ನು ಪ್ರೀತಿಯು ಅಪೇಕ್ಷಿಸಿದ್ದೇ ಆದಲ್ಲಿ ಅದು ಸ್ವಾರ್ಥಪರವಾದ ಪ್ರೀತಿ ಆದೀತೇ ವಿನಾ ನಿಷ್ಕಳಂಕ ಪ್ರೀತಿ ಅಲ್ಲ. ಸ್ವಾರ್ಥದಲ್ಲಿ ಇರುವುದು ಭೋಗದ ಅಪೇಕ್ಷೆಯೇ ಹೊರತು ತ್ಯಾಗದ ಭಾವನೆ ಅಲ್ಲ.

 

Categories
ಸಂಘ ಸಂಸ್ಥೆ

ಸಮವಸ್ತ್ರ ಹಸ್ತಾಂತರ

ಕುಂದಾಪುರ: ಕುಂದಾಪುರದ ಬಿ. ಆರ್. ರಾಯರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ಕುಂದಾಪುರ ಸನ್‍ರೈಸ್‍ನ ವತಿಯಿಂದ  ಸಮವಸ್ತ್ರ ಮತ್ತು ಕೊಡೆಗಳನ್ನು ಅಧ್ಯಕ್ಷ ರೋ. ನಾಗರಾಜ ನಾಯ್ಕರವರು ಹಸ್ತಾಂತರಿಸಿದರು. ಗೌರವಾನ್ವಿತ ಹಿರಿಯ ನ್ಯಾಯವಾದಿಗಳು, ಶಾಲೆಯ ಸ್ಥಾಪಕ ಅಧ್ಯಕ್ಷರಾದ ಸನ್ಮಾನ್ಯ ಎ.ಎಸ್.ಎನ್. ಹೆಬ್ಬಾರ್ ರವರು ಉಪಸ್ಥಿತರಿದ್ದು ರೋಟರಿಯ ಸೇವಾ ಕಾರ್ಯವನ್ನು ಅಭಿನಂದಿಸಿದರು. ರೋಟರಿ ಹಿರಿಯ ಸದಸ್ಯರಾದ ಕೆ.ಎಚ್. ಚಂದ್ರಶೇಖರ, ಗೀತಾ ಮುಕುಂದನ್, ಗಣೇಶ ಬೆಟ್ಟಿನ್, ಅಜಯ ಹವಾಲ್ದಾರ್, ಹಾಗೂ ಕಾರ್ಯದರ್ಶಿ ಪ್ರಶಾಂತ ಹವಾಲ್ದಾರ್ ಉಪಸ್ಥಿತರಿದ್ದರು.

Categories
ಸಂಘ ಸಂಸ್ಥೆ

ವನಮಹೋತ್ಸವ ಆಚರಣೆ

ಕುಂದಾಪುರ:  ಕುಂದಾಪುರದ ವಡೇರಹೋಬಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ರೋಟರಿ ಕುಂದಾಪುರ ಸನ್‍ರೈಸ್ ವತಿಯಿಂದ ವನಮಹೋತ್ಸವ ಆಚರಣೆ ಜರುಗಿತು. ಪೂರ್ವ ರೋಟರಿ ಸಹಾಯಕ ಗವರ್ನರ್ ರೋ. ಪಿ.ಎಚ್.ಎಫ್. ಜೆ.ಪಿ. ಶೆಟ್ಟಿಯವರು ಶಾಲೆಯ ಆವರಣದಲ್ಲಿ ಸಸಿ ನೆಡುವುದರೊಂದಿಗೆ ಚಾಲನೆ ನೀಡಿದರು. ಅಧ್ಯಕ್ಷ ರೋ. ನಾಗರಾಜ ನಾಯ್ಕ್ ಹಾಗೂ ರೋಟರಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.