Categories
ಕರಾವಳಿ ಸುದ್ದಿ

ವಿದುಷಿ ಶ್ರೀಮತಿ ಭಾಗೀರಥಿ ಎಮ್. ರಾವ್‌ರವರ ಶಿಷ್ಯ ಇಂದು ರಂಗಪ್ರವೇಶ

ಕುಂದಾಪುರ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಗುರು ವಿದುಷಿ ಶ್ರೀಮತಿ ಭಾಗೀರಥಿ ಎಮ್. ರಾವ್‌ರವರ ಶಿಷ್ಯ ಶ್ರೀಮತಿ ಗೀತಾ ಮತ್ತು ಶ್ರೀ ಸುರೇಶ ಹಕ್ಲಾಡಿ ಇವರು ಪುತ್ರಿ ಕುಮಾರಿ ಸಮೀಕ್ಷಾ ಹಕ್ಲಾಡಿ ಭರತನಾಟ್ಯ ರಂಗಪ್ರವೇಶದ ವೇದಿಕೆ ಮೇ.31ರಂದು ಭಾನುವಾರ ಸಂಜೆ 6 ಗಂಟೆಗೆ ಕುಂದಾಪುರ ಹೋಟೆಲ್ ಶರೋನ್ ಮಿನಿಹಾಲ್ ನಲ್ಲಿ ನಡೆಯಲಿದೆ.

ಪ್ರತಿಭಾವಂತ ಕಲಾವಿದೆ ಕುಮಾರಿ ಸಮೀಕ್ಷಾ ಸುರೇಶ್ ಹಕ್ಲಾಡಿ ಭರತನಾಟ್ಯ ರಂಗಪ್ರವೇಶಡಾ. ಗಂಗೂಬಾಯಿ ಹಾನಗಲ್ಲ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು ಇಲ್ಲಿ ನಡೆದ ಭರತನಾಟ್ಯ ಜೂನಿಯರ್ ವಿಭಾಗದಲ್ಲಿ ಡಿಸ್ಟಿಂಕ್ಷನ್ ಪಡೆದಿರುತ್ತಾಳೆ

ಗುರು ವಿದುಷಿ ಶ್ರೀಮತಿ ಭಾಗೀರಥಿ ಎಮ್. ರಾವ್ ಪರಿಚಯ

ದಿವಂಗತ ಯು ಜಯರಾಮ ರಾವ್ ಹಾಗೂ ಶ್ರೀಮತಿ ನವೀನಮ್ಮನವರ ಪುತ್ರಿ, ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ತನ್ನ ಬಿ.ಕಾಂ. ಪದವಿಯನ್ನು ಪಡೆದರು, ಇವರು ತನ್ನ 8ನೇ ತರಗತಿಯಲ್ಲಿ ಭರತನಾಟ್ಯ ತರಗತಿಯನ್ನು ಸೇರಿಕೊಂಡು ಹೆಸರಾಂತ ನೃತ್ಯ ವಿದ್ವಾನ್ ಪದವಿಯನ್ನು ಪಡೆದಿರುವ ದಿವಂಗತ ಶ್ರೀ ಶ್ರೀನಿವಾಸ ಮಧ್ಯಸ್ಥರು ಕೋಣೆ ಹಾಗೂ ಶ್ರೀ ಗಣಪಯ್ಯ ಮಧ್ಯಸ್ಥರ ನೆಚ್ಚಿನ ಶಿಷ್ಠೆಯಾಗಿ ವಿದುಷಿ ಪದವಿಯನ್ನು ಪಡೆದು ಸಾಲಿಗ್ರಾಮ, ಕೋಟೇಶ್ವರ ಹಾಗೂ ಕುಂದಾಪುರದಲ್ಲಿ ಶ್ರೀ ನಟರಾಜ ನೃತ್ಯ ನಿಕೇತನ ಎಂಬ ಹೆಸರಿನಲ್ಲಿ ನೃತ್ಯ ಸಂಸ್ಥೆಯನ್ನು ತೆರೆದು ಸುಮಾರು ಸಾವಿರ ಸಾವಿರ ಮಕ್ಕಳಿಗೆ ಭರತನಾಟ್ಯ ಹೇಳಿಕೊಡುವುದಲ್ಲದೇ, ಉತ್ತಮ ಯಕ್ಷಗಾನ ಕಲಾವಿದೆಯಾಗಿ ಸುಮಾರು 500 ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ನೀಡಿರುತ್ತಾರೆ. ಅಲ್ಲದೆ ಉತ್ತಮ ನಾಟಕ ಕಲಾವಿದೆಯಾಗಿ ಹೊರಹೊಮ್ಮಿದ್ದಾರೆ. ಭರತನಾಟ್ಯವೇ ತನ್ನ ಉಸಿರು ಎಂದು ನೆಚ್ಚಿಕೊಂಡಿರುವ ಇವರಿಗೆ ಹಲವಾರು ಪ್ರಶಸ್ತಿ, ಸಮ್ಮಾನಗಳು ಆರಸಿಕೊಂಡು ಬಂದಿದೆ.

ಇವರಿಗೆ ರಂಗಭೂಮಿ ಜೋಗಫಾಲ್ಸ್ ನಲ್ಲಿ 3 ಬಾರಿ ರಾಜ್ಯ ಪ್ರಶಸ್ತಿ, 2023ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಾಧಕ ಮಹಿಳಾ ಪ್ರಶಸ್ತಿ -2024, ಶ್ರೀ ಗುರುನರಸಿಂಹ ಅನುಗ್ರಹ ಪ್ರಶಸ್ತಿ – 2024, ವಾಸುದೇವ ಸಾಮಗ ಸಂಸ್ಕರಣ ಪ್ರಶಸ್ತಿ 2024, ಬ್ರಾಹ್ಮರಿ ನಾಟ್ಯಾಲಯ ಪ್ರಶಸ್ತಿ, ಈತ ಲಾಸ್ಯ ಪ್ರಶಸ್ತಿ, ಸಮಗ್ರ ಕಂಸ (ಏಕವ್ಯಕ್ತಿ ಪ್ರದರ್ಶನ) ರೋಟರಿ ಕ್ಲಬ್ (ಕೋಟ, ತೆಕ್ಕಟ್ಟೆ, ಸಾಲಿಗ್ರಾಮ) ಸಮ್ಮಾನ, ಯಶಸ್ತಿ ಕಲಾಕೇಂದ್ರ ಸಮಾನ, ಯಕ್ಷನೂಪುರ ಭರತ ಪ್ರಶಸ್ತಿ (ನೀಲಾವರ), ನಟೇಶ ಪ್ರಶಸ್ತಿ (ಉಚ್ಚಿಲ), ಶ್ರೀ ರವಿಶಂಕರ ಗುರೂಜಿ (ಆರ್ಟ್ ಆಫ್ ಲಿವಿಂಗ್) – ಗೌರವ ಸಮ್ಮಾನ ಹೀಗೆ ಹಲವಾರು ಪ್ರಶಸ್ತಿ, ಗೌರವ ಸಮ್ಮಾನದೊಂದಿಗೆ ಭರತನಾಟ್ಯ, ಯಕ್ಷಗಾನ, ನಾಟಕ, ಏಕವ್ಯಕ್ತಿ ಅಭಿನಯ, ಹಾಡುಗಾರಿಕೆ, ಸಿನಿಮಾ ಹಾಗೆ ಅನೇಕ ಪ್ರಾಕಾರಗಳಲ್ಲಿ ಮಿಂಚಿ, ಆಪಾರ ಶಿಷ್ಯರು ಹಾಗೂ ಅಭಿಮಾನಿ ಬಳಗವನ್ನು ಹೊಂದಿದ ಕೀರ್ತಿ ಇವರದ್ದು.

Categories
ಕರಾವಳಿ ಸುದ್ದಿ

ಇಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ವಿದ್ಯುಷಿ ಶ್ರೀಮತಿ ಭಾಗೀರಥಿ.ಎಮ್.ರಾವ್ ಇವರಿಗೆ ಸನ್ಮಾನ

ಕುಂದಾಪುರ :ಗಿಳಿಯಾರು ಕುಶಾಲ ಹೆಗ್ಡೆ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ (ರಿ.).ಕುಂದಾಪುರ ಇವರು ಪ್ರಸ್ತುತಿಯಲ್ಲಿ ಕೀರ್ತಿ ಶೇಷ ಗಿಳಿಯಾರು ಕುಶಾಲ ಹೆಗ್ಡೆಯವರ ಜನ್ಮ ಶತಮಾನೋತ್ಸವದ ಪ್ರಯುಕ್ತ 31/05/2026 ಇಂದು ಭಾನುವಾರ ಸಹನಾ ಸಭಾಭವನ ಎನ್ ಎಚ್ 66 ಅಂಕದ ಕಟ್ಟೆ ಕೊಟೇಶ್ವರ ಇಲ್ಲಿ ನಡೆಯಲಿರುವ ಕುಶಾಲ ಹೆಗ್ಡೆ 100 ವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ವಿದ್ಯುಷಿ ಶ್ರೀಮತಿ ಭಾಗೀರಥಿ.ಎಮ್.ರಾವ್( ಶ್ರೀ ನಟರಾಜ ನೃತ್ಯ ನಿಕೇತನ ಚಿತ್ರಪಾಡಿ ಸಾಲಿಗ್ರಾಮ ) ಇವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಿದ್ದಾರೆ.

Categories
ಕರಾವಳಿ ಸುದ್ದಿ

ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳ ನಿಯುಕ್ತಿ

ಉಡುಪಿ : ಜಿಲ್ಲಾ ಬಿಜೆಪಿ ಯುವ ಮೋರ್ಚಾದ ನೂತನ ಪದಾಧಿಕಾರಿಗಳನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ಅನುಮೋದನೆ ಮೇರೆಗೆ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಅವರು ನಿಯುಕ್ತಿಗೊಳಿಸಿ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.

ಉಪಾಧ್ಯಕ್ಷರುಗಳಾಗಿ : ಪ್ರಸಾದ್ ಬಿಲ್ಲವ, ಸಚಿನ್ ಸುವರ್ಣ ಪಿತ್ರೋಡಿ, ಪ್ರಥ್ವಿರಾಜ್ ಮಣಿಪಾಲ, ಗಜೇಂದ್ರ ಎಸ್. ಬೇಲೆಮನೆ, ಗುರುರಾಜ್ ಮಾಡ, ಪ್ರಧಾನ ಕಾರ್ಯದರ್ಶಿಗಳಾಗಿ ಅಭಿರಾಜ್ ಸುವರ್ಣ ಕಟಪಾಡಿ, ಪ್ರದೀಪ್ ಕುಂದರ್ ಹೊನ್ನಾಳ,
ಕಾರ್ಯದರ್ಶಿಗಳಾಗಿ ಯತೀಶ್ ಶೆಟ್ಟಿ, ಲೋಕೇಶ್ ಕಾಂಚನ್, ನಿತೇಶ್ ಶೆಟ್ಟಿ, ರಾಕೇಶ್ ಅಮೀನ್, ಗೌತಮ್ ಅಗ್ರಹಾರ, ಕೋಶಾಧಿಕಾರಿಗಳಾಗಿ ಪ್ರವೀಣ್ ಸೋಮಯ್ಯ, ಮಾಧ್ಯಮ ಪ್ರಮುಖ್ : ಸಂದೀಪ್ ಕೂರಾಡಿ, ಕಾರ್ಯಕಾರಿಣಿ ಸದಸ್ಯರು : ದರ್ಶಿತ್ ಶೆಟ್ಟಿ, ವಿನೋದ್ ದೇವಾಡಿಗ, ಚೇತನ್ ಪೂಜಾರಿ, ಆದರ್ಶ ಚಕ್ರತೀರ್ಥ, ಮನೀಷ್ ಸುವರ್ಣ, ಗಗನ್ ಶೆಟ್ಟಿ, ಪ್ರಜ್ವಲ್ ಕಾಂಚನ್, ಸಚಿನ್ ಪೆರ್ಡೂರು, ವಿನಿಶ್ ವಿ. ಶೆಟ್ಟಿ, ಅರುಣ್ ಆಚಾರ್ಯ, ಅನಿಲ್ ನೆಂಪು, ಗಣೇಶ್ ಕುಂದ‌ರ್, ನಿತೇಶ್ ಶ್ರೀಯಾನ್, ರಾಕೇಶ್ ಜೋಗಿ, ಆದಿತ್ಯ ಆಚಾರ್ಯ, ಪ್ರಿತುಲ್ ಕೆ. ಎಚ್. ಇವರುಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories
ಕರಾವಳಿ ಸುದ್ದಿ

ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಶನಿವಾರ ಮಂಗಳೂರಿಗೆ ಆಗಮಿಸಿದರು

ಮಂಗಳೂರು: ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಶನಿವಾರ ಮಂಗಳೂರಿಗೆ ಆಗಮಿಸಿದರು. ವಾಯುಪಡೆ ವಿಶೇಷ ವಿಮಾನದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಉಪರಾಷ್ಟ್ರಪತಿಗಳನ್ನು ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಅವರು ಕರಾವಳಿಯ ಮಲ್ಲಿಗೆ ಹಾರವನ್ನು ಹಾಕಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮತ್ತು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಅವರು ಉಪಸ್ಥಿತರಿದ್ದು, ಉಪರಾಷ್ಟ್ರಪತಿಗಳನ್ನು ಸ್ವಾಗತಿಸಿದರು.

ಬಳಿಕ ಅವರು ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ತೆರಳಿ, ಧರ್ಮಸ್ಥಳ ಅಥಿತಿಗೃಹದಲ್ಲಿ ವಾಸ್ತವ್ಯ ಹೂಡಿದರು. ಭಾನುವಾರ ಬೆಳಿಗ್ಗೆ ಅವರು ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಲಿದ್ದು, ಬಳಿಕ ಅಮೃತವರ್ಷಿನಿ ಸಭಾಂಗಣದಲ್ಲಿ ಸಿರಿ ಕೈಗಾರಿಕಾ ಪಾರ್ಕ್ ಉದ್ಘಾಟನೆ ನೆರವೇರಿಸಲಿದ್ದಾರೆ.

ಉಪರಾಷ್ಟ್ರಪತಿಗಳ ಆಗಮನದ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣ ಹಾಗೂ ಧರ್ಮಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Categories
ಬ್ರೇಕಿಂಗ್ ನ್ಯೂಸ್

ವಾಟ್ಸಪ್‌ ಗ್ರೂಪ್‌ ಮೂಲಕ ಕೋಳಿ ಜೂಜಾಟ

ಬೈಂದೂರು: ಉಪ್ಪುಂದ ಗ್ರಾಮದ ಪರಿಚಯ ಹೋಟೆಲ್‌ನ ದಕ್ಷಿಣ ಬದಿಯ ಗ್ಯಾರೇಜ್ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ವಾಟ್ಸಪ್‌ ಗ್ರೂಪ್‌ ಮೂಲಕ ಕೋಳಿ ಮೇಲೆ ಟೋಕನ್‌ ನೀಡಿ ಜೂಜಾಟ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಬೈಂದೂರು ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕ ಸುನಿಲ್‌ ಕುಮಾರ ಬಿ.ಎನ್. ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ದಾಳಿಯ ವೇಳೆ ವಾಟ್ಸಪ್‌ ಗ್ರೂಪ್‌ ಮೂಲಕ ಕೋಳಿ ಜೂಜಾಟ ನಡೆಸುತ್ತಿದ್ದ ಉಪ್ಪುಂದ ಗ್ರಾಮದ ಸಚಿನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜೂಜಾಟಕ್ಕೆ ಬಳಸಲಾಗುತ್ತಿದ್ದ VIVO V20 ಮೊಬೈಲ್‌ ಫೋನ್‌ ಅನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಸಂಬಂಧ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5128

ಪರಾಭವ ಸಂವತ್ಸರ

ಉತ್ತರಾಯಣ

ಗ್ರೀಷ್ಮ : ಋತು

ಅಧಿಕ ಜ್ಯೇಷ್ಠ : ಮಾಸ

ಶುಕ್ಲ  ಪಕ್ಷ

ಪೌರ್ಣಮಿ : ತಿಥಿ

ಅನೂರಾಧೆ : ನಕ್ಷತ್ರ

ಭಾನುವಾರ

31.05.2026

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಕರಾವಳಿ ಸುದ್ದಿ

ಭೀಮೋದ್ಯಮಕ್ಕೆ ಅಭೂತಪೂರ್ವ ಸ್ಪಂದನೆ

ಹೆಮ್ಮಾಡಿ: ಸಮೃದ್ಧ ಬೈಂದೂರು ಪರಿಕಲ್ಪನೆಯಡಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆ ಅವರ ಕನಸಿನ ಯೋಜನೆಯಾದ “ಭೀಮೋದ್ಯಮ” ಉದ್ಯಮಶೀಲತಾ ಕಾರ್ಯಕ್ರಮ ಹೆಮ್ಮಾಡಿಯ ಜಯಶ್ರೀ ಸಭಾಭವನದಲ್ಲಿ ಭಾರೀ ಯಶಸ್ಸಿನೊಂದಿಗೆ  ನಡೆಯಿತು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಯುವಜನರಲ್ಲಿ ಸ್ವಾವಲಂಬನೆ, ಆತ್ಮವಿಶ್ವಾಸ ಮತ್ತು ಉದ್ಯಮಶೀಲತೆಯ ಮನೋಭಾವ ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಕಾರ್ಯಕ್ರಮಕ್ಕೆ ನೂರಾರು ಯುವಕರು, ಯುವತಿಯರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಸ್ವಯಂ ಉದ್ಯೋಗ ಮಾಡಲು ಇಚ್ಚೀಸುವ ಅನೇಕರು ಭಾಗವಹಿಸಿ ವಿಶೇಷ ಮೆರುಗು ತಂದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ, ರಾಜ್ಯದಲ್ಲೇ ಮಾದರಿಯಾಗುವಂತಹ ಕಾರ್ಯಕ್ರಮವನ್ನು ರೂಪಿಸಿರುವ ಶಾಸಕ ಗುರುರಾಜ್ ಗಂಟಿಹೊಳೆ ಅವರ ಕಾರ್ಯವನ್ನು ಶ್ಲಾಘಿಸಿದರು.

ಯುವಕರನ್ನು ಉದ್ಯೋಗ ಅರಸುವವರಿಂದ ಉದ್ಯೋಗ ಸೃಷ್ಟಿಸುವವರನ್ನಾಗಿ ರೂಪಿಸುವ ಇಂತಹ ಕಾರ್ಯಕ್ರಮಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿವೆ. ಬೈಂದೂರಿನಲ್ಲಿ ಆರಂಭವಾಗಿರುವ ಈ ಮಾದರಿ ರಾಜ್ಯದಾದ್ಯಂತ ವಿಸ್ತರಿಸಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಗುರುರಾಜ್ ಗಂಟಿಹೊಳೆ, “ಯುವಕರು ಕೇವಲ ಸರ್ಕಾರಿ ಉದ್ಯೋಗಗಳ ನಿರೀಕ್ಷೆಯಲ್ಲಿ ಕಾಲ ಕಳೆಯದೆ ಸ್ವಂತ ಉದ್ಯಮ ಆರಂಭಿಸುವತ್ತ ಹೆಜ್ಜೆ ಇಡಬೇಕು. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಅವುಗಳನ್ನೇ ಸಾಧನೆಯ ಮೆಟ್ಟಿಲನ್ನಾಗಿ ಮಾಡಿಕೊಂಡಾಗ ಯಶಸ್ಸು ಸಾಧ್ಯವಾಗುತ್ತದೆ. ಕ್ಷೇತ್ರದ ಉದ್ಯಮ ಸ್ಥಾಪಿಸಲು ಆಸಕ್ತಿ ಇರುವ ಯುವಕ-ಯುವತಿಯರಿಗೆ ಸರಿಯಾದ ಮಾರ್ಗದರ್ಶನ ಹಾಗೂ ಅವಕಾಶ ದೊರಕಬೇಕೆಂಬ ಉದ್ದೇಶದಿಂದ ಭೀಮೋದ್ಯಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ಅಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ವಿವಿಧ ಇಲಾಖೆಗಳ ಅಧಿಕಾರಿಗಳು, ಬ್ಯಾಂಕ್‌ಗಳ ಪ್ರತಿನಿಧಿಗಳು ಹಾಗೂ ತಜ್ಞರೊಂದಿಗೆ ನೇರವಾಗಿ ಸಂವಾದ ನಡೆಸಿ, ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡು ಸ್ವಂತ ಉದ್ಯಮ ಆರಂಭಿಸುವ ಕುರಿತು ಮಾಹಿತಿ ಪಡೆದುಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ವಾದಿರಾಜ್, ಎಸ್‌ಸಿ-ಎಸ್‌ಟಿ ಅಧ್ಯಯನ ಟ್ರಸ್ಟ್‌ನ ಮೋಹನ್ ಅಂಗಯ್ಯ ಸ್ವಾಮಿ, ರಾಜ್ಯ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ದಿನಕರ್ ಬಾಬು, ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಕೃಷ್ಣಮೂರ್ತಿ, ಕೊಲ್ಲೂರು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಲಿಂಗ ನಾಯ್ಕ್, ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ., ಮಂಡಲ ಉಪಾಧ್ಯಕ್ಷೆ ಮಾಲತಿ ನಾಯ್ಕ್ ಸೇರಿದಂತೆ ಅನೇಕ ಗಣ್ಯರು, ಜನಪ್ರತಿನಿಧಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ರಾಜ್ಯದಲ್ಲೇ ವಿಶಿಷ್ಟ ಪ್ರಯತ್ನ

ಭೀಮೋದ್ಯಮ ಕಾರ್ಯಕ್ರಮದಲ್ಲಿ ಉದ್ಯಮ ಸ್ಥಾಪನೆ, ಹಣಕಾಸು ನಿರ್ವಹಣೆ, ಬ್ಯಾಂಕ್ ಸಾಲ ಸೌಲಭ್ಯಗಳು, ಮಾರುಕಟ್ಟೆ ಅವಕಾಶಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ವಯಂ ಉದ್ಯೋಗ ಯೋಜನೆಗಳು ಸೇರಿದಂತೆ ಹಲವು ವಿಷಯಗಳ ಕುರಿತು ತಜ್ಞರಿಂದ ಸಮಗ್ರ ಮಾಹಿತಿ ನೀಡಲಾಯಿತು. ಕಾರ್ಯಕ್ರಮಕ್ಕೆ ಭಾಗವಹಿಸಿದ ಯುವಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಬೈಂದೂರು ಕ್ಷೇತ್ರದಲ್ಲಿ ಉದ್ಯಮಶೀಲತೆಯ ಹೊಸ ಅಲೆ ಮೂಡಿಸಿದೆ.

ವಿವಿಧ ಇಲಾಖೆ ಮತ್ತು ಬ್ಯಾಂಕ್‌ಗಳ ಸಕ್ರಿಯ ಭಾಗವಹಿಸುವಿಕೆ

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಮೀನುಗಾರಿಕೆ ಇಲಾಖೆ, ಪಶುಸಂಗೋಪನೆ ಇಲಾಖೆ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಲೀಡ್ ಬ್ಯಾಂಕ್‌ನ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ಪ್ರತಿನಿಧಿಗಳು, ಸ್ವಯಂ ಉದ್ಯೋಗ ತರಬೇತಿ ನೀಡುವ ರುಡ್ಸೆಟ್ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಉದ್ಯಮ ಕ್ಷೇತ್ರದ ಪರಿಣಿತರು ಹಾಜರಿದ್ದು, ಉದ್ಯಮ ಆರಂಭಿಸಲು ಬಯಸುವವರಿಗೆ ಅಗತ್ಯ ಮಾರ್ಗದರ್ಶನ ಮತ್ತು ಮಾಹಿತಿ ನೀಡಿದರು.

ಸಾಧಕರಿಗೆ ಸನ್ಮಾನ

ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿ ಯಶಸ್ವಿ ಉದ್ಯಮಿಗಳಾಗಿ ಗುರುತಿಸಿಕೊಂಡ ಆರು ಮಂದಿ ಸಾಧಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅವರ ಯಶೋಗಾಥೆಗಳು ಯುವಜನತೆಗೆ ಸ್ಫೂರ್ತಿ ತುಂಬಿದವು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಯುವಕರಲ್ಲಿ ಉದ್ಯಮಶೀಲತೆಯ ಆತ್ಮವಿಶ್ವಾಸ ಮೂಡಿಸುವಲ್ಲಿ ಭೀಮೋದ್ಯಮ ಕಾರ್ಯಕ್ರಮ ಮಹತ್ವದ ಹೆಜ್ಜೆಯಾಗಿದ್ದು, ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣ ಆರ್ಥಿಕ ಅಭಿವೃದ್ಧಿಗೆ ಹೊಸ ದಿಕ್ಕು ತೋರಿದ ಕಾರ್ಯಕ್ರಮ ಎಂಬ ಪ್ರಶಂಸೆಗೆ ಪಾತ್ರವಾಗಿದೆ.

Categories
ಕರಾವಳಿ ಸುದ್ದಿ

ಉಡುಪಿ : ಸಿಐಟಿಯು ಪ್ರತಿಭಟನಾ ಮೆರವಣಿಗೆ

ಉಡುಪಿ: ಕನಿಷ್ಠ ಕೂಲಿಯನ್ನು ರಾಜ್ಯ ಸರ್ಕಾರ ಪುನರ್ ಪರಿಶೀಲನೆ ಮಾಡಬೇಕು ಹಾಗೂ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಶುಕ್ರವಾರ ಮಣಿಪಾಲದಲ್ಲಿ ಸಾವಿರಾರು ಕಾರ್ಮಿಕರು ಭಾರಿ ಪ್ರತಿಭಟನೆ ನಡೆಸಿದರು.

ಮಣಿಪಾಲದ ಟೈಗರ್ ಸರ್ಕಲ್‌ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿತು. ಬಳಿಕ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಎಸಿ ಮೂಲಕ ರಾಜ್ಯದ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು. ಇದೇ ವೇಳೆ ಸಾವಿರಾರು ಕಾರ್ಮಿಕರಿಂದ ಸಂಗ್ರಹಿಸಲಾದ ಸಹಿಗಳ ಪ್ರತಿಯನ್ನೂ ಹಸ್ತಾಂತರಿಸಲಾಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಸರ್ಕಾರ ಸ್ಪಂದಿಸಬೇಕೆಂದು ಆಗ್ರಹಿಸಿದರು.

ಸಿಐಟಿಯು ಉಡುಪಿ ಜಿಲ್ಲಾ ಅಧ್ಯಕ್ಷ ಶಶಿಧರ್ ಗೊಲ್ಲ, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ವಿ, ಕೋಶಾಧಿಕಾರಿ ಕವಿರಾಜ್ ಎಸ್ ಕಾಂಚನ್ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಹಂಚು ಕಾರ್ಮಿಕ ಸಂಘ, ಕಟ್ಟಡ ಕಾರ್ಮಿಕ ಸಂಘ, ಅಂಗನವಾಡಿ ಸಂಘ ಹಾಗೂ ಬೀಡಿ ಫೆಡರೇಶನ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Categories
ಶಿಕ್ಷಣ

ಕಾಳಾವರ ವರದರಾಜ ಕಾಲೇಜು ಪ್ರತಿಭಾ ದಿನಾಚರಣೆ

“ಶಿಸ್ತು, ಸುಸಂಸ್ಕೃತ ನಡವಳಿಕೆ ಮೂಲಕ ಭಾರತೀಯ ಸಂಸ್ಕೃತಿಯನ್ನು ವಿದ್ಯಾರ್ಥಿಗಳು ಎತ್ತಿ ಹಿಡಿಯಬೇಕು ಮತ್ತು ಹಿರಿಯವರು ಹಾಕಿಕೊಟ್ಟ ಮಾರ್ಗವನ್ನು ಸದುಪಯೋಗಪಡಿಸಿಕೊಳ್ಳಬೇಕು. ಪ್ರಚಲಿತದಲ್ಲಿ ಸಿಗುವಂತಹ ಅವಕಾಶಗಳ ಸದ್ಬಳಕೆ ಮಾಡಿ ಕೌಶಲ, ಪ್ರತಿಭೆ ಮತ್ತು ನಿಷ್ಠೆಯನ್ನು ಉದ್ದೀಪನಗೊಳಿಸುವುದರಿಂದ ವಿದ್ಯೆಯ ವರ್ಚಸ್ಸು ಅಧಿಕವಾಗುತ್ತದೆ” ಎಂದು ರಾಜಗೋಪಾಲ ಆಚಾರ್ಯ ರಥ ಶಿಲ್ಪಿಗಳು ಕೋಟೇಶ್ವರ ಇವರು ಹೇಳಿದರು.
ಕೋಟೇಶ್ವರದ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ಸರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪ್ರತಿಭಾ ದಿನಾಚರಣೆ ಅಂಗವಾಗಿ ನಡೆದ ಪ್ರತಿಭಾ ಸ್ಪರ್ಧೆ “ಸಿಂಚನ” ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ಧ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಮಾತನಾಡಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಭವಿಷ್ಯದ ಪಯಣದಲ್ಲಿ ಉನ್ನತ ಶಿಖರ ಮುಟ್ಟಬೇಕು ಎಂದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ., ಐಕ್ಯೂಎಸಿ ಸಂಚಾಲಕ ನಾಗರಾಜ ಯು., ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿ ಪ್ರತಿನಿಧಿಗಳಾದ ವೈಷ್ಣವಿ ಮತ್ತು ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು. ಸುಮಶ್ರೀ, ಉಪನ್ಯಾಸಕರು ಕುಂದಾಪುರ, ವಿದೂಷಿ ಶ್ರೀವಿದ್ಯಾ ಸಂದೇಶ, ಭರತನಾಟ್ಯ ಕಲಾವಿದೆ ಉಡುಪಿ ಮತ್ತು ಪ್ರಜ್ಞಾ ಮಾರ್ಪಳ್ಳಿ ಉಪನ್ಯಾಸಕರು ಉಡುಪಿ ನಿರ್ಣಾಯಕರಾಗಿ ಸಹಕರಿಸಿದರು.
ಪ್ರತಿಭಾ ಪ್ರದರ್ಶನ ಸ್ಪರ್ಧೆಯಲ್ಲಿ ಎಂ.ಕಾ0. ತರಗತಿ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು, ಅಂತಿಮ ಬಿ.ಎ. ಮತ್ತು ಬಿ.ಸಿ.ಎ. ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಹಾಗೂ ಬಿ.ಬಿ.ಎ. ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಪಡೆದುಕೊಂಡರು. ಎಂ.ಕಾA. ವಿದ್ಯಾರ್ಥಿನಿ ಅಮೃತ ಮತ್ತು ತಂಡದವರು ಪ್ರಾರ್ಥಿಸಿದರು. ಸಾಂಸ್ಕೃತಿಕ ಸಂಚಾಲಕರಾದ ಡಾ. ಶೇಖರ ಬಿ. ಸ್ವಾಗತಿಸಿದರು. ಉಪನ್ಯಾಸಕರಾದ ಡಾ. ಚೇತನಾ ಎಂ., ಜಯಂತಿ ಬಾÊ ಮತ್ತು ಚೈತ್ರಾ ಹೆಚ್. ಇವರು ನಿರ್ಣಾಯಕರನ್ನು ಪರಿಚಯಿಸಿದರು. ಡಾ. ಭಾಗೀರಥಿ ನಾಯ್ಕ ಸಾಂಸ್ಕೃತಿಕ ಸಂಘದ ಸದಸ್ಯರು ಇವರು ವಂದಿಸಿದರು. ಇತಿಹಾಸ ವಿಭಾಗ ಉಪನ್ಯಾಸಕರಾದ ಶರಾವತಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

Categories
ಶಿಕ್ಷಣ

ಬಿ. ಬಿ. ಹೆಗ್ಡೆ ಕಾಲೇಜು: ತ್ರಾಸಿಯಲ್ಲಿ ಮುಂಗಾರುಪೂರ್ವ ಸ್ವಚ್ಛತಾ ಕಾರ್ಯಕ್ರಮ

ಕುಂದಾಪುರ : ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಆಶ್ರಯದಲ್ಲಿ ಕುಂದಾಪುರ ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್, ತ್ರಾಸಿ ಇವರ ಸಹಯೋಗದೊಂದಿಗೆ ಮುಂಗಾರುಪೂರ್ವ ಸ್ವಚ್ಛತಾ ಕಾರ್ಯಕ್ರಮ ತ್ರಾಸಿ ಗ್ರಾಮ ಪಂಚಾಯತ್ ಪರಿಸರದಲ್ಲಿ ಮೇ 15ರಂದು ನಡೆಯಿತು. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಶ್ರೀ ಸತ್ಯನಾರಾಯಣ. ಜಿ., ತಾಲೂಕು ಪಂಚಾಯತ್ ಕುಂದಾಪುರ ಇಲ್ಲಿನ ವ್ಯವಸ್ಥಾಪಕ ಶ್ರೀ ರಾಮಚಂದ್ರ ಮಯ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶೋಭಾ ಬಿಲ್ಲವ, ಲೆಕ್ಕ ಸಹಾಯಕರು ಮತ್ತು ಸಿಬ್ಬಂದಿ ವರ್ಗ, ಭ್ರಾಮರಿ ಸಂಜೀವಿನಿ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮಾಧಿಕಾರಿಗಳಾದ ಶ್ರೀ ರಾಜೇಶ್ ಶೆಟ್ಟಿ, ಪೂಜಾ ಕುಂದರ್ ಹಾಗೂ ಎನ್.ಎಸ್.ಎಸ್. ಸ್ವಯಂಸೇವಕರು ಉಪಸ್ಥಿತರಿದ್ದರು.