Categories
ಸಾಧನೆ

ಜಿಲ್ಲಾಮಟ್ಟದ ಶ್ರೇಷ್ಠ ಪ್ರಗತಿಪರ ರೈತ ಮಹಿಳೆ ಪ್ರಶಸ್ತಿ

ಕೋಟ : ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಇವರು ಆಯೋಜಿಸಿದ ಕೃಷಿ ಮತ್ತು ತೋಟಗಾರಿಕೆ ಮೇಳ-2024 ಕಾರ್ಯಕ್ರಮದಲ್ಲಿ ಸಮಗ್ರ ಕೃಷಿಯಲ್ಲಿ ಸಾಧಿಸಿದ ಪ್ರಗತಿಯನ್ನು ಪರಿಗಣಸಿ ಕುಂದಾಪುರ ತಾಲೂಕಿನ ದಿ. ಗೋಪಾಲ ದೇವಾಡಿಗ ದೇವಸ್ಥಾನಬೆಟ್ಟು ಅವರ ಪುತ್ರಿ ನಿಶಾ ದೇವಾಡಿಗ ಅವರಿಗೆ ಜಿಲ್ಲಾಮಟ್ಟದ ಶ್ರೇಷ್ಠ ಪ್ರಗತಿಪರ ರೈತ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಿದೆ.

Categories
ಧಾರ್ಮಿಕ

ಇಂದು ಲಕ್ಷ ಕುಂಕುಮಾರ್ಚನೆ

ಕೋಟ : ಶ್ರೀ ಮಹಾಸತೀಶ್ವರೀ ಮಾಸ್ತಿ ಅಮ್ಮನವರ ದೇವಸ್ಥಾನ, ಕೋಡಿ ಕನ್ಯಾಣ ಇಲ್ಲಿ ಇಂದು ಶುಕ್ರವಾರ ಬೆಳಿಗ್ಗೆ 06.30ಕ್ಕೆ ಲಕ್ಷ ಕುಂಕುಮಾರ್ಚನೆ ಅಪರಾಹ್ನ12.30 ಕ್ಕೆ ಅನ್ನಸಂತರ್ಪಣೆ ಜರುಗಲಿರುವುದ್ದು,ಲಕ್ಷ ಕುಂಕುಮಾರ್ಚನೆ ಸಂಕಲ್ಪದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಲು ಶ್ರೀ ದೇಗುಲದ ಪ್ರಕಟಣೆ ತಿಳಿಸಿದೆ.

Categories
ಕರಾವಳಿ ಸುದ್ದಿ

ಉಡುಪಿಯ ಹೊಸ ಬದುಕು ಆಶ್ರಮಕ್ಕೆ ದಿನ ಬಳಕೆಯ ದಿನಸಿ ಕೊಡುಗೆ

ಕೋಟ : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕೋಟ ಲೇಜಿನ್ ವತಿಯಿಂದ ಜ್ಞಾನೇಶ್ವರಿ ಆಚಾರ್‌ರವರ ಪುಣ್ಯ ದಿನದ ನೆನಪಿಗಾಗಿ ಉಡುಪಿಯ ಹೊಸ ಬದುಕು ಆಶ್ರಮದಲ್ಲಿ ದಿನ ಬಳಕೆಯ ದಿನಸಿಗಳನ್ನು ವಿತರಿಸಲಾಯಿತು.
ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕೋಟ ಲೇಜಿನ್ ಅಧ್ಯಕ್ಷ ಕೇಶವ ಆಚಾರ್ ಕೋಟ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು
ಈ ಸಂದರ್ಭದಲ್ಲಿ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಚಿತ್ರ ಕುಮಾರ್, ರಾಷ್ಟ್ರೀಯ ಉಪಾಧ್ಯಕ್ಷ ಹುಸೇನ್ ಹೈಕಾಡಿ, ಹೊಸ ಬದುಕು ಸಂಸ್ಥೆಯ ಟ್ರಸ್ಟಿ ಗಳಾದ ನಿತ್ಯಾನಂದ ಒಳಕಾಡು, ವಿನಾಯಚಂದ್ರ, ಸುಧೀರ್, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಉಡುಪಿ ಕೋಸ್ಟಲ್ ಅಧ್ಯಕ್ಷ ಜಿನತ್ ಪಡುಬಿದ್ರೆ, ಪಂಚವರ್ಣ ಯುವಕ ಮಂಡಲ ಕೋಟದ ಅಧ್ಯಕ್ಷ ಅಜಿತ್ ಆಚಾರ್, ಮಾಜಿ ಅಧ್ಯಕ್ಷರಾದ ಗಿರೀಶ್ ಆಚಾರ್, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕೋಟ ಲೇಜಿನ್‌ನ ಖಜಾಂಚಿ ವಿನಯ ಕುಂದಾಪುರ, ಉಪಾಧ್ಯಕ್ಷ ಕುಮಾರ ಗದಗ, ಜೆಸಿಐ ಕೋಟ ಬ್ರಿಗೇಡಿಯರ್‌ನ ಸುರೇಶ್ ಗಿಳಿಯಾರು ಇನ್ನಿತರರು ಉಪಸ್ಥಿತರಿದ್ದರು.

Categories
ಕರಾವಳಿ ಸುದ್ದಿ

ಆನಂದ ಸಿ ಕುಂದರ್ ರವರಿಗೆ ಅಭಿನಂದನಾ ಕಾರ್ಯಕ್ರಮ

ಕೋಟ : ಸ.ಹಿ.ಪ್ರಾ ಶಾಲೆ ಮಣೂರು ಪಡುಕರೆ ಇಲ್ಲಿ ಶಾಲಾ ಸಮುದಾಯದತ್ತ ಕಾರ್ಯಕ್ರಮದಲ್ಲಿ 2024-25 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆ ಉಡುಪಿ ಜಿಲ್ಲೆಯವರು ಕೊಡ ಮಾಡಲ್ಪಟ್ಟ ಜಿಲ್ಲಾ ಮಟ್ಟದ ಸರಕಾರಿ ಶಾಲೆಗಳ ಅಭಿವೃದ್ಧಿ ಹರಿಕಾರ ಪ್ರಶಸ್ತಿಗೆ ಭಾಜನರಾಗಿರುವ ಶಾಲೆಯ ಮಹಾಪೋಷಕರು ಹಾಗೂ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್ ರವರನ್ನು ಶಾಲೆಯ ಪರವಾಗಿ ಅಭಿನಂದಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಯುಕ್ತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಿವೇಕ್ ಗಾಂವ್ಕರ್, ವಾಹಿನಿ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕುಂದರ್, ಮಾರ್ಗದರ್ಶಿ ಶಿಕ್ಷಕ ಸರ್ವೋತ್ತಮ ನಾಯಕ್, ಶಿಕ್ಷಕರು , ಪೋಷಕರು. ಎಸ್‌ಡಿಎಂಸಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮಂಜುನಾಥ ಹೊಳ್ಳ ಸ್ವಾಗತಿಸಿದರು. ಶಿಕ್ಷಕಿ ಲಲಿತಾ ವಂದನಾರ್ಪಣೆ ಮಾಡಿದರು. ಶಿಕ್ಷಕಿ ನಾಗರತ್ನ ಜಿ ಕಾರ್ಯಕ್ರಮ ನಿರೂಪಿಸಿದರು.

Categories
ಕರಾವಳಿ ಸುದ್ದಿ

ರೋಟರಿ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ

ಕೋಟ : ರೋಟರಿ ಕ್ಲಬ್ ಹಂಗಾರಕಟ್ಟೆ -ಸಾಸ್ತಾನ ಇವರ ಅಶ್ರಯದಲ್ಲಿ ರೋಟರಿ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಪ್ರತಿಭೆಗಳ ದಿಬ್ಬಣ `ಚಿಲುಮೆ-2024′ ಶನಿವಾರ ಮಾಬುಕಳ ಚೇತನಾ ಪ್ರೌಢಶಾಲೆಯಲ್ಲಿ ಜರುಗಿತು.
ರೋಟರಿ ಜಿಲ್ಲಾ ಗವರ್ನರ್ ಸಿ.ಎ. ದೇವ್ ಆನಂದ್ ಅವರು ಸಾಂಸ್ಕೃತಿಕ ಸ್ಪರ್ಧೆ `ಚಿಲುಮೆ-2024’ನ್ನು ಉದ್ಘಾಟಿಸಿ ಮಾತನಾಡಿ, ರೋಟರಿ ವಲಯದ ಸದಸ್ಯರಲ್ಲಿ ಸ್ನ್ನೇಹ, ಸೌಹಾರ್ದತೆಯನ್ನು ಮೂಡಿಸುವ ಈ ಸಾಂಸ್ಕೃತಿಕ ಚಿಲುಮೆ ಕಾರ್ಯಕ್ರಮ ಸುಪ್ತ ಪ್ರತಿಭೆ`ೆಗಳ ಅನಾವರಣಕ್ಕೆ ಒಂದು ವೇದಿಕೆಯಾಗಿದೆ ಎಂದರು.
ಹಂಗಾರಕಟ್ಟೆ – ಸಾಸ್ತಾನ ರೋಟರಿ ಕ್ಲಬ್  ಅಧ್ಯಕ್ಷೆ ಲೀಲಾವತಿ ಗಂಗಾಧರ್‌ ಪೂಜಾರಿ ಆಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ನಿಯೋಜಿತ 2026-27 ರ ಜಿಲ್ಲಾ ಗವರ್ನರ್ ಬಿ.ಎಂ.ಭಟ್. ಸಹಾಯಕ ಗವರ್ನರ್ ರಾಘವೆಂದ್ರ ಎಂ.ಸಾಮಗ , ವಲಯ ಪ್ರತಿನಿಧಿ ರೊ| ಅಲನ್ ವಿ.ಲೂವಿಸ್, ವಲಯ ಪ್ರತಿನಿಧಿಗಳಾದ ರೊ| ದಿನೇಶ್ ಕುಮಾರ್ ನಾಯರಿ, ರೊ| ರಾಜಾರಾಮ ಶೆಟ್ಟಿ, ರೊ| ಶಂಕರ್ ಸುವರ್ಣ, ಕಾರ್ಯಕ್ರಮ ನಿರ್ದೇಶಕ ರೊ| ನರೇಂದ್ರ ಕುಮಾರ್ ಕೋಟ, ಸಾಂಸ್ಕೃತಿಕ ಚಟುವಟಿಕೆಗಳ ಆಧ್ಯಕ್ಷ ರೊ| ವೆಂಕಟೇಶ ಭಟ್ ಉಪಸ್ಥಿತರಿದ್ದರು.
ವಲಯದ ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕ ರೊ| ಮುರಳೀಧರ ನಾಯರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ್ ಚೆಲ್ಲಿಮಕ್ಕಿ ನಿರೂಪಿಸಿದರು. ಕಾರ್ಯದರ್ಶಿ ಸುಲತ ಹೆಗ್ಡೆ ವಂದಿಸಿದರು.

Categories
ಕರಾವಳಿ ಸುದ್ದಿ

ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ

ಸಪ್ಟೆಂಬರ್ ತಿಂಗಳಲ್ಲಿ ನಡೆದ  ಸಿ ಎ ಫೌಂಡೇಶನ್  ಪರೀಕ್ಷೆಯಲ್ಲಿ ತ್ರಿಶಾ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಗಳಿಸಿಕೊಂಡಿದ್ದಾರೆ.

ತ್ರಿಶಾ ವಿದ್ಯಾ ಕಾಲೇಜು ಕಟಪಾಡಿ  ( ಡೇ & ಸಂಧ್ಯಾ ಕಾಲೇಜು) :

ನಿಶಾಂತ್ ದಿವಾಕರ್262), ದಕ್ಷಾ ಜೆ ಶೆಟ್ಟಿ247), ರಿತೇಶ್ ಜೆ ಅಮೀನ್(239), ಮನೋಜ್ ಆರ್ ಕುಂದಾಪುರ235), ಶ್ರೀಶಾ ರಾವ್228), ನಾಗೇಂದ್ರ ಆರ್ ಭಟ್(226), ಪಲ್ಲವಿ ಎಂ(226), ಸೃಜನಿ ಜೆ ಶೆಟ್ಟಿ(221), ಸುಮಂತ್ ಶೆಟ್ಟಿ220), ಐಶ್ವರ್ಯಾ(219), ತೆಂಡೂಲ್ಕರ್ ಕೃಪಾ ನಿಧೀಶ್(218), ತ್ರಿಷಾ ಎಸ್ ಶೆಟ್ಟಿ(217), ಶರಧಿ ಟಿ ಎಸ್(216), ಪೂರ್ವಿ ಜೆ ಸುವರ್ಣ214), ಅಬ್ದುಲ್ ಸಮದ್ ಬೇರಿ(212), ಚೈತನ್ಯ ಎಸ್ ಶೆಟ್ಟಿ(211), ಕೌಶಿಕ್ ಎಸ್ ಕೋಟ್ಯಾನ್(208), ಆದರ್ಶ ಕುಲಾಲ್  203), ಆಕಾಶ್ ಕೆ ನಾಯಕ್202), ಪ್ರಕೃತಿ ಪಿ ನಾಯಕ್200), ಹಾಗೂ ತ್ರಿಶಾ ಕ್ಲಾಸಸ್ ಉಡುಪಿಯಿಂದ ಧ್ಯಾನ್ ಆರ್ ಭಟ್ (248), ಗಂಗಮ್ಮ(224) ಅಂಕಗಳೊಂದಿಗೆ  ಉತ್ತೀರ್ಣರಾಗಿದ್ದಾರೆ.

ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಮಂಗಳೂರು ( ಡೇ & ಸಂಧ್ಯಾ ಕಾಲೇಜು) :

ಆಶಿತಾ ಸುನಿಲ್ ಕುಮಾರ್(217), ಐರೆಲ್ ಮೆರ್ಲಿನ್ ಗ್ರೇಸ್ ರೆಗೊ(216), ತನುಷ್ ಎಸ್ ಎನ್(211), ಪ್ರಜ್ಞಾ ಬಿ(210), ಮಾನ್ಸಿ(209), ಕೀರ್ತನ್(208), ಧನುಷ್ ಆಚಾರ್ಯ ಎಸ್ ಎಚ್(205), ಆಡ್ರಿಯಾ ವಿವಲ್ ಥೋರಸ್(204), ಅಶ್ವಥ್ ಎಸ್ ಬಾಲನ್(200) ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.

ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ತ್ರಿಶಾ ಸಂಸ್ಥೆಯ ಸ್ಥಾಪಕರು ಸಿಎ ಗೋಪಾಲಕೃಷ್ಣ ಭಟ್ ಹಾಗೂ ಸಿದ್ಧಾಂತ್ ಫೌಂಡೇಶನ್ ಟ್ರಸ್ಟಿಗಳಾದ ನಮಿತಾ ಜಿ ಭಟ್ ಮತ್ತು ರಾಮ್ ಪ್ರಭು  ರವರು ಅಭಿನಂದನೆ ಸಲ್ಲಿಸಿದ್ದಾರೆ.

Categories
ಕರಾವಳಿ ಸುದ್ದಿ

ಇಂದು ಕನ್ನಡ ರಥೋತ್ಸವಕ್ಕೆ ಚಾಲನೆ

ಕುಂದಾಪುರ : ಕನ್ನಡ ರಾಜ್ಯೋತ್ಸವದ ನಿಮಿತ್ತ ಪ್ರತಿವರ್ಷದಂತೆ ಈ ವರ್ಷವೂ ಕೂಡ ಕಲಾಕ್ಷೇತ್ರ ಟ್ರಸ್ಟ್ ಕುಂದಾಪುರ ಇವರ ನೇತೃತ್ವದಲ್ಲಿ ಏಳು ದಿನಗಳ ಕಾಲ ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಈ ವರ್ಷವೂ ಕೂಡ ಕನ್ನಡ ಹಬ್ಬವನ್ನು ಆಚರಿಸಲಾಗುತ್ತಿದೆ ಆ ಪ್ರಯುಕ್ತ ಇಂದು ಕುಂದಾಪುರ ನಗರದಲ್ಲಿ ಮಧ್ಯಾಹ್ನ 3:30ಕ್ಕೆ ಕನ್ನಡ ರಥೋತ್ಸವದ ಪುರ ಮೆರವಣಿಗೆ ಜರುಗಲಿದೆ ಮೆರವಣಿಗೆಯಲ್ಲಿ ವಿವಿಧ ಸಮಾಜದ ಮುಖಂಡರು ವಿವಿಧ ಶಾಲೆಗಳ ಎನ್ ಸಿ‌ ಸಿ ಕೆಡೆಟ್ ಗಳು  ಸ್ಕೌಟ್‌ ಹಾಗೂ ಗೈಡ್‌ ವಿದ್ಯಾರ್ಥಿಗಳು ಹಾಗೂ ವಿವಿಧ ಜಾನಪದ ಡೊಳ್ಳು ಕುಣಿತಗಳೊಂದಿಗೆ ಆಕರ್ಷಕ ಟ್ಯಾಬ್ಲೋಗಳು ಭಾಗವಹಿಸಲಿದ್ದು

ಕನ್ನಡ ತಾಯಿ ಭುವನೇಶ್ವರಿಯ ಫೋಟೋವನ್ನು ರಥದಲ್ಲಿ ಕುಳ್ಳಿರಿಸಿ ಅಲಂಕಾರದೊಂದಿಗೆ ನಗರದ ಬೋರ್ಡ ಹೈ ಸ್ಕೂಲ್ ನಿಂದ ಹೊರಟು ಹೊಸ ಬಸ್ ಸ್ಟ್ಯಾಂಡ್ ಅಲ್ಲಿಂದ ಹಳೆ ಬಸ್ ಸ್ಟಾಂಡ್ ಮೂಲಕ ಶಾಸ್ತ್ರಿವೃತ್ತದಲ್ಲಿ  ತಿರುಗಿ ನಂತರ ನಗರದ ಬೋರ್ಡ ಹೈ ಸ್ಕೂಲ್ ನಲ್ಲಿ ಸಂಪನ್ನಗೊಳ್ಳುವುದು ಎಂದು ಕುಂದಾಪುರ ಕಲಾಕ್ಷೇತ್ರ ಟ್ರಸ್ಟ್ ಇದರ ಅಧ್ಯಕ್ಷರಾದ ಬಿ ಕಿಶೋರ್ ಕುಮಾರ್ ಕುಂದಾಪುರ ಇವರು ತಿಳಿಸಿದ್ದಾರೆ

ಕನ್ನಡ ರಥೋತ್ಸವದ ಪೂರ್ವಭಾವಿಯಾಗಿ ಈಗಾಗಲೇ ಕುಂದಾಪುರ ನಗರವನ್ನು ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ 

Categories
ಕರಾವಳಿ ಸುದ್ದಿ

ಯಕ್ಷ ಸಪ್ತಾಹ ಸಮಾರೋಪ

ಕೋಟ : ಹಂಗಾರಕಟ್ಟೆ-ಐರೋಡಿಯ ಯಕ್ಷಗಾನ ಕಲಾಕೇಂದ್ರದ ಆಶ್ರಯದಲ್ಲಿ, ಕಲಾಕೇಂದ್ರದ ಸಂಸ್ಥಾಪಕ ದಿ.ಐರೋಡಿ ಸದಾನಂದ ಹೆಬ್ಬಾರರ ಸಂಸ್ಮರಣೆ, ಸದಾನಂದ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಯಕ್ಷ ಸಪ್ತೋತ್ಸವದ ಸಮಾರೋಪ ಇತ್ತೀಚಿಗೆ ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ನಡೆಯಿತು.
ಯಕ್ಷಗಾನ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಷಿ ಮಾತನಾಡಿ ಯಕ್ಷಗಾನ ಕ್ಷೇತ್ರಕ್ಕೆ ಸದಾನಂದ ಹೆಬ್ಬಾರ್ ಅವರ ಕೊಡುಗೆ ಮಹತ್ವದ್ದು. ಯಕ್ಷಗಾನ ಕಲಾಕೇಂದ್ರದ ಮೂಲಕ ಸಾವಿರಾರು ಮಂದಿ ಉತ್ತಮ ಶಿಷ್ಯರನ್ನು ಅವರ ತಯಾರು ಮಾಡಿದ್ದು, ಕಲೆ ಮೂಲಸತ್ವವನ್ನು ಉಳಿಸಿಕೊಂಡು ಮುಂದೆ ಸಾಗಬೇಕಾದರೆ ಇಂತಹ ಕೇಂದ್ರಗಳು ಅಗತ್ಯ ಎಂದರು.
ಕಲಾಕೇಂದ್ರದ ಅಧ್ಯಕ್ಷ ಆನಂದ ಸಿ.ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಸಂಸ್ಥೆಯು 50 ವರ್ಷವನ್ನು ಪೂರೈಸಿದ್ದು ಮುಂದಿನ ದಿನಗಳಲ್ಲಿ ಕೇಂದ್ರದ ಅಸ್ಥಿತ್ವಕ್ಕೆ ತೊಡಕಾಗಬಾರದು ಎನ್ನುವುದು ಎಲ್ಲ ಕಲಾಸಕ್ತರ ಆಶಯ. ಹೀಗಾಗಿ ಕನಿಷ್ಠ 2ಕೋಟಿ ರೂಪಾಯಿಯನ್ನು ಕಲಾಭಿಮಾನಿಗಳ ಸಹಕಾರದಿಂದ ಠೇವಣಿ  ಇಟ್ಟು  ಅದರ ಬಡ್ಡಿ ಮೊತ್ತದಲ್ಲಿ ನಿರಂತರ ಕಾರ್ಯಕ್ರಮ ಆಯೋಜಿಸುವ ಯೋಚನೆ ಕೇಂದ್ರಕ್ಕಿದೆ ಎಂದರು.
ಒ.ಎನ್.ಜಿ.ಸಿ. ಸಂಸ್ಥೆಯ ನಿವೃತ್ತ ಮಹಾ ಪ್ರಬಂಧಕ ಬನ್ನಾಡಿ ನಾರಾಯಣ ಆಚಾರ್ಯ ಕಲಾಕೇಂದ್ರದೊಂದಿಗೆ ತನ್ನ ಒಡನಾಟವನ್ನು ಮೆಲುಕು ಹಾಕಿದರು.
ಈ ಸಂದರ್ಭ ಶಿಕ್ಷಕ, ರಂಗಭೂಮಿ ಕಲಾವಿದ, ಕನ್ನಡ ಸಾಹಿತ್ಯ ಪರಿಷತ್ತು ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳರಿಗೆ ಸದಾನಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹುಬ್ಬಳ್ಳಿಯ ಹೋಟೆಲ್ ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ಯಕ್ಷ ಕಲಾಸಕ್ತ ಶಂಕರ ಐತಾಳ, ಸಾಲಿಗ್ರಾಮ ಗುರುನರಸಿಂಹ ದೇಗುಲದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಎ.ಪಿ. ಐತಾಳ ಇದ್ದರು.
ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿ, ಅಂಬರೀಷ್ ಭಟ್ ಸಂಸ್ಮರಣಾ ಮಾತನಾಡಿದರು. ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಸಮ್ಮಾನಿತರನ್ನು ಪರಿಚಯಿಸಿದರು. ಮೇಘಶ್ಯಾಮ್ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ಹೆರೆಂಜಾಲು ಪ್ರಶಾಂತ್ ಮಯ್ಯ ವಂದಿಸಿದರು.

Categories
ಸಾಧನೆ

ಸಿಎ ಇಂಟರ್ಮಿಡಿಯೇಟ್ ಪರೀಕ್ಷೆಯಲ್ಲಿ ಉತ್ತೀರ್ಣ

ಕಟಪಾಡಿ : ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಸಪ್ಟೆಂಬರ್ 2024ರಲ್ಲಿ ನಡೆಸಿದ ಸಿಎ  ಇಂಟರ್ಮಿಡಿಯೇಟ್ ಪರೀಕ್ಷೆಯಲ್ಲಿ ಕಾಪು ತಾಲೂಕಿನ ರಕ್ಷಿತಾ ಭಟ್ ಅವರು 341 ಅಂಕಗಳೊಂದಿಗೆ  ಎರಡೂ ಗ್ರೂಪ್ ಗಳಲ್ಲಿ ಉತ್ತೀರ್ಣರಾಗಿದ್ದಾರೆ.

ಇವರು  ಸೂರ್ಯಕಾಂತ್ ಭಟ್ ಹಾಗೂ ಸಹನಾ ಭಟ್  ದಂಪತಿಗಳ ಪುತ್ರಿಯಾಗಿದ್ದು,  ತಮ್ಮ ಸಿಎ  ಫೌಂಡೇಶನ್ ಮತ್ತು ಸಿಎ  ಇಂಟರ್ಮಿಡಿಯೇಟ್  ತರಬೇತಿಯನ್ನು ತ್ರಿಶಾ ಕ್ಲಾಸಸ್ ಉಡುಪಿಯಲ್ಲಿ  ಪಡೆದಿದ್ದಾರೆ. ಪ್ರಸ್ತುತ ಕಟಪಾಡಿಯ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ  ಮಾಡುತ್ತಿದ್ದಾರೆ.

Categories
ಕರಾವಳಿ ಸುದ್ದಿ

ಗುರುಕುಲ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳಿಂದ ದೀಪಾವಳಿ ಹಬ್ಬ ಆಚರಣೆ

ಕೋಟೇಶ್ವರ : ದೀಪಾವಳಿ ಹಬ್ಬದ ಅಂಗವಾಗಿ ಶಾಲಾ ಕಟ್ಟಡವು ಜಗಮಗಿಸುವ ಬೆಳಕಿನ ಜೊತೆ ಸಾಲು ಸಾಲು ದೀಪಗಳು , ಬಣ್ಣ ಬಣ್ಣದ ರಂಗೋಲಿ ಗಳು ಹಬ್ಬದ ಸಂಭ್ರಮ ಹೆಚ್ಚಿಸಿದವು, ಹಬ್ಬದ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಜಂಟಿ ಕಾರ್ಯನಿರ್ವಾಹಕಿ ಶ್ರೀಮತಿ ಅನುಪಮಾ.ಎಸ್. ಶೆಟ್ಟಿ ಮಾತನಾಡಿ ದೀಪಾವಳಿ ಹಬ್ಬವು‌ ಕತ್ತಲೆಯಿಂದ ಬೆಳಕಿನೆಡೆಗೆ ಹೋಗುವುದರ ಸಂಕೇತ ಜೊತೆ ಜೊತೆಗೆ ನಮ್ಮಲ್ಲಿರುವ ಋಣಾತ್ಮಕ ಮನೋಭಾವವನ್ನು ಹೋಗಲಾಡಿಸಿ ಧನಾತ್ಮಕ ಭಾವನೆಗಳನ್ನು ಹೆಚ್ಚಾಗಿಸುವ ಒಳಾರ್ಥ ಒಂದು ಕಡೆ, ಅಷ್ಟೇ ಅಲ್ಲದೆ ಹೊರಗಿನ ಕ್ರೀಮಿ ಕೀಟಗಳ ತೊಂದರೆಯಿಂದ ತಪ್ಪಿಸಿಕೊಳ್ಳಲು ಸಂಜೆಯ ಸಮಯದಲ್ಲಿ ಮನೆಗಳಲ್ಲಿ ದೀಪಗಳನ್ನು ಹಚ್ಚುವುದು ಹಿರಿಯರ ವಾಡಿಕೆ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳೆಲ್ಲ ಮುಗಿದು ಅದರ ಫಸಲನ್ನು ಸಂಭ್ರಮಿಸುವ ಅಂಶವು ಕೂಡ ಈ ಆಚರಣೆಯ ವಿಶೇಷತೆ ಎಂದು ಮಕ್ಕಳಿಗೆ ಮಾಹಿತಿ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀ.ಸುನಿಲ್ ಪ್ಯಾಟ್ರಿಕ್, ಹಾಗೂ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದೀಪಾವಳಿಯ ಮಹತ್ವವನ್ನು ಕುಮಾರಿ.ಅಶ್ವಿತಾ ವಿದ್ಯಾರ್ಥಿಗಳಿಗೆ ಹೇಳಿದರು.
ಕಾರ್ಯಕ್ರಮವನ್ನು ಸಹಶಿಕ್ಷಕಿ ಕೀರ್ತಿ ನಿರೂಪಿಸಿ ವಂದಿಸಿದರು