Categories
ಸಂಘ ಸಂಸ್ಥೆ

ತಪಾಸಣಾ ಶಿಬಿರ

ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‍ರೈಸ್, ಸಾರ್ವಜನಿಕ ಆಸ್ಪತ್ರೆ ಕುಂದಾಪುರ. ಓಅಆ ಹಾಗೂ ಕ್ಷೇಮ ಕೇಂದ್ರ, ಒರಲ್ ಸ್ಕ್ರೀನಿಂಗ್ ವಿಭಾಗ ಕುಂದಾಪುರ ಇವರ ಜಂಟಿ ಸಹಯೋಗದಲ್ಲಿ ಬಿ.ಪಿ., ಮದುಮೇಹ, ಹಾಗೂ ದಂತ ತಪಾಸಣಾ ಶಿಬಿರವನ್ನು ಕುಂದಾಪುರ ಫೇರ್ರಿ ರಸ್ತೆಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ರೋಟರಿ ಅಧ್ಯಕ್ಷ ನಾಗರಾಜ ನಾಯ್ಕ್ ಶಿಬಿರದ ಉದ್ಘಾಟನೆ ನೆರವೇರಿಸಿ, ಶಿಬಿರದ ಮಹತ್ವವನ್ನು ತಿಳಿಸಿದರು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಸರಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗ ಮತ್ತು ಶಾಲೆಯ ಮುಖ್ಯೋಪಾಧ್ಯಾಯರು, ರೋಟರಿ ನಿಕಟಪೂರ್ವ ಕಾರ್ಯದರ್ಶಿ ನವೀನ ಡಿಸೋಜ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರಶಾಂತ ಹವಾಲ್ದಾರ್ ವಂದಿಸಿದರು.

Categories
ಶಿಕ್ಷಣ

ಪ್ರಾಂಶುಪಾಲರಾಗಿ ನೇಮಕ

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಪದವಿ ಕಾಲೇಜು ಆಡಳಿತ ಮಂಡಳಿಯು ಡಾ.ಶುಭಕರ ಆಚಾರಿ ಅವರನ್ನು 1ಆಗಸ್ಟ್ 2023 ರಿಂದ ಪ್ರಾಂಶುಪಾಲರಾಗಿ ನೇಮಕ ಮಾಡಿದೆ. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ.
ಡಾ.ಶುಭಕರಾಚಾರಿ ಅವರು ಮೂಲತಃ ತೀರ್ಥಹಳ್ಳಿಯ ಗಬಡಿ ಗ್ರಾಮದ ಸೀತಾರಾಮ ಆಚಾರ್ಯ ಮತ್ತು ಇಂದಿರಾ ಅವರ ಪುತ್ರ ಶುಭಕರಾಚಾರಿ ತೀರ್ಥಹಳ್ಳಿಯ ತುಂಗಭದ್ರಾ ಮಹಾವಿದ್ಯಾಲಯಲ್ಲಿ ಪದವಿ ಶಿಕ್ಷಣದ ನಂತರ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯದಿಂದ ಪಡೆದು ಡಾಕ್ಟರೇಟ್ ನ್ನು ಮಂಗಳೂರು ವಿಶ್ವವಿದ್ಯಾಲಯದಿಂದ ಪಡೆದರು.
ಸುಮಾರು 30 ವರ್ಷಗಳ ಸುದೀರ್ಘ ಅವಧಿಯಲ್ಲಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ವ್ಯಾಪ್ತಿಯ ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ಕಾರ್ಕಳದ ಭುವನೇಂದ್ರ ಮತ್ತು ಮೂಡುಬಿದಿರೆ ಮಹಾವೀರ ಕಾಲೇಜುಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾಗಿದ್ದರು. ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ನಡೆದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳಾದ 2014ರ ಮಾದರಿ ಸಂಸತ್ತು, 2015ರ ಬುಡಕಟ್ಟು ಸಂಸ್ಕೃತಿ ಅನಾವರಣ 2016ರ ವಿಕಲ ಚೇತನ ಸಮಾವೇಶ 2017ರ ರಾಷ್ಟ್ರಮಟ್ಟದ ಬುಡಕಟ್ಟು ಸಮ್ಮೇಳನ
2019ರಲ್ಲಿ ನಮ್ಮ ಕುಂದಾಪ್ರ ಸ್ವಚ್ಛ ಕುಂದಾಪ್ರ ಕಾರ್ಯಕ್ರಮಗಳ ಸಂಯೋಜಕರಾಗಿ ಕಾರ್ಯಕ್ರಮಗಳನ್ನು ಸಮರ್ಥವಾಗಿ ನಿಭಾಯಿಸಿದರು.
1ಆಗಸ್ಟ್ 2023ರಿಂದ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ ಡಾ.ಶುಭಕರಾಚಾರಿ ನೇಮಕಗೊಂಡು ಕಾಲೇಜನ್ನು ಮುನ್ನಡೆಸಲಿದ್ದಾರೆ

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5125

ಶೋಭಕೃತ್‌ ಸಂವತ್ಸರ

ದಕ್ಷಿಣಾಯಣ

ಗ್ರೀಷ್ಮ ಋತು

ಅಧಿಕ ಶ್ರಾವಣ ಮಾಸ

ಕೃಷ್ಣ ಪಕ್ಷ

ತಿಥಿ:ಪೌರ್ಣಮಿ

ಉತ್ತರಾಷಾಢ ನಕ್ಷತ್ರ

ಮಂಗಳವಾರ 01.08.2023

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಕರಾವಳಿ ಸುದ್ದಿ

ಇಂದು ದ.ಕ, ಉಡುಪಿಗೆ ಮುಖ್ಯಮಂತ್ರಿ

ಇಂದು ಉಡುಪಿಗೆ ಮುಖ್ಯಮಂತ್ರಿ

ಉಡುಪಿ : ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ

ಉಡುಪಿಯಲ್ಲಿ ಸಿದ್ದರಾಮಯ್ಯನವರು ಇಂದು ಪೂರ್ವಾಹ್ನ 12:30 ಕ್ಕೆ ನಗರದ ಮಣಿಪಾಲದ ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಮಂಗಳೂರಿಗೆ ತೆರಳಲಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಆರ್ ಹೆಬ್ಬಾಳ್ಕರ್ ಅವರು ಇಂದು ಮಧ್ಯಾಹ್ನ ನಡೆಯುವ ಉಡುಪಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಭಾಗವಹಿಸಲಿದ್ದಾರೆ

ಮಧ್ಯಾಹ್ನ 3.30 ಕ್ಕೆ ಉಡುಪಿಯಿಂದ ನಿರ್ಗಮಿಸಲಿರುವ ಸಿದ್ದರಾಮಯ್ಯನವರು ಸಂಜೆ 4.15 ಕ್ಕೆ ಮಂಗಳೂರು ನಗರದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ದ.ಕ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸುವರು ಸಭೆಯಲ್ಲಿ ಉಸ್ತುವಾರಿ ಸಚವರಾದ ದಿನೇಶ್‌ ಗೂಂಡುರಾವ್‌ ಪಾಲ್ಗೋಳ್ಳುವರು

Categories
ಕರಾವಳಿ ಸುದ್ದಿ

ದೋಣಿ ದುರಂತ ಓರ್ವ ಸಾವು ಮತ್ತೊಬ್ಬ ನಾಪತ್ತೆ

ಬೈಂದೂರು : ಉಪ್ಪುಂದದ ಕರ್ಕಿಕಳಿ ಎಂಬಲ್ಲಿ ಮಳೆಗಾಲದ ಸಾಂಪ್ರದಾಯಿಕ ಪಟ್ಟೆ ಬಲೆ ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿ ಓರ್ವ ಮೃತಪಟ್ಟು ಮತ್ತೋರ್ವ ನೀರು ಪಾಲಾದ ಘಟನೆ ನಡೆದಿದೆ

ಸಚಿನ್ ಎಂಬುವರ ಮಾಲಕತ್ವದ ಮರ್ಲು ಚಿಕ್ಕು ಎಂಬ ಹೆಸರಿನ ದೋಣಿ ಸಂಪೂರ್ಣವಾಗಿ ಮುಳುಗಡೆಯಾಗಿದೆ ಕಡಲು ಪಾಲಾದ ಮೀನುಗಾರನಿಗಾಗಿ ತೀವೃ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ

ದೋಣಿಯಲ್ಲಿ ಆರು ಜನರಿದ್ದು ನಾಲ್ವರು ಈಜಿ ದಡ ಸೇರಿದ್ದಾರೆ ನಾಗೇಶ್ (30 ವರ್ಷ) ಎಂಬುವವರೇ ಮೃತ ದುರ್ದೈವಿಯಾಗಿದ್ದು ಸತೀಶ್ (29 ವರ್ಷ) ಎಂಬವರು ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ

ಘಟನಾ ಸ್ಥಳಕ್ಕೆ ಬೈಂದೂರು ತಹಸೀಲ್ದಾರ್‌ ಶ್ರೀಕಾಂತ್ ಕೆ ಹೆಗಡೆ ಬೈಂದೂರು  ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ ಬೈಂದೂರು ಅಗ್ನಿಶಾಮಕ ದಳ ಕೋಸ್ಟಲ್ ಗಾರ್ಡ್ ಮೀನುಗಾರಿಕಾ ಸಹಾಯಕ ನಿರ್ದೇಶಕರಾದ ಸುಮಲತಾ ಮುಳುಗು ತಜ್ಞರಾದ ದಿನೇಶ್‌ ಖಾರ್ವಿ ನಾಟಾ ದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ ಖಾರ್ವಿ ಉಪ್ಪುಂದ  ಇತರ ಸಂಘ ಸಂಸ್ಥೆಗಳ ಸದಸ್ಯರು ಹಾಜರಿದ್ದರು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ