Categories
ಪಂಚಾಂಗ

ಶುಭ ದಿನದ ಪಂಚಾಂಗ

 

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5125

ಶೋಭಕೃತ್‌ ಸ೦ವತ್ಸರ

ಉತ್ತರಾಯಣ

ಶಿಶಿರ ಋತು

ಮಾಘ ಮಾಸ

ಕೃಷ್ಣ : ಪಕ್ಷ

ವಿಶಾಖೆ : ನಕ್ಷತ್ರ

ಸಪ್ತಮಿ : ತಿಥಿ

02.03.2024

ಶನಿವಾರ

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಬ್ರೇಕಿಂಗ್ ನ್ಯೂಸ್

ಪತ್ರಕರ್ತ ಮನೋಹರ್ ಪ್ರಸಾದ್ ನಿಧನ

ಮಂಗಳೂರು : ಖ್ಯಾತ ಪತ್ರಕರ್ತ ಉತ್ತಮ ಕಥೆಗಾರ ಹಾಗೂ ಕವಿ ಮನೋಹರ್ ಪ್ರಸಾದ್ ಇಂದು ಮುಂಜಾನೆ ನಿಧನ ಹೊಂದಿದ್ದಾರೆ ಅವರಿಗೆ 64 ವರ್ಷ ವಯಸ್ಸಾಗಿತ್ತು

ಮೂಲತಃ ಕಾರ್ಕಳ ತಾಲೂಕಿನನವರಾದ ಮನೋಹರ್ ಪ್ರಸಾದ್ ರವರು ಮಂಗಳೂರಿನಲ್ಲಿ ಕಾಲೇಜು ಪದವಿ ಶಿಕ್ಷಣವನ್ನು ಪೂರ್ತಿಗೊಳಿಸಿ ನವ ಭಾರತ ಪತ್ರಿಕೆಯಲ್ಲಿ ಪತ್ರಿಕಾ ವೃತ್ತಿ ಜೀವನವನ್ನು ಆರಂಭಿಸಿದ್ದರು ಬಳಿಕ ಉದಯವಾಣಿ ಪತ್ರಿಕೆಗೆ ಮಂಗಳೂರು ವರದಿಗಾರರಾಗಿ ಸೇರ್ಪಡೆಗೊಂಡಿದ್ದು ಪ್ರಸ್ತುತ ಸಹಾಯಕ ಸಂಪಾದಕರ ಹುದ್ದೆಯವರೆಗೆ ಸತತ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ಕಳೆದು ಎರಡು ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದರು

ಪತ್ರಕರ್ತನಾಗಿ ರಂಗಭೂಮಿ ಕಲಾವಿದನಾಗಿ ಚಲನಚಿತ್ರ ನಟನಾಗಿ ಹಾಗೂ ಉತ್ತಮ ಕಾರ್ಯಕ್ರಮ ನಿರೂಪಕನಾದ ಮನೋಹರ್ ಪ್ರಸಾದ್ ತಮ್ಮ ಸಾಧನೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಂದೇಶ ಪ್ರತಿಷ್ಠಾನದ ಪ್ರಶಸ್ತಿಯನ್ನು ಪಡೆದಿದ್ದಾರೆ ಕರ್ನಾಟಕ ಕರಾವಳಿ ಇತಿಹಾಸದ ಕುರಿತು 68 ಸಂಶೋಧನೆಗಳನ್ನು ಅವರು ಬರೆದಿದ್ದನು ಇಲ್ಲಿ ಸ್ಮರಿಸಬಹುದು

Categories
ಕರಾವಳಿ ಸುದ್ದಿ

ಹಟ್ಟಿಯಂಗಡಿ ನೂತನ ದೇಗುಲ ಲೋಕಾರ್ಪಣೆಗೆ ಸಿಧ್ಧತೆ

ಕುಂದಾಪುರ : ಶ್ರೀ ಸಿಧ್ದಿವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ದಿವಂಗತ ವೇದಮೂರ್ತಿ ಹಟ್ಟಿಅಂಗಡಿ ರಾಮಚಂದ್ರ ಭಟ್ಟರ ದಿವ್ಯ ಸಂಕಲ್ಪದ ಸ್ವರೂಪದಂತೆ ಇತಿಹಾಸ ಪ್ರಸಿದ್ಧ ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ನವೀಕೃತ ದೇವಾಲಯದ ಲೋಕಾರ್ಪಣೆಗೆ ಸರ್ವ ಸಿದ್ಧತೆಗಳು ನಡೆದಿದ್ದು, ಮಾರ್ಚ್ 13 ರಿಂದ 17ರ ತನಕ ಧಾರ್ಮಿಕ, ಸಾಂಸ್ಕೃತಿಕ ಸಮಾರಂಭಗಳು ನಡೆಯಲಿವೆ. ಬ್ರಹ್ಮಕಲಶೋತ್ಸವ, ಲಕ್ಷಮೋದಕ ಹೋಮ ಶತ ಚಂಡಿಕಾ ಯಾಗ 2016 ತೆಂಗಿನಕಾಯಿ ಗಣಹೋಮ, ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಭಕ್ತಾಭಿಮಾನಿಗಳು ಈ ಐದು ದಿನಗಳ ಧಾರ್ಮಿಕ ಉತ್ಸವಗಳಲ್ಲಿ ಪಾಲ್ಗೊಳ್ಳಬೇಕೆಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಬಿ. ಅಪ್ಪಣ್ಣ ಹೆಗ್ಡೆ, ಗೌರವಾಧ್ಯಕ್ಷರಾದ ರಮಾದೇವಿ ರಾಮಚಂದ್ರ ಭಟ್ಟ ಹಾಗೂ ದೇಗುಲದ ಧರ್ಮದರ್ಶಿಗಳಾದ  ಹೆಚ್. ಬಾಲಚಂದ್ರ ಭಟ್ಟ ವಿನಂತಿಸಿದ್ದಾರೆ

13-03-2024 ರಂದು ಜಗದ್ಗುರು ವಿಧುಶೇಖರ ಭಾರತೀ ಮಹಾ ಸ್ವಾಮಿಗಳು ಆಗಮಿಸಿ ನೂತನ ದೇವಾಲಯದ ಲೋಕಾರ್ಪಣೆ, ಶಿಖರ ಕಲಶ ಸ್ಥಾಪನೆ, ಅಭಿಷೇಕ ನೆರವೇರಿಸಿ ಆಶೀರ್ವದಿಸಲಿದ್ದಾರೆ. ಸಂಜೆ 5 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಿ. ವೀರೇಂದ್ರ ಹೆಗ್ಗಡೆಯವರು ಆಗಮಿಸಿ ಶ್ರೀ ದೇವರಿಗೆ ಬೆಳ್ಳಿರಥ ಸಮರ್ಪಿಸಲಿದ್ದಾರೆ

14-03-2024 ರಂದು ಲಕ್ಷಮೋದಕ ಹವನ ಮುಂದುವರಿಯಲಿದ್ದು, ಶ್ರೀ ಸೋಂದಾ ಸ್ವರ್ಣವಲ್ಲಿ ಮಠಾಧೀಶ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ಆಶೀರ್ವಚನ ನಡೆಯಲಿದೆ. ಸಂಜೆ 6ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಬ್ರಹ್ಮಕಲಶೋತ್ಸವ ಶುಭ ಸಂದರ್ಭದಲ್ಲಿ ಶ್ರೀ ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಉಪಸ್ಥಿತರಿರುತ್ತಾರೆ.

15-03-2024 ರಂದು ಲಕ್ಷಮೋದಕ ಹವನದ ಪೂರ್ಣಾಹುತಿ ನಡೆಯಲಿದ್ದು, ಸಂಜೆ ಧಾರ್ಮಿಕ ಸಭೆಯಲ್ಲಿ ಸಾಂದೀಪನಿ ಕೇಮಾರು ಮಠಾಧೀಶರಾದ ಶ್ರೀ ಈಶ ವಿಠಲದಾಸ ಸ್ವಾಮೀಜಿಗಳು ಆಶೀರ್ವಚನ ಮಾಡುವರು.

16-03-2024 do ಶತಚಂಡಿಯಾಗ ಪೂರ್ಣಾಹುತಿ ನಡೆಯಲಿದ್ದು, ಶ್ರೀ ಬಾಳೆಕುದ್ರು ಮಠಾಧೀಶ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರು, ಹೊರನಾಡು ಕ್ಷೇತ್ರದ ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಯಿಸರು ಉಪಸ್ಥಿತರಿರುತ್ತಾರೆ, ಸಂಜೆ ಧಾರ್ಮಿಕ ಸಭೆಯಲ್ಲಿ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಗಳು ಆಶೀರ್ವಚನ ಮಾಡಲಿದ್ದಾರೆ.

17-03-2024 ರಂದು 2016 ತೆಂಗಿನಕಾಯಿ ಗಣಹೋಮ ನಡೆಯಲಿದ್ದು, ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಚಿತೈಸಿ ರಜತ ಕಲಶಾಭಿಷೇಕ, ಪ್ರಧಾನ ಕಲಶಾಭಿಷೇಕ ಮತ್ತು ಕನಕಾಭಿಷೇಕ ಗಣಹವನದ ಪೂರ್ಣಾಹುತಿಯಲ್ಲಿ ಉಪಸ್ಥಿತರಿದ್ದು ಆಶೀರ್ವಚನ ಮಾಡಲಿದ್ದಾರೆ. ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಆನೆಗುಂದಿ ಮಹಾ ಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿ, ಗಾಣಗಾಪುರ ಶ್ರೀ ಗುರುದೇವತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ಮಾಡಲಿರುವರು. ಪ್ರತೀ ದಿನ ಧಾರ್ಮಿಕ ಸಭೆಯಲ್ಲಿ ಹಲವರು ಗಣ್ಯ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ. ಪ್ರತೀ ದಿನ ರಾತ್ರಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸಲಾಗಿದೆ. 

Categories
ಕರಾವಳಿ ಸುದ್ದಿ

ಪುತ್ತಿಲ ಪಕ್ಷೇತರರಾಗಿ ಸ್ಪರ್ಧೆ

ಪುತ್ತೂರು : ದಕ್ಷಿಣಕನ್ನಡದಲ್ಲಿ ಬಿಜೆಪಿಗೆ ತಲೆನೋವಾಗಿದ್ದ ಪುತ್ತಿಲ ಪರಿವಾರದ ವಿವಾದ ಇದೀಗ ಅಂತ್ಯಕ್ಕೆ ಬಂದಿದ್ದು, ಬಿಜೆಪಿ ನಾಯಕರೊಂದಿಗೆ ನಡೆದಿದ್ದ ಮಾತುಕತೆ ವಿಫಲಗೊಂಡ ಹಿನ್ನಲೆ ಇದೀಗ ಅರುಣ್ ಕುಮಾರ್ ಪುತ್ತಿಲ ಲೋಕಸಭಾ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಾರೆ ಎಂದು ಪುತ್ತಿಲ ಪರಿವಾರ ಘೋಷಿಸಿದೆ.

ಪುತ್ತೂರಿನಲ್ಲಿ ಪುತ್ತಿಲ ಪರಿವಾರದಿಂದ ನಡೆದ ಸುದ್ದಿಗೋಷ್ಟಿ ಮಾತನಾಡಿದ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನಕುಮಾರ್ ಮಾರ್ತಾ ಅರುಣ್ ಕುಮಾರ್ ಪುತ್ತಿಲ ದಕ್ಷಿಣಕನ್ನಡ ಲೋಕಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರೆ ಎಂದರು.

ಬಿಜೆಪಿ ಸೇರ್ಪಡೆಗೆ ಕುರಿತಂತೆ ಹಲವು ಸುತ್ತಿನ ಮಾತುಕತೆ ನಡೆದಿತ್ತು, ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರನ್ನು ಪುತ್ತಿಲ ಬೇಟಿಯಾಗಿದ್ದರು, ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲು ಹಲವು ಬೇಡಿಕೆ ಪುತ್ತಿಲ ಪರಿವಾರ ಇಟ್ಟಿತ್ತು, ಆದರೆ ಬಿಜೆಪಿ ಸಾಮಾನ್ಯ ಕಾರ್ಯಕರ್ತರಾಗಿ ಬಿಜೆಪಿ ಸೇರ್ಪಡೆಯಾಗಬೇಕೆಂದು ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಮಾತುಕತೆ ವಿಫಲವಾಗಿದ್ದು. ಪುತ್ತಿಲ ಪರಿವಾರದ ಷರತ್ತಿಗೆ ಯಾವುದೇ ಮಾನ್ಯತೆ ನೀಡದ ಹಿನ್ನಲೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆಗೆ ಪುತ್ತಿಲ ಪರಿವಾರ ನಿರ್ಧರಿಸಿದೆ.

Categories
ಕರಾವಳಿ ಸುದ್ದಿ

ಮೂರನೇ ಬಾರಿ ಪ್ರಧಾನಿಯಾಗಿ ಮೋದಿ

ಶಿವಮೊಗ್ಗ : ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. ಗುರುವಾರ ಪಟ್ಟಣದ ಮಾರಿಕಾಂಬ ಬಯಲು ರಂಗಮಂದಿರದಲ್ಲಿ ನಡೆದ ಬಿಜೆಪಿ ಹಿಂದುಳಿದ ವರ್ಗದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಬಾರಿಯ ಲೋಕಸಭಾ ಚುನಾವಣೆ ದೇಶದ ಭವಿಷ್ಯ ರೂಪಿಸುವ ಬಹು ನಿರ್ಣಾಯಕ ಚುನಾವಣೆಯಾಗಿದ್ದು, ದೇಶ ಮಾತ್ರವಲ್ಲ ಜಗತ್ತು ಕೂಡ ಕಾತುರದಿಂದ ಈ ಚುನಾವಣೆಯನ್ನು ಎದುರು ನೋಡುತ್ತಿದೆ. ಸತತ ಮೂರನೇ ಬಾರಿ ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಖುದ್ದು ಕೇಂದ್ರದಲ್ಲಿ ವಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರೇ ಬಿಜೆಪಿ 400ಕ್ಕೂ ಅಧಿಕ ಸೀಟುಗಳೊಂದಿಗೆ ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿದಿದ್ದಾರೆ ಎಂದರು. ‘ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಜತೆ ಸೇರಿಕೊಂಡು ರಾಜ್ಯದ ಎಲ್ಲ 28 ಕ್ಷೇತ್ರವನ್ನೂ ಗೆಲ್ಲುವ ಮೂಲಕ ರಾಜ್ಯ ರಾಜಕೀಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆಯುವ ದಿನ ಬಿಜೆಪಿ ಪಾಲಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Categories
ಕರಾವಳಿ ಸುದ್ದಿ

ಇನ್ನೂ ಎರಡು ದೇಗುಲಗಳು ಮಸೀದಿ ಮುಕ್ತ

ಶಿಕಾರಿಪುರ : ಅಯೋಧ್ಯೆಯಲ್ಲಿ ಇದೀಗ ರಾಮಮಂದಿರ ನಿರ್ಮಾಣವಾಗಿದೆ. ಮುಂದೆ ಇನ್ನೂ ಎರಡು ಪುಣ್ಯ ಕ್ಷೇತ್ರವನ್ನು ಮಸೀದಿ ಮುಕ್ತ ಮಾಡಲಿದ್ದೇವೆ  ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಹೇಳಿದರು. ಗುರುವಾರ ಪಟ್ಟಣದ ಹಳೇಸಂತೆ ಮೈದಾನದ ಬಳಿಯಿರುವ ಶ್ರೀ ಮಾರಿಕಾಂಬ ಬಯಲು ರಂಗ ಮಂದಿರದಲ್ಲಿ ಬಿಜೆಪಿ ವತಿಯಿಂದ ನಡೆದ ಹಿಂದುಳಿದ ವರ್ಗಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಹಿಂದುಗಳ ಅವಿರತ ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಅದೇ ರೀತಿ ಮಥುರಾ, ಕಾಶಿಯನ್ನು ಮಸೀದಿಯಿಂದ ಮುಕ್ತಗೊಳಿಸಲಾಗುವುದು. ಈಗಾಗಲೇ ಸುಪ್ರೀಂ ಕೋರ್ಟಿನ ತೀರ್ಪು ದೇಶದ ಹಿಂದುಗಳ ಪರವಾಗಿದ್ದು, ಈ ಎರಡೂ ಪುಣ್ಯ ಕ್ಷೇತ್ರಗಳು ಮಸೀದಿ ಮುಕ್ತವಾಗುವುದು ಶತಃಸಿದ್ದ ಎಂದರು. ಕನಕದಾಸರು ಇಡೀ ಹಿಂದೂ ಸಮಾಜವನ್ನು ಒಗ್ಗೂಡಿಸಿಕೊಂಡು ಹೋದ ಮಹಾನ್ ಮಾನವತಾವಾದಿ. ಅವರ ಹೆಸರಿನಲ್ಲೂ ಕಾಂಗ್ರೆಸ್ಸಿಗರು ಜಾತಿ ಮಾಡುತ್ತಿರುವುದು ಶೋಚನಿಯ. ಈ ಚುನಾವಣೆ ಮೂಲಕ ಮೋದಿ ಅವರನ್ನು ಮತ್ತೆ ಪ್ರಧಾನಿಯಾಗಿಸುವ ಮೂಲಕ ಧರ್ಮ, ದೇಶ ಉಳಿಸಬೇಕು ಎಂದು ತಿಳಿಸಿದರು.

Categories
ಕರಾವಳಿ ಸುದ್ದಿ

ಡಾನ್‌ ಶಾಜಾಹಾನ್‌ ಬಲೆಗೆ

ಬಸಿರ್‌ಹಾತ್ : ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ದ್ವೀಪ ಪ್ರದೇಶದ ಕುಖ್ಯಾತ ಡಾನ್, ಟಿಎಂಸಿ ಮುಖಂಡ ಶಾಜಹಾನ್‌ನನ್ನು ಗುರುವಾರ ಬೆಳಗಿನ ಜಾವ ಬಂಧಿಸಲಾಗಿದೆ. ಕಳೆದ 55 ದಿನಗಳಿಂದ ನಾಪತ್ತೆಯಾಗಿದ್ದ ಕುಖ್ಯಾತ ಭೂವಂಚಕ, ಮಹಿಳಾ ಪೀಡಕನ ಬಂಧನದೊಂದಿಗೆ ಈತನ ಬಂಧನಕ್ಕಾಗಿ ಕಳೆದ 2 ತಿಂಗಳಿಂದ ಬೃಹತ್‌ ಹೋರಾಟ ನಡೆಸಿದ್ದ ದಮನಿತ ಸಮುದಾಯ ಮತ್ತು ಹಿಂದೂ ಮಹಿಳೆಯರಿಗೆ ದೊಡ್ಡ ಜಯ ಸಿಕ್ಕಂತಾಗಿದೆ. ಅವರೆಲ್ಲರೂ ಸಂಭ್ರಮಾಚರಣೆ ಮಾಡಿದ್ದಾರೆ.

ಸಂದೇಶ್‌ಖಾಲಿಯಿಂದ ಕೇವಲ 30 ಕಿ.ಮೀ ದೂರದ ಬಮನ್‌ಪುಕರ್ ಪ್ರದೇಶದ ಮನೆಯೊಂದರಲ್ಲಿ ಶಾಜಹಾನ್, ತನ್ನ ಸಂಗಡಿಗರೊಂದಿಗೆ ಸಿಕ್ಕಿಬಿದ್ದಿದ್ದಾನೆ.ಬಂಧನದ ಬೆನ್ನಲ್ಲೇ ಆತನನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ ಶಾಜಹಾನ್ ಶೇಖ್ನನ್ನು 10 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿದೆ. ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರವಾಗಿದೆ. ಈ ನಡುವೆ ಈತನ ಪ್ರಕರಣದಲ್ಲಿ ಭಾರೀ ಮುಖಭಂಗಕ್ಕೆ ಒಳಗಾಗಿದ್ದ ಮಮತಾ ಬ್ಯಾನರ್ಜಿ ಅವರ ಟಿಎಂಸಿ, ಈತನನ್ನು ಸರ್ಕಾರದಲ್ಲಿ ಅನುಭವಿಸುತ್ತಿದ್ದ ನಿಗಮ-ಮಂಡಳಿಗಳ ಹುದ್ದೆಯಿಂದ ವಜಾ ಮಾಡಿದ್ದು, ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿದೆ.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5125

ಶೋಭಕೃತ್‌ ಸ೦ವತ್ಸರ

ಉತ್ತರಾಯಣ

ಶಿಶಿರ ಋತು

ಮಾಘ ಮಾಸ

ಕೃಷ್ಣ : ಪಕ್ಷ

ಸ್ವಾತಿ : ನಕ್ಷತ್ರ

ಷಷ್ಠಿ : ತಿಥಿ

01.03.2024

ಶುಕ್ರವಾರ

ಈ ದಿನ ಎಲ್ಲರಿಗೂ ಶುಭವಾಗಲಿ