Categories
ಶಿಕ್ಷಣ

   ಜಾವಾ ಅಭಿವೃದ್ಧಿ ಕುರಿತು ಇನ್ಫೋಸಿಸ್ ತರಬೇತಿ      

ಕುಂದಾಪುರ : ಐಸಿಟಿ ಅಕಾಡೆಮಿಯ ಸಹಯೋಗದೊಂದಿಗೆ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಕುಂದಾಪುರದಲ್ಲಿ ಜಾವಾ ಅಭಿವೃದ್ಧಿ ಕುರಿತು ಇನ್ಫೋಸಿಸ್ ತರಬೇತಿ ಕಾರ್ಯಕ್ರಮ ಪ್ರಾರಂಭವಾಗಿದೆ. ಈ  ತರಬೇತಿಯು 100 ಗಂಟೆಯದು ಮತ್ತು 58 ವಿದ್ಯಾರ್ಥಿಗಳ ಎರಡು ಬ್ಯಾಚ್‌ಗಳಲ್ಲಿ ನಡೆಸಲಾಗುತ್ತದೆ.ಈ ತರಬೇತಿಯ ಮೇಲ್ವಿಚಾರಣೆ ಮಾಡಲು ಐಸಿಟಿ ಅಕಾಡೆಮಿಯ ಇನ್ಫೋಸಿಸ್ ಪ್ರಾಜೆಕ್ಟ್ ಸಂಯೋಜಕರಾದ ಶ್ರೀ ಪ್ರವೀಣ್ ಮತ್ತು ಐಸಿಟಿ ಸಂಯೋಜಕರಾದ ಶ್ರೀ ವಿಘ್ನೇಶ್ ಅವರು ಕೈಜೋಡಿರುತ್ತಾರೆ. ಈ ಕಾರ್ಯಕ್ರಮವು  ವಿದ್ಯಾರ್ಥಿಗಳನ್ನು ಜಾವಾ ಅಭಿವೃದ್ಧಿಯಲ್ಲಿ ಅಗತ್ಯ ಕೌಶಲ್ಯಗಳೊಂದಿಗೆ ಸಬಲೀಕರಣ ಗೊಳಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಅಲ್ಲದೆ ಟೆಕ್ ಉದ್ಯಮದಲ್ಲಿ ಅವರ ಭವಿಷ್ಯದ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ. ಈ ತರಬೇತಿಯನ್ನು ಕಾಲೇಜಿನ ಪ್ಲೇಸ್ಮೆಂಟ್ ವಿಭಾಗ ಮುಖ್ಯಸ್ಥರಾದ ಪ್ರೊಫೆಸರ್ ಅಮೃತಮಾಲಾ ಮತ್ತು ಪ್ಲೇಸ್ಮೆಂಟ್ ಆಫೀಸರ್  ಪ್ರೊಫೆಸರ್ ಅಕ್ಷತಾ ನಾಯಕ್ ರವರು ಸಂಯೋಜಿಸಿರುತ್ತಾರೆ.

Categories
ಕರಾವಳಿ ಸುದ್ದಿ

ವಿದ್ಯಾರ್ಥಿನಿ ನಯನ ಜಿಲ್ಲಾ ಮಟ್ಟಕ್ಕೆ

ಕೋಟ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬ್ರಹ್ಮಾವರ ವಲಯ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು( ಪ್ರೌಢಶಾಲಾ ವಿಭಾಗ) ಕೆಮ್ಮಣ್ಣು ಇವರ ಜಂಟಿ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಚೆಸ್ ಪಂದ್ಯಾಟದಲ್ಲಿ ವಿಜೇತರಾಗಿ ಉಡುಪಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಸೋಮ ಬಂಗೇರ ಸ್ಮಾರಕ ಸರಕಾರಿ ಪ್ರೌಢಶಾಲೆ, ಕೋಡಿಕನ್ಯಾನ ಇಲ್ಲಿಯ ಹತ್ತನೇ ತರಗತಿ ವಿದ್ಯಾರ್ಥಿನಿ ನಯನ. ಇವರನ್ನು ಶಾಲಾ ಶಿಕ್ಷಕ ವೃಂದ, ಎಸ್‌ಡಿಎಂಸಿ, ವಿದ್ಯಾರ್ಥಿ ವೃಂದ ಹಾಗೂ ಪೋಷಕ ವೃಂದದವರು ಅಭಿನಂದಿಸಿದೆ

Categories
ಕರಾವಳಿ ಸುದ್ದಿ

ಶ್ರೀ ಗುರು ನರಸಿಂಹ ದೇವಳದಲ್ಲಿ ವಿಟ್ಲಪಿಂಡಿ

ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಳದಲ್ಲಿ ಬುಧವಾರ ವಿಟ್ಲಪಿಂಡಿಯನ್ನು ಸಂಭ್ರಮದಿAದ ಆಚರಿಸಲಾಯಿತು.
ಆ ಪ್ರಯುಕ್ತ ಶ್ರೀದೇವರು ಪಲ್ಲಕಿ ಉತ್ಸವ ಮೆರವಣಿಗೆಯಲ್ಲಿ ಮೊಸರು ಕುಡಿಕೆಗಳನ್ನ ಒಡೆಯುತ್ತ ಯಡಬೆಟ್ಟು ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಹೋಗಿ ಅಲ್ಲಿಯ ಗ್ರಾಮಸ್ಥರಿಂದ ಪೂಜೆಯನ್ನು ಸ್ವೀಕರಿಸಿ ಶ್ರೀ ಆಂಜನೇಯ ದೇವಳಕ್ಕೆ ಬಂದು ಅಲ್ಲಿ ಅಷ್ಟಾವಧಾನ ಪೂಜೆ ಪೂರೈಸಿ ನಂತರ ಶ್ರೀ ದೇವಳಕ್ಕೆ ಹಿಂತಿರುಗಲಾಯಿತು.
ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ ಕೆ. ಎಸ್ ಕಾರಂತ, ಕಾರ್ಯದರ್ಶಿ ಲಕ್ಷಿ÷್ಮÃನಾರಾಯಣ ತುಂಗ, ಕೂ. ಮ. ಜ ಸಾಲಿಗ್ರಾಮ ಅಂಗಸAಸ್ಥೆಯ ಅಧ್ಯಕ್ಷ ಶ್ರೀಪತಿ ಅಧಿಕಾರಿ ಮತ್ತು ಪದಾಧಿಕಾರಿಗಳು ಗ್ರಾಮಮೋಕ್ತೇಸರರು ಹಾಗು ಮತ್ತಿತ್ತರು ಉತ್ಸವದಲ್ಲಿ ಪಾಲ್ಗೊಂಡರು.

 

Categories
ಕರಾವಳಿ ಸುದ್ದಿ

“ಕಲಿಯುಗದ ಕಲ್ಪವೃಕ್ಷ”- ಶಾಸಕ ಕಿರಣ್ ಕೊಡ್ಗಿ

ಕುಂದಾಪುರ :  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಾತೃ ವಾತ್ಸಲ್ಯ ನೀಡುವ ಸಂಸ್ಥೆಯಾಗಿದೆ ಶಿಕ್ಷಣಕ್ಕೆ ಪೂರಕವಾಗಿ ಜ್ಞಾನದೀಪ ಶಿಕ್ಷಕರ ಒದಗಣೆ, ವಿದ್ಯಾರ್ಥಿಗಳಿಗೆ ಶಿಷ್ಯ ವೇತನ, ಸರಕಾರಿ ಶಾಲೆಗಳಿಗೆ ಪೀಠೋಪಕರಣಗಳ ಜೊತೆಗೆ ಶಿಕ್ಷಣ ಆರೋಗ್ಯ ಮಹಿಳಾ ಸಬಲೀಕರಣ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ನೀಡುತ್ತಿರುವ ಸಂಸ್ಥೆಯನ್ನ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿಯವರು ಮಾತನಾಡುತ್ತ “ಕಲಿಯುಗದ ಕಲ್ಪವೃಕ್ಷ”ವೆಂದರೆ ತಪ್ಪಾಗಲಾರದು ಎಂದು ಅವರು ಕೋಟೇಶ್ವರ ವಿಶ್ವಕರ್ಮ ಸಭಾ ಭವನದಲ್ಲಿ ಕುಂದಾಪುರ ತಾಲೂಕ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನ ಸೌಲಭ್ಯಗಳನ್ನು ವಿತರಿಸಿ ಮಾತನಾಡುತಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಮುತ್ಸದ್ದಿ ಮಾಜಿ ಶಾಸಕರಾದ ಅಪ್ಪಣ್ಣ ಹೆಗ್ಡೆಯವರು ಮಾತನಾಡುತ್ತಾ ಧರ್ಮಸ್ಥಳ ಸಂಸ್ಥೆಯ ಕಾರ್ಯಕ್ರಮಗಳು ಸರ್ವರಿಗೂ ಸಮಬಾಳು ತತ್ವದಡಿಯಲ್ಲಿ ನಡೆಯುವ ಕಾರ್ಯಕ್ರಮವಾಗಿದೆ. ಒಂದು ಧಾರ್ಮಿಕ ಕ್ಷೇತ್ರದ ಮೂಲಕ ಮನುಷ್ಯನ ಜೀವನಕ್ಕೆ ಅನುಕೂಲವಾಗುವ ವಿವಿಧ ಕಾರ್ಯಕ್ರಮಗಳನ್ನು ಅನುಷ್ಟಾನಿಸಲಾಗುತ್ತಿದೆ.ಎಂದರು.

ಕಾರ್ಯಕ್ರಮದಲ್ಲಿ ಸಮುದಾಯ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಜನ ಸಮುದಾಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಟ್ಟಾಡಿ ನವೀನ್ ಚಂದ್ರ ಶೆಟ್ಟಿ ವಹಿಸಿದ್ದರು*

ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಗಿಣಿ ದೇವಾಡಿಗ,ವಕೀಲ ಉಮೇಶ್ ಶೆಟ್ಟಿ ಶಾನ್ಕಟ್ಟು, lic ಪ್ರಬಂಧಕ ದಿನೇಶ್ ಪ್ರಭು, ಭಜನಾ ಮಂಡಳಿ ಅಧ್ಯಕ್ಷ ರಾಜೇಂದ್ರ ಕುಮಾರ ಬಸ್ರೂರು ,ರಥಶಿಲ್ಪಿ ರಾಜಗೋಪಾಲ್ ಆಚಾರ್ಯ ಉದ್ಯಮಿ ಸುಬ್ರಮಣ್ಯ ಶೆಟ್ಟಿ ಕೋಟೇಶ್ವರ ನಿರ್ದೇಶಕ ನಾಗರಾಜ್ ಶೆಟ್ಟಿ ,ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ ಕೆರೆಕಟ್ಟೆ ಮತ್ತು ಸುಬ್ರಮಣ್ಯ ಆಚಾರ್ ಉಪಸ್ಥಿತರಿದ್ದರು*

ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗ್ರತಿ ವೇದಿಕೆ ಸದಸ್ಯರು, ತಾಲೂಕು ಜನಜಾಗೃತಿ ವೇದಿಕೆ ಸದಸ್ಯರು, ಭಜನಾ ಪರಿಷತ್ತಿನ ಸಂಯೋಜಕರು, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿಗಳು,ಸುಜ್ಞಾನ ನಿಧಿ ಶಿಷ್ಯವೇತನ ಪಡೆದುಕೊಳ್ಳುವ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಯೋಜನಾಧಿಕಾರಿ ನಾರಾಯಣ ಪಾಲನ್ ಸ್ವಾಗತಿಸಿ ಮೇಲ್ವಿಚಾರಕಿ ವೇದಾವತಿ ವಂದಿಸಿದರು ಯೋಜನಾಧಿಕಾರಿ ಪಾರ್ವತಿ ಕಾರ್ಯಕ್ರಮ ನಿರೂಪಿಸಿದರು*

Categories
ಕರಾವಳಿ ಸುದ್ದಿ

ಯೋಧಾ ಸೈಕ್ಲೋಥಾನ್ 2024

ಕುಂದಾಪುರ : ವಿಶ್ವ ಹೃದಯ ದಿನ ಪ್ರತಿ ವರ್ಷದ ಸೆಪ್ಟೆಂಬರ್ ಕೊನೆಯ ಭಾನುವಾರ ಅಂದರೆ ಈ ವರ್ಷ 2024 ಸೆಪ್ಟೆಂಬರ್ 29ನೇ ಭಾನುವಾರದಂದು ಆಚರಿಸಲ್ಪಡುತ್ತಿದ್ದು ‘ಕ್ರಿಯೆಗಾಗಿ ಹೃದಯವನ್ನು ಬಳಸಿ’ ಎಂಬ ಧ್ಯೇಯದ್ದೊಂದಿಗೆ ಕುಂದಾಪುರ ರೂರಲ್ ಆರ್ಯುವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಕೋಟೇಶ್ವರ, ಕುಂದಾಪುರ ಸೈಕಲ್ ಕ್ಲಬ್ – ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಎಂ.ಬಿ.ಫ್ರೆಂಡ್ಸ್ ಕುಂಭಾಶಿ ಮತ್ತು ವಿಶ್ವ ಹಿಂದೂ ಪರಿಷತ್ ಬಜರಂಗದಳ ತೆಕ್ಕಟ್ಟೆ ಘಟಕ ಇವರೆಲ್ಲರ ಜಂಟಿ ಆಶ್ರಯದಲ್ಲಿ ಸೆಪ್ಟೆಂಬರ್ 29ರಂದು ಆದಿತ್ಯವಾರ ಬೆಳಿಗ್ಗೆ 7 ಘಂಟೆಗೆ ಸರಿಯಾಗಿ ಕುಂದಾಪುರದಿಂದ ಕುಂಭಾಶಿಯವರೆಗೆ 10 ಕಿ.ಮಿ “ಯೋಧಾ ಸೈಕ್ಲೋಥಾನ್ 2024” ಎಂಬ ಸೈಕಲ್ ಜಾಥಾ ನಡೆಯಲಿದೆ ಎಂದು ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಡಾ.ಎಸ್.ಜಿ.ಪ್ರಸನ್ನ ಐತಾಳ್ ತಿಳಿಸಿದರು.

ಅವರು ಕುಂದಾಪುರ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಆನ್ ಲೈನ್ ಮೂಲಕ ಸೈಕಲ್ ಜಾಥಾದಲ್ಲಿ ಭಾಗವಹಿಸುವವರ ನೋಂದಾವಣೆ ಆರಂಭಗೊಂಡಿದ್ದು ಇದು ಸೆಪ್ಟೆಂಬರ್ 15ರಂದು ಮುಕ್ತಾಯಗೊಳ್ಳಲಿದೆ. ಆಸಕ್ತರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಮೊದಲ 150 ಸೈಕಲ್ ಪಟುಗಳಿಗೆ ಉಚಿತವಾಗಿ ಟೀಶರ್ಟನ್ನು ಕೊಡಲಿದ್ದು ಇದಕ್ಕೆ ಗೀತಾನಂದ ಫೌಂಡೆಶನ್ ಕೋಟ ಪ್ರಾಯೋಜಕತ್ವವನ್ನು ನೀಡಿದ್ದಾರೆ. ಸೈಕಲ್ ಪಟುಗಳು ಕಡ್ಡಾಯವಾಗಿ ಶಿರಸ್ತ್ರಾಣದ ಬಳಕೆಯನ್ನು ಮಾಡಬೇಕು ಎಂದು ಅವರು ತಿಳಿಸಿದರು.

ಕುಂದಾಪುರ ಶಾಸ್ತ್ರೀವೃತ್ತದಲ್ಲಿ ಚಾಲನೆ ಪಡೆಯಲಿರುವ ಈ ಸೈಕಲ್ ಜಾಥಾ ಕುಂಭಾಶಿಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ಬಳಿ ಸಾಗಿ, ಅಲ್ಲಿ ಸಿದ್ಧಿವಿನಾಯಕ ಸಭಾಂಗಣದಲ್ಲಿ ಉಪಹಾರದ ಪೂರೈಸಿ ಮರಳಿ ಕುಂದಾಪುರಕ್ಕೆ ಬರಲಿದೆ. 10 ರಿಂದ 20 ವರ್ಷದ ವಯೋಮಿತಿಯ ಮತ್ತು 20ಕ್ಕೂ ಮೇಲ್ಪಟ್ಟವರಿಗೆ ಎರಡು ವಿಭಾಗದಲ್ಲಿ ಸೈಕಲ್ ಜಾಥಾ ನಡೆಯಲಿದ್ದು, ಲಕ್ಕಿ ಡ್ರಾದ ಮೂಲಕ ತಲಾ 4 ಸೈಕಲನ್ನು ಬಹುಮಾನವಾಗಿ ನೀಡಲಾಗುತ್ತದೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಖ್ಯಾತ ಹೃದಯ ತಜ್ಞರಿಗೆ ಅಭಿನಂದನೆ ಹಾಗೂ ಮನೋರಂಜನೆ ಕಾರ್ಯಕ್ರಮ ಹಾಗೂ ಆಟೋಟ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.
ಸೈಕಲ್ ಜಾಥಾ ಸರ್ವೀಸ್ ರಸ್ತೆಯಲ್ಲಿಯೇ ಸಾಗಲಿದೆ. ಜಾಥಾದ ಜೊತೆಯಲ್ಲಿ ನಮ್ಮ ಸ್ವಯಂಸೇವಕರು, ಅಂಬ್ಯುಲೆನ್ಸ್ ಇರುತ್ತದೆ. ಸುರಕ್ಷತೆಗೆ ಒತ್ತು ನೀಡಲಾಗಿದೆ. ಕೆಲವೊಂದು ಕಡೆ ಹೆದ್ದಾರಿಯನ್ನು ಬಳಸಬೇಕಾದ ಅನಿವಾರ್ಯತೆ ಇರುವಲ್ಲಿ ಝೀರೋ ಟ್ರಾಫಿಕ್ ಮಾಡುವ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಲಾಗುವುದು. ಇದು ಸ್ಪರ್ಧೆಯಲ್ಲ, ಅರಿವು ಮೂಡಿಸುವ ಕಾರ್ಯಕ್ರಮ ಎಂದರು.
ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಜಾಗ್ರತಿ ಮೂಡಿಸುವ ಸಲುವಾಗಿ ನಡೆಯುವ ಈ ಸೈಕಲ್ ಜಾಥಾದಲ್ಲಿ ಎಲ್ಲಾ ಸಮಸ್ತ ನಾಗರಿಕರು, ಸಹೃದಯಿ ಮಕ್ಕಳು ಮತ್ತು ಬಂಧು-ಬಾಂಧವರು ತಮ್ಮನ್ನು ತೊಡಗಿಸಿಕೊಳ್ಳಬೇಕು. ನೊಂದಾವಣಿ ಹಾಗೂ ಮಾಹಿತಿಗೆ ದೂರವಾಣಿ ಸಂಖ್ಯೆ 9481019016, 7204033644, 8197029835 ಲಿಂಕ್-ಸಂಪರ್ಕಿಸಬಹುದು ಎಂದರು.
ಸುದ್ಧಿಗೋಷ್ಠಿಯಲ್ಲಿ ಕುಂದಾಪುರ ಸೈಕಲ್ ಅಸೋಸಿಯೇಶನ್ ನ ಪ್ರವೀಣ್, ಅರ್ಜುನ್ ದಾಸ್, ಸಚಿನ್ ನಕ್ಕತ್ತಾಯ, ಗೌತಮ್ ನಾವಡ ಉಪಸ್ಥಿತರಿದ್ದರು

Categories
ಕರಾವಳಿ ಸುದ್ದಿ

ಜಿ ವಿ ಅಶೋಕ್ ರವರಿಗೆ ಸನ್ಮಾನ

ಉಡುಪಿ  : ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘ, ಉಡುಪಿ ಘಟಕದ ವತಿಯಿಂದ ಶ್ರೀ ಜಿ ವಿ ಅಶೋಕ್ ರವರಿಗೆ ಸನ್ಮಾನ ಸಮಾರಂಭ ಜರುಗಿತು
 ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘ, ಉಡುಪಿ ಘಟಕದ ಮಾಸಿಕ ಸಭೆಯು ಶ್ರೀ ಪ್ರದೀಪ ಭಕ್ತ ರವರ ಅಧ್ಯಕ್ಷತೆಯಲ್ಲಿ ಉಡುಪಿಯ ಸಿಂಡಿಕೇಟ್ ಟವರ್ಸ್ ನಲ್ಲಿ ಜರಗಿತು.ಶ್ರೀ ಯೋಗೇಶ್ ಭಟ್ ಹಾಗು ಶ್ರೀ ಮೋಹದಾಸ ನಾಯಕ್ ಮತ್ತು ಸದಸ್ಯರು, ಸಹಸದಸ್ಯರು ಉಪಸ್ಥಿತರಿದ್ದರು.
ಜುಲೈ ತಿಂಗಳಲ್ಲಿ ಇಂದೋರ್ ನಲ್ಲಿ ಜರಗಿದ ನ್ಯಾಷನಲ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ M3, 2024 ನಲ್ಲಿ 5 ಚಿನ್ನ ,1 ಬೆಳ್ಳಿ ಹಾಗು 1 ಕಂಚಿನ ಪದಕಗಳನ್ನು ಗೆದ್ದು ಬೆಸ್ಟ್ ಲಿಫ್ಟರ್ ಆಫ್ ಇಂಡಿಯಾ M3-2024 ಎಂಬ ಕೀರ್ತಿಗೆ ಭಾಜನರಾದ ,ಸದಸ್ಯ ಶ್ರೀ ಜಿ ವಿ ಅಶೋಕ್ ರವರನ್ನು ಶಾಲು ಹೊದಿಸಿ, ಸ್ಮರಣಿಕೆ ಯನ್ನಿತ್ತು ಸನ್ಮಾನಿಸಲಾಯಿತು. ಶ್ರೀ ಅಶೋಕ್ ರವರು ತಾನು ಭಾರ ಎತ್ತುವ ಕ್ರೀಡೆಗೆ ಬರಲು ಕಾರಣಕರ್ತರಾದವರನ್ನು ಹಾಗಗೂ ಅವರ ಮಾರ್ಗದರ್ಶನವನ್ನೂ ನೆನೆಪಿಸಿಕೊಂಡರು. ತಾನು ವಿದ್ಯಾರ್ಥಿ ಜೀವನದಲ್ಲಿ ಹಾಗು ವೃತ್ತಿಜೀವನದಲ್ಲಿ ಮತ್ತು ನಿವೃತ್ತಿಯ ನಂತರವೂ ನಿರಂತರವಾಗಿ ಈ ಕ್ರೀಡೆಯನ್ನು ಬಹಳ ಆಸಕ್ತಿಇಂದ ಮುಂದುವರಿಸಿಕೊಂಡು ಬಂದು,ಭಾಗವಹಿಸಿದ ಪ್ರತಿಯೊಂದು ಸ್ಪರ್ದೆಯಲ್ಲಿ ಒಂದಿಲ್ಲೊಂದು ಪದಕ ವನ್ನು ಗೆದ್ದುಕೊಂಡ ಬಗೆಯನ್ನು ಬಹಳ ರೋಚಕವಾಗಿ ತಿಳಿಸಿದರು. ಇವರು ಇದುವರೆಗೆ 28 ಚಿನ್ನ. 48 ಬೆಳ್ಳಿ. 36 ಕಂಚು ಹೀಗೆ ಒಟ್ಟು 104 ಪದಕಗಳನ್ನು ಗೆದ್ದಿರುತ್ತಾರೆ.64ವಯಸ್ಸಿನ ಅಶೋಕ್ ರವರ ಪದಕಗಳನ್ನು ಗೆಲ್ಲುವ ಉತ್ಸಾಹ ಇನ್ನು ಕುಂದಿಲ್ಲ. ಇವರ ಸಾಧನೆ ನಮ್ಮ ಯುವಕರಿಗೆ ಉತ್ತಮ ಸ್ಪೂರ್ತಿಯಾಗಿದೆ.

ನಂತರ ಭಾರತೀಯ ನಾಣ್ಯ ಪರಂಪರೆ ಬಗ್ಗೆ ಸದಸ್ಯರಾದ ಶ್ರೀ ಸುಧಾಕರ ಭಟ್ ಅವರು ಉಪನ್ಯಾಸ ವನ್ನಿತ್ತ ರು.ನಮ್ಮದೇಶದಲ್ಲಿ ಬೇರೆಬೇರೆ ರಾಜರ ಆಳ್ವಿಕೆಯಲ್ಲಿ ನಾಣ್ಯಗಳು ಆರಂಭ ಗೊಂಡು ಇಲ್ಲಿಯವರೆಗಿನ ಇತಿಹಾಸವನ್ನು ಪ್ರಸ್ತುತ ಪಡಿಸಿದರು. ಹಾಗು ನಾಣ್ಯ ಗಳ ಸಂಗ್ರಹಣೆ ಅವುಗಳನ್ನು ವ್ಯವಸ್ಥಿತ ವಾಗಿ ಜೋಡಿಸುವ ಪರಿಯನ್ನು ತಿಳಿಸಿದರು.ಮಾತ್ರವಲ್ಲದೆ ನಾಣ್ಯ ಸಂಗ್ರಹದ ಉಪಯೋಗ ಗಳನ್ನು ತಿಳಿಸುತ್ತಾ ಇದರಿಂದ ನಮ್ಮ ಮುಂದಿನ ಪೀಳಿಗೆಗೆ ಭಾರತದ ಭವ್ಯ ಇತಿಹಾಸವನ್ನೂ ತಿಳಿಯಲು ಅಸಕ್ತಿ ಉಂಟಾಗುತ್ತದೆ ಎಂದರು. ತಮ್ಮ ಸಂಗ್ರಹದಿಂದ ಕೆಲವು ನಾಣ್ಯಗಳನ್ನು ಪ್ರದರ್ಶಿಸಿದರು.

ಶ್ರೀ ಪ್ರದೀಪ ಭಕ್ತ ರವರು ಅಧ್ಯಕ್ಷೀಯ ಭಾಷಣ ದಲ್ಲಿ ಶ್ರೀ ಅಶೋಕ್ ಅವರ ಅವಿರತ ಸಾಧನೆ ಗಾಗಿ ಕೊಂಡಾಡಿದರು. ಇನ್ನುಮುಂದೆಯೂ ಸಹ ಹೆಚ್ಚಿನ ಪದಕಗಳು ಅವರನ್ನು ಅರಸಿ ಬರಲಿ ಎಂದು ಶುಭ ಹಾರೈಸಿದರು.
ಶ್ರೀ ಸುಧಾಕರ ಭಟ್ ರವರ ನಾಣ್ಯ ಸಂಗ್ರಹದ ಹವ್ಯಾಸ ಮತ್ತು ನಾಣ್ಯಗಳ ಇತಿಹಾಸದ ಬಗೆಗಿನ ಅವರ ಜ್ಞಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾಣ್ಯ ಸಂಗ್ರಹ ಉತ್ತಮ ಹವ್ಯಾಸವಾದರೂ ಅತಿಯಾದ ಧನ ಸಂಗ್ರಹ ಮಾತ್ರ ಒಳ್ಳೆಯದಲ್ಲ ಎಂದು ಅಭಿಪ್ರಾಯ ಪಟ್ಟರು.ಪ್ರಾರಂಭದಲ್ಲಿ ಶ್ರೀ ಮಾರುತಿ ಪ್ರಭು ರವರು ಸ್ವಾಗತಿಸಿದರು. ಶ್ರೀಮತಿ ಸಂಧ್ಯಾ ರಮೇಶ್ ಅವರು ಶ್ರೀ ಜಿ ವಿ ಅಶೋಕ್ ಹಾಗು ಶ್ರೀ ಸುಧಾಕರ ಭಟ್ ರವರನ್ನು ಪರಿಚಯಿಸಿದರು ಹಾಗು ಕಾರ್ಯಕ್ರಮವನ್ನು ನಿರ್ವಹಿಸಿದರು. ಶ್ರೀ ಮೋಹನ್ ದಾಸ್ ನಾಯಕ್ ಅವರು ಸಂಘಟನೆಯ ಚಟುವಟಿಕೆ ಗಳ ವರದಿಯನ್ನು ವಾಚಿಸಿದರು. ಸದಸ್ಯರಾದ ಮಾಯಾ ವಿ ಕಿಣಿ, ಎಂ ಎಸ್ ಕಾಮತ್ ಇವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಲಯಿತು .ಶ್ರೀ ರಾಧಕೃಷ್ಣ ಅವರು ಧನ್ಯವಾದವಿತ್ತರು.

Categories
ಕರಾವಳಿ ಸುದ್ದಿ

ಫಲಾನುಭವಿಗಳಿಗೆ ಪಂಚಾಯತ್ ವತಿಯಿಂದ ಶ್ಲಾಘನೀಯ ಪತ್ರ

ಕೋಟ : ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಡಾ.ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಇತ್ತೀಚಿಗೆ ಮಹಾತ್ಮಾ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಿವಿಧ ಕಾಮಗಾರಿಯ ಪ್ರಯೋಜನ ಪಡೆದ ಫಲಾನುಭವಿಗಳಿಗೆ ಪಂಚಾಯತ್ ವತಿಯಿಂದ ಶ್ಲಾಘನೀಯ ಪತ್ರ ನೀಡುವ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಸಂಬAಧಪಟ್ಟಂತೆ ರೋಜ್ಗಾರ್ ದಿನಾಚರಣೆ ಮಾಹಿತಿ ಕಾರ್ಯಗಾರ ಕಾರ್ಯಕ್ರಮ ಜರಗಿತು.

ತಾಲೂಕು ಪಂಚಾಯತ್ ಬ್ರಹ್ಮಾವರದ ಸಹಾಯಕ ನಿರ್ದೇಶಕ ಮಹೇಶ್ ಅವರು ಮಾತನಾಡಿ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರಿಗೆ ಶ್ಲಾಘನಾ ಪತ್ರ ನೀಡಿ ಪ್ರೋತ್ಸಾಹ ನೀಡಿದ ಮೊದಲ ಗ್ರಾಮ ಪಂಚಾಯತ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ದನದ ಹಟ್ಟಿ, ಕೃಷಿ ಬಾವಿ, ಬಚ್ಚಲ ಗುಂಡಿ, ಗೊಬ್ಬರಗುಂಡಿ, ಕೋಳಿ ಶೆಡ್ ಇತ್ಯಾದಿ ರಚನೆಗೆ ಸಹಾಯಧನ ಪಡೆಯುವ ಬಗ್ಗೆ ಮಾಹಿತಿ ನೀಡಿದರು.
ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ ಅಧ್ಯಕ್ಷತೆ ವಹಿಸಿ ಮಾತನಾಡಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸವಲತ್ತು ಪಡೆಯಲು ಸಾರ್ವಜನಿಕರಿಗೆ ತಿಳಿಸಿದರು.
ಈ ಸಂಧರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸರಸ್ವತಿ, ಸದಸ್ಯರಾದ ವಾಸು ಪೂಜಾರಿ, ರವೀಂದ್ರ ತಿಂಗಳಾಯ, ಅಶ್ವಿನಿ, ವಿದ್ಯಾ, ಕಾರ್ಯದರ್ಶಿ ಸುಮತಿ ಅಂಚನ್, ಉದ್ಯೋಗ ಖಾತ್ರಿ ಯೋಜನೆ ಫಲಾನುಭವಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5126

ಕ್ರೋಧಿ ಸಂವತ್ಸರ

ದಕ್ಷಿಣಾಯಣ

ವರ್ಷ ಋತು

ಶ್ರಾವಣ : ಮಾಸ

ಕೃಷ್ಣ : ಪಕ್ಷ

ಪಾಡ್ಯ: ನಕ್ಷತ್ರ

ತ್ರಯೋದಶಿ : ತಿಥಿ

ಶನಿವಾರ

31.08.2024

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಕರಾವಳಿ ಸುದ್ದಿ

ನೂತನ ರಿಕ್ಷಾ ನಿಲ್ದಾಣಕ್ಕಾಗಿ ಮನವಿ

ಬೈಂದೂರು : ಬೈಂದೂರು ತಾಲೋಕಿನ ಉಪ್ಪುಂದದಲ್ಲಿ ನೂತನ ರಿಕ್ಷಾ ನಿಲ್ದಾಣ ಸ್ಥಾಪನೆಗಾಗಿ ಉಪ್ಪುಂದ ರಿಕ್ಷಾ ಚಾಲಕರು ಹಾಗೂ ಮಾಲಕರ ಸಂಘದ ಸದಸ್ಯರು ಬೈಂದೂರು ಶಾಸಕರಾದ ಗುರುರಾಜ್‌ ಗಂಟಿಹೊಳೆಯವರಿಗೆ ಮನವಿ ಸಲ್ಲಿಸಿದರು ಮನವಿಗೆ ಸ್ಪಂದಿಸಿದ ಶಾಸಕರು ಶಾಶ್ವತ  ರಿಕ್ಷಾ ನಿಲ್ದಾಣದ ಬಗ್ಗೆ ಸ್ಥಳವನ್ನು ನಿಗದಿಮಾಡಿ ಸಂಬಂಧಪಟ್ಟ ಅಡೆತಡೆಗಳನ್ನು ನಿವಾರಿಸಿ ಶೀಘ್ರದಲ್ಲೇ ಹೊಸ ರಿಕ್ಷಾ ನಿಲ್ದಾಣ ಸ್ಥಾಪನೆಯ ಬಗ್ಗೆ ಭರವಸೆ ನೀಡಿದರು 

Categories
ಕ್ರೀಡೆ

ಕ್ರೀಡಾ ರತ್ನ ಪ್ರಶಸ್ತಿ : ಅರ್ಜಿ ಆಹ್ವಾನ

ಉಡುಪಿ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2023 ನೇ ಸಾಲಿನ ಹಿರಿಯ ಕ್ರೀಡಾಪಟು ಹಾಗೂ ತರಬೇತುದಾರರಾಗಿ ಸಾಧನೆ ಮಾಡಿರುವ ರಾಜ್ಯದ ಹಿರಿಯ ಕ್ರೀಡಾಪಟುಗಳು ಹಾಗೂ ತರಬೇತುದಾರರಿಂದ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ಗ್ರಾಮೀಣ ಪ್ರತಿಭೆಗಳಿಗೆ  ಪ್ರೋತ್ಸಾಹ ನೀಡಲು ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗಾಗಿ ಸೇವಾಸಿಂಧು ಪೊರ್ಟಲ್ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 20 ಕೊನೆಯ ದಿನ. ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ .:0820-2521324, 9480886467 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.”