Categories
ಕರಾವಳಿ ಸುದ್ದಿ

ಪ್ರಮೀಳಾ ಅವರಿಗೆ ‘ವಾತ್ಸಲ್ಯ ಮನೆ’ ಹಸ್ತಾಂತರ

ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ (ರಿ.) ವತಿಯಿಂದ ಉಡುಪಿ ತಾಲೂಕಿನ ಮಣಿಪಾಲ ವಲಯದ ಮಂಚಿ ಕುಮೇರಿಯ ಮಾಶಾಸನ ಫಲಾನುಭವಿ ಪ್ರಮೀಳಾ ಅವರಿಗೆ ವಾತ್ಸಲ್ಯ ಮನೆ ಹಸ್ತಾಂತರ ನಡೆಯಿತು.

ಪ್ರಮೀಳಾ ಅವರು ಅತ್ಯಂತ ಸಂಕಷ್ಟದಲ್ಲಿದ್ದು ಯೋಜನೆಯ ವತಿಯಿಂದ ಪ್ರತೀ ತಿಂಗಳು ರೂ.1,000 ಮಾಶಾಸನ ಹಾಗೂ ‘ವಾತ್ಸಲ್ಯ’ ಆಹಾರ ಮಿಕ್ಸ್ ಪಡೆಯುತ್ತಿದ್ದರು.

ಪ್ರಮೀಳಾ ಅವರಿಗೆ ವಾಸಿಸಲು ಯೋಗ್ಯವಾದ ಮನೆ ಇಲ್ಲದೇ ಇರುವುದನ್ನು ಮನಗಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ‘ವಾತ್ಸಲ್ಯ ಮನೆ’ಯನ್ನು ನಿರ್ಮಿಸಿ ಕೊಡಲಾಗಿದೆ. ಉಡುಪಿ ನಗರ ಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ ‘ವಾತ್ಸಲ್ಯ ಮನೆ’ಯನ್ನು ಹಸ್ತಾಂತರಿಸಿ ಶುಭ ಹಾರೈಸಿದರು.

ಉಡುಪಿ ತಾಲೂಕು ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಸತ್ಯಾನಂದ ನಾಯಕ್, ಉಡುಪಿ ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ್ ಕಲ್ಮಾಡಿ, ನಗರಸಭಾ ಸದಸ್ಯ ಅಶೋಕ್ ನಾಯ್ಕ್, ತಾಲೂಕು ಯೋಜನಾಧಿಕಾರಿ ರಾಮ.ಎಮ್., ತಾಲೂಕು ಜನ ಜಾಗೃತಿ ವೇದಿಕೆಯ ಸದಸ್ಯ ಕುಶಲ್ ಶೆಟ್ಟಿ ಶುಭ ಹಾರೈಸಿದರು

ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಕ್ಯಾಪ್ಟನ್ ಹರೀಶ್, ಮಣಿಪಾಲ ವಲಯ ಅಧ್ಯಕ್ಷ ಸಾವಿತ್ರಿ, ಹೆರ್ಗ’ಬಿ’ ಒಕ್ಕೂಟದ ಅಧ್ಯಕ್ಷೆ ಸುಮಲತಾ, ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಮಣಿಪಾಲ ವಲಯದ ಸದಸ್ಯರು, ಒಕ್ಕೂಟದ ಸಂಘಗಳ ಸದಸ್ಯರು, ವಲಯದ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

ವಲಯ ಮೇಲ್ವಿಚಾರಕ ಬಾಲಚಂದ್ರ ಕಾರ್ಯಕ್ರಮ ನಿರೂಪಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಕವಿತಾ ಸ್ವಾಗತಿಸಿದರು. ಹೆರ್ಗ’ಬಿ’ ಸೇವಾ ಪ್ರತಿನಿಧಿ ಚಂದ್ರಕಲಾ ವಂದಿಸಿದರು.

Categories
ಕರಾವಳಿ ಸುದ್ದಿ

ಕೈಮಗ್ಗ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟನೆ

ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ವಿಶ್ವಗೀತಾ ಪರ್ಯಾಯ ಮಹೋತ್ಸವದ ಅಂಗವಾಗಿ ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರ ಜನ್ಮ ತ್ರಿಶತಾಬ್ದಿ ಮಹೋತ್ಸವದ ಪ್ರಯುಕ್ತ ರಾಜಾಂಗಣದಲ್ಲಿ ಆಯೋಜಿಸಿದ ಕೈಮಗ್ಗ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಆಶೀರ್ವಚನವನಿತ್ತರು.

ಸುಮಾರು 250 ವರ್ಷಗಳ ಹಿಂದೆ ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರು ಸ್ವತಃ ನೇತೃತ್ವ ವಹಿಸಿ ಮಹಿಳಾ ಸ್ವಾವಲಂಬನೆಯ ದೂರದೃಷ್ಟಿಯಿಂದ ನೇಕಾರ ಮಹಿಳೆಯರನ್ನು ಒಗ್ಗೂಡಿಸಿ ತಯಾರಿಸಿದ ಮಹೇಶ್ವರಿ ಸೀರೆಗಳು ಕೈಮಗ್ಗ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳದ ಪ್ರಮುಖ ಆಕರ್ಷಣೆಯಾಗಿತ್ತು

ಸಮಾರಂಭದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಹೋಳ್ಕರ್ ಜನ್ಮ ತ್ರಿಶತಾಬ್ದಿ ಆಚರಣೆ ಸಮಿತಿಯ ರಾಜ್ಯ ಸದಸ್ಯೆ ಕೆಎಂಸಿ ಮಕ್ಕಳ ತಜ್ಞೆ ಡಾ! ಪುಷ್ಪಾ ಕಿಣಿ, ಯೋಗ ವಿಭಾಗದ ಮುಖ್ಯಸ್ಥೆ ಅನ್ನಪೂರ್ಣ ಆಚಾರ್ಯ, ಖ್ಯಾತ ಗಾಯಕಿ ಕಲಾವತಿ ದಯಾನಂದ, ಹೋಳ್ಕರ್ ಜನ್ಮ ತ್ರಿಶತಾಬ್ದಿ ಆಚರಣಾ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕಿ ಲಕ್ಷ್ಮೀ ಹೆಬ್ಬಾರ್, ಸದಸ್ಯರಾದ ರೇಶ್ಮಾ ಉದಯ ಶೆಟ್ಡಿ, ಶಿಲ್ಪಾ ಜಿ. ಸುವರ್ಣ, ಶಿಲ್ಪಾ ಜೋಶಿ, ಪದ್ಮಶಾಲಿ ನೇಕಾರ ಪ್ರತಿಷ್ಠಾನ(ರಿ.) ಮತ್ತು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ(ನಿ.) ಅಧ್ಯಕ್ಷ ರತ್ನಾಕರ್ ಇಂದ್ರಾಳಿ, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ(ರಿ.) ಮಂಗಳೂರು ಅಧ್ಯಕ್ಷ ರವಿ ಶೆಟ್ಟಿಗಾರ್ ಕಾರ್ಕಳ, ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ ಬಾರ್ಕೂರು ಆಡಳಿತ ಮೊಕ್ತೇಸರ ಡಾ! ಜಯರಾಮ್ ಶೆಟ್ಟಿಗಾರ್, ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಧಾರ್ಮಿಕ ವೇದಿಕೆ ಸಂಚಾಲಕ ಪುರುಷೋತ್ತಮ್ ಶೆಟ್ಟಿಗಾರ್, ಪ್ರಮುಖರಾದ ಡಾ! ಶಿವಪ್ರಸಾದ್ ಶೆಟ್ಟಿಗಾರ್ ಕಾರ್ಕಳ, ಅಶೋಕ್ ಶೆಟ್ಟಿಗಾರ್ ರಾಂಪುರ, ದೀಪಕ್ ಕುಮಾರ್ ಕಿನಿಮುಲ್ಕಿ, ಅನುರಾಧ ಉದಯ್, ರಾಜಕೇಸರಿ, ಬಾಲಕೃಷ್ಣ ಶೆಟ್ಟಿಗಾರ್, ಸುರೇಶ್ ಶೆಟ್ಟಿಗಾರ್ ದೊಡ್ಡಣಗುಡ್ಡೆ ಮುಂತಾದವರು ಉಪಸ್ಥಿತರಿದ್ದರು.

Categories
ಅಪರಾಧ

ಕಳ್ಳತನಕ್ಕೆ ಬಂದು ಎಣ್ಣೆಗೆ ಮನಸೋತ ಕಳ್ಳ

ತೆಲಂಗಾಣ : ಕರ್ತವ್ಯ ನಿಷ್ಠೆ ಎಲ್ಲರಿಗೂ ಇರಬೇಕು. ಅದು ಇಲ್ಲವಾದರೆ ಎಂತಹ ರಾದ್ಧಾಂತ ಆಗುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ ತೆಲಂಗಾಣದಲ್ಲಿ ಕಳ್ಳನೊಬ್ಬ ಹೊಸ ವರ್ಷದ ಹಿಂದಿನ ದಿನ ಬಾರ್‌ಗೆ ಕಳ್ಳತನ ಮಾಡಲು ನುಗ್ಗಿದ್ದಾನೆ. ಅವನು ಎಲ್ಲವನ್ನು ದೋಚಿದ್ದಾನೆ. ಆದರೆ ಅಲ್ಲಿದ್ದ ಒಂದು ಮದ್ಯದ ಬಾಟಲಿ ಆತನ ಕಣ್ಣನ್ನು ಎಳೆದು ಹೊಟ್ಟೆ ತುಂಬಿಸಿದೆ. ಅದು ಎಷ್ಟರ ಮಟ್ಟಿಗೆ ನಶೆ ಏರಿಸಿತ್ತು ಎಂದರೆ ಆತ ಅಲ್ಲೇ ಮಲಗಿ ಬಿಟ್ಟಿದ್ದಾನೆ. ಮರುದಿನ ಬಾರ್ ಮಾಲೀಕ ಬಂದು ಆತನನ್ನು ಕಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಗ ಕಳ್ಳ ಅಯ್ಯೋ ನಾನೆಂತ ತಪ್ಪು ಮಾಡಿದೆ ಎಂದು ಬಾಯಿ ಬಾಯಿ ಬಡಿದುಕೊಂಡಿದ್ದಾನೆ

Categories
ರಾಜ್ಯ ಸುದ್ದಿ

ಅಧಿಕಾರಿಗಳಿಗೆ ಸಿದ್ದರಾಮಯ್ಯ ಪಾಠ

ಬೆಂಗಳೂರು : ರಾಜ್ಯದ ಜನರ ಆರ್ಥಿಕ ಶಕ್ತಿ ಹೆಚ್ಚಿಸಿ ಅಸಮಾನತೆ, ಪ್ರಾದೇಶಿಕ ಅಸಮತೋಲನ ತೊಡೆದು ಹಾಕಲು ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಹಿಂದಿನ ವರ್ಷಗಳ ಅನುಭವದಿಂದ ಪಾಠ ಕಲಿತು ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಿರಿಯ ಐಎಎಸ್, ಐಪಿಎಸ್ ಹಾಗೂ ಐಎಫ್‌ಎಸ್ ಅಧಿಕಾರಿಗಳಿಗೆ ಹೊಸವರ್ಷದ ಶುಭಾಶಯ ಕೋರಿ ಮಾತನಾಡಿದರು. ಆಡಳಿತ ರಂಗದಲ್ಲಿ ಐಎಎಸ್, ಐಪಿಎಸ್, ಐಎಫ್‌ಎಸ್, ಐಆರ್‌ಎಸ್, ಕೆಎಎಸ್ ಅಧಿ ಕಾರಿಗಳ ಜವಾಬ್ದಾರಿ ಹೆಚ್ಚು ಎಲ್ಲಾ ವರ್ಗಗಳಿಗೆ ಸಾಮಾಜಿಕ-ಆರ್ಥಿಕ ಸ್ವಾತಂತ್ರ್ಯ ಒದಗಿಸದಿದ್ದರೆ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಬರುವುದಿಲ್ಲ. ಆರ್ಥಿಕತೆ ವೇಗವಾಗಿ ಬೆಳೆದಷ್ಟೂ ಅದು ಎಲ್ಲರಿಗೂ ಹಂಚಿಕೆಯಾಗಬೇಕು. ಇಲ್ಲದಿದ್ದರೆ ಅಸಮಾನತೆ ಹೆಚ್ಚಾಗಿ ಆರ್ಥಿಕತೆ ಎಂಬುದು ಸಾರ್ಥಕತೆ ಇಲ್ಲದಂತಾಗುತ್ತದೆ ಎಂದು ಹೇಳಿದರು

Categories
ರಾಜ್ಯ ಸುದ್ದಿ

ಪ್ರಿಯಾಂಕ ಖರ್ಗೆ ರಾಜೀನಾಮೆ ಇಲ್ಲ

ಬೆಂಗಳೂರು : ‘ಬೀದರ್‌ನ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ “ಖರ್ಗೆ ಅವರ ಪಾತ್ರವಿಲ್ಲ, ಅವರ ವಿರುದ್ಧ ಯಾವುದೇ ಸಾಕ್ಷ್ಯಾ ಧಾರಗಳೂ ಇಲ್ಲ. ಇದು ರಾಜಕೀಯ ದ್ವೇಷದಿಂದ ಮಾಡುತ್ತಿರುವ ಆರೋಪ ಆಗಿರುವುದರಿಂದ ಸಚಿವ ಪ್ರಿಯಾಂಕ್ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು

Categories
ರಾಷ್ಟ್ರೀಯ ಸುದ್ದಿ

ಯತ್ನಾಳ್ ರಿಂದ ಪಕ್ಷಕ್ಕೆ ಹಾನಿ : ಬಿವೈವಿ ದೂರು

ಬೆಂಗಳೂರು :  ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಣದ ಚಟುವಟಿಕೆಗಳಿಂದ ಪಕ್ಷ ಸಂಘಟನೆಗೆ ಅಡ್ಡಿಯಾಗುತ್ತಿದ್ದು, ಕಡಿವಾಣ ಹಾಕಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕೇಂದ್ರ ಗೃಹ ಸಚಿವರೂ ಆಗಿರುವ ಪಕ್ಷದ ಪ್ರಭಾವಿ ರಾಷ್ಟ್ರೀಯ ನಾಯಕ ಅಮಿತ್ ಶಾ ಅವರಿಗೆ ದೂರು ನೀಡಿದ್ದಾರೆ.

ಬುಧವಾರ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸುಮಾರು 20 ನಿಮಿಷಗಳಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದ ವಿಜಯೇಂದ್ರ ಅವರು ರಾಜ್ಯದ ಪ್ರಸಕ್ತ ಬೆಳವಣಿಗೆಗಳನ್ನು ಸವಿಸ್ತಾರವಾಗಿ ಮುಂದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇಂದು ಗುರುವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ.ನಡ್ಡಾರನ್ನೂ ಭೇಟಿಮಾಡಲು ವಿಜಯೇಂದ್ರ ಅವರು ಪ್ರಯತ್ನ ನಡೆಸುವ ನಿರೀಕ್ಷೆಯಿದೆ. ಹೆಚ್ಚ ಕಡಿಮೆ ವಿಜಯೇಂದ್ರ ಅವರು ರಾಜಾ ಧ್ಯಕ್ಷರಾದಾಗಿನಿಂದಲೂ ಅವರ ನಾಯಕತ್ವದ ವಿರುದ್ಧ, ಯಡಿಯೂರಪ್ಪ ವಿರುದ್ಧ ಯತ್ನಾಳ ಬಹಿರಂಗವಾಗಿ ಹರಿಹಾಯುತ್ತಲೇ ಇದ್ದಾರೆ. ಇದೀಗ ಯತ್ನಾಳ ಅವರೊಂದಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿ ಇತರ ಕೆಲ ನಾಯಕರೂ ಕೈಜೋಡಿಸಿದ್ದಾರೆ

Categories
ರಾಷ್ಟ್ರೀಯ ಸುದ್ದಿ

ರೈತರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರಕಾರ

ನವದೆಹಲಿ : 2025ರ ಹೊಸ ವರ್ಷದ ಮೊದಲ ದಿನವೇ ಕೇಂದ್ರ ಸರ್ಕಾರ ದೇಶದ ಕೋಟ್ಯಂತರ ರೈತಾಪಿ ಸಮುದಾಯಕ್ಕೆ ಮೂರು ಬಂಪರ್ ಕೊಡುಗೆ ಪ್ರಕಟಿಸಿದೆ. ಎರಡು ಕೃಷಿ ವಿಮಾ ಯೋಜನೆಗಳ ಅವಧಿಯನ್ನು ಮತ್ತೆ ಒಂದು ವರ್ಷ ವಿಸ್ತರಣೆ ಮಾಡಿದ್ದರೆ, ಸಬ್ಸಿಡಿ ದರದಲ್ಲಿ ಡಿಎಪಿ ಗೊಬ್ಬರ ವಿತರಿಸುವ ಯೋಜನೆಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸಂಪುಟ ಸಭೆಯ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ‘ಸರ್ಕಾರದ ಹೊಸ ವರ್ಷದ ಮೊದಲ ನಿರ್ಣಯವು ದೇಶದ ಕೋಟಿ ಕೋಟಿ ರೈತ ಸಹೋದರ ಸಹೋದರಿಯರಿಗೆ ಸಮರ್ಪಣೆ’ ಎಂದಿದ್ದಾರೆ.

Categories
ರಾಷ್ಟ್ರೀಯ ಸುದ್ದಿ

ಅಯೋಧ್ಯೆ : 3 ಲಕ್ಷ ಭಕ್ತರಿಂದ ದರ್ಶನ

ನವದೆಹಲಿ : ಹೊಸವರ್ಷದ ಮೊದಲ ದಿನವಾದ ಬುಧವಾರ ದೇಶವ್ಯಾಪಿ ಪೂಜಾಸ್ಥಳಗಳಿಗೆ ಭೇಟಿ ನೀಡುವ ಮೂಲಕ ಭಕ್ತರು ಇಷ್ಟಾರ್ಥ ನೆರವೇರಿಸುವಂತೆ ಬೇಡಿಕೊಂಡಿದ್ದಾರೆ

ಅದರಲ್ಲೂ ಹಿಂದೂಗಳ ಪ್ರಮುಖ ಕ್ಷೇತ್ರವಾಗಿರುವ ಅಯೋಧ್ಯೆ ಮತ್ತು ಕಾಶಿಯಲ್ಲಿ ಅಪಾರ ಸಂಖ್ಯೆಯ ಭಕ್ತರು ದೇವರ ದರ್ಶನ ಪಡೆದರು. ಕಳೆದ ವರ್ಷ ಜನವರಿಯಲ್ಲಿ ಉದ್ಘಾಟನೆಗೊಂಡ ರಾಮ ಮಂದಿರದಲ್ಲಿ 3 ಲಕ್ಷಕ್ಕಿಂತ ಹೆಚ್ಚಿನ ಜನರು ಬಾಲರಾಮನ ದರ್ಶನ ಪಡೆದರೆ, ಇತ್ತ, ಕಾಶಿಯಲ್ಲಿ 8 ಲಕ್ಷಕ್ಕೂ ಅಧಿಕ ಭಕ್ತರು ವಿಶ್ವನಾಥನ ದರ್ಶನ ಪಡೆದರು. ಹನುಮಾನ್‌ ಗಡಿ ಮಂದಿರದಲ್ಲಿಯೂ ಜನದಟ್ಟಣೆ ಹೆಚ್ಚಿತ್ತು. ಇನ್ನು ಕಾಶಿಯಲ್ಲಿ ಬುಧವಾರ ಮುಂಜಾನೆ 3.00ರಿಂದಲೇ ಭಕ್ತರು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದುಕೊಂಡರು.

ಉಳಿದಂತೆ ತಿರುಪತಿ, ದೆಹಲಿ, ಪಟನಾ, ಅಮೃತಸರ, ಪುರಿ, ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶದ ವಿವಿಧ ದೇಗುಲಗಳಿಗೂ ಜನರು ಭಾರೀ ಪ್ರಮಾಣದಲ್ಲಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

Categories
ರಾಷ್ಟ್ರೀಯ ಸುದ್ದಿ

ಹೊಸ ವರ್ಷದ ಮೊದಲ ದಿನವೇ ಅಮೇರಿಕದಲ್ಲಿ ಉಗ್ರ ದಾಳಿ

ನ್ಯೂ ಓರ್ಲೀನ್ಸ್ : ಹೊಸ ವರ್ಷದ ಸಂಭ್ರಮಾ ಚರಣೆಯಲ್ಲಿದ್ದ ಜನಸಮೂಹದ ಮೇಲೆ ವ್ಯಕ್ತಿಯೊಬ್ಬ ಏಕಾಏಕಿ ಪಿಕಪ್ ಟ್ರಕ್ ಹರಿಸಿದ ಆಘಾತಕಾರಿ ಘಟನೆ ಅಮೆರಿಕದ ನ್ಯೂ ಓರ್ಲೀನ್ಸ್ ನಲ್ಲಿ ಮಂಗಳವಾರ ನಡೆದಿದೆ. ಘಟನೆಯಲ್ಲಿ 10 ಜನರು ಸಾವನ್ನಪ್ಪಿ, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳ ಗುಂಡಿಗೆ ದಾಳಿಕೋರ ಬಲಿಯಾಗಿದ್ದಾನೆ.

ಈ ನಡುವೆ ಘಟನೆಯನ್ನು ಭಯೋತ್ಪಾದಕ ಕೃತ್ಯ ಎಂದು ನ್ಯೂ ಓರ್ಲೀನ್ಸ್‌ನ ಮೇಯ‌ರ್ ಹೇಳಿದ್ದಾರೆ. ಎಫ್‌ಬಿಐ ಕೂಡಾ ಅದೇ ಆಯಾಮದಲ್ಲಿ ತನಿಖೆ ಆರಂಭಿಸಿದೆ. ಜೊತೆಗೆ ಘಟನಾ ಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಇಟ್ಟಿರಬಹುದಾದ ಸುಧಾರಿತ ಸ್ಪೋಟಕಗಳಿಗೆ ಹುಡುಕಾಟ ಆರಂಭಿಸಿದೆ.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5126

ಕ್ರೋಧಿ ಸಂವತ್ಸರ

ಉತ್ತರಾಯಣ

ಹೇಮಂತ ಋತು

ಪೌಷ : ಮಾಸ

ಶುಕ್ಲ : ಪಕ್ಷ

ಶ್ರವಣ : ನಕ್ಷತ್ರ

ತದಿಗೆ: ತಿಥಿ

ಗುರುವಾರ

02.01.2025

ಈ ದಿನ ಎಲ್ಲರಿಗೂ ಶುಭವಾಗಲಿ