Categories
ಅಪರಾಧ

ರೂ. 1,98,500/- ವಂಚನೆ

ಉಡುಪಿ : ಕಾಂತಾವರ ನಿವಾಸಿಯಾದ ಚೇತನ ಕುಮಾರ್‌ ಇವರು ಬೆಂಗಳೂರಿನ ಜೀವನ ಭೀಮ ಎಂಬಲ್ಲಿ ICICI ಬ್ಯಾಂಕ್‌ ಶಾಖೆಯಲ್ಲಿ ಖಾತೆ ಹೊಂದಿದ್ದು 28.03.2023 ರಂದು ಖಾತೆಯಿಂದ ಕ್ರಮವಾಗಿ ರೂ.95000/- ಮತ್ತು ರೂ.500/- ಮತ್ತು ದಿನಾಂಕ 30.03.2023 ರಂದು ರೂ.99,500/-ರಂತೆ ಒಟ್ಟು ರೂ. 1,98,500/- ಹಣವನ್ನು ಅಪರಿಚಿತ ವ್ಯಕ್ತಿಗಳು ಚೇತನ ಗಮನಕ್ಕೆ  ಬಾರದೇ ಆನ್ ಲೈನ್ ಮುಖೇನ ವರ್ಗಾವಣೆ ಮಾಡಿದ್ದಾರೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5124

ಶೋಭಕೃತ್‌ ಸಂವತ್ಸರ

ಉತ್ತರಾಯಣ

ವಸಂತ ಋತು ಚೈತ್ರ  ಮಾಸ

ಶುಕ್ಲ ಪಕ್ಷ ದಶಮಿತಿಥಿ

    ಪುಷ್ಯ ನಕ್ಷತ್ರ

ಶುಕ್ರವಾರ 31.03.2023

ಇಂದಿನ ವಿಶೇಷ

         ಕಾರ್ಕಳ ಅನಂತಶಯನ ರಥ

        ಈ ದಿನ ಎಲ್ಲರಿಗೂ ಶುಭವಾಗಲಿ  

Categories
ಶಿಕ್ಷಣ ಸಾಧನೆ

ಮಂಗಳೂರು ವಿ.ವಿ.ಯ ಮೂರು RANK ಗಳು

ಕುಂದಾಪುರ: ಮಂಗಳೂರು ವಿ.ವಿ.ಯ 2021-22ನೇ ಸಾಲಿನ ಅಂತಿಮ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಶುಭಲಕ್ಷ್ಮೀ ಬಿ.ಬಿ.ಎ. ಪದವಿಯಲ್ಲಿ ದ್ವಿತೀಯ Rank  ಅಕ್ಷಯ್ ಶೆಟ್ಟಿ ಬಿ.ಎಸ್ಸಿ. ಪದವಿಯಲ್ಲಿ ದ್ವಿತೀಯ Rank  , ಅಕ್ಷತಾ ಬಿ.ಕಾಂ. ಪದವಿಯಲ್ಲಿ ಒಂಭತ್ತನೇ Rank ಪಡೆದುಕೊಂಡಿರುತ್ತಾರೆ.

 

ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ.ಎಮ್. ಸುಕುಮಾರ ಶೆಟ್ಟಿ, ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಆಡಳಿತ ಮಂಡಳಿಯ ಸದಸ್ಯರು, ಬೋಧಕ–ಬೋಧಕೇತರರು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Categories
ಅಪರಾಧ

6.80.000 ಮೌಲ್ಯದ  E-ಸೀಗರೇಟ್‌ ವಶ

6.80.000 ಮೌಲ್ಯದ  E-ಸೀಗರೇಟ್‌ ವಶ

ಮಂಗಳೂರು:ಮಂಳೂರು ಪೋಲೀಸ್‌ ಆಯುಕ್ತರಾದ ಕುಲದೀಪ್‌ ಕುಮಾರ್‌ ಜೈನ್‌ ರವರ ಮಾರ್ಗದರ್ಶನದಲ್ಲಿ ಕೇಂದ್ರ ಉಪ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಗಳು ಬರ್ಕೆ ಪೋಲೀಸ್‌ ಠಾಣಾ ವ್ಯಾಪ್ತಿಯ ಸಾಯಿಬಿನ್‌ ಕಾಂಪ್ಲೆಕ್ಸ್‌ ಗೆ ದಾಳಿ ಮಾಡಿ ಅಲ್ಲಿ ಮಾರಾಟ ಮಾಡುತ್ತಿದ್ದ  E-ಸೀಗರೇಟ್‌ ಗಳನ್ನು ವಶಪಡಿಸಿಕೊಂಡು 7 ಜನರನ್ನು ಬಂಧಿಸಲಾಗಿದೆ

ಖಚಿತ ಮಾಹಿತಿಯ ಮೇರೆಗೆ ಸಾಯಿಬಿನ್‌ ಕಾಂಪ್ಲೆಕ್ಸ್ ನಲ್ಲಿನ ಆಮಂತ್ರಣ ಶಾಫ್‌ ಫ್ಯಾಂಟ್ಯಾಸ್ಟಿಕ್‌ ವರ್ಲ್ಡ್‌ ಯುನಿಕ್‌ ಪರ್ಲ್‌ ಡೂ-ಇಟ್‌ ಫ್ಯಂಟ್ಯಾಸ್ಟಿಕ್‌ ಶಾಫ್‌  ವೆಂಚರ್‌ ಅಂಗಡಿಗಳ ಮೇಲೆ ದಾಳಿ ನೆಡೆಸಿದ ಪೋಲೀಸರು 1.50.000 ಮೌಲ್ಯದ 273  E-ಸೀಗರೇಟ್‌ ಗಳನ್ನು ಹಾಗೂ ಕೊಟ್ಟಾ ಕಾಯ್ದೆಯಡಿ ಪ್ರಕರಣ ದಾಖಲಿಸಿ 5.30.000 ಮೌಲ್ಯದ ಎಚ್ಚರಿಕೆಯ ಚಿಹ್ನೆಯನ್ನು ಅಳವಡಿಸದ ವಿವಿಧ ಕಂಪೆನಿಗಳ ಸೀಗರೇಟ್‌ ತುಂಬಿರುವ ಪ್ಯಾಕ್‌ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು ಇವುಗಳ ಒಟ್ಟು ಮೌಲ್ಯ 6.80.000 ಆಗಿದೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ರೆಹಮತ್ತುಲ್ಲಾ ಸಂತೋಷ ಶಿವು ಹಸನ್‌ ಶಿವಾನಂದ ಶರೀಫ್‌ ಇರ್ಷಾದ್‌ ಎಂಬವರನ್ನು ಬಂಧಿಸಿ   E-ಸೀಗರೇಟ್‌ ನಿಷೇಧ ಕಾಯ್ದೆ 2019 ಹಾಗೂ ಕೊಟ್ಟಾ ಕಾಯ್ದೆಯಡಿ ಮಂಗಳೂರಿನ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ   

Categories
ಅಪರಾಧ

ಉಡುಪಿ:ವಂಚನೆ ಪ್ರಕರಣ

 

ಉಡುಪಿ:ವಂಚನೆ ಪ್ರಕರಣ

ಉಡುಪಿ: ಪ್ರತಿಭಾ ಎಸ್. ಹೆಗ್ಡೆ ಇವರಿಗೆ ಅಪರಿಚಿತ ವ್ಯಕ್ತಿ  ಕರೆ ಮಾಡಿ ತಾನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ, ಡೆಬಿಟ್ ಕಾರ್ಟ್ ಬ್ಲಾಕ್ ಆಗಿದೆ ಈ ಕೂಡಲೇ ರಿನಿವಲ್ ಮಾಡುವಂತೆ ತಿಳಿಸಿ, ಪ್ರತಿಭಾ ಎಸ್. ಹೆಗ್ಡೆ ವರಿಂದ ಕಾರ್ಡ್ ನಂಬ್ರ ಹಾಗೂ OTP ಯನ್ನು ಪಡೆದು, ಅವರ  ಕೆನರಾ ಬ್ಯಾಂಕ್ ಬ್ರಹ್ಮಾವರ ಶಾಖೆಯಲ್ಲಿ ಹೊಂದಿದ್ದ ಖಾತೆಯಿಂದ ಕ್ರಮವಾಗಿ, ರೂಪಾಯಿ 50,000/-, 50,000/-, 2,000/- ಮತ್ತು 2,500/- ರಂತೆ ಒಟ್ಟು 1,04,500/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿ ವಂಚಿಸಿದ ಬಗ್ಗೆ ಉಡುಪಿಯ ಸೆನ್‌ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಹೊಂಗಿರಣ

ಅಸ್ಮಿತೆಯ ಪ್ರಶ್ನೆ

  1. ಅಸ್ಮಿತೆಯ ಪ್ರಶ್ನೆ

ನಮ್ಮೆಲ್ಲ ಭಯಗಳಿಗೆ ಮೂಲವಾಗಿರುವ ಸಾವಿನ ಭಯವನ್ನು ಅಷ್ಟು ಸುಲಭದಲ್ಲಿ ತೊಲಗಿಸುವುದು ಸಾಧ್ಯವೇ? ಬದುಕನ್ನು ತೀವ್ರವಾಗಿ ಪ್ರೀತಿಸುವ ನಮಗೆ ಸಾವಿನ ಭಯ ಸಹಜವಾಗಿಯೇ ಬಂದಿದೆ. ಇದಕ್ಕೆ ಮೂಲ ಕಾರಣ ನಾವು ನಮ್ಮ ಅಸ್ತಿತ್ವವನ್ನು ‘ದೇಹ’ ರೂಪದಲ್ಲಷ್ಟೇ ಗುರುತಿಸಿಕೊಂಡಿರುವುದು. ನಾವೆಂದರೆ ನಮಗೆ ಮತ್ತು ಇತರರಿಗೆ ಕಾಣಿಸಿಕೊಳ್ಳುವ ನಮ್ಮ ದೇಹ ಎನ್ನುವಷ್ಟು ಸಂಕುಚಿತ ಪ್ರಜ್ಞೆಯನ್ನುಹ ನಾವು ಪಡೆದಿದ್ದೇವೆ. ಇದು ಅಜ್ಞಾನದ ಸಂಕೇತ. ಇಷ್ಟಕ್ಕೂ ಬದುಕನ್ನು ನಾವು ತೀವ್ರವಾಗಿ ಪ್ರೀತಿಸುತ್ತೇವೆ ಎಂದರೆ ಏನರ್ಥ? ಈ ಭೌತಿಕ ಜಗತ್ತಿನ ಸುಖ-ಸಂತೋಷಗಳನ್ನು, ಸೌಕರ್ಯಗಳನ್ನು ಹಾಗೂ ಐಷಾರಾಮಗಳನ್ನು ಪ್ರೀತಿಸುತ್ತಿದ್ದೇವೆ ಎಂದರ್ಥವಲ್ಲವೇ? ಹೌದು! ನಾವು ಬಯಸುವುದು ದೈಹಿಕ ಸುಖ, ಸಂತೋಷ, ಸೌಕರ್ಯ, ಐಷಾರಾಮಗಳನ್ನೇ. ಆದರೆ ಅವುಗಳು ತಮ್ಮ ಜತೆಗೆ ತರುವ ದುಃಖಗಳನ್ನು ಅಲ್ಲ! ಬದುಕಿನಲ್ಲಿ ಕೇವಲ ಸುಖ-ಸಂತೋಷ ಮಾತ್ರವೇ ಇರುವುದಿಲ್ಲ. ನಮ್ಮ ನಮ್ಮ ಕರ್ಮಾನುಸಾರವಾಗಿ, ನಾವು ಮಾಡಿದ ಒಳಿತು – ಕೆಡುಕುಗಳಿಗೆ ಅನುಗುಣವಾಗಿ, ನಮ್ಮ ಪಾಲಿನ ಸುಖ-ದುಃಖಗಳು ನಿರ್ಣಯವಾಗುತ್ತವೆ. ಒಳಿತು ಮಾಡಿದವರಿಗೆ ಒಳಿತು, ಕೆಡುಕು ಮಾಡಿದವರಿಗೆ ಕೆಡುಕು. ಕೆಡುಕು ಮಾಡುತ್ತಲೇ ಇರುವಾಗ ಬದುಕಿನಲ್ಲಿ ಒಳಿತೇ ಆಗಬೇಕೆಂದು ಬಯಸಿದರೆ ಆದೀತೆ? ನಮ್ಮ ಅಸ್ಮಿತೆ (ಐಡೆಂಟಿಟಿ) ಯನ್ನು ನಾವು ಕೇವಲ ನಮ್ಮ ದೇಹಕ್ಕೆ ಸೀಮಿತಗೊಳಿಸಿದಾಗ ಬದುಕು ಅತ್ಯಂತ ಸ್ವಾರ್ಥ ಪರವಾಗುತ್ತದೆ. ಬದುಕು ಅಜ್ಞಾನದಿಂದ ಕೂಡಿರುತ್ತದೆ. ತಮಸ್ಸಿನಿಂದ ತುಂಬಿರುತ್ತದೆ. ಪರಿಣಾಮವಾಗಿ ಸುಖ-ಸಂತೋಷಗಳು ಮರೀಚಿಕೆಯಾಗುತ್ತವೆ. ಮೈಮನವೆಲ್ಲ ಸಾವಿನ ಭಯದಿಂದ ಕೂಡಿರುತ್ತದೆ.

 

Categories
ಸಂಘ ಸಂಸ್ಥೆ

ರಕ್ತ ದಾನ ಶಿಭಿರ

ಲಯನ್ಸ್ ಕ್ಲಬ್ ಬ್ರಹ್ಮಗಿರಿ, ಲಯನ್ಸ್ ಕ್ಲಬ್ ಉಡುಪಿ ಮಿಡ್ ಟೌನ್, ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕ, ರೆಡ್ ಕ್ರಾಸ್ ಉಡುಪಿ ಜಿಲ್ಲಾ ಘಟಕ ಮತ್ತು ಉಡುಪಿ ಕೊಚಿನ್‌‌ ಶಿಪ್ ಯಾರ್ಡ್ – ಮಲ್ಪೆ ಇವರ ಸಂಯೋಗದಿಂದ ನಡೆದ ರಕ್ತ ದಾನ ಶಿಭಿರ

ಇದರ ಉದ್ಘಾಟನೆ ಯನ್ನು ಉಡುಪಿ ಕೊಚಿನ್ ಶಿಪ್ ಯಾರ್ಡ್ CEO ಹರೀಶ್ ಕುಮಾರ್ ಎ. ನೆರವೇರಿಸಿದರು. ಮುಖ್ಯ ಅತಿಥಿ ಗಳಾದ ರೆಡ್ ಕ್ರಾಸ್ ಕುಂದಾಪುರ ಸಭಾಪತಿ ಗಳಾದ ಶ್ರೀ ಎಸ್ ಜಯಕರ ಶೆಟ್ಟಿ ಇವರು ಪ್ರಾಸ್ತಾವಿಕ ಮಾತನಾಡಿದರು. ಲಯನ್ಸ್ ಬ್ರಹ್ಮಗಿರಿ ಅದ್ಯಕ್ಷ ರಾದ ಅಶೋಕ್ ನಾಯಕ್, ಲಯನ್ಸ್ ಉಡುಪಿ ಮಿಡ್ ಟೌನ್ ಅದ್ಯಕ್ಷ ರಾದ ವೀಣಾ ಜೆ. ಶೆಟ್ಟಿ, ಜಿಲ್ಲಾ ರೆಡ್ ಕ್ರಾಸ್ ಕಾರ್ಯದರ್ಶಿ ರತ್ನಾಕರ ಶೆಟ್ಟಿ, ಶಿಪ್ ಯಾರ್ಡ್ DGM – ಅಂಬಲವನನ್, ಕುಂದಾಪುರ ಘಟಕದ ಖಜಾಂಚಿ ಶಿವರಾಮ ಶೆಟ್ಟಿ ಮತ್ತು ಜಿಲ್ಲಾ ಶಾಖೆಯ ಬಾಲಕ್ರಷ್ಣ ಶೆಟ್ಟಿ ಉಪಸ್ಥಿತರಿದ್ದರು

Categories
ಕರಾವಳಿ ಸುದ್ದಿ

ನಾಪತ್ತೆ ಪ್ರಕರಣ

ನಾಪತ್ತೆ ಪ್ರಕರಣ

ಗಂಗೊಳ್ಳಿ: ಗುಜ್ಜಾಡಿ ಗ್ರಾಮದ ನಾಯಕವಾಡಿ ಜನತಾಕಾಲೋನಿ ಕಾಳಿಕಾಂಬಾ ಭಜನಾ ಮಂದಿರದ ಬಳಿಯ ನಿವಾಸಿಯಾದ ರಾಘವೇಂದ್ರ ಆಚಾರ್ಯ (42 ವರ್ಷ) ಇವರು  ಮನೆಯಿಂದ ನಾಯಕವಾಡಿ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು  ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ ರಾಘವೇಂದ್ರ ಆಚಾರ್ಯರವರು ಸುಮಾರು 6 ವರ್ಷ ದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆದರೂ ಗುಣಮುಖರಾಗರುವುದಿಲ್ಲ ಇವರು ನಾಪತ್ತೆಯಾದ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5124

ಶೋಭಕೃತ್‌ ಸಂವತ್ಸರ

ಉತ್ತರಾಯಣ

ವಸಂತ ಋತು ಚೈತ್ರ  ಮಾಸ

ಶುಕ್ಲ ಪಕ್ಷ  ನವಮಿ ತಿಥಿ

 ಪುನರ್ವಸು ನಕ್ಷತ್ರ

ಗುರುವಾರ 30.03.2023

ಇಂದಿನ ವಿಶೇಷ

 ಶ್ರೀ ರಾಮ ನವಮಿ

      ಕುಂದಾಪುರ ಪೇಟೆ ವೆಂಕಟರಮಣ ರಥ

ಈ ದಿನ ಎಲ್ಲರಿಗೂ ಶುಭವಾಗಲಿ  

Categories
ಶಿಕ್ಷಣ

ಮೂಡ್ಲಕಟ್ಟೆ ತಾಂತ್ರಿಕ ಮಹಾ ವಿದ್ಯಾನಿಲಯ

ಮೂಡ್ಲಕಟ್ಟೆ ತಾಂತ್ರಿಕ ಮಹಾ ವಿದ್ಯಾನಿಲಯ

ಕುಂದಾಪುರ: ಪ್ಲೆಸ್‍ಮೆಂಟ್ ಮತ್ತು ಟ್ರೆನೀಂಗ್ ವಿಭಾಗವು ಬೆಂಗಳೂರಿನ ಬಿ.ಎಂ.ಎಸ್ ಕಾಲೀಜಿನ ಪ್ಲೆಸ್‍ಮೆಂಟ್ ಡಿನ್ ಆದ ಡಾ. ಪ್ರದೀಪಾರಿಂದ ವಿದ್ಯಾರ್ಥಿಗಳಿಗೆ ಪ್ಲೆಸ್‍ಮೆಂಟ್‍ನ ಟಿಪ್ಸ್ ಮತ್ತು  ಟ್ರಿಕ್ಸಗಳ ಮೇಲೆ ವಿಶೇಷ ಉಪನ್ಯಾಸ ಏರ್ಪಡಿಸಿದ್ದರು.  ಡಾ. ಪ್ರದೀಪಾರವರು ವಿದ್ಯಾರ್ಥಿಗಳಿಗೆ ತಾವು ಯಾವ ಕಂಪನಿಯಲ್ಲಿ ಕೆಲಸವನ್ನು ನೀರೀಕ್ಷಿಸುತ್ತೀರೊ ಆ ಕಂಪನಿಯ ಬಗ್ಗೆ ಹಾಗೂ ತೆಗೆದುಕೊಳ್ಳುವ ಜವಬ್ದಾರಿಯ ಬಗ್ಗೆ ಆದಷ್ಟು ತಿಳಿದುಕೊಂಡೇ ಕ್ಯಾಂಪಸ ಪ್ಲೆಸ್‍ಮೆಂಟ್‍ಗೆ ಹೋದರೆ ಒಳ್ಳೆಯದು ಎಂದು ಹೇಳಿದರು. ಅತ್ಯಂತ ಹಿಂದುಳಿದ  ಪ್ರದೇಶದಿಂದ ಬಂದು ಭಾರತದಲಿಯೇ ಒಂದು ಅತ್ಯುತಮ ವಿದ್ಯಾ ಸಂಸ್ಥೆಯಲ್ಲಿ ಡಿನ್ ಆಗಿರುವ ತಮ್ಮ ಉದಾಹಣೆಯನ್ನೇ ನೀಡಿ, ವಿದ್ಯಾರ್ಥಿಗಳು ತಮ್ಮಲಿರುವ ಕೀಳರಿಮೆಯನ್ನು ಆದಷ್ಟು ಬೇಗ ತೋರೆದು ಎಲ್ಲಾ ಚಟುವಟಿಕೆಗಳಲ್ಲಿ ಬಾಗವಹಿಸಬೇಕೆಂದು ಸಲಹೆ ನೀಡಿದರು.

ವಿವಿಧ ಸರ್ಟಿಫಿಕೆಟ್ ಕೊರ್ಸಗಳನ್ನು ಮಾಡಿ, ಕೌಶಲ್ಯ ಅಭಿವೃದ್ಧಿ ಮಾಡಿಕೊಂಡು ತಮ್ಮ ಪ್ರತಿಭೆಯನ್ನು ತೋರಿಸಬೇಕು. ಯಾವ ಸಾಧನೆಗೂ ಕಠಿಣ ಪರಿಶ್ರಮವೇ  ಸನಿಹ ದಾರಿ ಎಂದರಲ್ಲದೇ, ಪ್ರಯತ್ನವಿಲ್ಲದೇ ಯಾವ ಸಾಧನೆಯೂ ಅಸಾಧ್ಯ ಎಂದರು. ಕಂಪನಿಗೆ ತಕ್ಕ ಬಯೋಡೆಟಾ ತಯಾರಿ ಮಾಡಿಕೊಂಡರೆ ಉತ್ತಮ ಎಂದು ಹೇಳಿದರು. ನಿಮ್ಮ ಕಾಲಿನ ಮೇಲೆ ನೀವು ನಿಲ್ಲುವುದನ್ನು ಸಮಾಜ ಗೌರವಿಸುತ್ತದೆ ಎಂದು ಒತ್ತಿ ಹೇಳಿದರು. ಡಾ. ಅಬ್ದುಲ್ ಕರೀಮ್‍ರವರು ಮಾತಾಡಿ ಪ್ರಸ್ತುತ ಎಲ್ಲಾ ವಿಭಾಗದವರಿಗೂ ಉದ್ಯೋಗವಕಾಶವಿದೆ ಎಂದು ಹೇಳಿದರು. ಈ ಕಾರ್ಯಕ್ರಮವನ್ನು ಪ್ರೊ. ಅಮೃತಮಾಲಾ ಡೀನ್ ಟಿ.ಪಿ.ಐ.ಆರ್

ಎಂ.ಐ.ಟಿ.ಕೆ ಹಾಗೂ ಪ್ರೊ. ಅಕ್ಷತಾ ನಾಯಕ್ ಸಂಯೋಜಿಸಿದ್ದಾರೆ.