Categories
ಅಪರಾಧ

ಮಣಿಪಾಲ ಚಿನ್ನಾಭರಣ ಕಳವು

ಮಣಿಪಾಲ ಚಿನ್ನಾಭರಣ ಕಳವು

ಮಣಿಪಾಲ:ಸಮೀಪದ ಮೂಡುಅಲೆವೂರಿನಲ್ಲಿ ದಿವಾಕರ ಪೂಜಾರಿ ಎಂಬವರ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಕಳವುಗೈದ ಬಗ್ಗೆ ಮಣಿಪಾಲ ಫೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ 20 ಗ್ರಾಂ ನ ಪೆಂಡೆಂಟ್‌ 20 ಗ್ರಾಂ ನ ಕಿವಿಯೋಲೆ 8 ಗ್ರಾಂ ಚಿನ್ನದ ಸರ 4ಗ್ರಾಂ ಚಿನ್ನದ ಉಂಗುರ ಹಾಗೂ ಮೂಗುಬೊಟ್ಟು ಕಳವಾಗಿದ್ದು ಒಟ್ಟು ಮೌಲ್ಯ 2.40.000 ಎಂದು ಅಂದಾಜಿಸಲಾಗಿದೆ ಪೋಲೀಸರು ತನಿಖೆ ಕೈಗೊಂಡಿದ್ದಾರೆ

Categories
ಹೊಂಗಿರಣ

17. ಆತ್ಮ-ವಿಶ್ವಾಸ

  1. ಆತ್ಮ-ವಿಶ್ವಾಸ

ದೇಹ ಅಳಿಯುವುದು ನಿಶ್ಚಿತ. ಆದರೆ ದೇಹವೆಂಬ ದೇಗುಲದಲ್ಲಿ ನಿರ್ಮಲ ಜ್ಯೋತಿಯಾಗಿ ವಿಜೃಂಭಿಸುವ ಆತ್ಮಕ್ಕೆ ಮಾತ್ರ ಅಳಿವಿಲ್ಲ. ನಿಜ, ಆದರೆ ಆತ್ಮದ ಕುರಿತಾಗಿ ಏನನ್ನಾದರು ಹೇಳಿದರೆ ಸಾಮಾನ್ಯವಾಗಿ ಕೂಡಲೇ ವಿಶ್ವಾಸ ಮೂಡುವುದಿಲ್ಲ. ಆತ್ಮವೆನ್ನುವುದು ಇದೆಯೇ ಎಂಬ ಮರು ಪ್ರಶ್ನೆ ಥಟ್ಟನೆ ಕೇಳಿ ಬರುತ್ತದೆ. ಆದರೆ ದೈನಂದಿನ ಬದುಕಿನಲ್ಲಿ ಯಾವುದಾದರೂ ಮಹತ್ಕಾರ್ಯಕ್ಕೆ ತೊಡಗುವಾಗ ನಮ್ಮಲ್ಲಿ ಆತ್ಮವಿಶ್ವಾಸವಿದೆ ಎಂದು ನಾವು ತಪ್ಪದೇ ಹೇಳಿಕೊಳ್ಳುತ್ತೇವೆ. ಆತ್ಮ ಇದೆಯೋ ಇಲ್ಲವೋ ಎಂದು ಶಂಕಿಸುವವರಿಗೆ ಆತ್ಮವಿಶ್ವಾಸವಂತೂ ಇದ್ದೇ ಇರುವುದನ್ನು ನಾವು ಕಾಣಬಹುದು! ಹಾಗಿದ್ದರೆ ಆತ್ಮನ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಹೇಗೆ? ದೇಹ, ಮನಸ್ಸು ಮತ್ತು ಬುದ್ಧಿಯನ್ನು ಗೆಲ್ಲುವ ಸಾಧನೆಯ ಮೂಲಕವಲ್ಲದೇ ಅನ್ಯ ಮಾರ್ಗವಿಲ್ಲ. ಗೀತಾಚಾರ್ಯ ಹೇಳುತ್ತಾನೆ. ಆತ್ಮಕ್ಕೆ ಸಾವಿಲ್ಲ, ದೇಹಕ್ಕೆ ಮಾತ್ರ ಎನ್ನುವ ಸತ್ಯವನ್ನು ಅರಿಯುವ ಸಾಧನೆಯ ಮಾರ್ಗ ದುರ್ಗಮವಾದದ್ದು. ಆತ್ಮನು ಯಾವ ಕಾಲದಲ್ಲಿಯೂ ಹುಟ್ಟುವವನೂ ಅಲ್ಲ, ಸಾಯುವವನೂ ಅಲ್ಲ, ಹಿಂದೆ ಉತ್ಪನ್ನನಾಗಿ ಈಗ ಇರುವವನೂ ಅಲ್ಲ. ಏಕೆಂದರೆ ಈ ಆತ್ಮ ಜನರಹಿತ, ನಿತ್ಯ, ಸನಾತನ ಮತ್ತು ಪುರಾತನನು. ಶರೀರ ಕೊಲ್ಲಲ್ಪಟ್ಟರೂ ಆತ್ಮ ಕೊಲ್ಲಲ್ಪಡುವುದಿಲ್ಲ. ಮನುಷ್ಯನು ಹಳೆಯ ಬಟ್ಟೆಯನ್ನು ತೆಗೆದುಹಾಕಿ ಬೇರೆ ಹೊಸ ಬಟ್ಟೆಯನ್ನು ಧರಿಸುವಂತೆ ಜೀವಾತ್ಮನು ಹಳೆಯ ಶರೀರವನ್ನು ಬಿಟ್ಟು ಬೇರೆ ಹೊಸ ಶರೀರರದಲ್ಲಿ ಪ್ರವೇಶ ಪಡೆಯುತ್ತಾನೆ. ಆತ್ಮನನ್ನು ಶಸ್ತ್ರಗಳು ಕತ್ತರಿಸಲಾರವು, ಬೆಂಕಿ ಸುಡಲಾರದು, ನೀರು ನೆನೆಯಿಸಲಾರದು ಮತ್ತು ಗಾಳಿ ಒಣಗಿಸಲಾರದು.

Categories
ಅಪರಾಧ

ಕೋಟೇಶ್ವರ:ಟಿಪ್ಪರ್ ಕಳವು

ಕೋಟೇಶ್ವರ:ಟಿಪ್ಪರ್ ಕಳವು

ಕೋಟೇಶ್ವರ:ಸಮೀಪದ ಬೀಜಾಡಿ ಗ್ರಾಮದ ವಿಲಾಸ್‌ ಗ್ರಾನೈಟ್‌ ಮಳಿಗೆಯ ಪಕ್ಕದಲ್ಲಿರುವ ಶ್ರೀ ಮಾತಾ ಅಟೋ ಡೀಸೆಲ್‌ ವರ್ಕ್ಸ್‌ ಎದುರು ನಿಲ್ಲಿಸಿದ್ದ ಟಿಪ್ಪರ್‌ ಕಳುವಾದ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮಾಲತಿ ಅವರಿಗೆ ಸೇರಿದ ಈ ಟಿಪ್ಪರ್‌ ನ ಮೌಲ್ಯ 4 ಲಕ್ಷ ಎಂದು ಅಂದಾಜಿಸಲಾಗಿದೆ

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5124

ಶುಭಕೃತ್‌ ಸಂವತ್ಸರ

ಉತ್ತರಾಯಣ

ಶಿಶಿರ ಋತು ಮಾಘ ಮಾಸ

ಶುಕ್ಲ ಪಕ್ಷ ದಶಮಿ ತಿಥಿ

ಮೃಗಶಿರೆ ನಕ್ಷತ್ರ

ಬುಧವಾರ

ಅದೃಷ್ಡ ಸಂಖ್ಯೆ 48 69

ಇಂದಿನ ವಿಶೇಷ

ಮೊಳಹಳ್ಳಿ ಕರೆಗುಡಿ ಬ್ರಹ್ಮ ಯಕ್ಷಿ ದೇವಸ್ಥಾನದ ಡಮರು ಸೇವೆ

ಈ ದಿನ ಎಲ್ಲರಿಗೂ ಶುಭವಾಗಲಿ