Categories
ಕರಾವಳಿ ಸುದ್ದಿ

ಬಿ ಜೆ ಪಿ ವಿಜಯೋತ್ಸವ

ಬಿ ಜೆ ಪಿ ವಿಜಯೋತ್ಸವ

ಮಂಗಳೂರು: ತ್ರಿಪುರ ಮತ್ತು ನಾಗಾಲ್ಯಾಂಡ್‌ನಲ್ಲಿ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗ ಗುರುವಾರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಿಹಿ ತಿಂಡಿ ಹಂಚಿ ವಿಜಯೋತ್ಸವ ಆಚರಿಸಿದರು.

ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಅವರು ಮಾತನಾಡಿ,ತ್ರಿಪುರ ಮತ್ತು ನಾಗಾಲ್ಯಾಂಡ್ ದೇಶದ ಭಾಗವೇ ಆಗಿದ್ದರೂ ಈಶಾನ್ಯ ರಾಜ್ಯಗಳಿಗೆ ವಿದ್ಯುತ್, ರಸ್ತೆ , ರೈಲು ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸದೆ ದೇಶದಿಂದ ಬೇರ್ಪಡಿಸುವ ಕೆಲಸ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಸರಕಾರ ಮಾಡಿತ್ತು.

ಆದರೆ ನರೇಂದ್ರ ಮೋದಿ ಅವರು ದೇಶದ ಆಡಳಿತ ವಹಿಸಿಕೊಂಡ ಬಳಿಕ, ದೇಶದ ಭೌಗೊಳಿಕ ವ್ಯವಸ್ಥೆ, ಗಡಿಯನ್ನು ಸಂರಕ್ಷಣೆಗೆ ಮಾಡುವ ಕೆಲಸವನ್ನು ಮಾಡಿದ್ದಾರೆ ಎಂದರು ವಿಜಯೋತ್ಸವ ಸಂಭ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್‌ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು

Categories
ಅಪರಾಧ

ಜಾನುವಾರು ಕಳ್ಳರ ಬಂಧನ

ಜಾನುವಾರು ಕಳ್ಳರ ಬಂಧನ

ಕುಂದಾಪುರ: ಕೊಲ್ಲೂರು ಸಮೀಪದ ಜಡ್ಕಲ್‌ ನಲ್ಲಿ ಕೆಲವು ದಿನಗಳ ಹಿಂದೆ ಜಾನುವಾರು ಕಳ್ಳತನಕ್ಕೆ ಯತ್ನಿಸುತ್ತಿರುವಾಗ ತಡೆಯಲು ಹೋದ ಪ್ರವೀಣ್‌ ಶೆಟ್ಟಿ ಹಾಗೂ ಸಂಗಡಿಗರಿಗೆ ತಲವಾರ್‌ ನಿಂದ ಬೆದರಿಸಿ ದನವನ್ನು ರಿಟ್ಜ್‌ ಕಾರಿನೊಳಗೆ ತುಂಬಿಸಿಕೊಂಡು ಪರಾರಿಯಾದ ಇಬ್ಬರು ಆರೋಪಿಗಳನ್ನು ಕೊಲ್ಲೂರು ಪೋಲೀಸರು ಬಂಧಿಸಿದ್ದಾರೆ ಆರೋಪಿಗಳಾದ ವಾಜೀದ್(26ವರ್ಷ) ಮಹಮ್ಮದ್‌(27ವರ್ಷ) ಇಬ್ಬರನ್ನು ಸುರತ್ಕಲ್‌ನ ಕಾಟಿಪಳ್ಳದಲ್ಲಿ ಬಂಧಿಸಿ ಬೈಂದೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ

Categories
ಅಪರಾಧ

ಉಡುಪಿಯಲ್ಲಿ ಮತ್ತೊಂದು ಸೈಬರ್‌ ವಂಚನೆ

ಉಡುಪಿಯಲ್ಲಿ ಮತ್ತೊಂದು ಸೈಬರ್‌ ವಂಚನೆ

ಉಡುಪಿ: ಕುತ್ಪಾಡಿ ಗ್ರಾಮದ ಜನತಾ ಕಾಲೋನಿ ನಿವಾಸಿಯಾದ ರೊನಾಲ್ಡ್‌ ಜೆ ಸುಚಿತ್ತ ರವರ ಉದ್ಯಾವರದ ಕೆನರಾ ಬ್ಯಾಂಕ್‌ ಶಾಖೆಯಿಂದ 1.94.000 ಹಣ ಲಪಟಾಯಿಸಿದ ಬಗ್ಗೆ ಉಡುಪಿಯ ಸೆನ್‌ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಅಪರಿಚಿತ ವ್ಯಕ್ತಿಯೊರ್ವ ರೊನಾಲ್ಡ್ ಜೆ ಸುಚಿತ್ತರವರಿಗೆ ಕರೆ ಮಾಡಿ ತಾನು ಬ್ಯಾಂಕ್‌ ಅಧಿಕಾರಿ ಎಂದು ಪರಿಚಯ ಮಾಡಿಕೊಂಡು ನಿಮ್ಮ ಖಾತೆಯ ಕೆ ವೈ ಸಿ ಯನ್ನು ಅಪ್‌ ಡೇಟ್‌ ಮಾಡಬೇಕು ಇಲ್ಲವಾದಲ್ಲಿ ನಿಮ್ಮ ಬ್ಯಾಂಕ್‌ ಖಾತೆ ಬ್ಲಾಕ್‌ ಆಗುತ್ತದೆ ಎಂದು ನಂಬಿಸಿ ಅವರಿಂದ ಬ್ಯಾಂಕ್‌ ವಿವರ ಆಧಾರ್‌ ವಿವರ ಹಾಗೂ ಓ ಟಿ ಪಿ ಯನ್ನು ಪಡೆದು ಅವರ ಖಾತೆಯಿಂದ ಕ್ರಮವಾಗಿ 94.000 ಹಾಗೂ 1.00.000 ಒಟ್ಟು 1.94.000 ಸಾವಿರ ಹಣವನ್ನು ಆನ್‌ ಲೈನ್‌ ಮೂಲಕ ವರ್ಗಾವಣೆ ಮಾಡಿ ವಂಚಿಸಿರುವ ಘಟನೆ ನಡೆದಿದೆ

Categories
ಹೊಂಗಿರಣ

18. ಕೊನೆಗಾಲದ ಕಾಮನೆ

 

  1. ಕೊನೆಗಾಲದ ಕಾಮನೆ

ಹುಟ್ಟು ಮತ್ತು ಸಾವಿನ ಸಂಬಂಧ ಇಷ್ಟೊಂದು ಗಾಢವಿದೆ ಎಂದಾದರೆ ಜನನ-ಮರಣದ ಈ ಚಕ್ರದಿಂದ ಮುಕ್ತಿಯನ್ನು ಪಡೆಯುವುದಾದರೂ ಸಾಧ್ಯವಿದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಆ ಪ್ರಶ್ನೆಗೆ ಉತ್ತರ ಹುಡುಕುವ ಮೊದಲು ನಾವು ಈ ಭೂಮಿಯಲ್ಲಿ ಜನಿಸಿರುವುದಕ್ಕೆ ಮುಖ್ಯವಾದ ಕಾರಣವಾದರೂ ಏನು ಎಂಬ ಬಗ್ಗೆ ವಿಚಾರ ಮಾಡುವುದು ಅಗತ್ಯ. ಮನಸ್ಸು ಕಾಮನೆಗಳ ಉಗ್ರಾಣವೆಂಬ ಸತ್ಯವನ್ನು ನಾವು ಈಗಾಗಲೇ ಅರಿತಿದ್ದೇವೆ. ಮನಸ್ಸೆಂಬ ಉಗ್ರಾಣದಲ್ಲಿ ಆಸೆ-ಆಕಾಂಕ್ಷೆಗಳು ನಿರಂತರವಾಗಿ ಜನ್ಮತಳೆಯುತ್ತಲೇ ಇರುತ್ತವೆ. ಅವುಗಳನ್ನು ಈಡೇರಿಸುತ್ತಲೇ ಇರುವ ಕಾಯಕದಲ್ಲಿ ನಮ್ಮನ್ನು ನಾವು ನಿರಂತರವಾಗಿ ತೊಡಗಿಸಿಕೊಂಡಿದ್ದೇವೆ. ಒಂದು ಆಸೆ ಪೂರೈಸುತ್ತಲೇ ನೂರು ಆಸೆಗಳು ಅದರ ಸ್ಥಾನವನ್ನು ಆಕ್ರಮಿಸುತ್ತವೆ ಎನ್ನುವುದನ್ನು ಅನುಭವದಿಂದ ಅರಿತಿದ್ದೇವೆ. ಬದುಕಿನ ಉದ್ದಕ್ಕೂ ಸಾಗುವುದು ಆಸೆಗಳ ಪೂರೈಕೆಯ ಹೋರಾಟವೇ ಆಗಿದೆ. ಹಾಗಾಗಿಯೇ ದುಃಖವು ನಿರಂತರವಾಗಿ ನಮ್ಮನ್ನು ಅಂಟಿಕೊಂಡೇ ಇದೆ. ಕೊನೆಗಾಲ ಸಮೀಪಿಸಿದರೂ ಈಡೇರದ ಆಸೆಗಳು ಇನ್ನೂ ಅಗಣಿತವಾಗಿಯೇ ಉಳಿದಿರುತ್ತವೆ. ನಿಜಕ್ಕಾದರೆ ಈ ಆಸೆಗಳೇ ನಮ್ಮನ್ನು ಜನನ-ಮರಣದ ಚಕ್ರಕ್ಕೆ ಬಂಧಿಸುವ ಮೂಲ ಸಾಧನಗಳಾಗಿವೆ. ನಾವು ಜನ್ಮತಳೆದಿರುವುದಕ್ಕೆ ಮೂಲ ಕಾರಣಗಳೇ ಈಡೇರದ ಆಸೆಗಳು ಮತ್ತು ಅವುಗಳ ಮೊತ್ತವೇ ಆಗಿದೆ. ಹಾಗಾಗಿ ಕೊನೆಗಾಲ ಸಮೀಪಿಸಿದಾಗ ಯಾವೆಲ್ಲ ಕಾಮನೆಗಳನ್ನು ಮನದಲ್ಲಿ ಉಳಿಸಿಕೊಂಡಿರುವೆವೋ ಅವುಗಳ ಈಡೇರಿಕೆಗಾಗಿಯೇ ಮತ್ತೆ ಮತ್ತೆ ಜನಿಸಿ ಬರುವೆವು. ಈ ಜನನ-ಮರಣದ ಚಕ್ರದಿಂದ ಮುಕ್ತಿ ಪಡೆಯಲು ಕೊನೆಗಾಲದಲ್ಲಾದರೂ ದೇವರ ನಾಮವನ್ನು ಸ್ಮರಿಸುವುದೊಂದೇ ಉಪಾಯ.

Categories
ಅಪರಾಧ

ಡಿಕ್ಕಿ ಹೊಡೆದು ಪರಾರಿ

ಡಿಕ್ಕಿ ಹೊಡೆದು ಪರಾರಿ

ಮಣಿಪಾಲ : ಪರ್ಕಳದ ಪಾಟೀಲ್‌ ಟೆಕ್ಸ್ ಟೈಲ್ಸ್‌ ಅಂಗಡಿಯ ಬಳಿಯಲ್ಲಿ ಬೈಲೂರು ನಿವಾಸಿಯಾದ ವಿವೇಕಾನಂದ ಎಂಬುವವರು ರಸ್ತೆಯನ್ನು ದಾಟಿ ರಸ್ತೆ ಬದಿಯ ಅಂಚಿನಲ್ಲಿರುವಾಗ ಕಾರ್ಕಳ ಕಡೆಯಿಂದ ಅತೀ ವೇಗದಿಂದ ಬಂದ ಬೈಕೊಂದು ಡಿಕ್ಕಿ ಹೂಡೆದ ಪರಿಣಾಮ ವಿವೇಕಾನಂದ ರವರಿಗೆ ಎಡಕಾಲಿನ ಮೂಳೆ ಮುರಿದಿದ್ದು ಅಪಘಾತ ನಡೆಸಿದ ಬೈಕ್‌ ಸವಾರ ಬೈಕನ್ನು ಸ್ಧಳದಲ್ಲಿ ನಿಲ್ಲಿಸದೇ ಪರಾರಿಯಾಗಿರುವುದಾಗಿ ತಿಳಿದು ಬಂದಿದ್ದು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5124

ಶುಭಕೃತ್‌ ಸಂವತ್ಸರ

ಉತ್ತರಾಯಣ

ಶಿಶಿರ ಋತು ಮಾಘ ಮಾಸ

ಶುಕ್ಲ ಪಕ್ಷ ಎಕಾದಶಿ ತಿಥಿ

ಆರ್ದ್ರೆ ನಕ್ಷತ್ರ

ಗುರುವಾರ

ಅದೃಷ್ಡ ಸಂಖ್ಯೆ 88 36

ಇಂದಿನ ವಿಶೇಷ

ಜಪ್ತಿ ನಂದಿಕೇಶ್ವರ ಗೆಂಡ

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಅಪರಾಧ

ಸೈಬರ್‌ : ಹಣ ವಂಚನೆ

ಸೈಬರ್‌ : ಹಣ ವಂಚನೆ

ಉಡುಪಿ: ಸಮೀಪದ ಗುಂಡಿಬೈಲು ನಿವಾಸಿಯಾದ ಭಾಸ್ಕರ ಸೇರಿಗಾರರ ಮಣಿಪಾಲದ ಕೆನರಾ ಬ್ಯಾಂಕ್‌ ಶಾಖೆಯಿಂದ ಹಣ ಲಪಟಾಯಿಸಿದ ಬಗ್ಗೆ ಉಡುಪಿಯ ಸೆನ್‌ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮಂಗಳವಾರ ಬೆಳಿಗ್ಗೆ ಅಪರಿಚಿತ ವ್ಯಕ್ತಿಯೊರ್ವ ಭಾಸ್ಕರ್‌ ಸೇರಿಗಾರ ಇವರಿಗೆ ಕರೆ ಮಾಡಿ ತಾನು ಬ್ಯಾಂಕ್‌ ಅಧಿಕಾರಿ ಎಂದು ಪರಿಚಯ ಮಾಡಿಕೊಂಡು ನಿಮ್ಮ ಖಾತೆಯ ಕೆ ವೈ ಸಿ ಯನ್ನು ಅಪ್‌ ಡೇಟ್‌ ಮಾಡಬೇಕು ಇಲ್ಲವಾದಲ್ಲಿ ನಿಮ್ಮ ಬ್ಯಾಂಕ್‌ ಖಾತೆ ಬ್ಲಾಕ್‌ ಆಗುತ್ತದೆ ಎಂದು ನಂಬಿಸಿ ಅವರಿಂದ ಬ್ಯಾಂಕ್‌ ವಿವರ ಆಧಾರ್‌ ವಿವರ ಹಾಗೂ ಓ ಟಿ ಪಿ ಯನ್ನು ಪಡೆದು ಅವರ ಖಾತೆಯಿಂದ 99.000 ಹಣವನ್ನು ಆನ್‌ ಲೈನ್‌ ಮೂಲಕ ವರ್ಗಾವಣೆ ಮಾಡಿ ವಂಚಿಸಿರುವ ಘಟನೆ ನಡೆದಿದ್ದು ಉಡುಪಿಯ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Categories
Uncategorized

ನೇಣು ಬಿಗಿದು ಆತ್ಮಹತ್ಯೆ

ನೇಣು ಬಿಗಿದು ಆತ್ಮಹತ್ಯೆ

ಕುಂದಾಪುರ: ಕೋಟೇಶ್ವರ ಸಮೀಪದ ಮಾರ್ಕೊಡು ನಿವಾಸಿಯಾದ ಶಂಕರ ಪೂಜಾರಿ ಎಂಬವರು ತನ್ನ ವಾಸದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಈ ಕೃತ್ಖ ಎಸಗಿದ್ದು ವಿಪರೀತ ಮದ್ಯಪಾನದ ಚಟ ಹಾಗೂ ಹಣಕಾಸಿನ ಅಡಚಣೆಯೇ ಆತ್ಮಹತ್ಯೆಗೆ ಕಾರಣವೆಂದು ತಿಳಿದು ಬಂದಿದೆ.

Categories
ಅಪರಾಧ

ಬೈಕ್‌ ಡಿಕ್ಕಿ:ಪಾದಾಚಾರಿ ಸಾವು

ಬೈಕ್‌ ಡಿಕ್ಕಿ ಪಾದಾಚಾರಿ ಸಾವು

ಉಡುಪಿ: ಪುತ್ತೂರಿನ ಶ್ರೀಬಬ್ಬುಸ್ವಾಮಿ ದೇವಸ್ದಾನದ ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳವಾರ ಬೆಳಿಗ್ಗೆ 8.30 ರ ಸುಮಾರಿಗೆ ಅಜ್ಜ ಕ್ಯಾಂಟೀನ್‌ ಎದುರುಗಡೆ ಸಂತೆಕಟ್ಟೆಯಿಂದ ಉಡುಪಿಗೆ ತೆರಳುತ್ತಿದ್ದ ಬೈಕ್ ಸವಾರ ಹರ್ಷಿತ್‌ ಎಂಬವರು ಪಾದಾಚಾರಿಯಾದ  ಮಲ್ಲಯ್ಯನವರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಹರ್ಷಿತ್‌ ಗೆ  ತಲೆ ಮತ್ತು ಕಾಲುಗಳಿಗೆ ಪೆಟ್ಟಾಗಿದ್ದು ಪಾದಾಚಾರಿ ಮುಲ್ಲಯ್ಯನವರನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ ಇವರು ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿರುವುದಾಗಿ ತಿಳಿದು ಬಂದಿದ್ದು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಅಪರಾಧ

ಕುಂದಾಪುರ ಪೋಲೀಸರಿಗೆ ಪ್ರಶಂಸೆ

ಕುಂದಾಪುರ ಪೋಲೀಸರಿಗೆ ಪ್ರಶಂಸೆ

ಕುಂದಾಪುರ:ಕುಂದಾಪುರ ನಗರ ಠಾಣಿಯಲ್ಲಿ  ಮೊಬೈಲ್‌ ಕಳೆದು ಹೋಗಿರುವ ಬಗ್ಗೆ ಪ್ರತಿನಿತ್ಯವೂ ಸಾರ್ವಜನಿಕರಿಂದ ಹಲವಾರು ದೂರುಗಳು ಬರುತ್ತಿದ್ದು ಈ ನಿಟ್ಟಿನಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡು ಕೆಲವು ಪ್ರಕರಣಗಳನ್ನು ತಕ್ಷಣವೇ ಭೇಧಿಸಿದ ಬಗ್ಗೆ ಕುಂದಾಪುರ  P S I ಪ್ರಸಾದ್‌ ಕುಮಾರ್‌ ಕೆ ಹಾಗೂ ಸಿಬ್ಬಂದಿಯವರ ಬಗ್ಗೆ ಸಾರ್ವಜನಿಕರಿಂದ ಬಹಳ ಮೆಚ್ಚುಗೆ ವ್ಯಕ್ತವಾಗಿದೆ

ಈಗಾಗಲೇ ಮೊಬೈಲ್‌ ಕಳೆದುಹೋದ ಬಗ್ಗೆ ಕುಂದಾಪುರ ಠಾಣೆಯಲ್ಲಿ 27 ಪ್ರಕರಣಗಳು ದಾಖಲಾಗಿದ್ದು ಕಳೆದ ಎರಡೇ ದಿನಗಳಲ್ಲಿ ಕಳೆದುಹೋದ 3 ಮೊಬೈಲ್‌ ಗಳನ್ನು

CEIR PORTAL ಸಹಾಯದಿಂದ ಪತ್ತೆ ಹಚ್ಚಿ ಅದನ್ನು ವಾರೀಸುದಾರರಿಗೆ ನೀಡಿದ ಬಗ್ಗೆ ಹರ್ಷ ವ್ಯಕ್ತವಾಗಿದೆ

ಸಾರ್ವಜನಿಕರು ತಮ್ಮ ಮೊಬೈಲ್‌ ಕಳೆದುಹೋದಲ್ಲಿ ತಕ್ಷಣ ಠಾಣೆಗೆ ತಿಳಿಸಿದರೆ ಮೊಬೈಲ್‌ ಗೆ ಸಂಬಂದಿಸಿದ ಮಾಹಿತಿಯನ್ನು CEIR PORTAL ನಲ್ಲಿ ದಾಖಲಿಸಲಾಗುವುದು ಎಂದು P S I ಪ್ರಸಾದ್‌ ಕುಮಾರ್‌ ಕೆ ತಿಳಿಸಿದ್ದಾರೆ