Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5125

ಶೋಭಕೃತ್‌ ಸಂವತ್ಸರ

ದಕ್ಷಿಣಾಯಣ

ಗ್ರೀಷ್ಮ ಋತು

ಅಧಿಕ ಶ್ರಾವಣ ಮಾಸ

ಕೃಷ್ಣ ಪಕ್ಷ

ತಿಥಿ: ತ್ರಯೋದಶಿ

ಉಪರಿ ಚತುರ್ದಶಿ ನಕ್ಷತ್ರ

ಸೋಮವಾರ 31.07.2023

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಕರಾವಳಿ ಸುದ್ದಿ

ಶರತ್ ಮೃತದೇಹ ಪತ್ತೆ

ಕುಂದಾಪುರ: ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತದಲ್ಲಿ ಕಳೆದ ಭಾನುವಾರ ನೀರುಪಾಲಾದ ಶರತ್ ಮೃತದೇಹ ಇಂದು ಬೆಳ್ಳಿಗೆ ಪತ್ತೆಯಾಗಿದೆ.ಜುಲೈ 23 ರಂದು ಕೊಲ್ಲೂರಿನ ಅರಶಿನ ಗುಂಡಿ ಜಲಪಾತದಲ್ಲಿ ಶರತ್ ಕಾಲು ಜಾರಿ ನಾಪತ್ತೆಯಾಗಿದ್ದರು.

ಪೊಲೀಸರು, ಅಗ್ನಿಶಾಮಕ ದಳ, ಮುಳುಗು ತಜ್ಞ ಈಶ್ವರ್ ಮಲ್ಪೆ, ಕೋತಿರಾಜ್ ಹಾಗೂ ಎನ್ಡಿಆರ್ಎಫ್ ತಂಡದಿಂದ ಸತತವಾಗಿ ಶೋಧ ಕಾರ್ಯ ನಡೆಸಲಾಗಿತ್ತು. ಅಲ್ಲದೆ ಡ್ರೋಣ್ ಮೂಲಕ ಕೂಡ ಹುಡುಕಾಟ ನಡೆಸಿದ್ದು ಇಂದು ಶರತ್ ಮೃತದೇಹ ಅರಶಿನ ಗುಂಡಿ ಜಲಪಾತದಿಂದ 200 ಮೀಟರ್ ಕೆಳಗಡೆ ಪತ್ತೆಯಾಗಿದೆ.  ಶರತ್ ಮೃತದೇಹ  ಬಂಡೆ ಕಲ್ಲಿನ ಒಳಗಡೆ ಸಿಲುಕಿ  ಹಾಕಿಕೊಂಡಿದ್ದು ಕೊಲ್ಲೂರು ಪೊಲೀಸರು, ಅಗ್ನಿಶಾಮಕ ದಳ, ಸ್ಥಳೀಯರ ಕಾರ್ಯಚರಣೆಯ ವೇಳೆ ಪತ್ತೆಯಾಗಿದೆ.

Categories
ಇತರೆ

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕ

ದೆಹಲಿ : ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಎ ಎಂ ಯು (A M U) ನ ಮಾಜಿ ಉಪಕುಲಪತಿಗಳಾದ ತಾರಿಕ್ ಮನ್ಸೂರ್‌ ರವರು ನೇಮಕಗೊಂಡಿದ್ದಾರೆ

ಅವರು ಸಪ್ಟೆಂಬರ್ 20 1956 ರಂದು ಆಲಿಗಢದಲ್ಲಿ ಜನಿಸಿದ್ದರು 1978 ರಲ್ಲಿ ಎಂಬಿಬಿಎಸ್ ಮತ್ತು 1982 ರಲ್ಲಿ ಜವಾಹರ್ಲಾಲ್ ನೆಹರು ವೈದ್ಯಕೀಯ ಕಾಲೇಜಿನಲ್ಲಿ ಎಂ ಎಸ್‌ ನ್ನು ಪೂರ್ಣಗೊಳಿಸಿದರು . ಮನ್ಸೂರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು 2023 ರ ಪದ್ಮ ಪ್ರಶಸ್ತಿ ಸಮಿತಿಯ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದ್ದರು ಇದೀಗ ಮನ್ಸೂರ್‌ರವರು ಬಿಜೆಪಿಯ 13 ರಾಷ್ಟ್ರೀಯ ಉಪಾಧ್ಯಕ್ಷರಲ್ಲಿ ಒಬ್ಬರಾಗಿ ನೇಮಕಗೊಂಡಿದ್ದಾರೆ

Categories
ಕ್ರೀಡೆ

ಭಾರತಕ್ಕೆ ಹೀನಾಯ ಸೋಲು

ಬಾರ್ಬಡೋಸ್ : ವೆಸ್ಟ್ ಇಂಡೀಸ್ ನ ಬಾರ್ಬಡೋಸ್ ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಭಾರತ  ತಂಡವನ್ನು ಆರು ವಿಕೆಟ್ ಗಳಿಂದ ಸೋಲಿಸಿ 3 ಪಂದ್ಯಗಳ ಸರಣಿಯನ್ನು 1-1 ರಿಂದ  ಸಮಬಲಗೊಳಿಸಿದೆ

ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ಆರಂಭಿಕ 90 ರನ್ ಗಳನ್ನು ಯಾವುದೇ ವಿಕೇಟ್‌ ನಷ್ಟ ಇಲ್ಲದೆ ಗಳಿಸಿತು ಬಳಿಕ ಭಾರತ ತಂಡವು 40.5 ಓವರ್ ಗಳಲ್ಲಿ 180 ರನ್ ಗಳಿಸಿ ಆಲ್ ಔಟ್ ಆಯಿತು 182 ರನ್ ಗಳ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡವು 36.4 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಜಯಶಾಲಿಯಾಗಿದೆ ಇದರೊಂದಿಗೆ ಆರು ವರ್ಷಗಳ ನಂತರ ವೆಸ್ಟ್ ಇಂಡೀಸ್ ನೆಲದಲ್ಲಿ ಭಾರತ ತಂಡವು ಏಕದಿನ ಪಂದ್ಯವನ್ನು ಸೋತಿದೆ

Categories
Uncategorized

ನಿಷ್ಕಳಂಕ ಮಹಾದೇವ ದೇವಸ್ಥಾನ

ನಿಷ್ಕಳಂಕ ಮಹಾದೇವ ದೇವಸ್ಥಾನ – ಇದು ಪಂಚಮ ಶಿವಲಿಂಗಗಳ ಪವಾಡ ಕ್ಷೇತ್ರ ನಿಷ್ಕಳಂಕ ಐದು ಶಿವಲಿಂಗಗಳ ಪವಿತ್ರವಾದ ಈ  ದೇವಸ್ಥಾನವಿರೋದು ಗುಜರಾತ್ನ ಭಾವನಗರದ ಕೋಲಿಯಾಕ್ ನಲ್ಲಿ .ಅರಿಬ್ಬೀ ಸಮುದ್ರದ ಮಧ್ಯದಲ್ಲಿದೆ ಈ ನಿಷ್ಕಳಂಕ ಪಂಚ ಶಿವಲಿಂಗಗಳಿರುವ ಈ ಕ್ಷೇತ್ರವು ಅರಿಬ್ಬೀ ಸಮುದ್ರದ ಮಧ್ಯದಲ್ಲಿದೆ. ವಿಶ್ವದಲ್ಲಿರುವ ಪಂಚ ಶಿವಲಿಂಗಗಳಲ್ಲಿ  ಸಮುದ್ರದ ಮಧ್ಯಭಾಗದಲ್ಲಿರುವ ಏಕೈಕ ಕ್ಷೇತ್ರ ಈ ನಿಷ್ಕಳಂಕ ದೇವಸ್ಥಾನ. ಇಲ್ಲಿರುವ ಶಿವಲಿಂಗಗಳ ಎತ್ತರವು ಅನುದಿನವು ಬೇರೆ ಬೇರೆಯಾಗಿರುತ್ತದೆ. ಅನುದಿನವು 2 ಗಂಟೆಗಳ ಕಾಲ ಸಮುದ್ರವು ಭಕ್ತರಿಗೆ ಈ ಶಿವಲಿಂಗಗಳ ದರ್ಶನ  ಮಾಡಲು ದಾರಿ ಮಾಡಿಕೊಡುತ್ತದೆ. ಈ ಘಟನೆಯು ನಿಜವಾಗಿಯೂ ಒಂದು ಪವಾಡವೇ ಸರಿ.

ಸರಿಸುಮಾರು ಒಂದು ದಿನಕ್ಕೆ ಹದಿನೈದು ಸಾವಿರ ಜನ  ಈ ಶಿವಲಿಂಗಗಳ ದರ್ಶನವನ್ನು ಪಡೆಯುತ್ತಾರೆ. ಐದು ಶಿವಲಿಂಗಗಳ ಬಳಿ 5 ನಂದಿಗಳು ಇರುವುದು ಈ ಕ್ಷೇತ್ರದ ಇನ್ನೊಂದು ವಿಶೇಷ.  ಸಾಗರವೇ ಶಿವನ ದರ್ಶನಕ್ಕೆ ದಾರಿ ಮಾಡಿಕೊಡುವ ಏಕೈಕ ಕ್ಷೇತ್ರವೆಂದರೆ ಇದು. ಶ್ರಾವಣ ಮಾಸದ ಅಮಾವಾಸ್ಯೆಯ ದಿನ ರಾತ್ರಿ ಇಲ್ಲಿ ಪ್ರಸಿದ್ಧ ಜಾತ್ರೆ ನಡೆಯುತ್ತದೆ .

ಇಲ್ಲಿಯ ಸ್ಥಳ ಪುರಾಣದ ಪ್ರಕಾರಪಾಂಡವರು ಈ ಕ್ಷೇತ್ರದಲ್ಲಿ ಪಂಚ ಶಿವಲಿಂಗಗಳನ್ನು ಸ್ಥಾಪಿಸಿದರೆಂದು  ಪ್ರತೀತಿ. ಕುರುಕ್ಷೇತ್ರ ಯುದ್ಧ ಮುಗಿದ ಬಳಿಕ ತಾವು ಮಾಡಿದ ಪಾಪ ಕರ್ಮಗಳನ್ನು ಪರಿಹಾರವನ್ನು ಮಾಡಿಕೊಳ್ಳಲು ಶ್ರೀ ಕೃಷ್ಣ ನಲ್ಲಿ ಪಾಂಡವರು ಕೇಳಿದಾಗ ಶ್ರೀ ಕೃಷ್ಣನು ಕಪ್ಪು ಧ್ವಜ ಮತ್ತು ಕಪ್ಪು ಹಸುವನ್ನು ಪಾಂಡವರಿಗೆ ಕೊಟ್ಟು
ಈ ಹಸು ಮತ್ತು ಬಾವುಟ ಎಲ್ಲಿ ಬಿಳಿ ಬಣ್ಣಕ್ಕೆ ಎಲ್ತಿಲಿ ರುಗುವುದು ಅಲ್ಲಿ ನೀವು ಶಿವಲಿಂಗವನ್ನು ಪ್ರತಿಷ್ಠಾಪಿಸಿ ಎಂದು ಆಜ್ಞೆ ಮಾಡುತ್ತಾನೆ  ಹಾಗೆಯೇ ಪಾಂಡವರು ನಿಷ್ಕಳಂಕ ಕ್ಷೇತ್ರಕ್ಕೆ ಬಂದಾಗ ಹಸು ಮತ್ತು ಧ್ವಜ ಎರಡು ಬಿಳಿ ಬಣ್ಣಕ್ಕೆ ತಿರುಗುತ್ತವೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ ಆದುದರಿಂದಲೇ ಪಾಂಡವರು ಈ ಪಂಚ ಶಿವಲಿಂಗಗಳನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಿದ್ದರು
ಎಂದು ಹೇಳಲಾಗುತ್ತದೆ . ಏನೇ ಇರಲಿ ಸಮುದ್ರದ ಮಧ್ಯೆ ಪಂಚಶಿವಲಿಂಗಗಳನ್ನು ಹೊಂದಿರುವ ಏಕೈಕ ಕ್ಷೇತ್ರವೆಂದರೆ ನಿಷ್ಕಳಂಕ ದೇವಸ್ಥಾನ ಮಾತ್ರ

ಪ್ರದೀಪ್‌, ಚಿನ್ಮಯಿ ಆಸ್ಪತ್ರೆ , ಕುಂದಾಪುರ

 

Categories
ಕರಾವಳಿ ಸುದ್ದಿ

ವೀಡಿಯೋ ಮಾಡಿದವರಿಗೆ ಶಿಕ್ಷೆಯಾಗಲಿ

ಉಡುಪಿ: ಖಾಸಗಿ ವಿಚಾರ ಹೊರಗಡೆ ಹರಿದಾಡಿ ದುರ್ಬಳಕೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು ನಮಗೆ ನಮ್ಮ ವಿದ್ಯಾರ್ಥಿನಿಯರ ರಕ್ಷಣೆ ಮುಖ್ಯವಾಗಿದೆ ಎಂದು ಉಡುಪಿ – ಚಿಕ್ಕಮಗಳೂರು ಸಂಸದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಉಡುಪಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಉಡುಪಿಯಲ್ಲಿ ನಡೆದ ಘಟನೆ ದೇಶದ ಗಮನ ಸೆಳೆದಿದ್ದು ಹಿಜಾಬ್ ಬಳಿಕ ಇದೀಗ ವೀಡಿಯೋ ಬಗ್ಗೆ ಚರ್ಚೆ ಆಗುತ್ತಿದೆ. ಜನಪ್ರತಿನಿಧಿಗಳು ,ಡಿಸಿ ಎಸ್ ಪಿಗೆ ವಿದ್ಯಾರ್ಥಿನಿ ಯರು ಮಾಹಿತಿ ನೀಡಿದ್ದಾರೆ ಲಂಚ್ ಬ್ರೇಕ್ ಸಮಯದಲ್ಲಿ ವಿದ್ಯಾರ್ಥಿಗಳು ಕಾಲೇಜ್ ಕ್ಯಾಂಪಸ್ ಗೆ ಬರುತ್ತಿದ್ದರು. ಎಲ್ಲಾ ಸಿಸಿಟಿವಿ ದೃಶ್ಯ, ಮೊಬೈಲ್ ಗಳೆಲ್ಲವನ್ನು ಎಫ್ ಎಸ್ ಎಲ್ ಗೆ ಕಳುಹಿಸಬೇಕು ಇಲ್ಲಿ ಯಾರನ್ನೂ ಇಲ್ಲಿ ರಕ್ಷಿಸುವ ಪ್ರಶ್ನೆ ಇಲ್ಲ. ಈ ಹಿಂದೆ ಅಲ್ ಖೈದಾ ಉಡುಪಿ ಹಿಜಬ್ ಘಟನೆ ಬಗ್ಗೆ ಮಾತನಾಡಿದೆ ಆದಷ್ಟು ಬೇಗ ಈ ಘಟನೆಯ ತನಿಖೆ ಆಗಬೇಕು ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದರು

ಇಲ್ಲಿ ಪಕ್ಷ ಸರಕಾರ ಯಾವುದು ಎಂಬೂದು ಮುಖ್ಯ ಅಲ್ಲ ಬದಲಾಗಿ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಇದು. ಯಾವುದೇ ಹಾಸ್ಟೆಲ್ ಕಾಲೇಜು ವಸತಿ ಶಾಲೆ ಯಲ್ಲಿ ಯಾರೇ ಹೀಗೆ ಮಾಡಿದ್ರೂ ನನ್ನ ಗಮನಕ್ಕೆ ತನ್ನಿ ನಾನು ನಿಮ್ಮ ಅಕ್ಕನಾಗಿ ವಿನಂತಿ ಮಾಡುತ್ತೇನೆ ಮಾಹಿತಿ ನೀಡಿದವರನ್ನು ಗೌಪ್ಯವಾಗಿ ಇಟ್ಟು ನಿಮ್ಮನ್ನು ರಕ್ಷಣೆ ಮಾಡುತ್ತೇನೆ. ಲವ್ ಜಿಹಾದ್ ಮತಾಂತರ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಕೇಂದ್ರ ಗೃಹ ಸಚಿವರ ಗಮನಕ್ಕೂ ತಂದು ನಾನು ನ್ಯಾಯ ಕೊಡಿಸುತ್ತೇವೆ ಎಂದರು.

ಈ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ ಅಲ್ಲದೆ ರಾಜಕೀಯ ಮಾಡಲು ಸದ್ಯ ಯಾವುದೇ ಚುನಾವಣೆ ಇಲ್ಲ. ಇದು ನಮ್ಮ ವಿದ್ಯಾರ್ಥಿನೀಯರ ಮಾನ ಪ್ರಾಣದ ಪ್ರಶ್ನೆ, ವಿದ್ಯಾರ್ಥಿನಿಗಳನ್ನು ಪ್ರಶ್ನೆ ಮಾಡುವ ಬದಲು ತಾಂತ್ರಿಕ ತನಿಖೆ ಮಾಡುವುದು ಉತ್ತಮ ಎಂದರು.

Categories
ಕರಾವಳಿ ಸುದ್ದಿ

ಮಾದಕ ವಸ್ತು ಮಾರಾಟ ಓರ್ವನ ಬಂಧನ

ಮಂಗಳೂರು : ಮಾದಕ ವಸ್ತು ಎಂಡಿಎಂಎ ಯನ್ನು ಕಾರಿನಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಆರೋಪಿಯನ್ನು ಬೋಳಿಯಾರು ಗ್ರಾಮದ ಆರಿಫ್ (28 ವರ್ಷ) ಎಂದು ಗುರುತಿಸಲಾಗಿದೆ

ಆರೋಪಿ ಆರಿಫ್ ಎಂಬಾತನು ಮುಡಿಪು ಕಂಬಳ ಪದವು ಕೆ ಐ ಡಿ ಬಿ ರಸ್ತೆ ಪರಿಸರದಲ್ಲಿ ಕಾರಿನಲ್ಲಿ ಎಂಡಿಎಂಎ ಮಾದಕ ವಸ್ತುವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ಮಾಡಿ ಆತನನ್ನು ಬಂಧಿಸಿದ್ದಾರೆ ಆರೋಪಿಯಿಂದ 25 ಗ್ರಾಂ ತೂಕದ 1,25,000 ಮೌಲ್ಯದ 25 ಗ್ರಾಂ ತೂಕದ ಮಾದಕ ವಸ್ತು ಹಾಗೂ ಮೊಬೈಲ್ ಫೋನ್ ಮತ್ತು ಡಿಜಿಟಲ್ ತೂಕಮಾಪನವನ್ನು ಮತ್ತು ಮಾರುತಿ ಆಲ್ಟೋ ಕಾರು ವಶಪಡಿಸಿಕೊಳ್ಳಲಾಗಿದ್ದು ಇವುಗಳ ಒಟ್ಟು ಮೌಲ್ಯ 6,35000,500 ಆಗಬಹುದು ಎಂದು ಅಂದಾಜಿಸಲಾಗಿದೆ ಆರೋಪಿ ಆರಿಫ್ ವಿರುದ್ಧ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Categories
ಕರಾವಳಿ ಸುದ್ದಿ

ತನಿಖಾಧಿಕಾರಿಯಾಗಿ ಬೆಳ್ಳಿಯಪ್ಪ ನೇಮಕ

ಉಡುಪಿ : ಉಡುಪಿಯ ನೇತ್ರ ಜ್ಯೋತಿ ಕಾಲೇಜಿನ ವಿಡಿಯೋ ಚಿತ್ರೀಕರಣದ ತನಿಖಾ ಅಧಿಕಾರಿ ಮಂಜುನಾಥ್ ಗೌಡ ಅವರನ್ನು ಬದಲಾಯಿಸಿ ಕುಂದಾಪುರದ ಡಿ ವೈ ಎಸ್ ಪಿ ಬೆಳ್ಳಿಯಪ್ಪ ಅವರನ್ನು ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್‌ ಹಾಕೆ ಮಚ್ಚೀಂದ್ರ ಅವರು ನೇಮಿಸಿದ್ದಾರೆ ಆರಂಭದಿಂದಲೂ ವಿದ್ಯಾರ್ಥಿ ಸಂಘಟನೆಗಳು ಹಾಗೂ ಭಾರತೀಯ ಜನತಾ ಪಾರ್ಟಿಯು ಮಲ್ಪೆ ಇನ್ಸ್ಪೆಕ್ಟರ್ ಮಂಜುನಾಥಗೌಡ ಅವರನ್ನು ತನಿಕಾ ಅಧಿಕಾರಿ ಸ್ಥಾನದಿಂದ ಕೈ ಬಿಟ್ಟು ಬೇರೆಯವರನ್ನು ನೇಮಿಸಬೇಕು ಎಂದು ಒತ್ತಾಯ ಮಾಡಿತ್ತು ಅದರಂತೆ ಕುಂದಾಪುರದ ಡಿ ವೈ ಎಸ್ ಪಿ ಬೆಳ್ಳಿಯಪ್ಪ ಅವರನ್ನು ಹೊಸ ತನಿಖಾಧಿಕಾರಿಯಾಗಿ ಉಡುಪಿಯ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ಅವರು ನೇಮಿಸಿದ್ದಾರೆ

Categories
ಕರಾವಳಿ ಸುದ್ದಿ

ಸಿ ಟಿ ರವಿಗೆ ಕೋಕ್

ಉಡುಪಿ : ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಸಿ ಟಿ ರವಿ ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಹುದ್ದೆ ಕೋಕ್ ನೀಡಲಾಗಿದೆ ಎಂದು ತಿಳಿದುಬಂದಿದ್ದು ರವಿ ಅವರ ಸ್ಥಾನಕ್ಕೆ ಸಂಸದ ಬಂಡಿ ಸಂಜಯ್ ಅವರನ್ನು ನೇಮಕ ಮಾಡಲಾಗಿದೆ

ಬಿಜೆಪಿ ಸರಕಾರದ ಅವಧಿಯಲ್ಲಿ ಸಚಿವ ಸ್ಥಾನದಿಂದ ಅವರನ್ನು  ಕೆಳಗಿಳಿಸಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಬಿಜೆಪಿ ಹೈಕಮಾಂಡ್ ನೀಡಿತ್ತು ಅಲ್ಲಿಂದ ಇಲ್ಲಿಯವರೆಗೆ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು ಇದೀಗ ಆ ಹುದ್ದೆಯಿಂದ ಅವರಿಗೆ ಕೋಕ್ ನೀಡಲಾಗಿದ್ದು ಇದರ ಬೆನ್ನಲ್ಲೇ ಸಿಟಿ ರವಿ ಅವರಿಗೆ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನ ಸಿಗುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ

Categories
ಹೊಂಗಿರಣ

ದೃಢತೆಯ ಶಕ್ತಿ

‘ದುರ್ಬಲರಿಗೆ ಎಂದೂ ದೇವರು ಸಿಕ್ಕುವುದಿಲ್ಲ. ಆದುದರಿಂದ ನೀವೆಂದೂ ದುರ್ಬಲರಾಗಬೇಡಿ. ನೀವು ದೃಢಕಾಯರಾಗಿರಬೇಕು. ನಿಮ್ಮಲ್ಲಿ ಅನಂತ ಶಕ್ತಿ ಇದೆ, ಇಲ್ಲದೆ ಇದ್ದರೆ ನೀವು ಯಾವುದನ್ನಾದರೂ ಹೇಗೆ ಜಯಿಸುತ್ತೀರಿ? ದೇವರ ಹತ್ತಿರ ಹೇಗೆ ಬರುತ್ತೀರಿ?’ ಇದು ಸ್ವಾಮಿ ವಿವೇಕಾನಂದರು ನಮ್ಮನ್ನು ಕೇಳುವ ಪ್ರಶ್ನೆ. ‘ಪ್ರತಿಯೊಬ್ಬರಲ್ಲಿ ಅಂತರ್ಗತವಾಗಿ ಒಂದು ದೈವಿಶಕ್ತಿ ಇದೆ ಮತ್ತು ಅದು ಅವರನ್ನು ದೇವರ ಬಳಿ ಕೊಂಡೊಯ್ಯುವ, ಸಾಕ್ಷಾತ್ಕಾರವನ್ನು ಸಾಧಿಸುವ ಶಕ್ತಿಯನ್ನು ಕೊಡುತ್ತದೆ’ ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ಇಂತಹ ಒಂದು ವಿಶ್ವಾಸ ಅವರಲ್ಲಿ ಇದ್ದುದರಿಂದಲೇ ಅವರು ಪ್ರತಿಯೊಬ್ಬ ವ್ಯಕ್ತಿಯನ್ನು ಪರುಷ-ಸಿಂಹರನ್ನಾಗಿ ಕಾಣುತ್ತಿದ್ದರು. ಸಿಂಹದ ಗಾಂಭೀರ್ಯದಲ್ಲಿ ದೃಢತೆ ಇದೆ. ಉತ್ಸಾಹವಿದೆ. ಆದರೆ ಉದ್ವೇಗವಿಲ್ಲ. ನಿಜಕ್ಕಾದರೆ ಉದ್ವೇಗ ಇಲ್ಲದಿರುವುದೇ ಸಮತ್ವದ ಸೂಚಕ. ಗಾಂಭೀರ್ಯದ ಪ್ರತಿಫಲನ. ನಿರುದ್ವಿಗ್ನಭಾವವೇ ನಮ್ಮಲ್ಲಿ ಸಮತ್ವವನ್ನು ಕಾಪಾಡುವ ಶಕ್ತಿಯನ್ನು ಉಂಟುಮಾಡುತ್ತುದೆ. ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ ಮನಸ್ಸಿನ ಸಂತುಲನವನು ಕಾಯ್ದುಕೊಳ್ಳುವುದು ನಿಜಕ್ಕೂ ಒಂದು ಕಲೆ. ಅದನ್ನು ಕರಗತ ಮಾಡಿಕೊಳ್ಳುವುದರಲ್ಲಿ ಬದುಕಿನ ಆನಂದವಿದೆ. ಆ ಆನಂದದಲ್ಲಿ ದೇವರನ್ನು ಸದಾ ನೆನೆಯುವುದು ಸಾಧ್ಯ. ನಾವು ಎಂದೂ ಮಿತಿ ಮೀರಿದ ಸಂತೋಷವನ್ನೂ ತಾಳಬಾರದು, ಮಿತಿ ಮೀರಿದ ದುಃಖವನ್ನು ಅನುಭವಿಸಬಾರದು. ಒಂದು ಅತಿಯಿಂದ ಇನ್ನೊಂದು ಅತಿಗೆ ಧಾವಿಸುವ ನಮ್ಮ ಸ್ವಭಾವವನ್ನು ನಾವು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಮನಸ್ಸಿನ ಶಾಂತಿ ನಷ್ಟವಾಗದು. ವಿಶಿಷ್ಟಾದ್ವೈತ ಪ್ರತಿಪಾದಕ ಶ್ರೀ ರಾಮಾನುಜಾಚಾರ್ಯರು ಭಕ್ತಿಯೋಗಕ್ಕೆ ಸೂಚಿಸುವ ಸಾಧನಗಳಲ್ಲಿ ಈ ಸಮತ್ವವೂ ಒಂದಾಗಿದೆ. ಕುರುಕ್ಷೇತ್ರದಲ್ಲಿ ಯುದ್ಧ ಮಾಡಲಗದೆ ಮಾನಸಿಕ ತೊಳಲಾಟಕ್ಕೆ ಗುರಿಯಾದ ಅರ್ಜುನನಲ್ಲಿ ಶ್ರೀಕೃಷ್ಣನು ಗೀತೋಪದೇಶದ ಮೂಲಕ ಉಂಟು ಮಾಡಿದ್ದು ಸಮತ್ವದ ಭಾವವೇ ಆಗಿದೆ.