Categories
ಕರಾವಳಿ ಸುದ್ದಿ

ಮನ್ ಕೀ ಬಾತ್ ಕಾರ್ಯಕ್ರಮ

ಉಡುಪಿ : ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ. ಆಯೋಜಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಕುಂದಾಪುರ ಕ್ಷೇತ್ರದ ಶಾಸಕರಾದ ಶ್ರೀ ಎ. ಕಿರಣ್ ಕುಮಾರ್ ಕೊಡ್ಗಿಯವರು ಉಡುಪಿ ವಿಧಾನಸಭಾ ಕ್ಷೇತ್ರದ  ಶಾಸಕರಾದ  ಯಶ್ಪಾಲ್ ಸುವರ್ಣ ಕಾಪು ಕ್ಷೇತ್ರದ ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿಯವರು, ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಶೆಟ್ಟಿ ಕುತ್ಯಾರ್, ಹಾಗೂ ಜಿಲ್ಲಾ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಮನ್ ಕೀ ಬಾತ್ ಕಾರ್ಯಕ್ರಮವನ್ನು ಆಲಿಸಲಾಯಿತು

Categories
ಕರಾವಳಿ ಸುದ್ದಿ

ಅಭಿರಾಮಚಂದ್ರ ಸಿನಿಮಾ ಸಪ್ತಾಹ ‌

ಕುಂದಾಪುರ : ಕೋಟೇಶ್ವರದ ಭಾರತ್ ಸಿನಿಮಾ ಮಂದಿರದಲ್ಲಿ  ಅಭಿರಾಮಚಂದ್ರ ಸಿನೆಮಾದ ಸಪ್ತಾಹ ಕಾರ್ಯಕ್ರಮವನ್ನು ಕುಂದಾಪುರ ಕ್ಷೇತ್ರದ ಶಾಸಕರಾದ ಶ್ರೀ ಎ.ಕಿರಣ್ ಕುಮಾರ್ ಕೊಡ್ಗಿಯವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಕೋಟೇಶ್ವರ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಶ್ರಿಮತಿ ರಾಗಿಣಿ ದೇವಾಡಿಗ ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಕಾಶ್.ಜಿ. ಪೂಜಾರಿ, ಗೋಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುರೇಶ್ ಶೆಟ್ಟಿ, ಗೋಪಾಡಿ, ಕೋಟೇಶ್ವರದ ಪ್ರತಿಷ್ಠಿತ ಯುವ ಮೇರಿಡಿಯನ್ ಸಂಸ್ಥೆಯ ಮಾಲಕರದ ಉದಯ್ ಕುಮಾರ್ ಶೆಟ್ಟಿ ಹಾಗೂ ವಿನಯ್ ಕುಮಾರ್ ಶೆಟ್ಟಿ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ. ಕೆನರಾ ಕಿಡ್ಸ್ ಸುಬ್ರಮಣ್ಯ ಶೆಟ್ಟಿ ಹಾಗೂ ಸಿನಿಮಾ ಸಂಚಾಲಕರು ಉಪಸ್ಥಿತರಿದ್ದರು

Categories
ಕ್ರೀಡೆ

ವಿಶ್ವಕಪ್‌ ಪ್ರಯಾಣ ಮುಗಿಸಿದ ಇಂಗ್ಲೆಂಡ್‌

ಬೆಂಗಳೂರು : ನಿನ್ನೆ ಲಕ್ನೋದ ಏಕಾನ ಮೈದಾನದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ವಿಶ್ವಕಪ್‌ ಪಂದ್ಯದಲ್ಲಿ ರೋಹಿತ್ ಶರ್ಮ ಪಡೆಯ ಅಬ್ಬರಕ್ಕೆ ಆಂಗ್ಲರ ಪಡೆ 100 ರನ್‌ ಗಳ ಹೀನಾಯ ಸೋಲನ್ನು ಅನುಭವಿಸಿತು ಈ ಗೆಲುವಿನೊಂದಿಗೆ ಭಾರತ ತಂಡ ವಿಶ್ವಕಪ್‌ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು ಸತತ ಸೋಲಿನಿಂದ ತತ್ತರಿಸಿರುವ ಇಂಗ್ಲೆಂಡ್‌ ತಂಡ ವಿಶ್ವಕಪ್‌ ಅಂಕಪಟ್ಟಿಯಲ್ಲಿ ತನ್ನ ಕೊನೆಯ ಸ್ಥಾನವನ್ನು ಉಳಿಸಿಕೊಂಡಿದೆ ಬಾರತದ ಎದುರಿನ ಸೋಲಿನೊಂದಿಗೆ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ತಂಡದ ವಿಶ್ವಕಪ್‌ ಪ್ರಯಾಣವೂ ಮುಗಿದಿದೆ ಎಂದೇ ಭಾವಿಸಬಹುದು

Categories
ಕರಾವಳಿ ಸುದ್ದಿ

ಸಿಡಿಲು ಬಡಿದು ಯುವಕ ಸಾವು

ಕುಂದಾಪುರ : ಕೋಟ ಪೊಲೀಸ್‌ ಠಾಣಾ ವ್ಯಾಪ್ತಿಯ ಆವರ್ಸೆ ಸಮೀಪದ ಕಿರಾಡಿ ಎಂಬಲ್ಲಿ ಸಿಡಿಲು ಬಡಿದು ಯುವಕನೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ ಕಿರಾಡಿ ಹಂಚಿನಮನೆ ನಿವಾಸಿಯಾದ ಬಾಬಣ್ಣ ಶೆಟ್ಟಿ ಹಾಗೂ ಬೇಬಿ ಶೇಡ್ತಿ ದಂಪತಿಯ ಪುತ್ರ ಪ್ರಮೋದ್‌ ಶೆಟ್ಟಿ ಮೃತ ಯುವಕ

ಪ್ರಮೋದ್‌ ಶೆಟ್ಟಿ ತನ್ನ ಮನೆಯ ಹೊರಗಡೆ ಮೊಬೈಲ್‌ ನಲ್ಲಿ ಮಾತನಾಡುತ್ತಿರುವಾಗ ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡಿದ್ದು ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯೆ ಮೃತಪಟ್ಟಿದ್ದಾನೆ ಸೌಮ್ಯ ಸ್ವಭಾವನಾದ ಪ್ರಮೋದ ಶೆಟ್ಟಿ ಬ್ರಹ್ಮಾವರದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ

Categories
ಹೊಂಗಿರಣ

ಅಜ್ಞಾನದ ಸಮಸ್ಯೆ

ಹೊರಗಿನ ಪ್ರಕೃತಿ ಹೇಗೋ ಹಾಗೆ ನಮ್ಮ ಒಳ-ಹೊರಗಿನ ಪ್ರಕೃತಿ, ಬಾಹ್ಯ ಜಗತ್ತು ಹೇಗೆ ಕ್ಷಣಕ್ಷಣಕ್ಕೆ ಬದಲಾವಣೆ ಹೊಂದುವುದೋ ಹಾಗೆಯೇ ನಮ್ಮ ಒಳಗೂ ಕ್ಷಣಕ್ಷಣಕ್ಕೆ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಶೈಶವ, ಬಾಲ್ಯ, ಯೌವನ, ಪ್ರೌಢ ಹಾಗೂ ವೃದ್ಧಾಪ್ಯದಲ್ಲಿ ನಮ್ಮ ಬಾಹ್ಯ ಸ್ವರೂಪವು ಪಡೆದುಕೊಳ್ಳುವ ಬದಲಾವಣೆಯನ್ನು ನಾವು ಊಹಿಸಲಾರೆವು. ನಮ್ಮ ದೇಹದ ಸ್ವರೂಪದಲ್ಲಾಗುವ ಬದಲಾವಣೆಗೆ ತಕ್ಕಂತೆ ನಮ್ಮ ಆಂತರಿಕ ಸ್ವರೂಪವು ಬದಲಾಗುತ್ತಲೇ ಹೋಗುತ್ತದೆ. ಆದರೂ ನಾವು ಅಹಂಕಾರವನ್ನು ಬಿಡುವುದಿಲ್ಲ. ನಾನು ನನ್ನದೆಂಬ ಮೋಹ, ಲೋಭ, ಮದ, ಮತ್ಸರಗಳನ್ನು ಬಿಡುವುದಿಲ್ಲ, ನಮ್ಮ ನಮ್ಮ ಅಹಂಕಾರದ ಮೂಲವೇ ನಮ್ಮ ಅಸ್ಥಿತೆಯ ಬಗ್ಗೆ ನಮಗಿರುವ ಪ್ರತ್ಯೇಕತಾ ಭಾವ, ನಮ್ಮ ಜ್ಞಾನ, ತಿಳಿವಳಿಕೆ, ಶೈಕ್ಷಣಿಕ ಪದವಿಗಳು, ಹುದ್ದೆ, ಅಂತಸ್ತು, ಐಶ್ವರ್ಯ, ಕೀರ್ತಿ ಮುಂತಾಗಿ ಎಲ್ಲವೂ ಐಡೆಂಟಿಟಿ(ಅಸ್ಥಿತೆ)ಯ ಚಿಹ್ನೆಗಳೆಂದು ನಾವು ಭಾವಿಸುತ್ತೇವೆ. ಆದರೆ ಅವೆಲ್ಲವೂ ನಮ್ಮ ಅಹಂಕಾರದ ಚಿಹ್ನೆಗಳು. ಇದರ ತೀವ್ರತೆಯಲ್ಲಿ ನಾವು ನಮ್ಮ ನಿಜ ಸ್ವರೂಪವನ್ನು ಮರೆಯುತ್ತೇವೆ. ಈ ಅಹಮಿಕೆಯ ಪ್ರಜ್ಞೆ ದೇವರು ಮತ್ತು ನಮ್ಮ ನಡುವೆ ಕಬ್ಬಿಣದ ಗೋಡೆಯನ್ನು ಕಟ್ಟುತ್ತದೆ. ನಾವು ದೇವರ ಅಂಶವೇ ಆಗಿದ್ದೇವೆ ಎಂಬ ಸತ್ಯವನ್ನು ತಿಳಿಯಲಾರದಷ್ಟು ಅಜ್ಞಾನ ನಮ್ಮನ್ನು ಆವರಿಸಿಕೊಂಡಿರುವುದರಿಂದಲೇ ವ್ಯಕ್ತಿ ವ್ಯಕ್ತಿಗಳನ್ನು ನಾವು ಭಿನ್ನಭಿನ್ನವಾಗಿ ಕಾಣುತ್ತೇವೆ. ಕೆಲವರನ್ನು ಪ್ರೀತಿಸುತ್ತೇವೆ. ಹಲವರನ್ನು ದ್ವೇಷಿಸುತ್ತೇವೆ. ಅಪರಿಚಿತರ ಬಗ್ಗೆ ನಿರ್ಲಕ್ಷ್ಯವನ್ನು ಹೊಂದಿರುತ್ತೇವೆ. ಈ ಸೃಷ್ಟಿಯ ಸಮಗ್ರ ಜೀವಜಾಲದಲ್ಲಿ, ಸಮಸ್ತ ಮನುಜರಲ್ಲಿ ಅಂತರ್ಗತವಾಗಿರುವುದು ದೇವರ ಅಂಶವೆಂಬ ತಿಳಿವಳಿಕೆ ನಮ್ಮಲ್ಲಿ ಇಲ್ಲದಿರುವುದೇ ನಿಜವಾದ ನಮ್ಮ ಅಜ್ಞಾನ, ಈ ಅಜ್ಞಾನವೇ ನಮ್ಮೊಳಗಿರುವ ಪರಮಾತ್ಮನ ಅಂಶವಾದ ಜೀವಾತ್ಮನನ್ನು ಮುಸುಕಿದೆ. ಆ ಮುಸುಕನ್ನು ತೆಗೆಯಬೇಕಾದರೆ ಮೊತ್ತ ಮೊದಲು ನಾವು ನಮ್ಮ ಬಗೆಗಿನ ಅಜ್ಞಾನವನ್ನು ಹೋಗಲಾಡಿಸಬೇಕು

Categories
ಕರಾವಳಿ ಸುದ್ದಿ

ಮುಂಡಾಲು ಯುವ ವೇದಿಕೆ (ರಿ.)

ಪಡುಬಿದ್ರಿ : ಮುಂಡಾಲು ಯುವ ವೇದಿಕೆ (ರಿ.) ಪಡುಬಿದ್ರಿ ಇವರ ವತಿಯಿಂದ ಪಡುಬಿದ್ರಿ ಸುಜಾತ ಆಡಿಟೋರಿಯಂ ನಲ್ಲಿ ಇಂದು ದಿನಾಂಕ 29-10-2023 ರಂದು ಹಮ್ಮಿಕೊಳ್ಳಲಾದ “ಪದಿನಾಜಿ ಕಟ್ಲೆ” ಕಾರ್ಯಕ್ರಮದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ದರ್ಶನ ಪಾತ್ರಿ ಹಾಗೂ ದೈವ ನರ್ತಕರನ್ನು ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ಕಚ್ಚೂರು ಮಾಲ್ತಿದೇವಿ ದೇವಸ್ಥಾನದ ಧರ್ಮದರ್ಶಿಗಳಾದ ಗೋಕುಲ್ ದಾಸ್, ಪಡುಬಿದ್ರಿ ಮುಂಡಾಲು ಯುವ ವೇದಿಕೆ ಗುರ್ಕಾರರಾದ ಪ್ರಸನ್ನ ಕುಮಾರ್ ಪಿ, ತುಳು ಜಾನಪದ ವಿದ್ವಾಂಸರಾದ ಕೆ.ಕೆ ಪೇಜಾವರ, ರತ್ನಾಕರ ಮಧ್ಯಸ್ಥ, ಕುಡ್ಲ ಅಖಿಲ ಭಾರತ ಮುಂಡಾಲು ವೇದಿಕೆ ಗುರ್ಕಾರರಾದ ಪ್ರಶಾಂತ್ ಕಾಟಿಪಳ್ಳ ಉಪಸ್ಥಿತರಿದ್ದರು

Categories
ಕರಾವಳಿ ಸುದ್ದಿ

ಬಸ್ ತಂಗುದಾಣ ಉಧ್ಘಾಟನೆ

ಕಾಪು : ದಿl ವನಿತಮ್ಮ ಮತ್ತು ದಿl ಶಿವರಾಮಯ್ಯ ಹಾಗೂ ದಿl ಜ್ಯೋತಿ ಅವರ ಸ್ಮರಣಾರ್ಥವಾಗಿ ಅವರ ಮನೆಯವರು ಕೊಡುಗೆಯಾಗಿ ನಿರ್ಮಿಸಿರುವ “ಮಟ್ಟು ದುಗ್ಗುಪಾಡಿ ಶ್ರೀ ಗುರುವಾದಿರಾಜ ಬಸ್ ತಂಗುದಾಣವನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿ ಶುಭಹಾರೈಸಿದರು

ಈ ಸಂದರ್ಭದಲ್ಲಿ ಕೋಟೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಮೀಳಾ ಜತ್ತನ್ನ, ಉಪಾಧ್ಯಕ್ಷರಾದ ಯೋಗೀಶ್ ವಿ ಸುವರ್ಣ, ಗ್ರಾಮ ಪಂಚಾಯತ್ ಸದಸ್ಯರಾದ ದಯಾನಂದ ವಿ ಬಂಗೇರ, ವಕೀಲರಾದ ವೈ.ಟಿ ರಾಘವೇಂದ್ರ, ದುಗ್ಗುಪಾಡಿ ಫ್ರೆಂಡ್ಸ್ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್, ಶ್ರೀ ಗುರುವಾದಿರಾಜ ಸೇವಾ ಸಂಘದ ಅಧ್ಯಕ್ಷರಾದ ಕೆ. ಲಕ್ಷ್ಮೀನಾರಾಯಣ ರಾವ್ ಅಗಳಿ ಹಾಗೂ ವೆಂಕಟರಮಣ ರಾವ್ ಹಾಗೂ ಸಹೋದರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು

Categories
ಕರಾವಳಿ ಸುದ್ದಿ

ಉಚಿತ ಗ್ಯಾಸ್ ಕನೆಕ್ಷನ್

ಕಾಪು : ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಕನಸಿನ

ಯೋಜನೆಯಾದ “ಉಜ್ವಲ ಯೋಜನೆ” ಅಡಿಯಲ್ಲಿ

ಕಳತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಶ್ವಿತಾ ಅವರಿಗೆ

ಉಚಿತ ಗ್ಯಾಸ್ ಕನೆಕ್ಷನ್ ಮಂಜೂರಾಗಿದ್ದು ದಿನಾಂಕ 29-10-2023 ರಂದು

ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಫಲಾನುಭವಿಗೆ ವಿತರಿಸಿದರು

ಈ ಸಂದರ್ಭದಲ್ಲಿ ಕಿಶೋರ್ ಪೂಜಾರಿ ಮೂಳೂರು ಉಪಸ್ಥಿತರಿದ್ದರು

Categories
Uncategorized

ಶಿಕ್ಷಣದೊಂದಿಗೆ ಕೌಶಲ್ಯ ವಿದ್ಯಾರ್ಥಿಗಳಿಗೆ ಅಗತ್ಯ

ಇಂದಿನ ಸ್ಪರ್ಧಾತ್ಮಕ ಜೀವನಕ್ಕೆ ಅಗತ್ಯವಿರುವ ಜ್ಞಾನ, ಕೌಶಲ್ಯ ಮತ್ತು ಮನೋಭಾವಗಳನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಕಲಿತುಕೊಳ್ಳಬೇಕು. ಕಂಪ್ಯೂಟರ್ ಮತ್ತು ಅಂತರ್ಜಾಲಗಳಲ್ಲಾದ ಅಪಾರ ಬದಲಾವಣೆ ವ್ಯವಹಾರ ಕ್ಷೇತ್ರದಲ್ಲಿ ಸ್ಥಿತ್ಯಂತರಗಳನ್ನು ಸೃಷ್ಟಿಸಿದೆ. ವಾಣಿಜ್ಯ ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಅಪಾರವಾದ ಉದ್ಯೋಗಾವಕಾಶಗಳಿದ್ದು ಅಗತ್ಯ ಕೌಶಲ್ಯಗಳನ್ನು ರೂಢಿಸಿಕೊಂಡಲ್ಲಿ ಭವಿಷ್ಯ ಉಜ್ವಲವಾಗುತ್ತಿದೆ ಎಂದು ಬಸ್ರೂರು ಶ್ರೀ ಶಾರದಾ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ ರಾಧಾಕೃಷ್ಣ ಶೆಟ್ಟಿ ಹೇಳಿದರು. ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ  ಕೋಟೇಶ್ವರದ ವಾಣಿಜ್ಯ ಮತ್ತು ನಿರ್ವಹಣಾ ಸಂಘವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಶ್ರೀ ರಾಮರಾಯ ಆಚಾರ್ಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ವಾಣಿಜ್ಯ ಶಿಕ್ಷಣದ ಮಹತ್ವ ವಿವರಿಸಿದರು. ಐಕ್ಯೂಎಸಿ ಸಂಚಾಲಕ ಶ್ರೀ ನಾಗರಾಜ ಯು ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗ ಮುಖ್ಯಸ್ಥ ಡಾ. ಶೇಖರ್ ಬಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಜಾಹ್ನವಿ ಮತ್ತು ತಂಡ ಪ್ರಾರ್ಥಿಸಿ, ಸಹಾಯಕ ಪ್ರಾಧ್ಯಾಪಕ ಡಾ. ವೆಂಕಟರಾಮ ಭಟ್ ವಂದಿಸಿದರು.ಉಪನ್ಯಾಸಕಿ ವಸುಧಾ ಕಾರ್ಯಕ್ರಮ ನಿರ್ವಹಿಸಿದರು.

Categories
ಕ್ರೀಡೆ

ಕೆಪಿಎಸ್ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಕೋಟೇಶ್ವರ  : ಕೆಪಿಎಸ್ ಪ್ರೌಢಶಾಲೆ ಸರಕಾರಿ ಪದವಿಪೂರ್ವ ಕಾಲೇಜು ಕೋಟೇಶ್ವರ ಇಲ್ಲಿನ ನಾಲ್ಕು ವಿದ್ಯಾರ್ಥಿಗಳು ಐದು ವಿಭಾಗಗಳಲ್ಲಿ ಶಾಲಾ ಶಿಕ್ಷಣ ಇಲಾಖೆ ನಡೆಸಿದ ಕ್ರೀಡಾಕೂಟದಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಕುಂದಾಪುರ ಇಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಸಾಕೆತ್ ಡಿಸ್ಕಸ್ ಥ್ರೋ ನಲ್ಲಿ ಪ್ರಥಮ ಹಾಗೆ ರಂಜನ್ ಪೈ 80ಮೀ ಹರ್ಡಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದು ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ರಂಜನ್ ಪೈ 80 ಮೀಟರ್ ಹರ್ಡಲ್ಸ್ ನಲ್ಲಿ ಜಿಲ್ಲಾ ದಾಖಲೆ ಮುರಿದು ಮುನಿಯಾಲು ದಿ ರಾಮಕೃಷ್ಣ ಹೆಗಡೆ ಇವರ ಸ್ಮರಣಾರ್ಥದ ನಗದು ಪುರಸ್ಕಾರಕ್ಕೆ ಪಾತ್ರನಾಗಿರುತ್ತಾನೆ ಅಲ್ಲದೇ 14ರ ವಯೋಮಾನದ 200 ಮೀಟರ್ ಓಟದಲ್ಲಿ ಪ್ರಥಮ್ ದ್ವಿತೀಯ ಸ್ಥಾನ ಪಡೆಯುವ ಮೂಲಕ ಎರಡು ಚಿನ್ನ ಒಂದು ಬೆಳ್ಳಿ ಪದಕದೊಂದಿಗೆ ಉತ್ತಮ ಸಾಧನೆ ಮಾಡಿದ್ದು ವಿದ್ಯಾರ್ಥಿಗಳ ಕ್ರೀಡಾ ಭವಿಷ್ಯಕ್ಕೆ ಉಪ ಪ್ರಾಂಶುಪಾಲರಾದ ಚಂದ್ರಶೇಖರ್ ಶೆಟ್ಟಿ ಅಭಿನಂದಿಸಿದ್ದು ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ್ ಹೊಳ್ಳ ಮತ್ತು ಉದಯ ಮಡಿವಾಳ ಎಂ ಮಾರ್ಗದರ್ಶನ ಮಾಡಿರುತ್ತಾರೆ