Categories
ಕರಾವಳಿ ಸುದ್ದಿ

ಹನುಮ ಧ್ವಜ ಹಾರಿಸುವವರೆಗೂ ಹೋರಾಟ

ಬೆಂಗಳೂರು: ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ಹಾರಿಸುವವರೆಗೂ ಬಿಜೆಪಿ ಹೋರಾಟ ನಡೆಸಲಿದೆ. ಕಾಂಗ್ರೆಸ್ ಸರ್ಕಾರ ಇನ್ನಷ್ಟು ಕೆದಕಿದರೆ ಇದು ದೇಶವ್ಯಾಪಿ ಹೋರಾಟವಾಗಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಎಚ್ಚರಿಕೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ನೆಹರು ಕಾಲದಿಂದಲೂ ರಾಮನ ಮೇಲೆ ದ್ವೇಷವಿದೆ. ಆದರೀಗ ಹನುಮನ ಬಗ್ಗೆ ದ್ವೇಷ ಶುರುವಾಗಿದೆ. ಕೆರಗೋಡಿನಲ್ಲಿ 20-30 ವರ್ಷ ಗಳಿಂದ ಹನುಮ ಧ್ವಜ ಹಾರಿಸಲಾಗುತ್ತಿದೆ. ಯಾವುದೇ ಮಸೀದಿಯ ಬಳಿ ಧ್ವಜ ಹಾರಿಸಿಲ್ಲ ಪ್ರತಿ ಮನೆಯವರಿಂದ ದೇಣಿಗೆ ಸಂಗ್ರಹಿಸಿ 6 ಲಕ್ಚ ರೂಪಾಯಿ ಖರ್ಚು ಮಾಡಿ 108 ಅಡಿ ಧ್ವಜಸ್ತಂಭ ನಿರ್ಮಿಸಲಾಗಿದೆ ಇಡೀ ವರ್ಷ ಅಲ್ಲಿ ಹನುಮ ಧ್ವಜ ಹಾರಿಸಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆ, ಗಣ ರಾಜ್ಯೋತ್ಸವ ದಿನದಂದು ರಾಷ್ಟ್ರಧ್ವಜ ಹಾರಿಸಲಾಗುತ್ತದೆ. ಹನುಮನ ನಾಡಿನಲ್ಲಿ ಹನುಮ ಧ್ವಜ ಹಾರಿಸಲು ಸರ್ಕಾರ ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ಮರ್ಯಾದೆ ಇದ್ದರೆ ಅವರ ಅನುದಾನದಿಂದ ಕಂಬ ನಿರ್ಮಿಸಿ ಧ್ವಜ ಹಾರಿಸಬೇಕಿತ್ತು. ಹನುಮನನ್ನು ಹೇಗೆ ವಿರೋಧ ಮಾಡಬೇಕೆಂದು ಚಿಂತಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರವೆಂದರೇನೆ ಶಕುನಿ ಸರ್ಕಾರ, ಹನುಮ ಧ್ವಜವನ್ನು ತೆಗೆಸಲು ಸರ್ಕಾರ ರಾಷ್ಟ್ರಧ್ವಜವನ್ನು ಬಳಕೆ ಮಾಡಿದೆ. ಮೊದಲು ಯಾವ ‘ಧ್ವಜವಿತ್ತೋ  ಅದೇ ಧ್ವಜವನ್ನು ಅಲ್ಲಿ ಹಾರಿಸಬೇಕು ಎಂದು ಒತ್ತಾಯಿಸಿದರು

Categories
ಧಾರ್ಮಿಕ

ಯಡಿಯೂರಪ್ಪನವರ ನಿವಾಸಕ್ಕೆ ಶ್ರೀಗಳು

ಬೆಂಗಳೂರು : ಬಿ ಎಸ್‌ ಯಡಿಯೂರಪ್ಪನವರ ನಿವಾಸಕ್ಕೆ ನಿನ್ನೆ ಮಂಗಳವಾರ ಶ್ರೀಶೈಲ ಜಗದ್ಗುರುಗಳಾದ ಪರಮಪೂಜ್ಯ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹಾಗೂ ಶ್ರೀ ಕಾಶಿ ಪೀಠದ ಜಗದ್ಗುರುಗಳಾದ ಪರಮಪೂಜ್ಯ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದ ಶ್ರೀಗಳು ಆಗಮಿಸಿದ್ದರು.

ಯಡಿಯೂರಪ್ಪ ಹಾಗೂ ಬಿ ವೈ ವಿಜಯೇಂದ್ರ ದಂಪತಿಗಳು ಶ್ರೀಗಳವರ ಆಶೀರ್ವಾದವನ್ನು ಪಡೆದರು

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5125

ಶೋಭಕೃತ್‌ ಸ೦ವತ್ಸರ

ಉತ್ತರಾಯಣ

ಹೇಮಂತ ಋತು

ಪೌಷ ಮಾಸ

ಕೃಷ್ಣ : ಪಕ್ಷ

ಹಸ್ತ : ನಕ್ಷತ್ರ

ಪಂಚಮಿ : ತಿಥಿ

31.01.2024

ಬುಧವಾರ

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಹೊಂಗಿರಣ

ಬಂಧ ಮುಕ್ತಿ

ಸತ್ತ ಬಳಿಕ ಸ್ವರ್ಗವನ್ನು ಪಡೆಯಲು ಪುಣ್ಯವನ್ನು ಸಂಪಾದಿಸಬೇಕು ಎಂಬ ಉದ್ದೇಶವನ್ನು ನಾವು ಬಾಳಿನಲ್ಲಿ ಇಟ್ಟುಕೊಳ್ಳುತ್ತೇವೆ. ಸ್ವರ್ಗದ ಕುರಿತಾದ ನಮ್ಮ ಪರಿಕಲ್ಪನೆ ಏನು ಎಂಬ ಪ್ರಶ್ನೆಗೆ ನಮ್ಮಲ್ಲಿ ಸರಿಯಾದ ಉತ್ತರವಿಲ್ಲ. ಒಟ್ಟಾರೆಯಾಗಿ ಅದು ಅತ್ಯಂತ ವೈಭವೋಪೇತವಾದದ್ದು; ಸುಖಭೋಗಗಳಿಂದ ಕೂಡಿದ್ದು; ಜರಾ ಮರಣರಹಿತವಾದ್ದು ಎಂಬುದಾಗಿ ತೆರೆದುಕೊಳ್ಳುವ ನಮ್ಮದೇ ಕಲ್ಪನೆಯ ಸ್ವರ್ಗ ಪ್ರಾಯಶಃ ಪುರಾಣದಲ್ಲಿ ಬರುವ ಸ್ವರ್ಗಕ್ಕಿಂತಲೂ ಸಾವಿರಪಟ್ಟು ಉತ್ತಮವಾಗಿದೆ! ಸೂಕ್ಷ್ಮವಾಗಿ ಹೇಳಬೇಕೆಂದರೆ ಸುಖ ಲೋಲುಪತೆಯೇ ಬದುಕಿನ ಉದ್ದೇಶವೆಂಬುದು ನಮ್ಮ ಸಿದ್ಧಾಂತವಾಗಿದೆ. ಅದಕ್ಕಾಗಿ ಸತ್ತ ಬಳಿಕವೂ ಅದು ‘ಸ್ವರ್ಗ’ದಲ್ಲಿ ದೊರಕಬೇಕೆಂಬ ಆಸೆ ನಮ್ಮದು. ಆದರೆ ‘ಸ್ವರ್ಗವೆಂಬುದು ನಮ್ಮ ಕಾಮನೆಗಳಿಂದ ಉದಿಸಿದ ಒಂದು ಮೂಢನಂಬಿಕೆ’ ಎಂಬ ಎಚ್ಚರವನ್ನು ವಿವೇಕವಾಣಿ ನೀಡುತ್ತದೆ. ನಮ್ಮಲ್ಲಿರುವ ಆಸೆಗಳು ಅಗಣಿತ. ನಮ್ಮ ಎಲ್ಲ ಆಸೆಗಳನ್ನು ಈಡೇರಿಸಲೇಬೇಕೆಂಬ ಸಂಕಲ್ಪದಲ್ಲಿ ನಾವು ಬದುಕುತ್ತಿದ್ದೇವೆ. ಆದರೆ ಒಂದು ಆಸೆ ಈಡೇರಿದೊಡನೆಯೇ ಆದರ ಸ್ಥಾನವನ್ನು ತುಂಬಲು ಸಾವಿರ ಆಸೆಗಳು ಜನುಮಿಸಿರುತ್ತವೆ ಎಂಬುದು ಅನುಭವಕ್ಕೆ ಬಂದರೂ ಅದನ್ನು ಅಲಕ್ಷಿಸುವಷ್ಟು ಮೂಢರು ನಾವು! ಸ್ವಾಮಿ ವಿವೇಕಾನಂದರು ಹೇಳುವಂತೆ ‘ಬಯಕೆಯೇ ಬಂಧನ. ಅದು ಅವನತಿಗೆ ಮೂಲ, ಬಯಕೆ ಎಂಬ ಬಂಧನದಿAದ ಪಾರಾಗುವುದೇ ಮುಕ್ತಿ’ ನಾವು ನೋಡುವ, ತಿಳಿಯುವ, ಪಡೆಯಲು ಬಯಸುವ ಎಲ್ಲದರಲ್ಲೂ ದೇವರನ್ನಲ್ಲದೆ ಬೇರೆ ಏನನ್ನೂ ಕಾಣಬಾರದು. ಏಕೆಂದರೆ ದೇವರನ್ನು ಮರೆತರೆ ನಾವು ಪಾಪವನ್ನಲ್ಲದೆ ಮತ್ತೇನನ್ನೂ ಕಾಣಲಾರೆವು. ನಾವು ನೋಡುವ ವಸ್ತುವಿನ ಮೇಲೆ ಭ್ರಮೆಯ ಮುಸುಕು ಆವರಿಸಿದಾಗ ನಮಗಲ್ಲಿ ಪಾಪವೇ ಕಾಣುವುದು. ಆದುದರಿಂದ ಭ್ರಮೆಗಳನ್ನು ಕಳೆದುಕೊಳ್ಳುವುದೇ ಮುಕ್ತಿ ದೇವರನ್ನು ಕಾಣಲು ಪ್ರಯತ್ನಿಸುವುದೇ ಅದಕ್ಕಿರುವ ಮಾರ್ಗ.

Categories
ಕರಾವಳಿ ಸುದ್ದಿ

‘ನೆನೆದವರ ಮನೆಯಲ್ಲಿ ಭಜನೆ’

ಉಡುಪಿ : ಶ್ರೀ ರಾಮ ಭಜನಾ ಮಂಡಳಿ ಭಜನೆಕಟ್ಟೆ, ಕೊಂಡಾಡಿ ಇದರ ಸುವರ್ಣ ಮಹೋತ್ಸವದ ಅಂಗವಾಗಿ ‘ನೆನೆದವರ ಮನೆಯಲ್ಲಿ ಭಜನೆ‘ ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ಕೇಮಾರು ಮಠಾಧೀಶರಾದ ಶ್ರೀ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿಯವರು 2023 ರ ಎಪ್ರಿಲ್‌ 2ರಂದು ಚಾಲನೆ ನೀಡಿದ ‘ನೆನೆದವರ ಮನೆಯಲ್ಲಿ ಭಜನೆ‘ ಕಾರ್ಯಕ್ರಮವು ಮನೆಮಾತಾಗಿದ್ದು ಮನೆ ಮನೆಗಳಲ್ಲಿ ಭಕ್ತಿ-ಭಾವದಿಂದ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.

ನವ ವಿಧ ಭಕ್ತಿಗಳಲ್ಲಿ ಭಜನೆಗೆ ಅತ್ಯಂತ ಹೆಚ್ಚಿನ ಮಹತ್ವವಿದ್ದು, ದೇವರನ್ನು ಒಲಿಸಿ ಕೊಳ್ಳುವ ಏಕೈಕ ಸುಲಭ ಮಾರ್ಗ ಭಜನೆ ಇಂದು ಎಲ್ಲೆಡೆಯೂ ನಡೆಯುತ್ತಿದೆ.ಇಂತಹ ನೆಮ್ಮದಿ, ಏಕಾಗ್ರತೆಯ ಜೊತೆಗೆ ದೇವರನ್ನು ಸಂತ್ರಪ್ತಿಪಡಿಸುವ ಭಜನೆಯನ್ನು ಸಮಾಜದಲ್ಲಿ ಇನ್ನಷ್ಟು ಪ್ರಚಲಿತಗೊಳಿಸುವ ಸದುದ್ದೇಶದಿಂದ ‘ನೆನೆದವರ ಮನೆಯಲ್ಲಿ ಭಜನೆ‘ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಮದುವೆಯ ಮೆಹಂದಿ, ಹುಟ್ಟು ಹಬ್ಬ, ವೈವಾಹಿಕ ವರ್ಧoತಿ ಆಚರಣೆ ಮುಂತಾದ ಶುಭ ಸಮಾರಂಭಗಳಲ್ಲಿ ಅವರವರ ಇಚ್ಛಾನುಸಾರ ಮನೆ ಮನೆಗಳಲ್ಲಿ ನಡೆಯುತ್ತಿರುವ ವಿಶೇಷ ಭಜನಾ ಸೇವೆಯು ಜ.28ರಂದು ಆನಂದ ಶೆಟ್ಟಿ ಕೊಂಡಾಡಿ ಇವರ ಮನೆಯಲ್ಲಿ 60ನೆೇ ದಿನವನ್ನು ಪೂರೈಸಿದೆ.

ಭಜನಾ ಸೇವೆ ನಡೆಸುವ ಪ್ರತೀ ಮನೆಯವರಿಗೆ ದಾಸವರೇಣ್ಯ ಪುರಂದರ ದಾಸರ ಕೃತಿಯ ಭಜನಾ ಪುಸ್ತಕವನ್ನು ನೀಡಿ ಶ್ರೀ ರಾಮ ಭಜನಾ ಮಂಡಳಿಯ ಜೊತೆಗೆ ಭಜನಾ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವ ಜೊತೆಗೆ ದೀರ್ಘಾಯುಷ್ಯ, ಆರೋಗ್ಯ ಭಾಗ್ಯ, ಸಕಲ ಇಷ್ಟಾರ್ಥ ಸಿದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದು ವಾಡಿಕೆಯಾಗಿದೆ.

ಎ.14ರಿಂದ ಎ.18ರ ವರೆಗೆ ಶ್ರೀ ರಾಮ ನವಮಿಯ ಸುಸಂದರ್ಭದಲ್ಲಿ ನಡೆಯಲಿರುವ ‘ಅಖಂಡ ಭಜನಾ ಮಂಗಲೋತ್ಸವ‘ ಮತ್ತು ‘ಸುವರ್ಣ ಮಹೋತ್ಸವ‘ದಲ್ಲಿ ಸಮಸ್ತ ಭಗವಧ್ಭಕ್ತರು ಹಾಗೂ ಭಜನಾ ಮಂಡಳಿಗಳ ಸದಸ್ಯರು ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕಾಗಿ ಶ್ರೀ ರಾಮ ಭಜನಾ ಮಂಡಳಿ ಹಾಗೂ ಸುವರ್ಣ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ

Categories
ಕರಾವಳಿ ಸುದ್ದಿ

ಕಾರ್ಯದರ್ಶಿಯಾಗಿ ರತ್ವಿಕ್ ರತ್ನಾಕರ್ ಆಯ್ಕೆ

ಕುಂದಾಪುರ : 50ನೇ ವರ್ಷದ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಜೆ ಸಿ ಐ ಕುಂದಾಪುರದ ಯುವ ಜೇಸಿ ಪ್ರಧಾನ ಕಾರ್ಯದರ್ಶಿಯಾಗಿ ರತ್ವಿಕ್ ರತ್ನಾಕರ್ ಆಯ್ಕೆಯಾಗಿದ್ದು, ಡ್ರಾಮಾ ಜೂನಿಯರ್ ರಿಯಾಲಿಟಿ ಶೋ , ನಾಟಕ, ನೃತ್ಯ, ಸಂಗೀತ, ಹಾಗೂ ಹಲವಾರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಅನುಭವ ಹೊಂದಿರುವ ಬಹುಮುಖ ಪ್ರತಿಭೆ, ಕುಂದಾಪುರ ಜೆ ಸಿ ಪೂರ್ವ ಅಧ್ಯಕ್ಷರಾದ ಜೆ ಸಿ ರತ್ನಾಕರ್ ಪುಷ್ಪಲತಾ ದಂಪತಿ ಅವರ ಪುತ್ರನಾಗಿದ್ದು ಕುಂದಾಪುರದ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದು ಸುವರ್ಣ ವರ್ಷದ ಯುವ ಜೆ ಸಿ ಪ್ರಧಾನ ಕಾರ್ಯದರ್ಶಿ ಯಾಗಿ ಆಯ್ಕೆ ಮಾಡಲಾಗಿದೆ ಎಂದು ಜೆ ಸಿ ಐ ಕುಂದಾಪುರ ಪ್ರಕಟಣೆಯಲ್ಲಿ ತಿಳಿಸಿದೆ

Categories
ಧಾರ್ಮಿಕ

ಆಮಂತ್ರಣ ಪತ್ರಿಕೆ ಬಿಡುಗಡೆ

ಕುಂದಾಪುರ : ನಗರದ  ಚಿಕ್ಕಮ್ಮನ ಸಾಲು ರಸ್ತೆಯ ಶ್ರೀ ಬಗಳಾಂಬಾ ತಾಯಿ ದೇವಸ್ಥಾನದಲ್ಲಿ ಫೆ. 20 ರಿಂದ ಫೆ.23ರ ವರೆಗೆ ನಡೆಯುವ ಪುನರ್ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ದೇಗುಲದ ಸಾನಿಧ್ಯದಲ್ಲಿ ನಡೆಯಿತು. ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಾರ್ಕೂರು ಶ್ರೀ ಮಹಾಸಂಸ್ಥಾನದ ಆಡಳಿತಾಧಿಕಾರಿಯಾದ ಸಟ್ವಾಡಿ ಅನಿಲ್ ಕುಮಾರ್ ಶೆಟ್ಟಿ ಬಿಡುಗಡೆಗೊಳಿಸಿದರು.

ಮುಖ್ಯ ಅತಿಥಿಗಳಾಗಿ ಕುಂದಾಪುರ ಶ್ರೀ ಮೈಲಾರೇಶ್ವರ ದೇವಸ್ಥಾನದ ವ್ಯವಸ್ಪನ ಸಮಿತಿಯ ಅಧ್ಯಕ್ಷರಾದ  ಕೆ. ರಮೇಶ್ ಬಿಲ್ಲವ, ನಾಗಬೊಬ್ಬರ್ಯ ಹ್ಯಾಗುಳಿ ಹಾಗೂ ಪರಿವಾರ ದೈವಸ್ಥಾನದ ಮಾಜಿ ಅಧ್ಯಕ್ಷರಾದ ಅಣ್ಣಪ್ಪ ಕೆ.ವಿ. ಶ್ರೀ ಬಗಳಾಂಬಾ ತಾಯಿ ದೇವಸ್ಥಾನದ ಧರ್ಮದರ್ಶಿಗಳಾದ ಗಣಪತಿ ಸುವರ್ಣ ಮತ್ತು ಜಲಜ ಸುವರ್ಣ ಭಾಗವಹಿಸಿದ್ದರು.

ಉತ್ಸವ ಸಮಿತಿಯ ಗೌರವಾಧ್ಯಕ್ಷ ಸೀತಾರಾಮ ಹೇರಿಕುದ್ರು, ಅಧ್ಯಕ್ಷ ಪ್ರಕಾಶ್ ಸದಸ್ಯರಾದ ಚಂದ್ರಶೇಖ‌ರ್, ಶಿವಪ್ರಸಾದ್ ಹೆಗ್ಡೆ ಕೃಷ್ಣಮೂರ್ತಿ, ರಮೇಶ್ ಪೂಜಾರಿ ಮೇಲ್ ಹಿತ್ತು ವಿಷ್ಣು ಕೆ.ಬಿ., ಸಂತೋಷ್, ಮಿಥುನ್ ಸುವರ್ಣ, ಮಾಲತಿ, ವೀಣಾ ಪ್ರಕಾಶ್, ಪ್ರೀತಿ ಸುವರ್ಣ, ಶಾರದಾ ವಿಜಯ್ ಮೊದಲಾದವರು ಉಪಸ್ಥಿತರಿದ್ದರು.

ರಶ್ಮಿರಾಜ್ ನಿರೂಪಿಸಿದ ಕಾರ್ಯಕ್ರಮದಲ್ಲಿ  ಶ್ರೀಧರ್ ಸುವರ್ಣ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು

Categories
ಕರಾವಳಿ ಸುದ್ದಿ

ಕುತ್ಯಾರು ನವೀನ್ ಶೆಟ್ಟಿ ಬಿಜೆಪಿ ಜಿಲ್ಲಾ ಕಛೇರಿಗೆ

ಉಡುಪಿ : ಮುಂಬರಲಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಸಂಚಾಲಕರಾಗಿ ನೇಮಕಗೊಂಡಿರುವ ಕುತ್ಯಾರು ನವೀನ್ ಶೆಟ್ಟಿಯವರು ಬಿಜೆಪಿ ಜಿಲ್ಲಾ ಕಛೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು ಹೂಗುಚ್ಚ ನೀಡಿ ಸ್ವಾಗತಿಸಿದರು.

ಸಂಘದ ಸ್ವಯಂಸೇವಕರಾಗಿ, ಭಾರತೀಯ ಜನತಾ ಪಾರ್ಟಿಯಲ್ಲಿ ಕಳೆದ 30 ವರ್ಷಗಳಿಂದ ಸಕ್ರಿಯ ಕಾರ್ಯಕರ್ತರಾಗಿರುವ ಕುತ್ಯಾರು ನವೀನ್ ಶೆಟ್ಟಿಯವರು ಬಿಜೆಪಿ ಕಾಪು ಮಂಡಲ ಯುವ ಮೋರ್ಚಾ ಅಧ್ಯಕ್ಷರಾಗಿ 2 ಬಾರಿ, ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ 2 ಬಾರಿ ಮತ್ತು ಕಾಪು ಕ್ಷೇತ್ರಾಧ್ಯಕ್ಷರಾಗಿ 1 ಅವಧಿಗೆ ಸೇವೆ ಸಲ್ಲಿಸಿ, ಪ್ರಸಕ್ತ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸತತ ಮೂರು ಅವಧಿಗೆ 11 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ವಿವಿಧ ಸ್ತರದ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿ ಅಮೀನ್, ದ.ಕ. ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮನೋಹರ್ ಎಸ್. ಕಲ್ಮಾಡಿ, ಸದಾನಂದ ಉಪ್ಪಿನಕುದ್ರು, ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಸಹ ವಕ್ತಾರ ಗಿರೀಶ್ ಎಮ್. ಅಂಚನ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕರ್, ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್, ನಗರ ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ, ದಿನಕರ ಪೂಜಾರಿ, ರಾಘವೇಂದ್ರ ಕುತ್ಪಾಡಿ ಸಹಿತ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು

Categories
ಕರಾವಳಿ ಸುದ್ದಿ

ಖಾರ್ಲ್ಯಾಂಡ್ ನಿರ್ಮಾಣ ಕಾಮಗಾರಿ

ಉದ್ಯಾವರ : ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿತ್ರೋಡಿ ಭಾಗದಲ್ಲಿ ನದಿಗೆ ಖಾರ್ಲ್ಯಾಂಡ್ ನಿರ್ಮಾಣಕ್ಕೆ ರೂ. 6 ಕೋಟಿ ಅನುದಾನ ಮಂಜೂರಾಗಿ ಕಾಮಗಾರಿ ಪ್ರಗತಿಯಲ್ಲಿದ್ದು,  ದಿನಾಂಕ 29-01-2024 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಇಲಾಖಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು

ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲತಿ ಸಾಲ್ಯಾನ್, ಉಪಾಧ್ಯಕ್ಷರಾದ ರಾಜೇಶ್ ಕುಂದರ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರರಾದ ಅರುಣ್ ಭಂಡಾರಿ, ಸಹಾಯಕ ಅಭಿಯಂತರರಾದ ಮಮತಾ ಹಾಗೂ ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು

Categories
ಕರಾವಳಿ ಸುದ್ದಿ

ಶಾಸಕರಿಂದ ಗುದ್ದಲಿ ಪೂಜೆ

ಹೆಜಮಾಡಿ : ಸರಕಾರಿ ಪದವಿ ಪೂರ್ವ ಕಾಲೇಜು, ಹೆಜಮಾಡಿ ಇಲ್ಲಿಗೆ ಮಂಜೂರಾದ “ವಿವೇಕ ಕೊಠಡಿ” ಇದರ ಗುದ್ದಲಿ ಪೂಜೆಯನ್ನು  ದಿನಾಂಕ 29-01-2024 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಹೆಜಮಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮೋಹನ್ ಸುವರ್ಣ, ಗ್ರಾಮ ಪಂಚಾಯತ್ ಸದಸ್ಯರಾದ ಸರಿನಾ, ಕಾಲೇಜು ಪ್ರಾಂಶುಪಾಲರಾದ ಈಶ್ವರ್, ಪೌಢಶಾಲಾ ಮುಖ್ಯ ಶಿಕ್ಷಕರಾದ ಸಂಪಾವತಿ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು ಸರ್ವ ಸದಸ್ಯರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವ ಸದಸ್ಯರು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು