Categories
ಕರಾವಳಿ ಸುದ್ದಿ

ಅಧಿಕಾರಿಗಳೊಂದಿಗೆ ಸಭೆ

ಕುಂದಾಪುರ : ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ವಿವಿಧ ಅಧಿಕಾರಿಗಳೊಂದಿಗೆ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಮತ್ತು ಬೇಸಿಗೆಯಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಕುಂದಾಪುರ ತಾಲೊಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ  ಶಾಸಕರಾದ ಶ್ರೀ ಎ.ಕಿರಣ್ ಕುಮಾರ್ ಕೊಡ್ಗಿಯವರು ಅಧಿಕಾರಿಗಳೊಂದಿಗೆ ಚರ್ಚಿಸಿದರು ಈ ಸಂದರ್ಭದಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿಂಜಾರ, ಕುಂದಾಪುರದ ಇ.ಓ.ಪ್ರಶಾಂತ್ ರಾವ್, ಬ್ರಹ್ಮವರದ ಇ.ಓ ಇಬ್ರಾಹಿಂಪುರ್, ಹಾಗೂ ಎಲ್ಲಾ ಬ್ಯಾಂಕಿನ ಮ್ಯಾನೇಜರ್ ಮತ್ತು  ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Categories
ಕರಾವಳಿ ಸುದ್ದಿ

ಭಾರತ ಸಂವಿಧಾನ ಜಾಗೃತಿಯ ಜಾಥ

ಕುಂದಾಪುರ : ತೆಕ್ಕಟ್ಟೆ ಗ್ರಾಮ ಪಂಚಾಯಿತಿನ ವ್ಯಾಪ್ತಿಯಲ್ಲಿ ಭಾರತ ಸಂವಿಧಾನ ಜಾಗೃತಿಯ ಜಾಥದ ಉದ್ಘಾಟಿನೆಯನ್ನುಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎ.ಕಿರಣ್ ಕುಮಾರ್ ಕೊಡ್ಗಿಯವರು ನೆರವೇರಿಸಿದರು ಅವರು ಮಾತನಾಡಿ ಪ್ರತಿ ವರ್ಷ ನವೆಂಬರ್ 26ರಂದು ಭಾರತ ಸಂವಿಧಾನ ದಿನವನ್ನು ಆಚರಿಸುತ್ತಿದ್ದು  ಭಾರತದ ಸಂವಿಧಾನವನ್ನು ಅಂಗೀಕರಿಸುವುದನ್ನು ಗೌರವಿಸಲು ಮೀಸಲಾಗಿರುವ ದಿನವಾಗಿದೆ, ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ಆಳವಾಗಿ ಬೇರೂರಿರುವ ಭಾರತಕ್ಕೆ ಸಂವಿಧಾನದ ದಿನವು ಅಪಾರ ಮಹತ್ವದಾಗಿದೆ  ಎಂದರು. ಈ ಸಂದರ್ಭದಲ್ಲಿ ಕುಂದಾಪುರ ಅಸಿಸ್ಟೆಂಟ್ ಕಮಿಷನರ್ ಶ್ರೀಮತಿ ರಶ್ಮಿ, ತಹಶೀಲ್ದಾರ್‌  ಶ್ರೀಮತಿ ಶೋಭಾ ಲಕ್ಷ್ಮಿ,ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾದ ಮಲ್ಯಾಡಿ ಶಿವರಾಂ ಶೆಟ್ಟಿ, ತೆಕ್ಕಟ್ಟೆ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ  ಶೋಭನಾ ಶೆಟ್ಟಿ ಪಿಡಿಒ ಸುನಿಲ್ ಹಾಗೂ ಗ್ರಾಮ ಪಂಚಾಯಿತಿನ ಸದಸ್ಯರು, ಇಲಾಖೆಯ ಪ್ರಮುಖರು ಉಪಸ್ಥಿತರಿದ್ದರು

Categories
ಕರಾವಳಿ ಸುದ್ದಿ

ಪಂಚಗಂಗಾ ರೈಲಿಗೆ ಹೆಚ್ಚುವರಿ ಬೋಗಿ

ಬೈಂದೂರು :ಬೈಂದೂರಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕ ಗಂಟಿಹೊಳೆ ಅವರು ಇದೀಗ ಬೈಂದೂರು-ಬೆಂಗಳೂರಿನ ನಡುವೆ ದಿನನಿತ್ಯ ಓಡಾಡುವ ಜನರ ಬಗ್ಗೆ ಕಾಳಜಿ ವಹಿಸಿ ಕ್ಷೇತ್ರದ ಸಂಸದರಾದ ಬಿ.ವೈ. ರಾಘವೇಂದ್ರ ಅವರಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ.

ಸಂಸದರಿಗೆ ನೀಡಲಾದ ಪತ್ರದ ಒಕ್ಕಣೆಯಲ್ಲಿ “ಪಂಚಗಂಗಾ ರೈಲಿಗೆ ಹೆಚ್ಚುವರಿ ಬೋಗಿ ಅಳವಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಮುತುವರ್ಜಿಯಿಂದ ಬೈಂದೂರು ರೈಲು ನಿಲ್ದಾಣದಲ್ಲಿ ಸಾಕಷ್ಟು ರೈಲುಗಳು ನಿಲುಗಡೆಯಾಗುತ್ತಿದೆ. ಬೈಂದೂರು ಭಾಗದ ಸಾವಿರಾರು ಜನರು ವ್ಯಾಪಾರ, ವಿದ್ಯಾಭ್ಯಾಸ ಹಾಗೂ ಉದ್ಯೋಗ ನಿಮಿತ್ತ ರಾಜಧಾನಿ ಬೆಂಗಳೂರನ್ನು ಅವಲಂಬಿಸಿದ್ದಾರೆ. ಅವರುಗಳೆಲ್ಲಾ ತುರ್ತು ಪರಿಸ್ಥಿತಿ, ಶುಭ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ಹಾಗೂ ಸ್ವಕ್ಷೇತ್ರ ಭೇಟಿಗೆ ಪ್ರತಿನಿತ್ಯ ಬೆಂಗಳೂರಿನಿಂದ ಬೈಂದೂರಿಗೆ ಹಾಗೂ ಬೈಂದೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿರುತ್ತಾರೆ.

ಪ್ರಸ್ತುತ ಬೆಂಗಳೂರು-ಕಾರವಾರ ರೈಲು ನಂ. 16595/16596 ರೈಲು 14 ಬೋಗಿಗಳೊಂದಿಗೆ ಪ್ರತಿನಿತ್ಯ ಸಂಚರಿಸುತ್ತಿದ್ದು ಎಲ್ಲಾ ಬೋಗಿಗಳು ತುಂಬಿರುತ್ತವೆ. ಅಸಂಘಟಿತ ಕಾರ್ಮಿಕರು, ಆರೋಗ್ಯ ಸಮಸ್ಯೆಯಿರುವವರು ಹಾಗೂ ಹಿರಿಯ ನಾಗರೀಕರು ಅಗ್ಗದ ದರದಲ್ಲಿ ದೊರೆಯುವ ರೈಲು ಸೇವೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಆದ್ದರಿಂದ ಪ್ರಸ್ತುತ 14 ಬೋಗಿಗಳೊಂದಿಗೆ ಸಂಚರಿಸುವ ಪಂಚಗಂಗಾ ಎಕ್ಸ್‌ಪ್ರೆಸ್‌ ರೈಲು ಕರಾವಳಿಯ ರೈಲ್ವೆ ನಿಲ್ದಾಣಗಳನ್ನು ತಲುಪುವ ಸಮಯವನ್ನು ಬದಲಾಯಿಸದೆ ಹೆಚ್ಚುವರಿ 8 ಬೋಗಿಗಳನ್ನು ಸೇರ್ಪಡೆಗೊಳಿಸಿ 22 ಬೋಗಿಗಳನ್ನಾಗಿಸಿದರೆ ಕರಾವಳಿಯ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ.

ಆದ್ದರಿಂದ ಪಂಚಗಂಗಾ ಎಕ್ಸ್‌ಪ್ರೆಸ್‌ ರೈಲು ನಂ. 16595/16596 ರೈಲನ್ನು 22 ಬೋಗಿಗಳಿಗೆ ಮೇಲ್ದರ್ಜೆಗೇರಿಸಲು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿ ಮಂಜೂರು ಮಾಡಿಸಬೇಕಾಗಿ ತಮ್ಮಲ್ಲಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.” ಎಂದು ಬರೆದು ಸಂಸದರಲ್ಲಿ ಗಂಟಿಹೊಳೆ ಮನವಿ ಮಾಡಿಕೊಂಡಿದ್ದಾರೆ

Categories
ಕರಾವಳಿ ಸುದ್ದಿ

ಶ್ರೀಪಾದರಿಂದ ಆಶೀರ್ವಾದ

ಉಡುಪಿ : ವರಾಹ ರೂಪಂ ಹಾಡಿನ

ಖ್ಯಾತ ಗಾಯಕ ಸಾಯಿ ವಿಘ್ನೇಶ್ ರವರು

ತಮ್ಮ ವಿವಾಹ ಆಮಂತ್ರಣ ಪತ್ರಿಕೆಯನ್ನು ಸಲ್ಲಿಸಿ

ಪರ್ಯಾಯ ಶ್ರೀಪಾದರಿಂದ ಆಶೀರ್ವಾದ ಪಡೆದರು

Categories
ಕರಾವಳಿ ಸುದ್ದಿ

ರಾಮರಕ್ಷಾ ಸ್ತೋತ್ರ ಪಠಣ

ಕುಂದಾಪುರ : ಅಯೋಧ್ಯೆ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ದಿನ ಸೀತಾರಾಮಚಂದ್ರ ದೇವಸ್ಥಾನದಲ್ಲಿ ರಾಮನಾಮ ಸಂಕೀರ್ತನೆ ರಾಮರಕ್ಷಾ ಸ್ತೋತ್ರ ಪಠಣ ರಾಮ ತಾರಕ ಮಂತ್ರ ಜಪ ಪಂಚಾಮೃತ ಅಭಿಷೇಕ ಶ್ರೀ ರಾಮ ತಾರಕ ಮಂತ್ರ ಹೋಮ ನವಕಲಶಾಭಿಷೇಕ ಮಹಾಪೂಜೆ ನಿರಂತರ ಭಜನೆ ರಂಗ ಪೂಜೆ ಅನ್ನ ಸಂತರ್ಪಣೆ ದೀಪ ಪ್ರಜ್ವಲನ ಕಾರ್ಯಕ್ರಮವನ್ನು ನಡೆಸಲಾಯಿತು. ಪೂಜಾ ವಿಧಿ ವಿಧಾನಗಳಲ್ಲಿ ರಾಮ ಕ್ಷತ್ರಿಯ ಸಂಘದ ಅಧ್ಯಕ್ಷ ಡಿಕೆ ಪ್ರಭಾಕರ್ ಪತ್ನಿ ಲಕ್ಷ್ಮೀ ಡಿಕೆ ಪ್ರಭಾಕರ್ ಮತ್ತು ಸದಸ್ಯರು ಪಾಲ್ಗೊಂಡರು. ಆಡಳಿತ ಮಂಡಳಿ ಯುವಕ ಮಂಡಳಿ ಮತ್ತು ಮಹಿಳಾ ಮಂಡಳಿಯ ಸದಸ್ಯರು ಆಗಮಿಸಿದ ಸಾವಿರಾರು ಭಕ್ತಾದಿಗಳಿಗೆ ಪ್ರಸಾದ ವಿತರಣೆಯಲ್ಲಿ ನೆರವಾದರು. ಕಾರ್ಯದರ್ಶಿ ಶಂಕರ್ ಹಾಡಿಮನೆ ಮತ್ತು ಕೋಶಾಧಿಕಾರಿ ಸರೋಜಾ ವಿಷ್ಣುಮೂರ್ತಿ ಕಾರ್ಯಕ್ರಮ ನಿರೂಪಿಸಿದರು

Categories
ಕರಾವಳಿ ಸುದ್ದಿ

ಟಿಪ್ಪರ್ ಡಿಕ್ಕಿ : ಶಿಕ್ಷಕಿ ಸಾವು

ಪುತ್ತೂರು : ಬೈಕ್ ಹಾಗೂ ಟಿಪ್ಪರ್ ನಡುವೆ ಢಿಕ್ಕಿ ಸಂಭವಿಸಿ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಸಹ ಸವಾರೆ ಶಿಕ್ಷಕಿ ಧಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ಪೂತ್ತೂರು ತಾಲೋಕಿನ ಮಾಣಿ ಮೈಸೂರು ರಸ್ತೆಯ ಕಬಕ ಸಮೀಪದ ಪೊಳ್ಯ ಎಂಬಲ್ಲಿ ನಡೆದಿದೆ

ಬೈಕ್ ನ ಹಿಂಬದಿ ಸವಾರೆ ಮಾಣಿ ಖಾಸಗಿ ಶಾಲಾ ಶಿಕ್ಷಕಿ ಅನಿತಾ 35 ವರ್ಷ ಎಂದು ಗುರುತಿಸಲಾಗಿದೆ ಬೈಕ್ ಸವಾರರಾಗಿದ್ದ ಇಡ್ಕಿದು ಗ್ರಾಮದ ಮಿತ್ತೂರು ಮದಕ ನಿವಾಸಿ ಅನಿತಾ ಅವರ ಪತಿ ಸುರೇಶ್ ಕುಲಾಲ್ ಹಾಗೂ ಜೊತೆಗಿದ್ದ ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ

 

Categories
ಕರಾವಳಿ ಸುದ್ದಿ

ಮೃತದೇಹ ಪತ್ತೆ

ಉಡುಪಿ : ಕೋಡಿಬೆಂಗ್ರೆಯ ಡೆಲ್ಟಾ ಬೀಚ್‌ ನಲ್ಲಿ ಎರಡು ದಿನಗಳ ಹಿಂದೆ ಸಮುದ್ರಪಾಲಾಗಿದ್ದ ದಿಲ್ಲಿ ಮೂಲದ ಬೆಂಗಳೂರಿನ ಬ್ಯಾಂಕ್ ಉದ್ಯೋಗಿ ನಿತಿನ್ (35) ಅವರ ಮೃತದೇಹ ಸೋಮವಾರ ಪತ್ತೆಯಾಗಿದೆ. ಜ.26ರಂದು ತನ್ನಿಬ್ಬರು ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಉಡುಪಿಗೆ ಬಂದಿದ್ದ ನಿತಿನ್, ಜ.27ರ ಸಂಜೆ 3.30ಕ್ಕೆ ಡೆಲ್ಟಾ ಬೀಚ್‌ನಲ್ಲಿ ನೀರಿಗೆ ಇಳಿದಿದ್ದರು. ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದರು. ಎರಡು ದಿನಗಳಿಂದ ಅವರಿಗಾಗಿ ಹುಡುಕಾಟ ಮಾಡಲಾಗಿತ್ತು. ನಾಪತ್ತೆಯಾಗಿರುವ ಬಗ್ಗೆ ಮೀನುಗಾರಿಕಾ ಬೋಟ್‌ ಗಳಿಗೆ ತಿಳಿಸಿದ್ದು, ಸುಮಾರು 12 ಮಾರು ದೂರದಲ್ಲಿ ಸಮುದ್ರದಲ್ಲಿ ಮೃತದೇಹ ತೇಲಾಡುತ್ತಿರುವ ಬಗ್ಗೆ ಬೋಟಿನವರು ಮಾಹಿತಿ ನೀಡಿದ್ದರು.

ಮುಳುಗು ತಜ್ಞ ಈಶ್ವರ ಮಲ್ಪೆ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ಮೃತದೇಹವನ್ನು ತೀರಕ್ಕೆ ತಂದಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಮೃತ ನಿತಿನ್ ಅವರ ಪತ್ನಿ, ಮಕ್ಕಳು ಹಾಗೂ ಮನೆಯವರು ಮಲ್ಲೆಗೆ ಆಗಮಿಸಿದ್ದರು. ಮಲ್ಪೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ

Categories
ಕರಾವಳಿ ಸುದ್ದಿ

ಸರ್ಕಾರ ರಾಜಕೀಯವಾಗಿ ಭಸ್ಮವಾಗಲಿ

ಮಂಡ್ಯ : ಕಾಂಗ್ರೆಸ್‌ಗೆ ಭೂತ, ಪ್ರೇತ ಮೆಟ್ಟಿಕೊಂಡಿದೆ. ಅದು ಅಂತಿಂಥಾ ದೆವ್ವ ಅಲ್ಲ. ಟಿಪ್ಪುಸುಲ್ತಾನ್‌ ದೆವ್ವ ಮೆಟ್ಟಿಕೊಂಡಿದೆ, ಸಿದ್ದರಾಮಯ್ಯ ಅವರು ತನ್ನ  ರಾಜಕೀಯ ಅವಸಾನಕ್ಕಾಗಿ ಹನುಮ ಧ್ವಜ ತೆಗೆದಿದ್ದಾರೆ. ಕೆರಗೋಡು ಗ್ರಾಮದಲ್ಲಿ ಮತ್ತೆ ಹನುಮ ಧ್ವಜ ಹಾರಾಡಬೇಕು. ಇಲ್ಲದಿದ್ದರೆ ಈ ಊರಿಗೆ ಕಾಲಿಡಲು ಸಾಧ್ಯವಾಗದ ಪರಿಸ್ಥಿತಿ ಬರುತ್ತದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಎಚ್ಚರಿಸಿದರು. ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಕೆರಗೋಡಿನಿಂದ ಪಾದಯಾತ್ರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಧ್ವಜ ತೆಗೆದ ಸರ್ಕಾರ ರಾಜಕೀಯವಾಗಿ ಭಸ್ಮವಾಗಬೇಕು. ಹನುಮನನ್ನು ಕೆಣಕಿ ಯಾರಾದರೂ ಉಳಿದಿದ್ದಾರಾ ? ಅದೇ ರೀತಿ ಈ ಕಾಂಗ್ರೆಸ್ ಸರ್ಕಾರವೂ ಹೆಚ್ಚು ದಿನ ಉಳಿಯುವುದಿಲ್ಲ. ಇದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28 ಸೀಟು ಗೆಲ್ಲುತ್ತದೆ ಎಂಬುದರ ಮುನ್ಸೂಚನೆ ಎಂದು ಭವಿಷ್ಯ ನುಡಿದರು.

Categories
ಕರಾವಳಿ ಸುದ್ದಿ

19 ಲಕ್ಷ ಭಕ್ತರಿಂದ ದರ್ಶನ

ಅಯೋಧ್ಯೆ: ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಅಯೋಧ್ಯೆ ರಾಮ ಮಂದಿರಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದ್ದು, 6 ದಿನದಲ್ಲಿ 19 ಲಕ್ಷ ಭಕ್ತರು ಬಾಲ ರಾಮನ ದರ್ಶನ ಪಡೆದಿದ್ದಾರೆ ಎಂದು ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ತಿಳಿಸಿದೆ. ಮಂಗಳವಾರದಿಂದ (ಜ.23ರಿಂದ) ಆರಂಭವಾದ ಸಾರ್ವಜನಿಕ ದರ್ಶನದಲ್ಲಿ ಮೊದಲ ದಿನ ಬರೋಬ್ಬರಿ 5 ಲಕ್ಷ ಭಕ್ತರು ದರ್ಶನ ಪಡೆದಿದ್ದರು. ಇದರ ಮುಂದುವ ರಿದ ಭಾಗವಾಗಿ ಬುಧವಾರದಿಂದ ಭಾನು ವಾರದವರೆಗೆ 13.75 ಲಕ್ಷ ಭಕ್ತರು ಸ್ವಾಮಿ ದರ್ಶನ ಪಡೆದಿದ್ದಾರೆ. ಈಗ ಒಟ್ಟು 18.75 ಲಕ್ಷ ಭಕ್ತರು ಆಗಮಿಸಿ ಬಾಲ ರಾಮನ ದರ್ಶನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ದಿನ 5 ಲಕ್ಷ ಭಕ್ತರು ಏಕಾಏಕಿ ಹರಿದು ಬಂದಿದ್ದರಿಂದ ದರ್ಶನಕ್ಕೆ ಸಮಸ್ಯೆ ಆಗಿತ್ತು. ಆದರೆ ನಂತರ ಭದ್ರತೆಯನ್ನು ಹೆಚ್ಚಿಸಿ, ರಾಮನ ಸರಾಗ ದರ್ಶನಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ನಿತ್ಯ ಸರಾಸರಿ 3 ಲಕ್ಷ ಭಕ್ತರು ಭೇಟಿ ನೀಡುತ್ತಿದ್ದಾರೆ.

Categories
ಕರಾವಳಿ ಸುದ್ದಿ

ಕಾರ್ಯಕರ್ತರಿಂದಾಗಿ ನಾವು ಬೆಳೆದಿದ್ದೇವೆ

ಬೀದರ್‌ : ಮಾಜಿ ಸಂಸದ ದಿ.ರಾಮಚಂದ್ರ ವೀರಪ್ಪನಂಥವರು ಐದು ಬಾರಿ ಸಂಸದರಾಗಿ ಬೀದರ್‌ನಲ್ಲಿ ಪಕ್ಷಕ್ಕೆ ಭದ್ರ ಬುನಾದಿ ಹಾಕಿದ್ದಾರೆ ಎಂಬುದನ್ನು ಯಾರೂ ಮರೆಯಬಾರದು. ಆದರೆ ಇಲ್ಲಿನ ಕೆಲಮುಖಂಡರಿಗೆ ತಾವು ಗೆದ್ದ ಮೇಲೆಯೇ ಬಿಜೆಪಿ ಹುಟ್ಟಿದೆ, ತಮ್ಮಿಂದಲೇ ಬಿಜೆಪಿ ಎಂದು ಅನಿಸಿರಬಹುದು. ಪಕ್ಷದ ಕಾರ್ಯಕರ್ತರು ನಮ್ಮನ್ನೆಲ್ಲ ಬೆಳೆಸಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ ಹೇಳಿದರು.

ನಗರದ ಗಣೇಶ ಮೈದಾನದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಸೋಮವಾರ ಮಾತನಾಡಿ ವೇದಿಕೆ ಮೇಲೆ ಕುಳಿತಿರುವ ಮುಖಂಡರು ಕಾರ್ಯಕರ್ತರ ಬೆಲೆ ಏನೆಂಬುದನ್ನು ಮರೆತಿದ್ದಾರೆ.ಮುಖಂಡರೆಲ್ಲ ಕಾರ್ಯಕರ್ತರಿಂದಲೇ ಬೆಳೆದಿದ್ದೇವೆ. ನಮ್ಮನ್ನೆಲ್ಲ ಕಾರ್ಯಕರ್ತರು ಗೌರವ ಕೊಟ್ಟು ವೇದಿಕೆ ಮೇಲೆ ಕೂರಿಸಿದ್ದಾರೆ ಎಂಬುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು