Categories
ಕರಾವಳಿ ಸುದ್ದಿ

ಆಣೆ ಪ್ರಮಾಣ ಗಂಟೆ ಹೊಡೆಯಲು ಸಿದ್ದ

ಶಿವಮೊಗ್ಗ :  ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಮತ್ತವರ ಬೆಂಬಲಿಗರು ನನ್ನನ್ನು ಆಶೀರ್ವದಿಸಿದ ಮಠಾಧೀಶರಿಗೆ ಬೆದರಿಕೆ ಹಾಕಿದ್ದಾರೆ ಎಂಬುದು ಸತ್ಯ ಎಂದು ಮಾಜಿ ಸಚಿವ ಈಶ್ವರಪ್ಪ ತಿಳಿಸಿದ್ದಾರೆ.ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

ಮಠಾಧೀಶರಿಗೆ ಬೆದರಿಕೆ ಹಾಕಿದ್ದೇನೆ ಎಂಬುದು ಸುಳ್ಳು. ಈ ಬಗ್ಗೆ ಈಶ್ವರಪ್ಪ ಅವರು ಚಂದ್ರಗುತ್ತಿಗೆ ಬಂದು ಆಣೆ-ಪ್ರಮಾಣ ಮಾಡಲಿ ಎಂಬ ಬಿ.ವೈ. ರಾಘವೇಂದ್ರ ಆರೋಪಕ್ಕೆ ಪ್ರತಿಕ್ರಿಯಿಸಿ, ನನ್ನ ಜೀವನದಲ್ಲಿ ಇಂತಹ ಆಣೆ ಪ್ರಮಾಣ ಮಾಡಿಲ್ಲ. ಇದರಲ್ಲಿ ನಂಬಿಕೆಯೂ ನನಗಿಲ್ಲ. ಆದರೆ ನಾನು ಸುಳ್ಳು ಹೇಳುತ್ತಿದ್ದೇನೆ ಎಂಬ ಭಾವ ಬರಬಾರದು ಎಂಬ ಕಾರಣಕ್ಕೆ ಅವರ ಆಹ್ವಾನಕ್ಕೆ ನಾನು ಸಿದ್ದ ಎಂದರು. ಚಂದ್ರಗುತ್ತಿ ಅಥವಾ ಅಯೋಧ್ಯೆಯೇ ಆಗಲಿ, ನಾನು ಬಂದು ಪ್ರಮಾಣ ಮಾಡಲು, ಗಂಟೆ ಹೊಡೆಯಲು ಸಿದ್ದ. ಆದರೆ, ರಾಘವೇಂದ್ರ ಅಥವಾ ಅವರ ಬೆಂಬಲಿಗರು ಸಾಧು ಸಂತರಿಗೆ, ನನ್ನ ಬೆಂಬಲಿಸಿದ ಹೆಣ್ಣುಮಕ್ಕಳಿಗೆ ಕಣ್ಣೀರು ಹಾಕಿಸಿ ನೋವು ಕೊಟ್ಟಿಲ್ಲ ಎಂದು ಪ್ರಮಾಣ ಮಾಡಬೇಕು. ನನ್ನ ಮಗ ಕಾಂತೇಶ್ ಗೆ ಹಾವೇರಿಯಿಂದ ಟಿಕೆಟ್ ಕೊಡಿಸಿ ಗೆಲ್ಲಿಸುವುದಾಗಿ ಹೇಳಿಲ್ಲ ಎಂದು ಪ್ರಮಾಣ ಮಾಡಲಿ. ಸುಳ್ಳು ಹೇಳಿದ್ದನ್ನು ಒಪ್ಪಿಕೊಳ್ಳಲಿ ಎಂದು ಈಶ್ವರಪ್ಪ ಹೇಳಿದರು. .

Categories
ಕರಾವಳಿ ಸುದ್ದಿ

ತೇಜಸ್ವಿನಿ ಗೌಡ ಕಾಂಗ್ರೇಸ್‌ ಸೇರ್ಪಡೆ

ನವದೆಹಲಿ : ಮಾಜಿ ಶಾಸಕಿ ತೇಜಸ್ವಿನಿ ಗೌಡ ಅವರು ದೆಹಲಿಯಲ್ಲಿ ಶನಿವಾರ ಜೈರಾಂ ರಮೇಶ್ ಸಮ್ಮುಖ ದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಬಿಜೆಪಿಗೆ ಪ್ರಜಾಸತ್ತಾತ್ಮಕ, ಸ್ಥಳೀಯ ನಾಯಕತ್ವ, ‘ಮಾಸ್‌ ಲೀಡರ್‌ಶಿಪ್‌ನಲ್ಲಿ ನಂಬಿಕೆ ಇಲ್ಲ. ಕೇವಲ ಮೋದಿಯವರ ಮಾಂತ್ರಿಕ ಶಕ್ತಿಯ ಮೇಲೆ ಮಾತ್ರ ನಂಬಿಕೆಯಿದೆ. ದೇಶಕ್ಕಿಂತ ಮೋದಿ ‘ಮಾಂತ್ರಿಕ ಶಕ್ತಿ ದೊಡ್ಡದು ಎನ್ನುವ ಭ್ರಮೆಯಲ್ಲಿ ಬಿಜೆಪಿ ತೇಲುತ್ತಿದೆ ಎಂದು ಟೀಕಿಸಿದರು.

ಪ್ರತಾಪ್‌ಗೆ ಟಿಕೆಟ್ ನೀಡದಿದ್ದರೆ ಮೈಸೂರಿನಿಂದ ನನಗೆ ಟಿಕೆಟ್ ಕೊಡಿ ಎಂದಿದ್ದೆ. ಬೆಂಗಳೂರು ಉತ್ತರದಿಂದಲಾದರೂ ಟಿಕೆಟ್ ಕೇಳಿದ್ದೆ, ಕೊಡಲಿಲ್ಲ ಬಿಜೆಪಿಯಲ್ಲಿ ಒಕ್ಕಲಿಗ ನಾಯಕರಿಗೆ ತಾಕತ್ತು ಇದ್ದಿದ್ದರೆ ಜೆಡಿಎಸ್ ಜೊತೆ ಹೋಗುವ ಅನಿವಾರ್ಯತೆ ಏಕೆ ಬರುತ್ತಿತ್ತು?. ಆದರೆ, ಒಕ್ಕಲಿಗರ ಹಿತ ಕಾಪಾಡುವಲ್ಲಿ ಡಿಕೆಶಿ ಸಮರ್ಥರಾಗಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ. ಸುರೇಶ್ ಅವರನ್ನು ನಾವು ಗೆಲ್ಲಿಸಲೇಬೇಕು. ಅವರ ಪರ ಪ್ರಚಾರ ಮಾಡುತ್ತೇನೆ ಎಂದರು

Categories
ಕರಾವಳಿ ಸುದ್ದಿ

ನನ್ನದು ಗರ್ವ ಅಲ್ಲ ಸ್ವಾಭಿಮಾನ

ಬೆಂಗಳೂರು : “ನನ್ನದು ಗರ್ವವೂ ಅಲ್ಲ, ಅಹಂಕಾರವೂ ಅಲ್ಲ. ಆದರೆ, ಕನ್ನಡಿಗರ ರಕ್ತದಲ್ಲಿರುವ ಸ್ವಾಭಿಮಾನ, ಕನ್ನಡ-ಕನ್ನಡಿಗ-ಕರ್ನಾಟಕ ರಕ್ಷಣೆಗಾಗಿ ತಲೆ ಎತ್ತಿ, ಎದೆಯುಬ್ಬಿಸಿ ಪ್ರಶ್ನಿಸುವ ಮತ್ತು ಹೋರಾಟ ನಡೆಸುವ ಸ್ವಾಭಿಮಾನ ನನ್ನದು ಎನ್ನುವುದನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಗಮನಕ್ಕೆ ತರಬಯಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮೈಸೂರು ಮತ್ತು ಚಾಮರಾಜನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಸಿದ್ದರಾಮಯ್ಯ ಅವರ ಗರ್ವಭಂಗ ಮಾಡಬೇಕು ಎಂಬ ಎಚ್.ಡಿ. ದೇವೇಗೌಡ ಅವರ ಹೇಳಿಕೆಗೆ ಪತ್ರಿಕಾ ಹೇಳಿಕೆ ಮೂಲಕ ಖಾರವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ವೈಯಕ್ತಿಯ ಅಥವಾ ರಾಜಕೀಯ ಲಾಭಕ್ಕಾಗಿ ಯಾರ ಜತೆಗೂ ನಾನು ರಾಜಿ ಮಾಡಿಕೊಳ್ಳುವುದಿಲ್ಲ, ಅದರಲ್ಲೂ ಕರ್ನಾಟಕದ ಹಿತಾಸಕ್ತಿಯ ವಿರೋಧಿಗಳ ಜತೆಯಲ್ಲಿ ದೇವೇಗೌಡ ಅವರಂತೆ ಹೊಂದಾಣಿಕೆ ಮಾಡಿಕೊಳ್ಳಲಾರೆ. ಅಂತಹ ಪರಿಸ್ಥಿತಿ ಬಂದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ತಿಳಿಸಿದ್ದಾರೆ

Categories
ಕರಾವಳಿ ಸುದ್ದಿ

ಬಿಜೆಪಿ ಬಿಕ್ಕಟ್ಟು ಶಮನಕ್ಕೆ ಅಮಿತ್ ಶಾ ಸಭೆ

ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯಕ್ಕೆ ಆಗಮಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಕ್ಕಟ್ಟು ಉಂಟಾಗಿರುವ ಕ್ಷೇತ್ರಗಳ ಕುರಿತಂತೆ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ. ಸೋಮವಾರ ರಾತ್ರಿಯೇ ಬೆಂಗಳೂರು ನಗರಕ್ಕೆ ಬರಲಿರುವ ಅವರು ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ತಂಗಲಿದ್ದಾರೆ. ಮಂಗಳವಾರ ಬೆಳಗ್ಗೆ ಅರಮನೆ ಮೈದಾನದಲ್ಲಿ ಜರುಗುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಮಧ್ಯಾಹ್ನ 3.00 ಗಂಟೆಗೆ ಬಿಕ್ಕಟ್ಟು ಉಂಟಾಗಿರುವ ಲೋಕಸಭಾ ಕ್ಷೇತ್ರಗಳ ಕುರಿತಂತೆ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ

Categories
ಕರಾವಳಿ ಸುದ್ದಿ

ಸುಮಲತಾ ನಡೆ ಏ.3ಕ್ಕೆ

ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂಸದೆ ಸುಮಲತಾ ಅಂಬ ರೀಷ್ ತಮ್ಮ ರಾಜಕೀಯ ಭವಿಷ್ಯದ ಕುರಿತು ಏ.3ಕ್ಕೆ ಅಂತಿಮ ತೀರ್ಮಾನೆ ಮಾಡಲಿದ್ದಾರೆ. ಇದೇ ವೇಳೆ ಮಂಡ್ಯದ ಜನತೆಯನ್ನುದ್ದೇಶಿಸಿ ಮಾತನಾಡುವಾಗ ಅವರು ಭಾವುಕರಾದ ಪ್ರಸಂಗವೂ ನಡೆಯಿತು. ಮಂಡ್ಯದಿಂದ ಎನ್ ಡಿಎ ಅಭ್ಯರ್ಥಿಯಾಗಿ ಜೆಡಿಎಸ್‌ ರಾಜ್ಯಾಧ್ಯಕ್ಷ .. ಕುಮಾರಸ್ವಾಮಿ ಅವರಿಗೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಸುಮಲತಾ ಶನಿವಾರ ನಗರದ ಜೆ.ಪಿ.ನಗರದಲ್ಲಿನ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದರು.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5125

ಶೋಭಕೃತ್‌ ಸ೦ವತ್ಸರ

ಉತ್ತರಾಯಣ

ಶಿಶಿರ ಋತು

ಪಾಲ್ಗುಣ ಮಾಸ

ಕೃಷ್ಣ ಪಕ್ಷ

ಜ್ಯೆಷ್ಠೆ : ನಕ್ಷತ್ರ

ಷಷ್ಠಿ : ತಿಥಿ

31.03.2024

ರವಿವಾರ

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಕರಾವಳಿ ಸುದ್ದಿ

ಕರಾಟೆ ಬೇಸಿಗೆ ಶಿಬಿರ

ವಂಡ್ಸೆ : ಅಕಾಡೆಮಿ ಆಫ್ ಮಾರ್ಷಲ್ ಆರ್ಟ್ಸ್ (ರಿ) ಇವರ ಆಶ್ರಯದಲ್ಲಿ ವಂಡ್ಸೆ ಪಂಚಾಯತ್ ರವರ ಸಹಯೋಗದೊಂದಿಗೆ 6 ವರ್ಷದಿಂದ ಎಲ್ಲಾ ವಯೋಮಾನದವರಿಗಾಗಿ 20 ದಿನಗಳ ಕರಾಟೆ ಬೇಸಿಗೆ ಶಿಬಿರವು ಎಪ್ರಿಲ್‌ 10 ರಿಂದ ಎಪ್ರಿಲ್‌ 29ರ ವರೆಗೆ ಬೆಳಿಗ್ಗೆ 7.00 ರಿಂದ 8.00 ಗಂಟೆಯವರೆಗೆ  ವಂಡ್ಸೆ ಪಂಚಾಯತ್ ನ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಜರುಗಲಿದೆ ಎಂದು ಅಕಾಡೆಮಿ ಆಫ್ ಮಾರ್ಷಲ್ ಆರ್ಟ್ಸ್ (ರಿ) ಇದರ ನಿರ್ಧೇಶಕರಾದ ಎಚ್‌ ಚಂದ್ರಶೇಖರ್‌ ಶೆಟ್ಟಿಯವರು ತಿಳಿಸಿದ್ದಾರೆ

ಕರಾಟೆ ಬೇಸಿಗೆ ಶಿಬಿರದಲ್ಲಿ ತರಭೇತಿ ಪಡೆಯಲು ಬಯಸುವವರು ದೂರವಾಣಿ ಸಂಖ್ಯೆ 7259321123 ಹಾಗೂ 9900906415 ಸಂಪರ್ಕಿಸಲು ಕೋರಲಾಗಿದೆ

Categories
ಅಪರಾಧ

ತಲೆಮರೆಸಿಕೊಂಡಿದ್ದ ಆರೋಪಿಯ ಸೆರೆ

ಮಂಗಳೂರು: ಸುಮಾರು 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮದನಿ ನಗರ ಮಸೀದಿ ಬಳಿಯ ನಿವಾಸಿ ಬದ್ರು ಯಾನೆ ಬದ್ರುದ್ದೀನ್ ಎಂಬಾತನನ್ನು ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ನೇತೃತ್ವದ ಆ್ಯಂಟಿ ಡ್ರಗ್ಸ್ ಟೀಮ್‌ನವರು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈತನ ಪತ್ತೆ ಕಾರ್ಯವನ್ನು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ಮಾರ್ಗದರ್ಶನದಂತೆ, ಡಿಸಿಪಿಗಳಾದ ಸಿದ್ದಾರ್ಥ ಗೋಯೆಲ್, ದಿನೇಶ್ ಕುಮಾರ್ ನಿರ್ದೇಶನದಂತೆ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯ ಎನ್. ನಾಯಕ ಅವರ ನೇತೃತ್ವದಲ್ಲಿ ಆ್ಯಂಟಿ ಡ್ರಗ್ಸ್ ಟೀಮ್‌ನ ಪಿಎಸ್‌ಐ ಪುನೀತ್ ಗಾವಂಕರ್, ಮಹೇಶ್, ಶಾಜು ನಾಯ‌ರ್, ಶಿವಕುಮಾ‌ರ್, ಅಕ್ಟರ್ ಅವರ ತಂಡ ಪತ್ತೆ ಮಾಡಿದೆ.

Categories
ಕರಾವಳಿ ಸುದ್ದಿ

ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲು

ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾ.26ರಂದು ರಾತ್ರಿ ಶಿರ್ವ ಜಾರಂದಾಯ ದೈವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ಭೇಟಿ ನೀಡಿದ ಜೆ.ಪಿ. ಹೆಗ್ಡೆ ಅವರು ತಡರಾತ್ರಿಯವರೆಗೂ ದೈವಸ್ಥಾನದ ಆಡಳಿತ ಮಂಡಳಿಯ ಜೊತೆ ಸಭೆ ನಡೆಸಿದ್ದಾರೆ ಎಂದು ಚುನಾವಣಾ ಪರಿವೀಕ್ಷಣಾ ತಂಡಕ್ಕೆ ದೂರು ಬಂದಿತ್ತು. ರಾತ್ರಿ 11.30 ಗಂಟೆಗೆ ಅಧಿಕಾರಿ ವಿನ್ಸೆಂಟ್ ವಿನೋದ್ ಡಿಸೋಜ ಸ್ಥಳಕ್ಕೆ ಭೇಟಿ ನೀಡಿದಾಗ, ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಭೆ ನಡೆಸಿ ಸಾರ್ವಜನಿಕರ ಮೇಲೆ ಪ್ರಭಾವ ಬೀರಿರುವುದು ಪತ್ತೆಯಾಗಿದ್ದು ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Categories
ಶಿಕ್ಷಣ

ಅಂತರ ತರಗತಿ ಮ್ಯಾನೇಜ್‍ಮೆಂಟ್ ಫೆಸ್ಟ್

ಬಸ್ರೂರು : ಶ್ರೀ ಶಾರದಾ ಕಾಲೇಜು ಬಸ್ರೂರು ಅಂತರ ತರಗತಿ ಮ್ಯಾನೇಜ್‍ಮೆಂಟ್ ಫೆಸ್ಟ್ ಕಾರ್ಯಕ್ರಮ ಕಾಲೇಜಿನ ಶ್ರೀ ವೀರ ರಾಜೇಂದ್ರ ಹೆಗ್ಡೆ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಕಾಲೇಜಿನ ಪ್ರಾಕ್ತಾನ ವಿದ್ಯಾರ್ಥಿ ಪ್ರೈಸ್ ವಾಟರ್ ಹೌಸ್ ಕೂಪರ್ಸ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಜಿತ್ ಮೈಂದನ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರೂ ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕಾದರೆ ಇಂತಹ ಫೆಸ್ಟ್‍ಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಸ್ಪರ್ಧಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿ ವಹಿಸಿದ್ದರು. ಐ ಕ್ಯೂ ಎ ಸಿ ಸಂಯೋಜಕರಾದ ಸಂದೀಪ್ ಕೆ ಸ್ವಾಗತಿಸಿದರು. ವಿದ್ಯಾರ್ಥಿನಿ ಅನುಷ್ಕಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕರಾದ ಡಾ. ವಿಶ್ವನಾಥ ಆಚಾರ್ಯ ವಂದಿಸಿದರು