Categories
ಅಪರಾಧ

ಬಸ್ರೂರು ಬಳಿ ಭೀಕರ ಅಪಘಾತ : ಇಬ್ಬರು ಮೃತ್ಯು

ಕುಂದಾಪುರ  ಸ್ಕೂಟರ್ ಹಾಗೂ ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ಸ್ಕೂಟರ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬಸ್ರೂರು ಸಮೀಪದ ಬಳ್ಕೂರು ಬಿ.ಹೆಚ್. ಶಾಲೆ ಬಳಿ ಸಂಭವಿಸಿದೆ.

ಮೃತಪಟ್ಟ ಸ್ಕೂಟರ್ ಸವಾರರನ್ನು ಬಳ್ಕೂರಿನ ರಾಜೀವ ಶೆಟ್ಟಿ (50 ವರ್ಷ) ಹಾಗೂ ಸುಧೀರ್ ದೇವಾಡಿಗ (35 ವರ್ಷ) ಎಂದು ತಿಳಿದು ಬಂದಿದೆ

ಅಭಿಷೇಕ್ ಶೆಟ್ಟಿ ಎನ್ನುವ ವ್ಯಕ್ತಿ ಕಂಡ್ಲೂರು ಕಡೆಯಿಂದ ಕುಂದಾಪುರ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆ ಚಲಾಯಿಸಿಕೊಂಡು ಬಂದ ಮಾರುತಿ ಸಿಫ್ಟ್ ಕಾರೊಂದು ಬಸ್ರೂರಿನಿಂದ ಕಂಡ್ಲೂರು ಕಡೆಗೆ ಹೋಗುತ್ತಿದ ಸ್ಕೂಟರ್ ಗೆ ನೇರ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್‌ ನುಜ್ಜು ಗುಜ್ಜಾಗಿದ್ದು ಸ್ಕೂಟರ್ ಸವಾರರು ಗಂಭೀರ ಗಾಯಗೊಂಡು ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.

ಕಾರು ಚಾಲಕ ಪರಾರಿಯಾಗಿದ್ದು ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Categories
ಕ್ರೀಡೆ

ಚೆನ್ನೈಯನ್ನು ಬಗ್ಗು ಬಡಿದ ಆರ್‌ ಸಿ ಬಿ

ಚೆನ್ನೈ : ಚೆನ್ನೈನ ಅಭಿಮಾನದ ಸಮುದ್ರದ ಮಧ್ಯೆ ಪ್ರಜ್ವಲಿಸಿದ ಆರ್‌ಸಿಬಿ ಬೌಲರ್‌ಗಳು ಹಳದಿ ಸೇನೆಯನ್ನು ಭೇದಿಸಿ ತಮ್ಮ ಗೆಲುವಿನೋಟ ಮುಂದುವರಿಸಿದರು. ಇದರೊಂದಿಗೆ  ಕಳೆದ ವರ್ಷ ಐಪಿಎಲ್‌ ನಿಂದ ಹೊರಹಾಕಿದ್ದ ಬೆಂಗಳೂರು ತಂಡದ ವಿರುದ್ಧದ ಪ್ರತಿಕಾರ ತೀರಿಸಿಕೊಳ್ಳುವ ಚೆನ್ನೈ ಅಭಿಮಾನಿಗಳ ಕನಸು ಭಗ್ನಗೊಂಡಿತು.

ಇದರೊಂದಿಗೆ ಚೆನ್ನೈನ ಚಿಪ್ಪಾಕ್ ಕ್ರೀಡಾಂಗಣದಲ್ಲಿ 17 ವರ್ಷಗಳಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿರುವ ಬೆಂಗಳೂರು ತಂಡವು ದಾಖಲೆ ಮಾಡಿದೆ. ಇಲ್ಲಿನ ಚಿಪ್ಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಬೆಂಗಳೂರು 7 ವಿಕೆಟ್ ಕಳೆದುಕೊಂಡು 196 ರನ್ ಗಳಿಸಿತು. ಈ ಬಳಿಕ ಬ್ಯಾಟಿಂಗ್ ಮಾಡಿದ ಸಿಎಸ್‌ ಕೆ  20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿ 50 ರನ್ ಗಳಿಂದ ಸೋಲೊಪ್ಪಿಕೊಂಡಿತ್ತು.

Categories
ರಾಷ್ಟ್ರೀಯ ಸುದ್ದಿ

ನಾಳೆ ಹೆಡಗೇವಾ‌ರ್ ಸ್ಮೃತಿ ಮಂದಿರಕ್ಕೆ ಪ್ರಧಾನಿ ಭೇಟಿ

ಹೊಸದಿಲ್ಲಿ: ಪ್ರಧಾನಿ ಮೋದಿ ಅವರು ಯುಗಾದಿ ದಿನವಾದ ಭಾನುವಾರ ಮಹಾರಾಷ್ಟ್ರ ಪ್ರವಾಸ ಕೈಗೊಳ್ಳಲಿದ್ದು, ವಿವಿಧ ಯೋಜನೆ ಗಳಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಹಾಗೆಯೇ  ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸಂಸ್ಥಾಪಕ ಡಾ.ಕೆ.ಬಿ. ಹೆಡಗೇವಾರ್ ಅವರ ಸ್ಮಾರಕಕ್ಕೆ ಭೇಟಿ ನೀಡಲಿದ್ದು, ಬಳಿಕ ಮಾಧವ್ ನೇತ್ರಾಲಯ ಪ್ರೀಮಿಯಂ ಕೇಂದ್ರದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದೇ ಮೊದಲ ಬಾರಿಗೆ ಹಾಲಿ ಪ್ರಧಾನಿಯೊಬ್ಬರು ಡಾ.ಹೆಡಗೇವಾರ್ ಸ್ಮೃತಿ ಮಂದಿರದ ಆವರಣಕ್ಕೆ ಭೇಟಿ ನೀಡುತ್ತಿದ್ದಾರೆ ಎಂಬುದೇ ವಿಶೇಷ ಅಟಲ್ ಬಿಹಾರಿ ವಾಜಪೇಯಿ ಅವರು 2007ರಲ್ಲಿ ಸ್ಮಾರಕಕ್ಕೆ ಭೇಟಿ ನೀಡಿದ್ದರು, ಆದರೆ ಆ ಸಮಯದಲ್ಲಿ ಅವರು ಪ್ರಧಾನಿಯಾಗಿರಲಿಲ್ಲ.

Categories
ರಾಷ್ಟ್ರೀಯ ಸುದ್ದಿ

ಥೈಲ್ಯಾಂಡ್‌,ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ

ಬ್ಯಾಂಕಾಕ್ : ಮ್ಯಾನ್ಮಾರ್ ಮತ್ತು ನೆರೆಯ ಥೈಲ್ಯಾಂಡ್ನಲ್ಲಿ ಶುಕ್ರವಾರ ಸಂಭವಿಸಿದ ಪ್ರಬಲ ಭೂಕಂಪನದಿಂದ ಕಟ್ಟಡಗಳು, ಸೇತುವೆ ಮತ್ತು ಅಣೆಕಟ್ಟುಗಳು ಧರೆಗುರುಳಿವೆ. ಮ್ಯಾನ್ಮಾರ್‌ನಲ್ಲಿ ಕನಿಷ್ಠ 144 ಮಂದಿ ಮೃತಪಟ್ಟಿದ್ದು, 732 ಜನರು ಗಾಯಗೊಂಡಿದ್ದಾರೆ. ಅಲ್ಲಿ ತೀವ್ರ ಹಾನಿಗೊಳಗಾದ ನಗರಗಳ ಎರಡು ಫೋಟೋಗಳು ಮತ್ತು ವೀಡಿಯೊಗಳು ವ್ಯಾಪಕ ಹಾನಿಯನ್ನು ತೋರಿಸಿವೆ. ಥಾಯ್ ರಾಜಧಾನಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡ ಕುಸಿದು ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದು ನೂರಾರು ಮಂದಿ ನಾಪತ್ತೆಯಾಗಿದ್ದಾರೆ

ಮ್ಯಾನ್ಮಾರ್‌ನ ಎರಡನೇ ಅತಿದೊಡ್ಡ ನಗರವಾದ ಮಂಡಲೆ ಬಳಿ ಕೇಂದ್ರಬಿಂದುವಾಗಿದ್ದ 7.7 ತೀವ್ರತೆಯ ಭೂಕಂಪವು ಮಧ್ಯಾಹ್ನ ಅಪ್ಪಳಿಸಿದೆ. ಬಳಿಕ 6.4 ತೀವ್ರತೆಯ ಕಂಪನ ಸಂಭವಿಸಿದೆ. ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾದ ಮ್ಯಾನ್ಹಾರ್‌ನಲ್ಲಿ, ವಿಶೇಷವಾಗಿ ಸಾವುನೋವು, ಗಾಯ ಮತ್ತು ವಿನಾಶದ ಪೂರ್ಣ ಪ್ರಮಾಣವು ತಕ್ಷಣವೇ ಸ್ಪಷ್ಟವಾಗಿಲ್ಲ. ಆದರೆ ಇಲ್ಲಿಯವರೆಗೂ 144 ಜನರು ಮೃತಪಟ್ಟಿದ್ದು, 732 ಜನರು ಗಾಯಗೊಂಡಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5126

ಕ್ರೋಧಿ ಸಂವತ್ಸರ

ಉತ್ತರಾಯಣ

ಶಿಶಿರ : ಋತು

ಪಾಲ್ಗುಣ : ಮಾಸ

ಕೃಷ್ಣ ಪಕ್ಷ

ಉತ್ತರಭಾದ್ರೆ: ನಕ್ಷತ್ರ

 ಅಮವಾಸ್ಯೆ : ತಿಥಿ

ಶನಿವಾರ

29.03.2025

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಕರಾವಳಿ ಸುದ್ದಿ

ಕೋಟದ ಎ.ಪಿ.ಎಂ.ಸಿ ಹರಾಜು ಕಟ್ಟೆ ಶಾಸಕರಿಂದ ಲೋಕಾರ್ಪಣೆ

ಕೋಟ: ಇಲ್ಲಿನ ಕೋಟದ ನೂತನವಾಗಿ ನಿರ್ಮಾಣಗೊಂಡ ಕೃಷಿ ಉತ್ಪನ್ನ ಮಾರುಕಟ್ಟೆ ಉಡುಪಿ ಇದರ ನೂತನವಾಗಿ ನಿರ್ಮಿಸಿದ ಹರಾಜು ಕಟ್ಟೆಯನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಲೋಕಾರ್ಪಣೆಗೊಳಿಸಿದರು.
ಈ ವೇಳೆ ಮಾತನಾಡಿದ ಶಾಸಕರು ಕೋಟದ ಕೃಷಿ ಉತ್ಪನ್ನ ಮಾರುಕಟ್ಟೆ ಅಭಿವೃದ್ಧಿಯತ್ತ ದಾಪುಗಾಲು ಇರಿಸಿದೆ ಇದರ ಒಂದು ಭಾಗ ಇಂದು ಹರಾಜು ಮಾರುಕಟ್ಟೆಯನ್ನು ವ್ಯಾಪಾರಸ್ಥರ ಅನುಕೂಲಕ್ಕಾಗಿ ನಿರ್ಮಿಸಲಾಗಿದ್ದು ಈ ಮಾರುಕಟ್ಟೆ ಕೃಷಿಕರಿಗೆ ಯೋಗ್ಯ ರೀತಿಯ ವಾತಾವರಣ ಸೃಷ್ಟಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕೋಟ ಅಮೃತೇಶ್ವರಿ ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್, ಕಾರ್ಯದರ್ಶಿ ಗಾಯಿತ್ರಿ ರಾವ್ ,ಎ.ಪಿ.ಎಂ.ಸಿ ನಿಕಟಪೂರ್ವ ಉಪಾಧ್ಯಕ್ಷ ಕೃಷ್ಣ ಪೂಜಾರಿ, ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ ,ಉಪಾಧ್ಯಕ್ಷ ಪಾಂಡು ಪೂಜಾರಿ,ಕೃಷಿಕ ರವೀಂದ್ರ ಐತಾಳ್,ಪಂಚಾಯತ್ ಸದಸ್ಯ ಚಂದ್ರ ಪೂಜಾರಿ,ಸುಧಾ ಎ ಪೂಜಾರಿ ,ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಲಲಿತಾ ಪೂಜಾರಿ,ಎ.ಪಿಎಂಸಿ ಸಿಬ್ಬಂದಿಗಳಾದ ಸುನಿತಾ,ಜಗನಾಥ್,ಗುತ್ತಿಗೆದಾರ ಸಂತೋಷ್ ಕೋಟ,ನಾಗರಾಜ್ ಗಾಣಿಗ,ಮಾಜಿ ಪಂಚಾಯತ್ ಸದಸ್ಯ ರವೀಂದ್ರ ಜೋಗಿ,ಕೋಟದ ಪಂಚವರ್ಣ ಯುವಕ ಮಂಡಲದ ಉಪಾಧ್ಯಾಕ್ಷ ದಿನೇಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೋಟ ಪಂಚಾಯತ್ ಸದಸ್ಯ ಚಂದ್ರ ಆಚಾರ್ ಕಾರ್ಯಕ್ರಮ ನಿರೂಪಿಸಿದರು.

ಕೋಟದ ಎ.ಪಿ.ಎಂ.ಸಿ ಹರಾಜು ಕಟ್ಟೆಯನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಲೋಕಾರ್ಪಣೆಗೊಳಿಸಿದರು. ಕೋಟ ಅಮೃತೇಶ್ವರಿ ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್, ಕಾರ್ಯದರ್ಶಿ ಗಾಯಿತ್ರಿ ರಾವ್ ,ಎ.ಪಿ.ಎಂ.ಸಿ ನಿಕಟಪೂರ್ವ ಉಪಾಧ್ಯಕ್ಷ ಕೃಷ್ಣ ಪೂಜಾರಿ ಮತ್ತಿತರರು ಇದ್ದರು.

Categories
ಧಾರ್ಮಿಕ

ಸಾಸ್ತಾನ-ಶ್ರೀನಿವಾಸ ಕಲ್ಯಾಣೋತ್ಸವ ಭೂವೈಕುಂಠ ಮಹಾದ್ವಾರ,ಉಗ್ರಾಣ ಉದ್ಘಾಟನೆ

ಕೋಟ : ಶ್ರೀನಿವಾಸ ಕಲ್ಯಾಣೋತ್ಸವ ಸಾಸ್ತಾನ ಭಾಗದಲ್ಲಿ ನಡೆಯುತ್ತಿರುವುದು ಇತಿಹಾಸದ ಪುಟಕ್ಕೆ ಸೇರುವ ಐತಿಹಾಸಿಕ ಘಟ್ಟ ಹಾಗೂ ಬಂಗಾರದ ಅಕ್ಷರದಲ್ಲಿ ಬರೆಯುವಂತೆ ಸಾಕ್ಷಿಕರಿಸಿದೆ.ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ನುಡಿದರು.
ಗುರುವಾರ ಸಾಸ್ತಾನದ ಕಾರ್ತಿಕ್ ಎಸ್ಟೇಟ್ ನಲ್ಲಿ ಇದೇ ಬರುವ ಎಪ್ರಿಲ್ 01 ರಿಂದ 03ರ ತನಕ ನಡೆಯಲಿರುವ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಇದರ ಭೂವೈಕುಂಠ ಮಹಾದ್ವಾರ ಇದನ್ನು ಉದ್ಘಾಟಿಸಿ ಮಾತನಾಡಿ ಶ್ರೀನಿವಾಸನ ಕಲ್ಯಾಣವೇ ಈ ಕಲಿಯುಗದಲ್ಲಿ ಕಣ್ತುಂಬಿಕೊಳ್ಳುವ ಭಾಗ್ಯವಾಗಿದೆ,ಈ ಕಾರ್ಯದಲ್ಲಿ ಇಡೀ ಗ್ರಾಮವೇ ಒಗ್ಗಟ್ಟಿನ ಮಂತ್ರದೊಂದಿಗೆ ಕಾರ್ಯಕ್ರಮ ಆಯೋಜಿಸಬೇಕಿದೆ ಎಂದರು.
ಇದೇ ವೇಳೆ ಆಹಾರ ಸಾಮಾಗ್ರಿ ಇರಿಸುವ ಉಗ್ರಾಣಕ್ಕೆ ಪಷ್ಭವನ್ನಿಟ್ಟು ಪ್ರಾರ್ಥನೆ ಸಲ್ಲಿಸಿದರು. ಸಭೆಯ ಅಧ್ಯಕ್ಷತೆಯನ್ನು ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಎಂ.ಸಿ ಚಂದ್ರಶೇಖರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಮಿತಿಯ ಹಿರಿಯರಾದ ಶಿವರಾಮ ಉಡುಪ,ಆಶಿತ ಎಂಟರ್ ಪ್ರೆöÊಸಸ್ ಮಾಲಿಕ ಆನಂದ್ ಮರಕಾಲ,ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಮಾಜಿ ಅಧ್ಯಕ್ಷ ಐರೋಡಿ ಜಗದೀಶ್ ಕಾರಂತ,ಸಮಿತಿಯ ಉಪಾಧ್ಯಾಕ್ಷ ಪ್ರತಾಪ್ ಶೆಟ್ಟಿ, ಸಮಿತಿ ಪ್ರಮುಖರಾದ ರತ್ನ ಜೆ ರಾಜ್,ಲೀಲಾವತಿ ಗಂಗಾಧರ್, ಹರೀಷ್ ನಾಯಕ್ ,ದಯಾನಂದ ಶ್ಯಾನುಭಾಗ್,ಗೋವಿಂದ ಪೂಜಾರಿ,ಸುಲತಾ ಎಸ್ ಹೆಗ್ಡೆ,ನಾಗರಾಜ್ ಗಾಣಿಗ,ಮಲ್ಲಿಕಾ ಬಾಲಕೃಷ್ಣ ಪೂಜಾರಿ ,ಜ್ಯೋತಿ ಉದಯ್ ಕುಮಾರ್,ರವೀಂದ್ರ ತಿಂಗಳಾಯ,ಶ್ರೀಪತಿ ಅಧಿಕಾರಿ,ಸೀತಾರಾಮ ಆಚಾರ್,ಚೆನ್ನಯ್ಯ ಪೂಜಾರಿ,ಕುಸುಮಾ ಮನೋಜ್,ರಜನಿ ಶೈಲೇಶ್,ಸುರೇಶ್ ಪೂಜಾರಿ, ಸಮಿತಿಯ ಪ್ರಧಾನಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ,ಸಂಜೀವ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಮಿತಿಯ ಪ್ರಮುಖರಾದ ಪ್ರಶಾಂತ್ ಶೆಟ್ಟಿ ನಿರೂಪಿಸಿದರೆ,ಸಮಿತಿಯ ಮಾರ್ಗದರ್ಶಕರಾದ ಡಾ.ವಿದ್ವಾನ್ ವಿಜಯ್ ಮಂಜರ್ ಪ್ರಾಸ್ತಾವನೆ ಸಲ್ಲಿಸಿ ಸ್ವಾಗತಿಸಿದರು ಕಾರ್ಯದರ್ಶಿ ರವೀಂದ್ರ ತಿಂಗಳಾಯ ವಂದಿಸಿದರು

Categories
ಕರಾವಳಿ ಸುದ್ದಿ

ಕಲೆ ಮತ್ತು ಸಾಹಿತ್ಯ ಸಮಾಜವನ್ನು ಅಭಿವೃದ್ದಿ ಪಡಿಸುತ್ತದೆ

ಕೋಟ : ಒಂದು ಊರಿಗೆ ದೇವಸ್ಥಾನ ಎಷ್ಟು ಮುಖ್ಯವೋ ಅಂತೆಯೇ ಕಲೆ ಮತ್ತು ಸಾಹಿತ್ಯದ ಕಂಪು ಅಷ್ಟೇ ಮುಖ್ಯ. ಯಾವ ಸಮಾಜ ಸಾಂಸ್ಕೃತಿಕವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತದೋ ಆ ಸಮಾಜ ಸುಸಂಸ್ಕೃತವಾಗಿ ಬೆಳೆಯುತ್ತದೆ. ಎಂದು ಸಾಲಿಗ್ರಾಮ ಕಾರ್ಕಡದ ವೇದಮೂರ್ತಿ ರತ್ನಾಕರ ಸೋಮಯಾಜಿ ಅಭಿಪ್ರಾಯ ಪಟ್ಟರು.
ಅವರು ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಕೊಂಡದಕುಳಿ,ಕುಂಭಾಶಿ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಕಾರದಲ್ಲಿ ಸದಾನಂದ ರಂಗಮಂಟಪ ಸಾಲಿಗ್ರಾಮದ ಗುಂಡ್ಮಿಯಲ್ಲಿ ಹಮ್ಮಿಕೊಂಡ ಯಕ್ಷ ಉತ್ಸವಕ್ಕೆ ಜ್ಯೋತಿ ಬೆಳಗಿಸುವುದರೊಂದಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ, ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಕನ್ನಡ ಸಾಹಿತ್ಯ ಪರಿಷತ್ತಿನ ಬ್ರಹ್ಮಾವರ ಘಟಕದ ಅಧ್ಯಕ್ಷರಾದ ರಾಮಚಂದ್ರ ಐತಾಳ, ಉಪಸ್ಥಿತರಿದ್ದರು. ರಾಮಚಂದ್ರ ಹೆಗಡೆ ಕೊಂಡದಕುಳಿಯವರು ಸ್ವಾಗತಿಸಿದರೆ, ಸೀತಾರಾಮ ಸೋಮಯಾಜಿಯವರು ವಂದಿಸಿದರು. ಸಭಾಕಾರ್ಯಕ್ರಮದ ನಂತರ ಅತಿಥಿ ಕಲಾವಿದರಿಂದ “ ಧರ್ಮಾಂಗದ ದಿಗ್ವಿಜಯ” ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.

Categories
ಕ್ರೀಡೆ

ಮಂಗಳೂರು ವಿ.ವಿ. ಅಂತರ್ ಕಾಲೇಜು ಸಾಫ್ಟ್ ಬಾಲ್ ಪಂದ್ಯಾಟ ಉದ್ಘಾಟನೆ

ಕುಂದಾಪುರ : ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಜಂಟಿ ಆಶ್ರಯದಲ್ಲಿ ನಗರದ ಗಾಂಧಿ ಮೈದಾನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಅಂತರ್ ಕಾಲೇಜು ಪುರುಷರ ಮತ್ತು ಮಹಿಳೆಯರ ಸಾಫ್ಟ್ ಬಾಲ್ ಪಂದ್ಯಾಟದ ಉದ್ಘಾಟನೆ ನಡೆಯಿತು.

ಕಾಲೇಜಿನ ಗೌರ್ನಿಂಗ್ ಕೌನ್ಸಿಲ್ ಸದಸ್ಯ, ಯುವ ಉದ್ಯಮಿ ಶರತ್ ಶೆಟ್ಟಿ ಉಪ್ಪುಂದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ. ಎಂ. ಸುಕುಮಾರ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಂಡರೆ, ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ. ಪಠ್ಯ ಚಟುವಟಿಕೆಗಳೊಂದಿಗೆ ಸಹಪಠ್ಯಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದು ವರ್ತಮಾನದ ತುರ್ತು ಎಂದರು. ಇದೇ ಸಂದರ್ಭ ಕಾಲೇಜಿನ ಕ್ರೀಡಾ ಸಾಧನೆಯನ್ನು ಪ್ರಶಂಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ| ಜರಾಲ್ಡ್ ಸಂತೋಷ್ ಡಿಸೋಜ, ಸಹಾಯಕ ನಿರ್ದೇಶಕರಾದ ಡಾ. ಪ್ರಸನ್ನ, ಆರ್ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನವೀನ್ ಶೆಟ್ಟಿ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ ಟಿ ಎನ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು, ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು, ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಶ್ರೀ ಸತೀಶ್ ಶೆಟ್ಟಿ ಹೆಸ್ಕತ್ತೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Categories
ಕ್ರೀಡೆ

ಇಂದು ಹೈವೋಲ್ಟೇಜ್ ಪಂದ್ಯ

ಚೆನ್ನೈ : ಐಪಿಎಲ್‌ನ ಅತಿ ದೊಡ್ಡ ಹಾಗೂ ಬಹು ನಿರೀಕ್ಷಿತ ಪಂದ್ಯಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ, ಸಾಂಪ್ರದಾಯಿಕ ಎದುರಾಳಿಗಳಾದ ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ನಡುವಿನ ಹೈವೋಲ್ಟೇಜ್ ಪಂದ್ಯ ಶುಕ್ರವಾರ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಬಾರಿ ಎರಡೂ ತಂಡಗಳು ಗೆಲುವಿನೊಂದಿಗೆ ಟೂರ್ನಿಗೆ ಕಾಲಿರಿಸಿದ್ದು, ಸತತ 2ನೇ ಗೆಲುವಿಗಾಗಿ ಪೈಪೋಟಿ ನಡೆಸಲಿದೆ.

ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ, ಹಾಲಿ ಚಾಂಪಿಯನ್ ಕೋಲ್ಕತಾ ವಿರುದ್ಧ 7 ವಿಕೆಟ್ ಗೆಲುವು ಸಾಧಿಸಿದ್ದರೆ, ಚೆನ್ನೈ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್ ಜಯಭೇರಿ ಬಾರಿಸಿತ್ತು. ಈ ಬಾರಿ ಎರಡೂ ತಂಡಗಳು ಬಲಿಷ್ಠವಾಗಿದ್ದು, ರೋಚಕ ಪೈಪೋಟಿ ಎದುರಾಗುವುದು ಖಚಿತ. ಅದರಲ್ಲೂ ಚೆಪಾಕ್‌ನ ಸ್ಪಿನ್ ಸ್ನೇಹಿ ಪಿಚ್‌ ನಲ್ಲಿ ಚೆನ್ನೈ ಸ್ಪಿನ್ನರ್‌ಗಳು ಹಾಗೂ ಆರ್‌ಸಿಬಿ ಬ್ಯಾಟರ್‌ಗಳ ನಡುವೆ ತೀವ್ರ ಸ್ಪರ್ಧೆ ಎದುರಾಗಬಹುದು.