Categories
ರಾಷ್ಟ್ರೀಯ ಸುದ್ದಿ

ಕೇಂದ್ರದಲ್ಲಿ 30 ವರ್ಷ ಬಿಜೆಪಿ ಅಧಿಕಾರ ಖಚಿತ

ಹೊಸದಿಲ್ಲಿ : ಬಿಜೆಪಿ ತನ್ನ ಸ್ಥಿರ ಕಾರ್ಯ ಕ್ಷಮತೆಯಿಂದಾಗಿ ಕೇಂದ್ರದಲ್ಲಿ ಕನಿಷ್ಠ 30 ವರ್ಷಗಳ ಕಾಲ ಅಧಿಕಾರದಲ್ಲಿ ಉಳಿಯುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಯಾವುದೇ ಪಕ್ಷದ ಗೆಲುವು ಅದರ ಕಠಿಣ ಪರಿಶ್ರಮದ ಮೇಲೆ ಅವಲಂಬಿತವಾಗಿರುತ್ತದೆ. ಅದು ಹಗಲು ರಾತ್ರಿ ಶ್ರಮಿಸಿದರೆ ಮತ್ತು ನೀವು ನಿಮಗಾಗಿ ಬದುಕದೆ ದೇಶಕ್ಕಾಗಿ ಬದುಕಿದರೆ ಗೆಲುವು ನಿಮ್ಮದಾಗುತ್ತದೆ ಎಂದು ಹೇಳಿದರು.

ನಾನು ಬಿಜೆಪಿ ರಾಷ್ಟ್ರಾಧ್ಯಕ್ಷನಾಗಿದ್ದ ಸಮಯದಲ್ಲಿ ಬಿಜೆಪಿ ಮುಂದಿನ 30 ವರ್ಷ ಅಧಿಕಾರಿದಲ್ಲಿರುತ್ತದೆ ಎಂದಿದ್ದೆ. ಇದೀಗ ಅದರಲ್ಲಿ ಕೇವಲ 10 ವರ್ಷ ಮುಗಿದಿದೆ ಎಂದಿದ್ದಾರೆ. ಏಕರೂಪ ನಾಗರಿಕ ಸಂಹಿತೆಯ (ಏನಾಸಂ) ಬಗ್ಗೆ ಮಾತನಾಡಿದ ಶಾ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಶೀಘ್ರದಲ್ಲೇ ಏನಾಸಂ ಜಾರಿಗೆ ತರುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬರುವ ವೇಳೆ ನಮಗಿದ್ದ ಮುಖ್ಯ ಉದ್ದೇಶವೇ ಏನಾಸಂ ಜಾರಿಗೆ ತರುವುದು ಎಂದಿದ್ದಾರೆ.

ಯುಸಿಸಿಯನ್ನು ಪರಿಚಯಿಸುವುದು. ಕಾಂಗ್ರೆಸ್ ಅದನ್ನು ಮರೆತಿರಬಹುದು ಆದರೆ ನಾವು ಮರೆತಿಲ್ಲ. ನಾವು 370ನೇ ವಿಧಿಯನ್ನು ರದ್ದುಗೊಳಿಸುತ್ತೇವೆ ಎಂದು ಹೇಳಿದ್ದೆವು. ನಾವು ಅದನ್ನು ಮಾಡಿದ್ದೇವೆ. ನಾವು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸುತ್ತೇವೆ ಎಂದು ಹೇಳಿದ್ದೆವು. ನಾವು ಅದನ್ನೇ ಮಾಡಿದ್ದೇವೆ. ಈಗ ಯುಸಿಸಿ ಉಳಿದಿದೆ. ನಾವು ಅದನ್ನೂ ಮಾಡುತ್ತೇವೆ ಎಂದು ಅವರು ಹೇಳಿದರು.

Categories
ರಾಷ್ಟ್ರೀಯ ಸುದ್ದಿ

ಮೋದಿ ಶ್ರೇಷ್ಠ ಪ್ರಧಾನಿ : ಟ್ರಂಪ್

ವಾಷಿಂಗ್ಟನ್ : ಭಾರತ-ಅಮೆರಿಕ ಸುಂಕ ಮಾತುಕತೆಗಳ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಶಾವಾದ ವ್ಯಕ್ತಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ಮಾತ್ರವಲ್ಲದೇ ಮೋದಿ ಅವರನ್ನು ಬಹಳ ಬುದ್ದಿವಂತ ವ್ಯಕ್ತಿ ಮತ್ತು ಉತ್ತಮ ಸ್ನೇಹಿತ ಎಂದಿದ್ದಾರೆ.

ನ್ಯೂಜೆರ್ಸಿಯ ಅಮೆರಿಕ ಅಟಾರ್ನಿ ಅಲಿನಾ ಹಬ್ಬಾ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವರದಿಗಾರ ರೊಂದಿಗಿನ ಸಂವಾದದ ಸಂದರ್ಭದಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ಟ್ರಂಪ್, ಪ್ರಧಾನಿ ಮೋದಿಯವರ ನಾಯಕತ್ವದ ಗುಣಗಳನ್ನು ಶ್ಲಾಘಿಸಿದರು. ಅವರನ್ನು ಶ್ರೇಷ್ಠ ಪ್ರಧಾನಿ ಎಂದು ಬಣ್ಣಿಸಿದರು. ಪ್ರಧಾನಿ ಮೋದಿ ಇತ್ತೀಚೆಗೆ ಇಲ್ಲಿಗೆ ಬಂದಿದ್ದರು, ನಾವು ಯಾವಾಗಲೂ ಉತ್ತಮ ಸ್ನೇಹಿತರಾಗಿದ್ದೇವೆ ಎಂದು ಟ್ರಂಪ್ ಹೇಳಿದರು. ಫೆಬ್ರವರಿಯಲ್ಲಿ ಮೋದಿಯವರ ಅಮೆರಿಕ ಭೇಟಿಯ ನಂತರ ಟ್ರಂಪ್ ಅವರ ಈ ಹೇಳಿಕೆಗಳು ಬಂದಿವೆ

Categories
ರಾಷ್ಟ್ರೀಯ ಸುದ್ದಿ

ಮ್ಯಾನ್ಮಾರ್‌ಗೆ ಮೊದಲು ನೆರವು ನೀಡಿದ ದೇಶ ಭಾರತ

ನವದೆಹಲಿ : ಭೂಕಂಪದಿಂದ ನಲುಗಿದ ನೆರೆಯ ಮ್ಯಾನ್ಮಾರ್‌ ದೇಶಕ್ಕೆ ‘ಆಪರೇಷನ್ ಬ್ರಹ್ಮ’ ಹೆಸರಿನ ಕಾರ್ಯಾಚರಣೆ ಮೂಲಕ ಭಾರತ ಸಹಾಯಹಸ್ತ ಚಾಚಿದೆ. ಭೂಕಂಪ ಪೀಡಿತ ರಾಷ್ಟ್ರಕ್ಕೆ ಮೊದಲು ನೆರವು ನೀಡಿದ ದೇಶವು ಭಾರತವಾಗಿದೆ.

ಮೊದಲಿಗೆ ಸೇನಾ ವಿಮಾನಗಳ ಮೂಲಕ ಭಾರತ 15 ಟನ್ ಪರಿಹಾರ ಸಾಮಗ್ರಿ ಗಳನ್ನು ಕಳಿಸಿಕೊಟ್ಟಿದೆ. ನೆರವಿನ ಸಾಮಗ್ರಿ ಹೊತ್ತ ಇನ್ನೂ 2 ವಿಮಾನಗಳು ಶೀಘ್ರ ತೆರಳಲಿವೆ.

ರಕಣಾ ಕಾರ್ಯಾಚರಣೆಗಾಗಿ 80 ಎನ್ ಡಿಆರ್‌ಎಫ್ ಸಿಬ್ಬಂದಿ ದೌಡಾಯಿಸಿದ್ದಾರೆ ಹಾಗೂ ಭಾರತದಿಂದ 118 ಫೀಲ್ಡ್ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ಮತ್ತು 2 ನೌಕಾಪಡ ಹಡಗು ರವಾನೆ ಆಗಲಿವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಮೊದಲ ಪರಿಹಾರ ಸಾಮಗ್ರಿಗಳಲ್ಲಿ ಟೆಂಟ್ ಗಳು, ಮಲಗುವ ಚೀಲಗಳು, ಹೊದಿಕೆಗಳು, ಸಿದ್ಧ ಆಹಾರ, ನೀರು ಶುದ್ದೀಕರಣ ಸಲಕರಣೆ ಗಳು, ಸೌರದೀಪಗಳು ಸೇರಿದಂತೆ ಅನೇಕ ಅಗತ್ಯ ವಸ್ತುಗಳನ್ನು ವಾಯುಪಡೆ ಯಸಿ130ಜೆ ಮಿಲಿಟರಿ ವಿಮಾನದ ಮೂಲಕ ಮ್ಯಾನ್ಮಾರ್‌ನ ಯಾಂಗೂನ್ ನಗರಕ್ಕೆ ತಲುಪಿಸಲಾಗಿದೆ

ಆಪರೇಷನ್ ಬ್ರಹ್ಮ ಆರಂಭವಾಗಿದೆ. ಭಾರತದಿಂದ ಮೊದಲ ಹಂತದ ಮಾನವೀಯ ನೆರವು ಮ್ಯಾನ್ಮಾರ್‌ನ ಯಾಂಗೋನ್ ವಿಮಾನ ನಿಲ್ದಾಣವನ್ನು ತಲುಪಿದೆ’ ಎಂದು ವಿದೇಶಾಂಗ ಸಚಿವಎಸ್‌.ಜೈಶಂಕರ್‌ ಎಕ್ಸ್‌ನಲ್ಲಿ ತಿಳಿಸಿದ್ದಾರೆ

ಭೂಕಂಪಪೀಡಿತ ಮ್ಯಾನ್ಮಾರ್‌ಗೆ ನೆರವಿನ ಹಸ್ತ ಚಾಚಿದ ಮೊದಲ ದೇಶ ಭಾರತ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ತಿಳಿಸಿದ್ದಾರೆ.

Categories
ರಾಷ್ಟ್ರೀಯ ಸುದ್ದಿ

ಪ್ರಬಲ ಕಂಪನ : ಸಾವಿನ ಸಂಖ್ಯೆ 1,644 ಕ್ಕೆ ಎರಿಕೆ

ಬ್ಯಾಂಕಾಕ್ : ಮ್ಯಾನ್ಮಾರ್‌ನಲ್ಲಿ ಶನಿವಾರ ಸಂಭವಿಸಿದ 7.7 ತೀವ್ರತೆಯ ಪ್ರಬಲ ಭೂಕಂಪದಲ್ಲಿ ಮೃತರ ಸಂಖ್ಯೆ 1,644ಕ್ಕಿಂತ ಹೆಚ್ಚಾಗಿದೆ. ದೇಶದ ಎರಡನೇ ಅತಿದೊಡ್ಡ ನಗರದಲ್ಲಿ ಕುಸಿದುಬಿದ್ದ ಕಟ್ಟಡಗಳಿಂದ ಹೆಚ್ಚಿನ ಶವಗಳನ್ನು ಹೊರ ತೆಗೆಯಲಾಗಿದೆ. 1,002 ಮಂದಿ ಮೃತ ಪಟ್ಟಿದ್ದು, 3,400 ಮಂದಿ ಗಾಯಗೊಂಡಿದ್ದಾರೆ ಮತ್ತು 30 ಮಂದಿ ಕಾಣೆಯಾಗಿದ್ದಾರೆ ಎಂದು ಸರ್ಕಾರ ವರದಿ ಮಾಡಿದೆ

ನೆಲಕ್ಕುರುಳಿದ ಕಟ್ಟಡಗಳು, ಒಡೆದ ಅಣೆಕಟ್ಟು :

ಶುಕ್ರವಾರ ಮಧ್ಯಾಹ್ನ ಮ್ಯಾಂಡಲೆ ಬಳಿ ಸಂಭವಿಸಿದ ಭೂಕಂಪದ ನಂತರ 6.4. ತೀವ್ರತೆಯ ಕಂಪನ ಸೇರಿದಂತೆ ಹಲವು ಕಂಪನಗಳು ಸಂಭವಿಸಿದವು. ಪರಿಣಾಮವಾಗಿ ಕಟ್ಟಡಗಳು ಉರುಳಿವೆ, ರಸ್ತೆಗಳು ಇಬ್ಬಾಗವಾಗಿವೆ, ಸೇತುವೆಗಳು ಕುಸಿದಿವೆ, ಅಣೆಕಟ್ಟು ಒಡೆದಿದೆ. ನಾಯಿಡಾದಲ್ಲಿ ಸಿಬ್ಬಂದಿಗಳು ಹಾನಿಗೊಳಗಾದ ರಸ್ತೆಗಳನ್ನು ದುರಸ್ತಿ ಮಾಡಿದರು. ಆದರೆ ನಗರದ ಹೆಚ್ಚಿನ ಭಾಗ ವಿದ್ಯುತ್, ಫೋನ್ ಮತ್ತು ಇಂಟರ್ನೆಟ್ ಸಂಪರ್ಕದಿಂದ ದೂರವುಳಿದಿದೆ. ಸರ್ಕಾರಿ ವಸತಿ ಕಟ್ಟಡಗಳೂ ಕುಸಿದಿದ್ದು, ಆ ಪ್ರದೇಶಕ್ಕೆ ಪ್ರವೇಶ ನಿರ್ಬಂಧಿಸಿದ್ದಾರೆ.

ಥೈಲ್ಯಾಂಡ್‌ನಲ್ಲಿ ಹೆಚ್ಚು ಹಾನಿ :

ಭೂಕಂಪ ಬ್ಯಾಂಕಾಕ್ ಮತ್ತು ಥೈಲ್ಯಾಂಡ್‌ನ ಇತರ ಭಾಗಗಳನ್ನು ಬೆಚ್ಚಿಬೀಳಿಸಿದೆ. ಚಾಟುಚಾಕ್ ಮಾರುಕಟ್ಟೆಯ ಬಳಿಯ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಆರು ಮಂದಿ ಮೃತಪಟ್ಟಿದ್ದರೆ, 26 ಮಂದಿ ಗಾಯಗೊಂಡಿದ್ದಾರೆ ಮತ್ತು 47 ಮಂದಿ ಕಾಣೆಯಾಗಿದ್ದಾರೆ ಎಂದು ನಗರದ ಅಧಿಕಾರಿಗಳು ವರದಿ ಮಾಡಿದ್ದಾರೆ. ಶನಿವಾರ ಹೊಸ ಸಲಕರಣೆಗಳನ್ನು ತರಲಾಗಿದೆಯಾದರೂ, ಬದುಕುಳಿದವರನ್ನು ಹುಡುಕುವ ಭರವಸೆ ಕ್ಷೀಣಿಸಿದೆ. ಜನರು ತಮ್ಮವರನ್ನು ಹುಡುಕುತ್ತಾ ಗೋಳಾಡುತ್ತಿರುವ ದೃಶ್ಯಗಳು ಮನ ಕಲುಕುವಂತಿದ್ದವು.

Categories
ಇತರೆ

ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

ಇಂದು ಯುಗಾದಿ

ನಮ್ಮೆಲ್ಲಾ ಓದುಗರು

ಜಾಹೀರಾತರುದಾರರು

ಹಿತೈಷಿಗಳು ಹಾಗೂ ನಾಡಿನ

ಸಮಸ್ತ ಜನತೆಗೆ 

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

ಸಂಪಾದಕರು

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ಉತ್ತರಾಯಣ

ವಸಂತ : ಋತು

ಚೈತ್ರ : ಮಾಸ

ಶುಕ್ಲ ಪಕ್ಷ

ರೇವತಿ : ನಕ್ಷತ್ರ

ಪಾಡ್ಯ : ತಿಥಿ

ಭಾನುವಾರ

30.03.2025

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಕರಾವಳಿ ಸುದ್ದಿ

ಕಾಳಾವರ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ

ಕೋಟೇಶ್ವರ : ರಕ್ತದಾನ ಮಹಾದಾನ ರಕ್ತದಾನ ಮಾಡುವುದರಿಂದ ರಕ್ತದೊತ್ತಡ ಹಾಗೂ ದೇಹದಲ್ಲಿರುವ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು. ಮತ್ತು ಇತರ ರಕ್ತದಾನದ ಮಹತ್ವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕಾಧ್ಯಕ್ಷರಾದ ಎಸ್. ಜಯಕರ ಶೆಟ್ಟಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಇವರು ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕುಂದಾಪುರ ಇಲ್ಲಿ  ಹಮ್ಮಿಕೊಳ್ಳಲಾದ ಬೃಹತ್ ರಕ್ತದಾನ ಶಿಬಿರದಲ್ಲಿ ತಮ್ಮ ಆಶಯ ನುಡಿಯನ್ನು ವ್ಯಕ್ತಪಡಿಸಿದರು.
ಈ ಶಿಬಿರದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ವಹಿಸಿ ಇಂದಿನ ಯುವ ಜನತೆ ರಕ್ತದಾನಗಳಂತಹ ಶ್ರೇಷ್ಠ ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವುದು ತುಂಬಾ ಆಶಾದಾಯಕ ವಿಚಾರ ಹೀಗೆ ಬೇರೆ ಬೇರೆ ಚಟುವಟಿಕೆಗಳಲ್ಲಿ ಯುವಕರು ತಮ್ಮನ್ನು ತೊಡಗಿಸಿಕೊಳ್ಳವುದರಿಂದ ಉತ್ತಮ ಸಮಾಜ ನಿರ್ಮಾಣದಲ್ಲಿ ಖಂಡಿತವಾಗಿಯು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುರಾಣಿಕ್ ಕಾರ್ಯದರ್ಶಿ ಭಾರತೀಯ ರೆಡ್‌ಕ್ರಾಸ್ ಕುಂದಾಪುರ, ಶಿವರಾಮ ಶೆಟ್ಟಿ, ಖಜಾಂಚಿ ಭಾರತೀಯ ರೆಡ್‌ಕ್ರಾಸ್ ಕುಂದಾಪುರ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ನಾಗರಾಜ ವೈದ್ಯ ಎಂ., ಐಕ್ಯೂಎಸಿ ಸಂಚಾಲಕರಾದ ನಾಗರಾಜ ಯು ಉಪಸ್ಥಿತರಿದ್ದರು. ಚೇತನಾ ಎಂ. ಸಂಚಾಲಕರು, ಯುವ ರೆಡ್ ಕ್ರಾಸ್ ಘಟಕ ಇವರು ಅತಿಥಿಗಳನ್ನು ಸ್ವಾಗತಿಸಿದರು ಹಾಗೂ ಕಾರ್ಯಕ್ರಮವನ್ನು ಸಂಯೋಜಿಸಿದರು. ಡಾ. ಶೇಖರ ಬಿ. ಸಹ ಸಂಚಾಲಕರು, ಯುವ ರೆಡ್ ಕ್ರಾಸ್ ಘಟಕ, ಹಾಗು ವಿದ್ಯಾರ್ಥಿ ಪ್ರತಿನಿಧಿ ಆದರ್ಶ ಹಾಗೂ ಭೂಮಿಕಾ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಯುವ ರೆಡ್ ಕ್ರಾಸ್ ಘಟಕ ಹಾಗೂ ಭಾರತೀಯ ರೆಡ್ ಕ್ರಾಸ್ ಘಟಕ, ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯಿತು. ಸುಮಾರು 125 ವಿದ್ಯಾರ್ಥಿಗಳ ರಕ್ತ ವರ್ಗೀಕರಣ ಮಾಡಲಾಯಿತು ಮತ್ತು ಶಿಬಿರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ರಕ್ತದಾನ ಮಾಡಿದರು. ಒಟ್ಟು 70 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

Categories
ಕರಾವಳಿ ಸುದ್ದಿ

ಪೊಲೀಸ್ ಜನ ಜಾಗೃತಿ ಮಾಹಿತಿ ಕಾರ್ಯಕ್ರಮ

ಕುಂದಾಪುರ : ನಗರದ ಚಿಕನ್ ಸಾಲ್ ರಸ್ತೆಯಲ್ಲಿರುವ ಶ್ರೀ ಮೈಲಾರೇಶ್ವರ ಯುವಕ ಮಂಡಲದಲ್ಲಿ ಪೊಲೀಸ್ ಜನ ಜಾಗೃತಿ ಮಾಹಿತಿ ಕಾರ್ಯಕ್ರಮ ಜರುಗಿತು

ನಗರದ ಚಿಕ್ಕನಸಾಲು ರಸ್ತೆಯ ಬೀಟ್ ಪೊಲೀಸ್ ಸಂತೋಷರವರು ಯುವಕ ಮಂಲದ ಸಭಾಂಗಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಪೊಲೀಸ್ ಇಲಾಖೆಯ ಹಲವು ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿಗಳನ್ನು ನೀಡಿದರು

ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಅಪರಾಧಗಳು ಹೆಚ್ಚುತ್ತಿದ್ದು ಈ ನಿಟ್ಟಿನಲ್ಲಿ ಆನ್ಲೈನ್ ವಂಚನೆ ಕ್ರಿಕೇಟ್‌ ಬೆಟ್ಟಿಂಗ್ ಗಾಂಜಾ ಹಾಗೂ ಇನ್ನಿತರ ಮಾದಕ ವಸ್ತುಗಳಿಗೆ ಯುವಕರು ಬಲಿಯಾಗುತ್ತಿದ್ದು ಸೈಬರ್ ಅಪರಾಧ ಹಾಗೂ ಇನ್ನಿತರ ಅಪರಾಧಗಳಲ್ಲಿ ತೊಡಗಿಸಿಕೊಂಡ ಯುವಕರ ಮಾಹಿತಿಯನ್ನು ನಮಗೆ ನೀಡಿದಲ್ಲಿ ಅವರನ್ನು ಸರಿದಾರಿಗೆ ತರುವ ಕಾರ್ಯವನ್ನು ಮಾಡಲಾಗುವುದು ಎಂದು  ಅವರು ತಿಳಿಸಿದರು

ವೇದಿಕೆಯಲ್ಲಿ ಮೈಲಾರೇಶ್ವರ ಯುವಕ ಮಂಡಲದ ಗೌರವಾಧ್ಯಕ್ಷರಾದ ಜಿ ಆರ್ ಪ್ರಕಾಶ್ ರಾವ್ ಹಾಗೂ ಕಾರ್ಯದರ್ಶಿ, ಶ್ರೀನಾಥ್ ಕೋಟೆ ಉಪಸ್ಥಿತರಿದ್ದರು

Categories
ಕರಾವಳಿ ಸುದ್ದಿ

ಎಂ ಐ ಟಿ ಕೆ ಯುವ – 2025 ಫೆಸ್ಟ್ ಉದ್ಘಾಟನೆ

ಮೂಡ್ಲಕಟ್ಟೆ : ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಎಂ.ಬಿ.ಎ  ವಿಭಾಗ  ‘ಯುವ -2025’ ಅಂತರ್ ಕಾಲೇಜು ಮ್ಯಾನೇಜ್ ಮೆಂಟ್ ಮತ್ತು ಕಲ್ಚರಲ್ ಪೆಸ್ಟನ್ನು  ಇತ್ತೀಚಿಗೆ ಆಯೋಜಿಸಿತು. ಅತ್ಯಂತ ಯಶಸ್ವಿಯಾಗಿ ನಡೆದ ಈ ಫೆಸ್ಟ್ ನ ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸ್ಟೇಲ್ತ್ ಪ್ರೊಡಕ್ಷನ್ ಸಂಸ್ಥಾಪಕರಾದ ಶ್ರೀ ನಿತಿನ್ ಹೆಗ್ಡೆರವರು ಆಗಮಿಸಿ ದೀಪ ಬೆಳಗಿಸಿ ಫೆಸ್ಟ್ ಉದ್ಘಾಟಿಸಿದರು.

ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಸಿಕ್ಕಿದ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು  ಎಂದು ನುಡಿದರು ಎಲ್ಲಾ  ಕ್ಷೇತ್ರಗಳಲ್ಲಿ ಆರ್ಟಿಫಿಷಿಯಲ್ ಇಂಟಲಿಜನ್ಸ್ ಉಪಯೋಗ ಹೆಚ್ಚುತ್ತಿರುವದರಿಂದ ವಿದ್ಯಾರ್ಥಿಗಳು ಆ ಕಡೆಗೂ ಗಮನಹರಿಸಿ ಶೀಘ್ರ ಯಶಸ್ಸನ್ನು ಸಾಧಿಸಬೇಕು ಎಂದು ಹೇಳಿದರು

ಐ. ಎಂ. ಜೆ. ಇನ್ಸ್ಟಿಟ್ಯೂಷನ್ಸ್  ಬ್ರ್ಯಾಂಡ್ ಬಿಲ್ಡಿಂಗ್ ಡೈರೆಕ್ಟರ್ ಡಾ. ರಾಮಕೃಷ್ಣ ಹೆಗ್ಡೆ ಯವರು ಮಾತನಾಡಿ ವಿದ್ಯಾರ್ಥಿಗಳಿಗೆ ಅದ್ಭುತ ಅವಕಾಶ ನೀಡಿದ ಎಂ ಐ ಟಿ ಕೆ ಯ ಎಂ ಬಿ ಎ ವಿಭಾಗವನ್ನು ಪ್ರಶಂಸಿದರು ಮತ್ತು ಇಂತಹ ಕಾರ್ಯಕ್ರಮಕ್ಕೆ ಪ್ರೇರಣೆಯಾಗಿರುವ ಐ ಎಂ ಜೆ ವಿದ್ಯಾಸಂಸ್ಥೆ ಗಳ ಚೇರ್ಮನ್ ರಾದ ಶ್ರೀಯುತ ಸಿದ್ದಾರ್ಥ ಜೆ ಶೆಟ್ಟಿಯವರ ಪ್ರೋತ್ಸಾಹಕ್ಕೆ ಅಭಿವಂದಿಸಿದರು ಹಾಗೂ  ವಿದ್ಯಾರ್ಥಿಗಳನ್ನು  ಕಳಿಸಿದ ವಿವಿಧ ಜಿಲ್ಲೆಗಳ ಒಟ್ಟು 16 ಕಾಲೇಜುಗಳ ಪ್ರಾಂಶುಪಾಲರಿಗೆ  ಧನ್ಯವಾದ ಸಲ್ಲಿಸಿದರು

ಕಾರ್ಯಕ್ರಮ ದಲ್ಲಿ  ಡೀನ್ ಟಿ. ಪಿ. ಐ. ರ್  ಪ್ರೊ. ಅಮೃತಮಾಲಾ  ಮಾತನಾಡುತ್ತ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಇಂತಹ ಫೆಸ್ಟ್ ಗಳು ಅವಶ್ಯಕ ಅಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲಾರದ ಡಾ. ಮೆಲ್ವಿನ್ ಡಿ ಸೋಜರವರು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಿಕೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರಲ್ಲದೆಯೇ ಪಾಲ್ಗೊಳ್ಳುವಿಕೆಯೇ ಗೆಲುವು ಎಂದರು. ಪ್ರಾರಂಭ ದಲ್ಲಿ ಎಂ.ಬಿ.ಎ ವಿಭಾಗದ ಮುಖ್ಯಸ್ಥೆ ಡಾ. ಸುಚಿತ್ರಾ ಪೂಜಾರಿ ಸ್ವಾಗತ ಭಾಷಣ ಮಾಡಿ “ಯುವ -2025”ರ ಪ್ರಾರಂಭಿಕ ವಿವರಣೆ  ನೀಡಿದರು. ವಿದ್ಯಾರ್ಥಿನಿ ಸಹರಾ ಮತ್ತು ಶಾಂಭವಿ ಕಾರ್ಯಕ್ರಮ ನಿರೂಪಿಸಿ, ಪ್ರತಿಕಾ ಶೆಟ್ಟಿ ವಂದಿಸಿದರು.

Categories
ಕರಾವಳಿ ಸುದ್ದಿ

ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿದ ಶಾಸಕ ಕೊಡ್ಗಿ

ಕುಂದಾಪುರ : ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಸಮಸ್ಯೆಗಳ ಬಗ್ಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಅವರನ್ನು ಭೇಟಿಯಾದರು ಕುಂದಾಪುರ ಕ್ಷೇತ್ರ ವ್ಯಾಪ್ತಿಯಲ್ಲಿನ ಹೊಳೆ ಮತ್ತು ತೋಡುಗಳಲ್ಲಿ ತುಂಬಿರುವ ಹೂಳುಗಳನ್ನು ಮಳೆಗಾಲದ ಪೂರ್ವದಲ್ಲಿಯೇ ಶೀಘ್ರವಾಗಿ ತೆರವು ಬಗ್ಗೆ ಸೂಕ್ತ ಕ್ರಮ ವಹಿಸುವಂತೆ, ಹಾಗೂ ವಾರಹಿ ಯೋಜನೆಗೆ ಭೂಸ್ವಾದೀನಗೂಂಡ ಜಾಗಗಳಿಗೆ ಪರಿಹಾರ ಒದಗಿಸುವ ಕುರಿತು ಮತ್ತು ಕುಂದಾಪುರ ಪುರಸಭೆಯಲ್ಲಿನ ಬರಗಾಲ ನಿಧಿಯ ಕಾಮಗಾರಿಯ ಮಂಜೂರಾತಿಯ ಬಗ್ಗೆ ಹಾಗೂ ಇತರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ಚರ್ಚಿಸಿದರು.