Categories
ಕರಾವಳಿ ಸುದ್ದಿ

ಕೋಟ ಮಣೂರಿನಲ್ಲಿ ಮುದ್ದು ಕೃಷ್ಣ ವೇಷ ಸ್ಪರ್ಧೆ

ಕೋಟ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ,ಶಿಶು ಅಭಿವೃದ್ಧಿ ಯೋಜನೆ, ಬ್ರಹ್ಮಾವರ, ಗ್ರಾಮ ಪಂಚಾಯತ್ ಕೋಟ. ಅಂಗನವಾಡಿ ಕೇಂದ್ರ ರಾಮ್ ಪ್ರಸಾದ್ ಇವರ ಸಂಯುಕ್ತ ಆಶ್ರಯದಲ್ಲಿ ಮೋಷನ್ ಅಭಿಯಾನ – ಪೋಷಣ್ ಮಾಸಾಚರಣೆ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಣೂರು ಪ್ರಸ್ತುತಿಯಲ್ಲಿ ಮುದ್ದು ಕೃಷ್ಣ ವೇಷ ಸ್ಪರ್ಧೆ ಕಾರ್ಯಕ್ರಮ ಶನಿವಾರ ಮಣೂರು ಮಹಾಲಿಂಗೇಶ್ವರ ಸಭಾಭವನದಲ್ಲಿ ಜರಗಿರು.ಕಾರ್ಯಕ್ರಮವನ್ನು ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣೂರು ಮಹಾಲಿಂಗೇಶ್ವರ ದೇಗುಲದ ಜೀರ್ಣೋದ್ಧಾರ ಸಮಿತಿಯ ವಿಷ್ಣಮೂರ್ತಿ ಮಯ್ಯ ವಹಿಸಿದ್ದರು.ಮುಖ್ಯ ಅಭ್ಯಾಗತರಾಗಿ ಸ್ನೇಹಕೂಟ ಮಣೂರು ಸಂಚಾಲಕಿ ಭಾರತಿ ವಿ ಮಯ್ಯ ,ಕೋಟ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಹರೀಶ್ಚಂದ್ರ ನಾಯಕ್,ಮಿಷನ್ ಶಕ್ತಿ ಜಿಲ್ಲಾ ಸಂಯೋಜಕಿ ಶಾರದ,ಪಂಚವರ್ಣ ಯುವಕ ಮಂಡಲದ ಉಪಾಧ್ಯಕ್ಷ ದಿನೇಶ್ ಆಚಾರ್,ತೀರ್ಪುಗಾರರಾಗಿ ನಮೃತಾ ಪ್ರಭು ಉಪಸ್ಥಿತರಿದ್ದರು.
ಶಿಶು ಅಭಿವೃದ್ಧಿ ಯೋಜನೆ, ಬ್ರಹ್ಮಾವರ ಮೇಲ್ವಿಚಾರಕಿ ಲಕ್ಷಿ÷್ಮÃ ಸ್ವಾಗತಿಸಿದರು.
ಕಾರ್ಯಕ್ರಮವನ್ನು ಕಲ್ಮಾಡಿ ಅಂಗನವಾಡಿ ಕಾರ್ಯಕರ್ತೆ ಜಯಲಕ್ಷಿ÷್ಮÃ ನಿರೂಪಿಸಿದರು.ಶ್ರೀರಾಮಪ್ರಸಾದ ಅಂಗನವಾಡಿ ಕಾರ್ಯಕರ್ತೆ ನಿರ್ಮಲ ಉರಾಳ ವಂದಿಸಿದರು.

Categories
ಕರಾವಳಿ ಸುದ್ದಿ

ನಿವೃತ್ತ ಶಿಕ್ಷಕಿಗೆ ಸನ್ಮಾನ

ಕೋಟ: ಶಿಕ್ಷಕ ದಿನಾಚರಣೆಯ ಪ್ರಯುಕ್ತ ವಿಪ್ರ ಮಹಿಳಾ ವಲಯ ಸಾಲಿಗ್ರಾಮ ಇವರ ವತಿಯಿಂದ ನಿವೃತ್ತ ಶಿಕ್ಷಕಿ ಯಡಬೆಟ್ಟು ಕಮಲಾಕ್ಷಿ ಹಂದೆ ಇವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು. ವಿಪ್ರ ಸಾಲಿಗ್ರಾಮ ವಲಯಾಧ್ಯಕ್ಷೆ ವನಿತಾ ಉಪಾಧ್ಯ ಗೌರವಾಧ್ಯಕ್ಷೆ ಜಾಹ್ನವಿ ಹೇರ್ಳೆ,ಶ್ರೀ ದೇವಿ ಹೊಳ್ಳ ಮತ್ತುಇತರರು ಇದ್ದರು.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ದಕ್ಷಿಣಾಯನ

ವರ್ಷ : ಋತು

ಭಾದ್ರಪದ : ಮಾಸ

ಶುಕ್ಲ ಪಕ್ಷ

ಹುಣ್ಣಿಮೆ: ತಿಥಿ 

     ಶತಭಿಷೆ: ನಕ್ಷತ್ರ

ಭಾನುವಾರ

07.09.2025

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಕರಾವಳಿ ಸುದ್ದಿ

ಕೋಳಿ ಅಂಕಕ್ಕೆ ಪೊಲೀಸರಿಂದ ದಾಳಿ

ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿದ್ದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಬಂಧಿತ ಆರೋಪಿಗಳು ಪ್ರವೀಣ್ ಶೆಟ್ಟಿ ಹಾಗೂ ರಾಘವೇಂದ್ರ ಎಂದು ಗುರುತಿಸಲಾಗಿದೆ. ಬಂಧಿತರಿಂದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇತರರು ಬ್ರಹ್ಮಾವರ ಪೊಲೀಸರು ದಾಳಿ ನಡೆಸುತ್ತಿರುವ ಸಂದರ್ಭದಲ್ಲಿ ಪರಾರಿಯಾಗಿದ್ದಾರೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ: 182/2025 : ಕಲಂ. 87 93 KP Act US 11 Prevention of Cruelty to Animals Act. ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Categories
ಕರಾವಳಿ ಸುದ್ದಿ

ಕಳೆದುಕೊಂಡ ಚಿನ್ನದ ಸರ ಹಸ್ತಾಂತರ

ಕುಂದಾಪುರ: ತಾಲೂಕಿನ ಕುಂಭಾಷಿಯಲ್ಲಿರುವ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಧಾನದಲ್ಲಿ ಭಕ್ತಾಭಿಮಾನಿಯಾದ ದೇವಣ್ಣ ನಾಯಕ್  ಎಂಬುವರು ಕೆಂಜೂರು ಕೊಕ್ಕರ್ಣೆ ನಿವಾಸಿ ಚಿನ್ನದ ಸರವನ್ನು ದೇವಸ್ಧಾನದ ಆವರಣದಲ್ಲಿ ಕಳೆದುಕೊಂಡಿದ್ದು.

ಆಡಳಿತ ಮಂಡಳಿಯವರಲ್ಲಿ ವಿಚಾರಿಸಿದಾಗ ದೇವಸ್ಥಾನದ ಆಡಳಿತ ಮಂಡಳಿಯ ವ್ಯವಸ್ಥಾಪಕರಾದ ರಾಜಶೇಖರ್ ಹೆಗ್ಡೆಯವರು ದೇವಣ್ಣ ನಾಯಕ್ ಎಂಬುವವರಿಗೆ ಹಸ್ತಾಂತರಿಸಿದರು.

Categories
ಇತರೆ

ಅನಂತ ಚತುರ್ಧಶಿ

ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬಕ್ಕೂ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಮಹತ್ವವಿದೆ.
ನಮ್ಮ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಆಚರಣೆಗಾಗಿ ಮಾತ್ರವಲ್ಲ, ಮಾನವ ಜೀವನದ ಗಹನ ತತ್ತ್ವವನ್ನು ಮನದಟ್ಟುಗೊಳಿಸಲು ರೂಪುಗೊಂಡಿವೆ. ಅವುಗಳಲ್ಲಿ ಒಂದು ಮುಖ್ಯವಾದ ಹಬ್ಬವೇ ಅನಂತ ಚತುರ್ಧಶಿ. ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಧಶಿ ತಿಥಿಯಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. “ಅನಂತ” ಎಂದರೆ ಅಂತ್ಯವಿಲ್ಲದ, ಅಕ್ಷಯವಾದ, ಶಾಶ್ವತವಾದ ಕಾಲ–ಸ್ಥಳಕ್ಕೆ ಸೀಮಿತವಾಗದ ತತ್ವ,ಭೌತಿಕವಾಗಿ, ವಿಶ್ವದ ವಿಶಾಲತೆ,ಆಧ್ಯಾತ್ಮಿಕವಾಗಿ, ಬ್ರಹ್ಮನ ಪರಮ ತತ್ತ್ವ.ಮಾನಸಿಕವಾಗಿ, ಮಾನವನ ಅಂತರಂಗದ ಶಕ್ತಿಯ ಅನಂತ ಸಾಮರ್ಥ್ಯ. ಈ ದಿನ ಅನಂತನಾದ ಶ್ರೀಮಹಾವಿಷ್ಣುವನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.
ಈ ಹಬ್ಬ ನಮಗೆ ಹೇಳುವುದು: ನಮ್ಮ ಜೀವನದಲ್ಲಿ ಬರುವ ಸಂಕಷ್ಟಗಳು ಸೀಮಿತ, ಆದರೆ ದೈವಸಹಾಯ ಮತ್ತು ಆತ್ಮಶಕ್ತಿ ಅನಂತ.
ಪುರಾಣೋಕ್ತ ಮಹತ್ವ
ಮಹಾಭಾರತದಲ್ಲಿ, ಪಾಂಡವರು ತಮ್ಮ ಜೀವನದಲ್ಲಿ ದೊಡ್ಡ ಸಂಕಟವನ್ನು ಅನುಭವಿಸುತ್ತಿದ್ದಾಗ ಶ್ರೀಕೃಷ್ಣನು ದ್ರೌಪದಿಗೆ ಅನಂತ ವ್ರತ ಮಾಡುವಂತೆ ತಿಳಿಸಿದನು. ಆ ವ್ರತದಿಂದ ಅವರಿಗೆ ಆಶೀರ್ವಾದ ದೊರೆಯಿತು. ಇಲ್ಲಿ ತತ್ತ್ವ ಏನೆಂದರೆ –ಸಂಕಷ್ಟಗಳು ಶಾಶ್ವತವಲ್ಲ.ನಂಬಿಕೆಯ ಬಲ ಮತ್ತು ಭಕ್ತಿಯ ಶಕ್ತಿ ಯಾವಾಗಲೂ ಕಾಪಾಡುತ್ತದೆ. ಜೀವನದ ಕಠಿಣ ಘಟ್ಟಗಳಿಗೂ ಅಂತ್ಯವಿದೆ, ಆದರೆ ದೈವದ ಶಕ್ತಿ ಅನಂತ.ಹೀಗಾಗಿ ಅನಂತ ಚತುರ್ಧಶಿಯ ವ್ರತವನ್ನು ಕೈಗೊಳ್ಳುವವರು ಸಂಕಟಗಳಿಂದ ಬಿಡುಗಡೆ ಹೊಂದಿ, ಸಮೃದ್ಧಿ ಹಾಗೂ ಶಾಂತಿಯ ಜೀವನವನ್ನು ನಡೆಸಬಹುದು ಎಂದು ನಂಬಿಕೆ.

ಆಚರಣೆ ವಿಧಾನ

ಈ ದಿನ ಜನರು ಉಪವಾಸವನ್ನೂ ಕೈಗೊಳ್ಳುತ್ತಾರೆ.
ಶುಚಿಯಾಗಿ ಸ್ನಾನ ಮಾಡಿ ಮನೆಯನ್ನು ಅಲಂಕರಿಸುತ್ತಾರೆ.
ಪೂಜೆಯ ಸಂದರ್ಭದಲ್ಲಿ ಅನಂತನ ಶೇಷನಾಗರೂಪದ ಚಿತ್ರ ಅಥವಾ ಪ್ರತಿಮೆಯನ್ನು ಪೂಜಿಸುತ್ತಾರೆ.
ಕೆಂಪು-ಹಳದಿ ಬಣ್ಣದ ಹತ್ತಿಯಿಂದ ತಯಾರಿಸಿದ ಅನಂತದಾರ (ಅನಂತಸೂತ್ರ)ವನ್ನು 14 ಗಂಟುಗಳೊಂದಿಗೆ ಕಟ್ಟಲಾಗುತ್ತದೆ.
ಪುರುಷರು ಬಲಗೈಗೆ, ಮಹಿಳೆಯರು ಎಡಗೈಗೆ ಆ ದಾರವನ್ನು ಕಟ್ಟಿ, “ಅನಂತಾಯ ನಮಃ” ಎಂದು ಜಪಿಸುತ್ತಾರೆ.
ಉಪವಾಸದ ನಂತರ ಪ್ರಸಾದವನ್ನು ವಿತರಿಸುತ್ತಾರೆ.

ಅನಂತ ಸೂತ್ರದ ತಾತ್ಪರ್ಯ
ಅನಂತ ಚತುರ್ಧಶಿ ದಿನ ಕೈಗೆ ಕಟ್ಟುವ “ಅನಂತದಾರ” ಕೇವಲ ಹಬ್ಬದ ಚಿಹ್ನೆ ಅಲ್ಲ.
ಕೆಂಪು ಬಣ್ಣ = ಶಕ್ತಿ, ಉತ್ಸಾಹ.
 ಹಳದಿ ಬಣ್ಣ = ಶ್ರದ್ಧೆ, ಜ್ಞಾನ.
14 ಗಂಟುಗಳು = 14 ಲೋಕಗಳ ಸ್ಮರಣೆ ಮತ್ತು ಜೀವನದ 14 ಮುಖ್ಯ ಗುರಿಗಳು.
ಇದು – ನಾವು ದೈವದೊಂದಿಗೆ ಬಂಧಿತರಾದಾಗ, ಜೀವನದ ಪ್ರತಿಯೊಂದು ಅಡೆತಡೆಗೂ ಶಕ್ತಿಯಿಂದ ಎದುರಿಸಬಹುದು ಎಂಬುದನ್ನು ನೆನಪಿಸುತ್ತದೆ.

                                                                                 ಸಾಮಾಜಿಕ ಅಂಶ
ಸಾಮಾಜಿಕ ದೃಷ್ಟಿಯಿಂದ ಈ ಹಬ್ಬ ಕುಟುಂಬ ಸೌಹಾರ್ದತೆ, ನಂಬಿಕೆ ಹಾಗೂ ಒಗ್ಗಟ್ಟಿಗೆ ಪ್ರೇರಣೆ ನೀಡುತ್ತದೆ. ಈ ವ್ರತವನ್ನು ಸಾಮಾನ್ಯವಾಗಿ ದಂಪತಿಗಳು ಸೇರಿ ಆಚರಿಸುವುದರಿಂದ ಗೃಹದಲ್ಲಿ ಆನಂದ, ಸಮೃದ್ಧಿ ಮತ್ತು ವೈವಾಹಿಕ ಜೀವನದಲ್ಲಿ ಶ್ರದ್ಧೆ, ನಂಬಿಕೆ, ಸಂತಾನ ಪ್ರಾಪ್ತಿ, ಪ್ರೇಮ, ಬಾಂಧವ್ಯ ಇತ್ಯಾದಿ ವೃದ್ಧಿಸುತ್ತದೆ. ಲೌಕಿಕ ಇಚ್ಛೆ, ಆಕಾಂಕ್ಷೆಗಳನ್ನು ಪೂರೈಸುವ ಹಾಗೂ ಕಳೆದು ಹೋದ ಸಮೃದ್ಧಿಯನ್ನು ಮರಳಿ ಪಡೆಯುವ ಉದ್ದೇಶದಿಂದ ಈ ವ್ರತವನ್ನು ಆಚರಿಸಲಾಗುತ್ತದೆ.
ಕೆಲವು ರಾಜ್ಯಗಳಲ್ಲಿ, ವಿಶೇಷವಾಗಿ ಮಹಾರಾಷ್ಟ್ರದಲ್ಲಿ, ಈ ದಿನ ಗಣೇಶ ಚತುರ್ಥಿ ಉತ್ಸವದ ಕೊನೆಯ ದಿನವೂ ಆಗಿದೆ. 10 ದಿನಗಳ ಗಣೇಶೋತ್ಸವದ ನಂತರ ಗಣಪತಿಯನ್ನು ವಿಸರ್ಜನೆ ಮಾಡುವುದನ್ನು ಗಣೇಶ ವಿಸರ್ಜನೆ ಅಥವಾ ಗಣೇಶ ವಿಮೋಚನೆ ಎಂದು ಕರೆಯುತ್ತಾರೆ.
ಗಣೇಶನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುವುದು ಕೇವಲ ಆಚರಣೆ ಅಲ್ಲ, ಆಳವಾದ ತತ್ತ್ವ:

ರೂಪವಿರುವುದು ತಾತ್ಕಾಲಿಕ.
ರೂಪವಿಲ್ಲದ ತತ್ತ್ವವೇ ನಿತ್ಯ.
ಜೀವನದಲ್ಲಿ ಬಂದ ಪ್ರತಿಯೊಂದು ಸಂತೋಷ, ದುಃಖ, ಸಾಧನೆ, ವಿಫಲತೆಗಳೂ ಕ್ಷಣಿಕ; ಆದರೆ ಆತ್ಮತತ್ತ್ವ ಅನಂತ. ಹೀಗಾಗಿ ಅನಂತ ಚತುರ್ಧಶಿ ದಿನವು ಗಣೇಶಭಕ್ತರಿಗೂ ಮಹತ್ವದ ದಿನವಾಗಿದೆ.

ತತ್ತ್ವ ಮತ್ತು ಸಂದೇಶ
ಅನಂತ ಚತುರ್ಧಶಿ ನಮ್ಮ ಜೀವನದಲ್ಲಿ ನಂಬಿಕೆ, ಶ್ರದ್ಧೆ ಮತ್ತು ಸಹನಶೀಲತೆಗಳ ಪ್ರತೀಕ. “ಅನಂತ” ಎಂಬ ಶಬ್ದವೇ ನಮಗೆ ಆತ್ಮಶಕ್ತಿಯನ್ನು, ನಿತ್ಯತೆಯನ್ನು ಮತ್ತು ಅನಂತ ಸಾಧ್ಯತೆಗಳನ್ನು ನೆನಪಿಸುತ್ತದೆ. ಜೀವನದಲ್ಲಿ ಎಷ್ಟೇ ಸಂಕಟಗಳು ಬಂದರೂ ನಂಬಿಕೆ ಕಳೆದುಕೊಳ್ಳದೆ ದೈವಭಕ್ತಿ ಹಾಗೂ ಶ್ರಮದಿಂದ ಮುಂದುವರಿದರೆ ಶ್ರೇಯಸ್ಸು ನಮ್ಮದೆಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ.

ಮಾನವ ಜೀವನಕ್ಕೆ ಸಂದೇಶ
ಅನಂತ ಚತುರ್ಧಶಿ ನಮಗೆ ನೀಡುವ ಮುಖ್ಯ ಪಾಠ:
ನಂಬಿಕೆಯ ಶಕ್ತಿ – ಕಷ್ಟ ಎಷ್ಟೇ ದೊಡ್ಡದಾದರೂ ನಂಬಿಕೆ ಎತ್ತರವಾದದ್ದು.
ಅನಂತ ಸಾಧ್ಯತೆಗಳು – ನಮ್ಮೊಳಗಿನ ಸಾಮರ್ಥ್ಯವನ್ನು ಅರಿತರೆ ಬದುಕಿನಲ್ಲಿ ಹೊಸ ದಾರಿಗಳು ತೆರೆದುಕೊಳ್ಳುತ್ತವೆ.
ಅಸ್ಥಿರ ಜಗತ್ತು – ಸ್ಥಿರ ಆತ್ಮ – ದೇಹ, ಸಂಪತ್ತು, ಸಂಬಂಧಗಳು ಎಲ್ಲಾ ಬದಲಾವಣೆಗೊಳಗಾಗುವವು. ಆದರೆ ಆತ್ಮ ಮತ್ತು ದೈವಸಂಬಂಧ ಮಾತ್ರ ಶಾಶ್ವತ.
ಸಮತೋಲನ – ಸಂತೋಷದಲ್ಲೂ ಮಿತ, ದುಃಖದಲ್ಲೂ ಧೈರ್ಯ.
ಅನಂತ ಚತುರ್ಧಶಿ ಕೇವಲ ವ್ರತ, ಉಪವಾಸ, ಹಬ್ಬವಲ್ಲ. ಅದು ನಿತ್ಯ ಜೀವನದ ದಾರಿ. ಪ್ರತಿಯೊಂದು ಬದಲಾವಣೆ, ಸಂಕಟ, ಸಂತೋಷ – ಎಲ್ಲವೂ ತಾತ್ಕಾಲಿಕ. ಆದರೆ ನಮ್ಮ ನಂಬಿಕೆ, ದೈವಸಂಬಂಧ ಮತ್ತು ಆತ್ಮಸಾಕ್ಷಾತ್ಕಾರ ಮಾತ್ರ ಅನಂತ.

ಹೀಗಾಗಿ ಈ ಹಬ್ಬವು ನಮಗೆ ಹೇಳುವುದೇನಂದರೆ:
“ಅನಂತ ತತ್ತ್ವವನ್ನು ಹೃದಯದಲ್ಲಿ ಕಟ್ಟಿಕೊಳ್ಳಿ; ಸಂಕಟಗಳು ತಾತ್ಕಾಲಿಕ, ಶಕ್ತಿ ಶಾಶ್ವತ.”
ಅನಂತ ಚತುರ್ದಶಿಯ ಶುಭಾಶಯಗಳೊಂದಿಗೆ

ಸ್ವರ್ಣ ಕುಂದಾಪುರ
ಆಪ್ತ ಸಮಾಲೋಚಕಿ

Categories
ಕರಾವಳಿ ಸುದ್ದಿ

ವೈಭವದ ವರ್ಣರಂಜಿತ ಕೋಟದ ದೊಡ್ಡ ಗಣೇಶೋತ್ಸವ ಸಂಪನ್ನ

ಕೋಟ: ಇಲ್ಲಿನ ಕೋಟದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸುವರ್ಣ ಸಂಭ್ರಮದ ಒಂಭತ್ತು ದಿನಗಳ ವೈಭವದ ಕಾರ್ಯಕ್ರಮಗಳಿಗೆ  ವರ್ಣರಂಜಿತವಾಗಿ ತೆರೆ ಎಳೆಯಲಾಯಿತು. ಕೋಟದ ಅಮೃತೇಶ್ವರೀ ದೇಗುಲದಲ್ಲಿ ಆರಾಧಿಸಲ್ಪಟ್ಟ ೫೦ನೇ ವರ್ಷದ ಗಣೇಶೋತ್ಸವ ವಿವಿಧ ಸಾಂಸ್ಕೃತಿಕ ,ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರಗಿತು.ಗುರುವಾರ ಕೊನೆಯ ದಿನ ಮೂಡುಗಣಪತಿ ಸೇವೆ ,ಅನ್ನಸಂತರ್ಪಣೆ ಪ್ರಸಾದ ವಿತರಣೆ,ಲಕ್ಕಿಡಿಪ್ ಫಲಿತಾಂಶ ಇನ್ನಿತರ ಕಾರ್ಯಕ್ರಮಗಳೊಂದಿಗೆ ಸಮಿತಿಯ ಗೌರವಾಧ್ಯಕ್ಷ ಆನಂದ್ ಸಿ ಕುಂದರ್ ಉಪಸ್ಥಿತಿಯಲ್ಲಿ ತೆರೆ ಕಂಡಿತು.

ಕೋಟದ ಇತಿಹಾಸದಲ್ಲೆ ಮೊದಲೆಂಬಂತೆ ದೊಡ್ಡ ಮಟ್ಟದ ಜನಸಾಗರ ಸುವರ್ಣ ಸಂಭ್ರಮದಲ್ಲಿ ಸಾಕ್ಷಿಕರಿಸಿತು.
ಸಂಜೆ ಅಮೃತೇಶ್ವರೀ ದೇಗುಲದಿಂದ ಜಲಸ್ಥಂಭನಕ್ಕೆ ಹೊರಟ ಗಣೇಶ ಮೆರವಣಿಗೆ ಕೋಟದ ರಾಷ್ಟ್ರೀಯ ಹೆದ್ದಾರಿ ಮಣೂರು ಇಂದ್ರಪ್ರಸ್ಥ ಸರ್ಕಲ್ ಬಳಿಯಿಂದ ಕೋಟ ಹೈಸ್ಕೂಲ್ ಹೆದ್ದಾರಿ ಮೂಲಕ ಕೋಟ ಪಡುಕರೆ ಕಡಲಲ್ಲಿ ಜಲಸ್ಥಂಭನಗೊಳಿಸಲಾಯಿತು.
ಇದೇ ಮೊದಲಬಾರಿಗೆ ವಿವಿಧ ಸಂಘಸಂಸ್ಥೆಗಳಿಂದ ದೊಡ್ಡ ಮಟ್ಟದ ಸ್ಥಬ್ಧ ಚಿತ್ರಗಳು ನೆರೆದಿದ್ದವರ ಗಮನ ಸೆಳೆಯಿತು.ಕೋಟದ ಜನತಾ ಸಮೂಹ ಸಂಸ್ಥೆ ಆಪರೇಶನ್ ಸಿಂಧೂರ ಮಾದರಿಯಲ್ಲಿ ಐಎನ್ ಎಸ್ ನೌಕೆ,ಬ್ರಹ್ಮೋಸ್ ಮಾದರಿಯ ಕ್ಷಿಪಣಿ,ಸುಕೋಯ್ ಗಮನ ಸೆಳೆದರೆ,ಇತ್ತ ಬಾರಿಕೆರೆ ಯುವಕ ಮಂಡಲ ಕಜಾಸುರ,ಅರ್ಚಕ ಯುವ ಸಂಘದಿಂದ ಕೊಲ್ಲೂರು ಮೂಕಾಂಬಿಕೆ ಸೇರಿದಂತೆ ವಿವಿಧ ಸ್ಥಬ್ಧಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸದ್ದು ಮಾಡಿತು. ದಾರಿ ಉದ್ದಕ್ಕೂ ಉಪಹಾರ,ಪಾನೀಯ ಸೇವೆ,ಸಿಡಿಮದ್ದು ಪ್ರದರ್ಶನ ಜನ ಆರ್ಕಷಣೆಯ ಕೇಂದ್ರವಾಯಿತು.ಸಾವಿರಾರು ಜನ ಮೆರವಣಿಗೆಯನ್ನು ಕಣ್ತುಂಬಿಕೊಂಡರು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ರಮಾನಾಥ್ ಜೋಗಿ,ಉಪಾಧ್ಯಕ್ಷರಾದ ಸೋಮ ಮರಕಾಲ,ಗಣೇಶ ಪೂಜಾರಿ, ಸುರೇಶ್ ಗಾಣಿಗ ಶೇವಧಿ, ಕಾರ್ಯದರ್ಶಿ ಚಂದ್ರ ಆಚಾರ್, ಕೋಶಾಧಿಕಾರಿ ಶೀಲರಾಜ್ ಕಾಂಚನ್,ಸಮಿತಿಯ ಪ್ರಮುಖರಾದ ಚಂದ್ರ ಪೂಜಾರಿ,ಜಿ.ಎಸ್ ಆನಂದ್ ದೇವಾಡಿಗ,ದೇವದಾಸ ಕಾಂಚನ್,ಉಮೇಶ್ ಕದ್ರಿಕಟ್ಟು, ಜೀವನ್,ರಂಜಿತ್ ಕುಮಾರ್ ,ಗಿರೀಶ್ ದೇವಾಡಿಗ ಮತ್ತಿತರರು ಇದ್ದರು.

Categories
ಕರಾವಳಿ ಸುದ್ದಿ

ಮೂಡ್ಲಕಟ್ಟೆ ಐಎಂಜೆ ಪದವಿ ಕಾಲೇಜು ಹಾಗೂ ಎಂ.ಎಫ್.ಕೆ ಫೌಂಡೇಶನ್ ನಡುವೆ ಶೈಕ್ಷಣಿಕ ಒಡಂಬಡಿಕೆ.

ಮೂಡ್ಲಕಟ್ಟೆ : ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಉದ್ಯೋಗ ಮತ್ತು ತರಬೇತಿ ಘಟಕ ಹಾಗೂ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣೆಯ ಸಂಘದ ಸಹಯೋಗದೊಂದಿಗೆ ಬಿಕಾಂ ಮತ್ತು ಬಿಬಿಎ ವಿದ್ಯಾರ್ಥಿಗಳಿಗೆ ‘ಫೈನಾನ್ಸಿಯಲ್ ಸ್ಕಿಲ್ ಡೆವಲಪ್ಮೆಂಟ್’ ಎನ್ನುವ ವಿಷಯದ ಕುರಿತು ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಬೆಂಗಳೂರಿನ ಎಂ.ಎಫ್.ಕೆ ಫೌಂಡೇಶನ್ ನ ಸಾಂಸ್ಥಿಕ ಪಾಲುದಾರಿಕೆಗಳ ಮುಖ್ಯಸ್ಥೆ ಅರ್ಪಣಾ ಭಟ್ ನಡೆಸಿಕೊಟ್ಟರು. ಅವರು ಶೈಕ್ಷಣಿಕ ಕಲಿಕೆ ಮತ್ತು ಉದ್ಯಮದ ನಿರೀಕ್ಷೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಮಹತ್ವವನ್ನು ಒತ್ತಿ ಹೇಳಿದರು. ಕಾರ್ಪೊರೇಟ್ ಜಗತ್ತಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಲ್ಲಿ ಪ್ರಾಯೋಗಿಕ ತರಬೇತಿ ಕೌಶಲ್ಯ ಮತ್ತು ವೃತ್ತಿಪರ ಸಂಪನ್ಮೂಲಗಳನ್ನು ಪಡೆದು ಕೊಳ್ಳಬೇಕಾದ ಮಹತ್ವವನ್ನು ತಿಳಿಸಿದರು. ಕಾರ್ಯಾಗಾರದಲ್ಲಿ ಭಾಗವಹಿಸುವವರನ್ನು ಕಲಿಕೆ, ನಿರ್ವಹಣಾ ವ್ಯವಸ್ಥೆಗಳು (LMS) ಮತ್ತು ನೇರ ತರಬೇತಿ ಅವಧಿಗಳು ಸೇರಿದಂತೆ ಎಂ ಎಫ್ ಕೆ ಯ ಉಚಿತ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳನ್ನು ಪರಿಚಯಿಸಿದರು. ಕಾರ್ಯಕ್ರಮದ ಪ್ರಮುಖ ಭಾಗವಾಗಿ ಬೆಂಗಳೂರಿನ ಎಂ ಎಫ್ ಕೆ ಫೌಂಡೇಶನ್ ಮತ್ತು ಮೂಡ್ಲಕಟ್ಟೆ ಪದವಿ ಕಾಲೇಜಿನ ನಡುವೆ ಶೈಕ್ಷಣಿಕ ಒಡಂಬಡಿಕೆಗೆ (MoU) ಸಹಿ ಹಾಕಲಾಯಿತು. ಇದು ಸಾಂಸ್ಥಿಕ ಸಹಯೋಗ ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿಗೆ ದಾರಿ ಮಾಡುವ ಮಹತ್ವದ ಹೆಜ್ಜೆಯಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್ ವಹಿಸಿದ್ದರು. ಉಪ ಪ್ರಾಂಶುಪಾಲರಾದ ಶ್ರೀ ಜಯಶೀಲ್ ಕುಮಾರ್, ಕಾಲೇಜಿನ ಉದ್ಯೋಗ ಮತ್ತು ತರಬೇತಿ ಅಧಿಕಾರಿ ಶ್ರೀಮತಿ ದೀಕ್ಷಾ ಹರೀಶ್ ಜೆಪ್ಪು, ಉಪನ್ಯಾಸಕ ವೃಂದದವರು ಹಾಗೂ ಬಿಕಾಂ ಮತ್ತು ಬಿಬಿಎ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಕು. ಅಂಕಿತಾ ಕೆ. ಶೆಣೈ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ತೃತೀಯ ಬಿಕಾಂ ವಿದ್ಯಾರ್ಥಿನಿ ಕು. ಅಲ್ಫಿದಾ ಕಾರ್ಯಕ್ರಮವನ್ನು ನಿರೂಪಿಸಿದರು.

Categories
ಕರಾವಳಿ ಸುದ್ದಿ ಸಂಘ ಸಂಸ್ಥೆ

ಇಂದು ಸಾರ್ವಜನಿಕ ಶೃದ್ಧಾಂಜಲಿ ಸಭೆ

ಕುಂದಾಪುರ:ನಗರದ ಫೀಶ್‌ ಮಾರ್ಕೇಟ್‌ ರಸ್ತೆ ನಿವಾಸಿ ಸಾತ್ವಿಕತೆಗೆ ಸಾಕ್ಷಿ ಎಂಬಂತೆ ಬದುಕಿ ತೋರಿದ ಹಿರಿಯ ಪತ್ರಕರ್ತರು, ರಾಷ್ಟ್ರೀಯ ಸ್ವಯಂ ಸೇವಕ, ಸಪ್ತ ಸಾಗರಕ್ಕೆ ಸಮನಾದ ಸ್ನೇಹ ಬಳಗವನ್ನೇ ತೊರೆದು ದೈವೈಕ್ಯರಾದ ಗಣೇಶ್ ಹೆಗ್ಡೆಯವರನ್ನು ನೆನೆದು ಬಾಷ್ಪಾಂಜಲಿ ಅರ್ಪಿಸಿ ಅವರ ದಿವ್ಯಾತ್ಮಕ್ಕೆ ಮೋಕ್ಷ ದೊರಕಲೆಂದು, ಪುನರಪಿ ಜನನಂ ಪುನರಪಿ ಮರಣಂ ಎಂಬಂತೆ ಮತ್ತೆ ನಮ್ಮೊಡನೆ ಹುಟ್ಟಿಬರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಲು ಇಂದು ಸಂಜೆ 4.30ಕ್ಕೆ ಮೊಗವೀರ ಸಭಾಭವನ ಚಿಕ್ಕಮ್ಮನ ಸಾಲು ರಸ್ತೆ ಕುಂದಾಪುರದಲ್ಲಿ ಸಾರ್ವಜನಿಕ ಶೃದ್ಧಾಂಜಲಿ ಸಭೆಯನ್ನು ಶ್ರೀ ಮೈಲಾರೇಶ್ವರ ಯುವಕ ಮಂಡಲ(ರಿ.),ಕುಂದಾಪುರ ಇವರು ಹಮ್ಮಿಕೊಂಡಿದ್ದಾರೆ.

ಈ ಸಭೆಗೆ ತಮ್ಮೆಲ್ಲರ ಉಪಸ್ಥಿತಿಯನ್ನು ಕೋರುವ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಶ್ರೀ ಮೈಲಾರೇಶ್ವರ ಯುವಕ ಮಂಡಲ(ರಿ.), ಕುಂದಾಪುರ  

Categories
ಅಪರಾಧ ಕರಾವಳಿ ಸುದ್ದಿ

ಜಾನುವಾರು ಕಳವು, ಹಾಗೂ ಅದರ ಅಂಗಾಂಗ ಪತ್ತೆಯಾದ ಪ್ರಕರಣ

ಬಂಟ್ವಾಳ : ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆ ಬಳಿ ಆಗಸ್ಟ್ 14 ರಂದು ನಡೆದ ಜಾನುವಾರು ಕಳವು ಹಾಗೂ ಮರುದಿನ ಅದರ ಅಂಗಾಂಗ ಪತ್ತೆಯಾದ ಪ್ರಕರಣ ಬೇಧಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಉಳ್ಳಾಲ-ಚೆಂಬುಗುಡ್ಡೆ ನಿವಾಸಿ ಇರ್ಶಾದ್ (34), ಮಂಗಳೂರು-ಕುದ್ರೋಳಿ ನಿವಾಸಿ ಮಹಮ್ಮದ್ ಮನ್ಸೂರ್ (48) ಹಾಗೂ ಮಂಗಳೂರು-ಕಣ್ಣೂರು ನಿವಾಸಿ ಅಬ್ದುಲ್ ಅಝೀಂ (18) ಎಂದು ಹೆಸರಿಸಲಾಗಿದೆ.

ಆಗಸ್ಟ್ 14 ರಂದು ತುಂಬೆ ಬಳಿ ಜಾನುವಾರು ಕಳವು ಹಾಗೂ ಅದರ ಅಂಗಾಗಗಳು ಮರುದಿನ ಅಲ್ಲೆ ಸಮೀಪದಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಶುಕ್ರವಾರ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆಯ ವೇಳೆ ಗುರುವಾರ (ಆಗಸ್ಟ್ 4) ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲೂ ಆರೋಪಿಗಳಾಗಿರುವುದು ತಿಳಿದುಬಂದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.