Categories
ಕರಾವಳಿ ಸುದ್ದಿ

ಅತ್ಯಾಚಾರ, ವಂಚನೆ ಪ್ರಕರಣ

ಪುತ್ತೂರು : ನಂಬಿಸಿ, ಅಕ್ರಮ ದೈಹಿಕ ಸಂಬಂಧ ಬೆಳೆಸಿ ಸಹಪಾಠಿ ವಿದ್ಯಾರ್ಥಿನಿಯನ್ನು ಗರ್ಭವತಿಯನ್ನಾಗಿ ಮಾಡಿ ಮದುವೆಯಾಗಲು ನಿರಾಕರಿಸಿ ವಂಚಿಸಿರುವ ಆರೋಪದಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಬಪ್ಪಳಿಗೆಯ 21 ವರ್ಷದ ಶ್ರೀಕೃಷ್ಣ ಜೆ ರಾವ್‌ಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

ನ್ಯಾಯಾಲಯದಲ್ಲಿ ಜಾಮೀನಿಗೆ ಸಂಬಂಧಿಸಿದ ಭದ್ರತೆ ಮತ್ತಿತರ ಪ್ರಕ್ರಿಯೆಗಳನ್ನು ಪೂರ್ಣಗೊಂಡ ನಂತರ  ಶ್ರೀಕೃಷ್ಣ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಪೊಲೀಸರ ಪ್ರಕಾರ, ಬಿಜೆಪಿ ನಾಯಕ ಜಗನ್ನಿವಾಸ ರಾವ್ ಅವರ ಮಗನಾಗಿರುವ ಆರೋಪಿ, 21 ವರ್ಷದ ಮಹಿಳೆಗೆ ಮದುವೆ ಭರವಸೆ ನೀಡಿದ ನಂತರ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದ. ಆಕೆ ಗರ್ಭಿಣಿಯಾದಾಗ, ಆಕೆಯನ್ನು ಮದುವೆಯಾಗಲು ಅವನು ನಿರಾಕರಿಸಿದನೆಂದು ಆರೋಪಿಸಲಾಗಿದೆ.ಇದರ ನಂತರ, ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಅವನ ವಿರುದ್ಧ ಅತ್ಯಾಚಾರ ಮತ್ತು ವಿಶ್ವಾಸ ದ್ರೋಹದ ಪ್ರಕರಣ ದಾಖಲಾಗಿತ್ತು.

Categories
ರಾಜ್ಯ ಸುದ್ದಿ

ಸಂಚಾರ ನಿಯಮ ಉಲ್ಲಂಘಿಸಿರುವ ದೃಶ್ಯಾವಳಿ ಸೆರೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಸುವ ಸರಕಾರಿ ಕಾರು 2024ರಿಂದ ಈವರೆಗೆ ಸಂಚಾರ ನಿಯಮಗಳ ಉಲ್ಲಂಘಿಸಿರುವುದು ಜಂಕ್ಷನ್‌ಗಳಲ್ಲಿ ಅಳವಡಿಸಿರುವ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಅವರಿಗೂ ದಂಡ ವಿಧಿಸ ಲಾಗಿದೆ!ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯ ಮಂತ್ರಿ ಹಾಗೂ ಗೃಹ ಸಚಿವರಿಗೆ ಝೀರೋ ಟ್ರಾಫಿಕ್ ಮೂಲಕ ಸಂಚರಿಸಲು ಅವಕಾಶವಿದ್ದು, ಸಂಚಾರ ನಿಯಮ ಉಲ್ಲಂಘ ನೆಗಳ ಆರೋಪಗಳು ತೀರ ಕಡಿಮೆ. ಆದರೆ, ನಗರದಲ್ಲಿ ಹೊಸ ದಾಗಿ ಅಳವಡಿಸಿರುವ ಕ್ಯಾಮೆರಾ ಸಿಎಂ ಸಂಚಾರ ನಿಯಮ ಉಲ್ಲಂಘಿಸಿರುವ ಬಗ್ಗೆ ವರದಿ ಮಾಡಿದ್ದು, ದಂಡ ಕೂಡ ವಿಧಿಸಿದೆ. ಸಿದ್ದರಾಮಯ್ಯ ಅವರು ಕಾರಿನ ಮುಂಭಾಗದಲ್ಲಿ ಕುಳಿತುಕೊಂಡಾಗ ಸೀಟು ಬೆಲ್ಟ್ ಧರಿಸದೇ ನಿಯಮ ಉ ಲ್ಲಂಘಿಸಿರುವ ದೃಶ್ಯಾವಳಿಯು ಜಂಕ್ಷನ್‌ಗಳಲ್ಲಿ ಅಳವಡಿಸಿರುವ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂನಲ್ಲಿ (ಐ ಟಿಎಂಎಸ್) ಸೆರೆಯಾಗಿದೆ.

ಸಂಚಾರ ನಿಯಮ ಉಲ್ಲಂಘನೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿಎಂ ಕಾರಿನ ಲ್ಲಿ ಕುಳಿತಿರುವ ಫೋಟೋ ಹಾಕಿ ದಂಡ ಕಟ್ಟುವಂತೆ ಸಾರ್ವಜ ನಿಕರು ಆಗ್ರಹಿಸಿದ್ದಾರೆ. ಅಲ್ಲದೆ, ತಾವೇ ದಂಡ ಕಟ್ಟಲು ಶೇ.50 ರ ಷ್ಟು ರಿಯಾಯಿತಿ ನೀಡಿದ್ದಾರೆ. ಸಪ್ಟೆಂಬರ್ 12ರವರೆಗೆ ಶೇ.50 ದಂಡ ರಿಯಾಯಿತಿ ಇದ್ದು ಹೀಗಾಗಿ ಕೇವಲ 2,500 ಸಾವಿರ ರೂ. ದಂಡ ಪಾವತಿ ಮಾಡುವಂತೆ ಒತ್ತಾಯಿಸಿದ್ದಾರೆಸದ್ಯ ಸರಕಾರಿ ಕಾರಿನ ಮೇಲಿದ್ದ ದಂಡ ವಿಧಿಸಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಗಮನಕ್ಕೆ ಬರುತ್ತಿದ್ದಂತೆ ಶೇ.50 ರಿಯಾಯಿತಿಯ ಲ್ಲಿ 2,500 ಸಾವಿರ ರೂಪಾಯಿ ಪಾವತಿಸಿದ್ದು, ಈ ಬಗ್ಗೆ ಸಂಚಾರ ಪೊಲೀಸ್‌ ವಿಭಾಗದ ಅಧಿಕಾರಿಯೊಬ್ಬರು ದೃಢಪ ಡಿಸಿದ್ದಾರೆ.

Categories
ಕರಾವಳಿ ಸುದ್ದಿ ಶಿಕ್ಷಣ

ಯುವ ಸಬಲೀಕರಣ ಉನ್ನತ ಅಗತ್ಯತೆ

ವಿದ್ಯಾರ್ಥಿಗಳು ಪಾಠ-ಪ್ರವಚನದ ಜೊತೆಗೆ ವಿವಿಧ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅವಶ್ಯಕವಾಗಿದ್ದು, ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಕೂಡ ಇದು ಸಹಾಯಕವಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಕೌಶಲ್ಯವು ಯುವ ಸಬಲೀಕರಣಕ್ಕೆ ನಾಂದಿಯಾಗಲಿದೆ. ಸಾಮಾನ್ಯರಿಂದ ವಿಶೇಷವಾಗಿ ಗುರುತಿಸಿಕೊಳ್ಳಲು ವಿದ್ಯಾರ್ಥಿಗಳು ನಿರಂತರ ಪ್ರಯತ್ನವನ್ನು ಮಾಡುತ್ತಲೇ ಇರಬೇಕು. ಹಾಗೂ ವಿವಿಧ ಸರ್ಟಿಫಿಕೇಟ್ ಪ್ರೋಗ್ರಾಂಗಳಲ್ಲಿ ಭಾಗವಹಿಸುವುದರ ಮೂಲಕ ಉದ್ಯೋಗ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಇದು ಉದ್ಯಮದ ಅಗತ್ಯವನ್ನು ಪೂರೈಸುತ್ತದೆ ಎಂದು ಅರ್ಪಣಾ ಭಟ್, ಮೆಂರ‍್ಸ್ ಫಾರ್ ಕಿಡ್ಸ್, ಫೌಂಡೇಶನ್ಸ್, ಬೆಂಗಳೂರು ಇವರು ತಿಳಿಸಿದರು. 

ಅವರು ಕೋಟೇಶ್ವರದ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕುಂದಾಪುರ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗ ಮತ್ತು ಮೆಂರ‍್ಸ್ ಫಾರ್ ಕಿಡ್ಸ್ ಫೌಂಡೇಶನ್, ಬೆಂಗಳೂರು ಇವರ ಸಂಯುಕ್ತಾಶ್ರಯದೊಂದಿಗೆ ಉನ್ನತ ಕೌಶಲ್ಯದ ಕುರಿತು ನಡೆದ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. 

ಮೆಂರ‍್ಸ್ ಫಾರ್ ಕಿಡ್ಸ್ ಫೌಂಡೇಶನ್, ಈ ಸಂಸ್ಥೆಯು ವಿವಿಧ ಸರ್ಟಿಫಿಕೇಟ್ ಪ್ರೋಗ್ರಾಂಗಳನ್ನು ಉಚಿತವಾಗಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಈ ಅವಕಾಶದ ಸದ್ಬಳಕೆಯನ್ನು ಮಾಡಿಕೊಳ್ಳಬೇಕೆಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧ, ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಇವರು ತಿಳಿಸಿದರು. ಐಕ್ಯೂಎಸಿ ಸಂಚಾಲಕರಾದ ನಾಗರಾಜ ಯು, ಉದ್ಯೋಗ ಮತ್ತು ಮಾಹಿತಿ ಕೋಶದ ಸಂಚಾಲಕರಾದ ಮನೋಹರ್ ಬಿ., ಕಾರ್ಯಕ್ರಮವನ್ನು ಆಯೋಜಿಸಿದ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ವಿದ್ಯಾ ಇವರು ಉಪಸ್ಥಿತರಿದ್ದರು.

Categories
ಕರಾವಳಿ ಸುದ್ದಿ

ಸರಕಾರಿ ಪ್ರೌಢಶಾಲೆ ಗುಂಡ್ಮಿ ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್ ವಿತರಣೆ

ಕೋಟ: ಸರಕಾರಿ ಪ್ರೌಢಶಾಲೆ ಗುಂಡ್ಮಿ ಇಲ್ಲಿ ಜೆಸಿಐ ಇದರ ಸೀನಿಯರ್ ಚೇಂಬರ್ ಸಾಸ್ತಾನ ಘಟಕದ ವತಿಯಿಂದ ಮನೋಜ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್ ವಿತರಣಾ ಕಾರ್ಯಕ್ರಮ ಜರಗಿತು.
ಸೀನಿಯರ್ ಚೇಂಬರ್ ಸಾಸ್ತಾನ ಘಟಕದ ಅಧ್ಯಕ್ಷ ಮನೋಜ್ ಕುಮಾರ್, ಸೀನಿಯರ್ ಚೇಂಬರ್ಸ್ ಇಂಟರ್ನಾ್ಯಷನಲ್ ಎಸ್‌ಸಿಐ ಇದರ ಪ್ರಮುಖರಾದ ಬಾಲಕೃಷ್ಣ ಪೂಜಾರಿ, ಅರವಿಂದ್ ಶರ್ಮ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಸುಜಾತ, ಗಣೇಶ್ ಜಿ , ಶಾಲಾ ಮುಖ್ಯೋಪಾಧ್ಯಾಯ ಸತೀಶ್ ಐತಾಳ್, ಬ್ರಹ್ಮಾವರ ತಾಲೂಕು ಸಮನ್ವಯ ಸಮಿತಿಯ ಸದಸ್ಯ ಕಾಪು ಅಶ್ಪಕ್,ಕೋಟ ಸಿ ಎ ಬ್ಯಾಂಕ್ ನಿರ್ದೇಶಕ ರವೀಂದ್ರ ಕಾಮತ್ ಇದ್ದರು.

Categories
ಕರಾವಳಿ ಸುದ್ದಿ

ಕ್ರಿಕ್ರೆಟ್ ಪಟುಗಳಿಗೆ ಹರೀಷ್ ಕುಮಾರ್ ಮಧ್ಯಸ್ಥ ಸಲಹೆ

ಕೋಟ: ಕ್ರೀಡಾ ಕ್ಷೇತ್ರದಲ್ಲಿ ಪ್ರತಿಯೊಬ್ಬರು ಸಾಧನೆಯ ಪಥದೊಂದಿಗೆ ಸಚಿನ್ ,ಕುಂಬ್ಳೆ ರೀತಿಯಲ್ಲಿ ಪ್ರಸಿದ್ಧಿ ಪಡೆಯಿರಿ ಎಂದು ಜಪಾನ್ ಮಿಯಾಜಾಕಿ ವಿಶ್ವವಿದ್ಯಾಲಯ ಪ್ರೊಫೆಸರ್ ಹರೀಶ್ ಕುಮಾರ್ ಮಧ್ಯಸ್ಥ ಕ್ರೀಡಾರ್ಥಿಗಳಿಗೆ ಕರೆ ನೀಡಿದರು.
ಗುರುವಾರ ಚೇತನಾ ಪ್ರೌಢ ಶಾಲಾ ಬಿ.ಡಿ ಶೆಟ್ಟಿ ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬ್ರಹ್ಮಾವರ,ಚೇತನಾ ಪ್ರೌಢಶಾಲೆ ಹಂಗಾರಕಟ್ಟೆ ಇಲ್ಲಿ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಕೂಟದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿ ಕ್ರೀಡಾ ಕ್ಷೇತ್ರ ಶೈಕ್ಷಣಿಕ ಸಾಧಕರೇ ಕ್ರೀಡಾಪಟುಗಳಾಗಬೇಕೆಂದಿಲ ಬದಲಾಗಿ ಸಾಧನೆ ತೊರುವ ಛಲ ಇದ್ದರೆ ಸಾಧಕನಾಗಿ ಹೊರಹೊಮ್ಮಲು ಸಾಧ್ಯ,ಪ್ರಸ್ತುತ ಕ್ರಿಕೆಟ್ ವಿಶ್ವಮಟ್ಟದ ಕ್ರೀಡೆಯಾಗಿ ಗುರುತಿಸಿಕೊಂಡಿದೆ.ಕ್ರಿಕೆಟ್ ಅಕಾಡೆಮಿ ಮೂಲಕ ಹೊಸ ಹೊಸ ಅವಿಷ್ಕಾರಗಳು ಕ್ರೀಡಾ ಜಗತ್ತನಲ್ಲಿ ಸಂಚಲನ ಮೂಡಿಸಿದೆ ಇದಕ್ಕೆ ಟಿ.೨೦ ಕ್ರಿಕೆಟ್ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮವನ್ನು ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನ ಅಂಜುಮ್ ಉದ್ಘಾಟಿಸಿದರು.ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಭರತ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಎಚ್. ಇಬ್ರಾಹಿಂ ಸಾಹೇಬ್, ಫಾರ್ಚುನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಚೇರ್‌ಮ್ಯಾನ್ ತಾರನಾಥ ಶೆಟ್ಟಿ, ಐರೋಡಿ ಪಂಚಾಯತ್ ಉಪಾಧ್ಯಕ್ಷೆ ಗೀತಾ ಶೆಟ್ಟಿ, ರೋಟರಿ ಕ್ಲಬ್ ಹಂಗಾರಕಟ್ಟೆ-ಸಾಸ್ತಾನ ಅಧ್ಯಕ್ಷೆಜ್ಯೋತಿ ಉದಯ್ ಕುಮಾರ್,ಶಾಲಾ ಆಡಳಿತ ಮಂಡಳಿಯ ಜೊತೆ ಕಾರ್ಯದರ್ಶಿ ವಿಘ್ನೇಶ್ವರ ಅಡಿಗ, ಉಡುಪಿ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ದೈಹಿಕ ಶಿಕ್ಷಕರ ಸಂಘ ಬ್ರಹ್ಮಾವರ ತಾಲೂಕು ಗ್ರೇಡ್ ೧ರ ಅಧ್ಯಕ್ಷ ಚಂದ್ರಶೇಖರ್,ದೈಹಿಕ ಶಿಕ್ಷಕರ ಸಂಘದ ಗ್ರೇಡ್ ೨ ಇದರ ಅಧ್ಯಕ್ಷ ಶ್ರೀಕಾಂತ್ ಸಾವಂತ್ ಉಪಸ್ಥಿತರಿದ್ದರು.ಬ್ರಹ್ಮಾವರ ವಲಯ ದೈಹಿಕ ಶಿಕ್ಷಣ ಪರಿವೀಕ್ಷಕ ನಿತ್ಯಾನಂದ ಶೆಟ್ಟಿ ಪ್ರಾಸ್ತಾವನೆ ಸಲ್ಲಿಸಿದರು. ಶಾಲಾಮುಖ್ಯ ಶಿಕ್ಷಕಿ ಕಲ್ಪನಾ ಶೆಟ್ಟಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಹರ್ಷವರ್ಧನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಗುರುವಾರ ಚೇತನಾ ಪ್ರೌಢ ಶಾಲಾ ಬಿ.ಡಿ ಶೆಟ್ಟಿ ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬ್ರಹ್ಮಾವರ,ಚೇತನಾ ಪ್ರೌಢಶಾಲೆ, ಹಂಗಾರಕಟ್ಟೆ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಕೂಟವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಜುಂ ಉದ್ಘಾಟಿಸಿದರು.ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಎಚ್. ಇಬ್ರಾಹಿಂ ಸಾಹೇಬ್, ಫಾರ್ಚುನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಚೇರ್‌ಮ್ಯಾನ್ ತಾರನಾಥ ಶೆಟ್ಟಿ ಉಪಸ್ಥಿತರಿದ್ದರು.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ದಕ್ಷಿಣಾಯನ

ವರ್ಷ : ಋತು

ಭಾದ್ರಪದ : ಮಾಸ

ಶುಕ್ಲ ಪಕ್ಷ

ಚತುರ್ದಶಿ: ತಿಥಿ 

         ಧನಿಷ್ಠೆ: ನಕ್ಷತ್ರ

ಶನಿವಾರ

06.09.2025

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಕರಾವಳಿ ಸುದ್ದಿ ಶಿಕ್ಷಣ

ಓಣಂ ಆಚರಣೆ

ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ ಸೆಪ್ಟೆಂಬರ್ 3ರಂದು ಓಣಂ ಹಬ್ಬವನ್ನು ಸಂಭ್ರಮದಿಂದ ಹಾಗೂ ಸಾಂಸ್ಕೃತಿಕ ಹೆಮ್ಮೆಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಒಟ್ಟಾಗಿ ಪಾಲ್ಗೊಂಡು ಹಬ್ಬವನ್ನು ಉತ್ಸಾಹಭರಿತವಾಗಿ ನಡೆಸಿದರು.ಕಾರ್ಯಕ್ರಮವನ್ನು ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜೆನಿಫರ್ ಫ್ರೀಡಾ ಮೆನೆಜ ಸ್ ಅವರಿಂದ ದೀಪ ಪ್ರಜ್ವಲನದೊಂದಿಗೆ ಆರಂಭಿಸಲಾಯಿತು.

ವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡ ಸಾಂಪ್ರದಾಯಿಕ ತಿರುವಾತಿರ ನೃತ್ಯ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿತ್ತು. ಈ ನೃತ್ಯವು ಕೇರಳದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸುಂದರವಾಗಿ ಪ್ರತಿಬಿಂಬಿಸಿತು. ನಂತರ ಪ್ರೇಕ್ಷಕರನ್ನು ಆಕರ್ಷಿಸಿದ ಮನರಂಜನಾತ್ಮಕ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಯಿತು.

ಪ್ರಾರಂಭದಲ್ಲಿ ಕು. ಸಿಂಸಿ ಸಭಿಕರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕು. ರಿಸನ್ನ ಓಣಂ ಹಬ್ಬದ ಮಹತ್ವವನ್ನು ಆಂಗ್ಲ ಭಾಷೆಯಲ್ಲಿ ವಿವರಿಸಿದರೆ, ಎನ್.ಎಸ್. ನಿಖಿತಾ ಅದನ್ನು ಕನ್ನಡದಲ್ಲಿ ವಿವರಿಸಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮನರಂಜನೆಯ ಆಟಗಳನ್ನು ಆಯೋಜಿಸಲಾಗಿತ್ತು ಮತ್ತು ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಸಂಯೋಜನೆ: ಶ್ರೀ ಚಂದ್ರಶೇಖರ್ ಅವರು ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಸಂಯೋಜಿಸಿದರು.
ಕು. ಟೆಸ್ಕಾ, ಕು. ಸೋನಾ, ಕು. ನಿಧಿ ಕಾರ್ಯಕ್ರಮವನ್ನು ನಿರೂಪಿಸಿದರು. ಕು. ಸೋನಾ ಅವರು ಧನ್ಯವಾದ ಗೈದರು. ಒಟ್ಟಿನಲ್ಲಿ ಓಣಂ ಹಬ್ಬವು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯರಲ್ಲಿ ಏಕತೆಯ ಭಾವನೆ ಹಾಗೂ ಸಾಂಸ್ಕೃತಿಕ ಮೆಚ್ಚುಗೆಯನ್ನು ಹೆಚ್ಚಿಸಿತು

Categories
ರಾಜ್ಯ ಸುದ್ದಿ

ಯೂಟ್ಯೂಬರ್ ಸಮೀ‌ರ್.ಎಂ.ಡಿ ಬೆಂಗಳೂರು ಬಾಡಿಗೆ ಮನೆಯಲ್ಲಿ ಶೋಧ ಅಂತ್ಯ

ಬೆಳ್ತಂಗಡಿ: ಎಐ ವಿಡಿಯೋ ಸಂಬಂಧ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಯೂಟ್ಯೂಬರ್ ಸ ಮೀ‌ರ್.ಎಂ.ಡಿ ಪೊಲೀಸರಿಗೆ ಸರಿಯಾಗಿ ತನಿಖೆಗೆ ಸಹಕರಿಸದ ಹಿನ್ನಲೆಯಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ನಾಗೇಶ್ ಕದ್ರಿ ಮ ತ್ತು ತಂಡ ಎಫ್.ಎಸ್.ಎಲ್ ವಿಭಾಗದ ಸೋಕೊ ಸಿಬ್ಬಂದಿ ಜೊತೆಯಲ್ಲಿ ಸೆ.4 ರಂದು ಮಧ್ಯಾಹ್ನ 1:40 ಕ್ಕೆ ಬೆಂಗಳೂರಿನ ಆ ನೇಕಲ್ ನಲ್ಲಿರುವ ಹುಲ್ಲಹಳ್ಳಿಯಲ್ಲಿರುವ ಬಾಡಿಗೆ ಮನೆಗೆ ಬೆಳ್ತಂಗಡಿ ನ್ಯಾಯಾಲಯದಿಂದ ಸೆ.3 ರಂದು ಸರ್ಚ್ ವಾರಂಟ್ ಪಡೆದು ದಾಳಿ ನಡೆಸಿದ್ದರು. ಮನೆಯಲ್ಲಿ ಶೋಧ ಕಾರ್ಯವನ್ನು ರಾತ್ರಿ 7:30 ಕ್ಕೆ ಅಂತ್ಯ ಮಾಡಿ ಬೆಳ್ತಂಗಡಿ ಪೊಲೀಸರು ವಾಪಸ್ ತೆರಳಿದ್ದಾರೆ.

ಸಮೀರ್ ಮನೆಯಿಂದ ವಿಡಿಯೋ ಎಡಿಟಿಂಗ್ ಮಾಡಲು ಬಳ ಸಿದ ಕಂಪ್ಯೂಟರ್, ಸಿಪಿಯು, ಐಫೋನ್ ಮೊಬೈಲ್ ಫೋನ್, ವೈಫೈ ರೂಟರ್,ಕ್ಯಾಮರ, ಅಧಾರ್ ದಾಖಲೆ ಹಾಗೂ ಕೆಲ ದಾಖಲೆಗಳನ್ನು ಫೋನ್ ಸೋಕೋ ಸಿಬ್ಬಂದಿಗಳ ಸಮ್ಮುಖದಲ್ಲಿ ಪೊಲೀಸರು ಮಹಜರು ನಡೆಸಿ ವಶಪಡಿಸಿಕೊಂಡಿದ್ದಾರೆ.

Categories
ಅಪರಾಧ ಕರಾವಳಿ ಸುದ್ದಿ

ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ

ಉಡುಪಿ : ವ್ಯಕ್ತಿಯೊಬ್ಬರಿಗೆ ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂ. ಆನ್‌ಲೈನ್ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹೆನ್ರಿ ಡಿ ಅಲ್ಮೇಡಾ(69) ಹಣ ಕಳೆದುಕೊಂಡ ವ್ಯಕ್ತಿ.

ಹೆನ್ರಿ ಡಿ ಅಲ್ಮೇಡಾ ಜು.19ರಂದು ಫೇಸ್‌ಬುಕ್‌ನಲ್ಲಿ ಇನ್ವೆಸ್ಟ್ ಮೆಂಟ್ ಟ್ರೇಡಿಂಗ್ ಮಾಡುವುದರ ಬಗ್ಗೆ ಜಾಹಿರಾತನ್ನು ನೋಡಿದ್ದು, ಅದನ್ನು ಕ್ಲಿಕ್ ಮಾಡಿದಾಗ ಲಿಂಕ್ ಓಪನ್ ಆಗಿತ್ತು. ಬಳಿಕ ಹೆನ್ರಿ ಅವರ ವಾಟ್ಸಾಪ್‌ಗೆ ಟ್ರೇಡಿಂಗ್ ಹೂಡಿಕೆ ಮಾಡುವಂತೆ ಸಂದೇಶ ಬಂದಿದ್ದು, ಅಂಕಿತಾ ಘೋಷ್ ಎಂಬಾತ ಕರೆ ಮಾಡಿ ಹೂಡಿಕೆ ಬಗ್ಗೆ ಮಾಹಿತಿ ತಿಳಿಸಿ ವಾಟ್ಸಾಪ್ ಗ್ರೂಪ್‌ಗೆ ಸೇರ್ಪಡೆ ಮಾಡಿದರು.

ಆ ಗ್ರೂಪಿನಲ್ಲಿನ ವಿವಿಧ ನಂಬರ್‌ಗಳಲ್ಲಿ ಹೂಡಿಕೆ ಮಾಡಿದರೆ ಲಾಭಾಂಶ ಗಳಿಸಬಹುದು ಎಂಬ ಸಂದೇಶಗಳಿದ್ದು, ಅದನ್ನು ನಂಬಿದ ಹೆನ್ರಿ, ಜು.22ರಿಂದ ಸೆ.1ರವರೆಗೆ ಹಂತ ಹಂತವಾಗಿ ಒಟ್ಟು 1,32,90,000 ರೂ. ಹಣವನ್ನು ಹೂಡಿಕೆ ಮಾಡಿದರು. ತದನಂತರ ಆರೋಪಿಗಳು ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನಾಗಲಿ ನೀಡದೇ ನಂಬಿಸಿ ಮೋಸ ಮಾಡಿರುವುದಾಗಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ

Categories
ಕರಾವಳಿ ಸುದ್ದಿ ಶಿಕ್ಷಣ

“ಮುದ್ದು ಕೃಷ್ಣ ಸ್ಪರ್ಧೆಯ ಆತ್ಮೀಯ ಕರೆಯೋಲೆ”

ಭಗವಂತ ಮಹಾವಿಷ್ಣುವಿನ ‘ದಶಾವತಾರ’ಗಳಲ್ಲಿ ಎಂಟನೆಯ ಅವತಾರಿಯಾಗಿ ದ್ವಾಪರ ಯುಗದ ಮಥುರಾ ನಗರದಲ್ಲಿ ಭಾದ್ರಪದ ಮಾಸದ ಕೃಷ್ಣ ಪಕ್ಷದ ಎಂಟನೆಯ ದಿನದಂದು (ಅಷ್ಟಮಿ) ದೇವಕಿ-ವಸುದೇವರಿಗೆ ರೋಹಿಣಿ ನಕ್ಷತ್ರದಲ್ಲಿ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಶ್ರೀಕೃಷ್ಣ ಪರಮಾತ್ಮನು ಜನಿಸಿದ ಈ ಪುಣ್ಯ ದಿನದ ಪ್ರಯುಕ್ತ ನಾಡಿನಾದ್ಯಂತ “ಶ್ರೀ ಕೃಷ್ಣ ಜನ್ಮಾಷ್ಟಮಿ” ದಿನವನ್ನು ಸೆಪ್ಟೆಂಬರ್ 7ರಂದು ಆಚರಿಸುತ್ತಾರೆ. ಅದರಲ್ಲೂ ಉಡುಪಿ ಜಿಲ್ಲೆಯ ಕೇಂದ್ರಬಿಂದುವಾದ ಈ ಸಡಗರದ ‘ಶ್ರೀ ಕೃಷ್ಣಜನ್ಮಾಷ್ಟಮಿ’ ದಿನದ ಅಂಗವಾಗಿ ಸೆಪ್ಟೆಂಬರ್ 7ರಂದು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ‘ಮುದ್ದು ಕೃಷ್ಣ ಸ್ಪರ್ಧೆ’ಯನ್ನು ಈ ನಾಡಿನ ಚಿಣ್ಣರಿಗೆ ಹಮ್ಮಿಕೊಂಡಿದ್ದಾರೆ.

ಈ ಸ್ಪರ್ಧೆಯು ಎರಡು ವಿಭಾಗಗಳಲ್ಲಿ ನಡೆಯಲಿದ್ದು, 1 ರಿಂದ 3 ವರ್ಷದೊಳಗಿನ ಹಾಗೂ 3 ವರ್ಷ ಮೇಲ್ಪಟ್ಟು 6 ವರ್ಷದೊಳಗಿನ ಮಕ್ಕಳಿಗೆ ಸಂಸ್ಥೆಯ ನಿಯಮಗಳಿಗನುಗುಣವಾಗಿ ಪ್ರಥಮ 7,000/-, ದ್ವಿತೀಯ 5,000/-, ತೃತೀಯ 3,000/-ಗಳೊಂದಿಗೆ ನಡೆಸಲು ತೀರ್ಮಾನಿಸಿದ್ದಾರೆ.. ಭಾಗವಹಿಸುವ ಪ್ರತಿ ಮಗುವಿಗೂ ಸಹ ಪ್ರಶಂಸನಾ ಪತ್ರದೊಂದಿಗೆ ಆಕರ್ಷಕ ಬಹುಮಾನಗಳನ್ನು ನೀಡುವ ಸಂಕಲ್ಪವನ್ನು ಮಾಡಿರುತ್ತಾರೆ. ನಮ್ಮ ಈ ನಾಡಿನ ಸಮಸ್ತ ಜನತೆಯು ಈ ಭಗವಂತನ ಲೀಲೆಗಳನ್ನು ಪ್ರಚುರಪಡಿಸುವ “ಈ ನಮ್ಮ ಎಕ್ಸಲೆಂಟ್ ಆವರಣದ ವೇದಿಕೆಯ ಚಿಣ್ಣರ ಅಂಗಳಕ್ಕೆ ಆಗಮಿಸುವಂತೆ ಆತ್ಮೀಯ ಕರೆಯೋಲೆಯನ್ನು ನೀಡುತ್ತಿದ್ದೇವೆ ಬನ್ನಿ ನಿಮ್ಮ ಮಕ್ಕಳೊಂದಿಗೆ ಈ ಸುಂದರ ಕಾರ್ಯಕ್ರಮವನ್ನು ಚಂದಗಾಣಿಸಿ” ಎನ್ನುವ ಆಶಯಗಳೊಂದಿಗೆ, ಆಡಳಿತಮಂಡಳಿ, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು ಹಾಗೂ ಬೋಧಕ – ಬೋಧಕೇತರ ಸಿಬ್ಬಂಧಿ ವರ್ಗದವರು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು & ಹೈಸ್ಕೂಲ್ ಸುಣ್ಣಾರಿ, ಕುಂದಾಪುರ ತಿಳಿಸಿದ್ದಾರೆ