ಶುಭ ದಿನದ ಪಂಚಾಂಗ
ಕಲಿಯುಗಾಬ್ದ 5127
ವಿಶ್ವಾವಸು ಸಂವತ್ಸರ
ದಕ್ಷಿಣಾಯನ
ವರ್ಷ : ಋತು
ಭಾದ್ರಪದ : ಮಾಸ
ಶುಕ್ಲ ಪಕ್ಷ
ದ್ವಾದಶಿ: ತಿಥಿ
ಉತ್ತರಾಷಾಢ: ನಕ್ಷತ್ರ
ಗುರುವಾರ
04.09.2025
ಈ ದಿನ ಎಲ್ಲರಿಗೂ ಶುಭವಾಗಲಿ


ಕುಂದಾಪುರ : ಭಾವನೆಗಳು, ಮಾತುಗಳು ಅಭಿವ್ಯಕ್ತಗೊಳ್ಳುವುದೇ ಭಾಷೆಯ ಮೂಲಕ. ಅತೀಯಾದ ತಂತ್ರಜ್ಞಾನದ ಬಳಕೆಯಲ್ಲಿ ತೊಡಗಿರುವ ಯುವಜನತೆ ಭಾಷಾ ಬಳಕೆಯ ಶುದ್ಧೀಕರಣ ಮತ್ತು ಎಚ್ಚರವನ್ನು ಅರಿಯಬೇಕು. ಓದಿನ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳುವುದರ ಜೊತೆಗೆ ಭಾಷೆ ಮತ್ತು ಭಾಷಾಂತರದ ಕುರಿತು ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಬಾರ್ಕೂರಿನ ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ನಿವೃತ್ತ ಇಂಗ್ಲೀಷ್ ಉಪನ್ಯಾಸಕರಾದ ಶ್ರೀ ರಾಮ ಭಟ್ ಸಜಂಗದ್ದೆ ಹೇಳಿದರು.
ಅವರು ಇಲ್ಲಿನ ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಾಹಿತ್ಯ ವೇದಿಕೆಯ ಪ್ರಸ್ತುತ ಶೈಕ್ಷಣಿಕ ವರ್ಷದ ವಾರ್ಷಿಕ ಚಟುವಟಿಕೆಗಳನ್ನು ವಿದ್ಯಾರ್ಥಿಗಳ ಮತ್ತು ಪ್ರಾಧ್ಯಾಪಕರ ಪರಿಕಲ್ಪನೆಯಲ್ಲಿ ವಿನೂತನವಾಗಿ ಮೂಡಿಬಂದ ಲಿಂಗ್ವ ಕಲ್ಪವೃಕ್ಷಕ್ಕೆ ನೀರೆರೆಯುವ ಮೂಲಕ ಚಾಲನೆ ನಿಡಿದರು.
ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ನಿರಂತರವಾಗಿ ತೊಡಗಿಕೊಂಡಾಗ ಭವಿಷ್ಯದ ಬದುಕಿನಲ್ಲಿ ಯಶಸ್ಸು ಸಾಧ್ಯ ಎಂದರು. ಇದೇ ಸಂದರ್ಭ ಐಕ್ಯೂಎಸಿ ಸಂಯೋಜಕಿ ಶ್ರೀಮತಿ ದೀಪಿಕಾ ಜಿ., ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಪ್ರವೀಣಾ ಎಮ್. ಪೂಜಾರಿ, ಶ್ರೀಮತಿ ಸ್ವಾತಿ ಜಿ. ರಾವ್, ಡಾ| ದೀಪಾ, ಶ್ರೀಮತಿ ಮೇಘಾ ಎಸ್. ಭಟ್, ವಿದ್ಯಾರ್ಥಿಗಳಾದ ಶರತ್, ರಕ್ಷಿತಾ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಸಿಂಚನಾ ಸ್ವಾಗತಿಸಿ, ವಾಣಿಶ್ರೀ ಉದ್ಘಾಟಕರನ್ನು ಪರಿಚಯಿಸಿ, ಶ್ರೇಯಾ ಖಾರ್ವಿ ಪ್ರಾರ್ಥಿಸಿ, ಲಾವಣ್ಯ ವಂದಿಸಿ, ನಿರೀಕ್ಷಾ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪುರ:ಶ್ರೇಯಾ ಪೂಜಾ ಶೆಟ್ಟಿ ಆಯುಶ್ ಪೃಥ್ವೀಶ್ ಹೆಬ್ಬಾರ್ ನಿಖಿತಾ ಆರ್. ಪೂಜಾರಿ ಯಶವಂತ
ಕುAದಾಪುರ (ಸೆ.1): ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ ನಡೆಸುವ ಸಿ.ಎಸ್. ಎಕ್ಸಿಕ್ಯೂಟಿವ್ ಗ್ರೂಪ್-I, ಗ್ರೂಪ್-II ಮತ್ತು ಸಿ.ಎಂ.ಎ. ಇಂಟರ್‌ಮೀಡಿಯೆಟ್ ಗ್ರೂಪ್-I ಜೂನ್ ನಲ್ಲಿ ನಡೆದ ಪರೀಕ್ಷೆಯಲ್ಲಿ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಉತ್ಕೃಷ್ಟ್ಟ ಸಾಧನೆಗೈದಿದ್ದಾರೆ.






ಶ್ರೇಯಾ, ಪೂಜಾ ಶೆಟ್ಟಿ, ಆಯುಶ್, ಪೃಥ್ವೀಶ್ ಹೆಬ್ಬಾರ್ ಸಿ.ಎಸ್. ಎಕ್ಸಿಕ್ಯೂಟಿವ್ ಗ್ರೂಪ್-I ರಲ್ಲಿ, ನಿಖಿತಾ ಆರ್. ಪೂಜಾರಿ ಗ್ರೂಪ್-II ರಲ್ಲಿ ಹಾಗೂ ಯಶವಂತ ಸಿ.ಎಂ.ಎ. ಇಂಟರ್‌ಮೀಡಿಯೆಟ್ ಗ್ರೂಪ್-I ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಹಾಗೂ ವೀ-ರೀಚ್ ಸಂಸ್ಥೆಯ ಪಠ್ಯ ಪ್ರವಚನ, ಮಧ್ಯಂತರ ಮಾದರಿ ಪರೀಕ್ಷೆ ಹಾಗೂ ನುರಿತ ತರಬೇತುದಾರರಿಂದ ತರಬೇತಿ, ಸಲಹೆ ಮತ್ತು ಮಾರ್ಗದರ್ಶನ ಪಡೆದು ವಿದ್ಯಾರ್ಥಿಗಳು ಈ ಸಾಧನೆಗೈದಿದ್ದಾರೆ.
ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ-ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ
ಕುಂದಾಪುರ: ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಲಲಿತಕಲಾ ಸಂಘ ಹಾಗೂ ಸಾಹಿತ್ಯ ಸಂಘದ ಜಂಟಿ ಆಶ್ರಯದಲ್ಲಿ “ಗಣೇಶ ಉತ್ಸವ – 2025″ನ್ನು ಸಂಭ್ರಮದಿಂದ ಆಚರಿಸಲಾಯಿತು. ಪ್ರತಿ ವರ್ಷವೂ ಕಾಲೇಜಿನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ವರ್ಷದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ರಚಿಸಿದ ವೇದಿಕೆಯಲ್ಲಿ ಸಂಭ್ರಮಾಚರಣೆ ನಡೆಸಲಾಯಿತು. ವಿಶೇಷವಾಗಿ ದ್ವಿತೀಯ ಬಿಸಿಎ ವಿದ್ಯಾರ್ಥಿನಿ ರಮಿತಾ ಬಿಡಿಸಿದ ಗಣೇಶನ ಚಿತ್ರವನ್ನು ಪೂಜಿಸಲಾಯಿತು. ಹಾಗೂ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಹರ್ಷಿತಾ ರಚಿಸಿದ ಗಣೇಶನ ಚಿತ್ರಪಟ ವಿಶೇಷ ಆಕರ್ಷಣೆಯಾಗಿತ್ತು. ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಗಣೇಶನ ಜನನ ಕಥನವನ್ನು ಅಭಿನಯ ಮತ್ತು ನೃತ್ಯದ ರೂಪಕದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು, ಸಂಸ್ಥೆಯ ಬ್ರ್ಯಾಂಡ್ ಬಿಲ್ಡಿಂಗ್ ನಿರ್ದೇಶಕರು, ಉಪ ಪ್ರಾಂಶುಪಾಲರು, ಲಲಿತಾ ಕಲಾ ಸಂಘ ಹಾಗೂ ಸಾಹಿತ್ಯ ಸಂಘದ ಸಂಯೋಜಕರು ಮತ್ತು ವಿದ್ಯಾರ್ಥಿ ಸಂಯೋಜಕರು, ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಕು. ಶ್ರೀ ರಕ್ಷಾ ನಿರೂಪಿಸಿದರು.
ಹೈದರಾಬಾದ್ : ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಮೇರೆಗೆ ಶಾಸಕಿ – ಕೆ. ಕವಿತಾ ಅವರನ್ನು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್ ) ಪಕ್ಷದಿಂದ ಮಂಗಳವಾರ ಅಮಾನತುಗೊಳಿಸಲಾಗಿದೆ. ಪಕ್ಷದೊಳಗೆ ಆಂತರಿಕ ಕಲಹ ತೀವ್ರವಾಗಿದೆ ಎಂಬ ವರದಿಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ.
ಹಿಂದಿನ ಬಿಆರ್‌ಎಸ್ ‘ಆಡಳಿತಾವಧಿಯಲ್ಲಿ ಕೈಗೊಂಡ ಕಾಳೇಶ್ವರಂ ಯೋಜನೆಯಲ್ಲಿನ ಅಕ್ರಮಗಳ ಕುರಿತು ತೆಲಂಗಾಣ ಸರಕಾರ ಇತ್ತೀಚೆಗೆ ಸಿಬಿಐ ತನಿಖೆಗೆ ಆದೇಶಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ್ದ ಕವಿತಾ ಅವರು “ಈ ಯೋಜನೆ ಕುರಿತು ನನ್ನ ತಂದೆ ಕೆಸಿಆರ್ ಅವರ ವರ್ಚಸ್ಸಿಗೆ ಧಕ್ಕೆಯಾಗಿದ್ದರೆ, ಅದಕ್ಕೆಬಿಆರ್‌ಎಸ್ ನಾಯಕರಾದ ಟಿ. ಹರೀಶ್ ದ ರಾವ್ ಮತ್ತು ಜೆ. ಸಂತೋಷ್ ಕುಮಾರ್ ಅವರೇ ಕಾರಣ. ಇವರಿಬ್ಬರೂ ಸಿಎಂ ರೇವಂತ್ ರೆಡ್ಡಿ ಜತೆ ಒಳ ಒಪ್ಪಂದ ಮಾಡಿಕೊಂಡಿ ದ್ದಾರೆ,” ಎಂದು ಆರೋಪಿಸಿ ದ್ದರು. ಇದು ಪಕ್ಷದೊಳಗೆ ಬಿರುಗಾಳಿ ಎಬ್ಬಿಸಿತ್ತು.
ಕವಿತಾ ಅವರ ಮತ್ತು ಪಕ್ಷ ವಿರೋಧಿ ಚಟು ವಟಿಕೆಗಳು ಬಿಆರ್‌ಎಸ್‌ಗೆ ಧಕ್ಕೆ “ಇತ್ತೀಚಿನ ದಿನಗಳಲ್ಲಿನ ನಡವಳಿಕೆ గుంటు ಮಾಡಿವೆ. ನಾಯಕತ್ವವು ಇದನ್ನು ಗಂಭೀರವಾಗಿ ಪರಿಗಣಿಸಿ ಅವರನ್ನು ಪಕ್ಷದಿಂದ ಅಮಾ ನತುಗೊಳಿಸಿದೆ,” ಎಂದು ಬಿಆರ್‌ಎಸ್ ಪ್ರಧಾನ ಕಾಠ್ಯದರ್ಶಿಗಳಾದ ಟಿ. ರವೀಂದ್ರ ರಾವ್ ಮತ್ತು ಸೋಮ ಭರತ್ ಕುಮಾರ್ ಅವರು ಮಾಧ್ಯಮಗಳಿಗೆ ತಿಳಿಸಿದರು
ಮಂಗಳೂರು : ತಾಲ್ಲೂಕಿನ ಕಂದಾವರದ ನಿವಾಸಿ ನಿತಿನ್, ಮೂಡುಪೆರಾರ ನಿವಾಸಿಗಳಾದ ಸದಾನಂದ, ರಾಜೇಶ್, ರವಿರಾಜ್ ಮತ್ತು ಬಜಪೆ ನಿವಾಸಿ ಪ್ರವೀಣ್ ಫರ್ನಾಂಡಿಸ್ ಬಂಧಿತ ಆರೋಪಿಗಳು.
ಆ.30ರಂದು ಬೆಂಗಳೂರಿನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳಾ ಪ್ರಯಾಣಿಕರೊಬ್ಬರು ಬ್ಯಾಗೇಜ್ ಬೆಲ್ ನಿಂದ ತಮ್ಮ ಲಗೇಜ್‌ನ್ನು ಪಡೆದು ಚೆಕ್ ಮಾಡಿದಾಗ 56 ಗ್ರಾಂ ತೂಕದ ಚಿನ್ನಾಭರಣ(ಮೌಲ್ಯ 4,50,000) ಕಳವಾಗಿತ್ತು. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಜಪೆ ಪೊಲೀಸರು ಕೆಲವೊಂದು ಅನುಮಾನದ ಮೇಲೆ ವಿಚಾರಣೆ ನಡೆಸಿದಾಗ ಲೋಡರ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದ ನಿತಿನ್, ಸದಾನಂದ, ರಾಜೇಶ್ ಮತ್ತು ಪ್ರವೀಣ್‌ನನ್ನು ಚಿನ್ನಾಭರಣ ಕಳವು ಮಾಡಿರುವುದಾಗಿ ಒಪ್ಪಿದ್ದಾರೆ.
ಈ ಚಿನ್ನಾಭರಣವನ್ನು ರವಿರಾಜ್ ಗೆ ಮಾರಾಟ ಮಾಡಿದ್ದು, ಆರೋಪಿಗಳಿಂದ ಸುಮಾರು 50 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ. ರವಿರಾಜ್ ಎಂಬಾತನನ್ನು ಕೂಡ ಕಳವು ಮಾಲನ್ನು ಸ್ವೀಕರಿಸಿದ 317(2)ಬಿ ಎನ್‌ಎಸ್ ಆರೋಪದ ಮೇರೆಗೆ ಬಂಧಿಸಲಾಗಿದೆ.ಬಂಧಿತ ಎಲ್ಲ ಆರೋಪಿಗಳು ಸುಮಾರು 9 ವರ್ಷಗಳಿಂದ ಏರ್ ಇಂಡಿಯಾ ಸ್ಯಾಟ್ಸ್ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಸುಡಾನ್: ದೇಶದ ಢಾರ್‌ಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಭೂಕುಸಿತಕ್ಕೆ 1,000ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ಅಚ್ಚರಿಯ ರೀತಿಯಲ್ಲಿ ಇಡೀ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ. ಭಾರಿ ಮಳೆಯ ಬಳಿಕ ಈ ದುರಂತ ಸಂಭವಿಸಿದ್ದು ಮರಾರ್ ಪರ್ವತ ಪ್ರದೇಶದಲ್ಲಿರುವ ತಾರಾಸಿನ್ ಓ ಎಂಬ ಗ್ರಾಮವು ಸಂಪೂರ್ಣ ನಾಶವಾಗಿದೆ ಎಂದು ಸುಡಾನ್ ವಿಮೋಚನಾ ಸೇನೆ ಹೇಳಿದೆ. ಮಣ್ಣಿನ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸಲು ನೆರವಿಗಾಗಿ ವಿಶ್ವಸಂಸ್ಥೆಗೆ ಮನವಿ ಮಾಡಿದೆ.

ಉಡುಪಿ: ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಐದನೇ ವರ್ಷದ ವಿದ್ಯಾ ವಿನಾಯಕ ಮಹೋತ್ಸವ ಅದ್ದೂರಿಯಾಗಿ ಸಂಪನ್ನಗೊಂಡಿತು. ಆಗಸ್ಟ್ 27ರಂದು ಬೆಳಗ್ಗೆ ಗಣ ಹೋಮ ಮತ್ತು ಗಣಪತಿ ಮೂರ್ತಿಯ ಪ್ರತಿಷ್ಠಾಪನೆಯೊಂದಿಗೆ ಭಜನಾ ಕಾರ್ಯಕ್ರಮಗಳ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು ಆಗಸ್ಟ್ 28 ರಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಸುಧೀರ್ ರಾಜ್ ಅವರು ಚಿಂತನ ಮಂಥನ ಕಾರ್ಯಕ್ರಮದ ಅತಿಥಿಯಾಗಿದ್ದರು. ತ್ರಿಶಾ ವಿದ್ಯಾ ಕಾಲೇಜು ಮತ್ತು ತ್ರಿಶಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸುಮಾರು 15,33,500 ವರೆಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕೊನೆಯ ದಿನದಂದು ವಿಸರ್ಜನಾ ಸಂದರ್ಭದಲ್ಲಿ ಮಹಾಪೂಜೆಯೊಂದಿಗೆ ಅಷ್ಟಾವಧಾನ ಸೇವೆ ಶಂಖ ಜಾಗಟೆ ಗಂಟಾನಾದ , ನೃತ್ಯ, ವೇದ ಘೋಷ, ಅಷ್ಠಕವನ್ನ ಗಣೇಶನಿಗೆ ಸಲ್ಲಿಸಲಾಯಿತು. ತ್ರಿಶಾ ಸಂಸ್ಥೆಯ ಸಂಸ್ಥಾಪಕರು ಸಿ.ಎ ಗೋಪಾಲಕೃಷ್ಣ ಭಟ್, ತ್ರಿಶಾ ಸಂಸ್ಥೆಯ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಮತ್ತು ಎಸ್. ವಿ. ಎಸ್ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ, ಸತ್ಯೇಂದ್ರ ಪೈ, ಎಸ್. ವಿ. ಎಸ್ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು , ಊರವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪಣಿಯಾಡಿ ಶ್ರೀ ಲಕ್ಷ್ಮೀ ಅನಂತಾಸನ ಶ್ರೀ ಅನಂತಪದ್ಮನಾಭ ದೇವಸ್ಥಾನದ ಲ್ಲಿ ದಿನಾಂಕ 6.9.25 ಶನಿವಾರ ಅನಂತ ಚತುರ್ದಶಿ ವ್ರತಾಚರಣೆ (ನೊಂಪು) ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳಿಂದ ವಿಶೇಷ ಅನಂತ ಕದಳಿ ಸಮರ್ಪಣೆ ಸೇವೆ ನಡೆಯಲಿದೆ.
ಧಾರ್ಮಿಕ ವಿಧಿ ವಿಧಾನಗಳಾದ ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಕಲ್ಪೋಕ್ತ ಪೂಜೆ ಹಾಗೂ ಮಹಾಪೂಜೆ ನಡೆಯಲಿದೆ. ಅನಂತ ವಿಪ್ರ ಬಳಗದ ಸದಸ್ಯರಿಂದ ಗೀತಾ ಪಾರಾಯಣ, ಲಕ್ಷ್ಮೀ ಶೋಭಾನೆ,ವಿಷ್ಣು ಸಹಸ್ರನಾಮ ನಾಮಾವಾಳಿ ಪಠಣ ನಡೆಯಲಿದೆ.
ಇದೇ ಸಂದರ್ಭದಲ್ಲಿ ವ್ರತಾದಾರಿಗಳಿಗೆ ಅನಂತ ಸೂತ್ರಧಾರಾಣೆ ಮಹಾ ಅನ್ನ ಸಂತರ್ಪಣೆ ನಡೆಯಲಿದೆ.ಅಪರಾಹ್ನ ವಿವಿಧ ಭಜನಾ ತಂಡಗಳಿಂದ ವಿಶೇಷ ಭಜನಾ ಗಾಯನ, ವಿಶೇಷ ಕೊಳಲುವಾದನ, ರಾತ್ರಿ ಪೂಜೆ, ಹೂವಿನ ಪೂಜೆ, ರಂಗಪೂಜೆ, ಅಷ್ಟಾವಾಧನ ಸೇವೆ ನಡೆಯಲಿದೆ.ಸಕಲ ಸಧ್ಭಕ್ತರು ಸಕುಟುಂಬ ಸಮೇತರಾಗಿ ಭಾಗವಹಿಸಿ ತನು ಮನ ಧನ ಗಳಿಂದ ಸಹಕರಿಸಿ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಿರಿ.ಆಡಳಿತ ಮಂಡಳಿ ಶ್ರೀ ಪುತ್ತಿಗೆ ಮಠ,ಜೀರ್ಣೋದ್ಧಾರ ಸಮಿತಿ, ಅನಂತ ವಿಪ್ರ ಬಳಗ, ಹಾಗೂ ಊರಿನ ಹತ್ತು ಸಮಸ್ತರು