ಮಂಗಳೂರು : ತಾಲ್ಲೂಕಿನ ಕಂದಾವರದ ನಿವಾಸಿ ನಿತಿನ್, ಮೂಡುಪೆರಾರ ನಿವಾಸಿಗಳಾದ ಸದಾನಂದ, ರಾಜೇಶ್, ರವಿರಾಜ್ ಮತ್ತು ಬಜಪೆ ನಿವಾಸಿ ಪ್ರವೀಣ್ ಫರ್ನಾಂಡಿಸ್ ಬಂಧಿತ ಆರೋಪಿಗಳು.
ಆ.30ರಂದು ಬೆಂಗಳೂರಿನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳಾ ಪ್ರಯಾಣಿಕರೊಬ್ಬರು ಬ್ಯಾಗೇಜ್ ಬೆಲ್ ನಿಂದ ತಮ್ಮ ಲಗೇಜ್‌ನ್ನು ಪಡೆದು ಚೆಕ್ ಮಾಡಿದಾಗ 56 ಗ್ರಾಂ ತೂಕದ ಚಿನ್ನಾಭರಣ(ಮೌಲ್ಯ 4,50,000) ಕಳವಾಗಿತ್ತು. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಜಪೆ ಪೊಲೀಸರು ಕೆಲವೊಂದು ಅನುಮಾನದ ಮೇಲೆ ವಿಚಾರಣೆ ನಡೆಸಿದಾಗ ಲೋಡರ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದ ನಿತಿನ್, ಸದಾನಂದ, ರಾಜೇಶ್ ಮತ್ತು ಪ್ರವೀಣ್‌ನನ್ನು ಚಿನ್ನಾಭರಣ ಕಳವು ಮಾಡಿರುವುದಾಗಿ ಒಪ್ಪಿದ್ದಾರೆ.
ಈ ಚಿನ್ನಾಭರಣವನ್ನು ರವಿರಾಜ್ ಗೆ ಮಾರಾಟ ಮಾಡಿದ್ದು, ಆರೋಪಿಗಳಿಂದ ಸುಮಾರು 50 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ. ರವಿರಾಜ್ ಎಂಬಾತನನ್ನು ಕೂಡ ಕಳವು ಮಾಲನ್ನು ಸ್ವೀಕರಿಸಿದ 317(2)ಬಿ ಎನ್‌ಎಸ್ ಆರೋಪದ ಮೇರೆಗೆ ಬಂಧಿಸಲಾಗಿದೆ.ಬಂಧಿತ ಎಲ್ಲ ಆರೋಪಿಗಳು ಸುಮಾರು 9 ವರ್ಷಗಳಿಂದ ಏರ್ ಇಂಡಿಯಾ ಸ್ಯಾಟ್ಸ್ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.