Categories
ಕರಾವಳಿ ಸುದ್ದಿ

ಭಗವದ್ಗೀತಾ ಡಿಪ್ಲೊಮಾ ಕೋರ್ಸ್ ಉದ್ಘಾಟನೆ

ಉಡುಪಿ : ನಿಟ್ಟೆ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ವ್ಯವಸ್ಥಾ ಕೇಂದ್ರ (IKS) ದಿಂದ ಇದೇ ಬರುವ ಡಿಸೆಂಬರ್ ತಿಂಗಳಲ್ಲಿ ಪ್ರಾರಂಭಗೊಳ್ಳಲಿರುವ ಭಗವದ್ಗೀತಾ ಡಿಪ್ಲೊಮಾ ಕೋರ್ಸ್ ನ್ನು ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥಶ್ರೀಪಾದರು ಉದ್ಘಾಟಿಸಿದರು. ಒಂದು ವರ್ಷ ಅವಧಿಯ ಒಟ್ಟು ಐದು ಪತ್ರಿಕೆಗಳನ್ನು ಒಳಗೊಂಡ ಈ ಡಿಪ್ಲೊಮಾ ಕೋರ್ಸ್ ನ ಪಾಠದ ವ್ಯವಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆನ್ಲೈನ್ ಮೂಲಕ ನಡೆಯಲಿದೆ. ಪರೀಕ್ಷೆಗಳೂ ಆನ್ಲೈನ್ ಮೂಲಕ ನಡೆಯಲಿದೆ. ಶ್ರೀ ಪುತ್ತಿಗೆ ಮಠದ ಮಾರ್ಗದರ್ಶನದಲ್ಲಿ ನಡೆಯುವ ಈ ಕೋರ್ಸ್ ನ ಪಠ್ಯಪುಸ್ತಕವಾಗಿ ಶ್ರೀ ಪುತ್ತಿಗೆ ಮಠದ ವತಿಯಿಂದ ಬಿಡುಗಡೆಗೊಂಡ ಗೀತಾಮೃತಸಾರ ಪುಸ್ತಕವನ್ನು ಸ್ವೀಕರಿಸಲಾಗಿದೆ. ಈ ಭಗವದ್ಗೀತಾ ಡಿಪ್ಲೊಮಾ ಕೋರ್ಸ್ ಅತ್ಯಂತ ಯಶಸ್ವಿಯಾಗಲಿ ಎಂದು ಪೂಜ್ಯ ಶ್ರೀಪಾದರು ಹಾರೈಸಿದರು.
ಕಿರಿಯ ಶ್ರೀಪಾದರಾದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದರು ಆಶೀರ್ವಚನ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಂ ಎಸ್ ಮೂಡಿತ್ತಾಯರು ವಿಶ್ವವಿದ್ಯಾಲಯ ಹಮ್ಮಿಕೊಂಡಿರುವ ಭಾರತೀಯ ಶಿಕ್ಷಣ ವ್ಯವಸ್ಥೆ ಮತ್ತು ಭಗವದ್ಗೀತಾ ಡಿಪ್ಲೊಮಾ ಕೋರ್ಸ್ ಗಳ ಆವಶ್ಯಕತೆ ಹಾಗೂ ಹಿನ್ನೆಲೆಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಖ್ಯಾತ ಪುರಾತತ್ವ ಶಾಸ್ತ್ರಜ್ಞರಾದ ಪದ್ಮಶ್ರೀ ಕೆ ಕೆ ಮೊಹಮ್ಮದ್ ಹಾಗೂ ಟೆಂಪ್ಲೆಕ್ಸ್ ಸಿಟಿ ಖ್ಯಾತ ಬರಹಗಾರ
ಶ್ರೀ ಸುರೇಂದ್ರನಾಥ್ ಬೋಪ್ಪರಾಜು ಮತ್ತು ಹಿರಿಯ ಸಂಶೋಧಕ ವಿದ್ವಾಂಸರಾದ ಪ್ರೊ ಶ್ರೀಪತಿ ತಂತ್ರಿ ಉಡುಪಿ ಉಪಸ್ಥಿತರಿದ್ದರು. ನಿಟ್ಟೆ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ವ್ಯವಸ್ಥಾ ಕೇಂದ್ರದ ನಿರ್ದೇಶಕರಾದ ಡಾ ಸುಧೀರ್ ರಾಜ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನ ದ ಸಂಚಾಲಕರಾದ ಶ್ರೀ ಪ್ರಸನ್ನ ಆಚಾರ್ಯರ ಸಂಗಟನೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಡಾ. ಬಿ. ಗೋಪಾಲಾಚಾರ್ಯರು ನಿರ್ವಹಿಸಿದರು.
ಭಗವದ್ಗೀತಾ ಡಿಪ್ಲೊಮಾ ಕೋರ್ಸ್ ಪ್ರವೇಶಕ್ಕಾಗಿ ನಿಟ್ಟೆ ವಿಶ್ವವಿದ್ಯಾಲಯದ IKS ಕೇಂದ್ರದ ನಿರ್ದೇಶಕರಾದ ಡಾ ಸುಧೀರ್ ರಾಜ್ ಕೆ ( 99459 12075) ಅವರನ್ನು ಸಂಪರ್ಕಿಸಬಹುದು.

Categories
ಕರಾವಳಿ ಸುದ್ದಿ

‘ಮ್ಯಾನೇಜ್‌ಮೆಂಟ್ ಪೆಸ್ಟ್-೨೦೨೫’:ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ

ಎಕ್ಸಲೆಂಟ್ ಕುಂದಾಪುರ: ಅಂತರ್ ಕಾಲೇಜು ಮಟ್ಟದ ಮ್ಯಾನೇಜ್‌ಮೆಂಟ್ ಪೆಸ್ಟ್ನಲ್ಲಿ ಸಮಗ್ರ ರನ್ನರ್‌ಅಫ್ ಪ್ರಶಸ್ತಿ.
“ಆರುಣ್ಯ-೨೦೨೫” ಶ್ರೀ ಶಾರದಾ ಕಾಲೇಜು, ಬಸ್ರೂರು ಇವರ ಆಶ್ರಯದಲ್ಲಿ ನಡೆದ ‘ಮ್ಯಾನೇಜ್‌ಮೆಂಟ್ ಪೆಸ್ಟ್-೨೦೨೫’ ಉಡುಪಿ ಜಿಲ್ಲಾ ಅಂತರ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಗೆ ರನ್ನರ್ ಅಫ್ ಪ್ರಶಸ್ತಿಯನ್ನು ನಮ್ಮ ಹೆಮ್ಮೆಯ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ. ಶ್ರೀ ಶಾರದಾ ಕಾಲೇಜು ಬಸ್ರೂರು ನಡೆದ ಪ್ರತಿ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ನಾಲ್ಕು ಚಿನ್ನದ ಪದಕ ಹಾಗೂ ನಾಲ್ಕು ರಜತದ ಪದಕಗಳೊಂದಿಗೆ ಒಟ್ಟಾರೆ ಎಂಟು ಪದಕಗಳೊಂದಿಗೆ ಉಡುಪಿ ಜಿಲ್ಲೆಯಲ್ಲಿ ಅತ್ಯುತ್ತಮ ರನ್ನರ್‌ಅಫ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಈ ರೀತಿ ಸಾಧನೆಯನ್ನು ಮಾಡಿದ ನಮ್ಮ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ಅಧ್ಯಕ್ಷರು, ಪ್ರಾಂಶುಪಾಲರು, ಬೋಧಕ- ಬೋಧಕೇತರ ವರ್ಗದವರು ಶುಭಹಾರೈಸಿದ್ದಾರೆ.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ದಕ್ಷಿಣಾಯನ

ಶರದ್ : ಋತು

ಕಾರ್ತಿಕ: ಮಾಸ

ಶುಕ್ಲ ಪಕ್ಷ

ನವಮಿ: ತಿಥಿ

ಶ್ರವಣ: ನಕ್ಷತ್ರ

ಗುರುವಾರ

30.10.2025

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಕರಾವಳಿ ಸುದ್ದಿ

ಎಂ ಸಿ ಎನ್ ನಿಂದ ವಿಶ್ವ ಆರೋಗ್ಯ ದಿನಾಚರಣೆ

ಮೂಡ್ಲಕಟ್ಟೆ : ನರ್ಸಿಂಗ್ ಕಾಲೇಜು ಮಾನಸಿಕ ಆರೋಗ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಎ.ವಿ. ಬಾಲಿಗ ಸ್ಮಾರಕ ಆಸ್ಪತ್ರೆಯಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಿಸಿತು. ಈ ಕಾರ್ಯಕ್ರಮದಲ್ಲಿ ಎ.ವಿ. ಬಾಳಿಗ ಆಸ್ಪತ್ರೆಯ ಆಡಳಿತಾಧಿಕಾರಿ ಶ್ರೀಮತಿ ಸೌಜನ್ಯ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಶ್ರೀ ಸುರೇಶ್ ಹಾಗೂ ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಸಹಾಯಕ ಉಪನ್ಯಾಸಕಿ ಶ್ರೀಮತಿ ಚೇತನಾ ಆರ್ ಉಪಸ್ಥಿತರಿದ್ದರು. ಕಾರ್ಯಕ್ರಮವು ದೀಪಪ್ರಜ್ವಲನ ಮತ್ತು ಅಧಿಕೃತ ಉದ್ಘಾಟನೆಯೊಂದಿಗೆ ಆರಂಭವಾಯಿತು. ವಿದ್ಯಾರ್ಥಿನಿ ಕುಮಾರಿ ಸಿನ್ಸಿ ಕಾರ್ಯಕ್ರಮ ನಿರೂಪಿಸಿದರು, ಕುಮಾರಿ ಟೆಸ್ಕಾ ಅವರು ದಿನದ ಮಹತ್ವವನ್ನು ವಿವರಿಸಿ, 2025ರ ವಿಶ್ವ ಮಾನಸಿಕ ಆರೋಗ್ಯ ದಿನದ ಧ್ಯೇಯ “ಸೇವೆಗಳ ಪ್ರವೇಶ: ಆಪತ್ತು ಮತ್ತು ತುರ್ತು ಪರಿಸ್ಥಿತಿಯಲ್ಲಿನ ಮಾನಸಿಕ ಆರೋಗ್ಯ” ಎಂಬುದನ್ನು ಉಲ್ಲೇಖಿಸಿದರು. ವಿದ್ಯಾರ್ಥಿಗಳು ನಾಟಕವನ್ನು ಪ್ರದರ್ಶಿಸಿ, ಮಾನಸಿಕ ಆರೋಗ್ಯ ಜಾಗೃತಿ ಮತ್ತು ಸಮುದಾಯದ ಕಲ್ಯಾಣದ ವಿವಿಧ ಅಂಶಗಳನ್ನುಒತ್ತಿ ಹೇಳಿದರು

Categories
ಕರಾವಳಿ ಸುದ್ದಿ

ಕಾಕುಂಜೆ ಸಾಫ್ಟವೇರ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಕಂಪನಿಯೊಂದಿಗೆ ಒಪ್ಪಂದಕ್ಕೆ (MoU) ಸಹಿ

ಮೂಡಲಕಟ್ಟೆ : ಎಂ ಐ ಟಿ ಕೆ ಯ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿಭಾಗ, ವಿದ್ಯಾರ್ಥಿಗಳನ್ನು ಕೈಗಾರಿಕಾ ಕ್ಷೇತ್ರಕ್ಕೆ ಸಿದ್ಧಗೊಳಿಸಲು, ಕಾಕುಂಜೆ ಸಾಫ್ಟವೇರ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಕಂಪನಿಯೊಂದಿಗೆ ಒಪ್ಪಂದಕ್ಕೆ (MoU) ಸಹಿ ಮಾಡಿತು . ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಿದ್ಧಾರ್ಥ ಜೆ ಶೆಟ್ಟಿ, ಕಾಕುಂಜೆ ಸಾಫ್ಟವೇರ್ ಸಿಇಒ ಡಾ. ಜಿ ಕೆ ಭಟ್, ಐ ಎಂ ಜೆ ಸಂಸ್ಥೆಗಳ ಅಕಾಡೆಮಿಕ್ಸ್ ನಿರ್ದೇಶಕ ಡಾ. ಎಸ್.ಎನ್. ಭಟ್, ಪ್ರಿನ್ಸಿಪಲ್ ಡಾ. ರಾಮಕೃಷ್ಣ ಹೆಗ್ಗಡೆ, ಇ ಸಿ ಇ ವಿಭಾಗದ ಮುಖ್ಯಸ್ಥ ಡಾ. ವರುಣ್ ಕುಮಾರ್, ಹಾಗೂ ವಿಭಾಗದ ಪ್ರಾಧ್ಯಾಪಕರು ಹಾಜರಿದ್ದರು.

ಕಾಕುಂಜೆ ಸಾಫ್ಟವೇರ್ ಪ್ರೈವೇಟ್ ಲಿಮಿಟೆಡ್ ಮಂಗಳೂರು, ಕರ್ನಾಟಕದ ಪ್ರಮುಖ ಐಟಿ ಸಂಸ್ಥೆಯಾಗಿದ್ದು, ಐಟಿ ಕನ್ಸಲ್ಟಿಂಗ್, ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಉತ್ಪನ್ನಗಳ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದೆ. ಸಂಸ್ಥೆಯು ಎಂಟರ್‌ಪ್ರೈಸ್ ಸಾಫ್ಟ್‌ವೇರ್, ಸ್ಥಿರ ಮತ್ತು ಚರ ವೆಬ್‌ಸೈಟ್‌ಗಳು, ಮೊಬೈಲ್ ಅಪ್ಲಿಕೇಶನ್‌ಗಳು, ಇ-ಕಾಮರ್ಸ್ ಪರಿಹಾರಗಳು, ಮತ್ತು ಈಆರ್ಪಿ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುತ್ತದೆ.

ಪ್ರತಿಭಾವಂತ ತಂತ್ರಜ್ಞಾನ ಪರಿಣಿತರ ತಂಡದ ಸಹಯೋಗದೊಂದಿಗೆ, ಕಾಕುಂಜೆ ಸಾಫ್ಟವೇರ್ ನವೀನ ಮತ್ತು ಜಾಗತಿಕ ಮಟ್ಟದ ತಂತ್ರಜ್ಞಾನ ಪರಿಹಾರಗಳನ್ನು ಒದಗಿಸುತ್ತಿದ್ದು, ಕೈಗಾರಿಕೆಗಳಿಗೆ ತಮ್ಮ ವ್ಯವಹಾರ ಉದ್ದೇಶಗಳನ್ನು ಸಾಧಿಸಲು ಸಹಾಯ ಮಾಡುವುದರ ಜೊತೆಗೆ ತಂತ್ರಜ್ಞಾನ ವಿಕಾಸ ಮತ್ತು ನವೋದ್ಯಮವನ್ನು ಉತ್ತೇಜಿಸುತ್ತದೆ

Categories
ಕರಾವಳಿ ಸುದ್ದಿ

ಇಂಪನಾ ಆರ್. ಅವರಿಗೆ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಕುಂದಾಪುರ : ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಆಯೋಜಿಸಿದ್ದ 20ನೇ ರಾಜ್ಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿತ್ಮೇಟಿಕ್ ಸ್ಪರ್ಧೆ – 2025 ಅಕ್ಟೋಬರ್ 26ರಂದು ಮೂಡುಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 2000 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಕುಂದಾಪುರದ ಇಂಪನಾ ಆರ್. ಅವರು Z–X ಲೆವೆಲ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಇವರು ಐಡಿಯಲ್ ಪ್ಲೇ ಅಬಾಕಸ್ ಕುಂದಾಪುರ ಕೇಂದ್ರದ ಮುಖ್ಯಸ್ಥರಾದ ಪ್ರಸನ್ನ ಕೆ.ಬಿ. ಅವರಿಂದ ತರಬೇತಿ ಪಡೆದಿರುತ್ತಾರೆ. ಶಿಕ್ಷಕರಾದ ಮಹಾಲಕ್ಷ್ಮಿ ಮತ್ತು ದೀಪಾ ಅವರು ಮಾರ್ಗದರ್ಶನ ನೀಡಿರುತ್ತಾರೆ.
ಅವರು ಕುಂದಾಪುರದ ನಿವಾಸಿಯಾಗಿದ್ದು, ದೀಪಿಕಾ ಜಿ. ಮತ್ತು ರಾಘವೇಂದ್ರ ಶೇರೆಗಾರ್ ಅವರ ಪುತ್ರಿಯಾಗಿದ್ದಾರೆ. ಪ್ರಸ್ತುತ ಅವರು ಕುಂದಾಪುರದ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ 3ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

Categories
ಕರಾವಳಿ ಸುದ್ದಿ

ವರ್ಡ್ ಪ್ರೆಸ್ ಕ್ಯಾಂಪಸ್ ಕನೆಕ್ಟ್ : ಡಾ| ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

ಕುಂದಾಪುರ: ವಿದ್ಯಾರ್ಥಿಗಳು ತಮ್ಮ ಪದವಿಯ ಜೊತೆಗೆ ಮುಂದುವರಿದ ತಂತ್ರಜ್ಞಾನಗಳನ್ನೂ ಸಹ ಕಲಿತಾಗ ಮಾತ್ರ ಉನ್ನತ ಜ್ಞಾನದೊಂದಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಪಡೆಯಲು ಸಾಧ್ಯ ಎಂದು ಕುಂದಾಪುರದ ಫೋರ್ಥ್ ಫೋಕಸ್ ಸಂಸ್ಥೆಯ ಸ್ಥಾಪಕರಾದ ಶ್ರೀ ವಿ. ಗೌತಮ್ ನಾವಡ ಅವರು ಹೇಳಿದರು.
ಅವರು ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ಗಣಕಶಾಸ್ತ್ರ ವಿಭಾಗ ಮತ್ತು ವರ್ಡ್ ಪ್ರೆಸ್ ಉಡುಪಿ ಕಮ್ಯೂನಿಟಿ ಇವರ ಸಹಯೋಗದಲ್ಲಿ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವೆಬ್ ಡೆವಲಪ್‌ಮೆಂಟ್ ವರ್ಡ್ ಪ್ರೆಸ್ ಕ್ಯಾಂಪಸ್ ಕನೆಕ್ಟ್ ಎಂಬ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು. ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಅಧ್ಯಕ್ಷತೆ ವಹಿಸಿದ್ದರು.
ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀ ಮಹೇಶ್ ಕುಮಾರ್ ಸ್ವಾಗತಿಸಿದರು. ಶೈಕ್ಷಣಿಕ ನಿಕಾಯಕರು ಹಾಗೂ ಕಾರ್ಯಕ್ರಮದ ಸಂಯೋಜಕರಾದ ಶ್ರೀ ಗಿರಿರಾಜ್ ಭಟ್ ಪ್ರಸ್ತಾವಿಕ ನುಡಿಗಳನ್ನಾಡಿ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿದರು. ಈ ಸಂದರ್ಭ ಉಡುಪಿ ಸಬ್‌ವೆಬ್ ಸಂಸ್ಥಾಪಕ ಶಶಿಕಾಂತ್ ಶೆಟ್ಟಿ, ತೀರ್ಥಹಳ್ಳಿಯ ಯುಕ್ತಿ ಡಿಜಿಟಲ್ ಸಂಸ್ಥಾಪಕ ಮಂಜುನಾಥ್ ಎಮ್.ಎಮ್., ಕೋಟೇಶ್ವರ ಕೋಟಿಸಾಫ್ಟ್ ಸೊಲ್ಯೂಶನ್ ಮುಖ್ಯ ಕಾರ್ಯನಿರ್ವಾಹಕ ಓಂಕಾರ ಉಡುಪ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ರಿಷಿತಾ ಪ್ರಾರ್ಥಿಸಿದರು. ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಶ್ರೀಮತಿ ವಿಲ್ಮಾ ಶೆರಲ್ ವಂದಿಸಿ, ಶ್ರೀಮತಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಗಾರದಲ್ಲಿ ಭಾಗವಹಿಸಿ 70 ವಿದ್ಯಾರ್ಥಿಗಳು ವೆಬ್‌ಸೈಟ್‌ಗಳನ್ನು ನಿರ್ಮಿಸಿ ನೇರವಾಗಿ ಲೈವ್ ಮಾಡಿ ಪ್ರಾಯೋಗಿಕ ಕಲಿಕೆಗೆ ಸಾಕ್ಷಿಯಾದರು.

Categories
ಕರಾವಳಿ ಸುದ್ದಿ

ದಾಖಲೆ ಇಲ್ಲದೆ ಗೋವಾದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ಒಂದು ಕೋಟಿ ಹಣ:ಇಬ್ಬರು ವಶಕ್ಕೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ-ಗೋವಾ ಗಡಿಯ ಮಾಜಾಳಿ ಚಕ್ ಪೋಸ್ಟ್ ಬಳಿ ಖಾಸಗಿ ಬಸ್‌ನಲ್ಲಿ ದಾಖಲೆ ಇಲ್ಲದೆ ಗೋವಾದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ಒಂದು ಕೋಟಿ ಹಣ ಹಾಗೂ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಗೋವಾದಿಂದ ಬೆಂಗಳೂರಿನ ಹೊಸೂರಿಗೆ 1 ಕೋಟಿ ಹಣವನ್ನು ಸಾಗಾಟ ಮಾಡಲಾಗುತ್ತಿತ್ತು. ಚೆಕ್‌ಪೋಸ್ಟ್ ಬಳಿ ಪೊಲೀಸರು ತಪಾಸಣೆ ನಡೆಸುವ ವೇಳೆ ಚೀಲದಲ್ಲಿ ಹಣ ಪತ್ತೆಯಾಗಿದೆ. ಹಣದ ಸಂಬಂಧ ದಾಖಲೆ ಕೇಳಿದಾಗ ನೀಡದ ಕಾರಣ ಬೆಂಗಳೂರು ಮೂಲದ ಕಲ್ಪೇಶ, ರಾಜಸ್ಥಾನ ಮೂಲದ ಬಮರ ರಾಮ್ ಎಂಬ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ಕೈಕೊಳ್ಳಲಾಗಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಬೆಂಗಳೂರಿನ ಕಲ್ಪೇಶ್ ಹಾಗೂ ಬಮರ ರಾಮ್ ಗೋವಾದ ಬೇರೆಯೊಬ್ಬರ ಹಣವನ್ನು ವ್ಯವಹಾರಕ್ಕಾಗಿ ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾನೆ. ಆದರೆ ಈ ಹಣದ ಮೂಲ ದಾಖಲೆಗಳನ್ನು ಪೊಲೀಸರು ಕೇಳಿದಾಗ ನೀಡಿಲ್ಲ. ಚಿತ್ತಾಕುಲ ಪೊಲೀಸರು ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ

Categories
ಕರಾವಳಿ ಸುದ್ದಿ

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಮೂಡಿಗೆರೆ: ಚಾರ್ಮಾಡಿ ಘಾಟಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ನಡೆದಿದೆ.ಘಟನೆಯಿಂದ ಕಾರಿನಲ್ಲಿದ್ದ ಮೂವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೂಡಬಿದಿರೆಯಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಕಾರು, ಚಾರ್ಮಾಡಿ ಘಾಟಿಯ ಅಣ್ಣಪ್ಪಸ್ವಾಮಿ ದೇಗುಲದ ಇಳಿಜಾರಿನ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕಾರು ರಸ್ತೆಯ ಮತ್ತೊಂದು ಬದಿಗೆ ಬಿದ್ದಿದ್ದು, ಸ್ವಲ್ಪದರಲ್ಲೇ ದೊಡ್ಡ ಅನಾಹುತ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Categories
ಕರಾವಳಿ ಸುದ್ದಿ

ಹಾಡಹಗಲೇ 5 ಲಕ್ಷ ರೂ. ಕಳವು

ಉಪ್ಪಿನಂಗಡಿ: ಗಾಂಧಿ ಪಾರ್ಕ್ ಬಳಿಯ ವಾಣಿಜ್ಯ ಸಂಕೀರ್ಣವೊಂದರಲ್ಲಿ ಕಾಡುತ್ಪತ್ತಿ ಮತ್ತು ಅಡಕೆ ವ್ಯಾಪಾರ ನಡೆಸುವ ಉದ್ಯಮಿ ವಸಂತ ಗೌಡ ಎಂಬುವರ ಅಂಗಡಿಯಲ್ಲಿ ಹಾಡಹಗಲೇ 5 ಲಕ್ಷ ರೂ. ಕಳವುಗೈಯಲಾಗಿದೆ.

ಅಂಗಡಿಯಲ್ಲಿ ಯಾರೂ ಇಲ್ಲದ ವೇಳೆ ಅಂಗಡಿಗೆ ನುಗ್ಗಿದ ಕಳ್ಳರು, ಅಂಗಡಿಯ ಡ್ರಾಯರ್ ನಲ್ಲಿ ಇಟ್ಟಿದ್ದ 5 ಲಕ್ಷ ರೂಪಾಯಿ ದೋಚಿದ್ದಾರೆ. ಮಧ್ಯಾಹ್ನದ ವೇಳೆ ಅಂಗಡಿ ಮಾಲೀಕ ಶಟ‌ರ್ ಹಾಕದೇ ಇಟ್ಟು ಶೌಚಾಲಯಕ್ಕೆ ಹೋಗಿದ್ದಾರೆ. ಬರುವಾಗ ಬೀಗ ಹಾಕಿದ್ದ ಡ್ರಾಯ‌ರ್ ಅನ್ನು ಮುರಿದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.ಈ ಅಂಗಡಿಯ ಒಳಗೆ ಸಿಸಿ ಕ್ಯಾಮಾರ ಇದ್ದು, ಅದಕ್ಕೆ ರಿಚಾರ್ಜ್ ಮಾಡಿಲ್ಲವಂತೆ. ಹೊರಗಿನ ಸಿಸಿ ಕ್ಯಾಮಾರಾದ ಸ್ವಿಚ್ ಕೂಡ ಕಡಿತಗೊಂಡಿತ್ತು ಎನ್ನಲಾಗಿದೆ. ಇದೇ ವಾಣಿಜ್ಯ ಸಂಕೀರ್ಣದಲ್ಲಿ ಹತ್ತಕ್ಕೂ ಹೆಚ್ಚು ಕೊಠಡಿಗಳನ್ನು ಬಾಡಿಗೆಗೆ ಕೊಡಲಾಗಿದೆ. ಆದರೆ ಯಾರೂ ಸಹ ಸಿಸಿ ಕ್ಯಾಮಾರಾ ಕೂಡ ಅಳವಡಿಸಿಲ್ಲ. ಇದನ್ನೆಲ್ಲಾ ಅರಿತುಕೊಂಡೇ ಕಳ್ಳರು ಕೈಚಳಕ ತೋರಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.