Categories
ಕರಾವಳಿ ಸುದ್ದಿ

ದೀಪಣ್ಣ ನ 50ರ ಸಂಭ್ರಮ

ಅಂಪಾರು : ಶ್ರೀ ಕೆ.ಪ್ರದೀಪ್ .ಕುಮಾರ್ ಶೆಟ್ಟಿ ಗುಡಿಬೆಟ್ಟು ಇವರ 50ನೇ ವರ್ಷದ ಜನ್ಮದಿನದ ಪ್ರಯುಕ್ತ ಹುಟ್ಟು ಹಬ್ಬದ ಆಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು 29/11/2025 ರಂದು ಜೈ ಭಾರತಿ ಶಾಲೆ ನೆಲ್ಲಿಕಟ್ಟೆಯಲ್ಲಿ ನಡೆಯಲಿದೆ.

ಬೆಳಗ್ಗೆ 9:00 ರಿಂದ ರಕ್ತದಾನ ಶಿಬಿರವು ನಡೆಯಲಿದ್ದು ನಂತರ ಸಂಜೆ 5:30ಕ್ಕೆ 50ರ ಹುಟ್ಟು ಹಬ್ಬದ ಆಚರಣೆ ಮತ್ತು ನೃತ್ಯ ನಿಕೇತನ ಕೊಡವೂರು ಕಲಾವಿದರಿಂದ ನೃತ್ಯ ಸಿಂಚನ ಕಾರ್ಯಕ್ರಮವು ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ದೀಪಣ್ಣನವರ ಹಿತೈಷಿ ಬಳಗದವರು ವಿನಂತಿಸಿಕೊಂಡಿದ್ದಾರೆ

Categories
ಶಿಕ್ಷಣ

ಸಂವಿಧಾನ ದಿನಾಚರಣೆ

ಕುಂದಾಪುರ : ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವ್ಯವಹಾರ ಆಡಳಿತ ವಿಭಾಗ, ರೋವರ್ಸ್ &ರೆಂಜರ್ಸ್ ಘಟಕ ಹಾಗೂ ಎನ್.ಎಸ್.ಎಸ್. ಘಟಕಗಳ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ನವೆಂಬರ್ 26ರಂದು ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಫ್ರೀ ಲೆನ್ಸ್ ತರಬೇತುದಾರರಾದ ಶ್ರೀ ಗೌತಮ್ ಎಚ್. ಶೆಟ್ಟಿಗಾರ್, ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ನಂದಾ ರೈ ಉಪಸ್ಥಿತರಿದ್ದರು.
ಸಂವಿಧಾನ ದೇಶದ ಸರ್ವಶ್ರೇಷ್ಠ ಕಾನೂನಾಗಿದ್ದು, ಇಡೀ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಯುವ ಸಮುದಾಯ ಸಂವಿಧಾನದ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಸಹ ಪ್ರಾಧ್ಯಾಪಕರಾದ ಪ್ರವೀಣ್ ಮೊಗವೀರ ಗಂಗೊಳ್ಳಿ ವಿದ್ಯಾರ್ಥಿಗಳಿಗೆ ತಿಳಿಸಿ, ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.
ಪ್ರಥಮ ಬಿಬಿಎ ವಿದ್ಯಾರ್ಥಿನಿ ಸಿರಿ ಕಾರ್ಯಕ್ರಮ ನಿರೂಪಿಸಿದರು.
 

Categories
Uncategorized

ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್ : ಬಹುಮಾನ ವಿತರಣಾ ಸಮಾರಂಭ

ತೆಕ್ಕಟ್ಟೆ : ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್ ತೆಕ್ಕಟ್ಟೆಯಲ್ಲಿ ಮಕ್ಕಳಿಗೆ ಏರ್ಪಡಿಸಿದ ಸಾಂಸ್ಕçತಿಕ ಮತ್ತು ಸಾಹಿತ್ಯಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೇಳೂರು ಕರುಣಾಕರ ಶೆಟ್ಟಿ ಬ್ಯಾಂಕ್ ಬರೋಡ ಕುಂಭಾಶಿ ಇದರ ಮುಖ್ಯ ಪ್ರಬಂಧರಕ ಇವರು ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಕ್ಕಳಿಗೆ ಬಹುಮಾನ ವಿತರಣೆಯನ್ನು ಮಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಶಾಲೆಯ ಉತೃಷ್ಠ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಗ್ರಾಮೀಣ ಪ್ರದೇಶದಲ್ಲಿ ಇರುವ ಇಂತಹ ಶಾಲೆಗಳಲ್ಲಿ ರಾಷ್ಟç, ಅಂತ ರಾಷ್ಟ್ರೀಯ ಮಟ್ಟದ ಪ್ರತಿಭೆಗಳು ಹುಟ್ಟಿಕೊಳ್ಳುತ್ತವೆ. ಇಂತಹ ಮಕ್ಕಳನ್ನು ಪ್ರೋತ್ಸಾಹಿಸಿ ಮುಂದಿನ ಸಾಧನೆಗೆ ಶಾಲೆ ಹಾಗೂ ಪೋಷಕರು ಸಹಕಾರಿಯಾಗಬೇಕೆಂದು ತಿಳಿಸಿದರು.

ಕಾರ‍್ಯಕ್ರಮದಲ್ಲಿ ರಾಜ್ಯ ಮಟ್ಟದ ಚಿತ್ರ ಕಲಾ ಸ್ಪರ್ದೆಯಲ್ಲಿ ಪ್ರಥಮ ಹಾಗೂ ವಿವಿಧ ಚಿತ್ರ ಕಲಾ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದು ಸಾಧನೆ ಮಾಡಿದ ೮ ನೇ ತರಗತಿ ವಿದ್ಯಾರ್ಥಿ ಯಕ್ಷತ್ ಶೆಟ್ಟಿ ಇವರನ್ನು ಫಲ ಪುಷ್ಪ ಹಾಗೂ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್. ಪ್ರಭಾಕರ ಶೆಟ್ಟಿಯವರು ಮಾತನಾಡಿ ಬಹುಮಾನ ಎನ್ನುವುದು ಮುಂದಿನ ಸಾಧನೆಗೆ ದಾರಿಯಾಗಬೇಕು ಹಾಗೂ ವಿದ್ಯಾರ್ಥಿಗಳು ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ‍್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲ ನಿತಿನ್ ಡಿ’ ಆಲ್ಮೇಡಾ, ಶಿಕ್ಷಕರು, ಪೋಷಕರು ಹಾಗೂ ಶಾಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು. ಶಿಕ್ಷಕರಾದ ಸಂದಿಪ್ ಸ್ವಾಗತಿಸಿದರು. ಪ್ರೇಮ ರಾವ್ ನಿರೂಪಿಸಿದರು, ಅನುಷಾ ವಂದಿಸಿದರು.

Categories
ಶಿಕ್ಷಣ

ಬಿಬಿಎ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರ

ಕುಂದಾಪುರ : ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಆಶ್ರಯದಲ್ಲಿ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಗಳಿಗೆ ಲಾಜಿಸ್ಟಿಕ್ ಹಾಗೂ ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ಹಾಗೂ ಇ-ಕಾಮರ್ಸ್ ವಿಷಯಕ್ಕೆ ಸಂಬoಧಿಸಿದ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಫ್ರೀ ಲೆನ್ಸ್ ತರಬೇತುದಾರರು ಹಾಗೂ ಬಿಸಿನೆಸ್ ಕೋಚ್ ಆಗಿರುವ ಶ್ರೀ ಗೌತಮ್ ಎಚ್. ಶೆಟ್ಟಿಗಾರ್ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು.
ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ನಂದಾ ರೈ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ನಾಗರತ್ನ ಪ್ರಾರ್ಥಿಸಿ, ಸೌರವ್ ಸ್ವಾಗತಿಸಿ, ಚೇತನ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿ,
ಮಣಿಕಂಠ ವಂದಿಸಿ, ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.

Categories
ಕರಾವಳಿ ಸುದ್ದಿ

ಕಾನೂನು ಬದ್ಧ ದತ್ತು ಪ್ರಕ್ರಿಯೆ ಕುರಿತು ಜಾಗೃತಿ ಮತ್ತು ಕಿರು ನಾಟಕ ಪ್ರದರ್ಶನ

ಕೋಟೇಶ್ವರ : ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಟೇಶ್ವರ ಇಲ್ಲಿ ‘ರಾಷ್ಟ್ರೀಯ ದತ್ತು ಮಾಸಾಚರಣೆ’ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವುಗಳ ಆಶ್ರಯದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಸಂಯೋಜನೆಯಲ್ಲಿ ‘ಕಾನೂನು ಬದ್ಧ ದತ್ತು’ ಕುರಿತು ಜಾಗೃತಿ ಮತ್ತು ಕಿರು ನಾಟಕ ಪ್ರದರ್ಶನ ನಡೆಯಿತು.
ಕಾರ್ಯಕ್ರಮವನ್ನು ಸುಜಾತ ವಾಸುದೇವ, ಮಾಜಿ ಉಪಾಧ್ಯಕ್ಷರು, ಜಿಲ್ಲಾ ಪಂಚಾಯತ್ ಉಡುಪಿ ಇವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನಾಗರತ್ನ ನಾಯಕ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಇವರು ಕಾನೂನು ಬದ್ಧ ದತ್ತು ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶಾರದಾ ವೈ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ ಜಿಲ್ಲೆ ಮತ್ತು ಶ್ರೇಯಸ್, ಯೋಜನಾ ಸಹವರ್ತಿ, ಡಬ್ಲ್ಯೂಂಎಐಸಿ ಇವರು ಕಾಲೇಜು ವಿದ್ಯಾರ್ಥಿಗಳಿಗೆ ಪೋಕ್ಸೋ, ಬಾಲ್ಯ ವಿವಾಹ, ಮಕ್ಕಳ ಸಾಗಾಣಿಕೆ ಹಾಗೂ ಮಾರಾಟ, ಮಕ್ಕಳ ರಕ್ಷಣೆ ಮತ್ತು ಪೋಷಣೆ ಕುರಿತಾಗಿ ಮಾಹಿತಿ ಮತ್ತು ಕಾನೂನು ಅರಿವು ನೀಡಿದರು.
ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಭಿತ್ತಿ ಚಿತ್ರ ಪ್ರದರ್ಶನ ಮತ್ತು ಕಿರು ನಾಟಕದ ಮುಖಾಂತರ ‘ಕಾನೂನು ಬದ್ಧ ದತ್ತು’ ಕುರಿತಾಗಿ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ವಹಿಸಿದ್ಧರು. ಈ ಸಂದರ್ಭದಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ ನಾಗರಾಜ ಯು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ., ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ನಿರಂಜನ ಶರ್ಮ ಮತ್ತು ಶೃತಿ ಆಚಾರ್ಯ ಎನ್. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜುವೇರಿಯಾ ನಿರೂಪಿಸಿದರು. ಅಕ್ಷತಾ ಸ್ವಾಗತಿಸಿದರು, ಅಕ್ಷಯ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ “ವಿಶೇಷ ಚೇತನ ಮಕ್ಕಳ ದತ್ತು ಪ್ರಕ್ರಿಯೆ”ಯ ಸಂಕಲ್ಪ ಸಂದೇಶವನ್ನು ವಿದ್ಯಾರ್ಥಿನಿ ಶ್ರೀರಕ್ಷಾ ವಾಚಿಸಿದರು. 
Categories
ಬ್ರೇಕಿಂಗ್ ನ್ಯೂಸ್

ಡೆಲ್ಲಿ ಡಾಭಾ ರೆಸ್ಟೋರೆಂಟ್ ನಲ್ಲಿ ಸಿಲಿಂಡ‌ರ್ ಸ್ಪೋಟ

ಮಣಿಪಾಲ: ಇಲ್ಲಿನ ಆರ್ ಎಸ್ ಬಿ ಸಭಾಭವನದ ಪಕ್ಕದಲ್ಲಿರುವ ಡೆಲ್ಲಿ ಡಾಭಾ ರೆಸ್ಟೋರೆಂಟ್ ನಲ್ಲಿ ಅಗ್ನಿ ಆಕಸ್ಮಿಕ ಉಂಟಾಗಿ ಸಿಲಿಂಡ‌ರ್ ಸ್ಪೋಟಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ.

ಗ್ಯಾಸ್ ಸಿಲಿಂಡರ್ ಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಸ್ಫೋಟಗೊಂಡು ಹೊಟೇಲ್ ಒಂದು ಸಂಪೂರ್ಣ ಭಸ್ಮವಾಗಿದೆ. ಕೂಡಲೇ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅಲ್ಲದೇ ಇನ್ನೆರೆಡು ಗ್ಯಾಸ್ ಸಿಲಿಂಡರ್‌ಗಳು ಸ್ಪೋಟಗೊಳ್ಳದಂತೆ ತಡೆದರು ಎಂದು ತಿಳಿದುಬಂದಿದೆ. ಇದರಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ.

ದೆಹಲಿ ಧಾಬಾ ರೆಸ್ಟೋರೆಂಟ್ ಒಳಗೆ ಶಾರ್ಟ್ ಸರ್ಕ್ಯೂಟ್ ನಿಂದ ಈ ಘಟನೆ ಸಂಭವಿಸಿದೆ ಎಂದು ಉಡುಪಿ ಎಸ್ಪಿ ಹರಿರಾಮ್ ಶಂಕರ್‌ ಸ್ಪಷ್ಟಪಡಿಸಿದ್ದಾರೆ ಮತ್ತು ಅಗ್ನಿಶಾಮಕ ಇಲಾಖೆ ಮತ್ತು ಪೊಲೀಸರು ಇಬ್ಬರೂ ಸ್ಥಳವನ್ನು ಪರಿಶೀಲಿಸಿದ್ದಾರೆ ಎಂದು ದೃಢಪಡಿಸಿದ್ದಾರೆ. “ಯಾವುದೇ ಅನುಮಾನವಿಲ್ಲ. ಯಾವುದೇ ವದಂತಿಗಳು ಹರಡದಂತೆ ನಾನು ಈ ಸ್ಪಷ್ಟಿಕರಣವನ್ನು ನೀಡುತ್ತಿದ್ದೇನೆ. ಯಾರಿಗೂ ಗಾಯಗಳಾಗಿಲ್ಲ” ಎಂದು ಅವರು ಹೇಳಿದ್ದಾರೆ.

Categories
ಕರಾವಳಿ ಸುದ್ದಿ

ಸೇವಾ ಸಂಗಮ ವಿದ್ಯಾಕೇಂದ್ರ ತೆಕ್ಕಟ್ಟೆಯ ವಿದ್ಯಾರ್ಥಿನಿ : ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಆಯ್ಕೆ

ತೆಕ್ಕಟ್ಟೆ :ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ವತಿಯಿಂದ ನೀಡುವ 5ನೇ ವರ್ಷದ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾಕೇಂದ್ರದ ಗೀತಾ ಹೆಗ್ಡೆ ಆಯ್ಕೆಯಾಗಿದ್ದಾರೆ.
ಬಹುಮುಖ ಬಾಲಪ್ರತಿಭೆಯಾದ ಗೀತಾ ಹೆಗ್ಡೆ ವಿದ್ಯಾ ಭಾರತಿ ಕರ್ನಾಟಕ ನಡೆಸುವ ಚೆಸ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟವನ್ನು 2ಬಾರಿಪ್ರತಿನಿಧಿಸಿದ್ದಲ್ಲದೆ, ತೃತೀಯ ಸ್ಥಾನ ಪಡೆದಿದ್ದು,ಅತ್ಯುತ್ತಮ ವಾಗ್ಮಿ, ಚಿತ್ರಕಲಾವಿದೆ, ಉತ್ತಮ ಭಾಷಣಕಾರ್ತಿ , ನಿರೂಪಕಿ ಹಾಗೂ ಭಗವದ್ಗೀತೆ ಪಠಣ ವಾಚಕಿಯಾಗಿ, ‌ಭಾಗವಹಿಸಿದ ಪ್ರತೀ ಸ್ಫರ್ಧೆಗಳಲ್ಲೂ ಜಿಲ್ಲಾ ಹಾಗೂ ರಾಜ್ಯ ಮಟ್ಟವನ್ನು ಪ್ರತಿನಿಧಿಸಿದ ಬಹುಮುಖ ಪ್ರತಿಭೆ. ವಿದ್ಯಾರ್ಥಿಯ ಈ ಸಾಧನೆಗೆ ತಂದೆತಾಯಿಯ ನಿರಂತರ ಪ್ರೋತ್ಸಾಹವೇ ಕಾರಣವಾಗಿದ್ದು, ಶಾಲೆಯಲ್ಲಿ ಹೆಮ್ಮೆಯ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿದ್ದಾಳೆ.
ಇದೇ 30ರಂದು ಕೋಟ ಕಾರಂತ ಥೀಮ್ ಪಾಕ್೯ನಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಡೆಯಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ದಕ್ಷಿಣಾಯನ

ಹೇಮಂತ: ಋತು

ಮಾರ್ಗಶಿರೆ: ಮಾಸ

ಶುಕ್ಲ ಪಕ್ಷ

ಅಷ್ಟಮಿ: ತಿಥಿ

ಶತಭಿಷೆ: ನಕ್ಷತ್ರ

ಶುಕ್ರವಾರ

28.11.2025

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಕರಾವಳಿ ಸುದ್ದಿ

ಪ್ರಧಾನಿ ನರೇಂದ್ರ ಮೋದಿ ಆಗಮನ : ಪೋಲೀಸರಿಂದ ಸಾರ್ವಜನಿಕರಿಗೆ ಕಡ್ಡಾಯ ಸೂಚನೆಗಳು

ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ಲಕ್ಷ ಕಂಠ ಭಗವದ್ಗೀತೆ ಪಠಣ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಪ್ರಧಾನಿಗಳ ಭೇಟಿ ಸಮಯದಲ್ಲಿ ಶಿಷ್ಟಾಚಾರ ಪಾಲಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾಧಿಕಾರಿ ಟಿ.ಕೆ ಸ್ವರೂಪ್‌ ಆದೇಶಿಸಿದ್ದಾರೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತ (BNS) 2023, ಸೆಕ್ಷನ್ 163ರ ಅನ್ವಯ ಆದೇಶಿಸಿದ್ದಾರೆ.ಹೆಲಿಪ್ಯಾಡ್ ವಠಾರ, ಶ್ರೀ ಕೃಷ್ಣ ಮಠ ವಠಾರ, ಪ್ರವಾಸಿ ಮಂದಿರದ ಸುತ್ತಮುತ್ತ ಹಾಗೂ ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಲು ಆದೇಶದಲ್ಲಿ ಸೂಚಿಸಿದ್ದಾರೆ.

ಅಲ್ಲದೇ ನವೆಂಬರ್ 28ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಂದ್ ಇರಬೇಕು. ನವಂಬರ್ 28 ಸಂಜೆ 6 ಗಂಟೆಯವರೆಗೆ ನಗರದ 5 ಕಿ.ಮೀ ವ್ಯಾಪ್ತಿಯಲ್ಲಿ ಡ್ರೋನ್ಹಾರಾಟ ನಿಷೇಧಿಸಿದ್ದು, ಉಡುಪಿಯನ್ನ ನೋ ಫ್ಲೈ ಝೋನ್‌ ಎಂದು ಘೋಷಿಸಲಾಗಿದೆ.

ಅಭಿಮಾನಿಗಳು ಪಟಾಕಿ, ಧ್ವಜ ಬ್ಯಾಗ್, ನೀರಿನ ಬಾಟಲ್ ತರುವಂತಿಲ್ಲbಇನ್ನೂ ಪ್ರಧಾನಿ ಮೋದಿ ಅವರ ಆಗಮನದ ಹಿನ್ನೆಲೆ ಪ್ರಧಾನಿಗಳ ರೋಡ್‌ ಶೋ ವೀಕ್ಷಣೆಗೆ ಬರುವ ಅಭಿಮಾನಿಗಳು, ಸಾರ್ವಜನಿಕರಿಗೂ ಕಟ್ಟು ನಿಟ್ಟಿನ ನಿಯಮ ಪಾಲಿಸುವಂತೆ ಸೂಚಿಸಲಾಗಿದೆ.

ರೋಡ್‌ ಶೋ ವೀಕ್ಷಣೆಗೆ ಬರುವವರಿಗೆ ಬ್ಯಾಗ್, ನೀರಿನ ಬಾಟಲ್, ಧ್ವಜ ತರುವಂತಿಲ್ಲ. ಫೋಟೋ, ಸ್ಟಿಕರ್ಸ್, ಬಲೂನ್ಸ್, ಪಟಾಕಿ, ಲೂಸ್ ಪಾಲಿಥಿನ್ ತರುವುದನ್ನ ನಿಷೇಧಿಸಲಾಗಿದೆ. ಆದೇಶ ಉಲ್ಲಂಘಿಸುವವರ ವಿರುದದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಆದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ.

Categories
ಶಿಕ್ಷಣ

ಕೆಪಿಎಸ್ ಕೋಟೇಶ್ವರ ದಲ್ಲಿ ಸಂವಿಧಾನ ದಿನಾಚರಣೆ.

ಕೋಟೀಶ್ವರ : ಪಬ್ಲಿಕ್ ಸ್ಕೂಲ್ ನ ಪ್ರೌಢಶಾಲಾ ವಿಭಾಗದಲ್ಲಿ ಸಿಂವಿಧಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.ಕಾರ್ಯಕ್ರಮ ನಿಮಿತ್ತ ಅಧ್ಯಾಪಕಿ ದೀಪಿಕರವರು ಮಾತನಾಡಿ ಕರ್ತವ್ಯವನ್ನು ಪಾಲಿಸಿದಾಗ ಮಾತ್ರ ಹಕ್ಕುಗಳ ಚಲಾವಣೆಗೆ ಅರ್ಥ ಪ್ರಾಪ್ತಿಯಾಗುತ್ತದೆ.ಸಾಂವಿಧಾನಿಕ ಮೌಲ್ಯಗಳನ್ನು ನಾವು ಅಳವಡಿಸಿಕೊಂಡು ನಾವು ದೇಶಪ್ರೇಮಿ ನಾಗರಿಕರಾಗಿ ಬಾಳೋಣ ಎಂದು ಅಭಿಮತಿ ಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಶಿಕ್ಷಕಿ ಜಯಶ್ರೀ ಭಟ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಅಂಬೇಡ್ಕರರ ಜ್ಞಾನ,ದೂರದರ್ಶಿತ್ವ ಹಾಗೂ ಶೋಷಿತರ ಪರವಾದ ಕಾಳಜಿಯಿಂದ ನಮ್ಮ ಸಂವಿಧಾನ ಶ್ರೇಷ್ಠವಾದ ಸ್ಥಾನ ಪಡೆದಿದೆ ಎಂದು ಪ್ರತಿಪಾದಿಸಿದರು.ವಿದ್ಯಾರ್ಥಿಗಳು “ಏಕ ಸಂವಿಧಾನ ಶ್ರೇಷ್ಠ ಸಂವಿಧಾನ” ಎಂಬ ವಿಷಯದ ಕುರಿತಾಗಿ ಮಾತನ್ನಾಡಿದರು.ಶಿಕ್ಷಕಿ ನಾಗರತ್ನ ಮಾರ್ಕೋಡ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ದಿವ್ಯಪ್ರಭ ರವರು ವಂದಿಸಿದರು. ಹಿರಿಯ ಶಿಕ್ಷಕ ಶ್ರೀಕಾಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಿಕ್ಷಕ ರಮಾನಂದ ನಾಯಕ್ ಸರ್ವರನ್ನು ಸ್ವಾಗತಿಸಿದರು.ಸಮಾರಂಭದಲ್ಲಿ ಶಿಕ್ಷಕ ಸಿಬ್ಬಂದಿಗಳು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸಂವಿಧಾನ ದಿನಾಚರಣೆ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.ಬಹುಮಾನಿತ ವಿದ್ಯಾರ್ಥಿಗಳ ಪಟ್ಟಿಯನ್ನು ಶಿಕ್ಷಕಿ ರಜನಿರವರು ವಾಚಿಸಿದರು.