Categories
ಕರಾವಳಿ ಸುದ್ದಿ

ತಾಲೂಕು ಮಟ್ಟದ ಕ್ರೀಡಾಕೂಟ : ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರಕ್ಕೆ ಸಮಗ್ರ ತಂಡ ಪ್ರಶಸ್ತಿ

ಕುಂದಾಪುರ :ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ಮತ್ತು ಸರಕಾರಿ ಪ್ರೌಢಶಾಲೆ ವಕ್ವಾಡಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್, ಕೋಟೇಶ್ವರ ಇಲ್ಲಿನ ಕ್ರೀಡಾಳುಗಳು 17ರ ವಯೋಮಾನದ ಬಾಲಕರ ತಂಡ ಪ್ರಶಸ್ತಿ ಹಾಗೂ 17 ರ ವಯೋಮಾನದ ಬಾಲಕ ಬಾಲಕಿಯರ ಸಮಗ್ರ ತಂಡ ಪ್ರಶಸ್ತಿ 14ರ ವಯೋಮಾನದ ಬಾಲಕ ಬಾಲಕಿಯರ ಕೋಟೇಶ್ವರ ವೃತ್ತ ಮಟ್ಟದ ಸಮಗ್ರ ತಂಡ ಪ್ರಶಸ್ತಿ ಪಡೆಯುವುದರ ಮೂಲಕ ಕ್ರೀಡಾಕೂಟದಲ್ಲಿ ಅಗ್ರಗಣ್ಯ ಸಾಧನೆ ಮಾಡಿರುತ್ತಾರೆ ವೈಷ್ಣವಿ ಎತ್ತರ ಜಿಗಿತ ಪ್ರಥಮ ಪ್ರಥಮ್ 200 ಮೀ ಪ್ರಥಮ ಸುಭಾನ್ ಉದ್ದ ಜಿಗಿತ ಪ್ರಥಮ ಆದಿತ್ಯ 80 ಮೀ ಹರ್ಡಲ್ಸ್ ಪ್ರಥಮ ವೈಷ್ಣವಿ 100 ಮೀ ರ್ಹರ್ಡಲ್ಸ್ ದ್ವಿತೀಯ ಬ್ರಾಹ್ಮಿ100 ಮೀ ದ್ವಿತೀಯ ವೈಷ್ಣವಿ ಹ್ಯಾಮರ್ ತ್ರೋ ದ್ವಿತೀಯ ಗಾಯನ ಉದ್ದ ಜಿಗಿತ ದ್ವಿತೀಯ ಸುಶಾಂತ ಗುಂಡು ಎಸೆತ ದ್ವಿತೀಯ ಸಮೃದ್ಧಿ ಗುಂಡು ಎಸೆತ ದ್ವಿತೀಯ ಆದರ್ಶ್ ಉದ್ದ ಜಿಗಿತ ದ್ವಿತೀಯ ಅವನಿ 100 ಮೀಟರ್ ತೃತೀಯ ವಿವೇಕ್ ತ್ರಿವಿಧ ಜಿಗಿತ ತೃತೀಯ ಪ್ರಥಮ್ 100 ಮೀ ಓಟ ತೃತೀಯ ಗಾಯನ ಎತ್ತರ ಜಿಗಿತ ತೃತೀಯ ಪ್ರಣಮ್ ಡಿಸ್ಕಸ್ ತ್ರೋ ತೃತೀಯ ಸಮೀಕ್ಷಾ ಚಕ್ರ ಎಸೆತ ತೃತೀಯ ಸುಶಾಂತ್ 80 ಮೀ ಹರ್ಡಲ್ಸ್ ತೃತೀಯ 17ರ ಬಾಲಕರ 4*1೦೦ ಮೀ ರಿಲೇ ಪ್ರಥಮ 14ರ ಬಾಲಕರ 4*100 ಮೀ ದ್ವಿತೀಯ 14ರ ಬಾಲಕಿಯರ 4*100 ಮೀಟರ್ ರಿಲೇ ದ್ವಿತೀಯ 17ರ ಬಾಲಕರ 4* 400 ಮೀ ರಿಲೇ ದ್ವಿತೀಯ ಹೀಗೆ ಒಟ್ಟು 8 ಚಿನ್ನ 22 ಬೆಳ್ಳಿ 8 ಕಂಚಿನ ಪದಕದೊಂದಿಗೆ ಸಮಗ್ರ ತಂಡ ಪ್ರಶಸ್ತಿಗೆ ಪಾತ್ರರಾದ ಕ್ರೀಡಾಳುಗಳ ಸಾಧನೆಯನ್ನು ಸಂಸ್ಥೆಯ ಉಪ ಪ್ರಾಂಶುಪಾಲರಾದ ಚಂದ್ರಶೇಖರ್ ಶೆಟ್ಟಿ ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ ಹೊಳ್ಳ ಮತ್ತು ಉದಯ ಮಡಿವಾಳ ಎಂ ಅಭಿನಂದಿಸಿದ್ದಾರೆ

Categories
ಕರಾವಳಿ ಸುದ್ದಿ

ಎತ್ತರ ಜಿಗಿತ ಸ್ಪರ್ಧೆ ಸಂಹಿತ ಶೆಟ್ಟಿ ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಕುಂದಾಪುರ: ಕರ್ನಾಟಕ ಸರ್ಕಾರ ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ವಲಯ ಹಾಗೂ ಸರಕಾರಿ ಪ್ರೌಢಶಾಲೆ ವಕ್ವಾಡಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ೧೪ರ ವಯೋಮಿತಿಯೊಳಗಿನ ಎತ್ತರ ಜಿಗಿತ ಸ್ಪರ್ಧೆಯಲ್ಲಿ ನಮ್ಮ ಎಕ್ಸಲೆಂಟ್ ಪ್ರೌಢಶಾಲೆಯ ೯ನೇ ತರಗತಿಯ ಸಂಹಿತ ಶೆಟ್ಟಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿರುತ್ತಾಳೆ. ಈ ಅತ್ಯುತ್ತಮ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗೆ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರಾದ ಎಂ ಮಹೇಶ್ ಹೆಗ್ಡೆ, ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ಸರೋಜಿನಿ ಪಿ ಆಚಾರ್ಯ ಹಾಗೂ ಶಿಕ್ಷಕ-ಶಿಕ್ಷಕೇತರ ವರ್ಗದವರು ಅಭಿನಂದನೆ ಸಲ್ಲಿಸುತ್ತಾ, ಮುಂದಿನ ಎಲ್ಲಾ ಹಂತದಲ್ಲೂ ವಿಜಯ ಸಾಧಿಸಲಿ ಎಂದು ಶುಭ ಹಾರೈಸಿದ್ದಾರೆ.

Categories
ಕರಾವಳಿ ಸುದ್ದಿ

ಅಂತರ್ ಕಾಲೇಜು ಮಟ್ಟದ ಪೆಸ್ಟ್ನಲ್ಲಿ ಸಮಗ್ರ ಪ್ರಥಮ ಚಾಂಪಿಯನ್‌ಶಿಫ್

ಕುಂದಾಪುರ: “ಉಗಮ-೨೦೨೫” ಡಾ. ಬಿ. ಬಿ ಹೆಗ್ಡೆ ಕಾಲೇಜು, ಕುಂದಾಪುರ ಇವರ ಆಶ್ರಯದಲ್ಲಿ ನಡೆದ ‘ಅಂತರ್ ಕಾಲೇಜು ಪೆಸ್ಟ್-೨೦೨೫’ ಉಡುಪಿ ಜಿಲ್ಲಾ ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ ೧೬ ಕಾಲೇಜುಗಳಲ್ಲಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ತಂಡವು ಉಡುಪಿ ಜಿಲ್ಲೆಗೆ ಪ್ರಥಮ ಚಾಂಪಿಯನ್‌ಶಿಫ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರಥಮ ೦೩, ದ್ವಿತೀಯ ೦೨, ಹಾಗೂ ತೃತೀಯ ೦೧ ಪ್ರಶಸ್ತಿಗಳೊಂದಿಗೆ ಉಡುಪಿ ಜಿಲ್ಲೆಯಲ್ಲಿ ಅತ್ಯುತ್ತಮ ಚಾಂಪಿಯನ್‌ಶಿಫ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಸಾಧನೆಯನ್ನು ಮಾಡಿದ ನಮ್ಮ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ಅಧ್ಯಕ್ಷರು ಎಂ. ಮಹೇಶ್ ಹೆಗ್ಡೆ, ಪ್ರಾಂಶುಪಾಲರು ನಾಗರಾಜ್ ಶೆಟ್ಟಿ ಹಾಗೂ ಬೋಧಕ- ಬೋಧಕೇತರ ವರ್ಗದವರು ಶುಭಹಾರೈಸಿದ್ದಾರೆ.

Categories
ಕರಾವಳಿ ಸುದ್ದಿ

ಕುಂದಾಪುರದಲ್ಲಿ ಕನ್ನಡ ಹಬ್ಬ

ಕುಂದಾಪುರ: ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್‌ ಇವರ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ  ಸತತ 24ಗಂಟೆಗಳ ಸರಣಿ ಕಾರ್ಯಕ್ರವು ಕಲಾಮಂದಿರ ,ಬೋರ್ಡ್‌ ಹೈಸ್ಕೊಲ್‌ ಕುಂದಾಪುರದಲ್ಲಿ ಆಯೋಜಿಸಲಾಗಿದ್ದು.ಇಂದು ನವೆಂಬರ್‌ 01 ಸಂಜೆ 6.00ಕ್ಕೆ ಆರಂಭವಾಗಿ ನವೆಂಬರ್‌ 02 ಭಾನುವಾರ ಸಂಜೆ 6.00 ಗಂಟೆಯವರೆಗೆ ನಡೆಯಲ್ಲಿದೆ.

ಇಂದಿನ ಕಾರ್ಯಕ್ರಮಗಳ ವಿವರ:

ಸಂಜೆ 5.00ಕ್ಕೆ ಭಕ್ತಿ ಸಂಗೀತ ನಂತರ ಸಂಜೆ 6.00 ಕ್ಕೆ ಶ್ರೀ.ದಿನೇಶ್‌ ಹೆಗ್ಡೆ ಮೊಳಹಳ್ಳಿ ಅವರ ಸಭಾಧ್ಯಕ್ಷತೆಯಲ್ಲಿ ಶ್ರೀ ಪ್ರಮೋದ್‌ ಮಧ್ವರಾಜ್‌ ಮಾಜಿ ಸಚಿವರು ಕರ್ನಾಟಕ ಸರ್ಕಾರ ಇವರು ಉದ್ಘಾಟಿಸಲ್ಲಿದ್ದಾರೆ ಮಖ್ಯ ಅತಿಥಿಯಾಗಿ ಶ್ರೀ.ಕೆ.ಜಯಪ್ರಕಾಶ ಹೆಗ್ಡೆ ಮಾಜಿ ಸಚಿವರು ಕರ್ನಾಟಕ ಸರ್ಕಾರ ಹಾಗೂ ಅತಿಥಿಗಳಾಗಿ ಶ್ರೀ ರಾಜೇಶ್‌ ಕಾರಂತ್‌ ಕೊಲ್ಲೂರು ಶ್ರೀ ಮುಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಹಾಗೂ ಶ್ರೀ ಆದರ್ಶ ಶೆಟ್ಟಿ ಹಾಲಾಡಿ ಗೋಲ್ಡನ್‌ ಪೋರ್ಕ್‌ ಹಾಸ್ಪಟಾಲಿಟಿ ಮುಂಬೈ ಇವರು ಆಗಮಿಸಲ್ಲಿದ್ದಾರೆ.ರಾತ್ರಿ 7.00ಕ್ಕೆ ಮಳೆ ನಿಂತು ಹೋದ ಮೇಲೆ ಜಯಂತ್‌ ಕಾಯ್ಕಿಣಿ ಯವರ ಹಾಡುಗಳ ಮಳೆ ಹಾಗೂ ರಾತ್ರಿ 9.30ಕ್ಕೆ ಶ್ರೀ ಮಂಜುನಾಥ ಕುಂದೇಶ್ವರ ಹಾಸ್ಯ ಕಲಾವಿದ ಅವರಿಂದ ಮಿಮಿಕ್ರಿ ಹಾಗೂ ರಾತ್ರಿ 10.00ಕ್ಕೆ ಶ್ರೀ ರಾಮಾಂಜನೇಯ ಮತ್ತು ನಾಗಶ್ರೀ ಯಕ್ಷಗಾನ ಪ್ರಸಂಗ ನಡೆಯಲ್ಲಿದೆ.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ದಕ್ಷಿಣಾಯನ

ಶರದ್ : ಋತು

ಕಾರ್ತಿಕ: ಮಾಸ

ಶುಕ್ಲ ಪಕ್ಷ

ದಶಮಿ: ತಿಥಿ

ಶತಭಿಷ: ನಕ್ಷತ್ರ

ಶನಿವಾರ

01.11.2025

ಈ ದಿನ ಎಲ್ಲರಿಗೂ ಶುಭವಾಗಲಿ