ಶುಭ ದಿನದ ಪಂಚಾಂಗ
ಕಲಿಯುಗಾಬ್ದ 5127
ವಿಶ್ವಾವಸು ಸಂವತ್ಸರ
ದಕ್ಷಿಣಾಯನ
ಶರದ್ : ಋತು
ಕಾರ್ತಿಕ: ಮಾಸ
ಶುಕ್ಲ ಪಕ್ಷ
ತ್ರಯೋದಶಿ: ತಿಥಿ
ಉತ್ತರಭಾದ್ರ: ನಕ್ಷತ್ರ
ಸೋಮವಾರ
03.11.2025
ಈ ದಿನ ಎಲ್ಲರಿಗೂ ಶುಭವಾಗಲಿ


ಉಡುಪಿ : ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠದ ಪರಮಪೂಜ್ಯ ಶ್ರೀಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಅಪೂರ್ವ ಜಾಗತಿಕ ಯೋಜನೆಯಾದ “ಕೋಟಿ ಗೀತಾ ಲೇಖನ ಯಜ್ಞ” ಮತ್ತು ಗೀತಾ ಜಯಂತಿಗಳ ಅಂಗವಾಗಿ ಉಡುಪಿ ಶ್ರೀಕೃಷ್ಣಮಠದಲ್ಲಿ “ಬೃಹತ್ ಗೀತೋತ್ಸವ” ವೆಂಬ ಹೆಸರಿನ , ಒಂದು ತಿಂಗಳ ಪರ್ಯಂತ ನಡೆಯುವ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದರ ಅಂಗವಾಗಿ ರಾಜಾಂಗಣದ ಬಳಿ ವಿವಿಧ ಕಾರ್ಯಕರ್ತರ ವಿವಿಧ ಸಂವಹನಗಳಿಗಾಗಿ ಗೀತೋತ್ಸವ ಕಾರ್ಯಾಲಯವನ್ನು ತೆರಲಾಯಿತು.
ದೀಪ ಬೆಳಗುವ ಮೂಲಕ ಪೂಜ್ಯ ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದರು ಕಾರ್ಯಾಲಯವನ್ನು ಉದ್ಘಾಟಿಸಿದರು.ತದನಂತರ ರಾಜಾಂಗಣದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅನುಗ್ರಹಿಸಿದ ಪೂಜ್ಯ ಪರ್ಯಾಯ ಶ್ರೀಪಾದರು ತಮ್ಮ ವಿಶ್ವ ಗೀತಾ ಪರ್ಯಾಯ ದಲ್ಲಿ ಭಗವದ್ಗೀತೆಯ ತತ್ವವನ್ನೇ ಜೀವನದಲ್ಲಿ ಅಳವಡಿಸಿಕೊಂಡಿರುವ ವಿಶ್ವದೆಲ್ಲೆಡೆ ಸಂಚರಿಸಿದಾಗ ಭಗವದ್ಗೀತೆಯನ್ನು ಉಡುಗೊರೆಯಾಗಿ ವಿಶ್ವ ನಾಯಕರಿಗೆ ನೀಡುವ ಪರಿಪಾಠವನ್ನು ರೂಢಿಸಿಕೊಂಡಿರುವ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ನವಂಬರ್ ೨೮ ರಂದು ಉಡುಪಿಗೆ ಆಗಮಿಸಿ ಶ್ರೀಕೃಷ್ಣನ ದರ್ಶನಕ್ಕೆ ಆಗಮಿಸುತ್ತಿರುವುದು ನಮಗೆ ತುಂಬ ಸಂತಸವನ್ನು ತಂದಿದೆ.
ಇದೆಲ್ಲವೂ ಗೀತಾಚಾರ್ಯ ಶ್ರೀಕೃಷ್ಣನ ಸಂಕಲ್ಪವಾಗಿದೆ. ನೀವೆಲ್ಲರೂ ಈ ಉತ್ಸವದ ಯಶಸ್ಸಿಗೆ ಸಹಕರಿಸಬೇಕು, ತನ್ಮೂಲಕ ಶ್ರೀಕೃಷ್ಣ ಮುಖ್ಯಪ್ರಾಣರ ಪರಮಾನುಗ್ರಹಕ್ಕೆ ಪಾತ್ರರಾಗಬೇಕೆಂದು ಅನುಗ್ರಹಿಸಿದರು .
ಈಗಾಗಲೇ ವಿಜೃಂಭಣೆಯಿಂದ ಶಾರದೋತ್ಸವವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಯಶಸ್ವಿಗಳಾದ ಶ್ರೀ ಸುಪ್ರಸಾದ ಶೆಟ್ಟಿಯವರ ಸಂಚಾಲಕತ್ವದಲ್ಲಿ ಕಾರ್ಯಕ್ರಮವನ್ನು ಸಂಘಟಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.ದಿವಾನರಾದ ಶ್ರೀ ನಾಗರಾಜಾಚಾರ್ಯ ರವರು ಮಾತನಾಡಿ ವಿವಿಧ ಸಮಿತಿಗಳನ್ನು ಉಲ್ಲೇಖಿಸಿ ಎಲ್ಲ ಸಮುದಾಯದ ಆಸಕ್ತ ಜನರು ಪಾಲ್ಗೊಳ್ಳುವ ಮೂಲಕ ಬೃಹತ್ ಮಾಸೋತ್ಸವ ಕಾರ್ಯಕ್ರಮವನ್ನು ಯಶಸ್ವಿಗಿಳಿಸುವಂತೆ ವಿನಂತಿಸಿದರು.
ಸಂಚಾಲಕ ರಾದ ಶ್ರೀ ಬೈಕಾಡಿ ಸುಪ್ರಸಾದ್ ಶೆಟ್ಟಿಯವರು ಮಾತನಾಡಿ ಹಿಂದೂ ಸಮಾಜೋತ್ಸವದ ಮಾದರಿಯಲ್ಲಿ ವಿವಿಧ ಸಂಘಟನೆ ಗಳ ಸಹಕಾರದೊಂದಿಗೆ ಬೃಹತ್ತಾಗಿ ಯಶಸ್ವಿಯಾಗಿ ಮಾಡಲು ವಿನಂತಿಸಿ ಎಲ್ಲರ ಸಹಕಾರವನ್ನು ಕೋರಿದರು.
ಕಾರ್ಯದರ್ಶಿ ಶ್ರೀ ಪ್ರಸನ್ನಾಚಾರ್ಯ ಸನ್ಮಾನ್ಯ ಪ್ರಧಾನಿಯವರ ಭೇಟಿಯ ವಿವರವನ್ನು ನೀಡಿ ಸಾರ್ವಜನಿಕರು ಮುಕ್ತವಾಗಿ ಸಭೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.ಗೀತೋತ್ಸವದ ಮಾಹಿತಿಯನ್ನು ಪ್ರಮೋದ್ ಸಾಗರ್ ರವರೂತ್ ನೀಡಿದರು ರಮೇಶ ಭಟ್ ಸ್ವಾಗತಿಸಿದರು . ವಿಕ್ರಂ ಕುಂಟಾರ ರವರು ವಂದಿಸಿದರು.
ಸಭೆಯಲ್ಲಿ ಸಾರ್ವಜನಿಕ ಶಾರದೋತ್ಸವ ಸಮಿತಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು, ಹಿಂದೂ ಜಾಗರಣ ವೇದಿಕೆ, ದೈವಜ್ಞ ಬ್ರಾಹ್ಮಣರ ಸಂಘ, ರಾಮ ಕ್ಷತ್ರಿಯ ಸಂಘ, ಮನೋಳಿಗುಜ್ಜಿ ಗಣೇಶೋತ್ಸವ ಸಮಿತಿ, ಗಾಣಿಗ ಸಮಾಜ, ಉಡುಪಿ ತಾಲೂಕು ಮಾತೃ ಮಂಡಳಿ, ತಾಲೂಕು ಬ್ರಾಹ್ಮಣರ ಸಂಘ, ಅಯ್ಯಪ್ಪ ಸೇವಾ ಮಹಿಳಾ ಮಂಡಳಿ, ಫಣಿಯಾಡಿ ಯುವಕರ ಸಂಘ, ಕಡಿಯಾಳಿ ಗೆಳೆಯರ ಬಳಗ, ನವಚೇತನ ಯುವಕ ಮಂಡಲ ಮೊದಲಾದ ಸಂಘ ,ಯುವ ಬ್ರಾಹ್ಮಣ ಪರಿಷತ್,ತು ಶಿ ಮಾ ಮ ಮೊದಲಾದ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.
ಉಡುಪಿ : ಜಿಲ್ಲಾಡಳಿತ ವತಿಯಿಂದ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ 2025 ಕಾರ್ಯಕ್ರಮದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ರವರು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದವರಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಎ ಗಫೂರ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ್ ಹೇರೂರು, ಜಿಲ್ಲಾಧಿಕಾರಿಗಳಾದ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರತೀಕ್ ಬಾಯಲ್, ಪೋಲಿಸ್ ವರಿಷ್ಠಾಧಿಕಾರಿಗಳಾದ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿಗಳಾದ ಅಬಿದ್ ಗಡ್ಯಾಲ್ ಮತ್ತು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಪು : ತಾಲೂಕು ಆಡಳಿತ ಸೌಧ (ಪ್ರಜಾಸೌಧ) ಇಲ್ಲಿ ಆಯೋಜಿಸಲಾದ “70ನೇ ಕನ್ನಡ ರಾಜ್ಯೋತ್ಸವ”ದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಕಾಪು ಪುರಸಭೆಯ ಅಧ್ಯಕ್ಷರಾದ ಹರಿಣಾಕ್ಷಿ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ಕುಮಾರ್, ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪುಂಡಲೀಕ ಮರಾಠೆ, ತಹಶೀಲ್ದಾರದ ಅನಂತ ಶಂಕರ್, ಕಾಪು ಪುರಸಭೆಯ ಮುಖ್ಯಾಧಿಕಾರಿಗಳಾದ ನಾಗರಾಜ್, ಕಾಪು ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಾದ ಜೇಮ್ಸ್ ಡಿಸಿಲ್ವ, ಕಾಪು ವೃತ್ತ ನಿರೀಕ್ಷಕರು ಹಾಗೂ ಕಾಪು ಪುರಸಭೆಯ ಸದಸ್ಯರು, ಕಾಪು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕುಂದಾಪುರ : ಮುಂದಿನ ಪೀಳಿಗೆಗೆ ಕನ್ನಡ ರಾಜ್ಯೋತ್ಸವದ ಅರಿವು ಮೂಡಿಸಬೇಕು 70ನೆಯ ಕನ್ನಡ ರಾಜ್ಯೋತ್ಸವದ ದಿನಾಚರಣೆ ಕುಂದಾಪುರ ಗಾಂಧಿ ಮೈದಾನದಲ್ಲಿ ತಾಲೂಕು ಆಡಳಿತ ಕುಂದಾಪುರ ಇವರಿಂದ ಆಯೋಜಿಸಲಾದ ಕನ್ನಡ ಹಬ್ಬದ ಕಾರ್ಯಕ್ರಮದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕನ್ನಡ ರಾಜ್ಯೋತ್ಸವವನ್ನು ಸ್ಥಳೀಯವಾಗಿರುವ ಎಲ್ಲ ಶಾಲಾ ಮಕ್ಕಳು ಮುಂದಿನ ದಿವಸ ಭಾಗಿಯಾಗುವಂತೆ ಸಂಬಂಧಪಟ್ಟ ಶಿಕ್ಷಣಾಧಿಕಾರಿಗಳು ಸೂಚಿಸಿ ಪ್ರತಿ ವರ್ಷವೂ ಬೇರೆ ಬೇರೆ ಶಾಲೆಯಲ್ಲಿ ನಾವೆಲ್ಲ ಆಚರಿಸುವಂತಹ ವಾಲ್ಮೀಕಿ ಜಯಂತಿ ಇರಬಹುದು ಹೀಗೆ ಬೇರೆ ಬೇರೆ ದಿನಾಚರಣೆಯನ್ನು ಆಚರಿಸುದರೊಂದಿಗೆ ಮಕ್ಕಳಿಗೆ ಇದರ ಮಹತ್ವವನ್ನು ತಿಳಿಸಿ, ದೇಶ ಪ್ರೇಮದ ಜೊತೆಗೆ ಮತ್ತು ನಾಡಿನ ಬಗ್ಗೆ ಅರಿವು ಮೂಡಿಸುವಂತಹ ಆಗಬೇಕು ಎಂದರು.
ರಾಜ್ಯೋತ್ಸವದ ಸಂದೇಶ ಹಾಗೂ ಧ್ವಜಾರೋಹಣವನ್ನು ಶ್ರೀಮತಿ ರಶ್ಮಿ ಎಸ್.ಆರ್.ಕ.ಆ.ಸೇ. ಸಹಾಯಕ ಆಯುಕ್ತರು ಕುಂದಾಪುರ ಉಪ ವಿಭಾಗ ನೆರವೇರಿಸಿದರು.
ಈ ಕಾರ್ಯಕ್ರಮದ ಘನ ಉಪಸ್ಥಿತಿಯಲ್ಲಿ ಮೋಹನ್ ದಾಸ್ ಶೆಣೈ ಅಧ್ಯಕ್ಷರು ಪುರಸಭೆ ಕುಂದಾಪುರ, ವಿನೋದ್ ಕ್ರಾಸ್ತಾ ಅಧ್ಯಕ್ಷರು ಯೋಜನಾ ಪ್ರಾಧಿಕಾರ ಸಮಿತಿ ಕುಂದಾಪುರ,, ಎಚ್ ಹರಿಪ್ರಸಾದ್ ಶೆಟ್ಟಿ ಅಧ್ಯಕ್ಷರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ,, ಎಚ್ ಡಿ ಕುಲಕರ್ಣಿ ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಉಪವಿಭಾಗ,, ಮಹೇಶ್ ಕೆ ಜಿ ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತ್ ಕುಂದಾಪುರ,, ಶ್ರೀಮತಿ ಎಚ್ ಶೋಭಾ ಶೆಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿ ಕುಂದಾಪುರ,, ಆನಂದ ಜಿ ಮುಖ್ಯ ಅಧಿಕಾರಿ ಪುರಸಭೆ ಕುಂದಾಪುರ,, ಪ್ರದೀಪ್ ಕುರುಡೇಕರ್ ಎಸ್. ತಹಶೀಲ್ದಾರರು ಹಾಗೂ ಅಧ್ಯಕ್ಷರು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಕುಂದಾಪುರ ಮತ್ತು ಜನಪ್ರತಿನಿಧಿಗಳು ಊರಿನ ಗಣ್ಯರು,, ವಿದ್ಯಾರ್ಥಿಗಳು ಮತ್ತು ನಾಗರಿಕರು ಉಪಸ್ಥಿತರಿದ್ದರು

ಉಪ್ಪಳ: ಮಂಗಳೂರು ಮೂಲದ ರೌಡಿಶೀಟರ್, ಜೋಡಿಕೊಲೆ ಆರೋಪಿ ಮಂಗಳೂರಿನ ಬಜಾಲ್ ಫೈಝಲ್ ನಗರ ನಿವಾಸಿಯಾಗಿದ್ದ ನೌಫಲ್ ಬಜಾಲ್ ಯಾನೆ ತುಕ್ಕ ನೌಫಲ್ ಎಂಬಾತತನ್ನು ಉಪ್ಪಳದಲ್ಲಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಈತ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.
ನೌಫಲ್ ನ ಮೃತದೇಹವನ್ನು ಕಾಸರಗೋಡಿನ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಕಿರಿಮಂಜೇಶ್ವರ : ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಬಹಳ ಅದ್ದೂರಿಯಿಂದ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಕನ್ನಡದ ಜ್ಯೋತಿ ಬೆಳಗುವುದರ ಮೂಲಕ ಕನ್ನಡ ಮನಸುಗಳೆಲ್ಲ ಒಂದಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಜನತಾ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದಂತಹ ಶ್ರೀ ಗಣೇಶ ಮೊಗವೀರ ಅವರು ಶುಭಾಶಯಗಳನ್ನು ತಿಳಿಸಿದರು. ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡರು. ಸಂಯೋಜಕರಾದಂತ ಸುಬ್ರಹ್ಮಣ್ಯ ಮರಾಠಿ ಇವರು ಉಪಸ್ಥಿತರಿದ್ದರು. ಈ ಶುಭ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ‘ಜನತಾ ಚಿತ್ರ ಸಿರಿ’ ಎನ್ನುವಂತಹ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ಬಿಡಿಸಿದಂತಹ ಚಿತ್ರಗಳನ್ನು ಪ್ರದರ್ಶಿಸಿ, ಅತ್ಯುತ್ತಮ ಚಿತ್ರಗಳಿಗೆ ಮುಂದೆ ನಡೆಯುವಂತಹ ಜನತಾ ವ್ಯವಹಾರ ಮೇಳದಲ್ಲಿ ಬಹುಮಾನವನ್ನು ವಿತರಿಸಲಾಗುವುದು ಎಂದು ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕಿಯರು ಕನ್ನಡ ನಾಡು ನುಡಿಗಳನ್ನು ಬಿಂಬಿಸುವಂತಹ ಗೀತೆಗಳಿಗೆ ದನಿಯಾದರು. ಶಿಕ್ಷಕಿ ಕುಮಾರಿ ಶ್ವೇತಾ ಅವರು ಕನ್ನಡ ನಾಡು ನುಡಿಯ ಕುರಿತಾದ ಮಹತ್ವದ ವಿಚಾರಗಳನ್ನು ಹಂಚಿಕೊಂಡರು. ಶಿಕ್ಷಕಿಯರಾದ ಸುಜಾತ ಅವರು ಸ್ವಾಗತಿಸಿ ಶಶಿಕಲಾ ಕಾರ್ಯಕ್ರಮವನ್ನು ನಿರೂಪಿಸಿ ಶಾಂಭವಿ ವಂದಿಸಿದರು.
ಭಟ್ಕಳ: ಸ್ಥಳೀಯ ವ್ಯಾಪಾರಿ ಮಹಮದ್ ಶಬೀ ಅವರಿಂದ 21 ಲಕ್ಷ ರೂ. ಪಡೆದು ವಂಚಿಸಿದ ಆಸಿಪ್ ಇಕ್ಬಾಲ್ ಭಟ್ಕಳದ ನಿವಾಸಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಭಟ್ಕಳದ ಸುಲ್ತಾನ್ ಸ್ಟ್ರೀಟ್ ಪ್ರದೇಶದ ನಿವಾಸಿ ಮಹಮದ್ ಶಬೀ ಅವರಿಗೆ, ಬಂದರು ರಸ್ತೆ ಭಾಗದ ಆಸಿಪ್ ಇಕ್ಬಾಲ್ ಅವರ ಪರಿಚಯವಿತ್ತು. ವ್ಯವಹಾರದ ವೇಳೆ ಆಸಿಪ್ ಇಕ್ಬಾಲ್ ಅವರು ತಮ್ಮ ಹೆಸರಿನಲ್ಲಿ “ಮೆಟ್ರೋ ಇನ್‌ಪೋಟೆಕ್ ಪ್ರೈವೇಟ್ ಲಿಮಿಟೆಡ್” ಕಂಪನಿಯ ಟೆಂಡರ್ ದೊರೆತಿದೆ ಎಂದು ಹೇಳಿ, ನಕಲಿ ದಾಖಲೆಗಳನ್ನು ತೋರಿಸಿ ವಿಶ್ವಾಸ ಗಳಿಸಿದ್ದರೆಂದು ತಿಳಿದುಬಂದಿದೆ.
ಅವರು “ಪ್ರಾಜೆಕ್ಟ್ ಆರಂಭವಾದ ನಂತರ ಮೂರು ಪಟ್ಟು ಲಾಭ ಸಿಗುತ್ತದೆ” ಎಂದು ಭರವಸೆ ನೀಡಿ, ಪ್ರಾರಂಭದಲ್ಲಿ 5 ಲಕ್ಷ ರೂಪಾಯಿ ಪಡೆದುಕೊಂಡರು. ಬಳಿಕ ರೈಲು ನಿಲ್ದಾಣದ ಬಳಿ ಭೇಟಿ ಮಾಡಿ ಮತ್ತಷ್ಟು 13 ಲಕ್ಷ ರೂಪಾಯಿ ಸ್ವೀಕರಿಸಿದರೆಂದು ಶಬೀ ಆರೋಪಿಸಿದ್ದಾರೆ. ನಂತರ ಮೊಬೈಲ್ ಟ್ರಾನ್ಸ್ಫರ್ ಮೂಲಕ ಉಳಿದ ಹಣವನ್ನು ಪಡೆದಿದ್ದಾರೆ.
ಆದರೆ ಬಳಿಕ ಹಣವನ್ನು ಹಿಂತಿರುಗಿಸದೇ ಸಂಪರ್ಕ ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ, ಮಹಮದ್ ಶಬೀ ಅವರು ಭಟ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ
ಉಡುಪಿ : ‘ಉಕ್ಕಿನ ಮನುಷ್ಯ’ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಬಿಜೆಪಿಯಿಂದ ‘ಏಕತಾ ನಡಿಗೆ’ಹುಟ್ಟು ಸಾವಿನ ನಡುವೆ ನಾವು ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂಬುದನ್ನು ಜನತೆ ಸದಾ ನೆನಪಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಒಂದು ದೇಶ ಎಂಬ ಪರಿಕಲ್ಪನೆಯಡಿ ರಾಷ್ಟ್ರೀಯ ಏಕೀಕರಣದ ರೂವಾರಿಯಾಗಿ ದೇಶದ ಸಮಗ್ರತೆಗೆ ಸಮರ್ಪಣಾ ಭಾವದ ಸೇವೆ ಸಲ್ಲಿಸಿರುವ ಧೀಮಂತ ನಾಯಕ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜೀವನಾದರ್ಶ ಸದಾ ಸ್ಮರಣೀಯ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಹೇಳಿದರು.
ಅವರು ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಬಿಜೆಪಿ ಉಡುಪಿ ನಗರದ ಸಹಯೋಗದೊಂದಿಗೆ ದೇಶದ ಮೊದಲ ಉಪ ಪ್ರಧಾನಿ, ‘ಉಕ್ಕಿನ ಮನುಷ್ಯ’ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ಉಡುಪಿ ಕಲ್ಸಂಕದಿಂದ ಬಿಜೆಪಿ ಜಿಲ್ಲಾ ಕಛೇರಿಯ ವರೆಗೆ ನಡೆದ ‘ಏಕತಾ ನಡಿಗೆ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ದೇಶದ ನೂರಾರು ಕಡೆಗಳಲ್ಲಿ ರಾಜರ ಆಡಳಿತವಿದ್ದ ಸಂಸ್ಥಾನಗಳನ್ನು ದೇಶದೊಂದಿಗೆ ವಿಲೀನಗೊಳಿಸಿ ದೇಶದ ಅಖಂಡತೆ ಮತ್ತು ಏಕತೆಗೆ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಕೊಡುಗೆ ಅನನ್ಯ. ಅವರ ಉದಾತ್ತ ಚಿಂತನೆಗಳು ಪಕ್ಷದ ಕಾರ್ಯಕರ್ತರಿಗೆ ಪ್ರೇರಣಾದಾಯಕ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಬೈಲೂರು, ಮಹಾವೀರ ಹೆಗ್ಡೆ, ನಳಿನಿ ಪ್ರದೀಪ್ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಶ್ರೀಕಾಂತ್ ನಾಯಕ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ದಿಲ್ಲೇಶ್ ಶೆಟ್ಟಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ರಾಜ್ಯ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ದಿನಕರ ಬಾಬು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಪ್ರಧಾನ ಕಾರ್ಯದರ್ಶಿ ಶಶಾಂಕ್ ಶಿವತ್ತಾಯ, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ವಿಜಯ ಕೊಡವೂರು, ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಗ್ರಾಮಾಂತರ ಅಧ್ಯಕ್ಷ ರಾಜೀವ್ ಕುಲಾಲ್, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ರಾಜ್ಯ ನೇಕಾರ ಪ್ರಕೋಷ್ಠ ಸಮಿತಿ ಸದಸ್ಯ ರತ್ನಾಕರ ಇಂದ್ರಾಳಿ, ರಾಜ್ಯ ಕಾರ್ಮಿಕ ಪ್ರಕೋಷ್ಠ ಸಮಿತಿ ಸದಸ್ಯ ಶೈಲೇoದ್ರ ಶೆಟ್ಟಿ, ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಬಾಲಕೃಷ್ಣ ಶೆಟ್ಟಿ, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು, ಯುವ ಮೋರ್ಚಾ ಅಧ್ಯಕ್ಷ ಶ್ರೀವತ್ಸ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಡೇನಿಸ್ ಮಾಸ್ಕರೇನಸ್, ಎಸ್.ಟಿ. ಮೋರ್ಚಾ ಅಧ್ಯಕ್ಷೆ ಸುಮಾ ನಾಯ್ಕ್, ಗ್ರಾಮಾಂತರ ಮಹಿಳಾ ಮೋರ್ಚಾ ಅಧ್ಯಕ್ಷೆ ರಮ್ಯಾ ಪ್ರಭು ಹಾಗೂ ಪಕ್ಷದ ಪ್ರಮುಖರು, ಮೋರ್ಚಾ, ಪ್ರಕೋಷ್ಠ, ಮಂಡಲ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.