Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5128

ಪರಾಭವ ಸಂವತ್ಸರ

ಉತ್ತರಾಯಣ

ಗ್ರೀಷ್ಮ : ಋತು

ಅಧಿಕ ಜ್ಯೇಷ್ಠ : ಮಾಸ

ಶುಕ್ಲ  ಪಕ್ಷ

ಚತುರ್ದಶಿ : ತಿಥಿ

ವಿಶಾಖೆ : ನಕ್ಷತ್ರ

ಶನಿವಾರ

30.05.2026

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಕರಾವಳಿ ಸುದ್ದಿ

ಉಡುಪಿ ಜಿಲ್ಲಾ ಬಿಜೆಪಿಯ ವಿವಿಧ ಪ್ರಕೋಷ್ಠಗಳ ಸಂಚಾಲಕರು ಮತ್ತು ಸಹ ಸಂಚಾಲಕರುಗಳ ನಿಯುಕ್ತಿ

ಉಡುಪಿ ಜಿಲ್ಲಾ ಬಿಜೆಪಿಯ ವಿವಿಧ ಪ್ರಕೋಷ್ಠಗಳ ಸಂಚಾಲಕರುಗಳು ಮತ್ತು ಸಹ ಸಂಚಾಲಕರುಗಳನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ಅನುಮೋದನೆ ಮೇರೆಗೆ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರುಗಳಾದ ದಿಲ್ಲೇಶ್ ಶೆಟ್ಟಿ ಬೆಳ್ಳಂಪಳ್ಳಿ ಮತ್ತು ವಿಜಯ ಕೊಡವೂರು ಅವರು ನಿಯುಕ್ತಿಗೊಳಿಸಿ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.

ನಗರಾಡಳಿತ ಪ್ರಕೋಷ್ಠದ ಸಂಚಾಲಕರಾಗಿ ಕಾರ್ಕಡ ರಾಜು ಪೂಜಾರಿ, ಸಹ ಸಂಚಾಲಕರಾಗಿ ಸಂತೋಷ್ ಜತ್ತನ್ ನಿಟ್ಟೂರು, ಮೀನುಗಾರ ಪ್ರಕೋಷ್ಠದ ಸಂಚಾಲಕರಾಗಿ ಶರತ್ ಕುಮಾರ್ ಬೈಲಕೆರೆ, ಸಹ ಸಂಚಾಲಕರಾಗಿ ಸಂದೀಪ್ ಅಮೀನ್ ಕೂರಾಡಿ, ವೈದ್ಯಕೀಯ ಪ್ರಕೋಷ್ಠದ ಸಂಚಾಲಕರಾಗಿ ಡಾ! ವಿದ್ಯಾದರ ಶೆಟ್ಟಿ, ಸಹ ಸಂಚಾಲಕರಾಗಿ ಡಾ! ರಾಮಚಂದ್ರ ಕಾಮತ್, ಹಿರಿಯ ನಾಗರಿಕರ ಪ್ರಕೋಷ್ಠದ ಸಂಚಾಲಕರಾಗಿ ಮಧ್ವನಗರ ಶಂಕರ ಪೂಜಾರಿ, ಸಹ ಸಂಚಾಲಕರಾಗಿ ಕೃಷ್ಣಪ್ಪ ಜತ್ತನ್, ಪ್ರಕಾಶನ ಪ್ರಕೋಷ್ಠದ ಸಂಚಾಲಕರಾಗಿ ದುರ್ಗಾಪ್ರಸಾದ್ ಸಿ.ಹೆಚ್., ಸಹ ಸಂಚಾಲಕರಾಗಿ ಸತೀಶ್ ಎಸ್., ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸಂಚಾಲಕರಾಗಿ ವಸಂತ ಕಿಣಿ, ಸಹ ಸಂಚಾಲಕರಾಗಿ ಯೋಗೀಶ್ ಗುಡ್ರಿ, ಮಾಹಿತಿ ತಂತ್ರಜ್ಞಾನ ಪ್ರಕೋಷ್ಠದ ಸಂಚಾಲಕರಾಗಿ ಅಕ್ಷಯ್ ಪಿ. ಶೆಟ್ಟಿ, ಸಹ ಸಂಚಾಲಕರಾಗಿ ನರಸಿಂಹ ಗಾoಸ್ಕರ್, ಮಾಧ್ಯಮ ವಿಭಾಗದ ಸಹ ಸಂಚಾಲಕರಾಗಿ ಮಂಜುನಾಥ್ ಮಣಿಪಾಲ ಇವರುಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories
ಬ್ರೇಕಿಂಗ್ ನ್ಯೂಸ್

ಕ್ರಿಕೆಟ್ ವೈಷಮ್ಯದ ಪ್ರತೀಕಾರ : ಮನೆಗೆ ನುಗ್ಗಿ ಕೊಲೆ ಬೆದರಿಕೆ, ನಾಲ್ವರ ವಿರುದ್ಧ ಪ್ರಕರಣ

ಬೈಂದೂರು : ಒಂದು ವರ್ಷದ ಹಿಂದೆ ಕ್ರಿಕೆಟ್ ಆಟದ ವಿಚಾರವಾಗಿ ಆರಂಭವಾದ ವೈಷಮ್ಯ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಮನೆಗೆ ನುಗ್ಗಿ ಆಯುಧಗಳೊಂದಿಗೆ ಬೆದರಿಕೆ ಹಾಕಿದ ಆರೋಪದಡಿ ನಾಲ್ವರು ಸೇರಿದಂತೆ ಇತರರ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗೋಳಿಹೊಳೆ ಗ್ರಾಮದ ಶಿವರಾಜ್ ಶೆಟ್ಟಿ (38) ಅವರು ನೀಡಿದ ದೂರಿನ ಪ್ರಕಾರ, ಆರೋಪಿ ಪ್ರತಾಪ್ ಶೆಟ್ಟಿ ಹಾಗೂ ಅವರ ನಡುವೆ ಸುಮಾರು ಒಂದು ವರ್ಷದ ಹಿಂದೆ ಕ್ರಿಕೆಟ್ ಆಟದ ವಿಚಾರವಾಗಿ ಮನಸ್ತಾಪ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಶಿವರಾಜ್ ಶೆಟ್ಟಿ ಅವರು ಪ್ರತಾಪ್ ಶೆಟ್ಟಿಯನ್ನು ತಮ್ಮಿಂದ ದೂರವಿರಿಸಿದ್ದರು. ಬಳಿಕ ಪ್ರತಾಪ್ ಶೆಟ್ಟಿ ಅವರು ಪಿರ್ಯಾದಿದಾರರ ಬಗ್ಗೆ ಹಗುರವಾಗಿ ಮಾತನಾಡುತ್ತಾ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.

ದೂರಿನ ಪ್ರಕಾರ, ಮೇ 27ರಂದು ರಾತ್ರಿ ಸುಮಾರು 11.15 ಗಂಟೆಗೆ ಪ್ರತಾಪ್ ಶೆಟ್ಟಿ ತನ್ನ ಸಹಚರರಾದ ರಾಜು, ವಿಷ್ನೇಶ್ ಗಾಣಿಗ, ಪ್ರಸಾದ್ ಆಚಾರಿ ಹಾಗೂ ಇತರರನ್ನು ಜತೆಗಿಟ್ಟುಕೊಂಡು ಕಾರು ಮತ್ತು ಮೋಟಾರ್ ಸೈಕಲ್‌ಗಳಲ್ಲಿ ಶಿವರಾಜ್ ಶೆಟ್ಟಿ ಅವರ ಮನೆಗೆ ಆಗಮಿಸಿದ್ದಾರೆ. ಆರೋಪಿಗಳು ಮನೆಯ ಕಂಪೌಂಡ್ ಒಳಗೆ ಅತಿಕ್ರಮ ಪ್ರವೇಶ ಮಾಡಿ, ಕೈಯಲ್ಲಿ ಕಬ್ಬಿಣದ ರಾಡ್ ಸೇರಿದಂತೆ ಇತರ ಆಯುಧಗಳನ್ನು ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಶಿವರಾಜ್ ಶೆಟ್ಟಿ ನೀಡಿದ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 69/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 329(3), 352, 351(2) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Categories
ಬ್ರೇಕಿಂಗ್ ನ್ಯೂಸ್

ನಿಷೇಧಿತ ಎಂಡಿಎಂಎ ಸಾಗಾಟ : ಇಬ್ಬರು ವಶಕ್ಕೆ

ಬೆಳ್ತಂಗಡಿ : ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಂಬಳದಡ್ಡ ಎಂಬಲ್ಲಿ ಕಾರಿನಲ್ಲಿ ನಿಷೇಧಿತ ಎಂಡಿಎಂಎ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಸಲ್ವಾನ್ ವಶಕ್ಕೆ ಪಡೆದಿದ್ದಾರೆ.

ಮಿಜಾರು ನಿವಾಸಿ ತಕ್ಕವೀ‌ರ್ ಮಹಮ್ಮದ್ ತಹ್ನವೀ‌ರ್(27) ಹಾಗೂ ಮೂಡಬಿದ್ರೆ ನಿವಾಸಿ ಮಹಮ್ಮದ್ ಸಲ್ವಾನ್ (22) ಪೊಲೀಸರ ವಶದಲ್ಲಿರುವವರು.

ಪೊಲೀಸರು ಅಂದಾಜು 39,200 ರೂ. ಮೌಲ್ಯದ 3.92 ಗ್ರಾಂ ಎಂಡಿಎಂಎ ಹಾಗೂ ಕೃತ್ಯಕ್ಕೆ ಬಳಸಿದ ಕಾರಿನೊಂದಿಗೆ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಬ್ರೇಕಿಂಗ್ ನ್ಯೂಸ್

ಪರವಾನಿಗೆ ಇಲ್ಲದೆ ಮರಳು ಸಾಗಾಟ : ಮಿನಿ ಟಿಪ್ಪರ್ ವಶ

ಕುಂದಾಪುರ: ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಮಿನಿ ಟಿಪ್ಪರ್‌ನ್ನು ಕುಂದಾಪುರ ಪೊಲೀಸರು ವಶಪಡಿಸಿಕೊಂಡ ಘಟನೆ ಮೇ 27ರಂದು ಬೆಳಕಿಗೆ ಬಂದಿದೆ.

ದಿನಾಂಕ 27/05/2026ರಂದು ಮಧ್ಯಾಹ್ನ ಎಂ. ಕೋಡಿ ಜಂಕ್ಷನ್ ಬಳಿ ಚೆಕ್‌ಪೋಸ್ಟ್ ಕರ್ತವ್ಯದಲ್ಲಿದ್ದ ಸಿಬ್ಬಂದಿ, ಮಿನಿ ಟಿಪ್ಪರ್‌ನಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಮಾಹಿತಿ ಮೇರೆಗೆ ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕಿ (ತನಿಖೆ) ಪುಷ್ಪ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಈ ವೇಳೆ ಹಳದಿ ಬಣ್ಣದ ಟಾಟಾ ಕಂಪನಿಯ KA-20-D-8849 ಮಿನಿ ಟಿಪ್ಪರ್ ವಾಹನದಲ್ಲಿ ಸುಮಾರು 1½ ಯುನಿಟ್ ಮರಳು ಸಾಗಾಟ ಮಾಡುತ್ತಿರುವುದು ಪತ್ತೆಯಾಯಿತು. ವಾಹನ ಚಾಲಕನನ್ನು ಜಪ್ತಿ ಗ್ರಾಮದ ಶಶಿಧರ ಕುಲಾಲ್ (27) ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಸುಮಾರು ₹4 ಲಕ್ಷ ಮೌಲ್ಯದ ಮಿನಿ ಟಿಪ್ಪರ್ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿತನು ವಾಹನ ಮಾಲಕನೊಂದಿಗೆ ಸೇರಿ ಎಲ್ಲಿಯೋ ಮರಳನ್ನು ಕಳವು ಮಾಡಿಕೊಂಡು ಬಂದಿರುವ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಉಡುಪಿ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ ತಡೆಯಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆ ಇಂತಹ ಪ್ರಕರಣಗಳ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಯುತ್ತಿದೆ.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5128

ಪರಾಭವ ಸಂವತ್ಸರ

ಉತ್ತರಾಯಣ

ಗ್ರೀಷ್ಮ : ಋತು

ಅಧಿಕ ಜ್ಯೇಷ್ಠ : ಮಾಸ

ಶುಕ್ಲ  ಪಕ್ಷ

ತ್ರಯೋದಶಿ : ತಿಥಿ

ಸ್ವಾತಿ : ನಕ್ಷತ್ರ

ಶುಕ್ರವಾರ

29.05.2026

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಧಾರ್ಮಿಕ

ಕೊಲ್ಲೂರು ಶ್ರೀ‌ಮೂಕಾಂಬಿಕಾ ದೇವಳದ ಹುಂಡಿ ಎಣಿಕೆ

ಉಡುಪಿ: ಪ್ರಸಿದ್ಧ ಕೊಲ್ಲೂರು ಶ್ರೀ‌ಮೂಕಾಂಬಿಕಾ ದೇವಳದ ಹುಂಡಿ ಎಣಿಕೆ ಕಾರ್ಯ ಸೋಮವಾರ ನಡೆಯಿತು.

ದೇವಸ್ಥಾನದ 41 ಹುಂಡಿಗಳನ್ನು ತೆರೆಯಲಾಗಿದ್ದು, ಭಕ್ತರಿಂದ ಅಪಾರ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ.

ದೇವಸ್ಥಾನ ಮೂಲಗಳ ಪ್ರಕಾರ, ಹುಂಡಿಗಳಲ್ಲಿ ಒಟ್ಟು ರೂ 1,90,43,819 ನಗದು ಮೊತ್ತ ಲಭಿಸಿದೆ. ಇನ್ನು ಇತರೆ ಕಾಣಿಕೆಗಳನ್ನು ಸೇರಿಸಿ ಒಟ್ಟು ಸಂಗ್ರಹ ಮೊತ್ತ ರೂ 1,94,44,173ಕ್ಕೆ ಏರಿಕೆಯಾಗಿದೆ. ಇದಲ್ಲದೆ, ಭಕ್ತರು ಕಾಣಿಕೆಯಾಗಿ ಸಲ್ಲಿಸಿದ್ದ 0.325 ಗ್ರಾಂ ಚಿನ್ನ ಹಾಗೂ 2.370 ಕೆ.ಜಿ ಬೆಳ್ಳಿಯೂ ಲಭ್ಯವಾಗಿದೆ.

ಹುಂಡಿ ಎಣಿಕೆ ಕಾರ್ಯ ದೇವಸ್ಥಾನದ ಅಧಿಕಾರಿಗಳ ಸಮ್ಮುಖದಲ್ಲಿ ಭದ್ರತಾ ಕ್ರಮಗಳೊಂದಿಗೆ ನಡೆಯಿತು. ದೇವಸ್ಥಾನಕ್ಕೆ ರಾಜ್ಯದ ವಿವಿಧ ಭಾಗಗಳಲ್ಲದೇ ಹೊರರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಕಾಣಿಕೆ ಸಂಗ್ರಹದಲ್ಲೂ ನಿರಂತರ ಏರಿಕೆ ಕಂಡುಬರುತ್ತಿದೆ.

Categories
ಬ್ರೇಕಿಂಗ್ ನ್ಯೂಸ್

ಬಾಡಿಗೆ ಮನೆಯಲ್ಲಿ ವಾಸವಿದ್ದ ವ್ಯಕ್ತಿ ನಾಪತ್ತೆ

ಉಡುಪಿ :ಮಣಿಪಾಲ ಪೆರಂಪಳ್ಳಿ ರೋಡ್ ಸಗ್ರಿನೊಳೆ ಸದಾನಂದ ಎಂಬವರ ಬಾಡಿಗೆ ಮನೆಯಲ್ಲಿ ವಾಸವಿದ್ದ ಮನೋಜ್ (20) ಎಂಬವರು ನಾಪತ್ತೆಯಾಗಿರುವ ಕುರಿತು ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.

ಮನೋಜ್ ಅವರು ಪ್ರಥಮ ಇನ್ ಹೋಟೆಲ್ ನಿಂದ ಮೇ. 18 ರಂದು ನಾಪತ್ತೆಯಾಗಿದ್ದಾರೆ. ಬಳಿಕ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಅವರ ತಂದೆ ಹಿಮ್ ಬಹದ್ದೂರ್ ಅವರ ಪೋನ್ ನಂ 9845522830 ಹಾಗೂ ಮಣಿಪಾಲ ಪೋಲೀಸ್ ಠಾಣೆ 08202570328 ನಂಬರಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

Categories
ಕರಾವಳಿ ಸುದ್ದಿ

ವಿದುಷಿ ಶ್ರೀಮತಿ ಭಾಗೀರಥಿ ಎಮ್. ರಾವ್‌ ರವರ ಶಿಷ್ಯ : ಕುಮಾರಿ ಸಮೀಕ್ಷಾ ಹಕ್ಲಾಡಿ ಭರತನಾಟ್ಯ ರಂಗಪ್ರವೇಶ

ಕುಂದಾಪುರ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಗುರು ವಿದುಷಿ ಶ್ರೀಮತಿ ಭಾಗೀರಥಿ ಎಮ್. ರಾವ್‌ರವರ ಶಿಷ್ಯ ಶ್ರೀಮತಿ ಗೀತಾ ಮತ್ತು ಶ್ರೀ ಸುರೇಶ ಹಕ್ಲಾಡಿ ಇವರು ಪುತ್ರಿ ಕುಮಾರಿ ಸಮೀಕ್ಷಾ ಹಕ್ಲಾಡಿ ಭರತನಾಟ್ಯ ರಂಗಪ್ರವೇಶದ ವೇದಿಕೆ ಮೇ.31ರಂದು ಭಾನುವಾರ ಸಂಜೆ 6 ಗಂಟೆಗೆ ಕುಂದಾಪುರ ಹೋಟೆಲ್ ಶರೋನ್ ಮಿನಿಹಾಲ್ ನಲ್ಲಿ ನಡೆಯಲಿದೆ.

ಪ್ರತಿಭಾವಂತ ಕಲಾವಿದೆ ಕುಮಾರಿ ಸಮೀಕ್ಷಾ ಸುರೇಶ್ ಹಕ್ಲಾಡಿ ಭರತನಾಟ್ಯ ರಂಗಪ್ರವೇಶಡಾ. ಗಂಗೂಬಾಯಿ ಹಾನಗಲ್ಲ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು ಇಲ್ಲಿ ನಡೆದ ಭರತನಾಟ್ಯ ಜೂನಿಯರ್ ವಿಭಾಗದಲ್ಲಿ ಡಿಸ್ಟಿಂಕ್ಷನ್ ಪಡೆದಿರುತ್ತಾಳೆ

ಗುರು ವಿದುಷಿ ಶ್ರೀಮತಿ ಭಾಗೀರಥಿ ಎಮ್. ರಾವ್ ಪರಿಚಯ

ದಿವಂಗತ ಯು ಜಯರಾಮ ರಾವ್ ಹಾಗೂ ಶ್ರೀಮತಿ ನವೀನಮ್ಮನವರ ಪುತ್ರಿ, ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ತನ್ನ ಬಿ.ಕಾಂ. ಪದವಿಯನ್ನು ಪಡೆದರು, ಇವರು ತನ್ನ 8ನೇ ತರಗತಿಯಲ್ಲಿ ಭರತನಾಟ್ಯ ತರಗತಿಯನ್ನು ಸೇರಿಕೊಂಡು ಹೆಸರಾಂತ ನೃತ್ಯ ವಿದ್ವಾನ್ ಪದವಿಯನ್ನು ಪಡೆದಿರುವ ದಿವಂಗತ ಶ್ರೀ ಶ್ರೀನಿವಾಸ ಮಧ್ಯಸ್ಥರು ಕೋಣೆ ಹಾಗೂ ಶ್ರೀ ಗಣಪಯ್ಯ ಮಧ್ಯಸ್ಥರ ನೆಚ್ಚಿನ ಶಿಷ್ಠೆಯಾಗಿ ವಿದುಷಿ ಪದವಿಯನ್ನು ಪಡೆದು ಸಾಲಿಗ್ರಾಮ, ಕೋಟೇಶ್ವರ ಹಾಗೂ ಕುಂದಾಪುರದಲ್ಲಿ ಶ್ರೀ ನಟರಾಜ ನೃತ್ಯ ನಿಕೇತನ ಎಂಬ ಹೆಸರಿನಲ್ಲಿ ನೃತ್ಯ ಸಂಸ್ಥೆಯನ್ನು ತೆರೆದು ಸುಮಾರು ಸಾವಿರ ಸಾವಿರ ಮಕ್ಕಳಿಗೆ ಭರತನಾಟ್ಯ ಹೇಳಿಕೊಡುವುದಲ್ಲದೇ, ಉತ್ತಮ ಯಕ್ಷಗಾನ ಕಲಾವಿದೆಯಾಗಿ ಸುಮಾರು 500 ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ನೀಡಿರುತ್ತಾರೆ. ಅಲ್ಲದೆ ಉತ್ತಮ ನಾಟಕ ಕಲಾವಿದೆಯಾಗಿ ಹೊರಹೊಮ್ಮಿದ್ದಾರೆ. ಭರತನಾಟ್ಯವೇ ತನ್ನ ಉಸಿರು ಎಂದು ನೆಚ್ಚಿಕೊಂಡಿರುವ ಇವರಿಗೆ ಹಲವಾರು ಪ್ರಶಸ್ತಿ, ಸಮ್ಮಾನಗಳು ಆರಸಿಕೊಂಡು ಬಂದಿದೆ.

ಇವರಿಗೆ ರಂಗಭೂಮಿ ಜೋಗಫಾಲ್ಸ್ ನಲ್ಲಿ 3 ಬಾರಿ ರಾಜ್ಯ ಪ್ರಶಸ್ತಿ, 2023ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಾಧಕ ಮಹಿಳಾ ಪ್ರಶಸ್ತಿ -2024, ಶ್ರೀ ಗುರುನರಸಿಂಹ ಅನುಗ್ರಹ ಪ್ರಶಸ್ತಿ – 2024, ವಾಸುದೇವ ಸಾಮಗ ಸಂಸ್ಕರಣ ಪ್ರಶಸ್ತಿ 2024, ಬ್ರಾಹ್ಮರಿ ನಾಟ್ಯಾಲಯ ಪ್ರಶಸ್ತಿ, ಈತ ಲಾಸ್ಯ ಪ್ರಶಸ್ತಿ, ಸಮಗ್ರ ಕಂಸ (ಏಕವ್ಯಕ್ತಿ ಪ್ರದರ್ಶನ) ರೋಟರಿ ಕ್ಲಬ್ (ಕೋಟ, ತೆಕ್ಕಟ್ಟೆ, ಸಾಲಿಗ್ರಾಮ) ಸಮ್ಮಾನ, ಯಶಸ್ತಿ ಕಲಾಕೇಂದ್ರ ಸಮಾನ, ಯಕ್ಷನೂಪುರ ಭರತ ಪ್ರಶಸ್ತಿ (ನೀಲಾವರ), ನಟೇಶ ಪ್ರಶಸ್ತಿ (ಉಚ್ಚಿಲ), ಶ್ರೀ ರವಿಶಂಕರ ಗುರೂಜಿ (ಆರ್ಟ್ ಆಫ್ ಲಿವಿಂಗ್) – ಗೌರವ ಸಮ್ಮಾನ ಹೀಗೆ ಹಲವಾರು ಪ್ರಶಸ್ತಿ, ಗೌರವ ಸಮ್ಮಾನದೊಂದಿಗೆ ಭರತನಾಟ್ಯ, ಯಕ್ಷಗಾನ, ನಾಟಕ, ಏಕವ್ಯಕ್ತಿ ಅಭಿನಯ, ಹಾಡುಗಾರಿಕೆ, ಸಿನಿಮಾ ಹಾಗೆ ಅನೇಕ ಪ್ರಾಕಾರಗಳಲ್ಲಿ ಮಿಂಚಿ, ಆಪಾರ ಶಿಷ್ಯರು ಹಾಗೂ ಅಭಿಮಾನಿ ಬಳಗವನ್ನು ಹೊಂದಿದ ಕೀರ್ತಿ ಇವರದ್ದು.

Categories
ಕರಾವಳಿ ಸುದ್ದಿ

ಬಿ. ಬಿ. ಹೆಗ್ಡೆ ಕಾಲೇಜು: ಜೀವನ ಮೌಲ್ಯ ಉಪನ್ಯಾಸ ಮಾಲಿಕೆ

ಕುಂದಾಪುರ : ಮೆದುಳಿಗೆ ನೀಡುವ ಶಿಕ್ಷಣಕ್ಕಿಂತ ಹೃದಯಕ್ಕೆ ನೀಡುವ ಶಿಕ್ಷಣ ಬಹಳ ಮುಖ್ಯವಾಗಿದ್ದು ಹೃದಯವಂತಿಕೆ ಇರುವ ಮನುಷ್ಯ ಒಳ್ಳೆಯ ವಿದ್ಯಾರ್ಥಿ, ವಿಜ್ಞಾನಿ ಎನ್ನುವ ಯಾವ ಪದವಿಯನ್ನು ಬೇಕಾದರೂ ಪಡೆಯಬಹುದು ಅಸೂಯೆಯಿಂದ ದೂರವಾಗಿ ದಯಾಗುಣಗಳನ್ನು ಬೆಳಸಿಕೊಳ್ಳುವ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಿ ಎಂದು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಹೇಳಿದರು.
ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜಿಸಿದ ಜೀವನ ಮೌಲ್ಯ ಉಪನ್ಯಾಸ ಮಾಲಿಕೆ 9ರ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ಆಡಳಿತ ನಿಕಾಯಕರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ ಮತ್ತು ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ದೀಕ್ಷಾ ಅತಿಥಿಗಳನ್ನು ಪರಿಚಯಿಸಿ, ಪ್ರಥ್ವಿ ಸ್ವಾಗತಿಸಿ, ಪ್ರಥ್ವಿನಿ ವಂದಿಸಿ, ಅಭಿಷೇಕ್ ಪ್ರಾರ್ಥಿಸಿ, ನಿಶ್ಮಿತಾ ನಿರೂಪಿಸಿದರು.